Author: ನ್ಯೂಸ್ ಬ್ಯೂರೋ

ಕುಂದಾಪ್ರ ಡಾಟ್ ಕಾಂ ಸುದ್ದಿ. ಕೊಲ್ಲೂರು: ಕರ್ನಾಟಕದ ರೈತರ ಹಿತದೃಷ್ಠಿಯಿಂದ ಕಾವೇರಿ ನೀರು ಹಂಚಿಕೆಯ ವಿಚಾರದಲ್ಲಿ ಕಠಿಣ ನಿರ್ಧಾರ ಕೈಗೊಂಡು ಸತ್ಯಾಗ್ರಹ ಮಾಡಿದ್ದೇನೆಯೇ ಹೊರತು ಇದರಲ್ಲಿ ನನ್ನ ಸ್ವಾರ್ಥ ರಾಜಕೀಯ ಇಲ್ಲ ಎಂದು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಹೇಳಿದರು. ಅವರು ಕೊಲ್ಲೂರು ಶ್ರೀ ಮೂಕಾಂಬಿಕೆಯ ದರ್ಶನ ಪಡೆಯುವ ಖಾಸಗಿ ಹೋಟೆಲ್‌ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಹಿಂದಿನ ದ್ವಿಸದಸ್ಯ ಪೀಠಕ್ಕೆ ರಾಜ್ಯ ಸರಕಾರ ಸರಿಯಾಗಿ ಮನರಿಕೆ ಮಡಿಕೊಡದ ನೆಲೆಯಲ್ಲಿ ನ್ಯಾಯಾಲಯ ನೀಡಿದ ತೀರ್ಪು ಹಲವರು ಗೊಂದಲಗಳಿಗೆ ಕಾರಣವಾಗಿತ್ತು. ಈಗ ಅಧ್ಯಯನ ತಂಡ ನೀಡಿದ ವರದಿಯನ್ನು ತ್ರಿಸದಸ್ಯ ಪೀಠದಿಂದ ವಿಚಾರಣೆ ನಡೆಯಬೇಕಾಗಿದೆ. ಯವುದೇ ರೀತಿಯ ಸಂಧಾನ ಫಲಕಾರಿಯಾಗದು ಎಂದರು. ಕಾವೇರಿ ನೀರಿನ ಹಂಚಿಕೆಯ ಹೋರಾಟ 1993ರಿಂದ ಪ್ರಾರಂಭಗೊಡಿದ್ದು, ಈವರೆಗೂ ಅಂತ್ಯ ಕಂಡಿಲ್ಲ. ಈ ವಿಚಾರವಾಗಿ ಪ್ರಧಾನಿ ನರೇಂದ್ರ ಮೋದಿಯವರಲ್ಲಿ ಸುದೀರ್ಘ ಮಾತುಕತೆ ನಡೆಸಿದ್ದು, ತಕ್ಷಣ ಸ್ಪಂದಿಸಿದ ಅವರು ಅಟಾರ್ನಿ ಜನರಲ್ ಹಾಗೂ ನಾಲ್ಕು ರಾಜ್ಯಗಳ ಅಧಿಕಾರಿಗಳಿರುವ ಅಧ್ಯಯನ ತಂಡವನ್ನು ಜಲಾಶಯಗಳ ಸ್ಥಿತಿಗತಿಯ ಪರಿಶೀಲನೆಗಾಗಿ ಕಳುಹಿಸಿ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಬೈಂದೂರು ಬಿಜೆಪಿ ಯುವಮೋರ್ಚಾ ಬೈಂದೂರು ಜಿಲ್ಲಾ ಪಂಚಾಯತ್ ಕ್ಷೇತ್ರ ಶಕ್ತಿಕೇಂದ್ರದ ಅಧ್ಯಕ್ಷರಾಗಿ ಯುವ ಉದ್ಯಮಿ ವಿಕ್ರಮ್ ಪೂಜಾರಿ, ಕಾರ್ಯದರ್ಶಿಯಾಗಿ ಗಣೇಶ್ ಗಾಣಿಗ ತಗ್ಗರ್ಸೆ ನೇಮಕಗೊಂಡಿದ್ದಾರೆ. ಇತ್ತಿಚಿಗೆ ನಡೆದ ಬಿಜೆಪಿ ಯುವಮೋರ್ಚಾ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಬೈಂದೂರು ಬಿಜೆಪಿ ಯುವಮೋರ್ಚಾದ ನೂತನ ಅಧ್ಯಕ್ಷ ಶರತ್ ಶೆಟ್ಟಿ ಉಪ್ಪುಂದ ಅವರು ನೇಮಿಸಿದ ಶಕ್ತಿಕೇಂದ್ರದ ಪದಾಧಿಕಾರಿಗಳನ್ನು ಹಿರಿಯ ಮುಖಂಡರ ಸಮ್ಮುಖದಲ್ಲಿ ಗೌರವಿಸಿದರು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ನವರಾತ್ರಿಯ ಅಂಗವಾಗಿ ಕುಂದಾಪುರದ ಖಾರ್ವಿಕೇರಿ ಮಹಾಕಾಳಿ ದೇವಿಯ ದೇವಸ್ಥಾನವು ಸಿಂಗಾರ ಹೂವಿನಿಂದ ಆಕರ್ಷಿತವಾಗಿ ಅಲಂಕಾರಗೊಂಡಿತ್ತು. ಉಡುಪಿ ಜಿಲ್ಲೆಯಲ್ಲಿಯೇ ಸಂಪೂರ್ಣ ಸಿಂಗಾರ ಹೂವಿನಿಂದ ದೇವಸ್ಥಾನವನ್ನು ಅಲಂಕರಿಸಿರುವುದು ಪ್ರಥಮ ಎನ್ನಲಾಗುತ್ತಿದ್ದು ಭಕ್ತರು ನೀಡಿದ ಸಾವಿರದ ಐನೂರಕ್ಕೂ ಮಿಕ್ಕಿ ಸಿಂಗಾರದ ಗೊನೆಯಿಂದ ಅತ್ಯಂತ ಸುಂದರವಾಗಿ ದೇವಳವನ್ನು ಅಲಂಕರಿಸಲಾಗಿದೆ. ಪಡುಬಿದ್ರೆಯ ರಾಮಚಂದ್ರ ಭಟ್ ಮತ್ತು ತಂಡದವರಿಂದ ಗರ್ಭ ಗುಡಿ ಮತ್ತು ದೇವರನ್ನ ಸಿಂಗರಿಸಿದ್ದಾರೆ. ಪ್ರಕಾಶ್ ಖಾರ್ವಿ ಮತ್ತು ನರೇಂದ್ರ ನೇತ್ರತ್ವದ ತಂಡ ದೇವಸ್ಥಾನದ ಹೊರಾಂಗಣ ಅಲಂಕರಿಸಿದರು. ಈ ಸಂದರ್ಭದಲ್ಲಿ ದೇವಸ್ಥಾನದ ಅಧ್ಯಕ್ಷರಾದ ಜಯಾನಂದ ಖಾರ್ವಿ, ಉಪಾಧ್ಯಕ್ಷರಾದ ಪ್ರಕಾಶ್ ಆರ್ ಖಾರ್ವಿ, ಮಹಿಳಾ ಘಟಕದ ಉಪಾಧ್ಯಕ್ಷೆ ಲಕ್ಷ್ಮೀ ಮಾಧವ್ ಖಾರ್ವಿ ಪ್ರಮುಖರಾದ ದಾಸ್ ಖಾರ್ವಿ, ನಾರಾಯಣ್ ಖಾರ್ವಿ, ನಾಗರಾಜ್ ಖಾರ್ವಿ ಮತ್ತಿತರರು ಉಪಸ್ಥಿತರಿದ್ದರು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕೋಟ: 150 ವರ್ಷ ಇತಿಹಾಸವುಳ್ಳ ಅಂಚೆ ಇಲಾಖೆಯಲ್ಲಿ ಶಾಪಗ್ರಸ್ಥ ಗ್ರಾಮೀಣ ಅಂಚೆ ನೌಕರರ ಸಮಸ್ಯೆ ಇತ್ಯರ್ಥಗೊಸಬೆಕೇಂದು, ಯಾವುದೇ ಸೌಲಭ್ಯವನ್ನು ನೀಡದೆ ದಿನದ 8 ರಿಂದ 10 ಗಂಟೆಗಳ ಕಾಲ ಕೆಲಸ ನಿರ್ವಹಿಸಿದರೂ ಕೂಡಾ ಇಲಾಖೆಯು 3 ರಿಂದ 5 ಗಂಟೆಗಳಿಗೆ ಮಾತ್ರ ಸಂಬಳ ನೀಡಿ ಇದುವರೆಗೂ ವಂಚಿಸುತ್ತಾ ಬಂದಿದೆ ಎಂದು ಅಖಿಲ ಭಾರತ ಗ್ರಾಮೀಣ ಅಂಚೆ ನೌಕರರ ಸಂಘದ ಅಧ್ಯಕ್ಷರಾದ ಬಸವ ಬಿಲ್ಲವ ಆರೋಪಿಸಿದರು. ಕೇಂದ್ರದ ನರೇಂದ್ರ ಮೋದಿ ಯವರ ಸರಕಾರವು ಕೇಂದ್ರ ಸರಕಾರಿ ನೌಕರರ ಹಿತಾರಕ್ಷಣೆಗಾಗಿ ಬೋನಸ್ ಮಿತಿಯನ್ನು 3500 ದಿಂದ 7000 ಕ್ಕೆ ಅನುಮೋದಿಸಿದ್ದು, ಸದ್ರಿ ಆದೇಶವನ್ನು ನಮ್ಮ ಅಂಚೆ ಇಲಾಖೆಯು ಇಲಾಖಾ ನೌಕರರಿಗೆ ಮಾತ್ರ ನೀಡಿ, ಬಡ ಗ್ರಾಮೀಣ ಅಂಚೆ ನೌಕರರಿಗೆ ನೀಡದೆ ಶೋಷಿಸುತ್ತಾ ಬಂದಿದೆ ಎಂದರು. ಕೇಂದ್ರ ಸಂಘಟನೆಯ ಪ್ರಧಾನ ಕಾರ್ಯದರ್ಶಿಗಳಾದ ಎಸ್.ಎಸ್. ಮಹಾದೇವಯ್ಯನವರು ನೆತ್ರತ್ವದಲ್ಲಿ ಉಡುಪಿ ಪ್ರಧಾನ ಅಂಚೆ ಕಛೇರಿಯ ಎದುರುಗಡೆ ಧರಣಿ ಹಮ್ಮಿಕೊಳ್ಳಲಾಯಿತು ಅಖಿಲ ಭಾರತ ಗ್ರಾಮೀಣ ಅಂಚೆ ನೌಕರರ ಸಂಘದ ಕಾರ್ಯದರ್ಶಿ ಸಂತೋಷ ಮಧ್ಯಸ್ಥ, ಖಜಾಂಜಿ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಗಂಗೊಳ್ಳಿ : ಗಂಗೊಳ್ಳಿಯ ಮಹಾಸತಿ ಪ್ರಾಥಮಿಕ ಮೀನುಗಾರರ ಮಹಿಳಾ ವಿವಿಧೋದ್ದೇಶ ಸಹಕಾರಿ ಸಂಘದ ೨೦೧೫-೧೬ನೇ ಸಾಲಿನ ಮಹಾಸಭೆ ಗಂಗೊಳ್ಳಿಯ ಸರಸ್ವತಿ ವಿದ್ಯಾಲಯ ಹಿರಿಯ ಪ್ರಾಥಮಿಕ ಶಾಲೆಯ ಸಭಾಂಗಣದಲ್ಲಿ ಜರಗಿತು. ಸಭೆಯ ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷೆ ಶಾರದಾ ಎಸ್.ಖಾರ್ವಿ ಮಾತನಾಡಿ, ಸಂಘದ ಪಾಲುದಾರರಿಗೆ ಶೇ.೧೦ರಂತೆ ಡಿವಿಡೆಂಡ್ ನೀಡಲು ನೀಡಲು ನಿರ್ಧರಿಸಿದ್ದು, ಸರಕಾರದಿಂದ ಮಹಿಳೆಯರಿಗೆ ಹಾಗೂ ಸಂಘದ ಸದಸ್ಯರಿಗೆ ದೊರೆಯುವ ವಿವಿಧ ಯೋಜನೆಗಳ ಪ್ರಯೋಜನವನ್ನು ದೊರಕಿಸಿಕೊಡುವ ಪ್ರಾಮಾಣಿಕ ಪ್ರಯತ್ನವನ್ನು ಮಾಡಲಾಗುವುದು ಎಂದರು. ಸಂಘದ ಉಪಾಧ್ಯಕ್ಷೆ ಮಾಲತಿ ಜಿ.ಖಾರ್ವಿ, ನಿರ್ದೇಶಕಿಯರಾದ ನೀಲಾವತಿ ಎಸ್.ಖಾರ್ವಿ, ಶಾರದಾ ಆರ್.ಹೆಗ್ಡೆ, ಶೈಲಾ ಎಂ.ಖಾರ್ವಿ, ಜಯಂತಿ ಆರ್.ಪಟೇಲ್, ದೀಪಾ ಎಸ್.ಖಾರ್ವಿ, ರೇಖಾ ಜಿ.ಖಾರ್ವಿ ಉಪಸ್ಥಿತರಿದ್ದರು. ಸಭೆಯಲ್ಲಿ ಭಾಗವಹಿಸಿದ ೨೦ ಸದಸ್ಯರಿಗೆ ಬಹುಮಾನ ವಿತರಿಸಲಾಯಿತು. ನಿರ್ದೇಶಕಿ ಪಾರ್ವತಿ ಬಿ.ಖಾರ್ವಿ ಸ್ವಾಗತಿಸಿದರು. ಸಂಘದ ಲೆಕ್ಕಿಗ ರವಿಚಂದ್ರ ಖಾರ್ವಿ ಅವರು ೨೦೧೬-೧೭ನೇ ಸಾಲಿನ ಆಯವ್ಯಯ ಅಂದಾಜು ಬಜೆಟ್ ಮತ್ತು ೨೦೧೫-೧೬ನೇ ಸಾಲಿನ ಲಾಭಾಂಶ ವಿಂಗಡಣೆಯನ್ನು ಮಂಡಿಸಿದರು. ಸಂಘದ ಕಾರ್ಯದರ್ಶಿ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಗಾಂಧಿ ಜಯಂತಿ ಅಂಗವಾಗಿ ಮರವಂತೆ ಗ್ರಾಮ ಪಂಚಾಯತ್ ವಿಶೇಷ ಗ್ರಾಮಸಭೆ ನಡೆಸಿತು. ಅಧ್ಯಕ್ಷತೆ ವಹಿಸಿದ್ದ ಗ್ರಾ.ಪಂ. ಅಧ್ಯಕ್ಷೆ ಅನಿತಾ ಆರ್. ಕೆ ಗಾಂಧೀಜಿ ಭಾವಚಿತ್ರಕ್ಕೆ ಮಾಲಾರ್ಪಣೆಗೈದು ಗೌರವ ಸಲ್ಲಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು ಮರವಂತೆಯನ್ನು ಸಂಪೂರ್ಣ ಸ್ವಚ್ಛ ಗ್ರಾಮವಾಗಿ ಪರಿವರ್ತಿಸಲು ಕ್ರಮ ತೆಗೆದುಕೊಳ್ಳಲಾಗುತ್ತಿದೆ. ಸುಸಜ್ಜಿತ ತ್ಯಾಜ್ಯ ನಿರ್ವಹಣಾ ಘಟಕ ನಿರ್ಮಾಣವಾಗುತ್ತಿದೆ. ಅದೇ ವೇಳೆ ಗ್ರಾಮವು ಪ್ಲಾಸ್ಟಿಕ್‌ಮುಕ್ತ ಆಗಬೇಕಾಗಿದೆ. ಪ್ಲಾಸ್ಟಿಕ್ ಬಳಕೆಗೆ ಸರಕಾರ ಈಗಾಗಲೇ ನಿಷೇಧ ಹೇರಿದೆ. ಇದನ್ನು ವ್ಯಾಪಾರಸ್ಥರ ಮತ್ತು ಸಾರ್ವಜನಿಕರ ಗಮನಕ್ಕೆ ತಂದು ಅನುಷ್ಠಾನಿಸಲಾಗುವುದು. ಇದಕ್ಕೆ ಎಲ್ಲರ ಸಹಕಾರ ಬೇಕು ಎಂದರು. ಅಭಿವೃದ್ಧಿ ಅಧಿಕಾರಿ ಹರಿಶ್ಚಂದ್ರ ಆಚಾರ್ಯ ಸ್ವಾಗತಿಸಿ, ವಿಶೇಷ ಗ್ರಾಮಸಭೆಯ ಔಚಿತ್ಯವನ್ನು ವಿವರಿಸಿದರು. ಉಪಾಧ್ಯಕ್ಷ ಗಣೇಶ ಪೂಜಾರಿ, ಸದಸ್ಯರು, ಮಾಜಿ ಅಧ್ಯಕ್ಷ ಎಂ. ನರಸಿಂಹ ಶೆಟ್ಟಿ, ಇತರರು ಇದ್ದರು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಸರಕಾರಿ ಪ್ರಥಮ ದರ್ಜೆ ಕಾಲೇಜು ಬೈಂದೂರು ಇಲ್ಲಿ ಇಂಗ್ಲಿಷ್ ವಿಭಾಗದ ಉದ್ಘಾಟನೆ ಹಾಗೂ ಆಧುನಿಕ ಯುಗದಲ್ಲಿ ಇಂಗ್ಲಿಷ್ ಮಹತ್ವ ಎನ್ನುವ ವಿಷಯದ ಬಗ್ಗೆ ಉಪನ್ಯಾಸ ನಡೆಯಿತು. ಸಂಪನ್ಮೂಲ ವ್ಯಕ್ತಿಯಾಗಿ ಮಂಗಳೂರು ರಘರಾಮ ನಾಯಕ್ ವಿದ್ಯಾರ್ಥಿಗಳಿಗೆ ಉಪನ್ಯಾಸ ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕನ್ನಡ ವಿಭಾಗದ ಮುಖ್ಯಸ್ಥ ಅನಿಲ ಕುಮಾರ್ ವಹಿಸಿದ್ದರು. ವಾಣಿಜ್ಯ ವಿಭಾಗದ ಮುಖ್ಯಸ್ಥ ಉಮೇಶ ಮಯ್ಯ ಉಪಸ್ಥಿತರಿದ್ದರು. ಇಂಗ್ಲಿಷ್ ವಿಭಾಗದ ಸಂಚಾಲಕಿ ಅಮಿತಾ ಇವರು ಪ್ರಾಸ್ತಾವಿಕ ಮಾತನ್ನಾಡಿದರು, ಪ್ರೇಮಲತಾ ಕಾರ್ಯಕ್ರಮ ನಿರೂಪಿಸಿದರು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ನಾವು ನಮ್ಮ ಸಂಸ್ಕೃತಿ ಮತ್ತು ಧರ್ಮವನ್ನು ಉಳಿಸಿ ಬೆಳೆಸಬೇಕಾದರೆ ನಮ್ಮ ಅಂತರಂಗದಿಂದ ಗಟ್ಟಿಯಾಗಬೇಕು. ಟಿ.ವಿ.ಧಾರವಾಹಿಗಳಿಂದ ಇಂದು ನಾವು ಯಾಂತ್ರಿಕ ಸ್ಥಿತಿಯತ್ತ ಹೆಜ್ಜೆ ಇಡುತ್ತಿದ್ದೇವೆ. ನಾವು ಲೌಕಿಕ ಭೋಗದ ಅಮಲಿನಿಂದ ನಮ್ಮ ದೃಷ್ಟಿಕೋನವನ್ನು ಬದಲಿಸುತ್ತಾ ಸಾಗುತ್ತಿರುವುದು ನಮ್ಮ ಧಾರ್ಮಿಕ ಮತ್ತು ಸಾಮಾಜಿಕ ಅಧಃಪತನಕ್ಕೆ ಹಾದಿಯಾಗುವ ಅಪಾಯವಿದೆ ಎಂದು ಸಾಂದೀಪನಿ ಶ್ರೀ ಕೇಮಾರು ಮಠಾಧೀಶ ಶ್ರೀ ಈಶ ವಿಠಲದಾಸ ಸ್ವಾಮೀಜಿ ಹೇಳಿದ್ದಾರೆ. ಕುಂದಾಪುರ ತಾಲೂಕಿನ ಬೆಳ್ವೆ ಗ್ರಾಮ ಪಂಚಾಯಿತಿಯ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಕೊಂಜಾಡಿ ಇದರ ಮೂರನೇ ವರ್ಷದ ನವರಾತ್ರಿ ಉತ್ಸವದ ಪ್ರಯುಕ್ತ ದುರ್ಗಾ ಪೂಜೆ, ದುರ್ಗಾ ಹೋಮ, ಮತ್ತು ಅನ್ನ ಸಂತರ್ಪಣೆ ಕಾರ್ಯಕ್ರಮದ ಸಂದರ್ಭ ಆಶೀರ್ವಚನ ಮಾಡುತ್ತಿದ್ದರು. ಹಿಂದೆ ದೇವಸ್ಥಾನಗಳು ಧಾರ್ಮಿಕ ಗ್ರಂಥಾಲಯಗಳಾಗಿದ್ದವು. ಆದರೆ ಇಂದು ಅಂತಹಾ ಧಾರ್ಮಿಕ ಶಿಕ್ಷಣವನ್ನು ದೇವಸ್ಥಾನಗಳು ಕಡಿಮೆ ಮಾಡುತ್ತಿವೆ. ನಮ್ಮ ಪುರಾಣ ಗ್ರಂಥಗಳ ಅಧ್ಯಯನಗಳು ನಮ್ಮ ಧರ್ಮ ರಕ್ಷಣೆಗೆ ಬಹಳ ಮುಖ್ಯ ಎಂದ ಅವರು, ಕೇವಲ ದೇವಸ್ಥಾನಗಳ ನಿರ್ಮಾಣದಿಂದ ದೇವರನ್ನು…

Read More

ವಿನಾಯಕ ಕೊಡ್ಸರ ಇದು ಇಂಟರ್‌ನೆಟ್ ಜಗತ್ತು. ಒಂದು ಸುದ್ದಿ, ಮಾಹಿತಿ ಮಾಧ್ಯಮಗಳಿಗಿಂತ ಮೊದಲು ಮೊಬೈಲ್‌ನಿಂದ ಓದುಗನ ಕೈ ಸೇರುತ್ತಿದೆ. ಜನ ಟಿವಿ ನೋಡ್ತಾರೋ, ಪೇಪರ್ ಓದ್ತಾರೋ ಗೊತ್ತಿಲ್ಲ. ಆದ್ರೆ ಕೈಯ್ಯಲ್ಲಿರೋ ಮೊಬೈಲ್‌ನಿಂದ ಆಗಾಗ ಜಾಲತಾಣಗಳನ್ನು ಜಾಲಾಡುತ್ತಾರೆ. ನಗರವಾಸಿಗಳು ಮಾತ್ರ ಈ ಇಂಟರ್‌ನೆಟ್ ಜಗತ್ತಿಗೆ ಹೊಂದಿಕೊಂಡೋರು ಅನ್ನೋ ಟ್ರೆಂಡ್ ಬದ್ಲಾಗ್ತಿದೆ. ಹಳ್ಳಿ ಮೂಲೆಯವನಿಗೂ ಸ್ಮಾರ್ಟ್‌ಫೋನ್ ಬಳಕೆ ಗೊತ್ತಾಗಿದೆ. ಹೀಗಿರುವಾಗ ನಮ್ಮ ಮಾಧ್ಯಮಗಳು ಅದೆಷ್ಟು ಎಚ್ಚರವಾಗಿದ್ದರು ಸಾಕಾಗಲಾರದು. ಹೀಗೆಲ್ಲ ಸ್ಪರ್ಧೆ ಎದುರಾಗಿರುವಾಗಲು ನಮ್ಮ ಒಂದಷ್ಟು ಮಾಧ್ಯಮಗಳು ಮತ್ತಷ್ಟು ಬೇಜವಬ್ದಾರಿ ತೋರುತ್ತಿರುವುದು ಬೇಸರದ ಸಂಗತಿ. ಜಾಲತಾಣದಲ್ಲಿ ಜಾಲಾಡುವಷ್ಟು ಜಾಣತನವಿರುವ ವ್ಯಕ್ತಿ ಖಂಡಿತ ವಿವೇಕಿ. ಆತನಿಗೆ ಒಂದು ಸುದ್ದಿಯನ್ನು ಕ್ರಾಸ್‌ಚೆಕ್ ಮಾಡಿ ಅದರ ಹಿನ್ನೆಲೆಯನ್ನು ಹುಡುಕುವಷ್ಟು ವಿವೇಚನೆ ಇರುತ್ತದೆ. ಇಂತಿಪ್ಪ ಕಾಲದಲ್ಲೂ ನೀವು ನಿಮ್ಮ ಮೂಗಿನ ನೇರಕ್ಕೆ ಸುದ್ದಿಗಳನ್ನು, ಸ್ಟೋರಿಗಳನ್ನು ಮಾಡಿಕೊಂಡು ಯಾರ ಕಿವಿ ಮೇಲೆ ಹೂವು ಇಡಲು ಹೊರಟಿರುವಿರಿ ಎಂಬುದು ಮಾತ್ರ ಅರ್ಥವಾಗುತ್ತಿಲ್ಲ. ಮಾಧ್ಯಮ ಜಾಹೀರಾತು ಆಧಾರಿತ. ಪತ್ರಿಕೆಯೋ, ಟಿವಿಯೋ ಉಳಿಯಬೇಕಾದರೆ ಅದಕ್ಕೆ ಜಾಹೀರಾತು ಬೇಕು.…

Read More

ಕುಂದಾಪ್ರ ಡಾಟ್ ಕಾಂ ಮಾಹಿತಿ. ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯ ವಿವಿಧ ವಿಭಾಗದ ಪೊಲೀಸ್ ಉಪ ನಿರೀಕ್ಷಕ ಹಾಗೂ ಪೊಲೀಸ್ ಪೇದೆ ಹುದ್ದೆಗಳ ನೇಮಕಾತಿ ನಡೆಯಲಿದ್ದು ಅರ್ಹ ಪುರುಷ ಮತ್ತು ಮಹಿಳಾ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಈ ಕೆಳಗಿನ ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ. ಪೊಲೀಸ್ ಉಪ ನಿರೀಕ್ಷಕ ಹುದ್ದೆ (ಸಿವಿಲ್) ಪುರುಷ, ಮಹಿಳೆ ಪೊಲೀಸ್ ಉಪ ನಿರೀಕ್ಷಕ ಹುದ್ದೆ (ಎಫ್.ಪಿ.ಬಿ) ಪುರುಷ ಮಹಿಳೆ ಪೊಲೀಸ್ ಉಪ ನಿರೀಕ್ಷಕ ಹುದ್ದೆ (ಕೆಎಸ್‌ಆರ್‌ಪಿ) ಪುರುಷ ಪೊಲೀಸ್ ಉಪ ನಿರೀಕ್ಷಕ ಹುದ್ದೆ (ಡಿಎಆರ್) ಪುರುಷ ಪೊಲೀಸ್ ಉಪ ನಿರೀಕ್ಷಕ ಹುದ್ದೆ (ವೈರ್‌ಲೆನ್)ಪುರುಷ ಮಹಿಳೆ ಪೊಲೀಸ್ ಉಪ ನಿರೀಕ್ಷಕ ಹುದ್ದೆ (ಕೆ.ಎಸ್.ಐ.ಎಸ್.ಎಫ್) ಪುರುಷ ಪೊಲೀಸ್ ಕಾನ್ಸ್‌ಟೆಬಲ್ (ಸಿವಿಲ್) ಪುರುಷ ಮಹಿಳೆ ಪೊಲೀಸ್ ಕಾನ್ಸ್‌ಟೆಬಲ್ (ಸಶಸ್ತ್ರ ಪಡೆ) ಪುರುಷ ಪೊಲೀಸ್ ಕಾನ್ಸ್‌ಟೆಬಲ್ (ಕೆ.ಎಸ್.ಐ.ಎಸ್.ಎಫ್) ಪುರುಷ ಪೊಲೀಸ್ ಕಾನ್ಸ್‌ಟೆಬಲ್ (ಎಫ್.ಪಿ.ಬಿ) ಪುರುಷ ಮಹಿಳೆ ಕುಂದಾಪ್ರ ಡಾಟ್ ಕಾಂ ಮಾಹಿತಿ. ಮಾಹಿತಿ ಇಲ್ಲಿದೆ ಹುದ್ದೆಗಳ ವಿವರ ಹಾಗೂ ಅರ್ಜಿ ಸಲ್ಲಿಸಲು ಕೊನೆಯ…

Read More