ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ರಾಯಚೂರಿನಲ್ಲಿ ನಡೆಯುತ್ತಿದ್ದ ಟಿಪ್ಪು ಜಯಂತಿ ಕಾರ್ಯಕ್ರಮದಲ್ಲಿ ಅಶ್ಲೀಲ ಚಿತ್ರ ವೀಕ್ಷಿಸಿದ ಆರೋಪ ಎದುರಿಸುತ್ತಿರುವ ಫ್ರೌಡಶಾಲಾ ಶಿಕ್ಷಣ ಸಚಿವ ತನ್ವೀರ್ ಸೇಠ್ ಅವರು ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿ ಕುಂದಾಪುರ ವಿವಿಧ ಕಾಲೇಜಿನ ಎಬಿವಿಪಿ ಮುಂದಾಳುಗಳು ತಹಶೀಲ್ದಾರರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು. ಶಿಕ್ಷಣ ಸಚಿವರಾಗಿದ್ದುಕೊಂಡೇ ಇಂತಹ ಕೃತ್ಯಗಳಲ್ಲಿ ತೊಡಗಿಕೊಂಡಿರುವುದು ಆಘಾತಕಾರಿಯಾಗಿದ್ದು ಕೂಡಲೇ ನೈತಿಕ ಹೊಣೆ ಹೊತ್ತು ಅವರು ರಾಜಿನಾಮೆ ನೀಡಬೇಕು ಎಂದು ಆಗ್ರಹಿಸಿದರು. ಕುಂದಾಪುರ ತಹಶೀಲ್ದಾರ್ ಜಿ.ಎಂ.ಬೋರ್ಕರ್ ಮನವಿ ಸ್ವೀಕರಿಸಿದರು.
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ. ಗಂಗೊಳ್ಳಿ: ಗಂಗೊಳ್ಳಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳ ಗ್ರಾಹಕರ ಹಲವು ವರ್ಷಗಳ ಬೇಡಿಕೆಯಾಗಿದ್ದ ಗಂಗೊಳ್ಳಿ ಉಪ ವಿದ್ಯುತ್ ಕೇಂದ್ರಕ್ಕೆ ಆರಂಭಕ್ಕೆ ಕೆಲವೊಂದು ಸಮಸ್ಯೆಗಳು ಎದುರಾಗಿದ್ದು, ಅದನ್ನು ಸರಿಪಡಿಸಿ ವಿದ್ಯುತ್ ಕೇಂದ್ರದ ಕಾರ್ಯಾಚರಣೆಗೆ ಆರಂಭಿಸಲಾಗಿದೆ. ಅತಿ ಹೆಚ್ಚು ಆದಾಯ ಬರುತ್ತಿರುವ ಗಂಗೊಳ್ಳಿ ಹಾಗೂ ಸುತ್ತಮುತ್ತಲಿನ ಪ್ರದೇಶದ ಗ್ರಾಹಕರಿಗೆ ವಿದ್ಯುತ್ ಸರಬರಾಜಿನಲ್ಲಿ ಅಡಚಣೆಯುಂಟಾಗದೆ ಉತ್ತಮ ರೀತಿಯಲ್ಲಿ ವಿದ್ಯುತ್ ವಿತರಣೆ ಮಾಡಬೇಕು ಎಂದು ಬೈಂದೂರು ಶಾಸಕ ಕೆ.ಗೋಪಾಲ ಪೂಜಾರಿ ಹೇಳಿದರು. ಅವರು ಗಂಗೊಳ್ಳಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಮೇಲ್ಗಂಗೊಳ್ಳಿ ಬಳಿ ನಿರ್ಮಾಣಗೊಂಡಿರುವ ಗಂಗೊಳ್ಳಿ ೩೩/೧೧ ಕೆ.ವಿ. ವಿದ್ಯುತ್ ವಿತರಣಾ ಕೇಂದ್ರವನ್ನು ಉದ್ಘಾಟಿಸಿ ಮಾತನಾಡಿದರು. ಗಂಗೊಳ್ಳಿ ವಿದ್ಯುತ್ ವಿತರಣಾ ಕೇಂದ್ರ ಕಾರ್ಯಾರಂಭ ಮಾಡಲು ಬಹಳಷ್ಟು ಪ್ರಯತ್ನಗಳು ನಡೆದಿದೆ. ಎಲ್ಲರ ಪ್ರಯತ್ನದ ಫಲವಾಗಿ ಗಂಗೊಳ್ಳಿ ವಿದ್ಯುತ್ ವಿತರಣಾ ಕೇಂದ್ರ ಜನರ ಸೇವೆಗೆ ಲಭ್ಯವಾಗಿದ್ದು, ಅಧಿಕಾರಿಗಳು ಈ ಕೇಂದ್ರವನ್ನು ಉತ್ತಮ ರೀತಿಯಲ್ಲಿ ನಿರ್ವಹಿಸಿ ಜನರಿಗೆ ಅನುಕೂಲ ಕಲ್ಪಿಸಬೇಕು ಎಂದು ಹೇಳಿದರು. ಜಿಲ್ಲಾ ಪಂಚಾಯತ್ ಸದಸ್ಯೆ ಶೋಭಾ…
ಸುನಿಲ್ ಹೆಚ್. ಜಿ ಬೈಂದೂರು | ಕುಂದಾಪ್ರ ಡಾಟ್ ಕಾಂ ವರದಿ. ಕುಂದಾಪುರ: ಕರಾವಳಿಯ ಸಮೃದ್ಧ ಕಲೆ ಯಕ್ಷಗಾನ ವಿಶ್ವಮಾನ್ಯವಾಗಿರುವ ಹೊತ್ತಿನಲ್ಲಿ ಕಲೆಯ ಬೇರು ನೆಲೆಯೂರಿರುವು ಕುಂದಾಪುರದ ನೆಲದಲ್ಲಿಯೇ ಯಕ್ಷಗಾನ ಪ್ರದರ್ಶನಕ್ಕೆ ಅವಕಾಶ ದೊರೆಯದ ಸ್ಥಿತಿ ಬಂದೊದಗಿದ್ದು ಬಡಗುತಿಟ್ಟು ಯಕ್ಷಗಾನದ ಹೆಬ್ಬಾಗಿಲನ್ನೇ ಮುಚ್ಚುವ ಹುನ್ನಾರ ನಡೆದಿದೆ. ಅಧಿಕಾರಿಗಳ ನಿರ್ಲಕ್ಷ್ಯ ಧೋರಣೆ, ಜನಪ್ರತಿನಿಧಿಗಳ ಇಚ್ಛಾಶಕ್ತಿಯ ಕೊರತೆ ಕಾರಣದಿಂದ ಹಾಸ್ಟೆಲ್ ವಿದ್ಯಾರ್ಥಿಗಳಿಗೆ ತೊಂದರೆಯಾವುದೆಂಬ ನೆವವನ್ನಿಟ್ಟುಕೊಂಡು ಕುಂದಾಪುರದ ನೆಹರೂ ಮೈದಾನದಲ್ಲಿ ನಡೆಯುತ್ತಿದ್ದ ನೂರಾರು ವರ್ಷಗಳ ಇತಿಹಾಸವುಳ್ಳ ಯಕ್ಷಗಾನ ಪ್ರದರ್ಶನಕ್ಕೆ ಅನುಮತಿ ನಿರಾಕರಿಸಿರುವುದು ಯಕ್ಷಗಾನ ಸಂಘಟಕರು, ಕಲಾವಿದರು, ಅಭಿಮಾನಿಗಳು ಹಾಗೂ ಅದನ್ನೇ ನಂಬಿ ಬದುಕು ಸವೆಸುತ್ತಿದ್ದ ಸಣ್ಣಪುಟ್ಟ ವ್ಯಾಪಾರಸ್ಥರನ್ನು ಕಂಗೆಡಿಸಿದೆ. ಇಷ್ಟರಲ್ಲಾಗಲೇ ನೆಹರೂ ಮೈದಾನದಲ್ಲಿ ರಂಗುರಂಗಿನ ರಂಗ ಮಂಟಪ ಕಾಣಬೇಕಿತ್ತು. ಒಂದೇ ಒಂದು ಆಟ ನೋಡಲು ಮರೆಯದಿರಿ ಎಂಬ ಪ್ರಚಾರದ ಸದ್ದು ಕೇಳಬೇಕಿತ್ತು. ರಾಗ, ಚಂಡೆ, ಮದ್ದಳೆ, ತಾಳಗಳ ಹಿಮ್ಮೇಳಕ್ಕೆ, ಮೊಮ್ಮೇಳದ ಒಡ್ಡೋಲಗ ನಡೆಬೇಕಿತ್ತು. ಆದರೆ ಅನುಮತಿಯ ನಿರಾಕರಣೆ ಎಲ್ಲವನ್ನೂ ಕಳೆಗುಂದಿಸಿದೆ. ಯಕ್ಷಗಾನ ಪ್ರದರ್ಶನಕ್ಕೆ ಅಣಿಯಾದವರು ಮಾತ್ರ…
ಕಟ್ಬೇಲ್ತೂರಿನಲ್ಲಿ ಹಿರಿಯರೆಡೆಗೆ ಸಾಹಿತ್ಯದ ನಡಿಗೆ ಕುಂದಾಪ್ರ ಡಾಟ್ ಕಾಂ ಸುದ್ದಿ ಕುಂದಾಪುರ: ಕನ್ನಡ ಭಾಷೆ, ಸಂಸ್ಕೃತಿ, ಸಾಹಿತ್ಯ, ಕಲೆ ಮತ್ತು ಜನಜೀವನದ ಅರಿವು ಮತ್ತು ಅಭಿಮಾನದಿಂದ ಮಾತ್ರ ನಾಡು ನುಡಿ ಸಂಸ್ಕೃತಿ ಉಳಿದು ಬೆಳೆಯಲು ಸಾಧ್ಯ. ಈ ನಿಟ್ಟಿನಲ್ಲಿ ಮುಂದಿನ ತಲೆಮಾರು ಹೆಮ್ಮೆಪಡುವಂತಹ ಪರಂಪರೆಯನ್ನು ರೂಪಿಸುವ ಹೊಣೆ ಎಲ್ಲ ಕನ್ನಡಿಗರ ಮೇಲಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ ಕುಂದಾಪುರ ತಾಲೂಕು ಅಧ್ಯಕ್ಷ ಡಾ. ಸುಬ್ರಹ್ಮಣ್ಯ ಭಟ್ ಹೇಳಿದರು. ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಹಾಗೂ ತಾಲೂಕು ಘಟಕ, ಗೀತಾನಂದ ಫೌಂಡೇಶನ್ ಮಣೂರು ಪಡುಕೆರೆ ಇವರ ಸಹಯೋಗದೊಂದಿಗೆ ಜಿಲ್ಲೆಯಲ್ಲಿ ನವೆಂಬರ್ ತಿಂಗಳುಪೂರ್ತಿ ನಡೆಯುವ ತಿಂಗಳ ಸಡಗರದ ಅಂಗವಾಗಿ ಕಸಾಪ ವಂಡ್ಸೆ ಹೋಬಳಿ ಘಟಕ ಆಶ್ರಯದಲ್ಲಿ ಕಟ್ಬೇಲ್ತೂರು ಶ್ರೀ ಭದ್ರಮಹಾಕಾಳಿ ದೈವಸ್ಥಾನದಲ್ಲಿ ಗುರುವಾರ ಸಂಜೆ ಜರುಗಿದ ಹಿರಿಯರೆಡೆಗೆ ಸಾಹಿತ್ಯದ ನಡಿಗೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕಾರ್ಯಕ್ರಮದ ಆಶಯಕ್ಕನುಗುಣವಾಗಿ ಹವ್ಯಾಸಿ ಯಕ್ಷಗಾನ ಕಲಾವಿದ ಹಾಗೂ ಶನಿಕಥಾ ದಾಸರಾದ ಕಟ್ಬೇಲ್ತೂರು ಶಂಕರ ಪೂಜಾರಿ ಅವರನ್ನು ಈ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ತಾಲೂಕಿನ ಜಡ್ಕಲ್ ಗ್ರಾಮದ ಮೆಕ್ಕೆ ನಿವಾಸಿ ಭಾಸ್ಕರ ಪೂಜಾರಿ (38) ಎಂಬುವವರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ವರದಿಯಾಗಿದೆ. ಭಾಸ್ಕರ್ ಪೂಜಾರಿ ಮದುವೆಯಾಗಿ ಹನ್ನೆರಡು ವರ್ಷವಾಗಿದ್ದು ಇಬ್ಬರು ಮಕ್ಕಳಿದ್ದರು. ಕಳೆದ ಐದಾರು ವರ್ಷಗಳಿಂದ ದಂಪತಿಗಳು ಬೇರೆಯಾಗಿ ವಾಸಿಸುತ್ತಿದ್ದರು. ತನ್ನ ಸಾವಿಗೆ ತಾನೇ ಕಾರಣ ಎಂದು ಮೃತ ಭಾಸ್ಕರ್ ಪೂಜಾರಿ ಡೆತ್ನೋಟ್ನಲ್ಲಿ ಬರೆದಿಟ್ಟಿದ್ದರೂ, ಕೌಟುಂಬಿಕ ಸ್ಥಿತಿಯ ಬಗ್ಗೆಗಿದ್ದ ಅಸಮಧಾನವೇ ಸಾವಿಗೆ ದವಡೆ ತಂದು ನಿಲ್ಲಿಸಿತ್ತು ಎಂದು ಸ್ಥಳೀಯರು ಮಾತನಾಡಿಕೊಳ್ಳುತ್ತಿದ್ದಾರೆ. ಬರೆಯಲು ಬಾರದ ವ್ಯಕ್ತಿ ಡೆತ್ನೋಟ್ ಬರೆದಿಡಲು ಹೇಗೆ ಸಾಧ್ಯ. ಇದೊಂದು ಕೊಲೆಯೇ ಆಗಿರಬಹುದು ಎಂಬ ಶಂಕೆಯೂ ವ್ಯಕ್ತವಾಗಿದೆ. ಕೊಲ್ಲೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಕೆ ಕೈಗೆತ್ತಿಕೊಂಡಿದ್ದಾರೆ.
