ಕುಂದಾಪ್ರ ಡಾಟ್ ಕಾಂ ಸುದ್ದಿ. ಗಂಗೊಳ್ಳಿ : ಗಂಗೊಳ್ಳಿಯ ಪಂಚಗಂಗಾವಳಿ ಬಳಗದ ನೂತನ ಅಧ್ಯಕ್ಷರಾಗಿ ಜಿ.ಶ್ರೀನಿವಾಸ ಖಾರ್ವಿ ಆಯ್ಕೆಯಾದರು. ನಾರಾಯಣ ಸುಬ್ರಾಯ ಖಾರ್ವಿ (ಗೌರವಾಧ್ಯಕ್ಷ), ಸೌಪರ್ಣಿಕ ಬಸವ ಖಾರ್ವಿ, ಬೋರ್‌ಕಾರ್ ಮಾಧವ ಖಾರ್ವಿ, ಜಿ.ಎನ್.ಸತೀಶ ಖಾರ್ವಿ, ಮಾಧವ ಗೋವಿಂದ ಖಾರ್ವಿ, ಅನಂತ ಖಾರ್ವಿ (ಉಪಾಧ್ಯಕ್ಷರು), ಜಿ.ಎಂ.ರಾಘವೇಂದ್ರ ಖಾರ್ವಿ (ಕಾರ್ಯದರ್ಶಿ), ಸಂದೀಪ ಖಾರ್ವಿ, ಬೋರ್‌ಕಾರ್ ನಾಗರಾಜ ಖಾರ್ವಿ, ಸಜಿತ್ ಬಿ. (ಜತೆ ಕಾರ್ಯದರ್ಶಿ), ಎಂ.ಕೆ.ನಾಗರಾಜ ಖಾರ್ವಿ (ಖಜಾಂಚಿ), ಚೇತನ್ ಖಾರ್ವಿ (ಲೆಕ್ಕ ಪರಿಶೋಧಕ), ಜಗನ್ನಾಥ ಖಾರ್ವಿ, ಶಿಪಾ ಸಂತೋಷ ಖಾರ್ವಿ, ಬಿ.ಸಂತೋಷ ಖಾರ್ವಿ, ಬಿ.ರಾಮನಾಥ ಖಾರ್ವಿ, ಕೆ.ರಾಜ ಖಾರ್ವಿ, ಸಜಿತ್ ಖಾರ್ವಿ, ಸುಧಾಕರ ಖಾರ್ವಿ (ಕ್ರೀಡಾ ಕಾರ್ಯದರ್ಶಿಗಳು), ಜಿ.ಎನ್.ದಿಲೀಪ ಖಾರ್ವಿ, ಶಿಪಾ ನಾಗ ಖಾರ್ವಿ, ಜೋಗಿ ಸಂತೋಷ ಖಾರ್ವಿ, ಅಣ್ಣಪ್ಪ ಖಾರ್ವಿ, ಕೆ.ರಾಘವೇಂದ್ರ ಖಾರ್ವಿ, ಮಂಜುನಾಥ ಖಾರ್ವಿ, ಸಚಿನ್, ರೋಶನ್, ಕೀರ್ತನ್ (ಕಾರ್ಯಕಾರಿ ಸಮಿತಿ ಸದಸ್ಯರು), ನಾಗರತ್ನ, ಶೋಭಾ ಎಸ್.ಆರ್ಕಾಟಿ, ರೇಖಾ ಆರ್.ಕೆ., ಅಶ್ವಿನಿ ಎಂ., ಜಯಶ್ರೀ ಆರ್., ಅನುಷಾ ಆರ್., ಸೌಮ್ಯ,…
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಯಶಸ್ಸಿಗೆ ಕೇವಲ ಸಂಪತ್ತು ಒಂದೇ ಇದ್ದರೆ ಸಾಲದು ಆರೋಗ್ಯವೂ ಬಹಳ ಮುಖ್ಯ. ರೋಗಗಳ ಬಗ್ಗೆ ಮಾಹಿತಿ ಹಾಗೂ ಅವುಗಳ ನಿಯಂತ್ರಣಕ್ಕೆ ಜನರಲ್ಲಿ ಅರಿವು ಮೂಡಿಸಬೇಕು. ಈ ನಿಟ್ಟಿನಲ್ಲಿ ಈ ಶಿಬಿರಗಳು ಹೆಚ್ಚು ಪರಿಣಾಮಕಾರಿಯಾಗುತ್ತದೆ ಎಂದು ಕುಂದಾಪುರ ಹಿರಿಯ ಸಿವಿಲ್ ನ್ಯಾಯಾಧೀಶರಾದ ಶ್ರೀನಿವಾಸ ಸುವರ್ಣ ಹೇಳಿದರು. ಕುಂದಾಪುರ ವಕೀಲರ ಸಂಘದಲ್ಲಿ ಕುಂದಾಪುರ ಬಾರ್ ಅಸೋಸಿಯೇಶನ್ (ರಿ.), ಕುಂದಾಪುರ, ಇಂಡಿಯಾನಾ ಆಸ್ಪತ್ರೆ ಮತ್ತು ಹಾರ್ಟ್ ಇನ್‌ಸ್ಟಿಟ್ಯೂಟ್ ಲಿ. ಮಂಗಳೂರು ಸಂಯುಕ್ತ ಆಶ್ರಯದಲ್ಲಿ ವಕೀಲರುಗಳಿಗೆ ಮತ್ತು ನ್ಯಾಯಾಲಯದ ಸಿಬ್ಬಂದಿಗಳಿಗಾಗಿ ಉಚಿತ ಹೃದಯ ರೋಗ ತಪಾಸಣಾ ಶಿಬಿರ ಮತ್ತು ಮೈ ಇಂಡಿಯಾನಾ ಹೆಲ್ತ್ ಕಾರ್ಡ್ ಬಿಡುಗಡೆ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತಾನಾಡಿದರು. ಕುಂದಾಪುರ ಬಾರ್ ಅಸೋಸಿಯೇಶನ್ ರಿ. ಕುಂದಾಪುರ ಅಧ್ಯಕ್ಷ ಬನ್ನಾಡಿ ಸೋಮನಾಥ ಹೆಗ್ಡೆ ಪ್ರಾಸ್ತಾವಿಕ ಮಾತನಾಡಿ ಕಾನೂನು ಮತ್ತು ರಕ್ತದಾನ ಶಿಬಿರಗಳನ್ನು ಹಲವು ಬಾರಿ ಸಂಘಟಿಸಿದ್ದೇವೆ. ಇದೊಂದು ಹೊಸ ಪ್ರಯೋಗ, ನಮ್ಮ ವೃತ್ತಿ ಬಾಂಧವರಿಗೆ ಒಂದೇ ಸೂರಿನಲ್ಲಿ ಹೃದಯಕ್ಕೆ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ರಂಗಭೂಮಿಗೆ ವಿಶಿಷ್ಟವಾದ ಕಲ್ಪನಾಶಕ್ತಿಯಿದೆ. ಓದುವುದು ಹಾಗೂ ಕೇಳುವುದರ ಜೊತೆಗೆ ಶೋತ್ರುಗಳೊಂದಿಗೆ ಅನುಸಂಧಾನ ನಡೆಸಲು ನಾಟಕದಿಂದ ಮಾತ್ರವೇ ಸಾಧ್ಯವಿದೆ ಎಂದು ಟೀಚರ‍್ಸ್ ಕೋ-ಆಪರೇಟಿವ್ ಬ್ಯಾಂಕ್ ನಿರ್ದೇಶಕ ಕೆ.ಸಿ ರಾಜೇಶ್ ಹೇಳಿದರು. ಅವರು ಸುರಭಿ ರಿ. ಬೈಂದೂರು ಹಾಗೂ ಯಸ್ಕೋರ್ಡ್ ಟ್ರಸ್ಟ್ ರಿ. ಆಶ್ರಯದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಕಾರದೊಂದಿಗೆ ಆಯೋಜಿಸಲಾಗಿದ್ದ ’ರಂಗಸುರಭಿ 2016’ ನಾಟಕ ಸಪ್ತಾಹದಲ್ಲಿ ದಿನದ ನುಡಿಗಳನ್ನಾಡುತ್ತಿದ್ದರು. ಕಲೆಯ ವಿವಿಧ ಪ್ರಕಾರಗಳ ಬದಲಾವಣೆಗಳನ್ನು ಕಂಡುಕೊಂಡಿದ್ದರೂ ರಂಗದ ಕಲಾವಿದರ ಕಲಾಶಕ್ತಿ ಹಾಗೂ ಸೃಜನಶೀಲತೆ ಇಂದಿಗೂ ಬದಲಾಗಿಲ್ಲ. ರಂಗದ ಕಲಾವಿದ ನೈಜತೆಯೊಂದಿಗೆ ಹತ್ತಿರವಾಗುತ್ತಾನೆ. ರಂಗಭೂಮಿಗೆ ಸುಧೀರ್ಘವಾದ ಹಿನ್ನಲೆ ಹಾಗೂ ಶಕ್ತಿಯಿದೆ. ಕನ್ನಡ ರಂಗಭೂಮಿಯ ಶಕ್ತಿಯೂ ದೊಡ್ಡದಿದ್ದು ಹಲವು ದಿಗ್ಗಜರು ತೊಡಗಿಸಿಕೊಂಡಿದ್ದಾರೆ ಎಂದವರು ವ್ಯಾಖ್ಯಾನಿಸಿದರು. ರಾಷ್ಟ್ರೀಯ ಸಂತ ಕವಿ ಕನಕದಾಸ ಅಧ್ಯಯನ ಮತ್ತು ಸಂಶೋಧನಾ ಕೇಂದ್ರದ ಸಂಯೋಜಕ ಕಾ.ತ.ಚಿಕ್ಕಣ್ಣ ಮಾತನಾಡಿ ಮನುಷ್ಯನ ಸ್ವಭಾವವನ್ನು ನೇರವಾಗಿ ನೋಡುಗರಿಗೆ ಮುಟ್ಟಿಸುವ ಶಕ್ತಿ ಇರುವುದು ರಂಗಭೂಮಿಗೆ. ಇದು ಮನಷ್ಯನನ್ನು ತಿದ್ದುವುದಲ್ಲದೇ, ನಮ್ಮನ್ನು…
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಹಿಂದೂ ಜನಜಾಗೃತಿ ಸಮಿತಿಯು ಹಿಂದುತ್ವದ ರಕ್ಷಣೆಗಾಗಿ ಹಾಗೂ ಹಿಂದೂ ರಾಷ್ಟ್ರದ ಸ್ಥಾಪನೆಗಾಗಿ ಆಯೋಜಿಸುತ್ತಿರುವ ಈ ಧರ್ಮಜಾಗೃತಿ ಸಭೆಗಳು ರಾಜಕೀಯ ಉದ್ದೇಶಕ್ಕಲ್ಲ. ಈ ವರ್ಷ ಕರ್ನಾಟಕದ ದಕ್ಷಿಣ ಮತ್ತು ಉತ್ತರ ಭಾಗದಲ್ಲಿ ಒಟ್ಟು ೭೦ ಕ್ಕಿಂತಲೂ ಹೆಚ್ಚು ಸಭೆಗಳನ್ನು ಹಮ್ಮಿಕೊಳ್ಳಲಾಗಿದೆ. ಇದರ ಮೂಲಕ ಹಿಂದೂ ಧರ್ಮದ ಮೇಲಾಗುತ್ತಿರುವ ವಿವಿಧ ಆಕ್ರಮಣಗಳ ಬಗ್ಗೆ ಅರಿವನ್ನು ಮೂಡಿಸುವುದು ಮಾತ್ರವಲ್ಲದೇ ಹಿಂದೂ ಧರ್ಮೀಯರಲ್ಲಿ ಸ್ವಧರ್ಮದ ಬಗ್ಗೆ ಸ್ವಾಭಿಮಾನವನ್ನು ಜಾಗೃತಗೊಳಿಸುವುದು ಎಂದು ಹಿಂದೂ ಜನಜಾಗೃತಿ ಸಮಿತಿಯ ವಿಜಯಕುಮಾರ್ ಹೇಳಿದರು. ಬೈಂದೂರು ಶ್ರೀ ಸೀತಾರಾಮಚಂದ್ರ ಕಲ್ಯಾಣ ಮಂಟಪದಲ್ಲಿ ಹಿಂದೂ ಜನಜಾಗೃತಿ ಸಮಿತಿ ವತಿಯಿಂದ ನಡೆದ ಹಿಂದೂ ಧರ್ಮಜಾಗೃತಿ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು. ನಂತರ ರಣರಾಗಿಣಿ ಶಾಖೆ ವಕ್ತಾರೆ ರೇವತಿ ಮೊಗೇರ ಮಾತನಾಡಿ, ಇಂದು ಪ್ರತಿದಿನ ಹಿಂದೂ ಸ್ತ್ರೀಯರ ಮೇಲೆ ದೌರ್ಜನ್ಯ, ಅತ್ಯಾಚಾರ, ಅಪಹರಣಗಳಂತಹ ಪ್ರಕರಣಗಳು ದಿನೇ ದಿನೇ ಹೆಚ್ಚುತ್ತಿವೆ, ಇದನ್ನು ತಡೆಗಟ್ಟಲು ಪ್ರತಿಯೊಬ್ಬ ಹಿಂದೂ ಮಹಿಳೆಯರು ಧರ್ಮಾಚರಣೆಯನ್ನು ಮಾಡಿ ಸ್ವಸಂರಕ್ಷಣೆಯನ್ನು ಕಲಿತು ರಣರಾಗಿಣಿಯರಾಗಬೇಕು.