ಕುಂದಾಪ್ರ ಡಾಟ್ ಕಾಂ ವರದಿ. ಕುಂದಾಪುರ: ತನ್ನ ಮನೆಯಲ್ಲಿ ಪ್ರತಿನಿತ್ಯ 40ಕ್ಕೂ ಹೆಚ್ಚು ಬೀದಿ ನಾಯಿಗಳಿಗೆ ಊಟ ಹಾಕುತ್ತಾ, ಕಳೆದೊಂದು ದಶಕಗಳಿಂದ ಹಸಿದ ನಾಯಿಗಳ ಹೊಟ್ಟೆ ತುಂಬಿಸುತ್ತಿದ್ದ ಗಂಗೊಳ್ಳಿ ಮೂಲದ ನೇತ್ರಾವತಿಯಮ್ಮ ಈಗ ಕ್ಯಾನ್ಸ್‌ರ್ ರೋಗಕ್ಕೆ ತುತ್ತಾಗಿದ್ದು ಕಿಮೋಥೇರಪಿ ಚಿಕಿತ್ಸೆ ಪಡೆಯುತ್ತಿದ್ದರೂ, ಹಸಿದ ನಾಯಿಗಳಿಗೆ ಅನ್ನಹಾಕುವ ಕಾಯಕ ನಿಲ್ಲಿಸದೇ ತನ್ನ ಶ್ವಾನಪ್ರೇಮ ಮೆರೆಯುತ್ತಿದ್ದಾರೆ. ನಾಯಿಗಳ ಯೋಗಕ್ಷೇಮ, ಆರೈಕೆಗೆ ನಿಂತ ನೇತ್ರಾವತಿಯಮ್ಮ ಅನಾರೋಗ್ಯಕ್ಕೆ ತುತ್ತಾಗಿದ್ದರೂ, ತನ್ನ ಮನೆಯಲ್ಲಿ ನಾಯಿಗಳಿಗೆ ಊಟ ಹಾಕುವುದನ್ನು ನಿಲ್ಲಿಸಿಲ್ಲ. ಮಂಗಳೂರಿನಲ್ಲಿ ಕ್ಯಾನ್ಸರಿಗೆ ಚಿಕಿತ್ಸೆ ಪಡೆಯುತ್ತಿದ್ದರೂ, ಬೆಂಗಳೂರಿನ ತನ್ನ ಮನೆಯಲ್ಲಿ ಒಬ್ಬ ನಂಬಿಕಸ್ಥನನ್ನು ನೇಮಿಸಿಕೊಂಡು ನಾಯಿಗಳ ಹೊಟ್ಟೆ ತುಂಬಿಸುತ್ತಿದ್ದಾರೆ. ಕುಂದಾಪ್ರ ಡಾಟ್ ಕಾಂ. ನೇತ್ರಾವತಿಯಮ್ಮ ಕುಂದಾಪುರ ತಾಲೂಕಿನ ಗಂಗೊಳ್ಳಿಯವರು. ಹೊಟ್ಟೆ ಪಾಡಿಗಾಗಿ ಬೆಂಗಳೂರು ಸೇರಿದವರು. ಅಚಾನಾಕ್ಕಾಗಿ ನಡೆದ ಒಂದು ಘಟನೆ ಇವರಿಗೆ ಶ್ವಾನದ ಮೇಲೆ ಮಮಕಾರ ಮೂಡುವಂತಾಯಿತು. ಅಲ್ಲಿಂದಿಚೆಗೆ ಬೆಂಗಳೂರು ಜೆಪಿ ನಗರದ ಬೀದಿ ನಾಯಿಗಳಿಗೆ ನೇತ್ರಾವತಿಯಮ್ಮ ಹೊಟ್ಟೆ ತುಂಬ ಉಣಬಡಿಸುತ್ತಿದ್ದರು. ಕುಂದಾಪ್ರ ಡಾಟ್ ಕಾಂ ವರದಿ. ನಾಯಿ ಆರೈಕೆಯಲ್ಲಿ ನೆಮ್ಮದಿ ದಿನ…
