ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಕ್ರೀಡೆ ಪ್ರತಿಯೊಬ್ಬರ ದೈಹಿಕ ಹಾಗೂ ಮಾನಸಿಕ ಕ್ಷಮತೆಯನ್ನು ಹೆಚ್ಚಿಸುತ್ತದೆ. ಕ್ರೀಡೆಯಲ್ಲಿ ಹೆಚ್ಚು ಹೆಚ್ಚು ತೊಡಗಿಸಿಕೊಂಡಲ್ಲಿ ಆರೋಗ್ಯ ಸಮಸ್ಯೆಗಳು ದೂರವಾಗುವುದು ಎಂದು ಕುಂದಾಪುರ ಎಜ್ಯುಕೇಶನ್ ಸೊಸೈಟಿಯ ಕಾರ್ಯದರ್ಶಿ ಶ್ರೀ ಸೀತಾರಾಮ ನಕ್ಕತ್ತಾಯರವರು ಸ್ಥಳೀಯ ಆರ್.ಎನ್.ಶೆಟ್ಟಿ ಪದವಿ ಪೂರ್ವ ಕಾಲೇಜಿನ ವಾರ್ಷಿಕ ಕ್ರೀಡಾಕೂಟವನ್ನು ಗಾಂಧಿ ಮೈದಾನದಲ್ಲಿ ಉದ್ಘಾಟಿಸುತ್ತಾ ಹೇಳಿದರು.
ಅತಿಥಿಯಾಗಿದ್ದ ಉಪ್ಪಂದದ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಜಗನ್ನಾಥರವರು ಇಂದು ಭಾರತದಲ್ಲಿ ಕ್ರೀಡೆಗೆ ಪ್ರೋತ್ಸಾಹ ಕಡಿಮೆಯಾಗುತ್ತಿರುವುದು ದುಃಖಕರವಾದ ವಿಷಯ. ವಿದ್ಯಾರ್ಥಿಗಳಾದ ನೀವು ಈ ಸಂಸ್ಥೆ ನೀಡುವ ಪ್ರೋತ್ಸಾಹ ಬಳಸಿಕೊಂಡು ಎಲ್ಲರೂ ಗುರುತಿಸುವ ಹಾಗೇ ಬೆಳೆಯಬೇಕು ಎಂದರು. ಕುಂದಾಪುರ ಎಜ್ಯುಕೇಶನ್ ಸೊಸೈಟಿಯ ಅಧ್ಯಕ್ಷರಾದ ಬಿ.ಎಂ ಸುಕುಮಾರ ಶೆಟ್ಟಿಯವರು ಅಧ್ಯಕ್ಷೀಯ ಭಾಷಣ ಮಾಡುತ್ತಾ ಇಂದು ಸರಕಾರ ಹಾಗೂ ಸರಕಾರೇತರ ಸಂಸ್ಥೆಗಳು ಕ್ರೀಡೆಗೆ ನೀಡುವ ಪ್ರೋತ್ಸಾಹ ಕಡಿಮೆ ಯಾದರು ಕೆಲವು ಕ್ರೀಡಾಳುಗಳು ಸಿಗುವ ಸೌಲಭ್ಯದಲ್ಲಿಯೇ ಮಹತ್ತರವಾದ ಸಾಧನೆ ಮಾಡುತ್ತಿರುವುದು ಗಮನಾರ್ಹವಾದ ವಿಷಯ. ಎಷ್ಟೇ ಸೌಲಭ್ಯ ಸಿಕ್ಕಿದರೂ ಪರಿಶ್ರಮ ಪಡದೇ ಇದ್ದಲ್ಲಿ ಸಾಧನೆ ಸಾಧ್ಯವಿಲ್ಲ ಎಂದು ಹೇಳಿದರು.
ಪ್ರಾಂಶುಪಾಲ ನವೀನ ಕುಮಾರ ಶೆಟ್ಟಿಯವರು ಸ್ವಾಗತಿಸಿದರೆ ದೈಹಿಕ ಶಿಕ್ಷಣ ನಿರ್ದೇಶಕ ಪ್ರದೀಪ ಶೆಟ್ಟಿಯವರು ವಂದಿಸಿದರು. ವೇದಿಕೆಯಲ್ಲಿ ಅಡಳಿತ ಮಂಡಳಿಯ ಸದಸ್ಯ ಡಾ. ವೈ ಎಸ್ ಹೆಗ್ಡೆ, ಡಾ.ಬಿ.ಬಿ.ಹೆಗ್ಡೆ ಕಾಲೇಜಿನ ಪ್ರಾಂಶುಪಾಲರಾದ ಪ್ರೋ. ಚಂದ್ರಶೇಖರ ದೋಮ , ಎಚ್.ಎಂ.ಎಂ ಸ್ಕೂಲ್ ನ ಪ್ರಾಂಶುಪಾಲೇ ಶ್ರೀಮತಿ ಚಿಂತನ ರಾಜೇಶ , ಕ್ರೀಡಾ ಮಂತ್ರಿ ಸಂದೀಪ ಉಪಸ್ಥಿತರಿದ್ದರು. ವಿದ್ಯಾರ್ಥಿ ಮಹಮ್ಮದ್ ಅಶ್ವಾನ್ ಕಾರ್ಯಕ್ರಮ ನಿರ್ವಹಿಸಿದರು.