Author: ನ್ಯೂಸ್ ಬ್ಯೂರೋ

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಇತಿಹಾಸ ಪ್ರಸಿದ್ಧ ಉಪ್ಪುಂದ ಶ್ರೀ ದುರ್ಗಾಪರಮೇಶ್ವರಿ ದೇವಳದ ವಾರ್ಷಿಕ ಮನ್ಮಹಾ ರಥೋತ್ಸವ ಉಪ್ಪುಂದ ಕೊಡಿಹಬ್ಬ ಬುಧವಾರ ಸಡಗರ ಸಂಭ್ರಮದಿಂದ ಜರುಗಿತು. ದೇವಳದ ಕಾರ್ಯನಿರ್ವಹಣಾಕಾರಿ ಅವರ ಉಸ್ತುವಾರಿ ಹಾಗೂ ಗೋಕರ್ಣದ ತಂತ್ರಿ ವೇದಮೂರ್ತಿ ಶ್ರೀನಿವಾಸ ಅಡಿಗ ನೇತೃತ್ವದಲ್ಲಿ ದೇವಳದಲ್ಲಿ ಪಂಚಾಮೃತ ಅಭಿಷೇಕ, ವಿಶೇಷ ಭೂತ ಬಲಿ ಸೇರಿದಂತೆ ಹಲವು ಧಾರ್ಮಿಕ ವಿಧಿವಿಧಾನ ನಡೆಯಿತು. ಮಧ್ಯಾಹ್ನ ದೇವಳದ ಸಭಾಭವನದಲ್ಲಿ ಸಾವಿರಾರು ಭಕ್ತರು ಅನ್ನಪ್ರಸಾದ ಸ್ವೀಕರಿಸಿದರು. ಬಳಿಕ ದೇವಿಗೆ ಹರಕೆ ರೂಪದಲ್ಲಿ ಬಂದ ಸೀರೆಗಳನ್ನು ಬಹಿರಂಗ ಹರಾಜು ಮಾಡಲಾಯಿತು. ವಿಶೇಷ ಆಸಕ್ತಿಯಿಂದ ಹೆಚ್ಚಿನ ಮಹಿಳೆಯರು ಏಲಂನಲ್ಲಿ ಭಾಗವಹಿಸಿ ಪ್ರಸಾದ ರೂಪದಲ್ಲಿ ಸೀರೆಗಳನ್ನು ಖರೀದಿಸಿದರು. ಸಂಜೆ ನಡೆದ ರಥೋತ್ಸವದಲ್ಲಿ ಸಹಸ್ರಾರು ಭಕ್ತರು ರಥ ಎಳೆದು ಸಂಭ್ರಮಿಸಲಿದ್ದಾರೆ. ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ದ್ವಿತೀಯ ಜಾತ್ರೆ ಉಪ್ಪುಂದ ಕೊಡಿಹಬ್ಬವಾಗಿದ್ದು, ಇಲ್ಲಿನ ಗ್ರಾಮದೇವತೆ ಶ್ರೀ ದುರ್ಗಾಪರಮೇಶ್ವರಿ ಅಮ್ಮನವರ ವಾರ್ಷಿಕ ಜಾತ್ರಾ ಮಹೋತ್ಸವಕ್ಕೆ ಧ್ವಜಾರೋಹಣದೊಂದಿಗೆ ಚಾಲನೆ ನೀಡಲಾಗಿತ್ತು. ರಥೋತ್ಸವದ ಪ್ರಯುಕ್ತ ತಮ್ಮ ಅಂಗಡಿ ಮುಂಗಟ್ಟು,…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ನಮ್ಮ ನಿರ್ಮಾಣವನ್ನು ನಾವು ಮಾಡಿಕೊಳ್ಳಲು ಭಗವದ್ಗೀತೆ ಅಭಿಯಾನವೊಂದು ಮೆಟ್ಟಿಲಾಗಿದೆ. ಭಗವದ್ಗೀತೆಯ ಮಹಿಮೆಯನ್ನು ಮೆರೆಯುತ್ತಾ ಶ್ರೀಕೃಷ್ಣನ ಅಮೃತ ಸದೃಶ ವಾಕ್ಯವನ್ನು ಜೀವನದಲ್ಲಿ ಆಚರಿಸೋಣ ಆಗ ಸತ್ಪಲಗಳು ನಮ್ಮನ್ನು ಅರಿಸಿ ಬರುತ್ತದೆ ಎಂದು ಹಂಗಾರಕಟ್ಟೆಯ ಬಾಳೆಕುದ್ರು ಶ್ರೀಮಠದ ಶ್ರೀ ನೃಸಿಂಹಾಶ್ರಮ ಸ್ವಾಮೀಜಿ ಹೇಳಿದರು. ಅವರು ಸೋಂದಾ ಸ್ವರ್ಣವಲ್ಲೀ ಸಂಸ್ಥಾನದ ಶ್ರೀಮದ್ ಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮಿಗಳ ಅನುಗ್ರಹದೊಂದಿಗೆ ರಾಜ್ಯಾದ್ಯಂತ ನಡೆಯುತ್ತಿರುವ ಭಗವದ್ಗೀತಾ ಅಭಿಯಾನದ ಪ್ರಯುಕ್ತ ಭಗವದ್ಗೀತಾ ಅಭಿಯಾನ ಕರ್ನಾಟಕ ಉಡುಪಿ ಜಿಲ್ಲಾ ಸಮಿತಿ, ಕುಂದಾಪುರ ಕ್ಷೇತ್ರ ಸಮಿತಿ, ಶ್ರೀ ಸೀತಾರಾಮಚಂದ್ರ ದೇವಸ್ಥಾನ, ಕುಂದಾಪುರದ ಆಶ್ರಯದಲ್ಲಿ ಸಪ್ತಾಹ ಗೀತಾ ಜಯಂತಿ ಉತ್ಸವ-೨೦೧೬ರ ಅಂಗವಾಗಿ ಕುಂದಾಪುರ ಶೈಕ್ಷಣಿಕ ವಲಯದ ಎಲ್ಲಾ ಪ್ರಾಥಮಿಕ, ಹಿರಿಯ ಪ್ರಾಥಮಿಕ, ಪ್ರೌಢ ಶಾಲೆಗಳ ಮತ್ತು ಪದವಿ ಪೂರ್ವ ಕಾಲೇಜುಗಳ ವಿದ್ಯಾರ್ಥಿಗಳಿಗೆ ಹಂಗಳೂರಿನ ಶ್ರೀ ಅನಂತ ಪದ್ಮನಾಭ ಸಭಾಭವನದಲ್ಲಿ ನಡೆದ ಭಗವದ್ಗೀತಾ ಸ್ಪರ್ಧಾ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಆಶೀರ್ವಚನ ನೀಡಿದರು. ಭಗವದ್ಗೀತೆ ಸ್ಪರ್ಧಾ ದೃಷ್ಠಿಗಿಂತ ಜೀವನಕ್ಕೋಸ್ಕರ ಕಲಿತಾಗ ಸಂಸ್ಕಾರ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಗಂಗೊಳ್ಳಿ : ಕ್ರೀಡೆ ಎನ್ನುವದು ಸಮಾಜದ ವಿವಿಧ ಜನರ ನಡುವೆ ಶಾಂತಿ ಸಹಬಾಳ್ವೆ ಸಾಮರಸ್ಯ ಮನೋಭಾವನೆಯನ್ನು ಮೂಡಿಸುವಲ್ಲಿ ಸಹಕಾರಿ. ಅಂತಹ ಕ್ರೀಡೆಗಳಲ್ಲಿ ತೊಡಗಿಸಿಕೊಂಡಾಗ ಬಹುಮುಖಿ ವ್ಯಕ್ತಿತ್ವ ವಿಕಸನ ಸಾಧ್ಯ ಎಂದು ಕುಂದಾಪುರ ವಲಯ ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ದತ್ತಾತ್ರೇಯ ನಾಯಕ್ ಅವರು ಅಭಿಪ್ರಾಯ ಪಟ್ಟರು. ಅವರು ಸ್ಟೆಲ್ಲಾ ಮಾರಿಸ್ ಪ್ರೌಢಶಾಲೆ ಗಂಗೊಳ್ಳಿ ಇದರ ಸುವರ್ಣ ಮಹೋತ್ಸವದ ಅಂಗವಾಗಿ ಹಮ್ಮಿಕೊಂಡಿದ್ದ ಸುವರ್ಣ ಕ್ರೀಡೋತ್ಸವ ಕಾರ‍್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಇದೇ ಸಂದರ್ಭದಲ್ಲಿ ಆಹ್ವಾನಿತ ಪ್ರಾಥಮಿಕ ಮತ್ತು ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ ವಿಶೇಷವಾಗಿ ಹಮ್ಮಿಕೊಂಡಿದ್ದ ಕಬಡ್ಡಿ ಪಂದ್ಯಾಟದ ಕ್ರೀಡಾಂಗಣವನ್ನು ಉದ್ಘಾಟಿಸಿದ ಸುವರ್ಣ ಮಹೋತ್ಸವ ಸಮಿತಿಯ ಗೌರವಾಧ್ಯಕ್ಷ ರಾಜು ದೇವಾಡಿಗ ಮಾತನಾಡಿ ಕ್ರೀಡಾಳುಗಳು ಯಾವತ್ತೂ ಕ್ರೀಡಾ ಸ್ಫೂರ್ತಿಯನ್ನು ಮೆರೆಯಬೇಕು. ಸೋಲು ಗೆಲುವಿಗಿಂತ ಪ್ರಮಾಣಿಕ ಪರಿಶ್ರಮ ಮುಖ್ಯ ಎಂದು ಹೇಳಿದರು. ಸ್ಟೆಲ್ಲಾ ಮಾರಿಸ್ ಶಿಕ್ಷಣ ಸಂಸ್ಥೆಗಳ ಜಂಟಿ ಕಾರ‍್ಯದರ್ಶಿ ಸಿಸ್ಟರ್ ಜ್ಯೂಲಿ ಆನ್ ಅದ್ಯಕ್ಷತೆ ವಹಿಸಿದ್ದರು.ಬೈಂದೂರು ಉಪವಲಯ ಅರಣ್ಯಾಧಿಕಾರಿ ಕೆ ಸದಾಶಿವ, ಶಾಲೆಯ ನಿವೃತ್ತ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕೋಟೇಶ್ವರ: ಕರ್ನಾಟಕ ಕರಾವಳಿಯ ಸಪ್ತ ಪುಣ್ಯ ಕ್ಷೇತ್ರಗಳಲ್ಲಿ ಒಂದಾದ ಕೋಟೇಶ್ವರದಲ್ಲಿ ಶ್ರೀ ಕೋಟಿಲಿಂಗೇಶ್ವರ ದೇವಸ್ಥಾನದ ಮನ್ಮಹಾರಥೋತ್ಸವ ಸಡಗರ ಸಂಭ್ರಮದಿಂದ ಜರುಗಿತು. ಧನುರ್ ಲಗ್ನ ಸುಮೂಹರ್ತದಲ್ಲಿ ಮಂಗಳವಾರ ಬೆಳಗ್ಗೆ ಶ್ರೀದೇವರ ರಥಾರೋಹಣ ಪೂರ್ವ ವಿಧಿಗಳು ಆರಂಭಗೊಂಡವು. ತಂತ್ರಿಗಳು ಧಾರ್ಮಿಕ ವಿಧಿ ನೆರವೇರಿಸಿ ರಥೋತ್ಸವಕ್ಕೆ ಚಾಲನೆ ನೀಡಿದರು. ಶ್ರೀದೇವರಿಗೆ ಶತರುದ್ರಾಭಿಷೇಕ ಇನ್ನಿತರ ಧಾರ್ಮಿಕ ವಿಧಿ ನಡೆದ ಬಳಿಕ ಸಹಸ್ರಾರು ಭಕ್ತರ ಜಯಘೋಷದೊಂದಿಗೆ ಭವ್ಯ ರಥೋತ್ಸವ ನಡೆಯಿತು. ಸಂಜೆ  ಬಸವನಗುಡಿ ಸನ್ನಿಧಿಯಿಂದ ಶ್ರೀದೇವರಿಗೆ ಅಭಿಮುಖವಾಗಿ ರಥ ಏಳೆದ ಬಳಿಕ ರಥಾಅವರೋಹಣದ ವಿಧಿ ಸಮಾಪನಗೊಳ್ಳುತ್ತದೆ. ಅಪಾರ ಸಂಖ್ಯೆಯ ಜನಸ್ತೋಮ ರಥೋತ್ಸವದಲ್ಲಿ ಪಾಲ್ಗೊಂಡು ಶ್ರೀಕೋಟಿಲಿಂಗೇಶ್ವರ ದೇವರ ದರ್ಶನ ಪಡೆದು ಪುನೀತರಾದರು. ಕುಂದಾಪ್ರ ಡಾಟ್ ಕಾಂ ಸುದ್ದಿ. ದೇವಳದ ರಥೋತ್ಸವದ ಸಂದರ್ಭ ಗರುಡ ದರ್ಶನ ಆಗುವುದು ವಾಡಿಕೆ. ಸಂಜೆಯ ರಥೋತ್ಸವಕ್ಕೆ ಚಾಲನೆ ಸಿಗುತ್ತಿರುವಂತೆಯೇ ಗರುಡ ದರ್ಶನ ಆಗಿದ್ದು ರಥಕ್ಕೆ ಎರಡು ಸುತ್ತು ಬಂದು ನಿರ್ಗಮಿಸಿದೆ. ಗರುಡದರ್ಶನ ವೀಕ್ಷಿಸಲು ಸಹಸ್ರಾರು ಭಕ್ತರು ನೆರೆದಿದ್ದು ಗರುಡ ರಥಕ್ಕೆ…

Read More

ಬೈಂದೂರಿನಲ್ಲಿ ರಂಗಸುರಭಿ ನಾಟಕ ಸಪ್ತಾಹ ಉದ್ಘಾಟನೆ ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ನಾಟಕ, ಸಂಗೀತ, ಕಲೆ ಮೊದಲಾದವುಗಳು ಮನುಷ್ಯನ ಮನೋನೆಲೆಯ ಸೆಲೆಗಳು. ಬದುಕಿನ ಅವಕಾಶಗಳನ್ನು ಅರಸಿ ಎಲ್ಲೆಯೋ ನೆಲೆ ಕಾಣಲು ಹೊರಟರೂ ಅಂತಿಮವಾಗಿ ಕಲೆ ಮನುಷ್ಯನ ಕೈಹಿಡಿದು ನಡೆಸುತ್ತದೆ ಎಂದು ಖ್ಯಾತ ಸಾಹಿತಿ ವೈದೇಹಿ ಹೇಳಿದರು. ಅವರು ಸುರಭಿ ರಿ. ಬೈಂದೂರು ಹಾಗೂ ಯಸ್ಕೋರ್ಡ್ ಟ್ರಸ್ಟ್ ರಿ. ಆಶ್ರಯದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಕಾರದೊಂದಿಗೆ ಆಯೋಜಿಸಲಾಗಿದ್ದ ’ರಂಗಸುರಭಿ ೨೦೧೬’ ನಾಟಕ ಸಪ್ತಾಹವನ್ನು ಉದ್ಘಾಟಿಸಿ ಮಾತನಾಡಿದರು. ರಂಗಭೂಮಿಗೆ ಇಂಡಸ್ಟ್ರಿ ಎಂಬುದಿಲ್ಲ. ರಂಗಭೂಮಿಯನ್ನು ಯಾರೂ ಕೊಂಡುಕೊಳ್ಳಲಾಗುವುದಿಲ್ಲ. ರೂಪಕ ಭಾಷೆಯಾಗಿ ಜನರೊಂದಿಗೆ ಇರುವ ರಂಗಭೂಮಿಗೆ ಸಾವೆಂಬುದಿಲ್ಲ. ಸ್ವಕೇಂದ್ರಿತ ಸಮಾಜ ನಿರ್ಮಾಣವಾಗುತ್ತಿರುವ ಕಾಲಘಟ್ಟದಲ್ಲಿ, ಗ್ರಾಮೀಣ ಪ್ರದೇಶದಲ್ಲಿ ನಡೆಯುತ್ತಿರುವ ರಂಗ ಚಟುವಟಿಕೆಗಳು ಮುಖ್ಯ ಎಂದೆನಿಸಿಕೊಳ್ಳುತ್ತವೆ. ಆ ನೆಲೆಯಲ್ಲಿ ಬೈಂದೂರಿನ ಸುರಭಿ ಸಂಸ್ಥೆಯ ಬಹುದೊಡ್ಡ ಹೆಜ್ಜೆ ಇಟ್ಟಿದೆ ಎಂದವರು ಶ್ಲಾಘಿಸಿದರು. ನಾವು ಮನುಷ್ಯನ ಅಸ್ಪೃಷ್ಯತೆಗಳ ಬಗೆಗೆ ಬಹಳ ಮಾತನಾಡುತ್ತೇವೆ. ಅಂತಿಮವಾಗಿ ಅವುಗಳನ್ನು ಹೇಗಾದರೂ ನಿವಾರಿಸಬಹುದು. ಆದರೆ ಮನುಷ್ಯನ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಜೇಸಿಐ ಕುಂದಾಪುರ ಸಿಟಿಯ ಜ್ಯೂನಿಯರ್ ಜೇಸಿ ಅಧ್ಯಕ್ಷರಾಗಿ ಕುಂದಾಪುರದ ಪ್ರಜ್ವಲ್ ದೇವಾಡಿಗ ಅವರನ್ನು ಆಯ್ಕೆ ಮಾಡಿರುವುದಾಗಿ ಜೇಸಿಐ ಕುಂದಾಪುರ ಸಿಟಿಯ ಅಧ್ಯಕ್ಷ ಶ್ರೀಧರ ಸುವರ್ಣ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಮಕ್ಕಳಿಗೆ ಶಿಕ್ಷಣ ಶಿಕ್ಷೆಯಾಗಬಾರದು. ನಿಮ್ಮ ಮಕ್ಕಳನ್ನು ಇತರ ಮಕ್ಕಳೊಂದಿಗೆ ಹೋಲಿಕೆ ಮಾಡಬೇಡಿ. ತಾಯಂದಿರು ತಮ್ಮ ಮಕ್ಕಳಲ್ಲಿರುವ ಪ್ರತಿಭೆ ಗುರುತಿಸಿ ಆ ಮಾರ್ಗದಲ್ಲಿಯೇ ಅವರನ್ನು ಮುನ್ನೆಡೆಸುವ ಜೊತೆಗೆ ಬದುಕಿಗೆ ಬೇಕಾದ ಮೌಲ್ಯಯುತ ಶಿಕ್ಷಣ, ಸಂಸ್ಕಾರ ಹಾಗೂ ರಾಷ್ಟ್ರಪ್ರೇಮವನ್ನು ಕಲಿಸುವ ಗುರುತರ ಜವಾಬ್ದಾರಿಯನ್ನು ನಿರ್ವಹಿಸಬೇಕು. ಇದರಿಂದ ಮಕ್ಕಳ ಭವಿಷ್ಯ ಉತ್ತಮಗೊಳಿಸಲು ಸಾಧ್ಯವಾಗುತ್ತದೆ ಎಂದು ತಾಪಂ ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷ ಮಹೇಂದ್ರ ಪೂಜಾರಿ ಹೇಳಿದರು. ಹೇರಂಜಾಲು ಸಹಿಪ್ರಾ ಶಾಲೆಯ ನೂತನ ಅಕ್ಷರ ದಾಸೋಹ ಕೊಠಡಿ ಉದ್ಘಾಟನೆ ಮತ್ತು ಕವಿ ಮೊಗೇರಿ ಗೋಪಾಲಕೃಷ್ಣ ಅಡಿಗ ವೇದಿಕೆಯಲ್ಲಿ ನಡೆದ ವಾರ್ಷಿಕೋತ್ಸವ ಉದ್ಘಾಟಿಸಿ ಮಾತನಾಡಿದರು. ವಿದ್ಯಾರ್ಥಿಗಳ ಸಂಪೂರ್ಣ ಶಿಕ್ಷಣಾ ವೆಚ್ಚ ಭರಿಸುವ ಮತ್ತು ಕಲಿಕಾ ಸಾಮಗ್ರಿಗಳನ್ನು ನೀಡುವ ಮೂಲಕ ಸರ್ಕಾರ ವಿದ್ಯೆಗೆ ಹೆಚ್ಚು ಒತ್ತು ಕೊಡುತ್ತಿದೆ. ಶಾಲೆಯಲ್ಲಿ ದೊರೆಯುವ ಸರಕಾರಿ ಸೌಲಭ್ಯಗಳನ್ನು ವಿದ್ಯಾರ್ಥಿಗಳು ಸದುಪಯೋಗ ಪಡಿಸಿಕೊಂಡು ಉತ್ತಮ ಕಲಿಕೆಯೊಂದಿಗೆ ತಮ್ಮ ಭವಿಷ್ಯ ರೂಪಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು. ಅಧ್ಯಕ್ಷತೆವಹಿಸಿದ್ದ ಜಿಪಂ ಸದಸ್ಯೆ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಗಂಗೊಳ್ಳಿ: ವಿದ್ಯಾರ್ಥಿಗಳಿಗೆ ಶಿಕ್ಷಕರ ಮೇಲೆ ವಿಶ್ವಾಸವಿರಬೇಕು. ತರಗತಿಗಳಲ್ಲಿ ಕಲಿಸಿದ ಪಾಠ ಪ್ರವಚನಗಳನ್ನು ದಿನನಿತ್ಯ ಅಭ್ಯಾಸ ಮಾಡಬೇಕು. ತಿಳಿಯದ ವಿಷಯಗಳನ್ನು ಅಧ್ಯಾಪಕರಲ್ಲಿ ಕೇಳಿ ತಿಳಿದುಕೊಳ್ಳಬೇಕು. ಮಕ್ಕಳಿಗೆ ಯಾವುದೇ ವಿಷಯದಲ್ಲಿ ಬಲವಂತ ಮಾಡದೆ ಅವರಿಗೆ ಕಲಿಯಲು ಪ್ರೋತ್ಸಾಹ ನೀಡಬೇಕು. ಮಕ್ಕಳನ್ನು ಟ್ಯೂಷನ್ ತರಗತಿಗಳಿಗೆ ಕಳುಹಿಸುವುದರಿಂದ ಅವರಲ್ಲಿ ಗೊಂದಲ ಇನ್ನಷ್ಟು ಹೆಚ್ಚಾಗಿ ಅವರು ವಿದ್ಯಾಭ್ಯಾಸದಲ್ಲಿ ಹಿಂದುಳಿಯುವ ಸಾಧ್ಯತೆಗಳಿದೆ ಎಂದು ಅಂಪಾರು ಸಂಜಯ ಗಾಂಧಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸಹಶಿಕ್ಷಕಿ ಯು. ಗೀತಾ ಶ್ಯಾನುಭಾಗ್ ಹೇಳಿದರು. ಅವರು ಗಂಗೊಳ್ಳಿಯ ಸರಸ್ವತಿ ವಿದ್ಯಾಲಯ ಪದವಿಪೂರ್ವ ಕಾಲೇಜಿನ ವಠಾರದಲ್ಲಿ ಜರಗಿದ ಸರಸ್ವತಿ ವಿದ್ಯಾಲಯ ಆಂಗ್ಲ ಮಾಧ್ಯಮ ಶಾಲೆಯ ವಾರ್ಷಿಕೋತ್ಸವ ಸಮಾರಂಭದಲ್ಲಿ ಅತಿಥಿಯಾಗಿ ಮಾತನಾಡಿದರು. ಯು. ರವೀಂದ್ರ ಶ್ಯಾನುಭಾಗ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಶಾಲೆಯ ಪ್ರಾಕ್ತನ ವಿದ್ಯಾರ್ಥಿ ಶ್ರೀಕಾಂತ ಶ್ಯಾನುಭಾಗ್ ಬೆಂಗಳೂರು ಸ್ವಸ್ಥಿವಾಚನಗೈದರು. ಗಂಗೊಳ್ಳಿಯ ಜಿಎಸ್‌ವಿಎಸ್ ಅಸೋಸಿಯೇಶನ್ ಅಧ್ಯಕ್ಷ ಡಾ.ಕಾಶೀನಾಥ ಪೈ, ಕಾರ್ಯದರ್ಶಿ ಎಚ್.ಗಣೇಶ ಕಾಮತ್, ಎಸ್.ವಿ.ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲೆ ಕವಿತಾ ಎಂ.ಸಿ., ಶಾಲೆಯ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಗಂಗೊಳ್ಳಿ : ವಿದ್ಯಾರ್ಥಿಗಳು ಸೋಲಿಗೆ ಕುಗ್ಗದೆ, ಗೆಲುವಿಗೆ ಹಿಗ್ಗದೆ ಕ್ರೀಡಾ ಮನೋಭಾವನೆಯಿಂದ ಕ್ರೀಡೆಗಳಲ್ಲಿ ಭಾಗವಹಿಸಿ ಕ್ರೀಡಾ ಸ್ಫೂರ್ತಿ ಪ್ರದರ್ಶಿಸಬೇಕು. ನಿರಂತರವಾಗಿ ಕ್ರೀಡಾ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವುದರಿಂದ ವಿದ್ಯಾರ್ಥಿಗಳ ದೈಹಿಕ ಮತ್ತು ಮಾನಸಿಕ ಬೆಳವಣಿಗೆ ಆಗುವುದರಿಂದ ಮಕ್ಕಳಿಗೆ ಕ್ರೀಡಾ ಚಟುವಟಿಕೆಗೆ ಹೆಚ್ಚಿನ ಪ್ರೋತ್ಸಾಹ ನೀಡಬೇಕು ಎಂದು ಗಂಗೊಳ್ಳಿಯ ಸಮಾಜಸೇವಕ ಜಿ.ಗಣಪತಿ ಶಿಪಾ ಹೇಳಿದರು. ಅವರು ನಡೆದ ಗಂಗೊಳ್ಳಿ ಖಾರ್ವಿಕೇರಿಯ ಕೊಂಚಾಡಿ ರಾಧಾ ಶೆಣೈ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಾರ್ಷಿಕ ಕ್ರೀಡಾಕೂಟವನ್ನು ಉದ್ಘಾಟಿಸಿ ಮಾತನಾಡಿದರು. ಶಾಲೆಯ ಮುಖ್ಯಶಿಕ್ಷಕಿ ಸುಜಾತಾ ಕೆ., ಸ್ಥಳದಾನಿಗಳಾದ ಮೋಹನದಾಸ ಕಾನೋಜಿ, ಜ್ಞಾನದಾಸ ಕಾನೋಜಿ, ಶಾಲೆಯ ಎಸ್.ಡಿ.