Author: ನ್ಯೂಸ್ ಬ್ಯೂರೋ

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಕಷ್ಟ ಬಂದಾಗ ಮೊದಲು ನೆನಪಿಗೆ ಬರುವುದು ತಾಯಿ, ತಾಯಿ ಪ್ರೀತಿ ಮತ್ತು ವಾತ್ಸಲ್ಯದ ಸಾಕಾರಮೂರ್ತಿಯಾಗಿದ್ದು, ಈ ಸ್ಥಾನ ಬೇರೆ ಯಾರಿಗೂ ನೀಡಲು ಸಾಧ್ಯವಿಲ್ಲ. ಮಹಾತಾಯಿ ಸ್ಮರಣೆ ಪ್ರತಿಯೊಬ್ಬರಿಗೂ ಅತ್ಯಂತ ಅವಶ್ಯ ಎಂದು ದಕ್ಷಿಣಾಮ್ನಾಯ ಶೃಂಗೇರಿ ಶ್ರೀ ಶಾರದಾ ಪೀಠಾಧೀಶ್ವರ ಜಗದ್ಗುರು ಶಂಕರಾಚಾರ್ಯ ಶ್ರೀ ಭಾರತೀತೀರ್ಥ ಮಹಾಸ್ವಾಮಿ ಹೇಳಿದರು. ಮಹಾಕಾಳಿ ದೇವರ ಪ್ರತಿಷ್ಠಾ ರಜತಮಹೋತ್ಸವದ ನಿಮಿತ್ತ ನಡೆದ ಖಾರ್ವಿಕೇರಿ ಶ್ರೀ ಮಹಾಕಾಳಿ ದೇವಸ್ಥಾನದ ಅಷ್ಟೋತ್ತರ ಸಹಸ್ರ ಬ್ರಹ್ಮಕುಂಭಾಭಿಷೇಕ ಮತ್ತು ಶತ ಚಂಡಿಕಾಯಾಗ ಮಹೋತ್ಸವದಲ್ಲಿ ಆಶೀರ್ವಚನ ನೀಡಿ, ಮಾತನಾಡಿದರು. ನಮ್ಮ ಗುರುಗಳು ಇಲ್ಲಿ ದೇವಸ್ಥಾನಕ್ಕೆ ಶಿಲಾನ್ಯಾಸ ಮಾಡಿದ್ದರು. ನಾನು ಕುಂಭಾಭಿಷೇಕ ನೆರವೇರಿಸಿದ್ದೇನೆ. ಪ್ರಸ್ತುತ ನಮ್ಮ ಶಿಷ್ಯರಿಂದ ಸಹಸ್ರ ಕುಂಭಾಭಿಷೇಕ ನೆರವೇರುತ್ತಾ ಇರುವುದು ವಿಶೇಷವಾಗಿದೆ. ಹೀಗೆ ಮೂರು ಮಂದಿ ಜಗದ್ಗುರುಗಳು ಈ ಕ್ಷೇತ್ರದ ಧಾರ್ಮಿಕ ಕಾರ್ಯಕ್ರಗಳಲ್ಲಿ ಪಾಲ್ಗೊಂಡಿರುವುದು ಒಂದು ಭಾಗ್ಯ ಎಂದು ಹೇಳಿದರು. ಜಗದ್ಗುರು ಶ್ರೀ ಭಾರತೀತೀರ್ಥ ಮಹಾಸ್ವಾಮಿ ಅವರ ದಿವ್ಯ ಉಪಸ್ಥಿತಿಯಲ್ಲಿ ಜಗದ್ಗುರು ಶ್ರೀ ವಿಧುಶೇಖರ ಭಾರತೀ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಗಂಗೊಳ್ಳಿ: ಶಿಕ್ಷಣ ಸಂಸ್ಥೆಯ ೧೦೦ ಗಜದ ಅಂತರದಲ್ಲಿ ತಂಬಾಕು ಉತ್ಪನ್ನಗಳ ಮಾರಾಟವನ್ನು ಸಂಪೂರ್ಣ ಸ್ಥಗಿತಗೊಳಿಸುವಂತೆ ಆಗ್ರಹಿಸಿ ಗಂಗೊಳ್ಳಿಯ ಸರಸ್ವತಿ ವಿದ್ಯಾಲಯ ವಿದ್ಯಾ ಸಂಸ್ಥೆಗಳ ವಿದ್ಯಾರ್ಥಿಗಳು ಬುಧವಾರ ವಿದ್ಯಾಸಂಸ್ಥೆಗಳ ಸಮೀಪವಿರುವ ಅಂಗಡಿ, ವ್ಯಾಪಾರ ಕೇಂದ್ರಗಳಿಗೆ ತೆರಳಿ ಮನವಿ ಮಾಡಿಕೊಂಡರು. ಶಿಕ್ಷಣ ಸಂಸ್ಥೆಗಳ ೧೦೦ ಗಜದ ಅಂತರದಲ್ಲಿ ತಂಬಾಕು ಉತ್ಪನ್ನಗಳ ಮಾರಾಟ ಕಾಯ್ದೆಯಂತೆ ನಿಷೇಧಿಸಿದ್ದರೂ ಸಹ ವಿದ್ಯಾರ್ಥಿಗಳನ್ನೇ ಗುರಿಯನ್ನಾಗಿಸಿ ತಂಬಾಕು ಉತ್ಪನ್ನಗಳ ಮಾರಾಟವನ್ನು ಅವ್ಯಾಹತವಾಗಿ ನಡೆಸಲಾಗುತ್ತಿದೆ. ಆದ್ದರಿಂದ ಯಾವುದೇ ಕಾರಣಕ್ಕೂ ಶಿಕ್ಷಣ ಸಂಸ್ಥೆಯ ೧೦೦ ಗಜದ ಅಂತರದಲ್ಲಿ ತಂಬಾಕು ಉತ್ಪನ್ನಗಳ ಮಾರಾಟ ಮಾಡಬಾರದು. ಇಂದಿನಿಂದಲೇ ತಂಬಾಕು ಉತ್ಪನ್ನಗಳ ಮಾರಾಟವನ್ನು ಸಂಪೂರ್ಣ ಸ್ಥಗಿತಗೊಳಿಸಿ ಮುಗ್ಧ ಜೀವಗಳನ್ನು ಉಳಿಸಿ ತಂಬಾಕು ರಹಿತ ಶೈಕ್ಷಣಿಕ ಸಂಸ್ಥೆಗಳ ನವನಿರ್ಮಾಣದಲ್ಲಿ ಕೈಜೋಡಿಸಬೇಕೆಂದು ಶಾಲಾ ಕಾಲೇಜಿನ ವಿದ್ಯಾರ್ಥಿಗಳು ವ್ಯಾಪಾರಸ್ಥರಲ್ಲಿ ಮನವಿ ಮಾಡಿದರು. ಗಂಗೊಳ್ಳಿಯ ಸರಸ್ವತಿ ವಿದ್ಯಾಲಯ ಪದವಿಪೂರ್ವ ಕಾಲೇಜು, ಸರಸ್ವತಿ ವಿದ್ಯಾಲಯ ಆಂಗ್ಲ ಮಾಧ್ಯಮ ಶಾಲೆ ಹಾಗೂ ಸರಸ್ವತಿ ವಿದ್ಯಾಲಯ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಇಲ್ಲಿನ ಶ್ರೀ ಸೇನೇಶ್ವರ ದೇವಸ್ಥಾನದಲ್ಲಿ ಭಾನುವಾರ ಬೆಳಿಗ್ಗೆ ಸುಶೀಲಾ ಐತಾಳ್ ಮತ್ತು ಮಕ್ಕಳು ಲೋಕಕ್ಯಾಣಾರ್ಥವಾಗಿ ರುದ್ರೈಕಾದಶನೀ ಹೋಮ ನೆರವೇರಿಸಿದರು. ನಂತರ ನೂತನವಾಗಿ ನಿರ್ಮಿಸಲಾದ ಪುಷ್ಪರಥವನ್ನು ಸೇವಾರೂಪದಲ್ಲಿ ಶ್ರೀದೇವರಿಗೆ ಸಮರ್ಪಿಸಿದರು. ಮಧ್ಯಾಹ್ನ ಸುಮಾರು ಎರಡು ಸಾವಿರ ಭಕ್ತರು ಅನ್ನಪ್ರಸಾದ ಸ್ವೀಕರಿಸಿದರು. ಶನಿವಾರ ರಾತ್ರಿ ರಥಬಲಿ, ವಿವಿಧ ಧಾರ್ಮಿಕ ಕಾರ್ಯಗಳು ನಡೆಯಿತು. ಭಾನುವಾರ ಬೆಳಿಗ್ಗೆ ನೂರಕ್ಕೂ ಹೆಚ್ಚು ವೈದಿಕರಿಂದ ಆರಂಭಗೊಂಡ ರುದ್ರೈಕಾದಶನೀ ಹೋಮಕ್ಕೆ ಮಧ್ಯಾಹ್ನ ಪೂರ್ಣಾಹುತಿ ನೀಡಲಾಯಿತು. ಶಾಸಕ ಕೆ. ಗೋಪಾಲ ಪೂಜಾರಿ, ಜಿಪಂ ಮಾಜಿ ಅಧ್ಯಕ್ಷ ಎಸ್. ರಾಜು ಪೂಜಾರಿ ಮೊದಲಾದ ಗಣ್ಯರು ದೇವಳಕ್ಕೆ ಆಗಮಿಸಿ ನೂತನ ರಥದ ನಿರ್ಮಾಣ ಕಾರ್ಯಶೈಲಿ ವೀಕ್ಷಿಸಿ ಅಭಿನಂದಿಸಿದರು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ತಾಲೂಕಿನ ಉಳ್ಳೂರು ೭೪ ಗ್ರಾಮದ ಗುಂಜಿಕೇರಿಯ ಮನೆಯೊಂದರ ತೆರೆದ ಬಾವಿಗೆ ಚಿರತೆಯೊಂದ ಬಿದ್ದಿದ್ದು, ಅರಣ್ಯಾಧಿಕಾರಿಗಳು ಸ್ಥಳಿಯರ ನೆರವಿನೊಂದಿಗೆ ಚಿರತೆಯನ್ನು ರಕ್ಷಿಸಿ ಕಾಡಿಗೆ ಬಿಟ್ಟಿದ್ದಾರೆ. ಉಳ್ಳೂರು ೭೪ರ ಸಂಜೀವಿನಿ ಶಡ್ತಿ ಎಂಬುವವರ ಮನೆಯ ಬಾವಿಗೆ ಹೆಣ್ಣು ಚಿರತೆಯೊಂದು ಬಿದ್ದಿದ್ದು, ಬೆಳಿಗ್ಗೆ ೯:೩೦ರ ಸುಮಾರಿಗೆ ಶಂಕರನಾರಾಯಣ ವಿಭಾಗದ ಅರಣ್ಯಾಧಿಕಾರಿಗಳು ಚಿರತೆಯನ್ನು ರಕ್ಷಿಸಿದ್ದಾರೆ.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಬಸ್ರೂರು: ಇಲ್ಲಿನ ಕಾಶೀ ಮಠದದಲ್ಲಿರುವ ಶ್ರೀಮದ್ ಭುವನೇಂದ್ರ ತೀರ್ಥ ಸ್ವಾಮೀಜಿಯವರ ವೃಂದಾವನದಲ್ಲಿ ಗುರುವರ್ಯರ ೧೩೦ನೇ ಪುಣ್ಯತಿಥಿಯ ಅಂಗವಾಗಿ ಗುರು ಆರಾಧನಾ ಮಹೋತ್ಸವವು ವಿಜೃಂಭಣೆಯಿಂದ ಜರಗಿತು. ಪೂವಾಹ್ನ ಸಾನಿದ್ಯ ಹವನ, ಶತಕಲಶಾಭಿಷೇಕ, ೧೦೮ ಎಳನೀರಿನ ಅಭಿಷೇಕ, ಪವಮಾನ ಅಭಿಷೇಕ, ಲಘು ವಿಷ್ಣು ಹವನ ಹಾಗೂ ಮಧ್ಯಾಹ್ನ ಮಹಾಪೂಜೆ, ಮಹಾ ಅನ್ನ ಸಂತರ್ಪಣೆ ಊರ ಪರವೂರ ಭಕ್ತ ಹಾಗೂ ಶಿಷ್ಯ ವೃಂದದವರ ಭಾಗವಹಿಸುವಿಕೆಯಿಂದ ನಡೆಯಿತು. ಈ ಕಾರ್ಯಕ್ರಮದಲ್ಲಿ ಚೇಂಪಿ,ಸಾಲಿಗ್ರಾಮ,ಕೋಟ ಭಜನಾ ಮಂಡಳಿಗಳಿಂದ ವಿಶೇಷ ಭಜನಾ ಕಾರ್ಯಕ್ರಮ ಜರಗಿತು. ರಾತ್ರಿ ನಗರೋತ್ಸವ, ಅಷ್ಟಾವಧಾನ ಸೇವೆ ಹಾಗೂ ಗುರು ಗುಣಗಾನ ಕಾರ್ಯಕ್ರಮ ನೇರವೇರಿತು. ಮಠದ ವ್ಯವಸ್ಥಾಪಕ ಸಮಿತಿ ಮುಖ್ಯಸ್ಥರಾದ ಶ್ರೀಧರ ಕಾಮತ್, ದಿನೇಶ ಕಾಮತ್, ದಿನಕರ ಶೆಣೈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ರಂಗನಾಥ ಪಡಿಯಾರ್, ರಾಮಚಂದ್ರ ಪಡಿಯಾರ್, ಗಣೇಶ ಕಾಮತ್ ನೇತೃತ್ವದಲ್ಲಿ ಹೂವಿನ ಹಾಗೂ ವಿದ್ಯುದೀಪಾಲಂಕಾರ ಶೃಂಗಾರಗೊಂಡು ಪಲ್ಲಕಿಯಲ್ಲಿ ಶ್ರೀ ಗುರುವರ್ಯರ ಭಾವಚಿತ್ರ ಹಾಗೂ ದೇವರ ಮೂರ್ತಿಯನ್ನು ಕೊಂಡೊಯ್ದು ನಗರೋತ್ಸವ ನೇರವೇರಿತು. ವೇ.ಮೂ.…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ ಬೈಂದೂರು: ಬಾಗಲಕೋಟೆ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ ೧೪ರ ವಯೋಮಿತಿಯ ಬಾಲಕಿಯರ ೨೦೧೬-೧೭ನೇ ಸಾಲಿನ ರಾಜ್ಯಮಟ್ಟದ ಎತ್ತರ ಜಿಗಿತ ಸ್ಪರ್ಧೆಯಲ್ಲಿ ಉಪ್ಪುಂದ ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದ ೮ನೇ ತರಗತಿಯ ವಿದ್ಯಾರ್ಥಿನಿ ಅಕ್ಷತಾ, ೧.