Author: ನ್ಯೂಸ್ ಬ್ಯೂರೋ

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಜಾರ್ಖಂಡ್‌ನ ಜೆಮ್‌ಶೆಡ್‌ಪುರದಲ್ಲಿ ನಡೆದ 42ನೇ ಸೀನಿಯರ್ ನ್ಯಾಶನಲ್ ಪವರ್ ಲಿಫ್ಟಿಂಗ್‌ನಲ್ಲಿ ಕರ್ನಾಟಕ ತಂಡವನ್ನು ಪ್ರತಿನಿಧಿಸಿದ ಕುಂದಾಪುರ ತಾಲೂಕಿನ ಬಾಳಿಕೆರೆಯ ದೇಹದಾರ್ಢ್ಯ ಪಟು ವಿಶ್ವನಾಥ ಭಾಸ್ಕರ ಗಾಣಿಗ ಅವರು 83 ಕೆಜಿ ವಿಭಾಗದಲ್ಲಿ 2 ಚಿನ್ನದ ಪದಕ ಹಾಗೂ 1 ಬೆಳ್ಳಿ, 1 ಕಂಚಿನ ಪದಕ ಪಡೆದು ರಾಜ್ಯಕ್ಕೆ ಕೀರ್ತಿ ತಂದಿದ್ದಾರೆ. ಈಗಾಗಲೇ ರಾಜ್ಯ, ರಾಷ್ಟ್ರ, ಅಂತರಾಷ್ಟ್ರೀಯ ಮಟ್ಟದ ವೈಟ್ ಲಿಫ್ಟಿಂಗ್‌ನಲ್ಲಿ ಸ್ಫರ್ಧಿಸಿ ಹಲವಾರು ಪ್ರಶಸ್ತಿಗಳನ್ನು ಪಡೆದಿರುವ ಈತ ಬಾಳಿಕೆರೆಯ ಭಾಸ್ಕರ ಗಾಣಿಗ ಮತ್ತು ಶ್ರೀಮತಿ ಪದ್ಮಾವತಿ ಗಾಣಿಗ ಅವರ ಪುತ್ರರಾಗಿದ್ದಾರೆ. ಬೆಂಗಳೂರಿನ ಸೂಪರ್ ಬಾಡೀಸ್‌ನಲ್ಲಿ ತರಬೇತಿ ಪಡೆಯುತ್ತಿದ್ದಾರೆ  

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಇಲ್ಲಿನ ಹೋಲಿಕ್ರಾಸ್ ಚರ್ಚ್‌ಗೆ ತೆರಳುವ ರಸ್ತೆಯನ್ನು ದುರಸ್ತಿಗಳಿಸುವಂತೆ ಕೋರಿ ಬೈಂದೂರು ವಲಯ ಕ್ಯಾಥೋಲಿಕ್ ಸಭಾ ಕ್ರೈಸ್ತ ಸಮುದಾಯದ ಪರವಾಗಿ ಬೈಂದೂರು ಶಾಸಕರ ಭವನದಲ್ಲಿ ಶಾಸಕ ಗೋಪಾಲ ಪೂಜಾರಿ ಅವರಿಗೆ ಮನವಿ ಸಲ್ಲಿಸಿದರು. ಈ ಸಂದರ್ಭದಲ್ಲಿ ಚರ್ಚಿನ ಧರ್ಮಗುರು ರೋನಾಲ್ಡ್ ಮಿರಾಂಡಾ, ಕ್ಯಾಥೋಲಿಕ್ ಸಭಾ ಬೈಂದೂರು ವಲಯಾಧ್ಯಕ್ಷ ಇಗ್ನೇಷಿಯಸ್ ನಜ್ರತ್, ಕಾರ್ಯದರ್ಶಿ ಜೋಸ್ಟಿನ್ ರೋಡ್ರಿಗಸ್, ಜಿಲ್ಲಾ ಕೆಡಿಪಿ ಸದಸ್ಯ ರಾಜು ಪೂಜಾರಿ, ಬೈಂದೂರು ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಮಾರ್ಟಿನ್ ಡಯಾಸ್ ಮೊದಲಾದವರು ಉಪಸ್ಥಿತರಿದ್ದರು.  

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಜನಸೇವಾ ವಿವಿದೋದ್ದೇಶ ಸಹಕಾರಿ ಸಂಘ (ನಿ) ಬಸ್ರೂರು ಇದರ ವಾರ್ಷಿಕ ಸಾಮಾನ್ಯ ಸಭೆಯು ಸಂಘದ ಅಧ್ಯಕ್ಷ ಎಚ್.ಎಸ್. ಹತ್ವಾರ್‌ರವರ ಅಧ್ಯಕ್ಷತೆಯಲ್ಲಿ ಬಿ.ಎಂ. ಶಾಲೆ ಬಸ್ರೂರು ಸಭಾಂಗಣದಲ್ಲಿ ಜರಗಿತು. ಸಂಘದ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಅಶೋಕ ಪೂಜಾರಿ ಬಳ್ಕೂರು ವಾರ್ಷಿಕ ವರದಿಯನ್ನು ವಾಚಿಸಿದರು. ಸ್ಥಳಿಯ ಪ್ರತಿಭಾವಂತ ಪ್ರಾಥಮಿಕ ಹಾಗೂ ಫ್ರೌಡ ಶಾಲಾ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನವನ್ನು ನೀಡಿ ಗೌರವಿಸಲಾಯಿತು. ಸದಸ್ಯರಿಗೆ ಶೇ. ೧೧ ಡಿವಿಡೆಂಟ್ ಘೋಷಿಸಲಾಯಿತು. ಹಾಜರಿದ್ದ ಎಲ್ಲಾ ಸದಸ್ಯರಿಗೆ ಎಲ್.ಇ.ಡಿ. ಬಲ್ಬ್‌ಗಳನ್ನು ನೀಡಿ ಸರಕಾರದ ಕಾರ್ಯಕ್ರಮವಾದ ವಿದ್ಯುತ್ ಉಳಿಸಿ ದೇಶ ಬೆಳಸಿ ಎನ್ನುವುದನ್ನು ಪ್ರೋತ್ಸಾಹಿಸಲಾಯಿತು. ನಿರ್ದೇಶಕ ಪಿ. ಜಗನ್ನಾಥ ಶೆಟ್ಟಿ ವಂದಿಸಿದರು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಸ್ವಂತಕ್ಕೆ ಸ್ವಲ್ಪ – ಸಮಾಜಕ್ಕೆ ಸರ್ವಸ್ವವೆಂಬ ಧ್ಯೇಯವನ್ನಿಟ್ಟುಕೊಂಡ ವ್ಯಕ್ತಿಗಳೂ ಆರಂಭಿಸುವ ಉದ್ಯಮ ಯಾವಾಗಲೂ ಯಶಸ್ಸನ್ನು ಕಾಣುತ್ತದೆ. ಸಮಾಜಕ್ಕೇನಾದರೂ ಮಾಡಬೇಕೆಂಬ ತುಡಿತದ ಹಿಂದೆ ಜನರ ಹಿತಕಾಯುವ ಉತ್ತಮ ಚಿಂತನೆ ಅಡಗಿರುತ್ತದೆ ಎಂದು ಪುತ್ತೂರು ಶ್ರೀ ವಿವೇಕಾನಂದ ವಿದ್ಯಾವರ್ದಕ ಸಂಘದ ಅಧ್ಯಕ್ಷ ಡಾ. ಕಲ್ಲಡ್ಕ ಪ್ರಭಾಕರ ಭಟ್ ಹೇಳಿದರು. ಬೈಂದೂರು ಶ್ರೀ ಮೂಕಾಂಬಿಕಾ ಡೆವೆಲಪರ್ಸ್ ಹಾಗೂ ಮೆ. ವೃಂದಾ ಮಾರ್ಕೆಟಿಂಗ್ ಎಂಟರ್‌ಪ್ರೈಸಸ್ ಅವರ ನೂತನ ಕಟ್ಟಡ ‘ಸಿಟಿ ಪಾಯಿಂಟ್’ ಹಾಗೂ ಅತ್ಯಾಧುನಿಕ ಹವಾನಿಯಂತ್ರಿತ ಹೈಪರ್ ಮಾರ್ಕೆಟ್ ‘ನಮ್ಮ ಬಜಾರ್’ ಲೋಕಾರ್ಪಣೆಗೊಳಿಸಿ ಮಾತನಾಡಿದರು. ಭಾರತ ಬದಲಾವಣೆಯ ಕಾಲಘಟ್ಟದಲ್ಲಿದೆ. ಮೂಲಭೂತ ಸೌಕರ್ಯ, ಶಿಕ್ಷಣ, ಉದ್ಯೋಗದಿಂದ ಸಮಾಜದ ಕಟ್ಟಕಡೆಯ ವ್ಯಕಿಯ ಜೀವನ ಮಟ್ಟವೂ ಸುಧಾರಿಸುತ್ತಿದೆ. ಹೆಚ್ಚುತ್ತಿರುವ ವ್ಯಕ್ತಿಯ ಅಗತ್ಯತೆಗಳಿಗೆ ತಕ್ಕಂತೆ ಬೈಂದೂರು ನಗರಕ್ಕೊಂದು ದೃಷ್ಠಿ ಎಂಬಂತೆ ಆರಂಭಗೊಂಡಿರುವ ನಮ್ಮ ಬಜಾರ್ ಜನರಿಗೆ ಹತ್ತಿರವಾಗಲಿದೆ ಎಂದ ಅವರು ಭಾರತೀಯರ ಜನಜೀವನ ಭಿನ್ನವಾದದ್ದು. ನಮ್ಮ ಆರ್ಥಿಕ ವ್ಯವಸ್ಥೆಯ ಕೇಂದ್ರಬಿಂದು ತಾಯಿ. ನಮ್ಮದು ಉಳಿಸುವ ಸಂಸ್ಕೃತಿ. ಹಾಗಾಗಿ ಕೆಲವು…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಇಲ್ಲಿನ ಮುಖ್ಯರಸ್ತೆಯಲ್ಲಿ ನೂತನವಾಗಿ ಆರಂಭಗೊಂಡಿರುವ ಸಿಟಿ ಪಾಯಿಂಟ್ ಕಟ್ಟಡ ಹಾಗೂ ಹೈಪರ್ ಎಸಿ ಮಾರ್ಕೆಟ್ ನಮ್ಮ ಬಜಾರ್ ಲೋಪಾರ್ಪಣೆಗೊಂಡಿತು. ಪುತ್ತೂರು ಶ್ರೀ ವಿವೇಕಾನಂದ ವಿದ್ಯಾವರ್ದಕ ಸಂಘದ ಅಧ್ಯಕ್ಷ ಡಾ. ಕಲ್ಲಡ್ಕ ಪ್ರಭಾಕರ ಭಟ್ ಲೋಕಾರ್ಪಣೆಗೊಳಿಸಿದರು. ಬೈಂದೂರು ಶಾಸಕ ಕೆ. ಗೋಪಾಲ ಪೂಜಾರಿ ಅಧ್ಯಕ್ಷತೆ ವಹಿಸಿದ್ದರು. ರಾಯಚೂರಿನ ಸಿ.ಎ ಹಾಗೂ ಉದ್ಯಮಿ ಯು ರಾಮಚಂದ್ರ ಪ್ರಭು ಶುಭಶಂಸಗೈದರು. ನಮ್ಮ ಬಜಾರ್ – ಸಿಟಿ ಪಾಯಿಂಟ್ ಪ್ರವರ್ತಕ, ಶ್ರೀ ಮೂಕಾಂಬಿಕಾ ಡೆವೆಲಪರ‍್ಸ್‌ನ ಕೆ. ಸ್ವಾಗತಿಸಿ, ವೆಂಕಟೇಶ ಕಿಣಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಜಾದೂಗಾರ ಓಂಗಣೇಶ್ ಉಪ್ಪುಂದ ನಿರೂಪಿಸಿದರು.  

