ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಇಲ್ಲಿನ ತಗ್ಗರ್ಸೆ ಮೊಗವೀರ ಗರಡಿ 17ನೇ ವರ್ಷದ ಸಾರ್ವಜನಿಕ ಶ್ರೀ ಶಾರದೋತ್ಸವ ಸಮಿತಿ ಅಧ್ಯಕ್ಷರಾಗಿ ಸುಬ್ರಹ್ಮಣ್ಯ ಮೊಗವೀರ ಆಯ್ಕೆಯಾಗಿದ್ದಾರೆ. ಸಮಿತಿಯ ಪ್ರಧಾನ ಕಾರ್ಯದರ್ಶಿಯಾಗಿ ವೆಂಕಟರಮಣ ದೇವಾಡಿಗ, ಉಪಾಧ್ಯಕ್ಷರಾಗಿ ಹರೀಶ್ ಎಚ್. ಎಂ., ನಾಗರಾಜ ದೇವಾಡಿಗ, ಮಹೇಶ್ ಗಾಣಿಗ, ಮಂಜುನಾಥ ದೇವಾಡಿಗ, ಪ್ರಮೋದ್ ಪೂಜಾರಿ ಆಯ್ಕೆಯಾಗಿದ್ದರೇ ಕಾರ್ಯದರ್ಶಿಯಾಗಿ ಅಭಿಲಾಷ್ ಹೆಚ್., ಸತ್ಯನಾರಾಯಣ, ವಾಸುದೇವ್, ರವೀಂದ್ರ ಬಿ. ಆಯ್ಕೆಗೊಂಡಿದ್ದಾರೆ ಎಂದು ಸಮಿತಿಯ ಪ್ರಕಟಣೆ ತಿಳಿಸಿದೆ.
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ತಾಲೂಕು ಕೇಂದ್ರದಿಂದ ಕೇವಲ ೭ಕಿ.ಮೀ ದೂರವಿರುವ ಅನಾದಿ ಕಾಲದಿಂದಲೂ ಎಲ್ಲ ರೀತಿಯ ವ್ಯಾಪಾರ, ಸೌಲಭ್ಯಗಳಿಗೆ ಕುಂದಾಪುರವನ್ನು ಆಶ್ರಯಿಸಿರುವ ಕಟ್‌ಬೆಲ್ತೂರು ಗ್ರಾಮವನ್ನು ೨೦ ಕಿ. ಮೀ ದೂರದಲ್ಲಿರುವ ಯಾವುದೇ ಸಮರ್ಪಕ ಸಾರಿಗೆ ಸೌಲಭ್ಯದ ಅನುಕೂಲವಿಲ್ಲದ ಕಂಡ್ಲೂರು ಗ್ರಾಮಾಂತರ ಆರಕ್ಷಕ ಠಾಣೆ ವ್ಯಾಪ್ತಿಗೆ ಸೇರಿಸಿರುವುದು ಅವೈಜ್ಞಾನಿಕ ಕ್ರಮವೆಂದು ಕಟ್‌ಬೆಲ್ತೂರು ಗ್ರಾಮಸ್ಥರು ಬೈಂದೂರು ಶಾಸಕ ಕೆ. ಗೋಪಾಲ ಪೂಜಾರಿಯವರಿಗೆ ಮನವಿ ಸಲ್ಲಿಸಿದ್ದಾರೆ. ಕಟ್‌ಬೆಲ್ತೂರು ಗ್ರಾಮವನ್ನು ಕಂಡ್ಲೂರು ಗ್ರಾಮಾಂತರ ಆರಕ್ಷಕ ಠಾಣೆ ವ್ಯಾಪ್ತಿಗೆ ಸೇರಿಸುವ ಯತ್ನ ದೋಷಪೂರಿತವಾಗಿದ್ದು ಮುಂದೊಂದು ದಿನ ಅಪಾಯಕಾರಿಯಾಗಬಲ್ಲದು. ಕಟ್‌ಬೆಲ್ತೂರು ದೈನಂದಿನ ಬೇಕು ಬೇಡಗಳಿಗೆ ಕಾರ್ಯ ಕಲಾಪಗಳಿಗೆ ಕುಂದಾಪುರವನ್ನು ಅವಲಂಭಿಸಿದ್ದು ಎಲ್ಲ ರೀತಿಯಿಂದಲೂ ಅನುಕೂಲದಿಂದ ಕೂಡಿದೆ ಆದರೆ ಇದೀಗ ಏಕಾಏಕಿ ಕಂಡ್ಲೂರು ಠಾಣೆ ವ್ಯಾಪ್ತಿಗೆ ತರುವ ಪ್ರಯತ್ನ ಅಸಂಬದ್ದವಾಗಿದ್ದು ಯಾವುದೇ ಕಾರಣಕ್ಕೂ ಕಂಡ್ಲೂರು ಠಾಣೆ ವ್ಯಾಪ್ತಿಗೆ ಸೇರಿಸುವುದು ಸಾಧುವಲ್ಲ ಈ ಭಾಗದ ಜನರಿಗೆ ಅನ್ಯಾಯ ಮಾಡಿದಂತಾಗುತ್ತದೆ ಆದುದರಿಂದ ತಕ್ಷಣ ಈ ಪ್ರಯತ್ನವನ್ನು ಹಿಂಪಡೆಯುವಂತೆ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ : ಜೀವನ ಮೌಲ್ಯಗಳ ಕುರಿತು ಕೇಳಿದರೆ ಮತ್ತು ಅವುಗಳ ಅರಿವು ಗಳಿಸಿಕೊಂಡರೆ ಅದರಿಂದ ಯಾವ ಪ್ರಯೋಜನವೂ ಆಗದು. ಮೌಲ್ಯಗಳಿಗೆ ಮತ್ತು ಬದುಕಿಗೆ ಅರ್ಥ ಬರುವುದು ವ್ಯಕ್ತಿಗಳು ಅವುಗಳನ್ನು ನಡೆ, ನುಡಿಗಳಲ್ಲಿ ಅನುಸರಿಸಿದಾಗ ಮಾತ್ರ ಎಂದು ಕುಂದಾಪುರ ಹೋಲಿ ರೋಸರಿ ಚರ್ಚ್‌ನ ಸಹಾಯಕ ಧರ್ಮಗುರು ಫಾ. ಜೆರಾಲ್ಡ್ ಸಂದೀಪ್ ಡಿಮೆಲ್ಲೊ ಹೇಳಿದರು. ನಾವುಂದ ರಿಚರ್ಡ್ ಆಲ್ಮೇಡಾ ಮೆಮೋರಿಯಲ್ ಕಾಲೇಜು ಮರವಂತೆಯ ಸಾಧನಾ ಸಮುದಾಯ ಭವನದ ವಿ. ಕೆ. ಕಾಮತ್ ಸಭಾಗೃಗೃಹದಲ್ಲಿ ಶನಿವಾರ ಕಾಲೇಜಿನ ವಿದ್ಯಾರ್ಥಿಗಳಿಗಾಗಿ ಏರ್ಪಡಿಸಿದ್ದ ಜೀವನ ಮೌಲ್ಯ ಶಿಕ್ಷಣ ಶಿಬಿರವನ್ನು ಅವರು ಉದ್ಘಾಟಿಸಿ ಮಾತನಾಡಿದರು. ಕಾಲೇಜಿನ ಸಂಚಾಲಕ ಸಿಲ್ವೆಸ್ಟರ್ ಆಲ್ಮೇಡಾ ಅಧ್ಯಕ್ಷತೆ ವಹಿಸಿದ್ದರು. ಉಪನ್ಯಾಸಕಿ ರೇಷ್ಮಾ ಎಸ್. ಶೆಟ್ಟಿ ಸ್ವಾಗತಿಸಿದರು. ಪ್ರಾಂಶುಪಾಲ ಎಸ್. ನಾರಾಯಣ ರಾವ್ ಪ್ರಾಸ್ತಾವಿಕ ನುಡಿಗಳನ್ನಾಡಿ ಶಿಬಿರದ ಉದ್ದೇಶ ಮತ್ತು ಅಗತ್ಯವನ್ನು ವಿವರಿಸಿದರು. ನಿರೂಪಿಸಿದ ರೆನಿಟಾ ವಂದಿಸಿದರು. ಶಿಬಿರದಲ್ಲಿ ಫಾ. ಜೆರಾಲ್ಡ್ ಸಂದೀಪ್ ಡಿಮೆಲ್ಲೊ ’ಪ್ರಸ್ತುತ ಜೀವನ ಮೌಲ್ಯಗಳು’ ಕುರಿತು, ಶಿವಮೊಗ್ಗದ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಕರಾವಳಿಯ ಗಂಡುಕಲೆ ಯಕ್ಷಗಾನದ ಸ್ತ್ರೀ ಪಾತ್ರಧಾರಿಯ ಕಥೆಯನ್ನಾಧರಿಸಿದ, ಕುಂದನಾಡಿನ ಸೊಗಡು ಹಾಗೂ ಭಾಷೆಯನ್ನು ಬಳಸಿಕೊಂಡು ಅನನ್ಯ ಕಾಸರವಳ್ಳಿಯ ಚೊಚ್ಚಲ ನಿರ್ದೇಶನದ ಹರಿಕಥಾ ಪ್ರಸಂಗ ಸಿನಿಮಾ ಬೂಸಾನ್ ಚಿತ್ರೋತ್ಸವಕ್ಕೆ ಆಯ್ಕೆಯಾಗಿದೆ. ಕನ್ನಡದ ಸಿನೆಮಾವೊಂದು ಮೊದಲ ಬಾರಿಗೆ ಚಲನಚಿತ್ರೋತ್ಸವಕ್ಕೆ ಆಯ್ಕೆಯಾಗುತ್ತಿರುವುದು ಹೆಮ್ಮ ತಂದಿದೆ. ಗೋಪಾಲಕೃಷ್ಣ ಪೈ ಯವರ ಸಣ್ಣ ಕಥೆಯನ್ನು ಆಧರಿಸಿರುವ ಚಿತ್ರಕ್ಕೆ ಗಿರೀಶ್ ಕಾಸರವಳ್ಳಿ ಮತ್ತು ಗೋಪಾಲಕೃಷ್ಣ ಪೈ ಚಿತ್ರಕಥೆ ಹೆಣೆದಿದ್ದು ಸ್ತ್ರೀ ಪಾತ್ರ ನಿರ್ವಹಿಸುವ ಹರಿ ಎಂಬ ಪ್ರಸಿದ್ಧ ಯಕ್ಷಗಾನ ಕಲಾವಿದ ರಂಗದಿಂದ ಹೊರಗೆ ನಿತ್ಯ ಜೀವನದಲ್ಲಿ ಪುರುಷನಾಗಿ ಬದುಕುವಲ್ಲಿನ ತಲ್ಲಣಗಳೇ ಚಿತ್ರದ ಕಥಾವಸ್ತು. ಹರಿಕಥಾ ಪ್ರಸಂಗ ಚಿತ್ರದಲ್ಲಿ ಯಕ್ಷಗಾನ ಕಲಾವಿದನಲ್ಲಿ ಕ್ರಮೇಣ ಲಿಂಗ ಸಂಬಂಧಿ ಐಡೆಂಟಿಟಿ ಸಂದಿಗ್ಧತೆಗೆ ಕಾರಣವಾಗುತ್ತದೆ. ಇದು ಅವನ ಆತ್ಮಾವಲೋಕನ ಮತ್ತು ವಿಶ್ವದ ಸಂಶೋಧನೆಗೆ ಕಾರಣವಾಗುತ್ತದೆ. ಬೂಸಾನ್ ಚಿತ್ರೋತ್ಸವವನ್ನು ಪೌರಾತ್ಯ ದೇಶಗಳ ಪ್ರತಿಷ್ಠಿತ ಚಿತ್ರೋತ್ಸವವೆಂದು ಪರಿಗಣಿಸಲಾಗುತ್ತದೆ ಎಂದು ನಿರ್ದೇಶಕಿ ಅನನ್ಯಾ ಕಾಸರವಳ್ಳಿ ಟೈಮ್ಸ್ ಆಫ್ ಇಂಡಿಯಾಕ್ಕೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ. ಕುಂದಾಪ್ರ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಪ್ರಸಿದ್ಧ &ಟಿವಿ ಹಿಂದಿ ವಾಹಿನಿಯ ವಾಯ್ಸ್ ಆಫ್ ಇಂಡಿಯಾ ಕಿಡ್ಸ್ ಸಂಗೀತದ ರಿಯಾಲಿಟಿ ಶೋನಲ್ಲಿ ಸ್ವರ್ಧಿಸುತ್ತಿರುವ ಕುಂದಾಪುರ ಮೂಲದ ಕುವರಿ ಸಾನ್ವಿ ಶೆಟ್ಟಿ ನಿಮ್ಮ ಪ್ರೋತ್ಸಾಹದ ನಿರೀಕ್ಷೆಯಲ್ಲಿದ್ದಾರೆ. ತನ್ನ ಸುಮಧುರ ಕಂಠದ ಮೂಲಕ ಲಕ್ಷಾಂತರ ಪ್ರೇಕ್ಷಕರ ಮನಗೆದ್ದಿರುವ ನಮ್ಮೂರಿನ ಹುಡುಗಿ ಫೈನಲ್ ಹಂತ ತಲುಪಬೇಕಿದ್ದರೇ ನಾವು ವೂಟ್ ಮಾಡಿ ಬೆಂಬಲಿಸುವ ಅಗತ್ಯವಿದೆ. 7330599807 ಈ ಮೊಬೈಲ್ ನಂಬರ್‌ಗೆ ನೀವು ಎಷ್ಟು ಭಾರಿಯಾದರೂ ಮಿಸ್ಡ್ ಕಾಲ್ ನೀಡಿ ನೀವು ಓಟ್ ಮಾಡಬಹುದು. ಅಥವಾ SAN ಎಂದು ಟೈಪ್ ಮಾಡಿ 57575 ಈ ನಂಬರ್‌ಗೆ ಮೆಸೆಜ್ ಮಾಡಿ ವೋಟ್ ಮಾಡಬಹುದು. ವಾಯ್ಸ್ ಆಫ್ ಇಂಡಿಯಾ ಕಿಡ್ಸ್ ಕಾರ್ಯಕ್ರಮ ಅಕ್ಟೋಬರ್ ೨ನೇ ತಾರೀಕು 9ರಿಂದು 10ಗಂಟೆಯವರೆಗೆ ಇದ್ದು, ರಾತ್ರಿ 10ಗಂಟೆಯಿಂದ ಬೆಳಿಗ್ಗೆ 7 ಗಂಟೆಯ ತನಕ ನೀವು ವೋಟ್ ಮಾಡಬಹುದಾಗಿದೆ. Read this ► ಹಿಂದಿ ವಾಹಿನಿಯಲ್ಲಿ ಹಾಡಿನ ಮೋಡಿ ಮಾಡುತ್ತಿದ್ದಾಳೆ ಕುಂದಾಪುರ ಪೋರಿ ಸಾನ್ವಿ ಶೆಟ್ಟಿ – http://kundapraa.com/?p=16375
ಕುಂದಾಪ್ರ ಡಾಟ್ ಕಾಂ ಸುದ್ದಿ. ಗಂಗೊಳ್ಳಿ: ಮಾರಟಕ್ಕೆಂದು ಅಂಗಡಿಯಲ್ಲಿ ಇರಿಸಲಾಗದ್ದ ತಂಪು ಪಾನೀಯದ ಪ್ಲಾಸ್ಟಿಕ್ ಬಾಟಲಿಗಳು ಸಿಡಿದು ಆಗಸದೆತ್ತರಕ್ಕೆ ಹಾರಿದ ಘಟನೆ ತಾಲೂಕಿನ ಗಂಗೊಳ್ಳಿಯಲ್ಲಿ ವರದಿಯಾಗಿದೆ. ಗಂಗೊಳ್ಳಿಯ ರಥಭೀದಿಯ ಉದ್ಯಮಿ ಜಿ. ಮನೋಹರ ಶೆಣೈ ಅವರ ದಿನಸಿ ಅಂಗಡಿಯಲ್ಲಿ ಇರಿಸಲಾಗಿದ್ದ ಸೆವೆನ್ ಅಪ್ ಕಂಪೆನಿಯ ತಂಪು ಪಾನೀಯದ ಪ್ಲಾಸ್ಟಿಕ್ ಬಾಟಲಿಗಳು ಇದ್ದಕ್ಕಿದ್ದಂತೆ ಸಿಡಿದು ಹೋಗಿವೆ. ಬಾಂಬ್ ಸ್ಟೋಟವಾದಂತೆ ಪ್ಲಾಸ್ಟಿಕ್ ಬಾಟಲಿಗಳು ಬುಡದಲ್ಲಿ ಒಡೆದು ಮೇಲಕ್ಕೆ ಹಾರಿದೆ. ಅಂಗಡಿಯ ಮೇಲ್ಛಾವಣಿಗೆ ಸ್ವಲ್ಪ ಹಾನಿಯಾಗಿದೆ. ಸುಮಾರು ನಾಲ್ಕೈದು ಬಾಟಲಿಗಳು ಇದ್ದಕ್ಕಿಂದತೆ ಇದೇ ರೀತಿಯಾಗಿ ಒಡೆದು ಹೋಗಿದ್ದು ಅಂಗಡಿ ಮಾಲೀಕರು ಘಟನೆ ನೋಡಿ ಅಚ್ಚರಿಗೊಳಗಾಗಿದ್ದಾರೆ. ಉಳಿದ ಬಾಟಲಿಗಳನ್ನು ಕಂಪೆನಿಯ ಡೀಲರ್‌ಗೆ ಹಿಂದಿರುಗಿಸಿದ್ದಾರೆ. ಬಾಟಲಿಗಳು ಒಡೆದು ಹಾರಲು ಕಾರಣವೇನು ಎಂಬುದು ಮಾತ್ರ ಪತ್ತೆಯಾಗಿಲ್ಲ./ಕುಂದಾಪ್ರ ಡಾಟ್ ಕಾಂ ಸುದ್ದಿ/