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ರೋಟರಿ ಕ್ಲಬ್ ಕುಂದಾಪುರ ಸನ್‌ರೈಸ್ ವತಿಯಿಂದ ಕುಂದಾಪುರದ ಹೋಲಿ ರೋಜರಿ ಇಂಗ್ಲೀಷ್ ಮೀಡಿಯಂ ಪ್ರೌಢಶಾಲೆಯಲ್ಲಿ ಪರಿಕ್ಷಾ ಪೂರ್ವ ತಯಾರಿ ಕಾರ್ಯಾಗಾರ ನಡೆಯಿತು. ಸಂಪನ್ಮೂಲ ವ್ಯಕ್ತಿ, ಬಸ್ರೂರು ನಿವೇದಿತಾ ಪ್ರೌಢಶಾಲೆ ಮುಖ್ಯೋಪಧ್ಯಾಯ ದಿನಕರ ಆರ್ ಶೆಟ್ಟಿ ಮಾತನಾಡಿ ಮಾನಸಿಕ ಧೃಡತೆ, ಕಲಿಕೆಯಲ್ಲಿ ಪೂರ್ವ ತಯಾರಿಯೊಂದಿಗೆ ಬದ್ದತೆಯನ್ನು ಹೊಂದಿದಾಗ ಉತ್ತಮ ಅಂಕ ಗಳಿಸಲು ಸಾಧ್ಯ ಆದುದರಿಂದ ವಿದ್ಯಾರ್ಥಿಗಳಿಗೆ ಪರೀಕ್ಷಾ ಪೂರ್ವ ತಯಾರಿ ಅಗತ್ಯ. ಆಗ ಮಾತ್ರ ವಿದ್ಯಾರ್ಥಿ ಜೀವನದಲ್ಲಿ ಯಶಸ್ವಿಯಾಗಿ ಹೊರಹೊಮ್ಮಲು ಸಾಧ್ಯ ಎಂದು ಹೇಳಿದರು. ರೋಟರಿ ಸನ್‌ರೈಸ್ ಅಧ್ಯಕ್ಷರಾದ ಕೆ. ನರಸಿಂಹ ಹೊಳ್ಳ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಅಧ್ಯಕ್ಷತೆಯನ್ನು ಧರ್ಮಗುರು ವಂ| ಪ್ರವೀಣ್ ಅಮೃತ್ ಮಾರ್ಟಿಸ್ ಅವರು ವಹಿಸಿ ಪರಿಕ್ಷಾ ಪೋಬಿಯಾವನ್ನು ಹೋಗಲಾಡಿಸುವ ಕುರಿತು ತಿಳಿ ಹೇಳಿದರು. ರೋಟರಿ ಸನ್‌ರೈಸ್‌ನ ಇಂಟರ‍್ಯಾಕ್ಟ್ ಛೇರ್‌ಮೆನ್ ಜಗದೀಶ್ ಚಂದ್ರನ್, ಸದಸ್ಯರಾದ ಉಲ್ಲಾಸ ಕ್ರಾಸ್ತಾ, ಡುಂಡಿರಾಜ್, ಗಿರಿಜಾ ಎಂ. ಗೋಪಾಲ್, ಶಾಲಾ ಮುಖ್ಯೋಪಧ್ಯಾಯಿನಿ ಸಿಸ್ಟರ್ ಜೋಯ್ಸ್‌ಲಿನ್ ಉಪಸ್ಥಿತರಿದ್ದರು. ಶಿಕ್ಷಕಿಯರಾದ ಪ್ರತಿಮಾ ಶೆಟ್ಟಿ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಇಲ್ಲಿನ ಶಿರೂರು ಮಾರ್ಕೆಟ್ ಬಳಿ ಟ್ಯಾಂಕರ್ ಹಾಗೂ ಬೈಕ್ ನಡುವೆ ನಡೆದ ಅಪಘಾತದಲ್ಲಿ ಬೈಕ್ ಸವಾರ ಸ್ಥಳದಲ್ಲಿಯೇ ಮೃತಪಟ್ಟ ದಾರುಣ ಘಟನೆ ವರದಿಯಾಗಿದೆ. ಮೃತ ಯುವಕನನ್ನು