ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ರಾಜ್ಯದ ನಿಗಮ-ಮಂಡಳಿಗಳಿಗೆ ಅಧ್ಯಕರನ್ನು ನೇಮಕ ಮಾಡಿ ತಕ್ಷಣದಿಂದ ಜಾರಿಗೆ ಬರುವಂತೆ ರಾಜ್ಯ ಸರ್ಕಾರ ಆದೇಶ ಹೊರಡಿಸಿದ್ದು, ಬೈಂದೂರು ಶಾಸಕ ಕೆ. ಗೋಪಾಲ ಪೂಜಾರಿ ಅವರು ಕರ್ನಾಟಕ ಅರಣ್ಯ ಅಭಿವೃದ್ಧಿ ನಿಗಮ ನಿಯಮಿತ ಅಧ್ಯಕ್ಷರಾಗಿ ನೇಮಕಗೊಂಡಿದ್ದಾರೆ. ನಾಲ್ಕನೇ ಭಾರಿಗೆ ಬೈಂದೂರು ಕ್ಷೇತ್ರದ ಶಾಸಕರಾಗಿ ಆಯ್ಕೆಗೊಂಡಿದ್ದ ಗೋಪಾಲ ಪೂಜಾರಿ ಅವರಿಗೆ ಹಿರಿತನದ ಆಧಾರದಲ್ಲಿ ಕಾಂಗ್ರೆಸ್ ಸರಕಾರದಲ್ಲಿ ಸಚಿವರಾಗುವ ಅವಕಾಶವಿದ್ದರೂ ಕಾರಣಾಂತರದಿಂದ ಅದು ಕೈತಪ್ಪಿ ಹೋಗಿತ್ತು. ಈಗ ನಿಗಮ ಮಂಡಳಿ ಅಧ್ಯಕ್ಷರನ್ನಾಗಿ ನೇಮಿಸಿರುವುದು ಸಹಜವಾಗಿ ಅವರ ಅಭಿಮಾನಿಗಳಲ್ಲಿ ಸಂತಸವನ್ನುಂಟುಮಾಡಿದೆ. ನಿಗಮ ಮಂಡಳಿಯ ಪಟ್ಟಿಯಲ್ಲಿ 21 ಶಾಸಕರು ಸ್ಥಾನ ಪಡೆದಿದ್ದು, 70 ಕಾರ್ಯಕರ್ತರು ಮತ್ತು ಮುಖಂಡರಿಗೆ ಅಧ್ಯಕ್ಷ ಸ್ಥಾನ ಲಭಿಸಿದೆ. ಅಧಿಕಾರ ವಹಿಸಿಕೊಂಡ ದಿನದಿಂದ ಜಾರಿಗೆ ಬರುವಂತೆ ಅಧ್ಯಕ್ಷರಿಗೆ ಸಂಪುಟ ದರ್ಜೆ ಸಚಿವರ ಸ್ಥಾನಮಾನ ನೀಡಲಾಗಿದೆ. ಅಧ್ಯಕ್ಷ ಸ್ಥಾನ ಪಡೆದಿರುವ ಶಾಸಕರ ಪಟ್ಟಿ * ಕೆ.ಗೋಪಾಲ ಪೂಜಾರಿ, ಕರ್ನಾಟಕ ಅರಣ್ಯ ಅಭಿವೃದ್ಧಿ ನಿಗಮ ನಿಯಮಿತ * ಕೆ.ವಸಂತ ಬಂಗೇರ, ಕರ್ನಾಟಕ ರಾಜ್ಯ ಸಣ್ಣ…
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಹಿರಿಯ ನ್ಯಾಯವಾದಿ, ಕರ್ನಾಟಕ ಪ್ರದೇಶ ಕಾಂಗ್ರೇಸ್ ಸಮಿತಿ ಕಾರ್ಯದರ್ಶಿ ಶ್ಯಾಮಲ ಭಂಡಾರಿ ರಾಜ್ಯ ಮಹಿಳಾ ಆಯೋಗದ ತನ್ನ ಸದಸ್ಯೆ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಮಹಿಳಾ ಆಯೋಗದ ಅಧ್ಯಕ್ಷೆ ಮಂಜುಳಾ ಮಾನಸರವರ ಅಧಿಕಾರಾವಧಿ ಇನ್ನೂ ೮ ತಿಂಗಳು ಬಾಕಿ ಇರುವ ಸಂದರ್ಭದಲ್ಲಿ ಸಕಾರಣವಿಲ್ಲದೆ ಏಕಾಏಕಿ ರಾಜೀನಾಮೆ ಪಡೆದಿರುವುದನ್ನು ಪ್ರತಿಭಟಿಸಿ ಈ ಘಟನೆಯಿಂದ ಮನನೊಂದು ತಾನು ತನ್ನ ಆಯೋಗದ ಸದಸ್ಯೆ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿರುವುದಾಗಿ ಭಂಡಾರಿ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಮಹಿಳೆಯರ ಮೇಲಾಗುವ ದೌರ್ಜನ್ಯ ತಡೆಗಟ್ಟುವುದು, ಅವರಿಗೆ ರಕ್ಷಣೆ ಒದಗಿಸುವುದು, ಸಮಾನತೆ ಕಲ್ಪಿಸುವುದು ಮತ್ತು ಅವರು ಗೌರವಯುತವಾಗಿ ಬದುಕುವ ಸನ್ನಿವೇಶ ನಿರ್ಮಿಸುವುದು ಮಹಿಳಾ ಆಯೋಗದ ಕಾರ್ಯವಾಗಿರುತ್ತದೆ. ಆದರೆ ಮಹಿಳಾ ಆಯೋಗದೊಳಗಿನ ಪ್ರಸಕ್ತ ಸನ್ನಿವೇಶ ನೋವು ತಂದಿದೆ ಎಂದು ಅವರು ವಿವರಿಸಿದ್ದಾರೆ. ಮಹಿಳಾ ಆಯೋಗದ ಸದಸ್ಯೆಯಾಗಿ ನೇಮಕಗೊಂಡ ನಂತರ ಅಂದರೆ ಕಳೆದ ೨ ವರ್ಷಗಳಿಂದ ಸಕ್ರೀಯವಾಗಿ ಆಯೋಗದ ಕೆಲಸಗಳಲ್ಲಿ ತೊಡಗಿಸಿಕೊಂಡಿರುವ ತಾನು ಅದೇ ಸಮಯದಲ್ಲಿ ಕಾಂಗ್ರೆಸ್ ಪಕ್ಷದ ರಾಜ್ಯ ಕಾರ್ಯದರ್ಶಿಯಾಗಿದ್ದರು…
ಕುಂದಾಪ್ರ ಡಾಟ್ ಕಾಂ ಸುದ್ದಿ. ಹಂಪಿ: ಹೆಲಿಕ್ಯಾಪ್ಟರ್ ಮೂಲಕ ಆಗಸದಿಂದ ಹಂಪಿ ಸ್ಮಾರಕಗಳನ್ನು ವೀಕ್ಷಿಸುವ ಹಂಪಿ ಬೈ ಸ್ಕೈ (ಆಗಸದಿಂದ ಹಂಪಿ) ಕಾರ್ಯಕ್ರಮಕ್ಕೆ ಮಂಗಳವಾರ ಅಧಿಕೃತ ಚಾಲನೆ ದೊರೆತಿದೆ. ಸಸಿಗೆ ನೀರು ಹಾಕಿ ಪಾರಿವಾಳಗಳನ್ನು ಹಾರಿಬಿಡುವ ಮೂಲಕ ಬಳ್ಳಾರಿ ನಗರ ವಿಧಾನ ಸಭಾ ಕ್ಷೇತ್ರದ ಶಾಸಕ ಅನಿಲ್ ಲಾಡ್ ಚಾಲನೆ ನೀಡಿದರು. ಹಂಪಿ ಬೈಸ್ಕೈಗೆ ಮೊದಲ ದಿನವೆ ಅಭೂತಪೂರ್ವ ಪ್ರತಿಕ್ರಿಯೆ ವ್ಯಕ್ತವಾಗಿದ್ದು ನೂರಕ್ಕೂ ಅಧಿಕ ಜನ ಹಂಪಿ ಸ್ಮಾರಕಗಳ ವೀಕ್ಷಣೆ ಮಾಡಿದರು. ಒಟ್ಟು ಮೂರು ಹೆಲಿಕ್ಯಾಪ್ಟರ್‌ಗಳು ಹಾರಾಟ ನಡೆಸಲಿದ್ದು, ಏಳು ನಿಮಿಷಗಳ ವೀಕ್ಷಣೆಗೆ ಸಾವಿರದ ಒಂಭತ್ತುನೂರು ರೂ ಮತ್ತು ಹತ್ತು ನಿಮಿಷಗಳ ವೀಕ್ಷಣೆಗೆ ಎರಡು ಸಾವಿರದ ಆರುನೂರು ರೂಗಳನ್ನು ನಿಗದಿಪಡಿಸಲಾಗಿದೆ. ನ.೧ರಿಂದ ನ.೭ರ ವರೆಗೆ ಏಳು ದಿನಗಳ ಕಾಲ ಬೆಳಗ್ಗೆ ೮:೩೦ರಿಂದ ಸಂಜೆ ೫:೩೦ರ ವರೆಗೆ ಹಾರಾಟ ನಡೆಸಲಿವೆ.
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಗೋಳಿಹೊಳೆ ಗ್ರಾಪಂ ವ್ಯಾಪ್ತಿಯ ಶ್ರೀ ವಿನಾಯಕ ಆಟೋರಿಕ್ಷಾ, ಗೂಡ್ಸ್, ಟೆಂಪೋ ಮತ್ತು ಟ್ಯಾಕ್ಸಿ ಚಾಲಕ ಮಾಲಕರ ಸಂಘದ ಮೂರನೇ ವರ್ಷದ ವಾರ್ಷಿಕ ಮಹಾಸಭೆ ಹಾಗೂ ಕನ್ನಡ ರಾಜ್ಯೋತ್ಸವ ಸಮಾರಂಭವನ್ನು ಕೊಲ್ಲೂರು ದೇವಳದ ಮಾಜಿ ಆಡಳಿತ ಧರ್ಮದರ್ಶಿ ಬಿ. ಎಂ. ಸುಕುಮಾರ್ ಶೆಟ್ಟಿ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ಸಂಘಟನೆಯಿಂದ ಜನಜಾಗೃತಿ, ಆರ್ಥಿಕ ಸ್ಥಿತಿ ಮತ್ತು ಸಮಾಜ ಸುಧಾರಣೆ ಸಾಧ್ಯವಾಗುತ್ತದೆ. ಸಂಘಟನೆಯ ಸದಸ್ಯರ ಏಳಿಗೆಗಾಗಿ ಮತ್ತು ಆರ್ಥಿಕ ಪರಿಸ್ಥಿತಿಯ ಸುಧಾರಣೆಗಾಗಿ ಕೆಲವು ಯೋಜನೆಗಳನ್ನು ಹಾಕಿಕೊಳ್ಳುವ ಕುರಿತು ಚಿಂತನೆ ಮಾಡುವ ಅಗತ್ಯವಿದೆ. ತಮ್ಮ ಜೀವನ ನಿರ್ವಹಣೆಗಾಗಿ ಸೇವಾ ಮನೋಭಾವದಿಂದ ಪ್ರಾಮಾಣಿಕರಾಗಿ ಹೋರಾಟ ಮಾಡುವ ಟ್ಯಾಕ್ಸಿ, ರಿಕ್ಷಾ ಚಾಲಕರು ಸಮಾಜದ ಅವಿಭಾಜ್ಯ ಅಂಗವಾಗಿದ್ದು ಸಾಮಾಜಿಕ ಕಳಕಳಿಯನ್ನು ಹೊಂದಿರುವುದರ ಜತೆಗೆ ಊರಿನ ಅಭಿವೃದ್ಧಿಯಲ್ಲಿಯೂ ತೊಡಗಿಸಿಕೊಳ್ಳುವುದನ್ನು ಕಾಣುತ್ತಿದ್ದೇವೆ ಎಂದರು. ಜಿಪಂ ಮಾಜಿ ಅಧ್ಯಕ್ಷ ಎಸ್. ರಾಜು ಪೂಜಾರಿ ಅಧ್ಯಕ್ಷತೆವಹಿಸಿದ್ದರು. ಉಡುಪಿ ಮಾಜಿ ಶಾಸಕ ಹಾಗೂ ಜಿಲ್ಲಾ ಟ್ಯಾಕ್ಸಿ ಎಸೋಸಿಯೇಶನ್ ಅಧ್ಯಕ್ಷ ಕೆ.…
ರಾಜ್ಯೋತ್ಸವ ಯಕ್ಷಗಾನ ತಾಳಮದ್ದಳೆ-೪೦ ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ನವೆಂಬರ್ ೧ರಂದು ಇಲ್ಲಿನ ಭಂಡಾರ್ಕಾರ್ಸ್ ಕಾಲೇಜಿನಲ್ಲಿ ರಾಜ್ಯೋತ್ಸವ ಯಕ್ಷಗಾನ ತಾಳಮದ್ದಳೆ-೪೦ರಸಂಭ್ರಮ ಕಾರ್ಯಕ್ರಮದಲ್ಲಿ ಮಣಿಪಾಲದ ಅಕಾಡೆಮಿ ಆಫ್ ಜನರ್ಲ್ ಎಜುಕೇಶನ್ ಇದರ ಆಡಳಿತಾಧಿಕಾರಿಗಳಾದ ಡಾ.ಹೆಚ್.ಶಾಂತಾರಾಮ್ ಅವರು ಬಡಗು ಹಾಗೂ ತೆಂಕುತಿಟ್ಟು ಸವ್ಯಸಾಚಿ ಚಂಡೆವಾದಕ ಶಿವಾನಂದ ಕೋಟ ಇವರಿಗೆ ಡಾ.ಹೆಚ್.ಶಾಂತಾರಾಮ್ ಯಕ್ಷಗಾನ ಪುರಸ್ಕಾರವನ್ನು ನೀಡಿ ಸನ್ಮಾನಿಸಿದರು. ಬಳಿಕ ಮಾತನಾಡಿದ ಡಾ. ಹೆಚ್. ಶಾಂತಾರಾಮ್ ಕರ್ನಾಟಕ ರಾಜ್ಯೋತ್ಸವವನ್ನು ಅರ್ಥಪೂರ್ಣವಾಗಿ ಆಚರಿಸಬೇಕೆಂಬ ಉದ್ದೇಶದಿಂದ ಕರಾವಳಿಯ ಹೆಮ್ಮೆಯ ಕಲೆ ಯಕ್ಷಗಾನ ತಾಳಮದ್ದಳೆಯನ್ನು ಆರಭಿಸಲಾಯಿತು. ಅಲ್ಲದೇ ಯುವಜನತೆಗೆ ಯಕ್ಷಗಾನ ಕಲೆಯ ವಿಶಿಷ್ಠತೆಯನ್ನು ತಿಳಿಸುವುದು ಇದರ ಉದ್ದೇಶವಾಗಿದೆ. ಅಹೋರಾತ್ರಿ ನಡೆಯುತ್ತಿದ್ದ ಈ ಕಾರ್ಯಕ್ರಮ ನಂತರದ ದಿನಗಳಲ್ಲಿ ಮಧ್ಯಾಹ್ನದಿಂದ ಸಂಜೆಯವರೆಗೆ ಮಾತ್ರ ನಡೆಯುತ್ತಿತ್ತು. ನಂತರ ಯಕ್ಷಗಾನಕ್ಕೆ ಹೊಸ ಆಯಾಮಗಳನ್ನು ಕೊಡಬೇಕು ಎಂಬ ಉದ್ದೇಶದಿಂದ ಯುವ ಯಕ್ಷಗಾನ ಕಲಾವಿದರನ್ನು ಬೆಳೆಸಬೇಕೆಂಬ ಅಭಿಲಾಷೆಯಿಂದ ಯಕ್ಷಗಾನ ಪುರಸ್ಕಾರವನ್ನು ನೀಡಲು ಆರಂಭಿಸಲಾಯಿತು. ಪುರಸ್ಕಾರವನ್ನು ನೀಡುವುದರೊಂದಿಗೆ ಯಕ್ಷಗಾನವನ್ನು ಇನ್ನೂ ಮುತುವರ್ಜಿಯಿಂದ ಉಳಿಸಿ ಬೆಳೆಯಬೇಕು. ಪಡೆದವರ ಮೂಲಕ ಕಲೆ ಬೆಳೆಯಬೇಖು.…
ಕುಂದಾಪ್ರ ಡಾಟ್ ಕಾಂ ಸುದ್ದಿ. ಗಂಗೊಳ್ಳಿ: ಕನ್ನಡ ಭಾಷೆಯ ಬಗೆಗೆ ನಿಜವಾದ ಅಭಿಮಾನ ಕಾಳಜಿ ಪ್ರತಿಯೊಬ್ಬ ಕನ್ನಡಿಗನಲ್ಲೂ ಮೂಡಿಬರಬೇಕು. ನಮ್ಮ ಎಲ್ಲಾ ಸಂಭ್ರಮಾಚರಣೆಯ ಜೊತೆಯಲ್ಲಿ ದೇಶ ಕಾಯುವ ಸೈನಿಕರನ್ನು ಸ್ಮರಿಸಿಕೊಳ್ಳಬೇಕು. ಎ೦ದು ಗ೦ಗೊಳ್ಳಿಯ ಸರಸ್ವತಿ ವಿದ್ಯಾಲಯ ಹಿರಿಯ ಪ್ರಾಥಮಿಕ ಶಾಲೆಯ ದೈಹಿಕ ಶಿಕ್ಷಕ ನಾರಾಯಣ ಶೆಟ್ಟಿ ಅಭಿಪ್ರಾಯ ಪಟ್ಟರು. ಅವರು ಕರ್ನಾಟಕ ಕರಾವಳಿ ನಾಗರಿಕ ಹಿತರಕ್ಷಣಾ ವೇದಿಕೆಯ ಗಂಗೊಳ್ಳಿ ಘಟಕ ಮತ್ತು ಬೆಂಗಳೂರು ಹೋಟೆಲ್ ನ್ಯೂಸ್ ಪತ್ರಿಕೆಯು ಇಲ್ಲಿ ಹಮ್ಮಿಕೊ೦ಡಿದ್ದ ಕನ್ನಡ ರಾಜ್ಯೋತ್ಸವ ಕಾರ‍್ಯಕ್ರಮದಲ್ಲಿ ಧ್ವಜಾರೋಹಣವನ್ನು ನೆರವೇರಿಸಿ ಅವರು ಮಾತನಾಡಿದರು. ಸರಸ್ವತಿ ವಿದ್ಯಾಲಯ ಪದವಿಪೂರ್ವ ಕಾಲೇಜಿನ ವಾಣಿಜ್ಯಶಾಸ್ತ್ರ ಉಪನ್ಯಾಸಕರಾದ ನರೇಂದ್ರ ಎಸ್ ಗ೦ಗೊಳ್ಳಿ ಮಾತನಾಡಿ ಮಾತೃಬಾಷೆ ಮೂಲಕ ಕಲಿತ ವಿದ್ಯೆ ನೇರವಾಗಿ ಹೃದಯದೊಳಕ್ಕೆ ಇಳಿಯುತ್ತದೆ. ಕನ್ನಡ ಮಧ್ಯಮದ ಮಕ್ಕಳು ತಮ್ಮೊಳಗೆ ಯಾವ ಕೀಳರಿಮೆಯನ್ನು ಇಟ್ಟುಕೊಳ್ಳಬಾರದು. ಸಾಧನೆಯೆ ಮುಖ್ಯವಾಗಬೇಕು ಎಂದರು. ವೇದಿಕೆಯ ಜಿಲ್ಲಾ ಘಟಕದ ಅಧ್ಯಕ್ಷರಾದ ಜಿ.ಕೆ. ವೆಂಕಟೇಶ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಸುರೇಶ.ಜಿ. ಕಾರ‍್ಯಕ್ರಮ ನಿರ್ವಹಿಸಿದರು.ಈ ಸಂದರ್ಭದಲ್ಲಿ ಗಣೇಶ, ಆನ೦ದ, ನಾಗರಾಜ, ರಾಮಚಂದ್ರ,…
ಕುಂದಾಪುರದಲ್ಲಿ ಕನ್ನಡ ರಾಜ್ಯೋತ್ಸವ ದಿನಾಚರಣೆ ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಕನ್ನಡಿಗರು ತಂಬಾ ಭಾವೈಖ್ಯತೆ ಉಳ್ಳವರಾಗಿದ್ದು, ದೇಶದಲ್ಲಷ್ಟೇ ಅಲ್ಲದೆ ವಿದೇಶದಲ್ಲಿ ಕನ್ನಡಿಗರು ಭಾವನಾತ್ಮಕ ಬೆಸುಗೆ ಮೂಲಕ ಕನ್ನಡದ ಕಂಪು ವಿಸ್ತರಿಸಿದ್ದು, ಪ್ರತಿಭಾವಂತರು ಎನ್ನುವ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಹಲವಾರು ಮಹನೀಯರ ಹೋರಾಟ ಫಲ ಮೈಸೂರು, ಕರ್ನಾಟಕ ರಾಜ್ಯವಾಗಿ ಮರು ನಾಮಕರಣ ಗೊಂಡಿತು. ಹಲವಾರು ಕ್ಷೇತ್ರದಲ್ಲಿ ರಾಜ್ಯ ಪ್ರಗತಿ ಕಂಡಿದ್ದರೂ, ಇನ್ನಷ್ಟು ಪ್ರಗತಿ ಸಾಧಿಸಲು ಕನ್ನಡಿಗರು ಕೈಜೋಡಿಸಬೇಕಿದೆ ಎಂದು ಕುಂದಾಪುರ ಉಪವಿಭಾಗಾಧಿಕಾರಿ ಅಶ್ವಥಿ ಎಸ್ ಹೇಳಿದರು. ಕುಂದಾಪುರ ತಾಲೂಕು ಪಂಚಾಯತ್, ತಾಲೂಕು ಆಡಳಿತ ಹಾಗೂ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಆಶ್ರಯದಲ್ಲಿ ಕುಂದಾಪುರ ಗಾಂಧಿ ಮೈದಾನದಲ್ಲಿ ಮಂಗಳವಾರ ನಡೆದ ಕನ್ನಡ ರಾಜ್ಯೋತ್ಸವ ದಿನಾಚರಣೆಯಲ್ಲಿ ದ್ವಜಾರೋಹಣ ಮತ್ತು ಗೌರವ ವಂದನೆ ಸ್ವೀಕರಿಸಿ ಮಾತನಾಡುತ್ತಿದ್ದರು. ಎಂಟು ಜನ ಕನ್ನಡ ಸಾಹಿತಿಗಳು ಜ್ಞಾನ ಪೀಠ ಪ್ರಶಸ್ತಿ ಪಡೆಯುವ ಮೂಲಕ ಭಾಷೆ ಹಾಗೂ ಸಾಹಿತ್ಯ ಹಿರಿಮೆ ಎತ್ತಿ ಹಿಡಿದು ಭಾಷೆ ಶ್ರೀಮಂತ ಗೊಳಿಸಿದ್ದು, ರಾಜ್ಯ ಸರಕಾರ ಕೂಡಾ ಭಾಷಾ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ, ನ.1: ಕ್ರಿಯಾಶೀಲ ಯುವ ಛಾಯಾಗ್ರಾಹಕ, ತೆಕ್ಕಟ್ಟೆಯ ವಾಲ್ಮೀಕಿ ಡಿಜಿಟಲ್ಸ್‌ನ ಅಮಿತ್ ತೆಕ್ಕಟ್ಟೆ ಅವರ ನೂತನ ವೆಬ್‌ಸೈಟ್ amiththekkatte.com ಇಂದು ಲೋಕಾರ್ಪಣೆಗೊಂಡಿತು. ಕೋಟೆಶ್ವರದ ಸಹನಾ ಕನ್ವೆಶನ್ ಸೆಂಟರ್‌ನಲ್ಲಿ ಪ್ರೋಕಬ್ಬಡಿಯ ಖ್ಯಾತ ಆಟಗಾರ ರಿಶಾಂಕ ದೇವಾಡಿಗ ಲೋಕಾರ್ಪಣೆಗೊಳಿಸಿ ಮಾತನಾಡಿ ಸ್ಪರ್ಧಾತ್ಮಕ ಯುಗದಲ್ಲಿ ಅಂತರ್ಜಾಲ ಹಾಗೂ ಸಾಮಾಜಿಕ ಜಾಲತಾಣದ ಬಳಕೆ ಅನಿವಾರ್ಯವಾಗಿದ್ದು, ಉದ್ದಿಮೆಯ ಬೆಳವಣಿಗೆಗೂ ಅದು ಸಹಕಾರಿಯಾಗಲಿದೆ ಎಂದರು. ಈ ಸಂದರ್ಭದಲ್ಲಿ ವಾಲ್ಮೀಕಿ ಡಿಜಿಟಲ್ಸ್ ಮಾಲಿಕ ಅಮಿತ್ ತೆಕ್ಕಟ್ಟೆ, ಸಹನಾ ಕನ್ವೆಶನ್ ಸೆಂಟರ್ ಮಾಲಿಕರಾದ ಸುರೇಂದ್ರ ಶೆಟ್ಟಿ, ಬೆಂಗಳೂರು ಉದ್ಯಮಿ ನಿತೀಶ್ ದೇವಾಡಿಗ ಹಾಗೂ ವೆಬ್‌ಸೈಟ್ ವಿನ್ಯಾಸಗೊಳಿಸಿದ ಗೌತಮ ನಾವಡ ಉಪಸ್ಥಿತರಿದ್ದರು. ಕುಂದಾಪ್ರ ಡಾಟ್ ಕಾಂ ಸುದ್ದಿ. [quote font_size=”15″ bgcolor=”#ffffff” bcolor=”#6ed624″ arrow=”yes”]ಛಾಯಾಗ್ರಾಹಕ ಅಮಿತ್ ತೆಕ್ಕಟ್ಟೆ ತನ್ನ ಕ್ರೀಯಾಶೀಲ ಛಾಯಾಗ್ರಹಣದ ಮೂಲಕ ಗುರುತಿಸಿಕೊಂಡವರು. ಕುಂದಾಪುರದಲ್ಲಿ ಪ್ರಥಮ ಭಾರಿಗೆ ಡಿಎಸ್‌ಎಲ್‌ಆರ್ ವೆಡ್ಡಿಂಗ್ ಫಿಲ್ಮ್ಸ್ ಪರಿಚರಿಸಿದ ಖ್ಯಾತಿ ಅವರದ್ದು. ಭಿನ್ನ ಭಿನ್ನ ಪ್ರಯೋಗಗಳ ಮೂಲಕ ಛಾಯಾಗ್ರಹಣ ಕ್ಷೇತ್ರದಲ್ಲಿ ಹೊಸತನವನ್ನು ಹುಡುಕುತ್ತಿರುವ ಅಮಿತ್…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಹೊನ್ನಾವರದಿಂದ ಮಂಗಳೂರು ತೆರಳುತ್ತಿದ್ದ ರಿಡ್ಜ್ ಕಾರು ನಿಯಂತ್ರಣ ತಪ್ಪಿ ಮರವಂತೆ ರಾಷ್ಟ್ರೀಯ ಹೆದ್ದಾರಿ 66 ಬಳಿ ನಿಂತಿದ್ದ ವಾಹನಕ್ಕೆ ಡಿಕ್ಕಿಯಾಗಿ ಚರಂಡಿಗೆ ಉರುಳಿ ಬಿದ್ದ ಘಟನೆ ಮಂಗಳವಾರ ಮಧ್ಯಾಹ್ನ ವರದಿಯಾಗಿದೆ. ಕಾರಿನಲ್ಲಿದ್ದ ಕಿಯೋನಾ ಪಿಂಟೊ (8) ಗಂಭೀರ ಗಾಯಗೊಂಡಿದ್ದರೇ, ಕಾರು ಚಲಾಯಿಸುತ್ತಿದ್ದ ಸನ್ನಿ ಲೆಸಾರ‍್ಡೋ(32), ಅವರ ತಾಯಿ ಸಿಸಿಲಿಯಾ ಲೆಸಾರ‍್ಡೋ(56), ಅಕ್ಕ ಜಾಸ್ಮಿನ್ ಪಿಂಟೋ(36) ಹಾಗೂ ಆಕೆಯ ಮಗು ಕೇಲ್ ಪಿಂಟೋ(4) ಅವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ನ.1ರಂದು ಹುಟ್ಟಹಬ್ಬ ಆಚರಿಸಿಕೊಳ್ಳಬೇಕಿದ್ದ ಬಾಲಕಿ ಕಿಯೋನಾ ಆಸ್ಪತ್ರೆಯಲ್ಲಿ ಗಂಭೀರ ಗಾಯಗೊಂಡು ಮಲಗಿದ್ದಾಳೆ.ಕುಂದಾಪ್ರ ಡಾಟ್ ಕಾಂ. ಮಂಗಳೂರು ನಂದಿಗುಡ್ಡ ನಿವಾಸಿಯಾಗಿರುವ ಸನ್ನಿ ಲೆಸಾರ‍್ಡೋ ಕುವೈತ್‌ನಲ್ಲಿ ಉದ್ಯೋಗಿಯಾಗಿದ್ದು, ಊರಿಗೆ ಬಂದಿದ್ದಾಗ ಕುಟುಂಬಿಕರೊಂದಿಗೆ ಹೊನ್ನಾವರದ ಸಂಬಂಧಿಕರ ಮನೆಗೆ ತೆರಳಿ ಹಿಂತಿರುಗುತ್ತಿದ್ದ ವೇಳೆ ದುರ್ಘಟನೆ ಸಂಭವಿಸಿದೆ. ಮರವಂತೆಯ ಮಾರಸ್ವಾಮಿ ದೇವಸ್ಥಾನದ ಸಮೀಪ ವೇಗವಾಗಿ ಬರುತ್ತಿದ್ದ ವೇಳೆ ನಿಯಂತ್ರಣ ಕಳೆದುಕೊಂಡ ಕಾರು ರಸ್ತೆಯ ಬದಿಯಲ್ಲಿ ನಿಲ್ಲಿಸಲಾಗಿದ್ದ ವಾಹನಕ್ಕೆ ಢಿಕ್ಕಿ ಹೊಡಿದು ಮೂರು ಸುತ್ತು ಉರುಳಿ ಚರಂಡಿಗೆ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ತಾಲೂಕಿನ ರಾಷ್ಟ್ರೀಯ ಹೆದ್ದಾರಿ 66ರ ತ್ರಾಸಿ ಪೆಟ್ರೋಲ್ ಬಂಕ್ ಬಳಿ ಬೈಕ್ ಹಾಗೂ ಟಿಪ್ಪರ್ ನಡುವೆ ಸಂಭವಿಸಿದ ಅಘಫಾತದಲ್ಲಿ ಬೈಕ್ ಸವಾರ ಸ್ಥಳದಲ್ಲಿಯೇ ಮೃತಪಟ್ಟ ಘಟನೆ ವರದಿಯಾಗಿದೆ. ಕುಂದಾಪುರದ ಕುಂದೇಶ್ವರ ದೇವಳದ ಬಳಿಯ ನಿವಾಸಿ ನಾರಾಯಣ ಪೂಜಾರಿ ಅವರ ಪುತ್ರ ರಾಜೇಶ್ ಪೂಜಾರಿ (26) ಮೃತ ದುರ್ದೈವಿ. ಪೋಟೋಗ್ರಾಫರ್ ಆಗಿ ಪಾರ್ಟ್‌ಟೈಮ್ ವೃತ್ತಿ ಮಾಡಿಕೊಂಡಿದ್ದ ರಾಜೇಶ್, ಮಂಗಳವಾರ ಮಧ್ಯಾಹ್ನ ತ್ರಾಸಿಗೆ ತೆರಳುತ್ತಿದ್ದ ವೇಳೆಗೆ ಪೆಟ್ರೋಲ್ ಬಂಕ್ ಕಡೆಯಿಂದ ಒಮ್ಮೆಲೆ ರಸ್ತೆಗೆ ಬಂದ ಟಿಪ್ಪರ್ ಢಿಕ್ಕಿ ಹೊಡಿದಿತ್ತು. ರಾಜೇಶ್ ತಲೆಗೆ ಗಂಭೀರ ಏಟು ತಗಲಿ ಸ್ಥಳದಲ್ಲಿಯೇ ಮೃತಪಟ್ಟಿದ್ದರು. ಆತನ ಸಾವಿನಿಂದ ಕುಟುಂಬ ಆಘಾತದಲ್ಲಿ ಮುಳುಗಿದೆ. ಕುಂದಾಪುರ ಪರಿಸರದಲ್ಲಿ ಎಲ್ಲರೊಂದಿಗೂ ಉತ್ತಮ ಭಾಂದವ್ಯ ಹೊಂದಿದ್ದ ರಾಜೇಶನ ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ಕುಟುಂಬಿಕರು, ಸ್ನೇಹಿತರು, ಛಾಯಾಗ್ರಾಹಕರು ಆಸ್ಪತ್ರೆಯ ತೆರಳಿದ್ದರು. ಮೃತರು ತಂದೆ ನಾರಾಯಣ ಪೂಜಾರಿ ಹಾಗೂ ಈರ್ವರು ಸಹೋದರಿಯರನ್ನು ಅಗಲಿದ್ದಾರೆ. ಗಂಗೊಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. youing photographer…
