ಕುಂದಾಪ್ರ ಡಾಟ್ ಕಾಂ ವರದಿ.
ಕುಂದಾಪುರ: ತನ್ನ ಮನೆಯಲ್ಲಿ ಪ್ರತಿನಿತ್ಯ 40ಕ್ಕೂ ಹೆಚ್ಚು ಬೀದಿ ನಾಯಿಗಳಿಗೆ ಊಟ ಹಾಕುತ್ತಾ, ಕಳೆದೊಂದು ದಶಕಗಳಿಂದ ಹಸಿದ ನಾಯಿಗಳ ಹೊಟ್ಟೆ ತುಂಬಿಸುತ್ತಿದ್ದ ಗಂಗೊಳ್ಳಿ ಮೂಲದ ನೇತ್ರಾವತಿಯಮ್ಮ ಈಗ ಕ್ಯಾನ್ಸ್‌ರ್ ರೋಗಕ್ಕೆ ತುತ್ತಾಗಿದ್ದು ಕಿಮೋಥೇರಪಿ ಚಿಕಿತ್ಸೆ ಪಡೆಯುತ್ತಿದ್ದರೂ, ಹಸಿದ ನಾಯಿಗಳಿಗೆ ಅನ್ನಹಾಕುವ ಕಾಯಕ ನಿಲ್ಲಿಸದೇ ತನ್ನ ಶ್ವಾನಪ್ರೇಮ ಮೆರೆಯುತ್ತಿದ್ದಾರೆ.
ನಾಯಿಗಳ ಯೋಗಕ್ಷೇಮ, ಆರೈಕೆಗೆ ನಿಂತ ನೇತ್ರಾವತಿಯಮ್ಮ ಅನಾರೋಗ್ಯಕ್ಕೆ ತುತ್ತಾಗಿದ್ದರೂ, ತನ್ನ ಮನೆಯಲ್ಲಿ ನಾಯಿಗಳಿಗೆ ಊಟ ಹಾಕುವುದನ್ನು ನಿಲ್ಲಿಸಿಲ್ಲ. ಮಂಗಳೂರಿನಲ್ಲಿ ಕ್ಯಾನ್ಸರಿಗೆ ಚಿಕಿತ್ಸೆ ಪಡೆಯುತ್ತಿದ್ದರೂ, ಬೆಂಗಳೂರಿನ ತನ್ನ ಮನೆಯಲ್ಲಿ ಒಬ್ಬ ನಂಬಿಕಸ್ಥನನ್ನು ನೇಮಿಸಿಕೊಂಡು ನಾಯಿಗಳ ಹೊಟ್ಟೆ ತುಂಬಿಸುತ್ತಿದ್ದಾರೆ. ಕುಂದಾಪ್ರ ಡಾಟ್ ಕಾಂ.
ನೇತ್ರಾವತಿಯಮ್ಮ ಕುಂದಾಪುರ ತಾಲೂಕಿನ ಗಂಗೊಳ್ಳಿಯವರು. ಹೊಟ್ಟೆ ಪಾಡಿಗಾಗಿ ಬೆಂಗಳೂರು ಸೇರಿದವರು. ಅಚಾನಾಕ್ಕಾಗಿ ನಡೆದ ಒಂದು ಘಟನೆ ಇವರಿಗೆ ಶ್ವಾನದ ಮೇಲೆ ಮಮಕಾರ ಮೂಡುವಂತಾಯಿತು. ಅಲ್ಲಿಂದಿಚೆಗೆ ಬೆಂಗಳೂರು ಜೆಪಿ ನಗರದ ಬೀದಿ ನಾಯಿಗಳಿಗೆ ನೇತ್ರಾವತಿಯಮ್ಮ ಹೊಟ್ಟೆ ತುಂಬ ಉಣಬಡಿಸುತ್ತಿದ್ದರು. ಕುಂದಾಪ್ರ ಡಾಟ್ ಕಾಂ ವರದಿ.
ನಾಯಿ ಆರೈಕೆಯಲ್ಲಿ ನೆಮ್ಮದಿ ದಿನ ಕಳೆಯುತ್ತಿದ್ದ ನೇತ್ರಾವತಿಯಮ್ಮನಿಗೆ ಆರೋಗ್ಯ ಕೈಕೊಟ್ಟಿತು. ಕ್ಯಾನ್ಸರ್ ಎಂಬ ಮಾರಿಗೆ ತುತ್ತಾದರು. ಕಳೆದ ಒಂದು ವರ್ಷದಿಂದ ಕ್ಯಾನ್ಸರಿಗೆ ಚಿಕಿತ್ಸೆ ಪಡೆಯುತ್ತಿದ್ದು, ಗುಣಮುಖರಾಗುವ ಜೊತೆ ಕ್ಯಾನ್ಸರ್ ಪೀಡಿತರಿಗೆ ಕ್ಯಾನ್ಸರ್ ಗುಣಪಡಿಸಲಾಗದ ರೋಗವಲ್ಲ ಧೈರ್ಯದಿಂದ ಎದುರಿಸಿ ಎಂಬ ಧೈರ್ಯ ಹೇಳುತ್ತಿರುವ ಗಟ್ಟಿಗಿತ್ತಿಯೂ ಹೌದು.
ನೇತ್ರಾವತಿಯಮ್ಮ ಇತ್ತ ದುಬಾರಿ ವೆಚ್ಚದ ಚಿಕಿತ್ಸೆ ಪಡೆಯುತ್ತಿದ್ದು ಮತ್ತೊಂದು ಕಡೆ ನಾಯಿಗಳಿಗೆ ಆಹಾರ ಪೂರೈಕೆ ಭಾರ ಹೊತ್ತಿದ್ದಾರೆ. ಮಾನವೀಯ ನೆಲೆಯಲ್ಲಿ ನೇತ್ರಾವತಿಯಮ್ಮ ಹಾಗೂ ಅವರ ನಾಯಿಗಳ ನೆರವಿಗೆ ಬರಬೇಕಿದೆ. ಅಲ್ಲಿ ನೇತ್ರಾವತಿಯಮ್ಮ ಇಲ್ಲದೆ ನಾಯಿಗಳು ಕಂಗಾಲಾಗಿವೆ. ನೇತ್ರಾವತಿಯಮ್ಮ ಅವರಿಗೆ ಸಹೃದಯಿಗಳ ನೆರವಿನ ಹಸ್ತ ಬೇಕಿದೆ/ಕುಂದಾಪ್ರ ಡಾಟ್ ಕಾಂ ವರದಿ/
[quote font_size=”16″ bgcolor=”#ffffff” bcolor=”#1e73be” arrow=”yes”]ನೇತ್ರಾವತಿಯಮ್ಮನ ಬ್ಯಾಂಕ್ ಖಾತೆ
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಜೆಪಿ ನಗರ, ಬೆಂಗಳೂರು
SBI A/c No: 10427738096
IFSC code: SRIN0007117
Call Natravathiyamma: 9916851506[/quote]