ಭಟ್ಕಳದ ಗಣೇಶ್ ನಾಯ್ಕ್ (23) ಎಂದು ಗುರುತಿಸಲಾಗಿದೆ. ಶಿರೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ತೆರಳುತ್ತಿದ್ದ ಟ್ಯಾಂಕ್‌ರ್ ಬೈಕಿನಲ್ಲಿ ತೆರಳುತ್ತಿದ್ದ ಗಣೇಶ್ ನಾಯ್ಕ್‌ಗೆ ಡಿಕ್ಕಿ ಹೊಡಿದು, ಅವರ ತಲೆಯ ಮೇಲೆಯೇ ಹಿಂದಿನ ಚಕ್ರಗಳು ಹಾದುಹೋದ ಪರಿಣಾಮ ಬೈಕ್ ಸವಾರ ಸ್ಥಳದಲ್ಲಿಯೇ ಮೃತಪಟ್ಟಿದ್ದರು. ದಾಂಡೆಲಿಯವರಾದ ಗಣೇಶ್ ಖಾಸಗಿ ಕಂಪೆನಿಯಲ್ಲಿ ಉದ್ಯೋಗಿಯಾಗಿದ್ದು, ಭಟ್ಕಳದ ತನ್ನ ಸಂಬಂಧಿಯ ಮನೆಯಲ್ಲಿ ವಾಸವಾಗಿದ್ದರು. ಬೈಂದೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಯಕ್ಷಗಾನ ಕಲೆ ಕರ್ನಾಟಕದ ಕೆಲವೇ ಜಿಲ್ಲೆಗಳಿಗೆ ಸೀಮಿತವಾದುದು. ವಿದ್ಯುನ್ಮಾನ ಮಾಧ್ಯಮಗಳಿಂದಾಗಿ ಯಕ್ಷಗಾನ ಜನರಿಂದ ದೂರವಾಗುತ್ತಿದೆ ಎಂದು ಕೆಲವರು ಆಡಿಕೊಳ್ಳುತ್ತಾರೆ. ಆದರೆ ದಿನದ ೨೪ ಗಂಟೆಯೂ ಲಭ್ಯವಿರುವ ವಿದ್ಯುನ್ಮಾನ ಮಾಧ್ಯಮಗಳ ಮನೋರಂಜನೆಯ ನಡುವೆ ಈ ಸೀಮಿತ ಪ್ರದೇಶದಲ್ಲಿರುವ ವೃತ್ತಿ ಮೇಳಗಳು, ಹವ್ಯಾಸಿ ತಂಡಗಳು, ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿಗಳು ನೀಡುವ ಪ್ರದರ್ಶನಗಳ ಸಂಖ್ಯೆ ಅಚ್ಚರಿ ಹುಟ್ಟಿಸುವಂತಿದೆ. ಅದರಲ್ಲೂ ಹಿಮ್ಮೇಳ ಮತ್ತು ಅರ್ಥದಾರಿಗಳು ಮಾತ್ರ ಸಾಕಾಗುವ ಅತ್ಯಂತ ಸರಳ ರಂಗಭೂಮಿಯಾದ ತಾಳಮದ್ದಲೆಗೂ ದೊಡ್ಡ ಶ್ರೋತೃವರ್ಗ ಇರುವುದು ಜೀವಂತ ಕಲೆ ನಶಿಸದು ಎಂಬ ಭರವಸೆ ನೀಡುತ್ತದೆ ಎಂದು ನಿವೃತ್ತ ಪ್ರಾಂಶುಪಾಲ, ಯಕ್ಷಗಾನ ವಿದ್ವಾಂಸ ಡಾ. ಎಂ. ಪ್ರಭಾಕರ ಜೋಷಿ ಹೇಳಿದರು. ಕಿರಿಮಂಜೇಶ್ವರ ನಾಗೂರು ಸುತ್ತಲಿನ ನಾಗರಿಕರ ಮತ್ತು ರಾಜ್ಯ ಯಕ್ಷಗಾನ ಬಯಲಾಟ ಅಕಾಡೆಮಿಯ ಸಹಯೋಗದೊಂದಿಗೆ ಧಾರೇಶ್ವರ ಯಕ್ಷ ಬಳಗ ಚಾರಿಟಬಲ್ ಟ್ರಸ್ಟ್ ಆಶ್ರಯದಲ್ಲಿ ನಾಗೂರಿನ ಒಡೆಯರಮಠ ಗೋಪಾಲಕೃಷ್ಣ ಕಲಾಮಂದಿರದ ಯಕ್ಷಗುರು ಹೇರಂಜಾಲು ವೆಂಕಟರಮಣ ಗಾಣಿಗ ವೇದಿಕೆಯಲ್ಲಿ ಆರಂಭವಾದ ತಾಳಮದ್ದಲೆ ಸಪ್ತಾಹದ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಉಪ್ಪಿನಕುದ್ರುವಿನಲ್ಲಿ ಅಧ್ಯಾಪಕನಾಗಿ 2 ದಶಕಗಳ ಕಾಲ ಸೇವೆ ಸಲ್ಲಿಸಿದ ದಿನಗಳು ನನ್ನ ಬದುಕಿನಲ್ಲಿ ಸದಾ ಅಚ್ಚಳಿಯದೇ ಉಳಿದ ಮಧುರ ನೆನಪುಗಳಾಗಿವೆ. ಇಲ್ಲಿನ ಜನರು, ವಿದ್ಯಾರ್ಥಿಗಳು ಅಪಾರ ಪ್ರೀತಿಯನ್ನು ಕೊಟ್ಟಿರುವ ಜೊತೆಗೆ ಇದೀಗ ಯಜ್ಞ ಪ್ರಶಸ್ತಿ ನೀಡಿ ಗೌರವಿಸಿರುವುದು ಸೇವೆಗೆ ಸಂದ ಫಲವೆಂದು ಸಾರ್ಥಕ ಭಾವ ತುಂಬಿದೆ ಎಂದು ನಿವೃತ್ತ ಅಧ್ಯಾಪಕ ಕೊರಗಯ್ಯ ಶೆಟ್ಟಿ ಹೇಳಿದರು. ಅವರು ಉಪ್ಪಿನಕುದ್ರು ಗೊಂಬೆಯಾಟ ಅಕಾಡೆಮಿಯ ಆಶ್ರಯದಲ್ಲಿ ಶಿಕ್ಷಕರ ದಿನಾಚರಣೆಯ ಅಂಗವಾಗಿ ದಿ.ಯಜ್ಞನಾರಾಯಣ ಐತಾಳ್‌ರ ಸ್ಮರಣಾರ್ಥ ಕೊಡಮಾಡುವ ಯಜ್ಞ ಪ್ರಶಸ್ತಿ ಸ್ವೀಕರಿಸಿ, ಮಾತನಾಡಿದರು. ಭಾರತೀಯ ಜೀವ ವಿಮಾ ನಿಗಮ ಶಿವಮೊಗ್ಗ ಶಾಖೆಯ ಅಭಿವೃದ್ಧಿ ಅಧಿಕಾರಿ ರವೀಂದ್ರ ಐತಾಳ್ ಮಾತನಾಡಿ ದಿ.ಯಜ್ಞನಾರಾಯಣ ಐತಾಳ್‌ರು ಉಪ್ಪಿನಕುದ್ರುವಿನಲ್ಲಿ ಫ್ರೌಡಶಾಲೆಯ ನಿರ್ಮಾಣಕ್ಕೆ ಅವಿರತ ಶ್ರಮವಹಿಸಿರುವುದನ್ನು ಸ್ಮರಿಸಿಕೊಂಡು ಅವರು ಊರು ಮತ್ತು ವಿದ್ಯಾರ್ಥಿಗಳ ಅಭಿವೃದ್ಧಿ ದೃಷ್ಠಿಯಿಂದ ತಮ್ಮನ್ನು ಸಂಪೂರ್ಣವಾಗಿ ತೊಡಗಿಸಿ ಕೊಂಡಿದ್ದರು. ಅವರ ಮಕ್ಕಳಾಗಿ ತುಂಬು ಅಭಿಮಾನದಿಂದ ದಿ.