Author: ನ್ಯೂಸ್ ಬ್ಯೂರೋ

ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಆಶ್ರಯದಲ್ಲಿ ನಡೆಯಲಿರುವ ಆಳ್ವಾಸ್ ನುಡಿಸಿರಿ-2016 ನಾಡು ನುಡಿಯ ಸಮ್ಮೇಳನಕ್ಕೆ ಪೂರಕವಾಗಿ ನ.17ರಿಂದ 20ರವರೆಗೆ ಕೃಷಿ ಸಿರಿ ನಡೆಯಲಿದೆ. ಹಲವಾರು ವೈವಿಧ್ಯತೆಗಳೊಂದಿಗೆ ಮೂಡಿಬರಲಿದೆ ಎಂದು ಡಾ.ಎಂ ಮೋಹನ ಆಳ್ವ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ. 150 ಮಳಿಗೆಗಳಿಗೆ ಉಚಿತ ವ್ಯವಸ್ಥೆ: ಕೃಷಿ ಸಂಬಂಧಿ ಪರಿಕರಗಳ ಪ್ರದರ್ಶನ ಹಾಗೂ ಮಾರಾಟದ ವ್ಯವಸ್ಥೆಯೂ ಈ ಕೃಷಿ ಉತ್ಸವದಲ್ಲಿದ್ದು ಈಗಾಗಲೇ 150ಕ್ಕೂ ಮಿಕ್ಕಿ ರಾಜ್ಯಮಟ್ಟದ ಕೃಷಿ ಮಳಿಗೆಗಳು ಹೆಸರು ನೋಂದಾಯಿಸಿಕೊಂಡಿವೆ. ತಂತ್ರಜ್ಞಾನಾಧಾರಿತ ಆಧುನಿಕ ಕೃಷಿ ಉಪಕರಣಗಳು ಈ ಪ್ರದರ್ಶನದಲ್ಲಿ ಪಾಲ್ಗೊಳ್ಳುತ್ತಿದ್ದು ಗ್ರಾಮೀಣ ಭಾಗದ ಕೃಷಿಕರಿಗೆ ಆಧುನಿಕತೆಯ ಪರಿಚಯ ಮಾಡಿಕೊಡುವುದು ಮಾತ್ರವಲ್ಲ ಕೃಷಿಕರ ಅಗತ್ಯತೆಗಳನ್ನು ಪೂರೈಸುವಲ್ಲಿಯೂ ಈ ಕೃಷಿಸಿರಿ ಪ್ರಯತ್ನಿಸಲಿದೆ. ಕೃಷಿ ಸಂಸ್ಕೃತಿಯಿಂದ ದೂರವಿರುವ ಆಧುನಿಕ ಯುವ ಪೀಳಿಗೆಗೆ ಆಹಾರ ಸಂಸ್ಕೃತಿಯನ್ನು ಪರಿಚಯಿಸುವುದು ಮಾತ್ರವಲ್ಲ ಅವರ ಜ್ಞಾನದ ಪರಿಧಿಯನ್ನು ವಿಸ್ತರಿಸುವಲ್ಲಿಯೂ ಸಹಕಾರಿಯಾಗಲಿದೆ. ಕೃಷಿ ಉಪಕರಣ, ಕೃಷಿ ಪರಿಕರ ಹಾಗೂ ಆಹಾರೋತ್ಪನ್ನಗಳ ಪ್ರದರ್ಶನ, ಪ್ರಾತ್ಯಕ್ಷಿಕೆ ಮತ್ತು ಮಾರಾಟಗಳು ನಡೆಯಲಿದ್ದು ಮಳಿಗೆದಾರರಿಗೆ ಮಳಿಗೆಯು ಉಚಿತವಾಗಿದೆ ಹಾಗೂ ಮಳಿಗೆದಾರರ ತಂಡಕ್ಕೆ ಉಚಿತ…

Read More

