ಕುಂದಾಪ್ರ ಡಾಟ್ ಕಾಂ ಸುದ್ದಿ. ಕೋಟ: ನಿಷ್ಠಾವಂತ ಅಧಿಕಾರಿ ಎಂದು ಹೆಸರು ಮಾಡಿದ್ದ ಕೋಟ ಠಾಣೆಯ ಎಸೈ ಕಬ್ಬಾಳರಾಜ್ ಹೆಚ್. ಡಿ., ಅವರನ್ನು ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಜಿಲ್ಲಾ ಎಸ್ಪಿ ತರಾಟೆಗೆ ತೆಗೆದುಕೊಂಡ ಹಿನ್ನೆಲೆಯಲ್ಲಿ ಅಸಮಾಧಾನಗೊಂಡ ಎಸೈ ರಾಜಿನಾಮೆ ನೀಡಿ ತೆರಳಿದ್ದಾರೆ ಎನ್ನಲಾಗಿದೆ. ಐರೋಡಿ ಹಂಗಾರಕಟ್ಟೆಯ ಖಾಸಗಿ ವ್ಯಕ್ತಿಯೋರ್ವರ ಜಾಗದ ವಿಷಯದಲ್ಲಿ ಇದ್ದ ತಕರಾರು ಕೋಟ ಠಾಣೆಯ ಮೆಟ್ಟಿಲೇರಿತ್ತು. ಠಾಣಾಧಿಕಾರಿ ಕಬ್ಬಾಳರಾಜ್ ಪ್ರಕರಣವನ್ನು ಇತ್ಯರ್ಥಗೊಳಿಸಿ ಸುಖಾಂತ್ಯ ಕಾಣಿಸಿದ್ದರಾದರೂ ಅತೃಪ್ತರೊರ್ವರು ತಮಗೆ ಅನ್ಯಾಯವಾಗಿದೆ ಎಂದು ಜಿಲ್ಲಾ ಎಸ್ಪಿ ಕೆ.ಟಿ. ಬಾಲಕೃಷ್ಟ ಅವರಲ್ಲಿ ದೂರಿಕೊಂಡಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಜಿಲ್ಲಾ ಎಸ್ಪಿ ನೇರವಾಗಿ ಕೋಟ ಠಾಣಾಧಿಕಾರಿ ಕಬ್ಬಾಳರಾಜ್ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ ಎನ್ನಲಾಗಿದೆ. ಇಂದು ಬೆಳಿಗ್ಗೆ ಎಸ್ಪಿ ಅವರೊಂದಿಗೆ ದೂರವಾಣಿಯ ಮೂಲಕ ಸಂವಾದ ನಡೆಸಿದ್ದ ಕಬ್ಬಾಳರಾಜ್ ಠಾಣೆಯ ಡೈರಿಯಲ್ಲಿ ರಾಜೀನಾಮೆ ವಿಷಯವನ್ನು ಪ್ರಸ್ತಾಪ ಮಾಡಿ ಹೊರಕ್ಕೆ ನಡೆದಿದ್ದಾರೆ ಮೂಲಗಳು ತಿಳಿಸಿವೆ. ಕುಂದಾಪ್ರ ಡಾಟ್ ಕಾಂ ಸುದ್ದಿ. ಠಾಣೆಯಿಂದ ತೆರಳಿದ ಬಳಿಕ ಕಬ್ಬಾಳರಾಜ್ ಅವರ ಮೊಬೈಲ್ ಸ್ವಿಚ್ ಆಫ್ ಆಗಿದ್ದು…
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಜೇಸಿಐ ಕುಂದಾಪುರ ಸಿಟಿಯ ೨೦೧೭ನೇ ಸಾಲಿನ ನೂತನ ಅಧ್ಯಕ್ಷರಾಗಿ ಉದ್ಯಮಿ ಶ್ರೀಧರ ಸುವರ್ಣ ಆಯ್ಕೆಯಾಗಿದ್ದಾರೆ. ಜೇಸಿಐ ಕುಂದಾಪುರ ಸಿಟಿಯ ಜ್ಯೂನಿಯರ್ ಜೇಸಿ ಅಧ್ಯಕ್ಷರಾಗಿ, ರೋಟರ್ಯಾಕ್ಟ್ ಕ್ಲಬ್ ಕುಂದಾಪುರದ ಅಧ್ಯಕ್ಷರಾಗಿ, ಜೇಸಿ, ರೋಟರ್ಯಾಕ್ಟ್ನ ವಿವಿಧ ಪದಾಧಿಕಾರಿಯಾಗಿ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದು, ಕಲಾಕ್ಷೇತ್ರ ಕುಂದಾಪುರ, ರೋಟರಿ ಕ್ಲಬ್ ಕುಂದಾಪುರದ ಸದಸ್ಯರಾಗಿದ್ದಾರೆ. ಜೇಸಿಐ ಕುಂದಾಪುರ ಸಿಟಿಯ ಜೇಸಿ ಸಪ್ತಾಹದ ಕೊನೆಯ ದಿನ ನಿಕಟಪೂರ್ವಾಧ್ಯಕ್ಷ ಚಂದ್ರಕಾಂತ್ ಅವರು ಮುಂದಿನ ಸಾಲಿನ ಅಧ್ಯಕ್ಷರಾಗಿ ಶ್ರೀಧರ ಸುವರ್ಣ ಅವಿರೋಧ ಆಯ್ಕೆಯಾಗಿರುವುದನ್ನು ಘೋಷಿಸಿದರು. ಈ ಸಂದರ್ಭದಲ್ಲಿ ಪ್ರಸಕ್ತ ಸಾಲಿನ ಅಧ್ಯಕ್ಷ ಕುಂಭಾಸಿ ಮಂಜುನಾಥ ಕಾಮತ್, ಜೇಸಿ ವಲಯ ಉಪಾಧ್ಯಕ್ಷ ನಿತಿನ್ ಅವಭೃತ, ಪೂರ್ವಾಧ್ಯಕ್ಷರಾದ ಕೆ. ಕಾರ್ತಿಕೇಯ ಮಧ್ಯಸ್ಥ, ಸಪ್ತಾಹ ಸಭಾಪತಿಗಳಾದ ಹುಸೇನ್ ಹೈಕಾಡಿ, ರಾಘವೇಂದ್ರ ಚರಣ ನಾವಡ, ಪೂರ್ವಾಧ್ಯಕ್ಷರಾದ ನಾಗೇಂದ್ರ ಪೈ, ವೆಂಕಟೇಶ ಪ್ರಭು ಇನ್ನಿತರರು ಉಪಸ್ಥಿತರಿದ್ದರು.
ಕುಂದಾಪ್ರ ಡಾಟ್ ಕಾಂ ಸುದ್ದಿ ಕುಂದಾಪುರ: ಜಿಲ್ಲಾಧಿಕಾರಿ ನಿರ್ದೇಶನದಂತೆ ರಾಜ್ಯದಲ್ಲಿರುವ ಬುಡಕಟ್ಟು ಜನಾಂಗದವರ ಮೂಲಭೂತ ಸಮಸ್ಯೆ ಹಾಗೂ ಕೇಂದ್ರದ ಅನುದಾನಗಳು ಸಮರ್ಪಕವಾಗಿ ವಿನಿಯೋಗವಾಗುತ್ತಿದೆ ಎನ್ನುವ ಬಗ್ಗೆ ಸ್ವತಃ ಅವರ ಬಳಿಗೆ ಹೋಗಿ ಸಂವಾದ ನಡೆಸುವ ಮೂಲಕ ಕೇಂದ್ರ ಬುಡಕಟ್ಟು ಆಯೋಗ ರಾಜ್ಯಗಳಿಗೆ ವರದಿ ನೀಡಲಿದೆ. ಅಲ್ಲದೆ ಕೊರಗ ಸಮದಾಯದ ಸಮಸ್ಯೆಗಳಿಗೆ ಒಂದು ವಾರದಲ್ಲಿಯೇ ಸ್ಪಂದಿಸಲಿದೆ ಎಂದು ಕೇಂದ್ರ ಸರಕಾರದ ರಾಷ್ಟ್ರೀಯ ಬುಡಕಟ್ಟು ಆಯೋಗದ ಅಧ್ಯಕ್ಷ ಡಾ| ರಾಮೇಶ್ವರ ಓರಾನ್ ಭರವಸೆ ನೀಡಿದರು. ಅವರು ತಾಲೂಕಿನ ಕುಂಭಾಶಿ ಅಂಬೇಡ್ಕರ್ ಕಾಲನಿಯಲ್ಲಿರುವ ಮಕ್ಕಳ ಮನೆಗೆ ಭೇಟಿ ನೀಡಿ ಮಕ್ಕಳೊಂದಿಗೆ ಸಂವಾದ ನಡೆಸಿದರು. ಇದೇ ಸಂದರ್ಭ ಕುಂದಾಪುರ ಕೊರಗ ಶ್ರೇಯೋಭಿವೃದ್ಧಿ ಸಮಿತಿ ಅಧ್ಯಕ್ಷ ಗಣೇಶ್ ವಿ. ಮನವಿ ಸಲ್ಲಿಸಿ ಮಾತನಾಡಿ, ಕೊರಗರ ಹೊಸ ಮನೆಗಳಿಗೆ ನೀಡುತ್ತಿರುವ ರೂ. 