ಕುಂದಾಪ್ರ ಡಾಟ್ ಕಾಂ ಸುದ್ದಿ.
ಕೋಟ: ನಿಷ್ಠಾವಂತ ಅಧಿಕಾರಿ ಎಂದು ಹೆಸರು ಮಾಡಿದ್ದ ಕೋಟ ಠಾಣೆಯ ಎಸೈ ಕಬ್ಬಾಳರಾಜ್ ಹೆಚ್. ಡಿ., ಅವರನ್ನು ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಜಿಲ್ಲಾ ಎಸ್ಪಿ ತರಾಟೆಗೆ ತೆಗೆದುಕೊಂಡ ಹಿನ್ನೆಲೆಯಲ್ಲಿ ಅಸಮಾಧಾನಗೊಂಡ ಎಸೈ ರಾಜಿನಾಮೆ ನೀಡಿ ತೆರಳಿದ್ದಾರೆ ಎನ್ನಲಾಗಿದೆ.
ಐರೋಡಿ ಹಂಗಾರಕಟ್ಟೆಯ ಖಾಸಗಿ ವ್ಯಕ್ತಿಯೋರ್ವರ ಜಾಗದ ವಿಷಯದಲ್ಲಿ ಇದ್ದ ತಕರಾರು ಕೋಟ ಠಾಣೆಯ ಮೆಟ್ಟಿಲೇರಿತ್ತು. ಠಾಣಾಧಿಕಾರಿ ಕಬ್ಬಾಳರಾಜ್ ಪ್ರಕರಣವನ್ನು ಇತ್ಯರ್ಥಗೊಳಿಸಿ ಸುಖಾಂತ್ಯ ಕಾಣಿಸಿದ್ದರಾದರೂ ಅತೃಪ್ತರೊರ್ವರು ತಮಗೆ ಅನ್ಯಾಯವಾಗಿದೆ ಎಂದು ಜಿಲ್ಲಾ ಎಸ್ಪಿ ಕೆ.ಟಿ. ಬಾಲಕೃಷ್ಟ ಅವರಲ್ಲಿ ದೂರಿಕೊಂಡಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಜಿಲ್ಲಾ ಎಸ್ಪಿ ನೇರವಾಗಿ ಕೋಟ ಠಾಣಾಧಿಕಾರಿ ಕಬ್ಬಾಳರಾಜ್ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ ಎನ್ನಲಾಗಿದೆ. ಇಂದು ಬೆಳಿಗ್ಗೆ ಎಸ್ಪಿ ಅವರೊಂದಿಗೆ ದೂರವಾಣಿಯ ಮೂಲಕ ಸಂವಾದ ನಡೆಸಿದ್ದ ಕಬ್ಬಾಳರಾಜ್ ಠಾಣೆಯ ಡೈರಿಯಲ್ಲಿ ರಾಜೀನಾಮೆ ವಿಷಯವನ್ನು ಪ್ರಸ್ತಾಪ ಮಾಡಿ ಹೊರಕ್ಕೆ ನಡೆದಿದ್ದಾರೆ ಮೂಲಗಳು ತಿಳಿಸಿವೆ. ಕುಂದಾಪ್ರ ಡಾಟ್ ಕಾಂ ಸುದ್ದಿ.
ಠಾಣೆಯಿಂದ ತೆರಳಿದ ಬಳಿಕ ಕಬ್ಬಾಳರಾಜ್ ಅವರ ಮೊಬೈಲ್ ಸ್ವಿಚ್ ಆಫ್ ಆಗಿದ್ದು ಸಂಪರ್ಕಕ್ಕೆ ದೊರೆಯುತ್ತಿಲ್ಲ. ಠಾಣೆಯಲ್ಲಿ ಬರೆದಿಟ್ಟ ಡೈರಿಯೂ ಎಸ್ಪಿ ಕಛೇರಿಗೆ ತಲುಪಿದೆ ಎನ್ನಲಾಗಿದೆ. ಈ ಹಿಂದೆಯೂ ಪೊಲೀಸರ ಮುಷ್ಕರದ ಸಂದರ್ಭದಲ್ಲಿ ಕಬ್ಬಾಳರಾಜ್ ರಾಜಿನಾಮೆಗೆ ಮುಂದಾಗಿದ್ದರಾದರೂ ಆಗಿನ ಎಸ್ಪಿ ಅಣ್ಣಾಮಲೈ ಅವರ ಮನವೊಲಿಸುವಲ್ಲಿ ಯಶಸ್ವಿಯಾಗಿದ್ದರು. ಕುಂದಾಪ್ರ ಡಾಟ್ ಕಾಂ ಸುದ್ದಿ.
ಕೋಟ ನಾಗರಿಕರ ಅಸಮಾಧಾನ:
ನೇರ ನಡೆಯ ಅಧಿಕಾರಿಯಾಗಿದ್ದ ಕಬ್ಬಾಳರಾಜ್ ರಾಜಿನಾಮೆ ನೀಡಿರುವ ಬಗ್ಗೆ ಕೋಟ ಪರಿಸರದ ಜನರ ಅಸಮಾಧಾನಗೊಂಡಿದ್ದಾರೆ. ಅವರ ರಾಜನಾಮೆಯನ್ನು ಅಂಗೀಕರಿಸಬಾರದೆಂದು ಎಸ್ಪಿಯನ್ನು ಭೇಟಿಯಾಗುವ ಸಿದ್ಧತೆಯಲ್ಲಿ ಕೋಟ ನಾಗರಿಕರಿದ್ದಾರೆ. ನಿಷ್ಠಾವಂತ ಅಧಿಕಾರಿ ರಾಜಿನಾಮೆ ಕೊಟ್ಟರೆ ಕೋಟದಲ್ಲಿ ಬಂದ್ ಮಾಡಲಾಗುತ್ತದೆ ಎನ್ನುವ ಮಾತುಗಳೂ ಕೇಳಿ ಬರುತ್ತಿವೆ. /ಕುಂದಾಪ್ರ ಡಾಟ್ ಕಾಂ ಸುದ್ದಿ/
One thought on “ಕೋಟ ಠಾಣಾಧಿಕಾರಿ ಕಬ್ಬಾಳರಾಜ್ ರಾಜಿನಾಮೆ? ಎಸ್ಪಿ ತರಾಟೆಗೆ ತೆಗೆದುಕೊಂಡ ಹಿನ್ನೆಲೆ”