ಕುಂದಾಪ್ರ ಡಾಟ್ ಕಾಂ ವರದಿ ಕುಂದಾಪುರ: ಯಕ್ಷಗಾನ ತಿರುಗಾಟ ಆರಂಭಗೊಂಡು ದಿನಕಳೆಯುತ್ತಿದ್ದರೂ ಕುಂದಾಪುರದ ನೆಹರೂ ಮೈದಾನದಲ್ಲಿ ಯಕ್ಷಗಾನ ಪ್ರದರ್ಶನ ನೋಡುವ ಭಾಗ್ಯವಿಲ್ಲ. ಯಾರದ್ದೋ ಸ್ವಪ್ರತಿಷ್ಠೆಗೆ ವಿಶ್ವಮಾನ್ಯ ಕಲೆಯ ನೆಲೆಯಲ್ಲಿಯೇ ಕಂಟಕ ತಂದಿಟ್ಟಿರುವುದು ಯಕ್ಷಪ್ರಿಯರನ್ನು ನಿರಾಶೆಗೊಳಿಸಿದೆ. ವಾಸ್ತವವಾಗಿ ಯಕ್ಷಗಾನ ಪ್ರದರ್ಶನದಿಂದ ಯಾರಿಗೆ ತೊಂದರೆಯಾಗುವುದೆಂಬ ಕಾರಣ ನೀಡಿದ್ದರೋ ಅಲ್ಲಿನ ಪರಿಸ್ಥಿತಿ ಮಾತ್ರ ಚಿಂತಾಜನಕ. ಮೈದಾನದ ಅಕ್ಕಪಕ್ಕವಿರುವ ಹಾಸ್ಟೆಲ್‌ಗಳಿಗೆ ಮೂಲಭೂತ ಸೌಕರ್ಯಗಳನ್ನು ಕಲ್ಪಿಸದೇ ಮೈದಾನದಲ್ಲಿ ನಡೆಯುವ ಕಾರ್ಯಕ್ರಮದ ಬಗ್ಗೆ ಕೆಲವು ಮಹನೀಯರಿಗೆ ಚಿಂತೆ ಹತ್ತಿಕೊಂಡಿದ್ದು ಒಟ್ಟಿನಲ್ಲಿ ಯಕ್ಷಗಾನ ಪ್ರದರ್ಶನಕ್ಕೆ ಅಡ್ಡಿಪಡಿಸುತ್ತಿರುವವರ ಹಿಂದೆ ಸ್ವಹಿತಾಸ್ತಿಯೂ ಅಡಗಿರಬಹುದೆಂಭ ಆರೋಪ ಕೇಳಿಬರುತ್ತಿದೆ. ಯಕ್ಷಗಾನಕ್ಕೆ ವಿರೋಧಿಸುವವರು ಹಾಸ್ಟೆಲ್ ಪರಿಸ್ಥಿತಿ ಅವಲೋಕಿಸಿದ್ದಾರೆ? ಶಾಲೆ, ಹಾಸ್ಟೆಲ್, ಸ್ವಚ್ಛತೆ, ಭದ್ರತೆಯನ್ನು ಮುಂದಿಟ್ಟುಕೊಂಡು ಯಕ್ಷಗಾನ ಪ್ರದರ್ಶನಕ್ಕೆ ಅವಕಾಶ ನಿರಾಕರಣೆ ಮಾಡುತ್ತಿರುವವರು ಒಮ್ಮೆ ಹಾಸ್ಟಲ್‌ಗೆ ಭೇಟಿ ನೀಡಿ ಪರೀಕ್ಷಿಸಲಿ. ಎಂತಾ ಪರಿಸರದಲ್ಲಿ ಮಕ್ಕಳು ದಿನಕಳೆಯುತ್ತಿದ್ದಾರೆ ಎನ್ನುವ ಕನಿಷ್ಟ ಅರಿವಾದರೂ ಮೂಡುತ್ತದೆ. ಹಾಸ್ಟೆಲ್ ಮೂಲಭೂತ ಸೌಲಭ್ಯ, ಸ್ವಚ್ಛತೆ ಬಗ್ಗೆ ಕಾಳಜಿಯಿದ್ದರೆ ಮೊದಲು ಹಾಸ್ಟೆಲ್ ವ್ಯವಸ್ಥೆ ಸರಿಪಡಿಸಲಿ. ಹಾಸ್ಟೆಲ್ ಮುಂದಿರುವ ಪಾಯಿಖಾನೆ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಮೂಡಲಕಟ್ಟೆ ರೈಲ್ವೆ ನಿಲ್ದಾಣದಲ್ಲಿ ಎಕ್ಷ್‌ಪ್ರೆಸ್ ರೈಲು ನಿಲುಗಡೆಗೆ ಆಗ್ರಹಿಸಿ ಕುಂದಾಪುರ ರೈಲು ಪ್ರಯಾಣಿಕರ ಹಿತರಕ್ಷಣಾ ಸಮಿತಿ ಸಂಸದೆ ಶೋಭಾ ಕರಂದ್ಲಾಜೆ ಅವರಿಗೆ ಮನವಿ ಸಲ್ಲಿಸಿದರು. ಮೂಡಲಕಟ್ಟೆ ರೈಲ್ವೆ ನಿಲ್ದಾಣದ ಮೂಲಕ ಕೊಚ್ಚುವೇಲಿ, ಬಿಕಾನೇರ್ ಎಕ್ಷ್‌ಪ್ರೆಸ್ ಬೆಳಗ್ಗೆ ೬.೪೫ಕ್ಕೆ ತೆರಳುತ್ತಿದ್ದು ಬೈಂದೂರು, ಮುರುಡೇಶ್ವರ ಕುಮುಟಾ, ಗೋವಾ, ಮುಂಬೈ, ಗುಜರಾತ್, ರಾಜಸ್ತಾನ ಪ್ರವಾಸಿ ತಾಣಗಳಿಗೆ ಹೋಗಲು ಅನುಕೂಲವಾಗುವ ಜೊತೆ ಗೋವಾಕ್ಕೆ ತೆರಳೀ, ಅದೇ ದಿನ ಹಿಂದಕ್ಕೆ ಮರುಳಲು ಅವಕಾಶ ಇರುವುದರಿಂದೆ ಈ ರೈಲುಗಳು ನಿಲುಗಡೆಯಾದರೆ ಉತ್ತಮ ಎಂದು ಸಮಿತಿ ಮನವಿಯಲ್ಲಿ ತಿಳಿಸಿದೆ. ಸಂಸದೆ ಶೋಭಾ ಕರಂದ್ಲಾಜ್ ರೈಲು ನಿಲುಗಡೆ ಬಗ್ಗೆ ಪ್ರಯತ್ನ ಮಾಡುವುದಾಗಿ ಭರವಸೆ ನೀಡಿದರು. ಕುಂದಾಪುರ ರಾಜಸ್ತಾನ ಸಮುದಾಯ ಮುಖಂಡ ಮಘುರಾಮ್, ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಕಿರಣ್ ಕೊಡ್ಗಿ, ಆಟ್ಕೆರೆ ಬಾಬು ಪೈ, ರೈಲು ಹೋರಾಟ ಸಮಿತಿ ಹಂಗಾಮಿ ಕಾರ‍್ಯದರ್ಶಿ ಜೋಯ್ ಜೆ.ಕಾರ‍್ವಾಲೋ, ಗಣೇಶ್ ಪುತ್ರನ್, ವಿವೇಕ್ ನಾಯಕ್, ಉದಯ ಭಂಡಾರ್‌ಕಾರ್, ಪದ್ಮನಾಭ ಶೆಣೈ, ವಿವೇಕ್…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಕಾರ್ಟೂನು ಕಲೆಯ ಬಗೆಗೆ ಒಲವು ಬೆಳೆಸುತ್ತಾ, ಜನಸಾಮಾನ್ಯರು ಹಾಗೂ ಯುವ ಪೀಳಿಗೆಯಲ್ಲಿ ಕಾರ್ಟೂನು ಬಗೆಗೆ ಅಭಿರುಚಿಯನ್ನು ಬೆಳೆಸುವ ಉದ್ದೇಶದೊಂದಿಗೆ ಸತತ ಮೂರು ವರ್ಷಗಳಿಂದ ಕಾರ್ಟೂನು ಕುಂದಾಪ್ರದ ನೇತೃತ್ವದಲ್ಲಿ ಜರುಗುತ್ತಿರುವ ‘ಕಾರ್ಟೂನು ಹಬ್ಬ’ ಈ ಭಾರಿಯೂ ನ.26 ರಿಂದ ನ29ರ ವರೆಗೆ ನಾಲ್ಕು ದಿನಗಳ ಕಾಲ ಕುಂದಾಪುರದ ಕಲಾಮಂದಿರದಲ್ಲಿ (ಬೋರ್ಡ್ ಹೈಸ್ಕೂಲ್) ಜರುಗಲಿದೆ. ಕಾರ್ಟೂನು ಕುಂದಾಪ್ರ, ವಿಭಿನ್ನ ಐಡಿಯಾಸ್ ಅರ್ಪಿಸುವ ಟಿಎನ್‌ಎಸ್ ‘ಕಾರ್ಟೂನು ಹಬ್ಬ’ ನವೆಂಬರ್ 26ರಂದು ಚಾಲನೆಗೊಳ್ಳಲಿದೆ. ಕಾರ್ಟೂನು ಹಬ್ಬದಲ್ಲಿ ವಿದ್ಯಾರ್ಥಿನಿಯರಿಗಾಗಿ ಮಾಯಾ ಕಾಮತ್ ಕಾರ್ಟೂನು ಸ್ವರ್ಧೆ, ಶಾಲಾ ಕಾಲೇಜು ವಿದ್ಯಾರ್ಥಿಗಳಿಗಾಗಿ ಕಾರ್ಟೂನು ಮೊಗ್ಗು ಸ್ವರ್ಧೆ, ವಿದ್ಯಾರ್ಥಿ ಹಾಗೂ ಸಾರ್ವಜನಿಕರಿಗಾಗಿ ಸೈಬರ್ ಕಾರ್ಟೂನು ಸ್ವರ್ಧೆ, ಕ್ಯಾರಿಕೇಚರ್, ಡೈಲಾಗ್ ರೈಟಿಂಗ್ ಹಾಗೂ ಸೆಲ್ಫಿ ಕಾರ್ನ್‌ರ್ ಸ್ವರ್ಧೆಗಳು ಜರುಗಲಿದೆ. ಕುಂದಾಪ್ರ ಡಾಟ್ ಕಾಂ ಸುದ್ದಿ. ಖ್ಯಾತ ವ್ಯಂಗ್ಯಚಿತ್ರಕಾರರೊಂದಿಗಿನ ಮಾತುಕತೆ ‘ಮಾಸ್ಟರ್ ಸ್ಟ್ರೋಕ್’, ಲೈವ್ ಕ್ಯಾರಿಕೇಚರ್ ಮೂಲಕ ಶಾಲೆಗೆ ದೇಣಿಗೆ ನೀಡುವ ‘ಚಿತ್ರನಿಧಿ’, ಭವಿಷ್ಯದ ಪತ್ರಕರ್ತರೊಂದಿಗೆ ಎಡಿಟೋರಿಯಲ್ ಕಾರ್ಟೂನ್ ಒಳಪದರವನ್ನು…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಇತರೆ ವಿಷಯಗಳಿಗೆ ನೀಡುವ ಪ್ರೋತ್ಸಾಹ ಕ್ರೀಡೆಗೆ ದೊರೆಯುತ್ತಿಲ್ಲ. ಕ್ರೀಡೆಗೆ ಹೆಚ್ಚಿನ ಪ್ರೋತ್ಸಾಹ ನೀಡುವ ಉದ್ದೇಶದಿಂದ ಹೊಸ ಕ್ರೀಡಾ ನೀತಿ ಜಾರಿಗೆ ತರುವ ಚಿಂತನೆಯಿದ್ದು, ಮುಂದಿನ ವಿಧಾನ ಸಭಾ ಅಧಿವೇಶನದಲ್ಲಿ ಹೊಸ ಕ್ರೀಡೆ ನೀತಿ ರೂಪಿಸುವ ಬಗ್ಗೆ ಗಮನ ಸೆಳೆಯಲಾಗುತ್ತದೆ ಎಂದು ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜಾ ಹೇಳಿದರು. ಉಡುಪಿ ಜಿಲ್ಲಾ ಪದವಿಪೂರ್ವ ಶಿಕ್ಷಣ ಇಲಾಖೆ ಹಾಗೂ ಕುಂದಾಪುರ ಸೈಂಟ್ ಮೇರಿಸ್ ಸಂಯುಕ್ತ ಪದವಿಪೂರ್ವ ಕಾಲೇಜ್ ಆಶ್ರಯದಲ್ಲಿ ಕುಂದಾಪುರ ಗಾಂಧಿ ಮೈದಾನದಲ್ಲಿ ನಡೆದ ಪದವಿಪೂರ್ವ ಕಾಲೇಜು ವಿದ್ಯಾರ್ಥಿಗಳ ಜಿಲ್ಲಾ ಮಟ್ಟದ ’ಶೈನ್-೨೦೧೬’ ಕ್ರೀಡಾಕೂಟ ದ್ವಜಾರೋಹಣ ನೆರವೇರಿಸಿ, ಗೌರವ ವಂದನೆ ಸ್ವೀಕರಿಸಿ ಮಾತನಾಡುತ್ತಿದ್ದರು. ಜಿಲ್ಲೆ, ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಪಾಲ್ಗೊಳ್ಳುವ ಕ್ರೀಡಾ ಪಟುಗಳಿಗೆ ಅನುಕೂಲ ದೃಷ್ಟಿಯಲ್ಲಿ ಹೊಸ ಕ್ರೀಡಾ ನೀತಿ ರೂಪಿಸಿ ಪ್ರೋತ್ಸಾಹ ನೀಡುವ ಉದ್ದೇಶ ಸರಕಾರಕ್ಕಿದ್ದು, ಕ್ರೀಡಾ ಕೂಟದಲ್ಲಿ ಭಾಗವಹಿಸಿದ ಕ್ರೀಡಾಳುಗಳಿಗೆ ಪ್ರೋತ್ಸಾಹ ಧನ ನೀಡುವ ಪ್ರಯತ್ನ ಸಾಗಿದೆ. ಅನುದಾನ ಕೂಡಾ ಹೆಚ್ಚಿಸುವ ಪ್ರಯತ್ನ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಗಂಗೊಳ್ಳಿ: ಶಂಕರನಾರಾಯಣದ ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ ಜರಗಿದ ಉಡುಪಿ ಜಿಲ್ಲಾ ಮಟ್ಟದ ಪ್ರಾಥಮಿಕ, ಪ್ರೌಢಶಾಲಾ ವಿದ್ಯಾರ್ಥಿಗಳ ಕ್ರೀಡಾಕೂಟದಲ್ಲಿ ಗಂಗೊಳ್ಳಿಯ ಸರಸ್ವತಿ ವಿದ್ಯಾಲಯ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ೯ನೇ ತರಗತಿ ವಿದ್ಯಾರ್ಥಿ ಸುಕೇಶ್ ಆರ್.ಜಿ. ಅವರು ಎತ್ತರ ಜಿಗಿತದಲ್ಲಿ ದ್ವಿತೀಯ ಸ್ಥಾನ ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾನೆ.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಸರಕಾರಿ ಪದವಿ ಪೂರ್ವ ಕಾಲೇಜು ಬೈಂದೂರು ಇಲ್ಲಿನ ರಾಷ್ಟ್ರೀಯ ಸೇವಾ ಯೋಜನಾ ಘಟಕದ ವತಿಯಿಂದ ರಾಷ್ಟ್ರೀಯ ಏಕತಾ ದಿನಾಚರಣೆಯನ್ನು ಆಚರಿಸಲಾಯಿತು. ಯೋಜನಾಧಿಕಾರಿರಾಘವೇಂದ್ರ ಗುಡಿಗಾರ್ ವಿದ್ಯಾರ್ಥಿಗಳಿಗೆ ಪ್ರಮಾಣ ವಚನ ಬೋಧಿಸಿದರು. ಕನ್ನಡ ಉಪನ್ಯಾಸಕರಾದ ಸತೀಶ್ ಎಂ ಇವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ವಿದ್ಯಾರ್ಥಿ ಜೀವನದಲ್ಲಿ ಪರಿಶ್ರಮ, ಶಿಸ್ತು, ಶ್ರದ್ಧೆ ಮೊದಲಾದ ಗುಣ ಮೈಗೂಡಿಸಿಕೊಂಡಾಗ ಯಶಸ್ವಿ ಪಥದಲ್ಲಿ ಮುನ್ನಡೆಯಲು ಸಾಧ್ಯ. ಕ್ರೀಡೆ ಇದೆಲ್ಲವನ್ನು ಕಲಿಸುವ ಶಕ್ತಿ ಹೊಂದಿದೆ ಎಂದು ಉಡುಪಿ ಜಿಲ್ಲಾ ಹೆಚ್ಚುವರಿ ಪೋಲಿಸ್ ಅಧೀಕ್ಷಕ ವಿಷ್ಣುವರ್ಧನ್ ಹೇಳಿದರು. ಗುರುಕುಲ ಪಬ್ಲಿಕ್ ಸ್ಕೂಲ್ ಮತ್ತು ಗುರುಕುಲ ಪದವಿ ಪೂರ್ವ ಕಾಲೇಜಿನ 11ನೇ ವಾರ್ಷಿಕ ಕ್ರೀಡಾಕೂಟವನ್ನು ಉದ್ಘಾಟಿಸಿ ಅವರು ಮಾತನಾಡಿ ಕ್ರೀಡೆ, ಕಲೆ, ಸಂಸ್ಕ್ರತಿ, ಸೇರಿದಂತೆ ವಿದ್ಯಾರ್ಥಿ ಜೀವನದಲ್ಲಿ ಅಳವಡಿಸಿಕೊಳ್ಳಬೇಕಾದ ಎಲ್ಲಾ ಸಂಗತಿಗಳನ್ನು ಗುರುಕುಲ ವಿದ್ಯಾಸಂಸ್ಥೆ ನೀಡುತ್ತಿರುವುದು ಹೆಮ್ಮೆಯ ಸಂಗತಿ. ಪಥಸಂಚಲನ, ಕರಾಟೆಯಲ್ಲಿ ವಿದ್ಯಾರ್ಥಿಗಳು ತೋರಿದ ಪ್ರದರ್ಶನ ಹೆಮ್ಮೆ ಪಡುವಂತಹದ್ದು. ಗುರುಹಿರಿಯರಲ್ಲಿ ಗೌರವ, ಶಿಕ್ಷಕರಿಗೆ ತಲೆಬಾಗುವಿಕೆ ವಿದ್ಯಾರ್ಥಿಯ ಉನ್ನತಿಗೆ ಕಾರಣವಾಗುತ್ತದೆ ಎಂದು ಅವರು ಹೇಳಿದರು. ಬಾಂಡ್ಯ ಎಜುಕೇಶನ್ ಟ್ರಸ್ಟ್‌ನ ಜಂಟಿ ಮ್ಯಾನೇಜಿಂಗ್ ಟ್ರಸ್ಟಿ ಕೆ. ಸುಭಾಶ್ಚಂದ್ರ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಟ್ರಸ್ಟ್‌ನ ಜಂಟಿ ಟ್ರಸ್ಟಿ ಅನುಪಮ ಎಸ್. ಶೆಟ್ಟಿ, ಗುರುಕುಲ ಪಬ್ಲಿಕ್ ಸ್ಕೂಲ್ ಪ್ರಿನ್ಸಿಪಾಲ್ ಶಾಯಿಜು ಕೆ.ಆರ್.ನಾಯರ್ ಉಪಸ್ಥಿತರಿದ್ದರು. ಗುರುಕುಲ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಅರ್ಜಿ ಸಮಿತಿ ಮುಂದೆ ಯಕ್ಷಗಾನ ಪ್ರದರ್ಶನದ ತನಿಕೆಯ ಕುರಿತಾಗಿ ಅರ್ಜಿ ಇದೆ ಎನ್ನೋವ ಕಾರಣಕ್ಕೆ ನೆಹರು ಮೈದಾನದಲ್ಲಿ ಯಕ್ಷಗಾನಕ್ಕೆ ಅವಕಾಶ ಇಲ್ಲಾ ಎನ್ನೋದು ಸರಿಯಲ್ಲ. ಇಲ್ಲದ ಸಮಸ್ಯೆ ಸೃಷ್ಟಿಮಾಡಿ ಪರಿಹಾರಕ್ಕೆ ಪ್ರಯತ್ನ ಮಾಡಬೇಕಾದ ಸ್ಥಿತಿ ಯಕ್ಷಗಾನಕ್ಕೆ ಬಂದಿದ್ದು ದುರಂತ ಎಂದು ಮಾಜಿ ಸಂಸದ ಹಾಗೂ ಸಚಿವ ಕೆ.ಜಯಪ್ರಕಾಶ್ ಹೆಗ್ಡೆ ವಿಷಾದ ವ್ಯಕ್ತ ಪಡಿಸಿದರು. ‘ಯಕ್ಷಗಾನ ಕಲೆ ಉಳಿವಿಗಾಗಿ ಕರೆ, ಯಕ್ಷಗಾನ ಆಟಕ್ಕಿಲ್ಲದ ನೆಹರು ಮೈದಾನ’ ಬಗ್ಗೆ ಕುಂದಾಪುರ ಪದವಿಪೂರ್ವ ಕಾಲೇಜ್ ಕಲಾ ಮಂದಿರದಲ್ಲಿ ಕಲಾವಿರರ ಹಾಗೂ ಯಕ್ಷಗಾನ ಅಭಿಮಾನಿಗಳ ಸಮಾವೇಶ ಅಧ್ಯಕ್ಷತೆ ವಹಿಸಿ ಮಾತನಾಡಿದರು. ನೆಹರು ಮೈದಾನದಲ್ಲಿ ಕಾನೂನು ಮುರಿಯಲು ಯಕ್ಷಗಾನ ಪ್ರದರ್ಶವೇ ಆಗಬೇಕಿಂದಿಲ್ಲ. ಖಾಲಿ ಮೈದಾನದಲ್ಲೂ ಬೇಕಾದರೂ ಕೂಡಾ ಅನಾಹುತಗಳು ನಡೆಯುತ್ತದೆ. ಕಾನೂನು ಪಾಲನೆ ವ್ಯವಸ್ಥೆ ಮಾಡಿಕೊಡಬೇಕು. ಮಂತ್ರಿ, ಮಹೋದಯರ ರಕ್ಷಣೆಗೆ ಪೋಲಿಸರ ನಿಯುಕ್ತಿ ಮಾಡಿದ ಹಾಗೆ ನೆಹರ ಮೈದಾನದಲ್ಲಿ ಯಕ್ಷಗನಾ ಪ್ರದರ್ಶನ ಕಾನೂನು ವ್ಯವಸ್ಥೆ ತಾಲೂಕು ಅಡಳಿತ ಜವಾಬ್ದಾರಿ ಜೊತೆ ಸ್ಚಚ್ಛತಗೆ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಲಯನ್ಸ್ ಮತ್ತು ಲಯನೆಸ್ ಕ್ಲಬ್ ಬೈಂದೂರು ಉಪ್ಪುಂದ ನೇತೃತ್ವದಲ್ಲಿ ಪ್ರಸಾದ್ ನೇತ್ರಾಲಯ ಉಡುಪಿ ಇವರ ಸಹಯೋಗದೊಂದಿಗೆ ಉಪ್ಪುಂದದ ಮಾತೃಶ್ರಿ ಸಭಾಭವನದಲ್ಲಿ ಉಚಿತ ನೇತ್ರ ಚಿಕಿತ್ಸಾ ಶಿಬಿರ ಜರುಗಿತು. ಲಯನ್ಸ್ ಜಿಲ್ಲಾ ಗವೆರ್ನೆರ್ ಕಾರ್ಯಕ್ರಮಗಳ ಸಂಯೋಜಕ ಲಯನ್ ವಿ.ಜಿ ಶೆಟ್ಟಿ ಶಿಬಿರ ಉದ್ಘಾಟಿಸಿ ಶುಭ ಹಾರೈಸಿದರು. ಪ್ರಸಾದ್ ನೆತ್ರಾಲಯದ ನೇತ್ರ ತಜ್ಞ ಡಾ ಅಕ್ಷಯ್, ನಾಗರಾಜ್ ಗಾಣಿಗ, ಶರತ್ ಕುಮಾರ್ ಶೆಟ್ಟಿ, ಮೊಹಮ್ಮದ್ ಹನಿಫ಼್, ದಿನಕರ ಶೆಟ್ಟಿ ಮುಖ್ಯ ಉಪಸ್ಥಿತರಿದ್ದರು. ಬೈಂದೂರು ಉಪ್ಪುಂದ ಲಯನ್ಸ್ ಅಧ್ಯಕ್ಷ ಡಾ. ವೆಂಕಟೇಶ ಉಪ್ಪುಂದ ಕಾರ್ಯಕ್ರಮ ದ ಅಧ್ಯಕ್ಷತೆ ವಹಿಸಿದ್ದರು. ಲಯನ್ ಕಾರ್ಯದರ್ಶಿ ಸತೀಶ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು, ಲಯನ್ ದಿವಾಕರ್ ಶೆಟ್ಟಿ ವಂದಿಸಿದರು ಮುನ್ನೂರು ಮಂದಿ ಶಿಬಿರದ ಸದುಪಯೊಗ ಪಡೆದುಕೊಂಡರು

Read More