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಯಕ್ಷಗಾನ ಕಲೆ ಕರ್ನಾಟಕದ ಕೆಲವೇ ಜಿಲ್ಲೆಗಳಿಗೆ ಸೀಮಿತವಾಗಿದ್ದರೂ ಕೂಡಾ ಕರಾವಳಿ ಭಾಗದ ಪ್ರತಿಭಾವಂತ ಮತ್ತು ಅನುಭವಿ ವೃತ್ತಿ ಕಲಾವಿದರು ಯಕ್ಷಗಾನ ಸಂಘಟನೆ ಹಾಗೂ ಪ್ರಸಾರದಲ್ಲಿ ತೊಡಗಿರುವುದು ಆಶಾದಾಯಕ ಬೆಳವಣಿಗೆ ಎಂದು ರಾಜ್ಯ ಮೀನುಗಾರಿಕಾ, ಯುವಜನ ಸೇವಾ, ಕ್ರೀಡಾ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ಹೇಳಿದರು. ಕಿರಿಮಂಜೇಶ್ವರ ನಾಗೂರು ಸುತ್ತಲಿನ ನಾಗರಿಕರ ಮತ್ತು ರಾಜ್ಯ ಯಕ್ಷಗಾನ ಬಯಲಾಟ ಅಕಾಡೆಮಿಯ ಸಹಯೋಗದೊಂದಿಗೆ ಧಾರೇಶ್ವರ ಯಕ್ಷ ಬಳಗ ಚಾರಿಟಬಲ್ ಟ್ರಸ್ಟ್ ಆಶ್ರಯದಲ್ಲಿ ನಾಗೂರಿನ ಒಡೆಯರಮಠ ಗೋಪಾಲಕೃಷ್ಣ ಕಲಾಮಂದಿರದ ಯಕ್ಷಗುರು ಹೇರಂಜಾಲು ವೆಂಕಟರಮಣ ಗಾಣಿಗ ವೇದಿಕೆಯಲ್ಲಿ ಆಯೋಜಿಸಿದ ತಾಳಮದ್ದಲೆ ಸಪ್ತಾಹದ ಸಮಾರೋಪ ಸಮಾರಂಭದ ಅಧ್ಯಕ್ಷತೆವಹಿಸಿ ಮಾತನಾಡಿದರು. ಯಕ್ಷಗಾನಕ್ಕಾಗಿ ಕೆಲವರು ತಮ್ಮ ಜೀವನವನ್ನೇ ಮುಡುಪಾಗಿಟ್ಟಿದ್ದಾರೆ. ಅಂತವರನ್ನು ಗುರುತಿಸಿ ಗೌರವಿಸುವ ಕಾರ್ಯ ನಿರಂತರವಾಗಬೇಕು. ಅಲ್ಲದೇ ಇಂತಹ ಕಾರ್ಯಕ್ರಮಗಳನ್ನು ಮಾಡುವುದರ ಮೂಲಕ ಈ ಹಿಂದೆ ಯಕ್ಷಗಾನದಲ್ಲಿ ಸಾಧನೆ ಮಾಡಿ ನಮ್ಮನ್ನಗಲಿದ ಹೆಸರಾಂತ ಕಲಾವಿದರನ್ನು ಯಕ್ಷವೇದಿಕೆಯಲ್ಲಿ ಸ್ಮರಿಸಿಕೊಳ್ಳುವುದರಿಂದ ಕಲಾಜೀವನದ ಸಾರ್ಥಕತೆ ಕಾಣಬಹುದಾಗಿದೆ ಎಂದರು.