ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ , ತಾಲೂಕು ಮತ್ತು ಹೋಬಳಿ ಘಟಕಗಳ ಆಶ್ರಯದಲ್ಲಿ ನಾಡ ಗ್ರಾಮದ ಕುರುವಿನ ಕೆ. ಅಚ್ಯುತ ಹೆಬ್ಬಾರ್ ಅವರ ಮನೆಯ ಚಾವಡಿಯಲ್ಲಿ ಭಾನುವಾರ ’ಹಿರಿಯರೆಡೆಗೆ ಸಾಹಿತ್ಯದ ನಡಿಗೆ’ ಕಾರ್ಯಕ್ರಮ ನಡೆಯಿತು. ಹಿರಿಯ ಸಂಗೀತ ವಾದನ ಪರಿಣತರಾಗಿರುವ ಅವರನ್ನು ಈ ಸಂದರ್ಭದಲ್ಲಿ ಗೌರವಿಸಲಾಯಿತು. ಕಾರ್ಯಕ್ರಮದ ಔಚಿತ್ಯದ ಬಗ್ಗೆ ಮಾತನಾಡಿದ ತಾಲೂಕು ಘಟಕದ ಅಧ್ಯಕ್ಷ ಡಾ. ಸುಬ್ರಹ್ಮಣ್ಯ ಭಟ್ ಸಾಹಿತ್ಯ ಮತ್ತು ಬದುಕು ಪ್ರತ್ಯೇಕಿಸಲಾಗದ್ದು. ಬದುಕಿನ ವಿವಿಧ ರಂಗಗಳ್ಲಿ ದುಡಿದವರನ್ನು ಗೌರವಿಸುವ ಮೂಲಕ ಅವರ ಸಾಧನೆಗೂ ಸಾಹಿತ್ಯಕ್ಕೂ ಇರುವ ಸಂಬಂಧವನ್ನು ಪ್ರಚುರಪಡಿಸಿದಂತಾಗುತ್ತದೆ. ಸಾಹಿತ್ಯದಿಂದ ದೂರ ಉಳಿದವರನ್ನು ಅದರೊಂದಿಗೆ ಬೆಸೆಯಲು ಸಾಧ್ಯವಾಗುತ್ತದೆ ಎಂದರು. ಇದು ಕನ್ನಡದ ಮನಸ್ಸುಗಳನ್ನು ಒಂದುಗೂಡಿಸುವ ಕೆಲಸ ಎಂದ ಜಿಲ್ಲಾ ಘಟಕದ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಕನ್ನಡ ಭಾಷೆಗೆ ಅಳಿವಿಲ್ಲ. ಅದು ಆಂಗ್ಲ ಭಾಷೆಯೂ ಸೇರಿದಂತೆ ಸಂಪರ್ಕಕ್ಕೆ ಬರುವ ಎಲ್ಲ ಭಾಷೆಗಳ ಪದಗಳನ್ನು ತನ್ನೊಳಗೆ ಸೇರಿಸಿಕೊಂಡು ಬೆಳೆಯುತ್ತಿದೆ. ಸಮುದಾಯಕ್ಕೆ ಹಿತವಾಗುವ…
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಕೇಂದ್ರ ಸರ್ಕಾರ ೫೦೦ ಮತ್ತು ೧೦೦೦ ಮುಖಬೆಲೆಯ ನೋಟನ್ನು ರದ್ದು ಪಡಿಸಿದ್ದರ ಪರಿಣಾಮ ದೇಶದ ಬಡವರು ಬ್ಯಾಂಕಿನ ಎದುರಿನಲ್ಲಿ ನಿಲ್ಲುವ ಹಾಗೇ ಮಾಡಿದ್ದಾರೆ. ಕಾಳಧನಿಕನನ್ನು ಬಲೆಗೆ ಬೀಳಿಸುವ ನೆಪವೊಡ್ಡಿ ಬಡವರನ್ನು ಸರಕಾರ ಬ್ಯಾಂಕಿಗೆ ಅಲೆದಾಡಿಸುತ್ತಿದೆಯೇ ಹೊರತು ಶ್ರೀಮಂತರಿಗೆ ಏನೂ ತೊಂದರೆಯಾಗಿಲ್ಲ ಎಂದು ಬೈಂದೂರು ಬ್ಲಾಕ್ ಯುತ್ ಕಾಂಗ್ರೆಸ್ ಅಧ್ಯಕ್ಷ ಸುಬ್ರಹ್ಮಣ್ಯ ಪೂಜಾರಿ ಹೇಳಿದರು. ಅವರು ಬೈಂದೂರು ಬ್ಲಾಕ್ ಯೂತ್ ಕಾಂಗ್ರೆಸ್ ವತಿಯಿಂದ ಕೇಂದ್ರ ಸರ್ಕಾರದ ಜನ ವಿರೋಧಿ ನೀತಿಯನ್ನು ವಿರೋಧಿಸಿ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ರಾಷ್ಟ್ರೀಯ ಹೆದ್ದಾರಿ ತಡೆ ನಡೆಸಿ ಬಳಿಕ ಮಾತನಾಡಿದರು. ಈ ದೇಶದ ಕೋಟ್ಯಾಂತರ ಜನರು ಬ್ಯಾಂಕ್ ಖಾತೆಯನ್ನು ಹೊಂದಿರದ ಮುಗ್ದ ಜನರು, ಬಡ ಕೂಲಿ ಕಾರ್ಮಿಕರು, ಸಣ್ಣ ವ್ಯಾಪಾರಿಗಳು ವಿಶೇಷವಾಗಿ ಮನೆಯ ಮುಂಜಾಗ್ರತೆಗೆ ಹಣವನ್ನು ತೆಗೆದಿಟ್ಟು ಮಹಿಳೆಯರು ಕಳೆದ ಎರಡು ತಿಂಗಳಿನಿಂದ ಬಹಳ ಕಷ್ಟವನ್ನು ಪಡುತ್ತಿದ್ದಾರೆ. ಇದ್ದರಿಂದ ದೇಶದ ಯಾವುದೇ ಶ್ರೀಮಂತರಿಗೂ ತೊಂದರಿಯಾಗುತ್ತಿಲ್ಲ. ದೇಶದಲ್ಲಿ ೧೦೦ಕ್ಕೂ ಮಿಕ್ಕಿ ಜನರು ಮೃತ ಪಟ್ಟಿದ್ದಾರೆ.…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಎಲ್ಲಾ ದೇವಾಲಯಗಳಲ್ಲೂ ಸ್ವಚ್ಛತೆ ಆಂದೋಲನ ಮೂಲಕ ದೇವಸ್ಥಾನ ಪರಿಸರ ಸ್ವಚ್ಛತೆ ಬಗ್ಗೆ ಜಾಗೃತಿ ಮೂಡಿಸಲು ಶ್ರೀ ಕ್ಷೇತ್ರ ಧರ್ಮಸ್ಥಳ ಧರ್ಮಾಧಿಕಾರಿ ರಾಜರ್ಷಿ ಡಾ.ವೀರೇಂದ್ರ ಹೆಗ್ಗಡೆ ಸಮಕ್ಷಮದಲ್ಲಿ ಮಣೂರಿನಲ್ಲಿ ನಡೆದ ಅಭಿಯಾನದ ನಂತರ ಕುಂಭಾಶಿ ಆನೆಗುಡ್ಡೆ ಶ್ರೀ ವಿನಾಯಕ ದೇವಸ್ಥಾನಕ್ಕೆ ಡಾ.ವೀರೇಂದ್ರ ಹೆಗ್ಗಡೆ ಭೇಟಿ ನೀಡಿ, ವಿಶೇಷ ಪೂಜೆ ಸಲ್ಲಿಸಿದರು. ದೇವಸ್ಥಾನ ಅರ್ಚಕ ರವಿರಾಜ್ ಉಪಾಧ್ಯಾಯ ಪೂಜೆ ನೆರವೇರಿಸಿ, ಡಾ.