ಕುಂದಾಪ್ರ ಡಾಟ್ ಕಾಂ ಸುದ್ದಿ. ಮೂಡುಬಿದಿರೆ: ವಿದ್ಯಾಗಿರಿಯ ಆಳ್ವಾಸ್ ಕಾಲೇಜಿನ ಆವರಣದಲ್ಲಿ ಮೂರು ದಿನಗಳ ಕಾಲ ಜರುಗಿದ ನಾಡು ನುಡಿ ಸಂಸ್ಕೃತಿಯ ರಾಷ್ಟ್ರೀಯ ಸಮ್ಮೇಳನ ಆಳ್ವಾಸ್ ನುಡಿಸಿರಿ ಸಮಾರೋಪ ಸಮಾರಂಭ ಹಾಗೂ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ರತ್ನಾಕರವರ್ಣಿ ವೇದಿಕೆಯಲ್ಲಿ ಜರುಗಿತು. ಆಳ್ವಾಸ್ ನುಡಿಸಿರಿಯ ಕಾರ್ಯಾಧ್ಯಕ್ಷ ಡಾ. ಎಂ. ಮೋಹನ ಆಳ್ವ ಪ್ರಾಸ್ತಾವಿಕ ಮಾತುಗಳನ್ನಾಡಿ ಪ್ರತಿವರ್ಷವೂ ಜನರಿಂದ ಬರುತ್ತಿರುವ ಸಕಾರಾತ್ಮಕ ಸ್ವಂದನೆಯಿಂದಾಗಿ ನುಡಿಸಿರಿ ವರ್ಷದಿಂದ ವರ್ಷಕ್ಕೆ ಕಳೆಗಟ್ಟುತ್ತಿದೆ. ಎಲ್ಲರನ್ನೂ ಎಲ್ಲವನ್ನೂ ಒಳಗೊಂಡಂತೆ ನುಡಿಸಿರಿಯನ್ನು ಸಾಂಸ್ಕೃತಿಕ ಹಬ್ಬವಾಗಿ ಮೂಡಿಬಂದಿದ್ದು ನಮ್ಮಲ್ಲೊಂದು ಸಾರ್ಥಕ ಭಾವವಿದೆ ಎಂದರು. ಡಾ. ಗಿರಡ್ಡಿ ಗೋವಿಂದರಾಜ್, ಸುಬ್ರಾಯ ಚೊಕ್ಕಾಡಿ, ಡಆ ಚೆನ್ನಣ್ಣ ವಾಲೀಕಾರ್, ಡಾ. ಕೆ.ಆರ್. ಸಂಧ್ಯಾ ರೆಡ್ಡಿ, ಜಿ.ಎನ್. ರಂಗನಾಥ ರಾವ್, ಕೆ.ವಿ. ಅಕ್ಷರ, ಹರಿಣಿ, ಶ್ರೀನಿವಾಸ ಜಿ ಕಪ್ಪಣ್ಣ, ಶೀನಪ್ಪ ರೈ ಸಂಪಾಜೆ, ಜಬ್ಬಾರ್ ಸಮೊ, ಎಚ್.ಆರ್. ಲೀಲಾವತಿ, ಡಾ. ಚಂದ್ರಶೇಖರ ಚೌಟ, ಡಾ. ಈ. ಜ್ಞಾನಾನಂದ ಅ ಫಲಪುಷ್ಪ, ಪ್ರಶಸ್ತಿಪತ್ರ ಹಾಗೂ ಇಪ್ಪತ್ತೈದುಸಾವಿರ ನಗದು ನೀಡಿ ಪುರಸ್ಕರಿಸಲಾಯಿತು.…
Author: ನ್ಯೂಸ್ ಬ್ಯೂರೋ
ಶಾಂಭವಿ ಎಂ. ಜೆ. ಅಂದರ ಲೋಕ ಕತ್ತಲೆ ಎನ್ನುತ್ತಾರೆ. ಆದರೆ ಅಂದರ ಲೋಕದಲ್ಲಿಯೂ ಅಪೂರ್ವ ಬೆಳಕಿದೆ ಎಂಬುದನ್ನು ನಮ್ಮ ನಡುವೆ ಎಷ್ಟೋ ವ್ಯಕ್ತಿಗಳ ಸಾಧನೆಯೇ ಸಾಕ್ಷಿಕರಿಸುತ್ತದೆ. ಈ ವಿಷ್ಯಾ ಈಗ್ಯಾಕೆ ಅಂತಿರಾ? ಕನ್ನಡ ನಾಡು ನುಡಿ ಸಂಸ್ಕೃತಿಯ ರಾಷ್ಟ್ರೀಯ ಸಮ್ಮೇಳನ ಆಳ್ವಾಸ್ ನುಡಿಸಿರಿಯಲ್ಲಿ ವಿಶೇಷ ಆಹ್ವಾನಿತರಾಗಿದ್ದ ಹುಟ್ಟೂ ಅಂಧರಾದ, ಆದರೆ ಅಪ್ರತಿಮ ಪ್ರತಿಭಾನ್ವಿತ ಬಸವರಾಜ್ ಶಂಕರ್ ಉಮಾರಾಣಿ ಅವರ ಬುದ್ಧಿಮತ್ತೆ ಇದನ್ನು ಸಾಕ್ಷೀಕರಿಸಿತು. ಈ ಆಧುನಿಕ ಯುಗದಲ್ಲಿ ನಮ್ಮ ಮೊಬೈಲ್ ನಂಬರನ್ನೇ ನೆನಪಿಡಲಾಗದೇ ಸೇವ್ ಮಾಡುವುದನ್ನು ನೋಡಿದ್ದೇವೆ. ಆದರೆ ನಮ್ಮ ಬಸವರಾಜ್ ಅವರಿಗೆ ಯಾವುದೇ ಮೊಬೈಲ್ ನಂಬರನ್ನು ಒಮ್ಮೆ ಹೇಳಿದರೆ ಸಾಕು ಹತ್ತು ವರ್ಷದ ನಂತರ ಕೇಳಿದರು ಸರಾಗವಾಗಿ ಹೇಳುತ್ತಾರೆ. ಯಾರೇ ಹುಟ್ಟಿದ ದಿನಾಂಕ ತಿಂಗಳು ಹೇಳಿದರೆ ಸಾಕು ಕ್ಷಣದಲ್ಲಿಯೇ ವಾರವನ್ನು ಹೇಳುತ್ತಾರೆ. ವಿವಿಧ ಮೌಲ್ಯದ ನೋಟುಗಳನ್ನು ಅವರ ಕೈಗಿತ್ತ ಕೂಡಲೇ ಅದರ ಮೌಲ್ಯವನ್ನು ಹೇಳಬಲ್ಲ, ದಿನದ ಯಾವುದೇ ಕಾಲದಲ್ಲಿ ಸಮಯ ಕೇಳಿದರೂ ನಿಖರವಾಗಿ ಹೇಳಬಲ್ಲ, ಕೋಟಿಗಟ್ಟಲ್ಲೆ ಅಂಕಿಯನ್ನು ಕುಡಿಸಿ ಕಳೆದು…
ಕುಂದಾಪ್ರ ಡಾಟ್ ಕಾಂ ಸುದ್ದಿ. ಮೂಡುಬಿದಿರೆ: ಮೂರು ದಿನಗಳ ಕಾಲ ಜರುಗಿದ ನಾಡು ನುಡಿ ಸಂಸ್ಕೃತಿಯ ರಾಷ್ಟ್ರೀಯ ಸಮ್ಮೇಳನ ಆಳ್ವಾಸ್ ನುಡಿಸಿರಿ ಸಮಾರೋಪ ಸಮಾರಂಭದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ನಾಡಿನ ಗಣ್ಯರಿಗೆ ಆಳ್ವಾಸ್ ನುಡಿಸಿರಿ ಪ್ರಶಸ್ತಿ ಪ್ರದಾನ ಮಾಡಲಾಯಿತು. ಡಾ. ಗಿರಡ್ಡಿ ಗೋವಿಂದರಾಜ್, ಸುಬ್ರಾಯ ಚೊಕ್ಕಾಡಿ, ಡಆ ಚೆನ್ನಣ್ಣ ವಾಲೀಕಾರ್, ಡಾ. ಕೆ.ಆರ್. ಸಂಧ್ಯಾ ರೆಡ್ಡಿ, ಜಿ.ಎನ್. ರಂಗನಾಥ ರಾವ್, ಕೆ.ವಿ. ಅಕ್ಷರ, ಹರಿಣಿ, ಶ್ರೀನಿವಾಸ ಜಿ ಕಪ್ಪಣ್ಣ, ಶೀನಪ್ಪ ರೈ ಸಂಪಾಜೆ, ಜಬ್ಬಾರ್ ಸಮೊ, ಎಚ್.ಆರ್. ಲೀಲಾವತಿ, ಡಾ. ಚಂದ್ರಶೇಖರ ಚೌಟ, ಡಾ. ಈ. ಜ್ಞಾನಾನಂದ ಅ ಫಲಪುಷ್ಪ, ಪ್ರಶಸ್ತಿಪತ್ರ ಹಾಗೂ ಇಪ್ಪತ್ತೈದುಸಾವಿರ ನಗದು ನೀಡಿ ಪುರಸ್ಕರಿಸಲಾಯಿತು. ಚಿತ್ರ: ಮಾನಸ ಡಿಜಿಟಲ್ಸ್
ಶ್ರೇಯಾಂಕ ಎಸ್ ರಾನಡೆ. ಸ್ವಚ್ಛತೆಯೆಂಬುದು ಯಾರಿಗೆ ತಾನೇ ಇಷ್ಟವಿಲ್ಲ. ಅನೇಕರಿಗೆ ತಮ್ಮ ಸುತ್ತಮುತ್ತಲು ಸ್ವಚ್ಛವಾಗಿರಬೇಕೆಂಬ ಆಸೆಯಿದೆ. ಆದರೆ ಅದನ್ನು ತಾವು ಮಾಡಲು ಸಿದ್ಧರಿಲ್ಲ. ತನು, ಮನದಿಂದ ಸ್ವಚ್ಛತೆಯನ್ನು ತರಲು ಹೊರಟಿದ್ದ ಕೇಂದ್ರ ಸರಕಾರ ಕಾಳ ಧನವನ್ನೂ ಸ್ವಚ್ಛ ಮಾಡಲು ಹೊರಟಾಗಿನಿಂದ ಸ್ವಚ್ಛತೆಯ ಸಮಗ್ರ ಚಿತ್ರಣ ಭಾರತೀಯರಿಗೆ ಅರ್ಥವಾಗತೊಡಗಿದೆ. ಹಾಗಾಗಿಯೇ ಕಳೆದ ಹನ್ನೆರಡು ವರ್ಷಗಳಿಗೆ ಹೋಲಿಸಿದರೆ ಈ ಬಾರಿಯ ನುಡಿಸಿರಿಯಲ್ಲಿ ಜನರು ಸ್ವಚ್ಛತೆಯ ಕಾಳಜಿಯನ್ನೂ ಇನ್ನಿಲ್ಲದಂತೆ ವಹಿಸುತ್ತಿದ್ದಾರೆ. ಅದಕ್ಕೆ ಪೂರಕವಾಗಿ ಡಾ. ಕುರಿಯನ್ ನೇತೃತ್ವದಲ್ಲಿ ಸ್ವಚ್ಛತಾ ಸಮಿತಿಯವರು ಸ್ವಚ್ಛತೆಗಾಗಿ ಪೂರ್ವ ತಯಾರಿಯನ್ನು ಮೊದಲೇ ಮಾಡಿಕೊಂಡಿದ್ದಲ್ಲದೇ ಅದಕ್ಕಾಗಿ ಅಭಿಯಾನವನ್ನೂ ಮಾಡುತ್ತಿದ್ದಾರೆ. ನುಡಿಸಿರಿಯ ಪ್ರಾಂಗಣದಲ್ಲಿ ಆಗೊಮ್ಮೆ ಈಗೊಮ್ಮೆ ಅತ್ತಿಂದಿತ್ತ “ಸ್ವಚ್ಛತೆಯ ಕಡೆಗೆ ಒಂದು ನಡಿಗೆ” ಎಂಬ ಫಲಕ ಹೊತ್ತ ಎರಡು ಚಕ್ರದ ವಾಹನವೊಂದು ಎಲ್ಲರ ಗಮನ ಸೆಳೆಯುತ್ತಿತ್ತು. ಸುಧಾಕರ ಪೂಂಜರವರು ತಮ್ಮ ಆಕ್ಸೆಸ್ ದ್ವಿಚಕ್ರ ವಾಹನದಲ್ಲಿ ಪ್ರತೀ ಮಗ್ಗಲಿಗೂ ಪ್ರತ್ಯೇಕವಾಗಿ ತೆರಳಿ ಆಗಮಿಸಿದ್ದ ಸಾಹಿತ್ಯಾಸಕ್ತರಿಗೆ ಸ್ವಚ್ಛತಾ ಪ್ರಜ್ಞೆ-ಕಳಕಳಿಯನ್ನು ಮೂಡಿಸುವ ಪ್ರಾಮಾಣಿಕ ಪ್ರಯತ್ನ ಅನೇಕರಿಗೆ ತಮ್ಮ ಆವರಣದಲ್ಲಿ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ : ಸೌತ್ ಕೆನರಾ ಪೋಟೋಗ್ರಾಪರ್‍ಸ್ ಅಸೋಸಿಯೇಶನ್ ರಿ. ಕುಂದಾಪುರ ವಲಯ ಮುದ್ದುಕಂದ ಛಾಯಾಚಿತ್ರ ಸ್ಪರ್ಧೆಯ ಬಹುಮಾನ ವಿತರಣಾ ಸಮಾರಂಭ ಕುಂದಾಪುರದ ಅಕ್ಷತಾ ಸಭಾಂಗಣದಲ್ಲಿ ನಡೆಯಿತು. ಆದ್ಯ ಜೋಯಿಸ್ ಪ್ರಥಮ, ಲಹರಿ ಕಿಣಿ ದ್ವಿತೀಯ, ಶ್ರೀಹಾನ್ ಎಸ್. ಶೆಟ್ಟಿ ತೃತೀಯ ಬಹುಮಾನವನ್ನು ಪಡೆದುಕೊಂಡರೇ. ಸಮಾಧಾನಕರ ಬಹುಮಾನವನ್ನು ಹರ್ಷಾಲಿ ಜಿ. ನಾಯಕ್, ಅಭಿಜ್ಞಾ ಆರ್. ಆಚಾರ್, ಅಕ್ಷೆಭ್ಯ ಜಿ. ಭಟ್, ಅಭಿನವ ಪೈ, ಪ್ರಥ್ವಿನ್ ಆರ್. ಶೆಟ್ಟಿ ಪಡೆದರು. ಬಸ್ರೂರು ಮಹತೋಬಾರ ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಧರ್ಮದರ್ಶಿ ಬಿ. ಅಪ್ಪಣ್ಣ ಹೆಗ್ಡೆ ವಿಜೇತರಿಗೆ ಬಹುಮಾನ ವಿತರಿಸಿದರು. ಮುಖ್ಯ ಅತಿಥಿಗಳಾಗಿ ಕನ್ನಡ ಸಾಹಿತ್ಯ ಪರಿಷತ್ ಉಡುಪಿ ಜಿಲ್ಲೆ ಇದರ ಪ್ರಧಾನ ಕಾರ್ಯದರ್ಶಿ ಸುಬ್ರಹ್ಮಣ್ಯ ಶೆಟ್ಟಿ, ಸಂಸ್ಥೆಯ ಅಧ್ಯಕ್ಷರಾದ ಗ್ರೇಶನ್ ಡಯಾಸ್, ಕಾರ್ಯದರ್ಶಿ ಪ್ರಮೋದ್ ಚಂದನ್, ಕೋಶಾಧಿಕಾರಿ ಚಂದ್ರಕಾಂತ, ಛಾಯಾಗ್ರಾಹಕರ ವಿವಿಧೋದ್ದೇಶ ಸಹಕಾರಿ ಸಂಸ್ಥೆಯ ಅಧ್ಯಕ್ಷರಾದ ಅಶೋಕ್ ಕುಮಾರ್ ಶೆಟ್ಟಿ, ಕಾರ್ಯಕ್ರಮದ ಪ್ರಾಯೋಜಕರಾದ ದೊಟ್ಟಯ್ಯ ಪೂಜಾರಿ, ಶೀನ ದೇವಾಡಿಗ ಉಪ್ಪುಂದ,…