…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಇಲ್ಲಿನ ಪುರಸಭೆ ವತಿಯಿಂದ ಕುಂದಾಪುರದ ಮಹಾತ್ಮಾಗಾಂಧಿ ಪಾರ್ಕ್ ಹಾಗೂ ಶಾಸ್ತ್ರೀ ವೃತ್ತದಲ್ಲಿ ಗಾಂಧಿ ಜಯಂತಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಜನ್ಮದಿನವನ್ನು ಆಚರಿಸಲಾಯಿತು. ಪಾರ್ಕಿನಲ್ಲಿರುವ ಗಾಂಧೀಜಿ ಅವರ ಪ್ರತಿಮೆ ಹಾಗೂ ಶಾಸ್ತ್ರಿವೃತ್ತದಲ್ಲಿರುವ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಪ್ರತಿಮೆಗಳಿಗೆ ಕುಂದಾಪುರ ಪುರಸಭಾ ಅಧ್ಯಕ್ಷೆ ವಸಂತಿ ಮೋಹನ ಸಾರಂಗ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿದರು. ಪುರಸಭಾ ಉಪಾಧ್ಯಕ್ಷ ರಾಜೇಶ್ ಕಾವೇರಿ, ಮುಖ್ಯಾಧಿಕಾರಿ ಗೋಪಾಲ ಶೆಟ್ಟಿ, ಕುಂದಾಪುರ ರೋಟರಿ ನಿಕಟಪೂರ್ವಾಧ್ಯಕ್ಷ ಪ್ರಕಾಶ್ಚಂದ್ರ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.
ಬೈಂದೂರು ಬ್ಲಾಕ್ ಕಾಂಗ್ರೆಸ್ ಕಛೇರಿಯಲ್ಲಿ ಗಾಂಧಿ ಜಯಂತಿ ಆಚರಣೆ ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ತನ್ನ ಸರಳ ಜೀವನದ ಮೂಲಕ ವಿಶ್ವಕ್ಕೆ ಶಾಂತಿ ಮಾರ್ಗವನ್ನು ತೋರಿದ ಮಹಾತ್ಮ ಗಾಂಧೀಜಿಯವರ ಜೀವನ ಹಾಗೂ ತತ್ವಾದರ್ಶಗಳು ಸದಾ ಅನುಕರಣೀಯ. ಗಾಂಧೀಜಿಯನ್ನು ನೆನೆಯುವುದೆಂದರೆ ಅವರ ಆದರ್ಶಗಳ ಸ್ಮರಿಸಿದಂತೆ ಎಂದು ಉಡುಪಿ ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಎಸ್. ರಾಜು ಪೂಜಾರಿ ಹೇಳಿದರು. ಅವರು ಬೈಂದೂರು ಬ್ಲಾಕ್ ಕಾಂಗ್ರೆಸ್ ಕಛೇರಿಯಲ್ಲಿ ಜರುಗಿದ ಗಾಂಧಿ ಜಯಂತಿ ಕಾರ್ಯಕ್ರಮದಲ್ಲಿ ಗಾಂಧೀಜಿಯ ಪೋಟೋಗೆ ಪುಪ್ಪಾರ್ಚನೆಗೈದು ಮಾತನಾಡಿ ಯುವ ಜನತೆ ಮಹಾತ್ಮರ ಬದುಕಿನ ಅಧ್ಯಾಯಗಳ ಬಗೆಗೆ ಚಿಂತಿಸುವುದಲ್ಲದೇ ಅವರು ತೋರಿದ ಹಾದಿಯಲ್ಲಿ ಮುನ್ನಡೆಯಬೇಕಿದೆ ಎಂದರು. ಜಿ.