ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಕರಾವಳಿಯ ಗಂಡುಕಲೆ ಯಕ್ಷಗಾನದ ಸ್ತ್ರೀ ಪಾತ್ರಧಾರಿಯ ಕಥೆಯನ್ನಾಧರಿಸಿದ, ಕುಂದನಾಡಿನ ಸೊಗಡು ಹಾಗೂ ಭಾಷೆಯನ್ನು ಬಳಸಿಕೊಂಡು ಅನನ್ಯ ಕಾಸರವಳ್ಳಿಯ ಚೊಚ್ಚಲ ನಿರ್ದೇಶನದ ಹರಿಕಥಾ ಪ್ರಸಂಗ ಸಿನಿಮಾ ಬೂಸಾನ್ ಚಿತ್ರೋತ್ಸವಕ್ಕೆ ಆಯ್ಕೆಯಾಗಿದೆ. ಕನ್ನಡದ ಸಿನೆಮಾವೊಂದು ಮೊದಲ ಬಾರಿಗೆ ಚಲನಚಿತ್ರೋತ್ಸವಕ್ಕೆ ಆಯ್ಕೆಯಾಗುತ್ತಿರುವುದು ಹೆಮ್ಮ ತಂದಿದೆ.
ಗೋಪಾಲಕೃಷ್ಣ ಪೈ ಯವರ ಸಣ್ಣ ಕಥೆಯನ್ನು ಆಧರಿಸಿರುವ ಚಿತ್ರಕ್ಕೆ ಗಿರೀಶ್ ಕಾಸರವಳ್ಳಿ ಮತ್ತು ಗೋಪಾಲಕೃಷ್ಣ ಪೈ ಚಿತ್ರಕಥೆ ಹೆಣೆದಿದ್ದು ಸ್ತ್ರೀ ಪಾತ್ರ ನಿರ್ವಹಿಸುವ ಹರಿ ಎಂಬ ಪ್ರಸಿದ್ಧ ಯಕ್ಷಗಾನ ಕಲಾವಿದ ರಂಗದಿಂದ ಹೊರಗೆ ನಿತ್ಯ ಜೀವನದಲ್ಲಿ ಪುರುಷನಾಗಿ ಬದುಕುವಲ್ಲಿನ ತಲ್ಲಣಗಳೇ ಚಿತ್ರದ ಕಥಾವಸ್ತು. ಹರಿಕಥಾ ಪ್ರಸಂಗ ಚಿತ್ರದಲ್ಲಿ ಯಕ್ಷಗಾನ ಕಲಾವಿದನಲ್ಲಿ ಕ್ರಮೇಣ ಲಿಂಗ ಸಂಬಂಧಿ ಐಡೆಂಟಿಟಿ ಸಂದಿಗ್ಧತೆಗೆ ಕಾರಣವಾಗುತ್ತದೆ. ಇದು ಅವನ ಆತ್ಮಾವಲೋಕನ ಮತ್ತು ವಿಶ್ವದ ಸಂಶೋಧನೆಗೆ ಕಾರಣವಾಗುತ್ತದೆ. ಬೂಸಾನ್ ಚಿತ್ರೋತ್ಸವವನ್ನು ಪೌರಾತ್ಯ ದೇಶಗಳ ಪ್ರತಿಷ್ಠಿತ ಚಿತ್ರೋತ್ಸವವೆಂದು ಪರಿಗಣಿಸಲಾಗುತ್ತದೆ ಎಂದು ನಿರ್ದೇಶಕಿ ಅನನ್ಯಾ ಕಾಸರವಳ್ಳಿ ಟೈಮ್ಸ್ ಆಫ್ ಇಂಡಿಯಾಕ್ಕೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ. ಕುಂದಾಪ್ರ ಡಾಟ್ ಕಾಂ ಸುದ್ದಿ.
ಒಟ್ಟಿನಲ್ಲಿ ಕುಂದಾಪುರ ಕನ್ನಡ ಭಾಷೆಯೊಂದಿಗೆ ಈ ಭಾಗದ ಸಂಸ್ಕೃತಿಯ ಕೊಂಡಿಯನ್ನು ಇಟ್ಟುಕೊಂಡು, ಇದೇ ಪರಿಸರದಲ್ಲಿ ಚಿತ್ರೀಕರಣಗೊಂಡ ಸಿನೆಮಾವೊಂದಕ್ಕೆ ಪ್ರಥಮ ಭಾರಿಗೆ ಅಂತರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಆಯ್ಕೆಯಾಗಿರುವುದು ಹೆಮ್ಮೆಯ ಸಂಗತಿ.ಕುಂದಾಪ್ರ ಡಾಟ್ ಕಾಂ ಸುದ್ದಿ.