ಯಜ್ಞನಾರಾಯಣ ಐತಾಳ್‌ರ ಹೆಸರಿನಲ್ಲಿ ಸಾಧಕ ಶಿಕ್ಷಕರನ್ನು ಗುರುತಿಸಿ ಪ್ರಶಸ್ತಿ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಶ್ರೀ ಯಕ್ಷಿ ಅನ್ನಪೂರ್ಣೇಶ್ವರಿ ಯುವ ಸಂಘಟನೆ ವಂಡ್ಸೆ ಇದರ ವಾರ್ಷಿಕ ಸಭೆ ಇತ್ತೀಚೆಗೆ ನಡೆಯಿತು. ೨೦೧೭ರ ಶಿವರಾತ್ರಿ ಆಚರಣೆ, ಸಂಘಟನೆಯ ವಾರ್ಷಿಕೋತ್ಸವ, ಸಾಮಾಜಿಕ ಚಟುವಟಿಕೆಗಳ ಬಗ್ಗೆ ನಿರ್ಣಯಗಳನ್ನು ಕೈಗೊಳ್ಳಲಾಯಿತು. ಈ ಸಂದರ್ಭದಲ್ಲಿ ೨೦೧೬-೧೭ನೇ ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆ ಇತ್ತೀಚೆಗೆ ನಡೆಯಿತು. ನೂತನ ಅಧ್ಯಕ್ಷರಾಗಿ ಉಮೇಶ ಭಟ್ರಬೆಟ್ಟು, ಕಾರ್ಯದರ್ಶಿಯಾಗಿ ದಿನಕರ ಗಾಣಿಗ ಬಳಗೇರಿ, ಗೌರವಾಧ್ಯಕ್ಷರಾಗಿ ನಾಗರಾಜ ಆಚಾರ್ಯ, ಉಪಾಧ್ಯಕ್ಷರಾಗಿ ಸದಾನಂದ ಎಂ.ವಂಡ್ಸೆ, ಜೊತೆ ಕಾರ್ಯದರ್ಶಿಯಾಗಿ ಶಶಿಧರ ಶೆಟ್ಟಿ ವಂಡ್ಸೆ, ಖಜಾಂಚಿಯಾಗಿ ಅಣ್ಣಪ್ಪ ಗಾಣಿಗ ಮಲ್ಲಾರಿ, ಸಂಘಟನಾ ಕಾರ್ಯದರ್ಶಿಯಾಗಿ ವಿಶ್ವನಾಥ ಪೂಜಾರಿ ವಂಡ್ಸೆ, ಸಾಂಸ್ಕೃತಿಕ ಕಾರ್ಯದರ್ಶಿ ರಾಘವೇಂದ್ರ ಹೊಲಾಡು, ಸಾಂಸ್ಕೃತಿಕ ಜೊತೆ ಕಾರ್ಯದರ್ಶಿ ರಾಮಚಂದ್ರ ಆಚಾರ್ಯ ವಂಡ್ಸೆ, ಕ್ರೀಡಾ ಕಾರ್ಯದರ್ಶಿಯಾಗಿ ರಘುರಾಮ ಮಡಿವಾಳ, ಜೊತೆ ಕ್ರೀಡಾ ಕಾರ್ಯದರ್ಶಿ ಪ್ರವೀಣ ಶೆಟ್ಟಿ, ಸಲಹ ಸಮಿತಿ ಸದಸ್ಯರಾಗಿ ದಿನೇಶ ಕಾಂಚನ್ ಜಯರಾಜ್ ವಂಡ್ಸೆ, ಲೆಕ್ಕ ಪರಿಶೋಧಕರು ಶಂಕರ್ ಆಚಾರ್ಯ ಟೈಲರ್, ಗೌರವ ಸಲಹೆಗಾರರು ವಾಸು ಜಿ.