ಪಂ ಸದಸ್ಯೆ ಗೌರಿ ದೇವಾಡಿಗ, ತಾಪಂ ಸದಸ್ಯ ವಿಜಯ ಶೆಟ್ಟಿ, ಯಡ್ತರೆ ಗ್ರಾ.ಪಂ ಸದಸ್ಯರುಗಳಾದ ನಾಗರಾಜ ಶೆಟ್ಟಿ, ಸುಧಾಕರ ದೇವಾಡಿಗ, ಬೈಂದೂರು ಕಾಂಗ್ರೆಸ್ ಮುಖಂಡ ವಾಸುದೇವ ಯಡಿಯಾಳ್ ಮೊದಲಾದವರು ಉಪಸ್ಥಿತಿದ್ದರು. ಬೈಂದೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮದನ್ ಕುಮಾರ್ ಸ್ವಾಗತಿಸಿ ಪ್ರಸ್ತಾವನೆಗೈದರು.
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಪುರಸಭೆಯ ವಿ.ಎಸ್.ಆಚಾರ್ಯ ಸಭಾಂಗಣದಲ್ಲಿ ಸಾಮಾನ್ಯ ಸಭೆ ಅರಂಭವಾಗುತ್ತಿದ್ದಂತೆ ಗೌಜು ಗದ್ದಲವೂ ಆರಂಭವಾಯಿತು. ವಿರೋಧ ಪಕ್ಷದ ಚಂದ್ರಶೇಖರ ಖಾರ್ವಿ, ಸದಸ್ಯರು ಮಧ್ಯಪಾನ ಮಾಡಿ ಸಭೆಗೆ ಬರುತ್ತಾರೆ ಎಂದು ಹೇಳುವ ಮೂಲಕ ಸದಸ್ಯರ ಅವಮಾನಿಸಿದ್ದಾರೆ. ಅದಕ್ಕೆ ಉಪಾಧ್ಯಕ್ಷರು ಉತ್ತರ ಕೊಡಲಿ ಎಂದು ಒತ್ತಾಯಿಸಿದ್ದು, ಸಾಮಾನ್ಯ ಸಭೆ ನಡೆಯುವಾಗಿ ಎಲ್ಲಾ ಸದಸ್ಯರನ್ನು ಗೌರವದಿಂದ ನೋಡಿಕೊಳ್ಳಲಾಗಿದೆ. ಹೊರಗೆ ನಡೆದ ವಿಷಯಕ್ಕೆ ಸಭೆಯಲ್ಲಿ ಉತ್ತರ ಕೊಡಲು ಬರೋದಿಲ್ಲ ಎಂದು ಉಪಾಧ್ಯಕ್ಷ ರಾಜೇಶ್ ಕಾವೇರಿ ಉತ್ತರ ನಂತರ ಸಭೆಯಲ್ಲಿ ಗೌಜು ಗದ್ದಲ ನಡೆಯಿತು. ಸಭೆಯಲ್ಲಿ ಏನು ನಡೆಯುತ್ತದೆ ಎನ್ನೋದು ಅರ್ಥವಾಗಲಿಲ್ಲ. ಕಳೆದ ಆರು ತಿಂಗಳಿಂದ ನೋಡುತ್ತಿದ್ದೇನೆ ಯಾವುದದಾರೂ ಒಂದು ಕಾರಣ ಹಿಡಿದು ಕೊಂಡು ವಿರೋಧ ಪಕ್ಷದವರು ಗಲಾಟೆ ಮಾಡುವ ಮೂಲಕ ಸಾಮಾನ್ಯ ಸಭೆ ಸಮಯ ಹಾಳಾಗುತ್ತಿದೆ. ಅಜೆಂಡ ಮುಂದಿವರಿಯಲು ಅವಕಾಶ ಮಾಡಿಕೊಡುತ್ತಿಲ್ಲ. ಸದಸ್ಯರು ಎಲ್ಲೋ ನಡೆದ ವಿಷಯ ಹಿಡಿದುಕೊಂಡು ಸದನದಲ್ಲಿ ಪ್ರಶ್ತಾಪಿಸುವುದು ತರವಲ್ಲ. ಸದನದಲ್ಲಿ ಸದಸ್ಯರಿಗೆ ಅಗೌರವ ಆಗಿಲ್ಲ ಎಂದು ಚಂದ್ರಶೇಖರ್ ಖಾರ್ವಿ…