2 ಲಕ್ಷವನ್ನು ರೂ. 4 ಲಕ್ಷಕ್ಕೆ ಏರಿಸಬೇಕು ಹಾಗೂ ಆರೋಗ್ಯ ಶಿಕ್ಷಣ ಮತ್ತು ಸ್ವಉದ್ಯೋಗಗಳಿಗೆ ಕಳೆದ ಎರಡು ವರ್ಷಗಳಿಂದ ಕೇಂದ್ರ ಅನುದಾನ ಬಾರದಿರುವ ಹಿನ್ನೆಲೆಯಲ್ಲಿ ಪರಿಶಿಷ್ಟ ವರ್ಗದವರಿಗೆ…
ಕುಂದಾಪ್ರ ಡಾಟ್ ಕಾಂ ಸುದ್ದಿ ಕುಂದಾಪುರ: ಮರವಂತೆ ಬಳಿ ನಿಯಂತ್ರಣ ಚಾಲಕನ ತಪ್ಪಿದ ಸರಕಾರಿ ಬಸ್ಸೊಂದು ಚತುಷ್ಪಥ ಕಾಮಗಾರಿಗಾಗಿ ಹೊಸದಾಗಿ ನಿರ್ಮಾಣವಾಗುತ್ತಿರುವ ಸೇತುವೆಗೆ ಢಿಕ್ಕಿಯಾದ ಪರಿಣಾಮ ಓರ್ವ ಗಂಭೀರವಾಗಿ ಗಾಯಗೊಂಡು ಚಾಲಕರಿಬ್ಬರುಸಹಿತ ಎಂಟು ಮಂದಿ ಗಾಯಗೊಂಡ ಘಟನೆ ಮಂಗಳವಾರ ಮುಂಜಾನೆ ಸಂಭವಿಸಿದೆ. ಗಂಭೀರ ಗಾಯಗೊಂಡವರನ್ನು ಬಸ್ಸಿನ ಪ್ರಯಾಣಿಕ ಗದಗ ಜಿಲ್ಲೆಯ ಕಳಸ ಎಂಬಲ್ಲಿಯ ನಿವಾಸಿ ವೀರೇಶ್(28) ಎಂದು ಗುರುತಿಸಲಾಗಿದ್ದು ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿದೆ. ಬಸ್ ಚಾಲಕ ಹಾಗೂ ಕಂಡಕ್ಟರ್ ಗದಗ ಜಿಲ್ಲೆಯ ಕೋಟಂಗುಚ್ಚಿ ನಿವಾಸಿ ಜೀವನ್ ಸಾಬ್(41), ಮತ್ತೋರ್ವ ಚಾಲಕ ಬಾದಾಮಿ ಮೂಲದ ಈಶ್ವರ(38), ಪ್ರಯಾಣಿಕರಾದ ಶಿರಹಟ್ಟಿ ತಾಲೂಕಿನ ಮೊಗೇರಿಹೊನೆ ನಿವಾಸಿ ಬಸವರಾಜ್(24), ಎಲ್ಲಪ್ಪ ಶಿರಹಟ್ಟಿ (30), ಗದಗ ಜಿಲ್ಲೆಯ ಯಲ್ಲಪ್ಪ (66) , ಗದಗ ಜಿಲ್ಲೆಯ ಮಹಾದೇವಪ್ಪ ಹಳಗೇರಿ (26), ಹಾವೇರಿ ಜಿಲ್ಲೆಯ ರಾಜಪ್ಪ ಬಾಬಣ್ಣ (23), ಧಾರವಾಡದ ಬಸಪ್ಪ ರಾಮಣ್ಣ (53)ಗಾಯಾಳುಗಳು. ಕುಂದಾಪುರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಗದಗದಿಂದ ಮಂಗಳೂರಿಗೆ ತೆರಳುತ್ತಿದ್ದ ಬಸ್ಸನ್ನು ಬೈಂದೂರು ತನಕ ಚಾಲಕ ಈಶ್ವರ್…
