ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಜೇಸಿಐ ಕುಂದಾಪುರ ಸಿಟಿಯ ೨೦೧೭ನೇ ಸಾಲಿನ ನೂತನ ಅಧ್ಯಕ್ಷರಾಗಿ ಉದ್ಯಮಿ ಶ್ರೀಧರ ಸುವರ್ಣ ಆಯ್ಕೆಯಾಗಿದ್ದಾರೆ.
ಜೇಸಿಐ ಕುಂದಾಪುರ ಸಿಟಿಯ ಜ್ಯೂನಿಯರ್ ಜೇಸಿ ಅಧ್ಯಕ್ಷರಾಗಿ, ರೋಟರ‍್ಯಾಕ್ಟ್ ಕ್ಲಬ್ ಕುಂದಾಪುರದ ಅಧ್ಯಕ್ಷರಾಗಿ, ಜೇಸಿ, ರೋಟರ‍್ಯಾಕ್ಟ್‌ನ ವಿವಿಧ ಪದಾಧಿಕಾರಿಯಾಗಿ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದು, ಕಲಾಕ್ಷೇತ್ರ ಕುಂದಾಪುರ, ರೋಟರಿ ಕ್ಲಬ್ ಕುಂದಾಪುರದ ಸದಸ್ಯರಾಗಿದ್ದಾರೆ.
ಜೇಸಿಐ ಕುಂದಾಪುರ ಸಿಟಿಯ ಜೇಸಿ ಸಪ್ತಾಹದ ಕೊನೆಯ ದಿನ ನಿಕಟಪೂರ್ವಾಧ್ಯಕ್ಷ ಚಂದ್ರಕಾಂತ್ ಅವರು ಮುಂದಿನ ಸಾಲಿನ ಅಧ್ಯಕ್ಷರಾಗಿ ಶ್ರೀಧರ ಸುವರ್ಣ ಅವಿರೋಧ ಆಯ್ಕೆಯಾಗಿರುವುದನ್ನು ಘೋಷಿಸಿದರು. ಈ ಸಂದರ್ಭದಲ್ಲಿ ಪ್ರಸಕ್ತ ಸಾಲಿನ ಅಧ್ಯಕ್ಷ ಕುಂಭಾಸಿ ಮಂಜುನಾಥ ಕಾಮತ್, ಜೇಸಿ ವಲಯ ಉಪಾಧ್ಯಕ್ಷ ನಿತಿನ್ ಅವಭೃತ, ಪೂರ್ವಾಧ್ಯಕ್ಷರಾದ ಕೆ. ಕಾರ್ತಿಕೇಯ ಮಧ್ಯಸ್ಥ, ಸಪ್ತಾಹ ಸಭಾಪತಿಗಳಾದ ಹುಸೇನ್ ಹೈಕಾಡಿ, ರಾಘವೇಂದ್ರ ಚರಣ ನಾವಡ, ಪೂರ್ವಾಧ್ಯಕ್ಷರಾದ ನಾಗೇಂದ್ರ ಪೈ, ವೆಂಕಟೇಶ ಪ್ರಭು ಇನ್ನಿತರರು ಉಪಸ್ಥಿತರಿದ್ದರು.