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಮರವಂತೆಯಲ್ಲಿ ಗಾಳಿಮಳೆಗೆ ಮನೆ ಕುಸಿದುಹೋಗಿ ನಷ್ಟ ಅನುಭವಿಸಿದ ದಾಸಿಮನೆ ಲಕ್ಷ್ಮೀ ಖಾರ್ವಿ ಅವರಿಗೆ ಇಲ್ಲಿ ಮೀನುಗಾರಿಕಾ ಬಂದರು ಕಾಮಗಾರಿ ನಡೆಸುತ್ತಿರುವ ಎನ್‌ಎಸ್‌ಕೆ ಬಿಲ್ಡರ್ ವತಿಯಿಂದ ಅದರ ವ್ಯವಸ್ಥಾಪಕ ಕಿಶೋರ್ ರೂ. ೨೫೦೦೦ ನೆರವು ನೀಡಿದರು. ತಾಲ್ಲೂಕು ಪಂಚಾಯತ್ ಸದಸ್ಯ ಜಗದೀಶ ಪೂಜಾರಿ, ಸ್ಥಳೀಯ ಮೀನುಗಾರ ಸಮುದಾಯದ ಪ್ರಮುಖರಾದ ಎಂ. ರಾಮಕೃಷ್ಣ ಖಾರ್ವಿ, ಚಂದ್ರಗುಪ್ತ ಖಾರ್ವಿ ಇದ್ದರು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಶ್ರೀ ವೆಂಕಟರಮಣ ಪದವಿಪೂರ್ವ ಕಾಲೇಜು ಮತ್ತು ಪದವಿಪೂರ್ವ ಶಿಕ್ಷಣ ಇಲಾಖೆ, ಉಡುಪಿ ಜಿಲ್ಲೆ ಇವರ ಜಂಟಿ ಆಶ್ರಯದಲ್ಲಿ ಪದವಿಪೂರ್ವ ಕಾಲೇಜುಗಳ ಕುಂದಾಪುರ ತಾಲೂಕು ಮಟ್ಟದ ಬಾಲಕ ಹಾಗೂ ಬಾಲಕಿಯರ ತ್ರೋಬಾಲ್ ಪಂದ್ಯಾಟ ಶ್ರೀ ವೆಂಕಟರಮಣ ಪದವಿಪೂರ್ವ ಕಾಲೇಜಿನ ಆಟದ ಮೈದಾನದಲ್ಲಿ ನಡೆಯಿತು. ಪಂದ್ಯಾಟಗಳನ್ನು ದೀಪ ಪ್ರಜ್ವಲನೆಯ ಮೂಲಕ ಉದ್ಘಾಟಿಸಿದ ವಸಂತ ಬಂಗೇರ ವಿದ್ಯಾರ್ಥಿಗಳು ಶಾಲಾ ಜೀವನದಲ್ಲೇ ನಿರಂತರ ಅಭ್ಯಾಸ ಮಾಡಿದಲ್ಲಿ ಉತ್ತಮ ಸಾಧನೆ ಮಾಡಲು ಸಾಧ್ಯ ಎಂದರು. ವೆಂಕಟರಮಣ ದೇವ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಟ್ರಸ್ಟಿನ ಕಾರ್ಯದರ್ಶಿ ಕೆ. ರಾಧಾಕೃಷ್ಣ ಶೆಣೈ ಕ್ರೀಡಾ ಚಟುವಟಿಕೆಗಳಿಗೆ ಆಡಳಿತ ಮಂಡಳಿ ಪೂರಕವಾಗಿ ಸ್ಪಂದಿಸುತ್ತದೆ ಮತ್ತು ವಿದ್ಯಾರ್ಥಿಗಳಿಗಾಗಿ ಉತ್ತಮ ಕ್ರೀಡಾಂಗಣ ಸಧ್ಯದಲ್ಲೆ ಸಜ್ಜುಗೊಳ್ಳಲಿದೆ ಎಂದರು. ಅತಿಥಿಗಳಾಗಿ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಪದವಿಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ಆರ್. ಬಿ. ನಾಯಕ್ ಕ್ರೀಡಾಳುಗಳನ್ನು ಪ್ರೋತ್ಸಾಹಿಸುತ್ತಾ ಪಂದ್ಯಾಟ ಯಶಸ್ವಿಯಾಗಲೆಂದು ಶುಭ ಹಾರೈಸಿದರು. ಪದವಿಪೂರ್ವ ಶಿಕ್ಷಣ ಇಲಾಖೆಯ ಕ್ರೀಡಾ ಸಂಯೋಜಕ ಶ್ರೀಧರ ಶೆಟ್ಟಿ, ವಲಯ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕೋಟ: ಜೇಸಿ ಸಂಘಟನೆ ಎಂಬುವುದು ಒಂದು ಅಂತರಾಪ್ಷ್ರೀಯ ಸಂಸ್ಥೆಯಾಗಿದ್ದು ಅದರ ಕಾರ್ಯ ಕ್ಷೇತ್ರವನ್ನು ಗ್ರಾಮೀಣ ಭಾಗಗಳಲ್ಲಿ ವಿಸ್ತರಿಸಿಕೊಂಡು ಹತ್ತು ಹಲವು ಸಮಾಜಮುಖಿ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಇತರ ಸಂಘ ಸಂಸ್ಥೆಗಳಿಗೆ ಮಾದರಿಯಾಗಿದೆ ಎಂದು ಕೋಟ ಪಂಚವರ್ಣ ಯುವಕ ಮಂಡಲದ ಗೌರವಾಧ್ಯಕ್ಷ ಕೆ.ವೆಂಕಟೇಶ್ ಪ್ರಭು ಹೇಳಿದ್ದಾರೆ. ಮಣೂರು ಪಡುಕರೆ ಸಯುಂಕ್ತ ಪ್ರೌಢಶಾಲೆಯ ಸಭಾಂಗಣದಲ್ಲಿ ಮಂಗಳವಾರ ಜೇಸಿಐ ಸಾಸ್ತಾನ ವೈಬ್ರೆಂಟ್ ವತಿಯಿಂದ ಒಂದು ವಾರಗಳ ಕಾಲ ನಡೆಯುವ ಜೇಸಿ ಸಪ್ತಾಹ ಸಂಚಲನ 2016ಇದರ ಬನ್ನಿ ಬದಲಾಗೋಣ ವ್ಯಕ್ತಿತ್ವ ವಿಕಸನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ನೂರಾರು ಸಂಘ ಸಂಸ್ಥೆಗಳಿರಬಹುದು ಆದರೆ ಅದರದ್ದೆ ಆದ ಕಾರ್ಯ ಚಟುವಟಿಕೆಗೆ ಸ್ಥಳಗಳ ವ್ಯಾಪ್ತಿ ಇರುತ್ತದೆ ಆದರೆ ಜೇಸಿ ಸಾಸ್ತಾನ ಫಟಕ ತನ್ನ ಕಾರ್ಯಕ್ಷೇತ್ರವನ್ನು ಇತರ ಕಡೆಗಳಿಗೂ ವಿಸ್ತರಿಸಿ ಕೊಂಡಿದೆ ಇದು ಶ್ಲಾಘನಾರ್ಹ ಎಂದರು. ಜೇಸಿಐ ಸಾಸ್ತಾನ ವೈಬ್ರೆಂಟ್‌ನ ಅಧ್ಯಕ್ಷ ಉದಯ ಕೋಟ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಣೂರು ಪ್ರೌಡ ಶಾಲಾ ಶಿಕ್ಷಕ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಗಂಗೊಳ್ಳಿ ಸಮುದಾಯ ಹಿತರಕ್ಷಣಾ ಸಮಿತಿಯ ಪ್ರಥಮ ವರ್ಷದ ವಾರ್ಷಿಕೋತ್ಸವ ಸಮ್ಮಿಲನದ ಕಾರ್ಯಕ್ರಮದಲ್ಲಿ ಕುಂದಾಪುರ ವಕೀಲರ ಸಂಘದ ಅಧ್ಯಕ್ಷರಾಗಿ ಆಯ್ಕೆಯಾದ ಬನ್ನಾಡಿ ಸೋಮನಾಥ ಹೆಗ್ಡೆಯವರನ್ನು ಅಭಿನಂದಿಸಲಾಯಿತು. ಗಂಗೊಳ್ಳಿ ಮುಖ್ಯ ರಸ್ತೆಯ ವಿಜಯ ವಿಠಲ ಮಂಟಪದಲ್ಲಿ ನಡೆದ ಕಾರ್ಯಕ್ರಮದಲ್ಲಿ ಧಾರವಾಡದ ಕಲಘಟಗಿ ಸಮಾಜ ಪರಿವರ್ತನಾ ಸಮುದಾಯದ ಅಧ್ಯಕ್ಷ, ಖ್ಯಾತ ಭ್ರಷ್ಟಚಾರ ವಿರೋಧಿ ಹೋರಾಟಗಾರರಾದ ಶ್ರೀ ಎಸ್.ಆರ್.