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಸಾಮಾಜಿಕ ಜಾಲತಾಣ ಫೇಸ್ಬುಕ್ನಲ್ಲಿ ಭಾರತದ ಸಂವಿಧಾನಶಿಲ್ಪಿ ಡಾ. ಬಿ. ಆರ್. ಅಂಬೇಡ್ಕರ್ ಅವರ ಕುರಿತಾಗಿ ಅವಹೇಳಕಾರಿಯಾಗಿ ಸ್ಟೇಟಸ್ ಬರೆದುಕೊಂಡಿದ್ದ ಈರ್ವರು ಯುವಕರ ವಿರುದ್ದ ಕುಂದಾಪುರ, ಗಂಗೊಳ್ಳಿ, ಶಂಕರನಾರಾಯಣ ಸೇರಿದಂತೆ ಇತರೆ ಠಾಣೆಗಳಲ್ಲಿ ದೂರು ನೀಡಿದ್ದಾರೆ. ರಂಜಿತ್ ರಂಜು ಶೆಟ್ಟಿ ಹಾಗೂ ವಿಕ್ರಮ್ ಎಂ. ಕುಂದಾಪುರ ಎಂಬ ಯುವಕರು ಫೇಸ್ಬುಕ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಬಗ್ಗೆ ಅವಹೇಳನಕಾರಿ ಮಾತನಾಡಿದ್ದಾರೆ ಎಂದು ಆರೋಪಿಸಿರುವ ದಲಿತ ಸಂಘಟನೆಯ ಪ್ರಮುಖರು ಠಾಣೆಯಲ್ಲಿ ದೂರು ನೀಡಿದ್ದು ಆಪಾದಿತರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಅಸಹಾಯಕರ ಹಾಗೂ ಅಶಕ್ತರ ನೆರವಿಗಾಗಿ ಬಡಗಿನ ಸುಪ್ರಸಿದ್ಧ ಕಲಾವಿದರ ಕೂಡುವಿಕೆಯೊಂದಿಗೆ ಮಳೆಗಾಲದ ಕೊನೆಯ ಯಕ್ಷಗಾನ ಪ್ರದರ್ಶನ ಕಾರ್ಯಕ್ರಮದ ಸಮಾರಂಭ ತ್ರಾಸಿ ಆಣ್ಣಪ್ಪಯ್ಯ ಸಭಾಭವನದಲ್ಲಿ ಜರಗಿತು. ಬಿಜೆಪಿ ಮುಖಂಡ ಸುಕುಮಾರ್ ಶೆಟ್ಟಿ ಅಧ್ಯಕ್ಚತೆ ವಹಿಸಿ ಮಾತನಾಡಿ ಅಸಹಾಯಕರ ಹಾಗೂ ಅಶಕ್ತರ ನೆರವಾಗುವ ನಿಟ್ಟಿನಲ್ಲಿ ಸಮಾಜಮುಖಿ ಕಾರ್ಯದಲ್ಲಿ ತೊಡಗಿಸಿಕೊಂಡಿರುವ ತ್ರಾಸಿ ರವಿಶೆಟ್ಟಿಗಾರ್ ಬಳಗದವರ ಸಮಾಜ ಸೇವೆಯನ್ನು ಅಭಿನಂದಿಸಿದರು. ತಾ.ಪಂ. ಸದಸ್ಯ ರಾಜು ದೇವಾಡಿಗ ಮಾತನಾಡಿ ತಮ್ಮ ತಮ್ಮ ಪ್ರದೇಶಗಳಲ್ಲಿ ಸಕ್ರಿಯಾರಾಗಿರುವ ಸಂಘಟನೆಗಳಿಂದ ಸಮಾಜದಲ್ಲಿ ಆರ್ಥಿಕವಾಗಿ ಹಿಂದುಳಿಂದ ಬಡ ಜನರಿಗೆ ನೆರವಾಗುವ ಮೂಲಕ ದೇಶದ ಪ್ರಗತಿಗೆ ಕಾರಣೀಭೂತರಾಗುತ್ತಿದ್ದಾರೆ ಎಂದು