Author: ನ್ಯೂಸ್ ಬ್ಯೂರೋ

ಕುಂದಾಪ್ರ ಡಾಟ್ ಕಾಂ ಸುದ್ದಿ. ಕಾರ್ಕಳ: ಅವಕಾಶಗಳೇ ಭಾಗ್ಯದ ಬಾಗಿಲು, ನಾನು ಕೂಡಾ ಸಿಕ್ಕಿದ ಅವಕಾಶ ಬಳಸಿಕೊಂಡು ರಾಷ್ಟ್ರಪತಿಗಳ ವರೆಗೆ ಹೋಗಲು ಹಿರಿಯ ಆಶೀರ್ವಾದ ಪ್ರೇರಣೆಯೇ ಕಾರಣ ಎಂದು ರಾಷ್ಟ್ರ ಪ್ರಶಸ್ತಿ ವಿಜೇತ ಪ್ರತಿಭೆ ಪಂಚಮಿ ಮಾರೂರು ಹೇಳಿದರು. ಅವರು ಕಾರ್ಕಳದ ಸರ್ಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ ನಡೆದ ಮಿತ್ರ ಮಂಡಳಿ ಕೋಟ ಅರ್ಪಿಸಿದ ಐದು ಜಿಲ್ಲಾ ವ್ಯಾಪ್ತಿಯ 20 ನೇ ಕರಾವಳಿ ವಿದ್ಯಾರ್ಥಿ ಸಾಹಿತ್ಯ ಸಮ್ಮೇಳನವನ್ನು ಸಮ್ಮೇಳಾನಧ್ಯಕ್ಷೆ ಅನುಜ್ಞಾ ಭಟ್ ಅವರನ್ನು ಸನ್ಮಾನಿಸುವ ಮೂಲಕ ಉದ್ಘಾಟಿಸಿ ಮಾತನಾಡುತ್ತಿದ್ದರು. ಮಿತ್ರ ಮಂಡಳಿ, ಕೋಟ, ಮಂಜುನಾಥ ಪೈ ಸ್ಮಾರಕ ಸರಕಾರಿ ಪ್ರಥಮ ದರ್ಜೆ ಪ್ರೊಫೆಶನಲ್ ಮತ್ತು ಬಿಸ್‌ನೆಸ್ ಮ್ಯಾನೇಜ್‌ಮೆಂಟ್ ಕಾಲೇಜು, ಕನ್ನಡ ಸಾಹಿತ್ಯ ಪರಿಷತ್ತು ಉಡುಪಿ ಜಿಲ್ಲೆ, ಕಾರ್ಕಳ ತಾಲೂಕು, ಅಜೆಕಾರು ಹೋಬಳಿ ಘಟಕ ಕಾರ್ಯಕ್ರಮವನ್ನು ಸಂಯುಕ್ತವಾಗಿ ಆಯೋಜಿಸಿದ್ದವು. ವಿದ್ಯಾರ್ಥಿಗಳು ಸಾಹಿತ್ಯ ಮತ್ತು ಸಂಸ್ಕೃತಿಯತ್ತ ವಿಶೇಷ ಒಲವನ್ನು ತೋರಿಸ ಬೇಕು. ಹಳೆಬೇರು ಆಗಿರುವ ಹಿರಿಯರ ಮಾರ್ಗದರ್ಶನದೊಂದಿಗೆ ಬೆಳೆಯುವ ಹೊಸ ಚಿಗುರಾಗಿ ಬೆಳದು ಬೆಳಗ ಬೇಕು ಎಂಧು…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಪುರಾಣ ಪ್ರಸಿದ್ಧ ಬಸ್ರೂರು ಶ್ರೀ ಮಹಾಲಸಾ ನಾರಾಯಣೀ ದೇವಸ್ಥಾನದಲ್ಲಿ ನವರಾತ್ರಿ ಅಂಗವಾಗಿ ಶ್ರೀದೇವಿಯ ಸನ್ನಿಧಿಯಲ್ಲಿ ಇಂದು ಚಂಡಿಕಾ ಹವನ ಜರಗಿತು. ವೇದಮೂರ್ತಿ ದಾಮೋದರ ಆಚಾರ್ಯ ನೇತೃತ್ವದಲ್ಲಿ ಹವನದ ಧಾರ್ಮಿಕ ವಿಧಿವಿಧಾನಗಳು ಜರಗಿದವು. ಮಧ್ಯಾಹ್ನ ಚಂಡಿಕಾ ಹವನದ ಪೂರ್ಣಾಹುತಿ, ಹರಕೆ ಸೀರೆಗಳ ಏಲಂ, ಶ್ರೀದೇವರಿಗೆ ಮಹಾಪೂಜೆ ಬಳಿಕ ಗ್ರಾಮ ಪುರುಷ ದರ್ಶನ ಸೇವೆ ಮತ್ತು ಮಹಾಸಮಾರಾಧನೆ ಸಂಪನ್ನಗೊಂಡಿತು. ದೇವಳದ ಆಡಳಿತ ಮಂಡಳಿ ಸದಸ್ಯರು, ಸೇವಾದಾರರು, ಭಕ್ತರು ಹಾಗೂ ಊರಿನ ಹತ್ತು ಸಮಸ್ತರು ಹವನದ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ಪ್ರಸಾದ ಸ್ವೀಕರಿಸಿದರು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕೊಲ್ಲೂರು: ರಾಜ್ಯದ ಮಾಜಿ ಉಪಮುಖ್ಯಮಂತ್ರಿ ಆರ್. ಅಶೋಕ್ ಪತ್ನಿ ಸಮೇತರಾಗಿ ಶುಕ್ರವಾರ ಕೊಲ್ಲೂರು ಕ್ಷೇತ್ರಕ್ಕೆ ಭೇಟಿನೀಡಿ ಶ್ರೀ ಮೂಕಾಂಬಿಕೆಯ ದರ್ಶನ ಪಡೆದರು. ನಂತರ ದೇವರಿಗೆ ವಿಶೇಷ ಪೂಜೆ ಸಲ್ಲಿಸಿ ಚಂಡಿಕಾಹೋಮ ಸೇವೆ ಮಾಡಿಸಿದರು. ಈ ಸಂದರ್ಭ ಬೆಂಗಳೂರು ದಕ್ಷಿಣ ಕ್ಷೇತ್ರದ ಶಾಸಕ ಕೃಷ್ಣಪ್ಪ ದಂಪತಿಗಳು, ಉಡುಪಿ ಮಾಜಿ ಶಾಸಕ ಕೆ. ರಘುಪತಿ ಭಟ್ ದಂಪತಿಗಳು, ರಾಜ್ಯ ಬಿಜೆಪಿ ಕಾರ್ಯಕಾರಿಣಿ ಸದಸ್ಯ ಬಿ. ಎಂ. ಸುಕುಮಾರ್ ಶೆಟ್ಟಿ, ಕ್ಷೇತ್ರ ಬಿಜೆಪಿ ಯುವಮೋರ್ಚಾ ಪ್ರಧಾನ ಕಾರ್ಯದರ್ಶಿ ಹರೀಶ್ ತೋಳಾರ್ ಕೊಲ್ಲೂರು, ಕ್ಷೇತ್ರ ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾ ಪ್ರಧಾನ ಕಾರ್ಯದರ್ಶಿ ಕೆಂಚನೂರು ರವಿ ಗಾಣಿಗ ಮತ್ತಿತರರು ಜತೆಯಲ್ಲಿದ್ದರು. ದೇವಳದ ಸಹಾಯಕ ಕಾರ್ಯನಿರ್ವಹಣಾಧಿಕಾರಿ ಎಚ್. ಕೃಷ್ಣಮೂರ್ತಿ ಮಾಜಿ ಸಚಿವರನ್ನು ದೇವಳದವತಿಯಿಂದ ಗೌರವಿಸಿದರು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ರಸ್ತೆಗೆ ಕಲ್ಲನ್ನು ಅಡ್ಡವಿಟ್ಟು ಕಾರಿನಲ್ಲಿ ಮನೆಗೆ ತೆರಳುತ್ತಿದ್ದ ವ್ಯಕ್ತಿಗೆ ಹಲ್ಲೆನಡೆಸಿ ದರೋಡೆಗೈದ ಪ್ರಕರಣ ಕುಂದಾಪುರ ಸಂಗಮ್ ಬಳಿ ನಡೆದಿದೆ. ಹಲ್ಲೆಗೊಳಗಾದ ವ್ಯಕ್ತಿ ಆನಗಳ್ಳಿಯ ನಿವಾಸಿ ಸುಧೀರ್ ಆಚಾರ್ ಆಸ್ಪತ್ರೆಗೆ ದಾಖಲಾಗಿದ್ದಾರೆ. ಕುಂದಾಪುರದ ಕ್ಲಾಸಿಕ್ ಮೊಬೈಲ್ ಅಂಗಡಿಯಲ್ಲಿ ಕೆಲಸ ಮಾಡಿಕೊಂಡಿದ್ದ ಸುಧೀರ್, ರಾತ್ರಿ ಅಂಗಡಿ ಮುಚ್ಚಿ ತನ್ನ ಕಾರಿನಲ್ಲಿ ತೆರಳುತ್ತಿದ್ದಾಗ ಸಂಗಮ್ ಬಳಿ ರಸ್ತೆಗೆ ಅಡ್ಡಲಾಗಿ ಕಲ್ಲನ್ನಿಡಲಾಗಿತ್ತು. ಕಾರು ನಿಲ್ಲಿಸಿದಾಗ ಗುಂಪೊಂದು ಅವರನ್ನು ಹೊರಗೆಳೆದು ಹಲ್ಲೆಗೈದಿರುವುದಲ್ಲದೇ ಅವರನ್ನು ಕುತ್ತಿಗೆಯಲ್ಲಿದ್ದ ಚಿನ್ನದ ಸರ ಹಾಗೂ ಜೆಬಿನಲ್ಲಿದ್ದ 26,000 ನಗದು ಹಣವನ್ನು ದೋಚಿಕೊಂಡು ಪರಾರಿಯಾಗಿದ್ದರು. ಗಲಾಟೆಯನ್ನು ಕೇಳಿ ಸ್ಥಳಕ್ಕೆ ಬಂದ ಸ್ಥಳೀಯರು ಹಲ್ಲೆಗೊಳಗಾಗಿದ್ದ ಸುಧೀರ್ ಅವರನ್ನು ಕುಂದಾಪುರ ಆಸ್ಪತ್ರೆಗೆ ದಾಖಲಿಸಿದ್ದಾರೆ. ಘಟನೆ ಪೂರ್ವ ನಿಯೋಜಿತ ಕೃತ್ಯ ಎನ್ನಲಾಗುತ್ತಿದ್ದು, ಸುಧೀರ್ ಅವರ ಚಲನವಲನಗಳನ್ನು ಗಮನಿಸಿ ಗುಂಪಿನಲ್ಲಿ ಹಲ್ಲೆಗೈದು ದರೋಡೆ ಮಾಡಲಾಗಿದೆ ಎನ್ನಲಾಗಿದೆ. ಕುಂದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ ಕುಂದಾಪುರ: ಬದುಕಿನಲ್ಲಿ ನಿರ್ದಿಷ್ಟವಾಗಿ ಗುರಿ ಹಾಗೂ ಅದನ್ನು ಸಾಧಿಸಲು ಸತತವಾದ ಪರಿಶ್ರಮವಿದ್ದರೆ ಯಶಸ್ಸು ನಿಮ್ಮನ್ನು ಹಿಂಬಾಲಿಸಲಿದೆ. ಕುಂದಾಪುರದವರಾದ ಅನೂಪ ರಾಷ್ಟ್ರ ಮಟ್ಟದಲ್ಲಿ ಗುರುತಿಸುವಂತಹ ಸಾಧನೆಗೈದಿರುವುದು ಹೆಮ್ಮೆಯ ಸಂಗತಿ ಎಂದು ಉಡುಪಿ ಧರ್ಮಪ್ರಾಂತ್ಯದ ಧರ್ಮಗುರು ವ. ಜರಾಲ್ಡ್ ಐಸಾಕ್ ಲೋಬೋ ಹೇಳಿದರು. ಅವರು ಕುಂದಾಪುರ ಕ್ಯಾಥೋಲಿಕ್ ಸಭಾದ ವತಿಯಿಂದ ಕುಂದಾಪುರ ಸಂತ ಜೋಸೆಫರ ಪ್ರೌಢಶಾಲೆಯಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ಏಕಲವ್ಯ ಪ್ರಶಸ್ತಿ ಪುರಸ್ಕೃತ ಅನೂಪ್ ಡಿಕೋಸ್ಟಾ ಅವರಿಗೆ ಕ್ಯಾಥೋಲಿಕ್ ಸಭಾ ಹಾಗೂ ಉಡುಪಿ ಧರ್ಮಪ್ರಾಂತ್ಯದ ಪರವಾಗಿ ಸನ್ಮಾನಿಸಿ ಮಾತನಾಡಿದರು. ಸನ್ಮಾನ ಸ್ವೀಕರಿಸಿದ ಅನೂಪ್ ಡಿಕೋಸ್ಟಾ ಮಾತನಾಡಿ ನನ್ನ ಸಾಧನೆಯ ಹಿಂದೆ ತಂದೆ-ತಾಯಿಯ ಮಾರ್ಗದರ್ಶನ ಹಾಗೂ ಗುರುಗಳ ನಿರಂತರವಾದ ಪ್ರೋತ್ಸಾಹವಿದೆ. ಗುರಿ ತಲುಪುವ ಕನಸು ಕಾಣುವುದರೊಂದಿಗೆ ಅದಕ್ಕೆ ಪೂರಕ ತಯಾರಿಗಳನ್ನು ಮಾಡಿಕೊಂಡಲೇ ಯಶಸ್ಸನ್ನು ಸಾಧಿಸುವ ಸಾಧ್ಯವಿದೆ ಎಂದರು. ಕುಂದಾಪುರದ ಹೋಲಿ ರೋಜರಿ ಚರ್ಚ್ ಧರ್ಮಗುರು ಅನಿಲ್ ಡಿಸೋಜಾ, ಎಐಸಿಯು ರಾಜ್ಯಾಧ್ಯಕ್ಷ ವಾಲ್ಟರ್ ಪಿಂಟೋ, ಕ್ಯಾಥೊಲಿಕ್ ಸಭಾ ವಲಯ ಸಮಿತಿ ಅಧ್ಯಕ್ಷ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ರೈಲ್ವೆ ಸುರಂಗದಲ್ಲಿ ಕಲ್ಲು ಕುಸಿದು ಬಿದ್ದು ಸಂಪೂರ್ಣ ನುಜ್ಜುಗೊಜ್ಜಾಗಿ ಎಳಲಾಗದ ಸ್ಥಿತಿಯಲ್ಲಿ 24 ವರ್ಷಗಳಿಂದ ಹಾಸಿಗೆಯಲ್ಲಿ ಮಲಗಿಯೇ ಇರುವ ಕಾವ್ರಾಡಿ ಗ್ರಾಮದ ಸಾರ್ಕಲ್ಲು ಜಯರಾಮ ಶೆಟ್ಟಿಯವರಿಗೆ ಬೆಂಗಳೂರು ಬಂಟರ ಸಂಘದ ಕಾರ್ಯಕಾರಿ ಸಮಿತಿ ಮಾನವೀಯ ಸ್ಪಂದನೆ ನೀಡಿದೆ. ಬೆಂಗಳೂರಿನಿಂದ ಆಗಮಿಸಿದ ಬೆಂಗಳೂರು ಬಂಟರ ಸಂಘದ ಕಾರ್ಯಕಾರಿ ಸಮಿತಿಯ ಸದಸ್ಯರ ತಂಡ ರೂ.55,000 ಚೆಕ್‌ನ್ನು ಜಯರಾಮ ಶೆಟ್ಟಿಯವರಿಗೆ ನೀಡಿತು. ಬ್ಯಾಂಕಿನಲ್ಲಿ ಸುಸ್ತಿ ಇರುವ ಜಯರಾಮ ಶೆಟ್ಟರ ಸಾಲದ ಮೊತ್ತದ ಪಾವತಿಯ ಬಗ್ಗೆಯೂ ಕೂಡಾ ಗಮನ ಹರಿಸುವುದಾಗಿ ತಿಳಿಸಿದರು. ಸಮಾಜ ವ್ಯಕ್ತಿಯೊಬ್ಬರು ಆಸಹಾಯಕವಾಗಿ ಹಾಸಿಗೆ ಹಿಡಿದಿರುವುದು ಮಾದ್ಯಮಗಳ ಮೂಲಕ ತಮ್ಮ ಗಮನಕ್ಕೆ ಬಂದಿದ್ದು, ಅಸಹಾಯಕರಿಗೆ ಸ್ಪಂದಿಸುವುದು ಸಂಘದ ಪ್ರಮುಖ ಧ್ಯೇಯವಾಗಿದ್ದು ಸ್ಪಂದಿಸುವ ಕೆಲಸ ಮಾಡಿದ್ದೇವೆ ಎಂದು ಬಂಟರ ಸಂಘದ ಕಾರ‍್ಯಕಾರಿಣಿ ತಿಳಿಸಿದೆ. ಈ ಸಂದರ್ಭದಲ್ಲಿ ಬೆಂಗಳೂರು ಬಂಟರ ಸಂಘದ ಗೌರವ ಪ್ರಧಾನ ಕಾರ್ಯದರ್ಶಿ ಜಪ್ತಿ ಸಂತೋಷಕುಮಾರ್ ಶೆಟ್ಟಿ, ಖಜಾಂಚಿ ಆನಂದರಾಮ ಶೆಟ್ಟಿ ಬಗ್ವಾಡಿ, ಸಮಾಜಸೇವಾ ವಿಭಾಗದ ಅಧ್ಯಕ್ಷ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಕೇಂದ್ರ ಸರಕಾರದ ಮಹತ್ವಾಕಾಂಕ್ಷೆ ಕಾರ್ಯಕ್ರಮ ಸ್ಚಚ್ಚ ಭಾರತ ಮಿಷನ್ ಅಂಗವಾಗಿ ರೋಟರಿ ಕ್ಲಬ್ ಕುಂದಾಪುರದ ವತಿಯಿಂದ ಕುಂದಾಪುರದ ಮೂಡ್ಲಕಟ್ಟೆಯ ರೈಲ್ವೆ ಸ್ಟೇಷನ್‌ನಲ್ಲಿ ಸ್ವಚ್ಚತಾ ಅಭಿಯಾನ ನಡೆಸಲಾಯಿತು. ಕಾರ್ಯಕ್ರಮಕ್ಕೆ ರೋಟರಿ ಕ್ಲಬ್ ಕುಂದಾಪುರದ ಅಧ್ಯಕ್ಷ ಉದಯಕುಮಾರ ಶೆಟ್ಟಿ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಕೊಂಕಣ ರೈಲ್ವೆಯ ಅಧಿಕಾರಿ, ಕುಂದಾಪುರ ರೋಟರಿ ಕ್ಲಬ್‌ನ ಸದಸ್ಯ ರಾಜೇಶ್ ಶೆಟ್ಟಿ, ನಿಕಟ ಪೂರ್ವಾಧ್ಯಕ್ಷ ಪ್ರಕಾಶ್ಚಂದ್ರ ಶೆಟ್ಟಿ ಚಿತ್ತೂರು, ಕಾರ್ಯದರ್ಶಿ ಮನೋಜ್ ನಾಯರ್, ಲಿಟ್ರಸಿ ಛೇರ್‌ಮೆನ್ ಆವರ್ಸೆ ಮುತ್ತಯ್ಯ ಶೆಟ್ಟಿ, ಸಂತೋಷ ಕೋಣಿ ಇನ್ನಿತರರು ಉಪಸ್ಥಿತರಿದ್ದರು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಭಾರತೀಯ ಜೀವ ವಿಮಾ ನಿಗಮ ಕೊಡಮಾಡುವ ಸ್ಟೂಡೆಂಟ್ ಆಫ್ ದಿ ಇಯರ್ ಅವಾರ್ಡ್‌ನ್ನು ಶತಮಾನೋತ್ಸವ ಆಚರಿಸುತ್ತಿರುವ ವಂಡ್ಸೆಯ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ನೀಡಲಾಯಿತು. ಭಾರತೀಯ ಜೀವ ವಿಮಾ ನಿಗಮ ಕುಂದಾಪುರದ ಹಿರಿಯ ಶಾಖಾಧಿಕಾರಿ ಕೃಷ್ಣ ವಿ. ಕುಲಕರ್ಣಿ ಮಾತನಾಡಿ, ಭಾರತೀಯ ಜೀವ ವಿಮಾ ನಿಗಮವು ಸಾಕಷ್ಟು ಜನೋಪಯೋಗಿ ಕಾರ್ಯಕ್ರಮಗಳನ್ನು ಗ್ರಾಮೀಣ ಪ್ರದೇಶಗಳಲ್ಲಿ ನಡೆಸುತ್ತಿದ್ದು, ಭೀಮಾ ಗ್ರಾಮ ಯೋಜನೆ, ಭೀಮಾ ಶಾಲೆ ಯೋಜನೆ ಹಾಗೂ ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರ, ವಿದ್ಯಾರ್ಥಿ ವೇತನಗಳನ್ನು ನೀಡಿದೆ. ವಿದ್ಯಾರ್ಥಿಗಳು ಇದರ ಸದುಪಯೋಗವನ್ನು ಪಡೆದುಕೊಳ್ಳ ಬೇಕೆಂದು ತಿಳಿಸಿದರು. ಮುಖ್ಯ ಜೀವ ವಿಮಾ ಸಲಹೆಗಾರರಾದ ಪ್ರಕಾಶ್ಚಂದ್ರ ಶೆಟ್ಟಿ ಚಿತ್ತೂರು ಮಾತನಾಡಿ ವಿದ್ಯಾರ್ಥಿ ದೆಸೆಯಲ್ಲಿಯೇ ವಿಮಾ ಪಾಲಿಸಿಗಳನ್ನು ಮಾಡುವುದರೊಂದಿಗೆ ದೀರ್ಘಕಾಲಿಕ ಉಳಿತಾಯದ ಮನೋಭಾವನೆಯನ್ನು ಬೆಳಸಿಕೊಳ್ಳಿ, ಇಂದಿನ ಚಿಕ್ಕ ಉಳಿತಾಯ ಮುಂದಿನ ಸಧೃಢ ಆರ್ಥಿಕತೆಯ ಮೆಟ್ಟಿಲು ಎಂದರು ಈ ಸಂದರ್ಭದಲ್ಲಿ ಭಾರತೀಯ ಜೀವ ವಿಮಾ ನಿಗಮ ಕುಂದಾಪುರದ ಸಹಾಯಕ ಶಾಖಾಧಿಕಾರಿ ಗುರುರಾಜ್…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಗ೦ಗೊಳ್ಳಿ: ಹರೆಯದಲ್ಲಿ ವಿರುದ್ಧ ಲಿಂಗಿಗಳೆಡೆಗೆ ಆಕರ್ಷಣೆ ಸಹಜವಾದದ್ದು. ಆದರೆ ಆಕರ್ಷಣೆಯನ್ನು ತಪ್ಪಾಗಿ ಭ್ರಮಿಸಿಕೊಂಡು ನಮ್ಮ ಜೀವನವನ್ನು ಚಿಕ್ಕ ವಯಸ್ಸಿನಲ್ಲೇ ಅನಾಕರ್ಷಕವನ್ನಾಗಿ ಮಾಡಿಕೊಳ್ಳಬಾರದು. ನಮ್ಮ ಇತಿಮಿತಿಗಳ ಅರಿವು ನಮಗಿರಬೇಕು ಎಂದು ಗಂಗೊಳ್ಳಿಯ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಶ್ವೇತಾ ಅಭಿಪ್ರಾಯಪಟ್ಟರು. ಅವರು ಇತ್ತೀಚೆಗೆ ಗ೦ಗೊಳ್ಳಿಯ ಸರಸ್ವತಿ ವಿದ್ಯಾಲಯ ಪದವಿಪೂರ್ವ ಕಾಲೇಜಿನಲ್ಲಿ ಕಾಲೇಜಿನ ವಿದ್ಯಾರ್ಥಿನಿಯರಲ್ಲಿ ಹದಿಹರೆಯದ ಸಮಸ್ಯೆಗಳ ಕುರಿತಂತೆ ಅರಿವು ಮೂಡಿಸಲು ವಿಶೇಷವಾಗಿ ಹಮ್ಮಿಕೊ೦ಡಿದ್ದ ಹದಿವಯಸ್ಸು ಮತ್ತು ಮನಸ್ಸು ಕಾರ‍್ಯಕ್ರಮದಲ್ಲಿ ಉಪನ್ಯಾಸ ನೀಡಿದರು. ದೈಹಿಕ ಅಥವಾ ಮಾನಸಿಕ ಸಮಸ್ಯೆಗಳು ಕಾಣಸಿಕೊಂಡಾಗ ಅದನ್ನು ಮುಚ್ಚಿಟ್ಟುಕೊಳ್ಳುವ ಪ್ರಯತ್ನ ನಡೆಸಬಾರದು. ಅಸಡ್ಡೆಯನ್ನೂ ಮಾಡಬಾರದು. ಸೂಕ್ತ ತಜ್ಞರ ಸಲಹೆಯನ್ನು ಪಡೆದುಕೊಳ್ಳಬೇಕು.