ತ್ರಾಸಿ: ಟಿಪ್ಪರ್ ಢಿಕ್ಕಿಯಾಗಿ ಬೈಕ್ ಸವಾರ ಸಾವು

Click Here

Call us

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ತಾಲೂಕಿನ ರಾಷ್ಟ್ರೀಯ ಹೆದ್ದಾರಿ 66ರ ತ್ರಾಸಿ ಪೆಟ್ರೋಲ್ ಬಂಕ್ ಬಳಿ ಬೈಕ್ ಹಾಗೂ ಟಿಪ್ಪರ್ ನಡುವೆ ಸಂಭವಿಸಿದ ಅಘಫಾತದಲ್ಲಿ ಬೈಕ್ ಸವಾರ ಸ್ಥಳದಲ್ಲಿಯೇ ಮೃತಪಟ್ಟ ಘಟನೆ ವರದಿಯಾಗಿದೆ. ಕುಂದಾಪುರದ ಕುಂದೇಶ್ವರ ದೇವಳದ ಬಳಿಯ ನಿವಾಸಿ ನಾರಾಯಣ ಪೂಜಾರಿ ಅವರ ಪುತ್ರ ರಾಜೇಶ್ ಪೂಜಾರಿ (26) ಮೃತ ದುರ್ದೈವಿ.

Call us

Click Here

ಪೋಟೋಗ್ರಾಫರ್ ಆಗಿ ಪಾರ್ಟ್‌ಟೈಮ್ ವೃತ್ತಿ ಮಾಡಿಕೊಂಡಿದ್ದ ರಾಜೇಶ್, ಮಂಗಳವಾರ ಮಧ್ಯಾಹ್ನ ತ್ರಾಸಿಗೆ ತೆರಳುತ್ತಿದ್ದ ವೇಳೆಗೆ ಪೆಟ್ರೋಲ್ ಬಂಕ್ ಕಡೆಯಿಂದ ಒಮ್ಮೆಲೆ ರಸ್ತೆಗೆ ಬಂದ ಟಿಪ್ಪರ್ ಢಿಕ್ಕಿ ಹೊಡಿದಿತ್ತು. ರಾಜೇಶ್ ತಲೆಗೆ ಗಂಭೀರ ಏಟು ತಗಲಿ ಸ್ಥಳದಲ್ಲಿಯೇ ಮೃತಪಟ್ಟಿದ್ದರು.

ಆತನ ಸಾವಿನಿಂದ ಕುಟುಂಬ ಆಘಾತದಲ್ಲಿ ಮುಳುಗಿದೆ. ಕುಂದಾಪುರ ಪರಿಸರದಲ್ಲಿ ಎಲ್ಲರೊಂದಿಗೂ ಉತ್ತಮ ಭಾಂದವ್ಯ ಹೊಂದಿದ್ದ ರಾಜೇಶನ ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ಕುಟುಂಬಿಕರು, ಸ್ನೇಹಿತರು, ಛಾಯಾಗ್ರಾಹಕರು ಆಸ್ಪತ್ರೆಯ ತೆರಳಿದ್ದರು. ಮೃತರು ತಂದೆ ನಾರಾಯಣ ಪೂಜಾರಿ ಹಾಗೂ ಈರ್ವರು ಸಹೋದರಿಯರನ್ನು ಅಗಲಿದ್ದಾರೆ. ಗಂಗೊಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

youing photographer dies as tipper smashes into bike

Leave a Reply