ಸಂಘದ ಕಾರ್ಯವನ್ನು ಶ್ಲಾಘಿಸಿದರು. ಈ ಸಂದರ್ಭದಲ್ಲಿ ಹೇರೂರು ಯಕ್ಷಗಾನ ಮೇಳದ ಭಾಗವತ ಗಾನಕೋಗಿಲೆ ಎಂದು ಪ್ರಸಿದ್ಧಿ ಪಡೆದಿರುವ ರಾಘವೇಂದ್ರ ಆಚಾರ್ಯ ಅವರನ್ನು ಗೌರವಿಸಿ ಸಮ್ಮಾನಿಸಲಾಯಿತು. ತ್ರಾಸಿ ಗ್ರಾಮ ಪಂ. ಸದಸ್ಯ ಸುಧಾಕರ ಆಚಾರ್ಯ, ಹೊಸಾಡು ಗ್ರಾಮ ಪಂ.ಅಧ್ಯಕ್ಷ ಚಂದ್ರ ಪೂಜಾರಿ, ನಾರಾಯಣ ಕೆ., ರವಿಶೆಟ್ಟಿಗಾರ್, ಕೇಶವ ಶೆಟ್ಟಿಗಾರ್ ಉಪಸ್ಥಿತರಿದ್ದರು.…
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಕುರುಕ್ಷೇತ್ರವೆಂದರೆ ನಮ್ಮ ಮನಸ್ಸಿನಲ್ಲಿ ಅಂತರಂಗದಲ್ಲಿಯೇ ನಡೆಯುವ ಧರ್ಮ ಮತ್ತು ಅಧರ್ಮಗಳ ನಡುವಿನ ತಾಕಲಾಟ, ಗೊಂದಲ. ಎಲ್ಲಾ ಧರ್ಮಗಳಿಗಿಂತಲೂ ಮಿಗಿಲಾದದ್ದು ಮಾನವ ಧರ್ಮ. ಎಲ್ಲಾ ಮತಗಳ ಸಾರವೂ ಅದೇ ಆಗಿದೆ ಎಂದು ಖ್ಯಾತ ಚಿಂತಕ ಡಾ. ರಾಜಾರಾಮ್ ಹೇಳಿದರು. ಇಲ್ಲಿನ ಸತ್ಯ ಸಾಯಿ ಸೇವಾ ಟ್ರಸ್ಟ್ ಮತ್ತು ಶ್ರೀಮದ್ ಭಗವದ್ಗೀತಾ ಜಯಂತಿ ಆಚರಣಾ ಸಮಿತಿ, ಬೈಂದೂರು ಇವರ ಜಂಟಿ ಆಶ್ರಯದಲ್ಲಿ ನಡೆದ ಭಗವದ್ಗೀತಾ ಅಭಿಯಾನ ಕಾರ್ಯಕ್ರಮದಲ್ಲಿ ಧಾರ್ಮಿಕ ಪ್ರವಚನ ನೀಡುತ್ತಾ ಮಾತನಾಡಿದರು. ಮನುಷ್ಯನ ಪ್ರವೃತ್ತಿಗಳಾದ ಕಾಮ, ಕ್ರೋಧ, ಮದ, ಮತ್ಸರ, ಮೋಹ ಇವುಗಳು ಹುಟ್ಟುವಾಗಲೇ ಬಂದಿರುತ್ತದೆ. ಇದನ್ನು ಸಾತ್ವಿಕ ರಾಜಸ, ತಾಮಸ ಎಂದು ಮೂರು ವಿಭಾಗಗಳನ್ನಾಗಿ ಮಾಡಲಾಗಿದೆ. ರಾಜಸ- ಮನುಷ್ಯರು, ತಾಮಸ-ರಾಕ್ಷಸರು, ಸಾತ್ವಿಕ-ದೇವತೆಗಳೆಂದು ಕಲ್ಪಿಸಿಕೊಂಡು ತಮಸ್ಸಿನಿಂದ ರಜಸ್ಸಿಗೂ, ರಜಸ್ಸಿನಿಂದ ಸಾತ್ವಿಕತೆಗೂ ಪ್ರಯತ್ನ ಪೂರ್ವಕ ಸಾಗುವ ಅಭ್ಯಾಸ ಮಾಡಿಕೊಂಡರೆ ಸಾತ್ವಿಕತೆ ನಿಜವಾದ ಧರ್ಮ ಸಂಪತ್ತಾಗಿ ಲೋಕವನ್ನು ಸಲಹುತ್ತದೆ ಎಂದರು. ಶ್ರೀಮದ್ಭಗವದ್ಗೀತಾ ಜಯಂತಿ ಆಚರಣಾ ಸಮಿತಿ ಅಧ್ಯಕ್ಷ ಬಿ.