ನಾಯ್ಕ್, ದಿನೇಶ ಬಿಲ್ಲಾ,…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ವಿದ್ಯಾರ್ಥಿಗಳಲ್ಲಿ ಒಬ್ಬರಲ್ಲಿ ಒಂದೊದು ಪ್ರತಿಭೆಗಳು ಇರುತ್ತದೆ ಅದನ್ನು ಗುರುತಿಸುವುದು ಮಖ್ಯು ಅದರಿಂದ ಕಾಲೇಜಿನಲ್ಲಿ ನಡೆಯುವ ಪಠೇತ್ಯರ ಚಟುವಟಿಕೆಗಳಲ್ಲಿ ಭಾಗವಹಿಸುವುದರ ಮೂಲಕ ತಮ್ಮ ಪ್ರತಿಭೆಗಳನ್ನು ತೋರಿಸುವುದರ ಮೂಲಕ ವಿದ್ಯಾರ್ಥಿ ಜೀವನವನ್ನು ಉಜ್ವಲಗೊಳಿಸಲು ಸಾಧ್ಯ ಅದರಿಂದ ಸಿಕ್ಕ ಅವಕಾಶಗಳನ್ನು ಸದುಉಪಯೋಗ ಪಡೆದುಕೊಂಡಗ ಮಾತ್ರ ಮುಂದೆ ಯಶ್ವಸಿಯಾಗಲು ಸಾಧ್ಯ ಎಂದು ಆನೆಗುಡ್ಡೆ ಶ್ರೀ ವಿನಾಯಕ ದೇವಸ್ಥಾನದ ಆಡಳಿತ ಧರ್ಮದರ್ಶಿ ಸೂರ್ಯನಾರಾಯಣ ಉಪಾಧ್ಯಾಯ ಹೇಳಿದರು. ಅವರು ಕೋಟೇಶ್ವರ ಶ್ರೀ ಕಾಳಾವರ ವರದರಾಜ ಎಂ, ಶೆಟ್ಟಿ ಸರಕಾರಿ ಪ್ರಥಮ ದರ್ಜೇ ಕಾಲೇಜಿನಲ್ಲಿ ನಡೆದ ಸಿಂಚನ ಸಾಂಸ್ಕೃತಿಕ ಸ್ಪರ್ಧಾ ಕಾರ್ಯಕ್ರಮವನ್ನು ಉದ್ಘಾಟಿಸಿ ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು. ಶ್ರೀ ಕಾಳಾವರ ವರದರಾಜ ಎಂ, ಶೆಟ್ಟಿ ಸರಕಾರಿ ಪ್ರಥಮ ದರ್ಜೇ ಕಾಲೇಜಿನ ಪ್ರಾಂಶುಪಾಲ ನಿತ್ಯಾನಂದ ವಿ. ಗಾಂವ್ಕರ್ ಅಧ್ಯಕ್ಷತೆ ವಹಿದರು. ಸಾಂಸ್ಕೃತಿ ಸಮಿತಿ ಸಂಚಾಲಕಿ ಶ್ರೀಮತಿ ಅಡಿಗ, ವಿದ್ಯಾರ್ಥಿ ಕ್ಷೇಮಪಾಲನಾ ಅಧಿಕಾರಿ ಉಷಾದೇವಿ ಜೆ.