ಹಿರೇಮಠ್‌ರವರು ಅವರನ್ನು ಅಭಿನಂದಿಸಿದರು. ಅಭಿನಂದನೆಯನ್ನು ಸ್ವೀಕರಿಸಿ ಮಾತಾನಾಡಿದ ಬನ್ನಾಡಿ ಸೋಮನಾಥ ಹೆಗ್ಡೆಯವರು ಅಭಿನಂದಿಸಲು ಕಾರಣರಾದ ಗಂಗೊಳ್ಳಿ ಸಮುದಾಯ ಹಿತರಕ್ಷಣಾ ಸಮಿತಿಯ ಅಧ್ಯಕ್ಷರು, ಪದಾಧಿಕಾರಿಗಳು ಹಾಗೂ ಎಲ್ಲಾ ಸದಸ್ಯರಿಗೆ ಹಾಗೂ ಅಭಿನಂದಿಸಿದ ಎಸ್.ಆರ್. ಹಿರೇಮಠ್‌ರವರಿಗೂ ಕೃತಜ್ಞತೆಗಳನ್ನು ಸಲ್ಲಿಸಿದರು. ಈ ಸಂದರ್ಭದಲ್ಲಿ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲಾ ಸಹಕಾರಿ ಮೀನು ಮಾರಾಟ ಫೆಡರೇಷನ್ ಮಂಗಳೂರು ಇದರ ಅಧ್ಯಕ್ಷರಾದ ಯಶ್‌ಪಾಲ್ ಎ ಸುವರ್ಣ ಹಾಗೂ ಅಖಿಲ ಭಾರತ ಕೊಂಕಣಿ ಖಾರ್ವಿ ಮಹಾಜನ ಸಭಾ ಇದರ ಅಧ್ಯಕ್ಷರಾದ ಕೆ.ಬಿ.ಖಾರ್ವಿ ಮತ್ತು ಉಪ್ಪುಂದ ಮೀನುಗಾರ ಮುಖಂಡರಾದ, ಎಸ್.…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಹಿಂದಿನ ವರ್ಷಗಳಲ್ಲಿ ಆದಾಯ ಕರ ಕಾಯಿದೆಯನ್ವಯ ತಮ್ಮ ಸಂಪೂರ್ಣ ಆದಾಯ ಘೋಷಿಸದವರು ಈಗ ಸ್ವಯಂಪ್ರೇರಣೆಯಿಂದ ಅದನ್ನು ಇಲಾಖೆಯ ಗಮನಕ್ಕೆ ತರಲು ಕೇಂದ್ರ ಸರಕಾರ ’ಆದಾಯ ಘೋಷಣೆ ಯೋಜನೆ’ಯ ಮೂಲಕ ಅವಕಾಶ ಕಲ್ಪಿಸಿದೆ. ಈ ಅವಕಾಶ ಸಪ್ಟಂಬರ್ ೩೦ಕ್ಕೆ ಅಂತ್ಯವಾಗುವುದರಿಂದ ಅಂತಹ ನಾಗರಿಕರು ತಕ್ಷಣ ಇದನ್ನು ಬಳಸಿಕೊಳ್ಳಬೇಕು ಎಂದು ಉಡುಪಿ ವಲಯ ಹೆಚ್ಚುವರಿ ಆದಾಯ ತೆರಿಗೆ ಆಯುಕ್ತ ಸಿದ್ದಪ್ಪಾಜಿ ಆರ್. ಎನ್. ಹೇಳಿದರು. ಬೈಂದೂರು ರೋಟರಿ ಕ್ಲಬ್, ಆದಾಯ ತೆರಿಗೆ ಇಲಾಖೆ ಹಾಗೂ ಬೈಂದೂರಿನ ಲೆಕ್ಕ ಪರಿಶೋಧಕರು ಮತ್ತು ತೆರಿಗೆ ಸಲಹೆಗಾರರು ಸಂಯುಕ್ತವಾಗಿ ರೋಟರಿ ಸಮುದಾಯ ಭವನದಲ್ಲಿ ಬುಧವಾರ ಆಯೋಜಿಸಿದ್ದ ’ಆದಾಯ ಘೋಷಣೆ ಯೋಜನೆ, ೨೦೧೬’ ಕುರಿತು ಮಾಹಿತಿ ಕಾರ್ಯಾಗಾರವನ್ನು ಅವರು ಉದ್ಘಾಟಿಸಿ, ಅದರ ಕುರಿತು ಮಾಹಿತಿ ನೀಡಿದರು. ನಾಗರಿಕರು ನಡೆಸುವ ಆದಾಯ ತೆರಿಗೆ ಪಾವತಿಗೆ ಒಳಪಡುವ ಎಲ್ಲ ವ್ಯವಹಾರಗಳ ಮಾಹಿತಿ ಈಗ ಇಲಾಖೆಯ ಗಮನಕ್ಕೆ ಬರುತ್ತದೆ. ಅವುಗಳಲ್ಲಿ ಆದಾಯ ಘೋಷಣೆ ಮಾಡದಿರುವ ಮತ್ತು ಕರ…

Read More