ಕುಂದಾಪ್ರ ಡಾಟ್ ಕಾಂ ಲೇಖನ. ಹಿಂದೂ ಧರ್ಮದ ನವೋನನ್ಯತೆಯನ್ನು ಜಗದುದ್ದಗಲಕ್ಕೆ ಪಸರಿಸಿದ, ಭಾರತ ಉಪಖಂಡದ ಯುವಚೈತನ್ಯವನ್ನೂ ಆಧ್ಯಾತ್ಮಿಕ ಶಕ್ತಿಯನ್ನೂ ಮುಗಿಲೆತ್ತರಕ್ಕೆ ಎತ್ತರಿಸಿದ ವೀರ ಸನ್ಯಾಸಿ ಸ್ವಾಮಿ ವಿವೇಕಾನಂದರ 156ನೇ ಜನ್ಮ ದಿನ ಇಂದು. ಇದೇ ಹಿನ್ನೆಲೆಯಲ್ಲಿ ಜ.12ನ್ನು ರಾಷ್ಟ್ರೀಯ ಯುವ ದಿನವಾಗಿ ಆಚರಿಸಲಾಗುತ್ತದೆ. ಯುವ ಶಕ್ತಿ, ಸಾಮರ್ಥ್ಯದ ಬಗ್ಗೆ ಅರಿವು ಹೊಂದಿದ್ದ ವಿವೇಕಾನಂದರು, ತಮ್ಮೆಲ್ಲ ಬೋಧನೆಗಳಲ್ಲಿ ಯುವಜನತೆ ಮತ್ತು ದೇಶವನ್ನು ಕೇಂದ್ರೀಕರಿಸುತ್ತಿದ್ದರು. ನರೇಂದ್ರ ದತ್ತ: ಇದು ಸ್ವಾಮಿ ವಿವೇಕಾನಂದರ ಪೂರ್ವಾಶ್ರಮದ ಹೆಸರು ಜನನ: 1863 ಜನವರಿ 12. ಕಲ್ಕತ್ತಾ(ಬ್ರಿಟಿಷ್ ಇಂಡಿಯಾ) ಮರಣ: 1902 ಜುಲೈ 4. ಪಶ್ಚಿಮ ಬಂಗಾಳದ ಬೇಲೂರು ಮಠ. ಗುರು: ಶ್ರೀ ರಾಮಕೃಷ್ಣ ಪರಮಹಂಸರು ಫಿಲಾಸಫಿ: ಆಧುನಿಕ ವೇದಾಂತ ಮತ್ತು ರಾಜಯೋಗ ಸಂಸ್ಥೆ ಸ್ಥಾಪನೆ: ರಾಮಕೃಷ್ಣ ಮಿಷನ್, ರಾಮಕೃಷ್ಣ ಮಠ ಶಿಷ್ಯರು: ಅಶೋಕಾನಂದ, ವಿರಾಜಾನಂದ, ಪರಮಾನಂದ, ಅಳಸಿಂಗ ಪೆರುಮಾಳ್, ಅಭಯಾನಂದ, ಸಿಸ್ಟರ್ ನಿವೇದಿತಾ, ಸ್ವಾಮಿ ಸದಾನಂದ ಸಾಹಿತ್ಯ: ರಾಜ ಯೋಗ, ಕರ್ಮ ಯೋಗ, ಭಕ್ತಿ ಯೋಗ, ಜ್ಞಾನ ಯೋಗ,…
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ. ಗಂಗೊಳ್ಳಿ: ಮೈಸೂರಿನ ಮಹಾಜನ ಪದವಿಪೂರ್ವ ಕಾಲೇಜಿನಲ್ಲಿ ನಡೆದ ವಿಭಾಗೀಯ ಮಟ್ಟದ ಸಾಂಸ್ಕೃತಿಕ ಹಾಗೂ ಸಾಹಿತ್ಯಕ ಕನ್ನಡ ಚರ್ಚಾ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಉಡುಪಿ ಪೂರ್ಣಪ್ರಜ್ಞ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿನಿ ವೈಷ್ಣವಿ ಗೋಪಾಲ ಅವರು ದ್ವಿತೀಯ ಸ್ಥಾನ ಗಳಿಸಿ ಬೆಂಗಳೂರಿನ ಬಸವನಗುಡಿ ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ ನಡೆಯಲಿರುವ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಈಕೆ ಗಂಗೊಳ್ಳಿಯ ಗೋಪಾಲ ಚಂದನ್ ಮತ್ತು ಡಾ.ವೀಣಾ ಕಾರಂತ್ ದಂಪತಿಯ ಪುತ್ರಿ.
ಕುಂದಾಪ್ರ ಡಾಟ್ ಕಾಂ ಸುದ್ದಿ ಕುಂದಾಪುರ: ಗಂಗೊಳ್ಳಿಯ ಮೀನು ಮಾರುಕಟ್ಟೆ ರಸ್ತೆ ಸಮೀಪವಿರುವ ಗೋಪಾಲ ಶೇರುಗಾರ್ ಅವರ ಮನೆಯ ಮೇಲಂತಸ್ತಿನ ಬಾಡಿಗೆ ಮನೆಯಲ್ಲಿ ವಾಸ್ತವ್ಯ ವಿರುವ ಬದ್ರುದ್ದೀನ್ ಅವರು ರಾತ್ರಿ ಕೆಲಸ ಮುಗಿಸಿ ಬಂದು, ಮನೆ ಪಕ್ಕ ನಿಲ್ಲಿಸಿದ್ದ ಪ್ಲಾಟಿನಾ ಬೈಕ್ಗೆ ಕಿಡಿಗೇಡಿಗಳು ಮಂಗಳವಾರ ಬೆಳಗ್ಗಿನ ಜಾವ 4.30ರ ಸುಮಾರಿಗೆ ಬೆಂಕಿ ಹಚ್ಚಿ ಪರಾರಿಯಾಗಿದ್ದಾರೆ. ರವಿವಾರ ತಡರಾತ್ರಿ ನಡೆದ ಬೈಕ್ಗೆ ಬೆಂಕಿಯಿಕ್ಕಿದ ಕೃತ್ಯದ ಬಳಿಕ ಮತ್ತೂಂದು ಬೈಕ್ಗೆ ಬೆಂಕಿ ಹಚ್ಚಿ ಸುಡಲು ಯತ್ನಿಸಿದ ಘಟನೆ ಮಂಗಳವಾರ ಬೆಳಗ್ಗಿನ ಜಾವ ಸಂಭವಿಸಿದೆ. ಗಂಗೊಳ್ಳಿಯ ಮೀನು ಮಾರುಕಟ್ಟೆ ರಸ್ತೆ ಸಮೀಪವಿರುವ ಗೋಪಾಲ ಶೇರುಗಾರ್ ಅವರ ಮನೆಯ ಮೇಲಂತಸ್ತಿನ ಬಾಡಿಗೆ ಮನೆಯಲ್ಲಿ ವಾಸ್ತವ್ಯ ವಿರುವ ಬದ್ರುದ್ದೀನ್ ಅವರು ರಾತ್ರಿ ಕೆಲಸ ಮುಗಿಸಿ ಬಂದು, ಮನೆ ಪಕ್ಕ ನಿಲ್ಲಿಸಿದ್ದ ಪ್ಲಾಟಿನಾ ಬೈಕ್ಗೆ ಕಿಡಿಗೇಡಿಗಳು ಮಂಗಳವಾರ ಬೆಳಗ್ಗಿನ ಜಾವ 4.30ರ ಸುಮಾರಿಗೆ ಬೆಂಕಿ ಹಚ್ಚಿ ಪರಾರಿಯಾಗಿದ್ದಾರೆ. ಮನೆ ಮಾಲಕ ಗೋಪಾಲ ಶೇರು ಗಾರ್ ಮೂತ್ರ ವಿಸರ್ಜನೆಗೆಂದು ಎದ್ದಾಗ ಮನೆ ಹೊರಗಿನಿಂದ ಸುಟ್ಟ ವಾಸನೆ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಕ್ಷೇತ್ರದ ಬಗ್ಗೆ ಸದಾ ಚಿಂತಿಸುವ ಅಭಿವೃದ್ಧಿಯ ಬಗ್ಗೆ ಕಾಳಜಿ ವಹಿಸುವ ಗೋಪಾಲ ಪೂಜಾರಿ ಅವರು ಕ್ರೀಯಾಶೀಲ ಹಾಗೂ ಜನಪರ ಕಾಳಜಿಯ ಶಾಸಕ ಎಂದು ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ಅವರು ಬೈಂದೂರಿನಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಉದ್ಘಾಟನೆ ಹಾಗೂ ಶಂಕುಸ್ಥಾಪನೆ ನೆರವೇರಿಸಿ ಬಳಿಕ ಮಾತನಾಡಿ ತಿಂಗಳಿಗೆ 3-4 ಭಾರಿಯಾದರೂ ನನ್ನನ್ನು ಭೇಟಿಯಾಗಿ ಕ್ಷೇತ್ರದ ಅಭಿವೃದ್ಧಿ ಕಾರ್ಯಗಳ ಬಗ್ಗೆ ಶಿಪಾರಸ್ಸು ಪಡೆದುಕೊಂಡು ಹೋಗುತ್ತಾರೆ. 20-30 ಸಮಸ್ಯೆಗಳ ಪಟ್ಟಿಯನ್ನು ತಂದು ಸಹಿ ಹಾಕಿಸಿಕೊಂಡು ಹೋಗುತ್ತಾರೆ. ಕುಳಿತುಕೊಳ್ಳಿ ಎಂದರು ಕೇಳದೇ ಅಷ್ಟೂ ಕಡತಕ್ಕೆ ಸಹಿ ಹಾಕಿಸಿಕೊಳ್ಳುವ ತನಕವೂ ನಿಂತೇ ಇರುತ್ತಾರೆ. ಕ್ಷೇತ್ರದ ಅಭಿವೃದ್ಧಿಯ ವಿಚಾರ ಹೊರತುಪಡಿಸಿ ಬೇರೆ ಕಾರಣಕ್ಕೆ ಭೇಟಿಯಾದ ಸಂದರ್ಭವೇ ತನಗೆ ನೆನಪಿಲ್ಲ ಎಂದು ಶಾಸಕ ಕೆ. ಗೋಪಾಲ ಪೂಜಾರಿ ಅವರ ಕಾರ್ಯವೈಖರಿಯನ್ನು ಸಿಎಂ ಶ್ಲಾಘಿಸಿದರು. ಕಾರ್ಯಕ್ರಮಕ್ಕೆ ಮುಖ್ಯಮಂತ್ರಿಗಳನ್ನು ಅದ್ದೂರಿಯಾಗಿ ಸ್ವಾಗತಿಸಿಕೊಳ್ಳಲಾಯಿತು. ವಿವಿಧ ಸಂಘ ಸಂಸ್ಥೆಗಳ ಪ್ರಮುಖರು ಸಿಎಂಗೆ ಮನವಿ ಸಲ್ಲಿಸಿದರು. ಸನ್ಮಾನಿಸಿದರು. ಸಂಪೂರ್ಣ ಕಾರ್ಯಕ್ರಮವನ್ನು ಇಲ್ಲಿ ವೀಕ್ಷಿಸಿ:…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ವಡೇರಹೋಬಳಿ ಗೆಳೆಯರು ಆಯೋಜಿಸಿದ ವಾರ್ಡ್ ಟ್ರೋಫಿ-೨೦೧೭, ಕುಂದಾಪುರದ ಗೋಲ್ಡನ್ ಮಿಲ್ಲರ್ ಪ್ರಶಸ್ತಿ ಹಾಗೂ ೨೨,೨೨೨/ ಸಾವಿರ ರೂ, ನಗದು ಪಡೆಯಿತು. ಫೈನಲ್ ಪಂದ್ಯಾಟದಲ್ಲಿ ಮದ್ದುಗುಡ್ಡೆ ಫ್ರೆಂಡ್ಸ್ ವಿರುದ್ಧ ೧೨ ರನ್ಗಳ ವಿಜಯ ದಾಖಲಿಸುವ ಮೂಲಕ ಪ್ರಶಸ್ತಿ ಪಡೆಯಿತು. ಮದ್ದುಗುಡ್ಡೆ ಫ್ರೆಂಡ್ಸ್ ದ್ವಿತೀಯ ಪ್ರಶಸ್ತಿ ಸಹಿತ ೧೧,೧೧೧/ ನಗದು ಪಡೆಯಿತು. ವೈಯಕ್ತಿಕ ಪ್ರಶಸ್ತಿ ಉತ್ತಮ ದಾಂಡಿಗ ರಾಘವೇಂದ್ರ (ಗೋಲ್ಡನ್ ಮಿಲ್ಲರ್) ಉತ್ತಮ ಎಸೆತಗಾರ ವೇಣು (ಗೋಲ್ಡನ್ ಮಿಲ್ಲರ್), ಉತ್ತಮ ಗೂಟರಕ್ಷಕ ಯೋಗೀಶ (ಗೋಲ್ಡನ್ ಮಿಲ್ಲರ್), ಫೈನಲ್ ಪಂದ್ಯಾಟದ ಪಂದ್ಯಶ್ರೇಷ್ಠ ನಿತೇಶ (ಗೋಲ್ಡನ್ ಮಿಲ್ಲರ್) ಸರಣಿ ಶ್ರೇಷ್ಠ ಪ್ರಶಸ್ತಿ ವಿಕ್ಕಿ (ಮದ್ದುಗುಡ್ಡೆ ಫ್ರೆಂಡ್ಸ್), ವೈಯಕ್ತಿಕ ಪ್ರಶಸ್ತಿ ಪಡೆದರು. ಹಾಗೂ ಇದೇ ಸಂದರ್ಭದಲ್ಲಿ ಚಕ್ರವರ್ತಿಯ ಹಿರಿಯ ಆಟಗಾರ ಹಾಗೂ ಜೆ.ಡಿ.ಯು. ನ ಜಿಲ್ಲಾ ಅಧ್ಯಕ್ಷರಾದ ರಾಜೀವ ಕೋಟ್ಯಾನ ಅವರಿಗೆ ಸನ್ಮಾನಿಸಲಾಯಿತು. ಆರ್ಥಿಕ ನೆರವು: ವಿಶೇಷವಾಗಿ ಪ್ರಥಮ ಪ್ರಶಸ್ತಿ ಪಡೆದ ಗೋಲ್ಡನ್ ಮಿಲ್ಲರ್ ಕುಂದಾಪುರ ತಂಡ ಜಯಸಿದ ೨೨,೨೨೨/ ಹಾಗೂ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ೧೬ನೇ ಕುಂದಾಪುರ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಯುವ ಕವಿ ಜಗದೀಶ ದೇವಾಡಿಗ ಕುಪ್ಪುಮನೆ ಮುಳ್ಳಿಕಟ್ಟೆ ಅವರ ೪ನೇ ಕವನ ಸಂಕಲನ ’ಮುಗುಳು ನಗು’ ಕೃತಿಯನ್ನು ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾದ ಬಿ. ಅಪ್ಪಣ್ಣ ಹೆಗ್ಡೆ ಬಿಡುಗಡೆಗೊಳಿಸಿ ಶುಭಹಾರೈಸಿದರು. ಕಸಾಪ ಉಡುಪಿ ಜಿಲ್ಲಾಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಇನ್ನಿತರ ಗಣ್ಯರು ಉಪಸ್ಥಿತರಿದ್ದರು.