ಕರುಣಾಕರ ಬಳ್ಕೂರು | ಕುಂದಾಪ್ರ ಡಾಟ್ ಕಾಂ ಲೇಖನ ಬಣ್ಣ ಹಚ್ಚಿ ರಂಗದಲ್ಲಿ ಕಾಣಿಸಿಕೊಂಡರೆ ಅಜ್ಜಿಯೇ ಬಂದು ಮಾತನಾಡಿದಂತೆ ಭಾಸವಾಗುತ್ತದೆ. ನೆರೆಗೆ ಕಟ್ಟಿದ ಮುಖ, ಕೆಂಪು ಸೀರೆ, ಗೂನು ಬೆನ್ನು, ವಟ ವಟ ಮಾತುಗಳು. ಹೀಗೆ ಇವರೊಬ್ಬರೇ ಆ ಪಾತ್ರಕ್ಕೆ ಜೀವತುಂಬಬಲ್ಲರೆಂದು ಸಲಿಸಾಗಿ ಅನ್ನಿಸುವಷ್ಟು ಪಾತ್ರದೊಂದಿಗೆ ಬೆರೆತು ಕಲೆಯಲ್ಲೊಂದು ಜೀವ ತುಂಬಿ ರಂಗಭೂಮಿ ಹಾಗೂ ಕಿರುತೆರೆಯಲ್ಲಿ ಮಿಂಚುತ್ತಿದ್ದಾರೆ ಗ್ರಾಮೀಣ ಪ್ರದೇಶದ ಅಪ್ಪಟ್ಟ ಯುವ ಪ್ರತಿಭೆ ಸೂರ್ಯ ಎಂ. ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಅಂಪಾರು ಗ್ರಾಮದ ಮೂಡುಬಗೆ ಸೂರ್ಯ ಅವರ ಹುಟ್ಟೂರು. ತಂದೆ ಶೀನ ಮಡಿವಾಳ ಮತ್ತು ರುದ್ರು ಮಡಿವಾಳ್ತಿ ದಂಪತಿಗಳ ಮೂವರು ಮಕ್ಕಳಲ್ಲಿ ಈತ ಕಿರಿಯವ. ಪ್ರಾಥಮಿಕ ಶಿಕ್ಷಣ ಸಂದರ್ಭದಲ್ಲಿಯೇ ಅಭಿಯನದ ಬಗ್ಗೆ ಆಸಕ್ತಿ ಮೂಡಿಸಿಕೊಂಡವನು. ಬೇಲೂರು ಐತಾಳ್ ಸರ್ ಅವರ ಗುರು ಪ್ರೋತ್ಸಾಹ ಇನ್ನಷ್ಟು ಸಾಧನೆಗೆ ಪ್ರೇರಣೆಯಾಯಿತು. 3 ವರ್ಷಗಳ ಕಾಲ ನೀನಾಸಮ್ ತಿರುಗಾಟ ಮತ್ತು ಜನಮನದಾಟದೊಂದಿಗೆ ತಿರುಗಾಟ ಮಾಡಿದ್ದಾರೆ. ನಾಟಕ ಕ್ಷೇತ್ರದಲ್ಲಿ ಮಿಂಚಲು ಸ್ಪೂರ್ತಿಯ ಸೆಲೆಯಾದವರು ಪ್ಲೋರಿನಾ ನೂರ್ಹಾನ್. ಕುಂದಾಪ್ರ ಡಾಟ್ ಕಾಂ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಇಲ್ಲಿನ ಸರಕಾರಿ ಪದವಿಪೂರ್ವ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ವಿದ್ಯಾರ್ಥಿಗಳು ವಿಶ್ವ ಓಝೋನ್ ದಿನವನ್ನು ಆಚರಿಸಿದರು. ಕಾಲೇಜಿನ ಜೀವಶಾಸ್ತ್ರ ಉಪನ್ಯಾಸಕರಾದ ರವೀಂದ್ರ ಉಪಾಧ್ಯ ಮಾತನಾಡಿ ಭೂ ವಾತಾವರಣದ ಸ್ತರಗೋಳದಲ್ಲಿ ಸಕಲ ಜೀವರಾಶಿಗಳಿಗೂ ಸುರಕ್ಷಾ ಕೊಡೆಯಂತಿರುವ ಓಝೋನ ಪದರದ ಮಹತ್ವವನ್ನು ತಿಳಿಸಿದರು. ರಾಷ್ಟ್ರೀಯ ಸೇವಾ ಯೋಜನೆಯ ವಿದ್ಯಾರ್ಥಿಗಳು ಓಝೋನ್ ಪದರ ತೆಳುಗೊಳ್ಳಲು ಕಾರಣವಾದ ಮಾನವ ಚಟುವಟಿಕೆಗಳ ಕುರಿತು ಮತ್ತು ನೇರಳಾತೀತ ಕಿರಣಗಳು ಉಂಟುಮಾಡುವ ಜೈವಿಕ ಅಪಾಯಗಳ ಕುರಿತು ಅರಿವು ಮೂಡಿಸುವ ಕೆಲಸವನ್ನು ಮಾಡಬೇಕು ಎಂದರು. ಸಭೆಯ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲ ಸುಬ್ರಹ್ಮಣ್ಯ ಜೋಷಿ ವಹಿಸಿದ್ದರು. ಎನ್ ಎಸ್ ಎಸ್ ಕಾರ್ಯಕ್ರಮಾಧಿಕಾರಿ ಸಂಧ್ಯಾ ನಾಯಕ್ ಸ್ವಾಗತಿಸಿದರು. ವಿದ್ಯಾರ್ಥಿನಿ ರಕ್ಷಿತಾ ವಂದಿಸಿದರು. ರಾಷ್ಟ್ರೀಯ ಸೇವಾ ಯೋಜನೆಯ ಘಟಕದ ನಾಯಕಿ ನಿಶ್ಮಿತಾ ಕಾರ್ಯಕ್ರಮ ನಿರೂಪಿಸಿದರು.
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಇತ್ತೀಚಿಗಷ್ಟೇ ಉತ್ತಮ ಸಾಧಕ ಪ್ರಶಸ್ತಿಯನ್ನು ಪಡೆದಿರುವ ಹಾಜಿ ಕೆ. ಮೊಹಿದ್ದೀನ್ ಬ್ಯಾರಿ ಅನುದಾನಿತ ಪ್ರೌಢಶಾಲೆಯ ಮುಖ್ಯೋಪಾಧ್ಯಾಯಿನಿ ಜಯಂತಿ ಹಾಗೂ ಬ್ಯಾರೀಸ್ ಸೀಸೈಡ್ ಪಬ್ಲಿಕ್ ಸ್ಕೂಲ್ನ ಚಿತ್ರಕಲಾ ಶಿಕ್ಷಕ ರಮೇಶ ಹಾಂಡ ಇವರಿಗೆ ಬ್ಯಾರೀಸ್ ಸೀ ಸೈಡ್ ಪಬ್ಲಿಕ್ ಸ್ಕೂಲ್ನ ಆಡಳಿತ ಮಂಡಳಿ ಮತ್ತು ಶಿಕ್ಷಕರ ವತಿಯಿಂದ ಸನ್ಮಾನಿಸಲಾಯಿತು. ಬ್ಯಾರೀಸ್ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷರಾದ ಹಾಜಿ ಮಾಸ್ಟರ್ ಮೆಹಮ್ಮೂದ್, ಸಲಹಾ ಸಮಿತಿಯ ಸದಸ್ಯರಾದ ಅಬುಷೇಕ್ ಹಾಗೂ ಬ್ಯಾರೀಸ್ ಸೀಸೈಡ್ ಪಬ್ಲಿಕ್ ಸ್ಕೂಲ್ನ ಮುಖ್ಯೋಪಾಧ್ಯಾಯಿನಿ ರೇಷ್ಮಾ ಡಿ’ಸೋಜ ರವರು ಉಪಸ್ಥಿತರಿದ್ದರು.
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಮೂಡಬಿದಿರೆ ಮಹಾವೀರ ಕಾಲೇಜು ಆಡಿಟೋರಿಯಮ್ ನಡೆದ ಎರಡನೇ ರಾಜ್ಯ ಮಟ್ಟದ ಮುಕ್ತ ಕರ್ನಾಟಕ ಕರಾಟೆ ಚಾಪಿಂಯನ್ಶಿಪ್ 2016ಸ್ಪರ್ಧೆಯಲ್ಲಿ ಉಪ್ಪುಂದ ಅರೆಹಾಡಿ ವಿಶ್ವನಾಥ ದೇವಾಡಿಗ ಇವರು ಪೈಟಿಂಗ್ನಲ್ಲಿ ಚಿನ್ನದ ಪದಕ ಹಾಗೂ ಕಟಾದಲ್ಲಿ ತೃತೀಯ ಸ್ಥಾನ ಪಡೆದುಕೊಂಡಿರುತ್ತಾರೆ. ಇವರು ಡ್ರಾಗನ್ ಪಿಸ್ಟನ ವಿದ್ಯಾರ್ಥಿಯಾಗಿದ್ದು ಇವರು ಅಬ್ಜಲ್ ಅವರಲ್ಲಿ ತರಬೇತಿಯನ್ನು ಪಡೆದಿರುತ್ತಾರೆ.
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಭಾರತ ದೇಶದ ಜನಮಾನಸ ಭಾಷೆ ಹಿಂದಿ. ದೇಶದ ಏಕತೆ, ಗೌರವಗಳು ರಾಷ್ಟ್ರಭಾಷೆ ಹಿಂದಿಯ ಮಹತ್ವವನ್ನು ಅರಿತು ಗೌರವಿಸುವುದರಲ್ಲಿದೆ. ಮನಸ್ಸಿಗೆ ಹಿತವಾಗಿ ಸರಳವಾಗಿ ಸ್ಪಂದಿಸುವ ಹಿಂದಿ ಭಾಷೆಯಲ್ಲಿ ಎಲ್ಲರೂ ಮಾತನಾಡುವಂತಾಗಬೇಕು ಎಂದು ಕಿನ್ನಿಗೋಳಿ ಐಕಳದ ಪಾಂಪೈ ಮಹಾವಿದ್ಯಾಲಯದ ನಿವೃತ್ತ ಹಿಂದಿ ಪ್ರಾಧ್ಯಾಪಕ ಪ್ರೊ.ಗೋವಿಂದ ಭಟ್ ಕೆ.ಅವರು ಕರೆ ನೀಡಿದರು. ಅವರು ಇಲ್ಲಿನ ಭಂಡಾರ್ಕಾರ್ಸ್ ಕಾಲೇಜಿನ ಹಿಂದಿ ವಿಭಾಗ ಆಯೋಜಿಸಿದ್ದ ರಾಷ್ಟ್ರೀಯ ಹಿಂದಿ ದಿವಸ್ ‘ಜ್ಯೋತ್ಸ್ನಾ’ ಕಾರ್ಯಕ್ರಮದಲ್ಲಿ ಮುಖ್ಯ ಅಭ್ಯಾಗತರಾಗಿ ಭಾಗವಹಿಸಿ ಮಾತನಾಡಿದರು. ಹಿಂದಿ ಸಾಹಿತ್ಯದಲ್ಲಿ ಹಲವು ಪ್ರಾದೇಶಿಕ ಭಾಷೆಗಳ, ಹಲವು ಪ್ರಾದೇಶಿಕ ಸಂಸ್ಕೃತಿಗಳ ಜ್ನಾನ ಅಡಗಿದ್ದು, ದೇಶದ ಸಂಪೂರ್ಣ ಪರಿಚಯವನ್ನು ಅದರಿಂದ ಪಡೆಯಬಹುದು. ವಿಶ್ವದ ಜನರಲ್ಲಿ ಅತೀ ಹೆಚ್ಚು ಬಳಕೆಯಲ್ಲಿಅರುವ ಭಾಷೆಗಳಲ್ಲಿ ನಮ್ಮ ರಾಷ್ಟ್ರಭಾಷೆ ಹಿಂದಿ ಮೂರನೇ ಸ್ಥಾನದಲ್ಲಿದೆ. ಹಿಂದಿ ಸಾಹಿತ್ಯದ ಸತ್ವವನ್ನು ಅರಿಯುವ ತವಕ ಬೆಳೆಯಬೇಕು. ಈ ಉತ್ಸವ ಒಂದು ದಿನಕ್ಕೆ ಸೀಮಿತವಾಗಿರದೇ ವರ್ಷವಿಡಿ ಭಾಷಾ ಪ್ರೇಮ ಮತ್ತು ವಿಕಾಸದ ಜಾಗೃತಿಯ ಕಾರ್ಯ ನಡೆಯಬೇಕು…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಮರವಂತೆ ಬಡಾಕೆರೆ ವ್ಯವಸಾಯ ಸೇವಾ ಸಹಕಾರಿ ಸಂಘದ ವಾರ್ಷಿಕ ಮಹಾಸಭೆಯು ನಾವುಂದದ ಮಹಾಗಣಪತಿ ಮಾಂಗಲ್ಯ ಮಂಟಪದಲ್ಲಿ ಸೋಮವಾರ ನಡೆಯಿತು. ಸಂಘದ ಅಧ್ಯಕ್ಷ ಎಸ್. ರಾಜು ಪೂಜಾರಿ ಅಧ್ಯಕ್ಷತೆ ವಹಿಸಿದ್ದರು. ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು ಸಂಘವು ಕಳೆದ ಆರ್ಥಿಕ ವರ್ಷದಲ್ಲಿ ಠೇವಣಿ ಸಂಗ್ರಹ, ಸಾಲ ನೀಡಿಕೆ, ವಸೂಲಿ ಸೇರಿದಂತೆ ಎಲ್ಲ ವಿಭಾಗಗಳಲ್ಲಿ ಗಣನೀಯ ಪ್ರಗತಿ ಸಾಧಿಸಿದೆ. ಅದರ ದುಡಿಯುವ ಬಂಡವಾಳ 34 ಕೋಟಿಗೇರಿದೆ. ವರ್ಷದ ಅಂತ್ಯಕ್ಕೆ ಅದು ಹೊಂದಿರುವ ಠೇವಣಿಯ ಮೊತ್ತ ರೂ. 23.59 ಕೋಟಿಯಾಗಿದ್ದು ಪ್ರಸಕ್ತ ವರ್ಷ ಅದನ್ನು ರೂ. 30 ಕೋಟಿಗೆ ಏರಿಸುವ ಗುರಿ ಹೊಂದಲಾಗಿದೆ. ರೂ 35 ಕೋಟಿ ಸಾಲ ವಿತರಿಸಿ, ರೂ 30 ಕೋಟಿ ಸಂಗ್ರಹಿಸಲಾಗಿದೆ. ಸಂಘ ರೂ 72.5 ಲಕ್ಷ ಲಾಭ ಗಳಿಸಿದೆ. ಸದಸ್ಯರ ಒತ್ತಾಯದ ಹಿನ್ನೆಲೆಯಲ್ಲಿ ಶೇ. 14 ಡಿವಿಡೆಂಡ್ ನೀಡಲಾಗುವುದು ಎಂದು ಅವರು ಹೇಳಿದರು. ಆರಂಭದಲ್ಲಿ ಗಣೇಶ ಗಂಗೊಳ್ಳಿ ರೈತಗೀತೆ ಹಾಡಿದರು. ವ್ಯವಸ್ಥಾಪಕ ಬಿ. ರಮೇಶ ಅಡಿಗ ಸ್ವಾಗತಿಸಿದರು. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸಂಜೀವ ಮಡಿವಾಳ…