…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಉತ್ತಮ ಭವಿಷ್ಯವನ್ನು ಹೊಂದಲು ವಾರ್ಷಿಕ ಪರೀಕ್ಷೆಗಳಲ್ಲಿ ಅಂಕಗಳಿಸುವುದಷ್ಟೇ ಮುಖ್ಯವಲ್ಲ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಹ ತಯಾರಾಗಬೇಕು.ಂ iiವುದೇ ಕ್ಷೇತ್ರದಲ್ಲಿ ಉತ್ತಮ ಆಡಳಿತಗಾರರಾಗಿ ರೂಪುಗೊಳ್ಳಲು ಸಕಲ ಸಿದ್ಧತೆಗಳನ್ನು ಎಳೆಯ ವಯಸ್ಸಿನಿಂದಲೇ ಮಾಡಿಕೊಳ್ಳಬೇಕು ಎಂದು ಉಡುಪಿ ಪದವಿಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ಆರ್.ಬಿ. ನಾಯಕ್ ತಿಳಿಸಿದರು. ಕುಂದಾಪುರ ಶ್ರೀ ವೆಂಕಟರಮಣ ಪದವಿಪೂರ್ವ ಕಾಲೇಜು ಕುಂದಾಪುರದ ವಾರ್ಷಿಕೋತ್ಸವ ಸಮಾರಂಭದ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು. ನಿವೃತ್ತ ಪ್ರಾಂಶುಪಾಲೆ ಚಂದ್ರಪ್ರಭಾ ಆರ್. ಹೆಗ್ಡೆ ಮಾತನಾಡುತ್ತಾ ವಿದ್ಯಾರ್ಥಿ ಜೀವನದಲ್ಲಿ ಉತ್ತಮ ಅಂಕ ಗಳಿಸಲು ಏಕಾಗ್ರತೆ ಅತೀ ಅಗತ್ಯ ಉತ್ತಮ ವಾತಾವರಣದಲ್ಲಿ ಕಲಿಯುವ ಎಲ್ಲ ವಿದ್ಯಾರ್ಥಿಗಳು ನಾಳಿನ ಸತ್ಪ್ರಜೆಗಳಾಗುತ್ತಾರೆ ಅಂತಹ ವಾತಾವರಣವನ್ನು ಕುಂದಾಪುರದ ವೆಂಕಟರಮಣ ವಿದ್ಯಾಸಂಸ್ಥೆಗಳ ಆಡಳಿತ ಮಂಡಳಿ ಸೃಷ್ಟಿಸಿದೆ ಇದರ ಸಂಪೂರ್ಣ ಪ್ರಯೋಜನವನ್ನು ವಿದ್ಯಾರ್ಥಿಗಳು, ಪೋಷಕರು ಪಡೆಯಬೇಕು ಎಂದು ತಿಳಿಸಿದರು. ಶ್ರೀ ವೆಂಕಟರಮಣ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಟ್ರಸ್ಟ್‌ನ ಅಧ್ಯಕ್ಷ ಕೆ.ಮೋಹನ್ ಕಾಮತ್ ಅಧ್ಯಕ್ಷತೆ ವಹಿಸಿ, ಪ್ರಶಸ್ತಿಯನ್ನು ಗಳಿಸಿದ ಎಲ್ಲ ವಿದ್ಯಾರ್ಥಿಗಳನ್ನು…
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಶ್ರೀಮದ್ಭಗವದ್ಗೀತೆಯು ವ್ಯಕ್ತಿತ್ವ ವಿಕಸನದಲ್ಲಿ ಔಚಿತ್ಯ ಪ್ರಜ್ಞೆಯನ್ನು ಬೋಧಿಸುತ್ತಾ ಸಂತುಲಿನ ಜೀವನ ಪದ್ಧತಿಯನ್ನು ಆಪೇಕ್ಷಿಸುತ್ತದೆ. ಅತಿಯಾದಲ್ಲಿ ಎಲ್ಲವೂ ನ್ಯೂನತೆಯಾಗುವುದರಿಂದ ಸಮಚಿತ್ತ, ಶುದ್ಧಚಾರಿತ್ಯ ಪ್ರತಿ ವ್ಯಕ್ತಿಯ ಆಂತರಿಕ ಮತ್ತು ಸಾಮಾಜಿಕ ಕರ್ತವ್ಯಗಳನ್ನು ನಿರ್ವಹಿಸುವಲ್ಲಿನ ಪ್ರಾಮುಖ್ಯತೆಯನ್ನು ಸಾರುತ್ತದೆ ಎಂದು ಯಳಜಿತ್ ಶ್ರೀ ಸಿದ್ಧಿವಿನಾಯಕ ಸಾಂಸ್ಕೃತಿಕ ಕೇಂದ್ರದ ಸಂಚಾಲಕ ಸಂತ ವೈ. ಮಂಗೇಶ ಶೆಣೈ ಹೇಳಿದರು. ಬೈಂದೂರು ಶ್ರೀಮದ್ಭಗವದ್ಗೀತಾ ಜಯಂತಿ ಆಚರಣಾ ಸಮಿತಿ ಶ್ರೀ ಸೀತಾರಾಮಚಂದ್ರ ದೇವಸ್ಥಾನದಲ್ಲಿ ಶ್ರೀ ಸ್ವರ್ಣವಲ್ಲಿ ಮಹಾಸಂಸ್ಥಾನ ಮಹಾಸ್ವಾಮಿಗಳ ಪೀಠಾರೋಹಣ ರಜತ ವರ್ಷದ ಪ್ರಯುಕ್ತ ವಿವಿಧ ಶೃದ್ಧಾ ಕೇಂದ್ರಗಳಲ್ಲಿ ನಡೆದ ಸಪ್ತಾಹ ಗೀತಾಪಠಣ ಯಜ್ಞದ ಸಮರ್ಪಣಾ ಉತ್ಸವ ಉದ್ಘಾಟಿಸಿ ಮಾತನಾಡಿದರು. ಭಗವದ್ಗೀತೆ ನಿಜಾರ್ಥದಲ್ಲಿ ಒಂದು ಜಾತ್ಯಾತೀತ ಗ್ರಂಥವಾಗಿದ್ದು, ಅದು ಯಾವುದೇ ಒಂದು ಜನಾಂಗದ, ಜಾತಿಯ, ವರ್ಗದ, ದೇಶದ ಜನರನ್ನು ಉದ್ದೇಶಿಸಿ ಉಪದೇಶ ಮಾಡುವಂತಹದ್ದಲ್ಲ. ಎಲ್ಲಾ ಮಾನವರು ತಮ್ಮ ಉದ್ದಾರವನ್ನು ತಾವೇ ಮಾಡಿಕೊಳ್ಳಲು ಬೇಕಾದ ಜೀವನಕ್ರಮವನ್ನು ಮತ್ತು ಚಿಂತನಾ ಕ್ರಮಗಳನ್ನು ಕೊಡುತ್ತದೆ. ಗೀತೆಯ ಅಧ್ಯಯನದಿಂದ ನಮ್ಮ ಧರ್ಮ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಕ್ರೀಡೆ ಪ್ರತಿಯೊಬ್ಬರ ದೈಹಿಕ ಹಾಗೂ ಮಾನಸಿಕ ಕ್ಷಮತೆಯನ್ನು ಹೆಚ್ಚಿಸುತ್ತದೆ. ಕ್ರೀಡೆಯಲ್ಲಿ ಹೆಚ್ಚು ಹೆಚ್ಚು ತೊಡಗಿಸಿಕೊಂಡಲ್ಲಿ ಆರೋಗ್ಯ ಸಮಸ್ಯೆಗಳು ದೂರವಾಗುವುದು ಎಂದು ಕುಂದಾಪುರ ಎಜ್ಯುಕೇಶನ್ ಸೊಸೈಟಿಯ ಕಾರ್ಯದರ್ಶಿ ಶ್ರೀ ಸೀತಾರಾಮ ನಕ್ಕತ್ತಾಯರವರು ಸ್ಥಳೀಯ ಆರ್.ಎನ್.ಶೆಟ್ಟಿ ಪದವಿ ಪೂರ್ವ ಕಾಲೇಜಿನ ವಾರ್ಷಿಕ ಕ್ರೀಡಾಕೂಟವನ್ನು ಗಾಂಧಿ ಮೈದಾನದಲ್ಲಿ ಉದ್ಘಾಟಿಸುತ್ತಾ ಹೇಳಿದರು. ಅತಿಥಿಯಾಗಿದ್ದ ಉಪ್ಪಂದದ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಜಗನ್ನಾಥರವರು ಇಂದು ಭಾರತದಲ್ಲಿ ಕ್ರೀಡೆಗೆ ಪ್ರೋತ್ಸಾಹ ಕಡಿಮೆಯಾಗುತ್ತಿರುವುದು ದುಃಖಕರವಾದ ವಿಷಯ. ವಿದ್ಯಾರ್ಥಿಗಳಾದ ನೀವು ಈ ಸಂಸ್ಥೆ ನೀಡುವ ಪ್ರೋತ್ಸಾಹ ಬಳಸಿಕೊಂಡು ಎಲ್ಲರೂ ಗುರುತಿಸುವ ಹಾಗೇ ಬೆಳೆಯಬೇಕು ಎಂದರು. ಕುಂದಾಪುರ ಎಜ್ಯುಕೇಶನ್ ಸೊಸೈಟಿಯ ಅಧ್ಯಕ್ಷರಾದ ಬಿ.ಎಂ ಸುಕುಮಾರ ಶೆಟ್ಟಿಯವರು ಅಧ್ಯಕ್ಷೀಯ ಭಾಷಣ ಮಾಡುತ್ತಾ ಇಂದು ಸರಕಾರ ಹಾಗೂ ಸರಕಾರೇತರ ಸಂಸ್ಥೆಗಳು ಕ್ರೀಡೆಗೆ ನೀಡುವ ಪ್ರೋತ್ಸಾಹ ಕಡಿಮೆ ಯಾದರು ಕೆಲವು ಕ್ರೀಡಾಳುಗಳು ಸಿಗುವ ಸೌಲಭ್ಯದಲ್ಲಿಯೇ ಮಹತ್ತರವಾದ ಸಾಧನೆ ಮಾಡುತ್ತಿರುವುದು ಗಮನಾರ್ಹವಾದ ವಿಷಯ. ಎಷ್ಟೇ ಸೌಲಭ್ಯ ಸಿಕ್ಕಿದರೂ ಪರಿಶ್ರಮ ಪಡದೇ ಇದ್ದಲ್ಲಿ ಸಾಧನೆ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಇಂದಿನ ತಂತ್ರಜ್ಞಾನ ಯುಗದಲ್ಲಿ ಶೈಕ್ಷಣಿಕ ಸಂಸ್ಥೆಗಳಿಗೆ ತಮ್ಮದೇ ಆದ ವೆಬ್ ಸೈಟ್‌ನ ಅಗತ್ಯತೆ ಇದ್ದು ಇದರಿಂದ ಶೈಕ್ಷಣಿಕ ಸಂಸ್ಥೆಗೆ , ವಿದ್ಯಾರ್ಥಿಗಳಿಗೆ ರಕ್ಷಕರಿಗೆ ಹಾಗೂ ಸಾರ್ವಜನಿಕರಿಗೆ ಪ್ರಯೋಜನವಾಗಲಿದೆ. ಈ ನಿಟ್ಟಿನಲ್ಲಿ ಆರ್.ಎನ್.ಶೆಟ್ಟಿ ಪದವಿ ಪೂರ್ವ ಕಾಲೇಜಿನ ವೆಬ್ ಸೈಟ್ ನ್ನು ಉದ್ಘಾಟಿಸಲು ನನಗೆ ತುಂಬ ಸಂತೋಷವಾಗುತ್ತಿದ್ದು ಇದರ ಪ್ರಯೋಜನವನ್ನು ಪ್ರತಿಯೊಬ್ಬರು ಪಡೆಯಬೇಕೆಂದು ಉಡುಪಿ ಜಿಲ್ಲಾ ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ಆರ್.ಬಿ.