ವೈದ್ಯರ ಬಳಿ ಮುಚ್ಚುಮರೆ ಬೇಡ ಎಂದು ಅವರು ಸಲಹೆ ನೀಡಿದರು. ಪ್ರಾಂಶುಪಾಲೆ ಕವಿತಾ ಎಮ್ ಸಿ ಅಧ್ಯಕ್ಷತೆ ವಹಿಸಿದ್ದರು. ಪ್ರಾಥಮಿಕ ಆರೋಗ್ಯ ಕೇಂದ್ರದ ಪ್ರಜ್ವಲಾ, ಉಪನ್ಯಾಸಕರಾದ ಸುಮತಿ ಉಡುಪ, ಪ್ರತಿಮಾ,ಪ್ರಮೀಳ ಉಪಸ್ಥಿತರಿದ್ದರು.. ಉಪನ್ಯಾಸಕಿ ಸುಗುಣ ಆರ್ ಕೆ ಕಾರ‍್ಯಕ್ರಮ ನಿರ್ವಹಿಸಿದರು. ಶಾಲೆಟ್ ಲೋಬೊ…

Read More

ಕುಂದಾಪ್ರ ಡಾಟ್ ಕಾಂ ವರದಿ. ಬೈಂದೂರು: ಮಣಿಪಾಲದಲ್ಲಿ ನಡೆದ ಅಪಘಾತದಲ್ಲಿ ತಲೆಗೆ ಗಂಭೀರ ಏಟು ತಗಲಿ ಬ್ರೈನ್ ಡೆಡ್ ಆಗಿದ್ದ ಬೈಂದೂರಿನ ಖ್ಯಾತ ವೈದ್ಯ ಡಾ. ರವಿರಾಜ್ ಅವರ ಪುತ್ರ ಹಿಮಾಂಶುವಿನ ದೇಹದೊಳಗಿನ ಅಂಗಾಂಗಗಳನ್ನು ಶಸ್ತ್ರಚಿಕಿತ್ಸೆಯ ಮೂಲಕ ಹೊರತೆಗೆದು ಅಗತ್ಯವಿರುವವರಿಗೆ ಜೋಡಿಲಾಗಿದ್ದು, ನೋವಿನ ನಡುವೆಯೂ ಅಂಗಾಂಗ ದಾನಕ್ಕೆ ಮುಂದಾಗಿದ್ದ ಕುಟುಂಬದ ನಿರ್ಣಯದಿಂದಾಗಿ ಯುವಕನ ಅಂಗಾಗಗಳು ಐವರ ಬಾಳಿಗೆ ಬೆಳಕಾಗಿದೆ. ಅ.8ರ ಶನಿವಾರ ನಡೆದ ಅಪಘಾತದಲ್ಲಿ ಹಿಮಾಂಶುವಿನ ಬ್ರೈನ್ ಡೆಡ್ ಆಗಿರುವುದನ್ನು ಖಚಿತಪಡಿಸಿಕೊಂಡ ಬಳಿಕ ಮಣಿಪಾಲ ಕಸ್ತೂರ್ಬಾ ಆಸ್ಪತ್ರೆ ಮತ್ತು ಮಣಿಪಾಲ್ ಆಸ್ಪತ್ರೆ ಬೆಂಗಳೂರಿನ ನುರಿತ ವೈದ್ಯರ ತಂಡ ಸೋಮವಾರ ಬೆಳಿಗ್ಗೆ 2:30ರ ವೇಳೆಗೆ ಅಂಗಾಂಗಗಳನ್ನು ಶಸ್ತ್ರಕ್ರಿಯೆ ಮೂಲಕ ಹೊರತೆಗೆದು ಅದನ್ನು ಬೆಂಗಳೂರಿಗೆ ರವಾನೆ ಮಾಡಿ ಬೇರೆ ದೇಹಕ್ಕೆ ಯಶಸ್ವಿಯಾಗಿ ಜೋಡಣೆ ಮಾಡಿದ್ದಾರೆ. ಕುಂದಾಪ್ರ ಡಾಟ್ ಕಾಂ ವರದಿ. ಅಂಗಾಂಗ ದಾನ ಮಾಡುವ ಕುರಿತು ಸ್ವತಃ ವೈದ್ಯರಾಗಿರುವ ಡಾ. ರವಿರಾಜ್ ಹಾಗೂ ಸುಜಾತ ದಂಪತಿಗಳಿಂದ ಭಾನುವಾರ ಸಮ್ಮತಿ ದೊರೆತ ಕೂಡಲೇ ಕಾನೂನಿನ ವಿವಿಧ ಪ್ರಕ್ರಿಯೆಗಳಿಗೆ…

Read More