ಕುಂದಾಪ್ರ ಡಾಟ್ ಕಾಂ ಸುದ್ದಿ. ಮೂಡುಬಿದಿರೆ: ನಾಡು ನುಡಿ ಸಂಸ್ಕೃತಿಯ ಸಮ್ಮೇಳನ ಆಳ್ವಾಸ್ ನುಡಿಸಿರಿಯನ್ನು ಮಂಗಳೂರು ಆಕಾಶವಾಣಿ ಮೂರು ದಿನಗಳ ಕಾಲವೂ ನೇರಪ್ರಸಾರ ಮಾಡಿತ್ತು. ಆಕಾಶವಾಣಿಯ ಮಂಗಳೂರು ವಿಭಾಗದ ನಿರ್ದೇಶಕ ಡಾ. ವಸಂತಕುಮಾರ್ ಪೆರ್ಲ, ಸದಾನಂದ ಪೆರ್ಲ, ಶರಬೇಂದ್ರ ಸ್ವಾಮಿ ಹಾಗೂ ತಂಡದ ನೇತೃತ್ವದಲ್ಲಿ ಸಂಪೂರ್ಣ ಸಮ್ಮೇಳನವನ್ನು ನೇರಪ್ರಸಾರ ಮಾಡಲಾಗಿತ್ತು.
ಕುಂದಾಪ್ರ ಡಾಟ್ ಕಾಂ ಸುದ್ದಿ. ಗಂಗೊಳ್ಳಿ : ಕೆನರಾ ಬ್ಯಾಂಕಿನ ಎರಡನೇ ಶಾಖೆಯಾಗಿರುವ ಗಂಗೊಳ್ಳಿ ಶಾಖೆಯಲ್ಲಿ ಗ್ರಾಹಕರಿಗೆ ಉತ್ತಮ ಸೇವೆಯನ್ನು ನೀಡುತ್ತಿದ್ದು, ಇತರ ಬ್ಯಾಂಕುಗಳಿಗೆ ಹೋಲಿಸಿದರೆ ಗಂಗೊಳ್ಳಿ ಶಾಖೆಯು ಅತಿ ಹೆಚ್ಚು ವ್ಯವಹಾರ ನಡೆಸುತ್ತಿರುವುದು ಶ್ಲಾಘನೀಯ. ಗ್ರಾಮೀಣ ಪ್ರದೇಶದಲ್ಲಿ ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಸೇವೆ ನೀಡುವ ಮೂಲಕ ಕೆನರಾ ಬ್ಯಾಂಕ್ ಜನಮಾನಸದಲ್ಲಿ ಉಳಿದುಕೊಳ್ಳಲು ಸಹಾಯಕವಾಗಿದೆ. ಬ್ಯಾಂಕಿನ ಸಂಸ್ಥಾಪಕ ಅಮ್ಮೆಂಬಳ ಸುಬ್ಬರಾವ್ ಪೈ ಅವರ ಕನಸನ್ನು ನನಸು ಮಾಡುತ್ತಿರುವ ಕೆನರಾ ಬ್ಯಾಂಕ್ ದೇಶದ ಅಗ್ರಮಾನ್ಯ ಬ್ಯಾಂಕುಗಳಲ್ಲಿ ಒಂದಾಗಿದೆ ಎಂದು ಪತ್ರಕರ್ತ ಬಿ.ರಾಘವೇಂದ್ರ ಪೈ ಹೇಳಿದರು. ಅವರು ಕೆನರಾ ಬ್ಯಾಂಕಿನ ಗಂಗೊಳ್ಳಿ ಶಾಖೆಯಲ್ಲಿ ಆಯೋಜಿಸಲಾಗಿದ್ದ ಸಂಸ್ಥಾಪಕ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಕಟ್ಟಡ ಮಾಲೀಕ ಎಂ.ಜಿ.ಅಜಿತ್ ನಾಯಕ್, ಟಿ.ಗಂಗಾಧರ ಶೆಣೈ ಹಾಗೂ ವಿಜಯ ಖಾರ್ವಿ ಡಾ.ಅಮ್ಮೆಂಬಳ ಸುಬ್ಬರಾವ್ ಪೈ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಶುಭ ಹಾರೈಸಿದರು. ಬ್ಯಾಂಕಿನ ಹಿರಿಯ ಅಧಿಕಾರಿ ಅಶೋಕ್ ಜಿ.ವಿ., ನಿರ್ಮಲ್ ಕುಮಾರ್, ಇಂದಿರಾ ಭಟ್, ಜಿ.ಗಂಗಾಧರ ಪೈ. ರಾಜೇಂದ್ರ ಹಾಗೂ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಇಂದು ಕೃಷಿವಿಜ್ಞಾನ ರೈತರಿಗಾಗಿ ಕೆಲಸಮಾಡುತ್ತಿದೆಯೋ, ಆಹಾರ ಉತ್ಪಾದನೆಯ ಬಗೆಗೆ ಕೆಲಮಾಡುತ್ತಿದೆಯೋ ಅಥವಾ ಬಹುರಾಷ್ಟ್ರೀಯ ಕಂಪೆನಿಗಳ ಹಿತಾಸಕ್ತಿ ಕಾಯುತ್ತಿದೆಯೋ ಎಂಬ ಸಂಶಯ ಕಾಡುತ್ತಿದೆ. ಸಮೃದ್ಧವಾಗಿ ಮರಗಳನ್ನು ಬೆಳೆಸುವುದು, ದನಗಳನ್ನು ಸಾಕಿ ಕೃಷಿ ಕಾರ್ಯದಲ್ಲಿ ತೊಡಗಿಕೊಳ್ಳುವುದರಿಂದ ರೈತರು ನೆಮ್ಮದಿಯಿಂದ ಬದುಕಬಹುದು ಎಂದು ನಾಡೋಜ ಎಲ್. ವರ್ತೂರು ನಾರಾಯಣ ರೆಡ್ಡಿ ಹೇಳಿದರು. ಆಳ್ವಾಸ್ ನುಡಿಸಿರಿಯ ರತ್ನಾಕರವರ್ಣಿ ವೇದಿಕೆಯಲ್ಲಿ ಮೂರನೇ ದಿನದ ವಿಚಾರಗೋಷ್ಠಿಯಲ್ಲಿ ‘ಕೃಷಿ – ನಾಳೆಗಳ ನಿರ್ಮಾಣ’ದ ಕುರಿತು ಮಾತನಾಡಿದರು. ಹಸಿರು ಕ್ರಾಂತಿಯ ನೆಪದಲ್ಲಿ ವಿಶ್ವದ ಅನೇಕ ದೇಶಗಳಲ್ಲಿ ಮೂರು ಬಗೆಯ ಬೆಳೆಗಳನ್ನು ಸಾರ್ವತ್ರಿಕವಾಗಿ ಬೆಳೆಯಲಾಯಿತು. ಭಾತದಲ್ಲಿ ಭತ್ತ, ಗೋಧಿಯನ್ನು ಆಹಾರಕ್ಕಾಗಿ ಬಳಸಿಕೊಳ್ಳಲಾಗುತ್ತಿದೆ. ಆದರೆ ಮುಸುಕಿನ ಜೋಳವನ್ನು ಕೋಳಿಗಳ ಆಹಾರವಾಗಿಯೇ ಉಳಿದಿದೆ. ಆಹಾರದ ಸಮಸ್ಯ ನೀಗಿಸಲು ಈ ಬೆಳೆಯನ್ನು ದೇಶದಲ್ಲಿ ಬೆಳೆಯುವ ಅವಶ್ಯಕತೆ ಇತ್ತೇ ಎಂದವರು ಪ್ರಶ್ನಿಸಿದರು. ಸಮಾಜಸೇವೆ ಮಾಡಬೇಕಿದ್ದರೇ ಸಮಾಜಸೇವಕನೆಂಬ ಹಣೆಪಟ್ಟಿ ಕಟ್ಟುಕೊಂಡು ತಿರುಗಾಡುವ ಬದಲಿಗೆ ಒಂದು ಮರ ನೆಡಿ. ಅದು ಪರಿಸರಕ್ಕೆ ಕೊಡವ ಆಮ್ಲಜನಕದಿಂದ ನೂರಾರು ಮಂದಿ…
ತಂತ್ರಜ್ಞಾನ ಕ್ಷೇತ್ರದಲ್ಲಿ ಸದಾ ಹೊಸ ಬೆಳವಣಿಗೆಗಳು ಆಗುತ್ತಿರುತ್ತವೆ. ಅವುಗಳೆಲ್ಲದರ ಅನುಕೂಲತೆಗಳು ಹೆಚ್ಚುಹೆಚ್ಚು ಜನರನ್ನು ತಲುಪಬೇಕಾದರೆ ಅದು ಅವರ ಭಾಷೆಯಲ್ಲೇ ಲಭ್ಯವಿರಬೇಕು. ತಂತ್ರಜ್ಞಾನದ ಸಹವಾಸ ನಮಗೇಕೆ ಎಂದು ಕುಳಿತವರು ಕೂಡ ಅದು ತಮ್ಮ ಭಾಷೆಯಲ್ಲೇ ಲಭ್ಯವಾದಾಗ ಅತ್ತ ಒಮ್ಮೆಯಾದರೂ ನೋಡುವುದು ಖಂಡಿತ. ಈಗ ನಮ್ಮ ಮನೆಗಳಲ್ಲೇ ನೋಡಿ, ಟೆಕ್ನಾಲಜಿಯೆಲ್ಲ ನಮಗೆ ಅರ್ಥವಾಗದ್ದು ಎಂದು ಕೆಲ ವರ್ಷಗಳ ಹಿಂದಷ್ಟೇ ಹೇಳುತ್ತಿದ್ದ ಅದೆಷ್ಟು ಜನ ಹಿರಿಯರು ಇದೀಗ ಫೇಸ್ಬುಕ್ – ವಾಟ್ಸ್ಆಪ್ಗಳಲ್ಲಿ ಸಕ್ರಿಯರಾಗಿಲ್ಲ? “ಹಾರುವ ಹಕ್ಕಿಗೆ ಬೀಸುವ ಗಾಳಿಗೆ ಸೀಮೆಯ ಹಂಗಿಲ್ಲ, ಮನುಜ ಮನುಜನ ನಡುವಲಿ ಮಾತ್ರ ಗಡಿಗಳಿಗೆಣೆಯಿಲ್ಲ” – ಇದು ಆ ಗೀತೆಯ ಮೊದಲ ಕೆಲ ಸಾಲುಗಳ ಭಾವಾರ್ಥ. ನಿಜ, ಬಹುತೇಕ ಸರಹದ್ದುಗಳೆಲ್ಲ ಮನುಷ್ಯರದೇ ಸೃಷ್ಟಿ. ರಾಷ್ಟ್ರಗಳ, ರಾಜ್ಯಗಳ, ಭಾಷೆಗಳ, ಧರ್ಮಗಳ ಹೆಸರಿನಲ್ಲಿ ಅದೆಷ್ಟೋ ಸರಹದ್ದುಗಳನ್ನು ನಮ್ಮ ಸುತ್ತಲೂ ನಾವೇ ನಿರ್ಮಿಸಿಕೊಂಡುಬಿಟ್ಟಿದ್ದೇವೆ. ಇಂತಹ ಸರಹದ್ದುಗಳ ಕಾಟ ಯಾವ ಕ್ಷೇತ್ರವನ್ನೂ ಬಿಟ್ಟಿಲ್ಲ. ಇವುಗಳ ಕೈವಾಡ ತಂತ್ರಜ್ಞಾನ ಕ್ಷೇತ್ರದಲ್ಲೂ ಇದೆ. ತಂತ್ರಜ್ಞಾನದ ಭಾಷೆ, ತಂತ್ರಜ್ಞಾನ ಕುರಿತ ಅರಿವು,…
ಕುಂದಾಪ್ರ ಡಾಟ್ ಕಾಂ ವರದಿ. ಒಂದು ಭಾಷೆಯನ್ನು ಉಳಿಸುವ, ಕಟ್ಟುವ, ಬಳಕೆಗೆ ಅನುಕೂಲವಾಗುವಂತೆ ಮಾಡುವ ಕಾರ್ಯ ವಿಶ್ವದೆಲ್ಲಡೆಯೂ ನಡೆಯುತ್ತಲೇ ಇರುತ್ತದೆ. ಅದರೊಂದಿಗೆ ವಿಶ್ವವ್ಯಾಪಿಯಾದ ಭಾಷೆಯೆದುರು ತನ್ನ ಅಸ್ಮಿತೆಯನ್ನು ಕಳೆದುಕೊಳ್ಳುವ ಪ್ರಾದೇಶಿಕ ಭಾಷೆಗಳನ್ನು ವಿಶ್ವಭಾಷೆಗೆ ಸರಿಸಾಟಿಯಾಗಿ ನಿಲ್ಲಿಸಬೇಕೆಂಬ ಪ್ರಯತ್ನಗಳೂ ಸದಾ ಒಂದಿಲ್ರ್ಲೆಂದು ರೂಪದಲ್ಲಿ ಚಾಲ್ತಿಯಲ್ಲಿರುತ್ತದೆ ಇಂತಹ ಭಾಷೆಯನ್ನು ಜೀವಂತವಾಗಿರಿಸಿ ಆಯಾ ಭಾಷೆಗಳಲ್ಲಿಯೇ ಲೇಖನಗಳನ್ನು ಪ್ರಕಟಿಸಿ ಜ್ಞಾನವನ್ನು ಹಂಚಿಕೊಳ್ಳುವ ಕಾರ್ಯಕ್ಕೆ ಆಧುನಿಕ ಯುಗದಲ್ಲಿ ತಾಂತ್ರಿಕ ನೆಲೆಗಟ್ಟನ್ನು ಒದಗಿಸಿ ಪೋಷಿಸುತ್ತಿರುವುದು ಲಾಭರಹಿತ ಸ್ವಂತಂತ್ರ ವಿಶ್ವಕೋಶ ವಿಕಿಪೀಡಿಯ. ವಿಕಿಪೀಡಿಯಾದಲ್ಲಿ ಕರಾವಳಿ ಕರ್ನಾಟಕದ ಭಾಷೆಗಳು ಕನ್ನಡವೂ ಸೇರಿದಂತೆ ಜಗತ್ತಿನ ೨೯೪ ಭಾಷೆಗಳಲ್ಲಿ ಲಭ್ಯವಿರುವ ‘ವಿಕಿಪಿಡಿಯಾ ವಿಶ್ವಕೋಶ’ ಕರ್ನಾಟಕ ಕರಾವಳಿಯ ಭಾಷೆಗಳನ್ನು ಅಂತರ್ಜಾಕ್ಕೆ ಸೇರಿಸುವ ಕಾರ್ಯದಲ್ಲಿಯೂ ನಿರತವಾಗಿದೆ. ಕರಾವಳಿ ಭಾಷೆಗ ವಿಕಿಮೀಡಿಯನ್ನರ ಮುತುವರ್ಜಿಯಿಂದಾಗಿ ಕರ್ನಾಟಕ ಕರಾವಳಿಯ ಹಾಗೂ ಕೇರಳದ ಕಾಸರಗೋಡು ಜಿಲ್ಲೆಯಲ್ಲಿ ಬಳಕೆಯಲ್ಲಿರುವ ಪ್ರಮುಖ ಭಾಷೆಗಳಾದ ಕನ್ನಡ, ತುಳು, ಕೊಂಕಣಿಯನ್ನೂ ವಿಕೀಕರಣಗೊಳಿಸುವ ಪ್ರಯತ್ನ ಆಸಕ್ತರ ಬಳಗದಿಂದ ಸದ್ದಿಲ್ಲದೇ ಸಾಗಿದೆ. ಇದೇ ಉದ್ದೇಶದಿಂದ ಹುಟ್ಟಿಕೊಂಡ ಕರಾವಳಿ ವಿಕಿಮೀಡಿಯನ್ನರುಗಳ ಸಂಘವು ಕರಾವಳಿಯ ಪ್ರಮುಖ…