ಎಸ್ ಉಪಸ್ಥಿತರಿದರು. ಅತಿಥಿ ಉಪನ್ಯಾಸಕ ರಂಜಿತ್ ಕುಮಾರ ಶೆಟ್ಟಿ ವಕ್ವಾಡಿ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ನಾಡ ಗ್ರಾಮ ಪಂಚಾಯತ್ ವ್ಯಾಪ್ತಿಯ ಮನೆ, ನಿವೇಶನ ರಹಿತರ ಹೋರಾಟ ಸಮಿತಿ ಮತ್ತು ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘದ ಕುಂದಾಪುರ ತಾಲೂಕು ಸಮಿತಿ ನೇತೃತ್ವದಲ್ಲಿ ನಾಡ ಗ್ರಾಮ ಪಂಚಾಯತ್ ಕಛೇರಿ ಎದುರು ದಿನಾಂಕ : ೨೨ ಸೆಪ್ಟೆಂಬರ್ ೨೦೧೬ ರಂದು ನಿವೇಶನ ರಹಿತ ಅರ್ಜಿದಾರರು ಭೂಮಿ ಹಕ್ಕು ಪತ್ರಕ್ಕಾಗಿ ಒತ್ತಾಯಿಸಿ ಬೃಹತ್ ಪ್ರತಿಭಟನೆ ನಡೆಸಿದರು. ನಾಡ ಗುಡ್ಡೆಯಂಗಡಿ ರಾಮಕೃಪಾ ಸಭಾಭವನದಲ್ಲಿ ಪೂರ್ವಬಾವಿ- ಜರಗಿದ ನಿವೇಶನ ರಹಿತರ ಸಮಾವೇಶವನ್ನು ಸಿಐಟಿಯು ಜಿಲ್ಲಾ ಉಪಾಧ್ಯಕ್ಷ ಬಾಲಕೃಷ್ಣ ಶೆಟ್ಟಿ ಉದ್ಘಾಟಿಸಿ ಮಾತನಾಡುತ್ತಾ- ನಿವೇಶನ ರಹಿತರ ಅಂತಿಮ ಪಟ್ಟಿ ೩೨೦ ಫಲಾನುಭವಿಗಳನ್ನು ನಾಡ ಗ್ರಾಮ ಪಂಚಾಯತ್ ವತಿಯಿಂದ ಗುರುತಿಸಿ ವರ್ಷ ಕಳೆದರೂ ಈ ತನಕ ಗುರುತಿಸಿರುವ ಸರಕಾರಿ ಜಮೀನು ಹಕ್ಕು ಪತ್ರ ವಿತರಣೆ ಮಾಡದ ಗ್ರಾಮ ಪಂಚಾಯ್ತಿ ಆಡಳಿತ ನೀತಿಯನ್ನು ತೀವ್ರವಾಗಿ ಖಂಡಿಸಿದರು. ನಾಡ ಗ್ರಾಮದ ಮುಖ್ಯ ಬೀದಿಯಲ್ಲಿ ನಿವೇಶನ ರಹಿತರು ಮೆರವಣಿಗೆ ಮೂಲಕ ಘೋಷಣೆ ಕೂಗುತ್ತಾ -…
ಕುಂದಾಪ್ರ ಡಾಟ್ ಕಾಂ ಸುದ್ದಿ. ಗಂಗೊಳ್ಳಿ: ಕೋಟೇಶ್ವರದಲ್ಲಿ ನಡೆದ ತಾಲೂಕು ಮಟ್ಟದ ದಸರಾ ಕ್ರೀಡಾಕೂಟದ ಪುಟ್ಬಾಲ್ ಪಂದ್ಯಾಟದಲ್ಲಿ ದ್ವಿತೀಯ ಸ್ಥಾನವನ್ನು ಗಳಿಸಿದ ಗಂಗೊಳ್ಳಿಯ ಸರಸ್ವತಿ ವಿದ್ಯಾಲಯ ಪದವಿ ಪೂರ್ವ ಕಾಲೇಜಿನ ಬಾಲಕರ ತಂಡ.ನೌಮಾನ್, ತಾಬಿಷ್, ಸಮಾನ್, ಫೈಝಾನ್, ದಾನಿಯಲ್, ನವಾಝ್, ಫವಾಝ್, ಅಫ್ತಾಭ್, ಅಯಾನ್, ನಾಗರಾಜ್, ಝೈನ್, ಸಾದತ್ ಹಸನ್ ಮತ್ತು ಫಿರಾಜ್ ಅಹ್ಮದ್ ತಾವು ಗಳಿಸಿದ ಟ್ರೋಫಿಯೊಂದಿಗೆ.