ಕುಂದಾಪ್ರ ಡಾಟ್ ಕಾಂ ಸುದ್ದಿ. ಗಂಗೊಳ್ಳಿ : ಉಡುಪಿ ಜಿಲ್ಲಾ ಪಂಚಾಯತ್,ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಉಡುಪಿ, ತಾಲೂಕು ಪಂಚಾಯತ್ ಕುಂದಾಪುರ, ಗ್ರಾಮ ಪಂಚಾಯತ್ ಬೀಜಾಡಿ ಹಾಗು ಮಿತ್ರ ಸಂಗಮ (ರಿ) ಬೀಜಾಡಿ ಗೋಪಾಡಿ ಇವರ ಸಂಯುಕ್ತ ಆಶ್ರಯದಲ್ಲಿ ನಡೆದ ಕುಂದಾಪುರ ತಾಲೂಕು ಮಟ್ಟದ ಯುವಜನ ಮೇಳದಲ್ಲಿ ಗಂಗೊಳ್ಳಿಯ ಡಾ. ಅಂಬೇಡ್ಕರ್ ಯುವಕ ಮಂಡಲ (ರಿ) ಗೀಗಿ ಪದ ,ಲಾವಣಿ,ಕೋಲಾಟ, ವೀರಗಾಸೆ, ರಂಗಗೀತೆ, ಜಾನಪದ ನೃತ್ಯ ,ಭಜನೆ, ಜನಪದ ಗೀತೆ, ಚರ್ಮ ವಾದ್ಯ ವೀಭಾಗದಲ್ಲಿ ಪ್ರಥಮ, ಏಕಪಾತ್ರಾಭಿನಯದಲ್ಲಿ ದ್ವಿತೀಯ ಮತ್ತು ಭಾವಗೀತೆಯಲ್ಲಿ ತೃತೀಯ ಸ್ಥಾನ ಪಡೆದು ಸಮಗ್ರ ತಂಡ ಪ್ರಶಸ್ತಿಯನ್ನು ಪಡೆದುಕೊಂಡಿತು.
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ. ಕೊಲ್ಲೂರು: ಇತ್ತೀಚೆಗೆ ಮರಣಕಟ್ಟೆ ಬ್ರಹ್ಮ,ಲಿಂಗೇಶ್ವರ ಕಲ್ಯಾಣ ಮಂಟಪದಲ್ಲಿ ನಡೆದ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಚಿತ್ತೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಮಹಿಳಾ ಗ್ರಾಮ ಸಮಿತಿ ಅಧ್ಯಕ್ಷರನ್ನಾಗಿ ಅಶ್ವಿನಿ ಶೆಟ್ಟಿ ಹಿಜಾಣ ಇವರನ್ನು ಬೈಂದೂರು ಬ್ಲಾಕ್ ಮಹಿಳಾ ಮೋರ್ಚಾ ಅಧ್ಯಕ್ಷರಾದ ಪ್ರಿಯದರ್ಶಿನಿ ಬಿಜೂರು ಇವರು ಆಯ್ಕೆ ಮಾಡಿರುತ್ತಾರೆ. ಕಾರ್ಯದರ್ಶಿಯನ್ನಾಗಿ ಶೋಭಾ ಶೆಟ್ಟಿ ನೈಕಂಬಳಿ, ಉಪಾಧ್ಯಕ್ಷರಾಗಿ ಸಂಗೀತಾ ಶೆಟ್ಟಿ, ಬೇಬಿ ಇವರನ್ನು ಆಯ್ಕೆ ಮಾಡಲಾಗಿದೆ. ಸಭೆಯಲ್ಲಿ ಬಿಜೆಪಿ ಮುಖಂಡರಾದ ಡಾ. ಅತುಲ್ಕುಮಾರ್ ಶೆಟ್ಟಿ, ಬಿಜೆಪಿ ಶಕ್ತಿ ಕೇಂದ್ರದ ಅಧ್ಯಕ್ಷ ರಾಮಚಂದ್ರ ಮಂಜ, ಗ್ರಾಮ ಪಂಚಾಯತ್ ಅಧ್ಯಕ್ಷ ಸಂತೋಷ ಮಡಿವಾಳ, ಬೈಂದೂರು ಬಿಜೆಪಿ ಘಟಕದ ಕಾರ್ಯದರ್ಶಿ ಶ್ರೀಮತಿ ಮಾಲತಿ ಬಿ. ನಾಯ್ಕ್, ಶ್ರೀಮತಿ ಜಯಂತಿ ಪೂಜಾರಿ, ಗ್ರಾ.ಪಂ. ಸದಸ್ಯರಾದ ಪ್ರದೀಪ್ ಹೆಗ್ಡೆ, ಶ್ರೀಮತಿ ಜ್ಯೋತಿ, ಶ್ರೀಮತಿ ಪದ್ದು ಉಪಸ್ಥಿತರಿದ್ದರು.
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಕಠಿಣ ಪರಿಶ್ರಮ, ತಾಳ್ಮೆ, ಸಾಧಿಸುವ ಛಲವಿದ್ದರೆ ಸಮಾಜದ ಯಾವುದೇ ವ್ಯಕ್ತಿ ನಿಶ್ಚಯಿಸಿದ ಕ್ಷೇತ್ರದಲ್ಲಿ ಸಾಧನೆ ಮಾಡಬಹುದು ಎಂದು ಬೆಂಗಳೂರು ಭಾರತೀಯ ಇಸ್ರೋ ಸಂಸ್ಥೆಯ ವಿಜ್ಞಾನಿ ಭಾಸ್ಕರ್ ಮಂಜ ಹೇಳಿದರು. ನಾಯ್ಕನಕಟ್ಟೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ವಾರ್ಷಿಕೋತ್ಸವ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು. ಶಿಕ್ಷಣ ಸಂಸ್ಥೆಗಳು ಸಮಾಜವನ್ನು ತಿದ್ದುವ ಕೆಲಸ ಮಾಡುತ್ತಿವೆ. ಎಳೆಯ ಪ್ರಾಯದಲ್ಲಿ ಮಕ್ಕಳಿಗೆ ಮೌಲ್ಯಯುತ ಶಿಕ್ಷಣ ನೀಡುವ ಮೂಲಕ ಭವಿಷ್ಯದ ಉತ್ತಮ ನಾಗರೀಕರನ್ನಾಗಿ ರೂಪಿಸಬಹುದು. ದೇಶದ ಪ್ರತಿಯೊಬ್ಬರಿಗೂ ಸಮರ್ಪಕ ಶಿಕ್ಷಣ ದೊರೆತಾಗ ಮಾತ್ರ ದೇಶ ಅಭಿವೃದ್ಧಿ ಕಾಣಬಹುದಾಗಿದೆ. ವಿದ್ಯೆಯೊಂದಿಗೆ ಮಾನಸಿಕ ಧೃಡತೆ, ಆರೋಗ್ಯ, ಸಮಯಪ್ರಜ್ಞೆ, ಏಕಾಗ್ರತೆ ಹಾಗೂ ಆತ್ಮವಿಶ್ವಾಸವನ್ನೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು. ಕೆರ್ಗಾಲು ಗ್ರಾಪಂ ಅಧ್ಯಕ್ಷೆ ಸೋಮು ಅಧ್ಯಕ್ಷತೆವಹಿಸಿದ್ದರು. ಈ ಸಂದರ್ಭ ವಿಜ್ಞಾನಿ ಭಾಸ್ಕರ್ ಮಂಜ ಮತ್ತು ಅನುರಾಧ ದಂಪತಿಗಳನ್ನು ಸನ್ಮಾನಿಸಲಾಯಿತು. ವಿವಿಧ ಸ್ಪರ್ಧೆಯಲ್ಲಿ ವಿಜೇತರಾದ ಮಕ್ಕಳಿಗೆ ಬಹುಮನ ವಿತರಿಸಲಾಯಿತು. ಗ್ರಾಪಂ ಉಪಾಧ್ಯಕ್ಷ ಸುಂದರ್ ಕೊಠಾರಿ, ಉದ್ಯಮಿ ಶಂಕರ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಕುಂದಾಪುರ ಎಜ್ಯುಕೇಶನ್ ಸೊಸೈಟಿ ಪ್ರವರ್ತಿತ ಡಾ. ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ೨೦೧೬-೧೭ನೇ ಶೈಕ್ಷಣಿಕ ಸಾಲಿನ ರಾಷ್ಟ್ರೀಯ ಸೇವಾ ಯೋಜನಾ ಘಟಕದ ವಾರ್ಷಿಕ ವಿಶೇಷ ಶಿಬಿರದ ಉದ್ಘಾಟನೆ ಹೊಸೂರು ಶ್ರೀ ಮೂಕಾಂಬಿಕಾ ದೇವಳದ ಪ್ರೌಢ ಶಾಲೆಯಲ್ಲಿ ನಡೆಯಿತು. ಶ್ರೀ ಕ್ಷೇತ್ರ ಮಾರಣಕಟ್ಟೆ ದೇವಳದ ಅನುವಂಶಿಕ ಆಡಳಿತ ಮೋಕ್ತೆಸರರಾದ ಸದಾಶಿವ ಶೆಟ್ಟಿ ಶಿಬಿರವನ್ನು ಉದ್ಘಾಟಿಸಿದರು. ಕುಂದಾಪುರ ಎಜ್ಯುಕೇಶನ್ ಸೊಸೈಟಿಯ ಅಧ್ಯಕ್ಷರಾದ ಬಿ. ಎಮ್. ಸುಕುಮಾರ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಉದ್ಯಮಿಗಳಾದ ಹಂಚಿನಮನೆ, ಮರ್ಡಿ ವಿ. ಶಿವರಾಮ ಶೆಟ್ಟಿ, ಶ್ರೀ ಮೂಕಾಂಬಿಕಾ ಪ್ರೌಢ ಶಾಲೆಯ ಮುಖ್ಯೋಪಾಧ್ಯಾಯರಾದ ಚಂದ್ರ ಶೆಟ್ಟಿ, ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್ ವಂಡ್ಸೆಯ ನಿರ್ದೇಶಕರಾದ ಜಗನ್ನಾಥ ಶೆಟ್ಟಿ, ಉದ್ಯಮಿಗಳಾದ ನಡಾಡಿ ಗಣೇಶ್ ಶೆಟ್ಟಿ, ಗ್ರಾಮ ಪಂಚಾಯತ್ ಸದಸ್ಯರಾದ ದೇವಲ್ಕುಂದ ಅಶೋಕ್ ಶೆಟ್ಟಿ, ಹೆಚ್.ಎಮ್.ಎಮ್. ಶಾಲೆಯ ಶಿಕ್ಷಕ ಹೊಸೂರು ಚಂದ್ರಶೇಖರ ಶೆಟ್ಟಿ, ವಿದ್ಯಾರ್ಥಿ ಸ್ವಯಂಸೇವಕ ಪ್ರತಿನಿಧಿಗಳಾದ ಮಂಜುನಾಥ ಹೊಳ್ಳ, ಶಬರಿ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಪ್ರಿನ್ಸಿಪಾಲ್ ಸಿವಿಲ್ ಮತ್ತು ಜೆ.