ಕುಂದಾಪ್ರ ಡಾಟ್ ಕಾಂ ಸುದ್ದಿ ಕುಂದಾಪುರ: ರಾಜ್ಯದಲ್ಲಿ ಹಿಂದೂಗಳ ಹತ್ಯೆ ನಿರಂತರ ನಡೆಯುತ್ತಿದೆ. ದೀಪಕ್ ರಾವ್ ಸೇರಿ ಇಪ್ಪತ್ತೊಂದು ಹಿಂದೂ ಯುವಕರ ಭರ್ಬರ ಹತ್ಯೆ ಮಾಡಲಾಗಿದೆ. ಪಿಎಫ್ಐ, ಭಯೋತ್ಪಾದಕರ ರಕ್ಷಣೆಗೆ ರಾಜ್ಯ ಸರ್ಕಾರ ನಿಂತಿದೆ. ಕಾಂಗ್ರೆಸ್ ಸರ್ಕಾರ ತಮ್ಮ ಪರವಾಗಿದೆ ಎಂಬ ನಿಲುವಲ್ಲಿ ಪಿಎಫ್ಐ ಬೆಂಬಲಿತರು ಹತ್ಯೆ ಮಾಡುತ್ತಿದ್ದಾರೆ. ಹಿಂದೂ ಯುವಕರ ಹತ್ಯೆ ಹತ್ತಿಕ್ಕಲು ರಾಜ್ಯ ಕಾಂಗ್ರೆಸ್ ಸರ್ಕಾರ ವಿಫಲಾವಾಗಿದ್ದು, ಇದಕ್ಕೆ ತಕ್ಕ ಬೆಲೆ ಎಂದು ಎಚ್ಚರಿಸಿದವರು ಆರ್ಎಸ್ಸೆಸ್ ದಕ್ಷಣ ಪ್ರಾಂತ ಸಂಚಾಲಕ ಸುಬ್ರಹ್ಮಣ್ಯ ಹೊಳ್ಳ. ಕುಂದಾಪುರ ಶಾಸ್ತ್ರಿ ವೃತ್ತದಲ್ಲಿ ಹಿಂದೂಪರ ಸಂಘಟನೆಗಳ ಸುರತ್ಕಲ್ ದೀಪಕ್ ರಾವ್ ಕೊಲೆ ಖಂಡಿಸಿ ನಡೆಸಿದ ರಸ್ತೆ ರೋಖೋದಲ್ಲಿ ಮಾತನಾಡಿ, ಪಿಎಫ್ಐ ಸಂಘಟನೆ ನಿಶೇಧ ಮಾಡುವಂತೆ ಒತ್ತಾಯಿಸಿದರೂ ಸಿದ್ದರಾಮಯ್ಯ ಕಿವುಡಾಗಿದ್ದಾರೆ. ವಿವಿಧ ಅಪರಾಧಗಳಲ್ಲಿ ಭಾಗಿಯಾದ ೧೬೦ಕ್ಕೂ ಮಿಕ್ಕ ಜನರ ಮೇಲಿದ್ದ ಕೇಸ್ ಹಿಂದಕ್ಕೆ ಪಡೆಯುವ ಮೂಲಕ ರಾಜ್ಯ ಸರ್ಕಾರ ಹಿಂದೂ ಯುವಕರ ಕೊಲೆಗೆ ದಾರಿ ಮಾಡಿಕೊಡುತ್ತಿದೆ ಎಂದು ಆರೋಪಿಸಿದರು. ರಾಜ್ಯ ಸರ್ಕಾರ ಹಿಂದೂ ಯುವಕರ ಹಾಗೂ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ರಾಜ್ಯದ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಬೈಂದೂರು ವಿಧಾನಸಭಾ ಕ್ಷೇತ್ರದ ವಿವಿಧ ಇಲಾಖೆಗಳ 430ಕೋಟಿ ರೂ. ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆ ಹಾಗೂ ಉದ್ಘಾಟನೆ ನೆರವೇರಿಸಿದರು. ಬೈಂದೂರು ಕ್ಷೇತ್ರದ ಶಾಸಕ ಕೆ. ಗೋಪಾಲ ಪೂಜಾರಿ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭ ಆಹಾರ ಮತ್ತು ನಾಗರಿಕ ಪೂರೈಕೆ ಖಾತೆ ಸಚಿವ ಯು.ಟಿ ಖಾದರ್, ಯುವಜನ ಕ್ರೀಡಾ ಸಬಲೀಕರಣ ಹಾಗೂ ಕ್ರೀಡಾ ಸಚಿವ ಪ್ರಮೋದ್ ಮಧ್ವರಾಜ್, ರಾಜ್ಯಸಭಾ ಸದಸ್ಯ ಆಸ್ಕರ್ ಫೆರ್ನಾಂಡಿಸ್, ವಿಧಾನ ಪರಿಷತ್ ಸದಸ್ಯ ಕೆ. ಪ್ರತಾಪಚಂದ್ರ ಶೆಟ್ಟಿ, ಜಿಲ್ಲಾಧಿಕಾರಿ ಪ್ರಿಯಾಂಕಾ ಮೇರಿ ಫ್ರಾನ್ಸಿಸ್, ಮೆಸ್ಕಾಂ ನಿರ್ದೇಶಕ ಸಂಪಿಗೇಡಿ ಸಂಜೀವ ಶೆಟ್ಟಿ, ಮೀನುಗಾರ ಮುಖಂಡ ಮದನ್ ಕುಮಾರ್ ಉಪ್ಪುಂದ, ಜಿಲ್ಲಾ ಕೆಡಿಪಿ ಸದಸ್ಯ ಎಸ್. ರಾಜು ಪೂಜಾರಿ ಸೇರಿದಂತೆ ಇನ್ನತರ ಗಣ್ಯರು ವೇದಿಕೆಯಲ್ಲಿದ್ದರು. ಶಾಸಕ ಕೆ. ಗೋಪಾಲ ಪೂಜಾರಿ ಅವರು ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಪತ್ರಕರ್ತ ಕೆ. ಸಿ ರಾಜೇಶ್ ಕಾರ್ಯಕ್ರಮ ನಿರೂಪಿಸಿದರು.
ಕುಂದಾಪ್ರ ಡಾಟ್ ಕಾಂ ಸುದ್ದಿ. ಗಂಗೊಳ್ಳಿ : ಭಗವಂತನನ್ನು ಅನನ್ಯ ಭಕ್ತಿಯಿಂದ ಸೇವೆ ಮಾಡಿದರೆ ಅವನು ನಮ್ಮ ಯೋಗ ಕ್ಷೇಮ ನೋಡಿಕೊಳ್ಳುತ್ತಾನೆ. ಜೀವನದಲ್ಲಿ ಯಶಸ್ಸು ಸಾಧಿಸಬೇಕಾದರೆ ದೇವರ ಅನುಗ್ರಹ ಮತ್ತು ಪ್ರಾಮಾಣಿಕ ಪ್ರಯತ್ನ ಎರಡೂ ಇರಬೇಕು. ಯೋಗ ಮತ್ತು ಕ್ಷೇಮ ನಮಗೆ ಎರಡು ಕಣ್ಣುಗಳಿದ್ದಂತೆ. ಯೋಗ ಕ್ಷೇಮ ಎರಡೂ ನಮಗೆ ದೊರೆತರೆ ನಮ್ಮ ಜೀವನ ಸಾರ್ಥಕವಾಗುತ್ತದೆ. ವಿದ್ಯಾರ್ಥಿಗಳಲ್ಲಿ ನೀತಿ, ನಿಯಮದ ಜೊತೆಗೆ ಆರೋಗ್ಯ ಕೂಡ ಉತ್ತಮವಾಗಬೇಕು. ಶ್ರೀ ದೇವರ ಅನುಗ್ರಹದಿಂದ ಕಳೆದ ೧೪ ವರ್ಷಗಳ ಹಿಂದೆ ಪ್ರಾರಂಭಿಸಿದ ಚಿಣ್ಣರ ಸಂತರ್ಪಣೆಯನ್ನು ಶ್ರೀ ಕೃಷ್ಣನ ಪ್ರಸಾದ ರೂಪದಲ್ಲಿ ಮಕ್ಕಳಿಗೆ ನೀಡುತ್ತಾ ಯಶಸ್ವಿಯಾಗಿ ನಡೆದುಕೊಂಡು ಬರುತ್ತಿದೆ ೨೦೧೮ನೇ ಉಡುಪಿ ಶ್ರೀ ಕೃಷ್ಣ ಮಠದ ಪರ್ಯಾಯ ಪೀಠವನ್ನಲಂಕರಿಸಲಿರುವ ಶ್ರೀ ಪಲಿಮಾರು ಮಠಾಧೀಶ ಶ್ರೀಮದ್ ವಿದ್ಯಾಧೀಶ ತೀರ್ಥ ಸ್ವಾಮೀಜಿಯವರು ಹೇಳಿದರು. ಪರ್ಯಾಯ ಪೂರ್ವ ಸಂಚಾರ ಪ್ರಯುಕ್ತ ಗಂಗೊಳ್ಳಿಯ ಸರಸ್ವತಿ ವಿದ್ಯಾಲಯ ಹಿರಿಯ ಪ್ರಾಥಮಿಕ ಶಾಲೆಗೆ ಗುರುವಾರ ಭೇಟಿ ನೀಡಿದ ಅವರು ಆಶೀರ್ವಚನ ನೀಡಿ ಮಾತನಾಡಿದರು. ಗಂಗೊಳ್ಳಿಯ ಸರಸ್ವತಿ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ತಾಲೂಕಿನ ತಲ್ಲೂರು ರಾಷ್ಟೀಯ ಹೆದ್ದಾರಿ ೬೬ರಲ್ಲಿ ನಡೆದ ಖಾಸಗಿ ಬಸ್ ಹಾಗೂ ಬೈಕ್ ನಡುವಿನ ಅಪಘಾತದಲ್ಲಿ ಬೈಕ್ ಸವಾರ ದಾರುಣವಾಗಿ ಮೃತಪಟ್ಟ ಘಟನೆ ವರದಿಯಾಗಿದೆ. ಗುಲ್ವಾಡಿ ಕೌಜೂರು ನಿವಾಸಿ ರಾಘವೇಂದ್ರ ಆಚಾರ್ ಮೃತ ದುರ್ದೈವಿ. ಇಂದು ಬೆಳಿಗ್ಗೆ ರವೀಂದ್ರ ಆಚಾರ್ ಕೆಲಸಕ್ಕೆ ತೆರಳುತ್ತಿದ್ದ ವೇಳೆ ವೇಗವಾಗಿ ಬಂದ ಖಾಸಗಿ ಬಸ್ ಢಿಕ್ಕಿಯಾಗಿತ್ತು. ಅಫಘಾತದ ರಭಸಕ್ಕೆ ಗಂಭೀರ ಗಾಯಗೊಂಡ ಬೈಕ್ ಸವಾರ ಸ್ಥಳದಲ್ಲಿಯೇ ಸಾವನ್ನಪ್ಪಿದ್ದರು. ಸ್ಥಳಕ್ಕೆ ಕುಂದಾಪುರ ಸಂಚಾರಿ ಪೊಲೀಸ್ ಠಾಣೆಯ ಪಿಎಸ್ಐ ಸುಬ್ಬಣ್ಣ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