ಕಾಲೇಜಿನ ಪ್ರಾಂಶುಪಾಲೆ ಕವಿತಾ ಎಮ್ ಸಿ, ದೈಹಿಕ ಶಿಕ್ಷಕ ನಾಗರಾಜ ಶೆಟ್ಟಿ ಅವರು ಚಿತ್ರದಲ್ಲಿದ್ದಾರೆ. ಚಿತ್ರ ವರದಿ : ನರೇಂದ್ರ ಎಸ್ ಗಂಗೊಳ್ಳಿ.
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ತಾಲೂಕಿನ ಆಸೋಡು ಶ್ರೀ ನಂದಿಕೇಶ್ವರ ದೇವಸ್ಥಾನ, ಆನಗಳ್ಳಿ ಇಲೆಕ್ಟ್ರಿಶಿಯನ್ ಅಂಗಡಿ ಹಾಗೂ ಬಸ್ರೂರು ಮಾರ್ಗದಲ್ಲಿನ ಮೊಬೈಲ್ ಅಂಗಡಿಗೆ ಕನ್ನ ಹಾಕಿರುವ ಕಳ್ಳರು ಸಾವಿರಾರು ರೂ. ಮೌಲ್ಯದ ವಸ್ತುಗಳನ್ನು ಕದ್ದೊಯ್ದಿದ್ದಾರೆ. ಆಸೋಡು ಬೆಳ್ಳಿಕಾನ್ ಶ್ರೀ ನಂದಿಕೇಶ್ವರ ದೇವಸ್ಥಾನದಲ್ಲಿ ದೇವರ ಬೆಳ್ಳಿಯ ಪ್ರಭಾವಳಿ, ಬಾಗಿಲಿನ ಬೆಳ್ಳಿಯ ಕವಚ, ದೇವಳದ ಹೊರಬಾಗದಲ್ಲಿ ಅಳವಡಿಸಿದ್ದ ಸಿಸಿ ಕ್ಯಾಮರಾ ಹಾಗೂ ಸಿಸಿ ಕ್ಯಾಮರಾದ ಡಿವಿಆರ್ ಕದ್ದೊಯ್ದಿದ್ದಾರೆ. ಆನಗಳ್ಳಿ ಶ್ರೀ ಮಾತಾ ಇಲೆಕ್ಟ್ರಿಕಲ್ಸ್ ಅಂಗಡಿಗೆ ಶಟರ್ ಮುರಿದು ನುಗ್ಗಿರುವ ಕಳ್ಳರು ಫ್ಯಾನ್, ಸ್ವಿಚ್ ಸೇರಿದಂತೆ ಸುಮಾರು 35,000ರೂ. ಮೌಲ್ಯದ ಸೊತ್ತುಗಳನ್ನು ಕದ್ದೊಯ್ದಿದ್ದಾರೆ. ಬಸ್ರೂರು ಬಿ.ಹೆಚ್ ರಸ್ತೆಯ ಎಸ್.ಎಸ್. ಫ್ಯಾನ್ಸಿ ಮೊಬೈಲ್ ಅಂಗಡಿಯ ಶಟರ್ ಮುರಿದು ನುಗ್ಗಿರುವ ಕಳ್ಳರು ಏಳು ಮೊಬೈಲ್ ಪೋನ್ ಹಾಗೂ ಇನ್ನಿತರ ವಸ್ತುಗಳನ್ನು ಕದ್ದೊಯ್ದಿದ್ದಾರೆ. ಕುಂದಾಪುರ ಡಿವೈಎಸ್ಪಿ ಪ್ರವೀಣ್ ನಾಯಕ್, ವೃತ್ತ ನಿರೀಕ್ಷಕ ರಾಘವ ಪಡೀಲ್, ಕುಂದಾಪುರ ಠಾಣಾಧಿಕಾರಿ ನಾಸಿರ್ ಹುಸೇನ್, ಅಪರಾಧ ವಿಭಾಗದ ಎಸೈ ದೇವರಾಜ್ ಘಟನಾ ಸ್ಥಳಕ್ಕೆ…