…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ರೋಟರಿ ಕ್ಲಬ್ ಕುಂದಾಪುರ ಸನ್ರೈಸ್ ವತಿಯಿಂದ ಬಸ್ರೂರು ಸರಕಾರಿ ಪ್ರೌಢಶಾಲೆಗೆ ದಾನಿಗಳ ಸಹಕಾರದೊಂದಿಗೆ ಇ-ಲರ್ನಿಂಗ್ ಕಿಟ್ನ್ನು ಕೊಡುಗೆಯಾಗಿ ನೀಡಲಾಯಿತು. ರೋಟರಿ ಲಿಟ್ರಸಿ ಮೆಷಿನ್ ಯೋಜನೆಯಡಿ ಇ-ಲರ್ನಿಂಗ್ ಕಿಟ್ನ್ನು ರೋಟರಿ ಕ್ಲಬ್ ಕುಂದಾಪುರ ಸನ್ರೈಸ್ ಅಧ್ಯಕ್ಷರಾದ ಕೆ. ನರಸಿಂಹ ಹೊಳ್ಳ ಅವರು ಬಸ್ರೂರು ಸರಕಾರಿ ಪ್ರೌಢಶಾಲೆಯ ಮುಖ್ಯೋಪಧ್ಯಾಯಿನಿ ಜ್ಯೋತಿ ಬಿ ಅವರಿಗೆ ಹಸ್ತಾಂತರಿಸಿದರು. ರೋಟರಿ ಕ್ಲಬ್ ಕುಂದಾಪುರ ಸನ್ರೈಸ್ ಸದಸ್ಯರಾದ ಸೀತಾರಾಮ, ಸಿ.ಹೆಚ್. ಗಣೇಶ, ಅರುಣಚಂದ್ರ ಕೊತ್ವಾಲ್, ಸದಾನಂದ ಉಡುಪ, ಶಾಲಾ ಶಿಕ್ಷಕರಾದ ಅರ್ಪಣಾ ಬಾ, ಪಿಯುಸ್ ಡಿ’ಸೋಜಾ, ಬೀರಣ್ಣ ಗಾಂವ್ಕರ್, ಸುರೇಶ್ ಭಟ್, ಶೇಖರ ಪೂಜಾರಿ, ಪ್ರಕಾಶ್, ಜಯಲಕ್ಷ್ಮೀ ನಾಯಕ್, ಸವಿತಾ ಕೆ, ಕುಸುಮಾ, ಪುಷ್ಪ ಮಡಿವಾಳ ಇನ್ನಿತರರು ಉಪಸ್ಥಿತರಿದ್ದರು. ಶಿಕ್ಷಕ ಪ್ರಶಾಂತ ವಂದಿಸಿದರು.
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಬೈಂದೂರು ಇದರ ವಾಣಿಜ್ಯ ಮತ್ತು ನಿರ್ವಹಣಾ ವಿಭಾಗದ ವತಿಯಿಂದ ವಿದ್ಯಾರ್ಥಿಗಳಿಗೆ ಬ್ಯಾಂಕಿಂಗ್ ಕ್ಷೇತ್ರದ ಹೊಸ ಆವಿಷ್ಕಾರ ಬಗ್ಗೆ ತರಬೇತಿ ಕಾರ್ಯಗಾರವನ್ನು ಹಮ್ಮಿಕೊಳ್ಳಲಾಯಿತು. ಮಾಂಟೆಕ್ಶರ್ ಮತ್ತು ಉದ್ಮಾ ಟೆಕ್ನಾಲಜೀಸ್ ಇದರ ಐಟಿ ವಿಭಾಗದ ಮುಖ್ಯಸ್ಥರಾದ ಶಿವ ಪ್ರಸಾದ ಕೆ. ತರಬೇತಿ ನೀಡಿದರು. ವಾಣಿಜ್ಯ ವಿಭಾಗದ ಮುಖ್ಯಸ್ಥರಾದ ಡಾ.ಉಮೇಶ್ ಮಯ್ಯ ಕಾರ್ಯಕ್ರಮ ಸಂಘಟಿಸಿದರು.