ನಾಯಕ್ ರವರು ಸ್ಥಳೀಯ ಆರ್.ಎನ್.ಶೆಟ್ಟಿ ಪದವಿ ಪೂರ್ವ ಕಾಲೇಜಿನ ವಾರ್ಷಿಕೋತ್ಸವ ಸಮಾರಂಭದಲ್ಲಿ ಕಾಲೇಜಿನ ವೆಬ್ ಸೈಟ್ ಉದ್ಘಾಟಿಸಿ ಮಾತನಾಡಿದರು ಮುಖ್ಯ ಅತಿಥಿ ಮಂಗಳೂರಿನ ಎ.ಜೆ. ಮೆಡಿಕಲ್ ಕಾಲೇಜಿನ ಖ್ಯಾತ ಮಕ್ಕಳ ತಜ್ಞ ಹಾಗೂ ೨೦೧೭ನೇ ಸಾಲಿಗೆ ಇಂಡಿಯನ್ ಪಿಡಿಯಾಟ್ರಿಕ್ಸ್ ಅಕಾಡೆಮಿಯ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಡಾ. ಸಂತೋಷ ಟಿ ಸೋನ್ಸ್ ರವರು ಮಾತನಾಡುತ್ತಾ ಇಂದು ದೇಶದ ಮೂಲೆ ಮೂಲೆಗಳಲ್ಲಿ ಶೈಕ್ಷಣಿಕ ಸಂಸ್ಥೆಗಳು ಗುಣಮಟ್ಟದ ಶಿಕ್ಷಣ ನೀಡುತ್ತಿದ್ದು, ಗ್ರಾಮೀಣ ಪ್ರದೇಶದಲ್ಲಿರುವ ಯುವಕ ಯುವತಿಯರು ತಮ್ಮ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಸ್ವಸ್ಥ ಸಮಾಜದ ನಿರ್ಮಾಣದಲ್ಲಿ ಉತ್ಸವಗಳ ಪಾತ್ರ ಬಹುಮುಖ್ಯವಾದುದು. ಸಾಂಸ್ಕೃತಿಕ ಕಾರ್ಯಕ್ರಮಗಳ ಸಂಘಟನೆಯಿಂದ ಎಲ್ಲರನ್ನೂ ಒಗ್ಗಟ್ಟಾಗಿ ಕಾಣಲು ಸಾಧ್ಯವಿದೆ ಎಂದು ಕಂಬದಕೋಣೆ ರೈತರ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಪ್ರಕಾಶ್ಚಂದ್ರ ಶೆಟ್ಟಿ ಹೇಳಿದರು. ಅವರು ಸುರಭಿ ರಿ. ಬೈಂದೂರು ಹಾಗೂ ಯಸ್ಕೋರ್ಡ್ ಟ್ರಸ್ಟ್ ರಿ. ಆಶ್ರಯದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಕಾರದೊಂದಿಗೆ ಆಯೋಜಿಸಲಾಗಿದ್ದ ’ರಂಗಸುರಭಿ ೨೦೧೬’ ನಾಟಕ ಸಪ್ತಾಹದಲ್ಲಿ ದಿನದ ನುಡಿಗಳನ್ನಾಡುತ್ತಿದ್ದರು. ಆಧುನಿಕ ಮಾಧ್ಯಮಗಳ ಪ್ರಭಾವದಿಂದ ಕಲೆಯ ಸೆಳೆತ ಕಡಿಮೆಯಾಗುತ್ತಿದೆ. ಟಿ.ವಿಯಲ್ಲಿ ನೋಡುವ ನಾಟಕ, ನೃತ್ಯ, ಯಕ್ಷಗಾನ ಪ್ರದರ್ಶನಗಳನ್ನು ಎದುರಿಗೆ ನೋಡಲು ಇಷ್ಟಪಡುತ್ತಿಲ್ಲ. ಸಮುದಾಯದೊಂದಿಗೆ ಸೇರದ, ಎಲ್ಲರೂ ಸೇರಿದಾಗ ನಾವು ಅಲ್ಲಿರದ ಸಂಕುಚಿತ ಮನಸ್ಥಿತಿ ನಮ್ಮದಾಗುತ್ತಿರುವುದರಿಂದ ಮನಸ್ಸಿನ ಒತ್ತಡಗಳು ಹೆಚ್ಚುತ್ತಿವೆ ಎಂದರು. ರಂಗಭೂಮಿ ಹಾಗೂ ಚಲನಚಿತ್ರ ನಿರ್ದೇಶಕ ರಾಜೇಂದ್ರ ಕಾರಂತ ಬೆಂಗಳೂರು ಅವರನ್ನು ಸನ್ಮಾನಿಸಲಾಯಿತು. ಜಿಲ್ಲಾ ಪಂಚಾಯತ್ ಸದಸ್ಯೆ ಗೌರಿ ದೇವಾಡಿಗ, ತಾಲೂಕು ಪಂಚಾಯತ್ ಸದಸ್ಯರಾದ ಸುಜಾತ ದೇವಾಡಿಗ, ವಿಜಯಕುಮಾರ್ ಶೆಟ್ಟಿ, ಲಾವಣ್ಯ ಬೈಂದೂರು…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ನಮ್ಮ ದೇಶ ಅಭಿವೃದ್ಧಿಯಾಗಬೇಕಾದರೆ ನಮ್ಮಲ್ಲಿರುವ ಮಾನವ ಸಂಪನ್ಮೂಲದ ಅಭಿವೃದ್ಧಿಯಾಗಬೇಕು. ಭಾರತ ದೇಶ ಮಾನವ ಸಂಪನ್ಮೂಲದಲ್ಲಿ ದೊಡ್ಡ ಅಭಿವೃದ್ಧಿ ಸಾಧಿಸಿರುವುದರಿಂದಾಗಿ ಜಗತ್ತಿನ ದೃಷ್ಟಿ ಭಾರತದ ಕಡೆ ನೆಟ್ಟಿದೆ ಎಂದು ಮಾಜಿ ಸಚಿವ ಹಾಗೂ ವಿಧಾನಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ನುಡಿದರು. ತಾಲೂಕಿನ ಬೀಜಾಡಿ-ಗೋಪಾಡಿಯ ಮೂಡು ಶಾಲಾ ವಠಾರದ ಮಿತ್ರ ಸೌಧದಲ್ಲಿ ಉಡುಪಿ ಜಿಲ್ಲಾ ಪಂಚಾಯಿತಿ, ಯುವ ಸಬಲೀಕರಣ ಇಲಾಖೆ, ತಾಲ್ಲೂಕು ಪಂಚಾಯಿತಿ, ಗ್ರಾಮ ಪಂಚಾಯಿತಿ ಬೀಜಾಡಿ ಹಾಗೂ ಮಿತ್ರ ಸಂಗಮ ಬೀಜಾಡಿ-ಗೋಪಾಡಿಯ ಸಂಯುಕ್ತ ಆಶ್ರಯದಲ್ಲಿ ಭಾನುವಾರ ನಡೆದ ಕುಂದಾಪುರ ತಾಲ್ಲೂಕು ಯುವಜನ ಮೇಳ ’ಸಂಗಮ-2016’ ನ್ನು ಉದ್ಘಾಟಿಸಿ ಅವರು ಮಾತನಾಡಿದರು. ಜಗತ್ತಿನಲ್ಲಿಯೇ ದೊಡ್ಡ ಯುವ ಸಮೂಹವನ್ನು ಹೊಂದಿರುವ ಭಾರತಕ್ಕೆ ಅದುವೇ ನಿಜವಾದ ಆಸ್ತಿಯಾಗಿದೆ. ಜನಸಂಖ್ಯೆಯ ಒಂದೆ ಕಾರಣಕ್ಕಾಗಿ ಸಂನ್ಮೂಲ ಕ್ರೋಢಿಕರಣಗೊಳ್ಳುವುದಿಲ್ಲ. ಸ್ಥಳೀಯವಾಗಿ ಬೇರೆ ಬೇರೆ ಕ್ಷೇತ್ರಗಳಲ್ಲಿ ಅಭಿವೃದ್ಧಿ ಸಾಧಿಸುವುದರಿಂದಾಗಿ ದೇಶ ಬೆಳೆಯುತ್ತದೆ. ಯುವ ಜನರಲ್ಲಿ ಸಮರ್ಪಣಾ ಮನೋಭಾವಗಳಿರಬೇಕು. ಬದುಕನ್ನು ಕಟ್ಟುವ ಜತೆಯಲ್ಲಿ ಇನ್ನೊಬ್ಬರಿಗೆ ಬದುಕು…
