ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ತಾಲೂಕಿನ ಜಡ್ಕಲ್ ಗ್ರಾಮದ ಮೆಕ್ಕೆ ನಿವಾಸಿ ಭಾಸ್ಕರ ಪೂಜಾರಿ (38) ಎಂಬುವವರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ವರದಿಯಾಗಿದೆ.
ಭಾಸ್ಕರ್ ಪೂಜಾರಿ ಮದುವೆಯಾಗಿ ಹನ್ನೆರಡು ವರ್ಷವಾಗಿದ್ದು ಇಬ್ಬರು ಮಕ್ಕಳಿದ್ದರು. ಕಳೆದ ಐದಾರು ವರ್ಷಗಳಿಂದ ದಂಪತಿಗಳು ಬೇರೆಯಾಗಿ ವಾಸಿಸುತ್ತಿದ್ದರು. ತನ್ನ ಸಾವಿಗೆ ತಾನೇ ಕಾರಣ ಎಂದು ಮೃತ ಭಾಸ್ಕರ್ ಪೂಜಾರಿ ಡೆತ್‌ನೋಟ್‌ನಲ್ಲಿ ಬರೆದಿಟ್ಟಿದ್ದರೂ, ಕೌಟುಂಬಿಕ ಸ್ಥಿತಿಯ ಬಗ್ಗೆಗಿದ್ದ ಅಸಮಧಾನವೇ ಸಾವಿಗೆ ದವಡೆ ತಂದು ನಿಲ್ಲಿಸಿತ್ತು ಎಂದು ಸ್ಥಳೀಯರು ಮಾತನಾಡಿಕೊಳ್ಳುತ್ತಿದ್ದಾರೆ. ಬರೆಯಲು ಬಾರದ ವ್ಯಕ್ತಿ ಡೆತ್‌ನೋಟ್ ಬರೆದಿಡಲು ಹೇಗೆ ಸಾಧ್ಯ. ಇದೊಂದು ಕೊಲೆಯೇ ಆಗಿರಬಹುದು ಎಂಬ ಶಂಕೆಯೂ ವ್ಯಕ್ತವಾಗಿದೆ. ಕೊಲ್ಲೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಕೆ ಕೈಗೆತ್ತಿಕೊಂಡಿದ್ದಾರೆ.