ವೀರೇಂದ್ರ ಹೆಗ್ಗಡೆ ಅವರಿಗೆ ಪ್ರಸಾದ ವಿತರಣೆ ಮಾಡಿದರು. ಗೋಪಾಡಿ ಶ್ರೀ ಚಿಕ್ಕಮ್ಮ ದೇವಸ್ಥಾನ ವಠಾರದಲ್ಲಿ ಸ್ವಚ್ಚತಾ ಅಭಿಯಾನಕ್ಕೆ ಚಾಲನೆ ನೀಡಿ, ದೇವಸ್ಥಾನ ಪರಿಸರ ಸ್ವಚ್ಛವಾಗಿಡುವಂತೆ ಕರೆಕೊಟ್ಟ ಅವರು ಮಡಿ ಮಾಡುವುದರಿಂದ ಶುದ್ಧೀಕರಣ ಆಗೋದಿಲ್ಲ. ದೇಶದಲ್ಲೆಲ್ಲಾ ಸ್ಚಚ್ಛತಾ ಅಂದೋಲನ ನಡೆಯುತ್ತಿದ್ದು, ದೇವಸ್ಥಾನ ಪರಿಸರ ಸ್ವಚ್ಛವಾಗಿಡಬೇಕು. ಮನಸ್ಸು ಪ್ರಕೃತಿ, ಪರಿಸರ ಸ್ವಚ್ಛವಾಗಡುವ ಮೂಲಕ ದೇವಸ್ಥಾನ ಪರಿಸರಗಳ ಸ್ವಚ್ಛತೆಗೆ ಹೊಸ ಅರ್ಥಕೊಡಬೇಕು ಎಂದು ಹೇಳಿದರು. ಇದೇ ಸಂದರ್ಭದಲ್ಲಿ ಗೋಪಾಡಿ ಗ್ರಾಪಂ ಅಧ್ಯಕ್ಷೆ ಸರಸ್ವತಿ ಜಿ.ಪುತ್ರನ್, ಜಿಪಂ ಸದಸ್ಯೆ ಶ್ರೀಲತಾ ಶೆಟ್ಟಿ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಈ ದೇಶ, ಸಂಸ್ಕೃತಿ, ಧರ್ಮ ಹಾಗೂ ಸಮಾಜಕ್ಕಾಗಿ ತಮ್ಮ ಜೀವನವನ್ನು ಯಾರು ಮುಡಿಪಾಗಿಸಿಡುತ್ತಾರೋ, ಅವರು ಶ್ರೇಷ್ಠ ಸಾಧಕರಾಗಲು ಸಾಧ್ಯ. ದೇಶದ ಗಡಿ ಕಾಯುವ ಸೈನಿಕರು ದೇಶ ರಕ್ಷಣೆಗಾಗಿ ದಿನದ ೨೪ ಗಂಟೆ ಕರ್ತವ್ಯ ನಿರ್ವಹಿಸುತ್ತಾರೆ, ಅವರು ನಮ್ಮಿಂದ ಅಪೇಕ್ಷಿಸುವುದು ಕೇವಲ ಅಭಿಮಾನ ಮಾತ್ರ, ದೇಶ ರಕ್ಷಣೆಗಾಗಿ ನಿಂತ ಸೈನಿಕರನ್ನು ನಿತ್ಯ ನೆನೆಯುವ ಕೆಲಸವಾಗಬೇಕು ಎಂದು ಮಾನವ ಹಕ್ಕು ಜಾಗೃತಿ ಸಮಿತಿಯ ಅಧ್ಯಕ್ಷ ನವೀನಚಂದ್ರ ಉಪ್ಪುಂದ ಹೇಳಿದರು. ಬಿಜೂರು ಕಂಚಿಕಾನ್ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಹಳೆವಿದ್ಯಾರ್ಥಿ ಸಂಘದ ವತಿಯಿಂದ ನಡೆದ ಯೋಧ ಕುಟುಂಬಗಳಿಗೆ ಸನ್ಮಾನ ಹಾಗೂ ಯೋಧರಿಗೆ ನಮನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಜಗತ್ತಿನಲ್ಲಿ ರಾಷ್ಟ್ರವನ್ನು ತಾಯಿ ಎಂದು ಪೂಜಿಸುವ ದೇಶ ಎಂದರೆ ಭಾರತವಾಗಿದೆ. ಇಲ್ಲಿ ದೇಶ, ಪ್ರಕೃತಿ, ಗೋವು ಎಲ್ಲರದಲ್ಲೂ ತಾಯಿಯನ್ನು ಕಾಣುವ ಉದಾತ್ತ ಸಂಸ್ಕೃತಿಯಿಂದ ಕೂಡಿದೆ. ಈ ರಾಷ್ಟ್ರ ಉಳಿಯಬೇಕಾದರೇ ಹೋರಾಡುವ ವ್ಯಕ್ತಿ ಅಗತ್ಯವಾಗಿದೆ. ಸೈನಿಕರು ಕ್ಷಣಕ್ಷಣಕ್ಕೂ ಜಾಗೃತರಾಗಿ ದೇಶ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಉತ್ತಮ ಸಮಾಜ ಹಾಗೂ ಬಲಿಷ್ಠ ರಾಷ್ಟ್ರ ನಿರ್ಮಾಣಕ್ಕಾಗಿ ಸಂಘಟನೆಗಳು ಅನಿವಾರ್ಯ. ಯುವಶಕ್ತಿ ದೇಶದ ಬೆನ್ನೆಲುಬಾಗಿದ್ದು, ಬದಲಾದ ಕಾಲಘಟ್ಟದಲ್ಲಿ ಸಮಾಜದ ಬಗ್ಗೆ ಸದಾ ಕಳಕಳಿ ಹೊಂದಿದ ಜೊತೆಗೆ ಸೇವಾ ಮನೋಭಾವನೆಯಿರುವ ಯುವ ಸಂಘಟನೆಗಳು ಕೈಜೋಡಿಸಿ ಭಾವೈಕ್ಯತೆಯಿಂದ ಕೂಡಿದ ಸುಂದರ ಸಮಾಜ ಕಟ್ಟುವ ಕೆಲಸ ಮಾಡಬೇಕು ಎಂದು ಕೊಲ್ಲೂರು ದೇವಳದ ಮಾಜಿ ಆಡಳಿತ ಧರ್ಮದರ್ಶಿ ಬಿ. ಎಂ. ಸುಕುಮಾರ್ ಶೆಟ್ಟಿ ಹೇಳಿದರು. ಉಪ್ಪುಂದ ರಥಬೀದಿಯ ಶ್ರೀದುರ್ಗಾ ಫ್ರೆಂಡ್ಸ್ನ ಐದನೇ ವರ್ಷದ ವಾರ್ಷಿಕೋತ್ಸವ ಹಾಗೂ ಉಪ್ಪುಂದ ಕೊಡಿಹಬ್ಬದ ಪ್ರಯುಕ್ತ ಏರ್ಪಡಿಸಿದ ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ನಂತರ ವಿಧಾನ ಪರಿಷತ್ ಸದಸ್ಯ ಕೋಟಾ ಶ್ರೀನಿವಾಸ ಪೂಜಾರಿ, ಸ್ಥಳಿಯ ಯುವ ಸಾಹಿತಿ, ಕವಿ ಜಗದೀಶ ದೇವಾಡಿಗ ಇವರನ್ನು ಸನ್ಮಾನಿಸಿದರು. ಸಾಮೂಹಿಕತೆ ಇರಲಿ ಎಂಬ ಕಲ್ಪನೆಯಲ್ಲಿ ನಮ್ಮ ಹಿರಿಯರು ದೇವಾಲಯಗಳನ್ನು ನಿರ್ಮಾಣ ಮಾಡಿದರು. ನಂಬಿಕೆಯ ಆಧಾರದಿಂದ ಸಮಾಜ ನಡೆದುಬಂದಿದೆ. ಆ ನಿಟ್ಟಿನಲ್ಲಿ ನಾವೆಲ್ಲರೂ ವಿಶ್ವಾಸದ ಬದುಕನ್ನು ಸಾಗಿಸಬೇಕು. ಸಂಘಟನೆಗಳಿಂದ ದೇವಸ್ಥಾನ, ಸಮಾಜ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಇಲ್ಲಿನ ಹೋಲಿಕ್ರಾಸ್ ಚರ್ಚ್ನಲ್ಲಿ ಧರ್ಮಗುರು ರೆ. ಫಾ .ರೋನಾಲ್ಡ್ ಮಿರಾಂದ ಅಧ್ಯಕ್ಷತೆಯಲ್ಲಿ ನಡೆದ ಚರ್ಚ್ನ ಪಾಲನ ಮಂಡಳಿ ಪದಾಧಿಕಾರಿಗಳ ಚುನಾವಣೆಯಲ್ಲಿ ನೂತನ ಅಧ್ಯಕ್ಷರಾಗಿ ನಿವೃತ್ತ ಶಿಕ್ಷಕ ಸ್ಟ್ಯಾನಿ ಡಯಾಸ್ ಹಾಗೂ ಕಾರ್ಯದರ್ಶಿಯಾಗಿ ಅನಿತಾ ನಜ್ರೆತ್ ಇವರು ಸರ್ವಾನುಮತದಿಂದ ಆಯ್ಕೆಯಾದರು. ಮುಖ್ಯ ಸಂಘಟಕರಾಗಿ ಸಿಸಿಲಿಯಾ ರೆಬೆರೊ ಮತ್ತು ಆರ್ಥಿಕ ಸಮಿತಿ ಸದಸ್ಯರಾಗಿ ಡಾ. ರೋಶನ್ ಪಾಯಸ್, ವೋಲ್ಗಾ ಡಯಾಸ್ ಆಯ್ಕೆಯಾದರು. ಈ ಸಂದರ್ಭ ಮಾಜಿ ಉಪಾಧ್ಯಕ್ಷ ರಾಬರ್ಟ್ ರೆಬೆಲ್ಲೊ, ಮಾರ್ಟಿನ್ ಡಯಾಸ್ ಸಹಕರಿಸಿದರು.
ಕುಂದಾಪ್ರ ಡಾಟ್ ಕಾಂ ಸುದ್ದಿ. ಗಂಗೊಳ್ಳಿ : ಪೋಷಕರು ಶಾಲೆಗೆ ಮಕ್ಕಳನ್ನು ಸೇರಿಸಿದ ತಕ್ಷಣ ತಮ್ಮ ಜವಾಬ್ದಾರಿಗಳನ್ನು ಮರೆಯಬಾರದು. ಮಕ್ಕಳ ಸರ್ವತೋಮುಖ ಬೆಳವಣಿಗೆಯಲ್ಲಿ ಶಿಕ್ಷಕರೊಂದಿಗೆ ಪೋಷಕರ ಸಹಕಾರವೂ ಅತೀ ಮುಖ್ಯ. ಆಗ ಮಾತ್ರ ಶಿಕ್ಷಣದ ಸಾರ್ಥಕತೆ ಸಾಧ್ಯ ಎಂದು ಬೈಂದೂರು ಶಾಸಕ ಕೆ.ಗೋಪಾಲ ಪೂಜಾರಿ ಅಭಿಪ್ರಾಯ ಪಟ್ಟರು. ಅವರು ಸ್ಟೆಲ್ಲಾ ಮಾರಿಸ್ ಪ್ರೌಢಶಾಲೆ ಗಂಗೊಳ್ಳಿ ಇದರ ಸುವರ್ಣ ಮಹೋತ್ಸವದ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು. ನಮ್ಮಲ್ಲಿ ಆಂಗ್ಲ ಮಾಧ್ಯಮ ಶಾಲೆಗಳ ಬಗೆಗೆ ವ್ಯಾಮೋಹ ಹೆಚ್ಚುತ್ತಿದೆ. ಆದರೆ ಕನ್ನಡ ಮಾಧ್ಯಮ ಶಾಲೆಗಳು