೩೬ಮೀ. ಸಾಧನೆಗೈದು ಬೆಳ್ಳಿಯ ಪದಕ ಪಡೆದು ಇದೀಗ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದಾಳೆ. ಈಕೆ ಖಂಬದಕೋಣೆ ಗುಡ್ಡಿಮನೆ ಶಾರದಾ ನಾಗ ಪೂಜಾರಿ ಪುತ್ರಿ.. ಈಕೆಯ ಸಾಧನೆಗೆ ಕಾಲೇಜಿನ ಪ್ರಾಂಶುಪಾಲರು, ಶಿಕ್ಷಕವರ್ಗದವರು ಹಾಗೂ ಎಸ್‌ಡಿಎಂಸಿ ಸದಸ್ಯರು ಅಭಿನಂದಿಸಿದ್ದಾರೆ.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಪ್ರಪಂಚದ ಇತಿಹಾಸ ಹಾಗೂ ಅಭಿವೃದ್ಧಿ ಹೊಂದುತ್ತಿರುವ ನಾಗರಿಕತೆಯಷ್ಟೇ ಕಾನೂನು ಹಳೆಯತಾಗಿದ್ದು. ನಾಗರಿಕ ಸಮಾಜದ ಪ್ರತಿ ಚಟುವಟಿಕೆಯೂ ಕಾನೂನಿನಿಂದಲೇ ನಿಯಂತ್ರಿಸಲ್ಪಡುತ್ತದೆ ಎಂದು ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ರಾಜಶೇಖರ ವಿ. ಪಾಟೀಲ್ ಹೇಳಿದರು. ಅವರು ಕುಂದಾಪುರ ಬಾರ್ ಅಸೋಸಿಯೇಶನ್ ಆಶ್ರಯದಲ್ಲಿ ನ್ಯಾಯಾಲಯದ ಆವರಣದಲ್ಲಿ ಜರುಗಿದ ವಕೀಲರ ದಿನಾಚರಣೆಗೆ ಚಾಲನೆ ನೀಡಿ ಮಾತನಾಡಿದರು. ವಕೀಲರಿಗೆ ತಮ್ಮ ವೃತ್ತಿಯಲ್ಲಿ ಗೌರವ ಇರಬೇಕು. ತಾವು ಓದುವ ಕಾನೂನು ಪುಸ್ತಕಗಳಿಂದ ನ್ಯಾಯಾಲಯಕ್ಕೆ ಏನು ಹೇಳಬೇಕು ಎಂಬ ತಿಳುವಳಿಕೆ ಹಾಗೂ ತನ್ನ ಕಕ್ಷಿದಾರನನ್ನು ಹೇಗೆ ವಿಶ್ವಾಸಕ್ಕೆ ತೆಗೆದುಕೊಳ್ಳುವ ಚಾಕಚಕ್ಯತೆ ಇದ್ದರೆ ವೃತ್ತಿಯಲ್ಲಿ ಯಶಸ್ಸುನ್ನು ಕಾಣಲು ಸಾಧ್ಯವಿದೆ ಎಂದವರು ಹೇಳಿದರು. ಮಂಗಳೂರಿನ ಹಿರಿಯ ನ್ಯಾಯವಾದಿ ಎಂ.ವಿ ಶಂಕರ ಭಟ್ ಉಪನ್ಯಾಸ ನೀಡಿದರು. ಹಿರಿಯ ಸಿವಿಲ್ ನ್ಯಾಯಾಧೀಶ ಶ್ರೀನಿವಾಸ ಸುವರ್ಣ, ಕುಂದಾಪುರ ಸಿವಿಲ್ ನ್ಯಾಯಾಧೀಶ್ ಪ್ರೀತ್ ಜೆ, ಹೆಚ್ಚುವರಿ ನ್ಯಾಯಾಧೀಶೆ ಲಾವಣ್ಯ ಎಚ್. ಎನ್. ಉಪಸ್ಥಿತರಿದ್ದರು. ಕುಂದಾಪುರ ಬಾರ್ ಅಸೋಸಿಯೇಶನ್ ಅಧ್ಯಕ್ಷ ಬನ್ನಾಡಿ ಸೋಮನಾಥ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಪಂಡರಾಪುರ ದಿಂದ ಹೊರಟ ದೇವ ಸ್ವರೂಪಿ ಎಂದೇ ಗುರುತಿಸಿಕೊಂಡ ಮೂರುಕಣ್ಣಿನ ಬಸವ ಹೆಸರು ಸೋಮನಾಥ. ೧೨ನೇ ಜೋತಿರ‍್ಲಿಂಗ ದರ್ಶನ ನಿಮಿತ್ತ ಪಂಡರಾಪುರದಿಂದ ಹೊರಟ ಬಸವ ನಾನಾಕಡೆ ಸಂಚರಿಸಿ, ಕುಂದಾಪುರಕ್ಕೆ ಆಗಮಿಸಿದೆ. ಮಿನಿ ಟೆಂಪೂದಲ್ಲಿ ಆಗಮಿಸಿದ ಬಸವನಿಗೆ ಗಗ್ಗರಗಳ ಶೃಂಗಾರವಿದ್ದು, ವಾಹನ ಹಿಂಮುಖವಾಗಿ ನಿಂತಿದ್ದಾನೆ. ನಡು ನೆತ್ತಿಮೇಲೆ ನೇರಕ್ಕೆ ಸಾಗಿದ ಒಂದು ಕೊಂಬಿದ್ದು, ಮತ್ತೆರಡು ಕೊಂಬುಗಳು ಮಾಮೂಲು ಎತ್ತಗಳಿಗೆ ಬರುವಹಾಗೆ ಇದೆ. ಎರಡು ಕಣ್ಣು ಮುಖದ ಇಕ್ಕೆಡೆಗಳಲ್ಲಿದ್ದರೆ, ಮೂರನೇ ಕಣ್ಣು ನೇರಕ್ಕೆ ಸಾಗಿದ ಕೊಂಬಿನ ಬದಿಯಲ್ಲಿದೆ. ಹದಿನಾಲ್ಕು ವರ್ಷದ ಪ್ರಾಯದ ಬಸವ ಸೌಮ್ಯ ಸ್ವರೂಪಿಯಾಗಿದ್ದು, ವಾಹನ ಸಂಚಾರದ ಸಮಯ ಅಲ್ಲಾಡದೇ ನಿಲ್ಲುತ್ತಾನೆ. ವೀಕ್ಷಕರು ಬಂದರೆ ತನ್ನ ಪಾಡಿಗೆ ತಾನಿದ್ದರೆ, ಭಕ್ತರು ಇದು ಈಶ್ವರನ ಅಪರವಾತರವಾಗಿದ್ದು, ನಂದಿ ಈಶ್ವರನ ಮೂರನೇ ಕಣ್ಣು ಹೊತ್ತು ಭೂಮಿಗೆ ಬಂದಿದ್ದಾನೆ ಎನ್ನುವ ಭಯ, ಭಕ್ತಿಯಿಂದ ನಮಿಸಿ, ಆಶೀರ್ವಾದ ಪಡೆಯುತ್ತಿದ್ದಾರೆ.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಮಾರುತಿ ಸುಜುಕಿ ಆಟೋಮೊಬೈಲ್ ಸಂಸ್ಥೆಯು ದೆಹಲಿಯಲ್ಲಿ ಆಯೋಜಿಸಿದ್ದ ರಾಷ್ಟ್ರ ಮಟ್ಟದ 25ನೇ ಅಖಿಲ ಭಾರತ ಕೌಶಲ್ಯ ಸ್ವರ್ಧೆಯ ಎಕ್ಸ್‌ಪ್ರೆಸ್ ಸರ್ವಿಸ್ ವಿಭಾಗದಲ್ಲಿ ಬೆಂಗಳೂರು ಬಿಮಾಲ್ ಆಟೋ ಎಜೆನ್ಸಿಯಲ್ಲಿ ಟೆಕ್ನಿಶಿಯನ್ ಆಗಿರುವ ಸಂತೋಷ್ ಆಚಾರ್ಯ ಹಾಗೂ ಬಿಚ್ಕಿ ಕುಮಾರ್ ಸಾಹೋ ಅವರು ಪ್ರಥಮ ಸ್ಥಾನಗಳಿಸಿ ಸ್ಥಾನ ಪಡೆದು ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾರೆ. ಸಂತೋಷ್ ಆಚಾರ್ಯ ಬೈಂದೂರು ತಗ್ಗರ್ಸೆಯ ಗಣಪಯ್ಯ ಆಚಾರ್ಯ ಹಾಗೂ ಜಯಲಕ್ಷ್ಮೀ ಅವರ ಪುತ್ರ.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಕನ್ನಡನಾಡಿನ ಪಡುಗಡಲ ತಡಿಯ ಪ್ರಕೃತಿ ಸೌಂದರ್ಯವನ್ನು ಹಾಸಿಹೊದ್ದು ಮಲಗಿದ ನಯನ ಮನೋಹರ ಭೂಪ್ರದೇಶ ಹಾಗೂ ಉಡುಪಿ ಜಿಲ್ಲೆಯ ತುತ್ತ ತುದಿಯಲ್ಲಿ ಬೆಟ್ಟದ ಕೆಳಗೆ ಹರವಿಕೊಂಡು ಅರಬೀ ಸಮುದ್ರದ ಅಲೆಗಳಿಂದ ಸದಾ ಮುತ್ತಿಕ್ಕಿಕೊಳ್ಳುವ ಬೈಂದೂರು, ಕಲಾವಿದರ, ಕಲಾಸಂಸ್ಥೆಗಳ, ಕಲಾಪೋಷಕರ ಹಾಗೂ ವಿವಿಧ ಕಲೆಗಳ ತವರೂರು ಎಂಬಲ್ಲಿ ಎರಡು ಮಾತಿಲ್ಲ. ಇಲ್ಲಿನ ಅರ್ಚಕ ರಾಜೇಶ್ ಐತಾಳ್ ಎಂಬುವವರ ಕೋರಿಕೆಯಂತೆ ಕಾರ‍್ಪೆಂಟರಿ ಹರಿದಾಸ್ ಆಚಾರ್ಯ ತನ್ನ ಸಹಪಾಠಿ ಪಂಚ ಯುವ ಆಚಾರ್ಯರಾದ ಹರೀಶ್, ರಮೇಶ್, ಅಕ್ಷತ್, ಪ್ರಮೋದ್ ಹಾಗೂ ಮಂಜುನಾಥ ಒಟ್ಟಾಗಿ ಸೇರಿ ಗ್ರಾಮದೊಡೆಯ ಮಹತೋಭಾರ ಶ್ರೀ ಸೇನೇಶ್ವರ ದೇವರಿಗೆಂದು ಸುಂದರವಾದ ಶಿಲ್ಪಕೆತ್ತನೆಗಳಿಂದ ಕೂಡಿದ ಪುಷ್ಪರಥ ನಿರ್ಮಾಣ ಮಾಡಿದ್ದಾರೆ. ಟಾಟಾ ಏಸ್ ವಾಹನದ ಚೆಸ್ಸನ್ನು ತಳಭಾಗದಲ್ಲಿ ಆಧಾರವಾಗಿಟ್ಟುಕೊಂಡು ಅದರ ಮೇಲೆ ಸಂಪೂರ್ಣ ಹೆಬ್ಬೆಲಸು ಮರದಿಂದ ರಥ ನಿರ್ಮಾಣವಾಗಿದೆ. ೧೫ ಅಡಿ ಎತ್ತರವುಳ್ಳ ಈ ರಥದ ಸುತ್ತಲೂ ಹಾಗೂ ಗೋಪುರವು ಸುಂದರ ಶಿಲ್ಷಕಲಾ ಕೆತ್ತನೆಯಿಂದ ಕೂಡಿದ್ದು, ಹಿಂದಿನಿಂದ ರಥದ ನಿಯಂತ್ರಣ…

Read More