ಎಂ.ಸಿ. ಅಧ್ಯಕ್ಷ ನಾಗರಾಜ ಖಾರ್ವಿ, ಸದಸ್ಯರಾದ ರವಿಶಂಕರ ಖಾರ್ವಿ, ಶ್ರೀಧರ ಮೊಗವೀರ, ಪವಿತ್ರ ಮೇಸ್ತ, ಶಾರದಾ, ಮಮತಾ, ದಿವಾಕರ ಖಾರ್ವಿ, ರಾಮ ಖಾರ್ವಿ, ಸುಧಾಕರ ಖಾರ್ವಿ, ವೆಂಕಟೇಶ ಕೋಟಾನ್, ಇಂದಿರಾ, ರೇಣುಕಾ, ಮಾನಸ, ಶಾಲೆಯ ಸಹಶಿಕ್ಷಕರು, ಪೋಷಕರು ಉಪಸ್ಥಿತರಿದ್ದರು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಈ ಬಾರಿ ಎಂಪಿಎಲ್ ಮ್ಯಾಂಗಳೂರು ಪ್ರೀಮಿಯರ್ ಲೀಗ್‌ನಲ್ಲಿ ಕುಂದಾಪುರದ ಅದುವೇ ಪ್ರೆಸಿಡೆಂಟ್ ಸಿಕ್ಸರ್ಸ್ ಕ್ರಿಕೆಟ್ ತಂಡ ಭಾಗವಹಿಸುತ್ತಿದೆ. ಈ ತಂಡದ ಉದ್ಘಾಟನಾ ಸಮಾರಂಭ, ಕೋಟೇಶ್ವರ ಹೈಸ್ಕೂಲ್ ಮೈದಾನದಲ್ಲಿ ಜರುಗಿತು. ವರ್ಣರಂಜಿತ ಕಾರ್ಯಕ್ರಮದಲ್ಲಿ ಬಾಲಿವುಡ್ ನಟ ತುಳುನಾಡಿನ ಹೆಮ್ಮೆಯ ಪುತ್ರ ಸುನೀಲ್ ಶೆಟ್ಟಿ ತಂಡದ ಜೆರ್ಸಿಯನ್ನು ಮತ್ತು ತಂಡದ ಥೀಂ ಸಾಂಗ್‌ನ್ನು ಬಿಡುಗಡೆಗೊಳಿಸಿದರು. ಈ ಸಂದರ್ಭ ಮಾತನಾಡಿದ ನಟ ಸುನೀಲ್ ಶೆಟ್ಟಿ, ನಮ್ಮಸ್ಕಾರ ಹೇಗಿದ್ದಿರಿ? ಎಂದು ಸಭಿಕರೊಂದಿಗೆ ಮಾತನಾಡಿದ ಸುನೀಲ್ ನಮಗೆ ಕನ್ನಡ ಸ್ವಲ್ಪ ಸ್ವಲ್ಪ ಬರುತ್ತದೆ. ತುಳು ಬರ‍್ತದೆ ಎಂದು ಮಾತನ್ನು ಶುರು ಮಾಡಿದರು. ನನಗೆ ಈ ಕಾರ್ಯಕ್ರಮಕ್ಕೆ ಬಂದಿರುವುದು ಬಹಳ ಸಂತೋಷವಾಗಿದೆ. ಕ್ರಿಕೆಟ್ ಎನ್ನುವುದು ನನ್ನ ಮೊದಲ ಪ್ಯಾಶನ್ ಆಗಿದೆ. ಆಯೋಜಕರು ನನಗೆ ನಮ್ಮನ್ನು ಬೆಂಬಲಿಸಿ ಎಂದಾಗ ಇಲ್ಲ ಎನ್ನಲಾಗಲಿಲ್ಲ. ಆ ಕಾರಣವಾಗಿ ಬಂದು ಬೆಂಬಲಿಸಿದ್ದೇನೆ. ನಾನು ಪ್ರೆಸಿಡೆಂಟ್ ಸಿಕ್ಸರ್‌ನ್ನು ಬೆಂಬಲಿಸುತ್ತೇನೆ ನೀವು ಬೆಂಬಲಿಸಿ ಎಂದು ಇಂಗ್ಲಿಷ್ ಮಿಶ್ರಿತ ತುಳುವಿನಲ್ಲಿ ತಮ್ಮ ಅಭಿಪ್ರಾಯ…

Read More