ಎಂ.ಎಫ್.ಸಿ ನ್ಯಾಯಾಲಯದ ನ್ಯಾಯಧೀಶೆ ಪ್ರೀತ್ ಜೆ ರವರನ್ನು ಕುಂದಾಪುರ ಬಾರ್ ಅಸೋಷಿಯೇಶನ್ ವತಿಯಿಂದ ಬೀಳ್ಕೊಡಲಾಯಿತು. ಅವರು ಕುಂದಾಪುರದ ನ್ಯಾಯಾಲಯದಲ್ಲಿ ಒಂದೂವರೆ ವರ್ಷಗಳ ಕಾಲ ಸೇವೆ ಸಲ್ಲಿಸಿದ ಅವರು ಇದೀಗ ಸೀನಿಯರ್ ಸಿವಿಲ್ ಜಡ್ಜ್ ಆಗಿ ಪದೋನ್ನತಿ ಹೊಂದಿ ಶಿಕಾರಿಪುರ ನ್ಯಾಯಾಲಯಕ್ಕೆ ವರ್ಗಾವಣೆಗೊಂಡಿದ್ದರು. ಬೀಳ್ಕೊಡುಗೆ ಸಮಾರಂಭದಲ್ಲಿ ಗೌರವ ಸ್ವೀಕರಿಸಿ ಮಾತನಾಡಿದ ನ್ಯಾಯಧೀಶೆ ಪ್ರೀತ್ ಜೆ, ಯಾವುದೇ ನ್ಯಾಯಾಲಯದಲ್ಲಿ ವಕೀಲರ ಕಡೆಯಿಂದ ಉತ್ತಮ ಕ್ರಿಯೆ ಬಂದರೆ ನ್ಯಾಯಾಧೀಶರ ಕಡೆಯಿಂದಲೂ ಉತ್ತಮ ಪ್ರತಿಕ್ರಿಯೆ ಬರುತ್ತದೆ. ಆ ನಿಟ್ಟಿನಲ್ಲಿ ಒಂದೂವರೆ ವರ್ಷ ಕುಂದಾಪುರದಲ್ಲಿ ನೀಡಿದ ಸೇವೆ ತುಂಬಾ ಸಂತೋಷ ನೀಡಿದೆ. ಸಿವಿಲ್ ಮತ್ತು ಕ್ರಿಮಿನಲ್ ಪ್ರಕರಣಗಳಲ್ಲಿ ಹುಲಿ-ಸಿಂಹಗಳಂತಹ ವಕೀಲರ ವಾದವನ್ನು ಕೇಳುವಂತಹ ಒಂದು ಸೌಭಾಗ್ಯ ಕುಂದಾಪುರದಲ್ಲಿ ನನಗೆ ದೊರಕಿದೆ. ಕುಂದಾಪುರದ ಯಾವುದೇ ವಕೀಲರಲ್ಲಿ ಯಾವುದೇ ಒಂದು ಕಪ್ಪು ಚುಕ್ಕೆಯನ್ನು ನಾನು ಕಂಡಿಲ್ಲ. ಆದುದರಿಂದ ಕುಂದಾಪುರದ ವಕೀಲರು ನೀಡಿದ ಪ್ರೀತಿ ವಿಶ್ವಾಸಕ್ಕೆ ಎಂದಿಗೂ ಚಿರ ಋಣಿಯಾಗಿರುತ್ತೇನೆ ಎಂದರಲ್ಲದೆ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಬಸ್ರೂರು ಅಪ್ಪಣ್ಣ ಹೆಗ್ಡೆ ದತ್ತನಿಧಿ ಪ್ರತಿಷ್ಠಾನದ ವತಿಯಿಂದ ಅಪ್ಪಣ್ಣ ಹೆಗ್ಡೆ ಅವರ 82ನೇ ಹುಟ್ಟುಹಬ್ಬದ ಆಚರಿಸಲಾಯಿತು. ಇದೇ ಸಂದರ್ಭದಲ್ಲಿ ಸಾಗರದ ವನಶ್ರೀ ವಸತಿ ವಿದ್ಯಾಲಯದ ಮೆನೇಜಿಂಗ್ ಟ್ರಸ್ಟಿ ಎಚ್ . ಪಿ. ಮಂಜಪ್ಪ ಅವರಿಗೆ ಬಿ. ಅಪ್ಪಣ್ಣ ಹೆಗ್ಡೆ ಶಿಕ್ಷಣ ಪ್ರಶಸಿ ಪ್ರದಾನ ಮಾಡಲಾಯಿತು. ಪೊಳಲಿಯ ರಾಮಕೃಷ್ಣ ತಪೋವನದ ಶ್ರೀ ಸ್ವಾಮಿ ವಿವೇಕ ಚೈತನ್ಯಾನಂದ ಅವರು ಪ್ರದಾನಿಸಿ ಆಶೀರ್ವಚನ ನೀಡಿ ಅಪ್ಪಣ್ಣ ಹೆಗ್ಡೆ ಅವರ ವ್ಯಕ್ತಿತ್ವ ಅಸಾಧಾರಣವಾದುದು. ಅನೇಕ ಶಿಕ್ಷಣ ಸಂಸ್ಥೆಗಳನ್ನು ಹುಟ್ಟುಹಾಕಿ ಮಾರ್ಗದರ್ಶಿ ನಾಯಕರಾದವರು. ಸಹಕಾರಿ ಮತ್ತು ಧಾರ್ಮಿಕ ಕ್ಷೇತ್ರದಲ್ಲಿ ಅಪ್ಪಣ್ಣ ಹೆಗ್ಡೆಯವರು ಅನುಪಮ ಸೇವೆ ಸಲ್ಲಿಸಿದವರು. ರಾಜಕೀಯದಲ್ಲೂ ಬೆಳೆದವರು. ಹೆಗ್ಡೆ ಅವರ ವ್ಯಕ್ತಿತ್ವ ಇತರರಿಗೆ ಮಾದರಿಯಾದುದು. ಅವರು ಶತಮಾನದ ವ್ಯಕ್ತಿ ಎಂದರು. ಅಪ್ಪಣ್ಣ ಹೆಗ್ಡೆ ಶಿಕ್ಷಣ ಪ್ರಶಸ್ತಿ ಪುರಸ್ಕೃತ ಸಾಗರದ ಎಚ್ . ಟಿ. ಮಂಜಪ್ಪ ಅವರು ಮಾತನಾಡಿ, ಬಸ್ರೂರು ಅಪ್ಪಣ್ಣ ಹೆಗ್ಡೆ ಶಿಕ್ಷಣ ಪ್ರಶಸ್ತಿ ಪಡೆಯುವುದೆ ನನಗೆ ಹೆಮ್ಮೆಯ ವಿಷಯವಾಗಿದೆ.…
ಕುಂದಾಪ್ರ ಡಾಟ್ ಕಾಂ ಸಉದ್ದಿ. ಗಂಗೊಳ್ಳಿ: ಇತ್ತೀಚೆಗೆ ಗಂಗೊಳ್ಳಿಯ ಸರಸ್ವತಿ ವಿದ್ಯಾಲಯ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ತಮ್ಮ ಕಾಲೇಜಿನ ವಾರ್ಷಿಕೋತ್ಸವ ಸಂದರ್ಭದಲ್ಲಿ ಪ್ರದರ್ಶಿಸಿದ ಮೈಸೂರು ಮಲ್ಲಿಗೆ ಕಿರುನಾಟಕ ತನ್ನ ವಿಭಿನ್ನತೆಯಿಂದ ಜನಮೆಚ್ಚುಗೆ ಗಳಿಸಿತು. ಕೆ.ಎಸ್ ನರಸಿಂಹ ಸ್ವಾಮಿಯವರ ಮೈಸೂರು ಮಲ್ಲಿಗೆ ಕವನ ಸಂಕಲನದ ಹಲವು ಹಾಡುಗಳನ್ನು ಬಳಸಿಕೊಂಡು ಅದರ ಹಿನ್ನೆಲೆಯಲ್ಲಿ ಕವಿಯೊಬ್ಬನ ಬದುಕಿನ ಕಾಲ್ಪನಿಕವಾದ ಕತೆಯನ್ನು ಒಳಗೊಂಡ ಮೂವತೈದು ನಿಮಿಷಗಳ ನಾಟಕದಲ್ಲಿ ಪ್ರಣಯ, ವಿರಹ, ಅಪನಂಬಿಕೆ,ಸೈನಿಕನ ದೇಶಭಕ್ತಿ, ಸಾವು, ದುಖ, ಅಮ್ಮನ ವಾತ್ಸಲ್ಯ, ಹೆತ್ತವರ ತ್ಯಾಗ,ವೃದ್ಧಾಶ್ರಮ ಮೊದಲಾದ ವೈವಿಧ್ಯಮಯ ಅರ್ಥಪೂರ್ಣ ಸನ್ನಿವೇಶಗಳನ್ನು ಕಟ್ಟಿಕೊಡಲಾಗಿತ್ತು. ಈ ಕಿರುನಾಟಕವನ್ನು ರಚಿಸಿ ಸಿದ್ಧ ಸಂಗೀತ ಅಳವಡಿಸಿ ನಿರ್ದೇಶಿಸಿದ್ದು ಅಲ್ಲಿನ ವಾಣಿಜ್ಯ ಶಾಸ್ತ್ರ ಉಪನ್ಯಾಸಕರಾದ ನರೇಂದ್ರ ಎಸ್ ಗಂಗೊಳ್ಳಿ. ಕಿರುನಾಟಕ ತನ್ನ ವೇಗದ ಶೈಲಿ ಆಕರ್ಷಕವಾದ ಹಿನ್ನೆಲೆ ಸಂಗೀತ, ಹಾಡುಗಳು ಮತ್ತು ಮನಮುಟ್ಟುವಂತಹ ಮಕ್ಕಳ ಪ್ರೌಢ ಅಭಿನಯದಿಂದ ಗಮನ ಸೆಳೆಯಿತು. ಸಂದರ್ಭೋಚಿತವಾಗಿ ವಿವಿಧ ಕವಿಗಳ ಹಾಡುಗಳನ್ನು ಜನಪದ ಸಾಹಿತ್ಯವನ್ನು ,ಹಿನ್ನೆಲೆ ಸಂಗೀತವನ್ನು ಅತ್ಯಂತ ಪರಿಣಾಮಕಾರಿಯಾಗಿ ಬಳಸಿಕೊಳ್ಳಲಾಗಿತ್ತು.…
ಕುಂದಾಪ್ರ ಡಾಟ್ ಕಾಂ ಸುದ್ದಿ. ಉಡುಪಿ: ತಂತ್ರಜ್ಞಾನ ಬದಲಾದ ಹಾಗೆ ಉದ್ಯಮಗಳೂ ಬದಲಾವಣೆಯಾಗುತ್ತದೆ. ಜನರ ಬೇಡಿಕೆಗೆ ಅನುಗುಣವಾಗಿ ತಮ್ಮ ಉದ್ಯಮವನ್ನು ಬದಲಾವಣೆ ಮಾಡಿದಲ್ಲಿ ಯಶಸ್ಸು ಸಾಧ್ಯ ಎಂದು ಕರ್ನಾಟಕ ಅಸೋಸಿಯೇಸನ್ ಆಫ್ ಸೈನೇಜ್ ಇಂಡಸ್ಟ್ರೀಸ್ನ ಪ್ರಧಾನ ಕಾರ್ಯದರ್ಶಿ ರವಿ ನಾಗರಾಜ್ ಹೇಳಿದರು. ಅವರು ಇತ್ತೀಚೆಗೆ ಉಡುಪಿಯ ಹೊಟೇಲ್ ದುರ್ಗಾ ಇಂಟರ್ನ್ಯಾಷನಲ್ನಲ್ಲಿ ನೂತ ಉಡುಪಿ ಜಿಲ್ಲಾ ಫ್ಲೆಕ್ಸ್ ಪ್ರಿಂಟರ್ಸ್ ಅಸೋಸಿಯೇಶನ್ (ರಿ) ಸಂಸ್ಥೆಯನ್ನು ಉದ್ಘಾಟಿಸಿ ಮಾತನಾಡಿ ವ್ಯಾಪಾರದಲ್ಲಿ ಗುಣಮಟ್ಟ ಮತ್ತು ಪ್ರಾಮಾಣಿಕತೆಯನ್ನು ಉಳಿಸಬೇಕು. ವ್ಯಾಪಾರದಲ್ಲಿ ಸ್ಪರ್ಧೆಗಳು ಗುಣಮಟ್ಟದಲ್ಲಿ ಇರಬೇಕು. ಪ್ರತಿಯೊಬ್ಬರೂ ಈ ನಿಟ್ಟಿನಲ್ಲಿ ಚಿಂತಿಸಬೇಕಾಗಿದೆ ಎಂದವರು ಸಲಹೆಯಿತ್ತರು. ರಾಜೇಶ್ ಕುಮಾರ್ ಅವರನ್ನು ಸನ್ಮಾನಿಸಲಾಯಿತು. ಇದೇ ಸಂದರ್ಭದಲ್ಲಿ ಅಸೋಸಿಯೇಶನ್ನ ಲೆಟರ್ಹೆಡ್, ಐಡಿ ಕಾರ್ಡ್, ದರಪಟ್ಟಿಯನ್ನು ಬಿಡುಗಡೆ ಮಾಡಲಾಯಿತು. ಉಡುಪಿ ಜಿಲ್ಲಾ ಫ್ಲೆಕ್ಸ್ ಪ್ರಿಂಟರ್ ಅಸೋಸಿಯೇಶನ್ ಅಧ್ಯಕ್ಷ ದಾಮೋದರ್ ಪೈ ಅಧ್ಯಕ್ಷತೆ ವಹಿಸಿದ್ದರು. ದ.ಕ ಜಿಲ್ಲಾ ಲಾರ್ಜ ಫಾರ್ಮ್ಯಾಟ್ ಪ್ರಿಂಟರ್ಸ್ ಅಸೋಸಿಯೇಶನ್ ಅಧ್ಯಕ್ಷ ಎಂ. ಜಯರಾಮ ಶೆಟ್ಟಿ, ಉಡುಪಿ ಜಿಲ್ಲಾ ಫ್ಲೆಕ್ಸ್ ಪ್ರಿಂಟರ್ಸ್ ಅಸೋಸಿಯೇಶನ್ ಕಾನೂನು…
ಗಂಗೊಳ್ಳಿ ಎಸ್.ವಿ ಹಿರಿಯ ಪ್ರಾಥಮಿಕ ಶಾಲೆಯ ವಾರ್ಷಿಕೋತ್ಸವದಲ್ಲಿ ಅಭಿಮತ ಕುಂದಾಪ್ರ ಡಾಟ್ ಕಾಂ ಸುದ್ದಿ. ಗಂಗೊಳ್ಳಿ: ಕಲಿಕೆ ಎನ್ನುವುದು ನಿರಂತರ. ವಿದ್ಯಾರ್ಥಿ ಜೀವನವು ಪಠ್ಯಗಳ ಕಲಿಕೆಗಷ್ಟೇ ಸೀಮಿತವಾಗಿರದೆ ಪಠ್ಯೇತರ ಚಟುವಟಿಕೆಗಳಲ್ಲಿ ಸಕ್ರೀಯವಾಗಿ ಪಾಲ್ಗೊಳ್ಳಬೇಕು. ವಿದ್ಯಾರ್ಥಿಗಳಿಗೆ ಜೀವನದಲ್ಲಿ ಸಾಧನೆ ಮಾಡಲು ಉತ್ಸಾಹ, ಕಠಿಣ ಪರಿಶ್ರಮದ ಅಗತ್ಯತೆ ಇದೆ. ವಿದ್ಯಾರ್ಥಿ ಜೀವನದಲ್ಲಿ ಅನೇಕ ಕಷ್ಟಗಳು ಎದುರಾದರೂ ಅದನ್ನು ಸಮರ್ಥವಾಗಿ ಎದುರಿಸಿ ಜೀವನದಲ್ಲಿ ದೊರೆಯುವ ಎಲ್ಲಾ ಅವಕಾಶಗಳನ್ನು ಸದುಪಯೋಗ ಪಡಿಸಿಕೊಂಡು ಪ್ರತಿಯೊಂದು ಚಟುವಟಿಕೆಗಳಲ್ಲಿ ಸತತವಾಗಿ ಪಾಲ್ಗೊಂಡಾಗ ಮಾತ್ರ ನಮ್ಮ ಜೀವನದಲ್ಲಿ ಪರಿವರ್ತನೆ ಹೊಂದಲು ಸಾಧ್ಯವಿದೆ ಎಂದು ಮೂಡಬಿದಿರೆಯ ಆಳ್ವಾಸ್ ಎಜುಕೇಶನ್ ಫೌಂಡೇಶನ್ನ ಆಡಳಿತ ನಿರ್ದೇಶಕ ವಿವೇಕ ಆಳ್ವ ಹೇಳಿದರು. ಅವರು ಗಂಗೊಳ್ಳಿಯ ಜಿಎಸ್ವಿಎಸ್ ಅಸೋಸಿಯೇಶನ್ ಪ್ರಾಯೋಜಿತ ಸರಸ್ವತಿ ವಿದ್ಯಾಲಯ ಹಿರಿಯ ಪ್ರಾಥಮಿಕ ಶಾಲೆಯ ವಾರ್ಷಿಕೋತ್ಸವ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು. ಆಂಗ್ಲ ಮಾಧ್ಯಮ ಶಾಲೆಗಳ ಹಾವಳಿಯಿಂದ ಕನ್ನಡ ಮಾಧ್ಯಮ ಶಾಲೆಗಳಲ್ಲಿ ವಿದ್ಯಾರ್ಥಿಗಳ ದಾಖಲಾತಿ ಕಡಿಮೆಯಾಗುತ್ತಿದೆ ಎಂಬ ವಾದ ಸತ್ಯವಾದರೂ ಅನೇಕ ಕನ್ನಡ ಮಾಧ್ಯಮ ಶಾಲೆಗಳಲ್ಲಿ ಮಕ್ಕಳಿಗೆ…
ಕುಂದಾಪ್ರ ಡಾಟ್ ಕಾಂ ಸಉದ್ದಿ. ಕೋಟೇಶ್ವರ: ಕುಂದಾಪುರದ ಕ್ರಿಕೆಟ್ ತಂಡ ಪ್ರೆಸಿಡೆಂಟ್ ಸಿಕ್ಸರ್ಸ್ ಕುಂದಾಪುರ ತಂಡ ಎಮ್ಪಿಎಲ್ ಸೆಮಿಫೈನಲ್ಗೆ ದಾಪುಗಾಲನ್ನಿಟ್ಟಿದೆ. ತಂಡ ಆಡಿದ ಐದು ಪಂದ್ಯದಲ್ಲಿ ನಾಲ್ಕರಲ್ಲಿ ಗೆದ್ದು ಸೆಮಿಸ್ಗೆ ಸ್ಥಾನವನ್ನು ಭದ್ರಪಡಿಸಿಕೊಂಡಿದೆ. ಸೆಮಿಫೈನಲ್ ಪಂದ್ಯ ಡಿಸೆಂಬರ್ ೨೯ ರಂದು ನಡೆಯಲಿದೆ ತಂಡದ ಪ್ರಮುಖ ಆಟಗಾರರಾದ ಬಿ.ಅಖಿಲ್, ಕೆ.ಸಿ.ಕಾರಿಯಪ್ಪ, ಮಾಷುಕ್ ಹುಸೇನ್ ಹಾಗೂ ನೇಹಲ್ ಡಿಸೋಜ ಅವರ ಸ್ಥಿರವಾದ ಆಟದಿಂದ ಗೆಲುವು ಸಾಧಿಸಿದ್ದಾರೆ. ಅಲ್ಲದೇ ತಂಡದಲ್ಲಿ ಕುಂದಾಪುರದ ಸ್ಥಳೀಯ ಪ್ರತಿಭೆಗಳಾದ ಶಶಾಂಕ್ ಪೂಜಾರಿ, ವಿಘ್ನೇಶ್ ಭಟ್ ಹಾಗೂ ಪ್ರಸನ್ನ ನಾವಡ ಅವರು ಗೆಲುವಿಗೆ ಕೊಡುಗೆ ನೀಡಿದ್ದಾರೆ. ಕೋಟೇಶ್ವರದ ಉದ್ಯಮಿ ಅಬ್ದುಲ್ ಸತ್ತಾರ್ ಅವರ ಮಾಲೀಕತ್ವದ ತಂಡ ಭಾಗವಹಿಸಿದ ಮೊದಲ ಪ್ರಯತ್ನದಲ್ಲೇ ಈ ಸಾಧನೆ ಎಲ್ಲರಿಗೂ ಸಂತಸ ತಂದಿದೆ. ತರಬೇತುದಾರರಾಗಿ ಕುಂದಾಪುರ ಪ್ರದೀಪ್ ವಾಜ್ ತಂಡವನ್ನು ಸನ್ನದ್ದುಗೊಳಿಸಿದ್ದರು. ಗೆಲುವಿನ ದಾರಿ: ಮೊದಲ ಪಂದ್ಯ ಎಸ್ಎ ಬೋಳಾರ್ ವಿರುದ್ದ ಮೂರು ವಿಕೆಟ್ನಿಂದ ಗೆಲುವು, ದ್ವಿತೀಯ ಪಂದ್ಯ ಕೋಸ್ಟಲ್ ಡೈಜೆಸ್ಟ್ ವಿರುದ್ಧ ೩೮ ರನ್ನಗಳಿಂದ ಸೋಲು,…