ಯಾವುದರಲ್ಲೂ ಕಡಿಮೆ ಇರುವುದಿಲ್ಲ. ಆಂಗ್ಲ ಭ್ರಮೆಯಿಂದ ಹೊರಬಂದು ಕನ್ನಡ ಶಾಲೆಗಳನ್ನು ಉಳಿಸುವ ಕೆಲಸ ಆಗಬೇಕಿದೆ ಎಂದು ಅವರು ಅಭಿಪ್ರಾಯ ಪಟ್ಟರು. ಉಡುಪಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ಜೆರಾಲ್ಡ್ ಐಸಾಕ್ ಲೋಬೊ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಅಪೋಸ್ತಲಿಕ್ ಕಾರ್ಮೆಲ್ ಕರ್ನಾಟಕ ಪ್ರಾಂತ್ಯಾಧಿಕಾರಿ ಸಿಸ್ಟ್ರ್ ಕಾರ್ಮೆಲ್ ರೀಟಾ ಎ.ಸಿ ಸ್ಮರಣ ಸಂಚಿಕೆಯ ಮುಖಪುಟ ಅನಾವರಣಗೊಳಿಸಿದರು. ಗಂಗೊಳ್ಳಿಯ ಚರ್ಚಿನ ಧರ್ಮಗುರು ಅಲ್ಬರ್ಟ್ ಕ್ರಾಸ್ತಾ ,ವಿಧಾನ ಪರಿಷತ್ ಸದಸ್ಯ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ದೇಶದಲ್ಲಿ ಸರಕಾರ ನಡೆಸುತ್ತಿರುವ ಬಿಜೆಪಿ ಗೋರಕ್ಷಣೆ ಹೆಸರಲ್ಲಿ ಹಿಂದೂ, ಮುಸ್ಲಿಂ ಎಂದು ವಿಭಾಜಿಸುತ್ತಿದ್ದು, ಗೋ ರಕ್ಷಣೆ ಹೆಸರಲ್ಲಿ ದಲಿತರ ಮೇಲೆ ದಾಳಿ ಮೂಲಕ ಬಲಿಪಶುಗಳನ್ನಾಗಿ ಮಾಡಲಾಗುತ್ತಿದೆ. ದಲಿತರ ಪ್ರಾಣಕ್ಕೆ ಪಶುವಿನಷ್ಟು ಕಿಮ್ಮತ್ತು ಸಿಗುತ್ತಿಲ್ಲ. ಬಿಜೆಪಿ ಕಾಂಗ್ರೆಸ್ ಒಂದೇ ನಾಣ್ಯದ ಎರಡು ಮುಖದಂತಿದ್ದು, ಉದ್ಯೋಗ ಖಾತ್ರಿ ಯೋಜನೆ ಸಮರ್ಪಕ ಅನುಷ್ಠಾನ ಮಾಡದೆ ಬಡವರ ಉದ್ಯೋಗ ಕಸಿಯುವ ಮೂಲಕ ಅವರ ಹೊಟ್ಟೆ ಮೇಲೆ ಹೊಡೆಯಲಾಗುತ್ತದೆ. ಕೇಂದ್ರ ಹಾಗೂ ರಾಜ್ಯ ಸರಕಾರ ಬಡವರ ಮೇಲೆ ದಾಳಿ ನಡೆಸುತ್ತಿದೆ ಎಂದು ಕೇರಳ ಮಾಜಿ ಸಂಸದ ಎ. ವಿಜಯರಾಘವನ್ ಆರೋಪಿಸಿದರು. ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘ ಉಡುಜಿ ಜಿಲ್ಲೆ, ಕುಂದಾಪುರ ಶಾಖೆ ಆಶ್ರಯದಲ್ಲಿ ಕುಂದಾಪುರ ನೆಹರು ಮೈದಾನದಲ್ಲಿ ನಡೆದ 6ನೇ ಕೃಷಿ ಕೂಲಿಕಾರರ ರಾಜ್ಯ ಸಮ್ಮೇಳನದಲ್ಲಿ ಅವರು ಮಾತನಾಡುತ್ತಿದ್ದರು. ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಕನಿಷ್ಟ ಉದ್ಯೋಗ ಇನ್ನೂರು ದಿನಕ್ಕೆ ಹೆಚ್ಚಿಸಿ, ಕೂಲಿ ಮುನ್ನೂರು ರೂ.ಗೆ ಏರಿಸಿ, ಕೂಲಿ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ರಂಗಭೂಮಿ ತನ್ನ ಒಡಲಿನೊಳಗೆ ಭೂಮಿ ಎಂಬ ಪದವನ್ನು ಹಿಟ್ಟುಕೊಂಡಿದೆ. ಭೂಮಿಯ ಸ್ವರ್ಶ ದಕ್ಕಿದವರು ಮನಷ್ಯತ್ವನ್ನು ಕಂಡುಕೊಳ್ಳುತ್ತಾರೆ ಮತ್ತು ಸತ್ಯ ಹೇಳುತ್ತಾರೆ ರಂಗಭೂಮಿಯ ಜಗತ್ತಿನ ದೈನಂದಿನ ಸತ್ಯಗಳನ್ನು, ಬದುಕಬೇಕಾದ ದರ್ಶನವನ್ನು ಒಟ್ಟೊಟ್ಟಿಗೆ ತೆರೆದಿಡುತ್ತದೆ ಎಂದು ರಂಗ ನಿರ್ದೇಶಕ ಶ್ರೀಪಾದ್ ಭಟ್ ಶಿರಸಿ ಹೇಳಿದರು. ಅವರು ಸುರಭಿ ರಿ. ಬೈಂದೂರು ಹಾಗೂ ಯಸ್ಕೋರ್ಡ್ ಟ್ರಸ್ಟ್ ರಿ. ಆಶ್ರಯದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಕಾರದೊಂದಿಗೆ ಆಯೋಜಿಸಲಾಗಿದ್ದ ‘ರಂಗಸುರಭಿ 2016’ ನಾಟಕ ಸಪ್ತಾಹದಲ್ಲಿ ಸಮಾರೋಪ ನುಡಿಗಳನ್ನಾಡುತ್ತಿದ್ದರು. ಪುರಾಣ ಮತ್ತು ವರ್ತಮಾನವನ್ನು ಮುಖಾಮುಖಿ ಮಾಡುವುದರಿಂದ ಹಿಡಿದು ಮನುಷ್ಯನ ಒಳಹೊರ ಜಗತ್ತನ್ನು ಅನಾವರಣ ಮಾಡುವ, ಗೃಹಸ್ಥಾಶ್ರಮದಿಂದ ಸಮಾಜಾಶ್ರಮದ ವರೆಗೆ ಧೀರ್ಘ ಕಥಾನಕದಲ್ಲಿ ಸಣ್ಣವೇದಿಕೆಯಲ್ಲಿ ತೋರಿಸುವುದು ರಂಗಭೂಮಿಯ ತಾಕತ್ತು ಎಂದವರು ವಿಶ್ಲೇಶಿಸಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಿಪಂ ಮಾಜಿ ಅಧ್ಯಕ್ಷ ಎಸ್. ರಾಜು ಪೂಜಾರಿ ಮಾತನಾಡಿ ಬೈಂದೂರಿನ ಸಾಂಸ್ಕೃತಿಕ ಸಂಘಟನೆಗಳು ಸದಭಿರುಚಿಯ ಕಾರ್ಯಕ್ರಮಗಳ ಮೂಲಕ ಕಲಾರಸಿಕರನ್ನು ಸೃಷ್ಟಿಸುವ ಕೆಲಸ ಮಾಡಿದ್ದಾರೆ. ಸಾಂಸ್ಕೃತಿಕ ಚಟುವಟಿಕೆಗಳೂ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಸಮರ್ಥ ಭಾರತ ಸ್ವಯಂಸೇವಾ ಸಂಘಟನೆಯ ನೇತೃತ್ವದಲ್ಲಿ ಜ. 28ರಂದು ನಡೆಯಲಿರುವ ‘ವಿವೇಕ ಪರ್ವ’ ಕಾರ್ಯಕ್ರಮ ಪೂರ್ವಭಾವಿಯಾಗಿ ಸಮರ್ಥ ಭಾರತ ಸಂಘಟನೆಯ ಕಾರ್ಯಾಲಯ ಬೈಂದೂರಿನ ಮೂಕಾಂಬಿಕಾ ಕಾಂಪ್ಲೆಕ್ಸ್ನಲ್ಲಿ ಆರಂಭಗೊಂಡಿತು. ನಾಗೂರು ಸಂದೀಪನ್ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯೋಪಧ್ಯಾಯ, ಸಮರ್ಥ ಭಾರತ ಬೈಂದೂರು ಘಟಕದ ಗೌರವಾಧ್ಯಕ್ಷ ವಿಶ್ವೇಶ್ವರ ಅಡಿಗ ಉದ್ಘಾಟಿಸಿ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಪ್ರಧಾನ ಕಾರ್ಯದರ್ಶಿ ಜಯಾನಂದ ಹೋಬಳಿದಾರ್, ಹಿರಿಯ ಮುಖಂಡ ಗೋಪಾಲಕೃಷ್ಣ ಶಿರೂರು, ಸಂಚಾಲಕರಾದ ಶ್ರೀಧರ ಬಿಜೂರು, ಭೀಮೇಶ್ ಬೈಂದೂರು, ಕಾರ್ಯದರ್ಶಿ ವಿಜಯ ಕಂಚಿಕಾನ್, ಮಹಿಳಾ ಸಂಚಾಲಕಿ ಪ್ರಿಯದರ್ಶಿನಿ ಬೆಸ್ಕೂರು, ಭಾಗೀರಥಿ ಮಯ್ಯಾಡಿ ಮೊದಲಾದವರು ಉಪಸ್ಥಿತರಿದ್ದರು. ಸ್ವಾಮಿ ವಿವೇಕಾನಂದರ 153ನೇ ಜನ್ಮದಿನಾಚರಣೆಯ ನೆನಪಿಗಾಗಿ ಜ.28ರಂದು ಬೈಂದೂರಿನ ಗಾಂಧಿ ಮೈದಾನದಲ್ಲಿ ಕಾರ್ಯಕ್ರಮ ಜರುಗಲಿದ್ದು, ಚಕ್ರವರ್ತಿ ಸೂಲಿಬೆಲೆ ಸೇರಿದಂತೆ ಪ್ರಮುಖ ವಾಗ್ಮಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿರಲಿದ್ದು, ಹದಿನೈದು ಸಾವಿರಕ್ಕೂ ಅಧಿಕ ಮಂದಿ ಭಾಗವಹಿಸುವ ನಿರೀಕ್ಷೆ ಇದೆ.
