ಬೈಂದೂರು: ಆದಾಯ ಘೋಷಣೆ ಯೋಜನೆ ಮಾಹಿತಿ ಕಾರ್ಯಾಗಾರ

Call us

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಹಿಂದಿನ ವರ್ಷಗಳಲ್ಲಿ ಆದಾಯ ಕರ ಕಾಯಿದೆಯನ್ವಯ ತಮ್ಮ ಸಂಪೂರ್ಣ ಆದಾಯ ಘೋಷಿಸದವರು ಈಗ ಸ್ವಯಂಪ್ರೇರಣೆಯಿಂದ ಅದನ್ನು ಇಲಾಖೆಯ ಗಮನಕ್ಕೆ ತರಲು ಕೇಂದ್ರ ಸರಕಾರ ’ಆದಾಯ ಘೋಷಣೆ ಯೋಜನೆ’ಯ ಮೂಲಕ ಅವಕಾಶ ಕಲ್ಪಿಸಿದೆ. ಈ ಅವಕಾಶ ಸಪ್ಟಂಬರ್ ೩೦ಕ್ಕೆ ಅಂತ್ಯವಾಗುವುದರಿಂದ ಅಂತಹ ನಾಗರಿಕರು ತಕ್ಷಣ ಇದನ್ನು ಬಳಸಿಕೊಳ್ಳಬೇಕು ಎಂದು ಉಡುಪಿ ವಲಯ ಹೆಚ್ಚುವರಿ ಆದಾಯ ತೆರಿಗೆ ಆಯುಕ್ತ ಸಿದ್ದಪ್ಪಾಜಿ ಆರ್. ಎನ್. ಹೇಳಿದರು.

Call us

Click Here

ಬೈಂದೂರು ರೋಟರಿ ಕ್ಲಬ್, ಆದಾಯ ತೆರಿಗೆ ಇಲಾಖೆ ಹಾಗೂ ಬೈಂದೂರಿನ ಲೆಕ್ಕ ಪರಿಶೋಧಕರು ಮತ್ತು ತೆರಿಗೆ ಸಲಹೆಗಾರರು ಸಂಯುಕ್ತವಾಗಿ ರೋಟರಿ ಸಮುದಾಯ ಭವನದಲ್ಲಿ ಬುಧವಾರ ಆಯೋಜಿಸಿದ್ದ ’ಆದಾಯ ಘೋಷಣೆ ಯೋಜನೆ, ೨೦೧೬’ ಕುರಿತು ಮಾಹಿತಿ ಕಾರ್ಯಾಗಾರವನ್ನು ಅವರು ಉದ್ಘಾಟಿಸಿ, ಅದರ ಕುರಿತು ಮಾಹಿತಿ ನೀಡಿದರು.

ನಾಗರಿಕರು ನಡೆಸುವ ಆದಾಯ ತೆರಿಗೆ ಪಾವತಿಗೆ ಒಳಪಡುವ ಎಲ್ಲ ವ್ಯವಹಾರಗಳ ಮಾಹಿತಿ ಈಗ ಇಲಾಖೆಯ ಗಮನಕ್ಕೆ ಬರುತ್ತದೆ. ಅವುಗಳಲ್ಲಿ ಆದಾಯ ಘೋಷಣೆ ಮಾಡದಿರುವ ಮತ್ತು ಕರ ಪಾವತಿಸದಿರುವ ವ್ಯಕ್ತಿಗಳ ವಿರುದ್ಧ ಇಲಾಖೆ ಕ್ರಮ ಕೈಗೊಳ್ಳುತ್ತದೆ. ಇದರಿಂದ ಅವರು ಸಂಕಷ್ಟಕ್ಕೆ ಸಿಲುಕುತ್ತಾರೆ. ಅಂತಹ ವ್ಯಕ್ತಿಗಳು ಕಾನೂನಿನ ಚೌಕಟ್ಟಿನಲ್ಲಿ ಅಪರಾಧ ಮುಕ್ತರಾಗಬಹುದಾಗಿದೆ. ಆದಾಯ ಘೋಷಣೆ ಮಾಡಿರದಿದ್ದರೆ, ಮಾಡಿದ ಘೋಷಣೆಯಲ್ಲಿ ಯಾವುದಾದರೂ ಅಂಶ ಬಿಟ್ಟುಹೋಗಿದ್ದರೆ, ಕಡಿಮೆ ಘೋಷಣೆ ಮಾಡಿದ್ದರೆ, ಸಂಪಾದಿಸಿದ ಸ್ಥಿರಚರ ಆಸ್ತಿಗೆ ಕಡಿಮೆ ಮೌಲ್ಯ ತೋರಿಸಿದ್ದರೆ ಪ್ರಸಕ್ತ ಯೋಜನೆಯಡಿ ಘೋಷಣೆ ಮಾಡಿ ಸುಲಭ ಕಂತಿನಲ್ಲಿ ತೆರಿಗೆ ಪಾವತಿಗೆ ಅವಕಾಶವಿದೆ. ಅಂತವರ ವಿರುದ್ಧ ಯಾವುದೇ ಕ್ರಮ ಜರಗಿಸಲಾಗುವುದಲ್ಲ. ಆದಾಯದ ಮೂಲವನ್ನು ಪ್ರಶ್ನಿಸಲಾಗುವುದಿಲ್ಲ. ಸಂಪತ್ತು ತೆರಿಗೆ ವಿಧಿಸಲಾಗುವುದಿಲ್ಲ ಎಂದು ಅವರು ವಿವರಿಸಿದರು. ಸರಕಾರ ಸಂಗ್ರಹಿಸುವ ತೆರಿಗೆ ದೇಶದ ಅಭಿವೃದ್ಧಿಗೆ ಬಳಕೆಯಾಗುವುದರಿಂದ ತೆರಿಗೆ ಪಾವತಿ ವಿಚಾರದಲ್ಲಿ ನಾಗರಿಕರು ಪ್ರಾಮಾಣಿಕರಾಗಿರಬೇಕು ಎಂದು ಅವರು ವಿನಂತಿಸಿದರು. ಎಚ್. ವಸಂತ ಹೆಗ್ಡೆ, ರಘುರಾಮ ಶೆಟ್ಟಿ, ಸುಜಾತಾ ರಾವ್ ಎತ್ತಿದ ಪ್ರಶ್ನೆಗಳಿಗೆ ಉತ್ತರಿಸಿದರು.

ರೋಟರಿ ಅಧ್ಯಕ್ಷ ಜಿ. ಮಂಜುನಾಥ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಪಿ. ಶೇಷಪ್ಪಯ್ಯ ಪ್ರಾರ್ಥನೆ ಹಾಡಿದರು. ತೆರಿಗೆ ಸಲಹೆಗಾರ ಜತೀಂದ್ರ ಮರವಂತೆ ಸ್ವಾಗತಿಸಿದರು. ರೋಟರಿ ಮಾಜಿ ಗವರ್ನರ್ ಬಿ. ಜಗನ್ನಾಥ ಶೆಟ್ಟಿ ಶುಭಾಶಂಸನೆಗೈದರು. ಮಂಜುನಾಥ ಮಹಾಲೆ ವಂದಿಸಿದರು. ಸುಧಾಕರ ಪಿ. ಬೈಂದೂರು ನಿರೂಪಿಸಿದರು. ಇನ್ನರ್‌ವೀಲ್ ಅಧ್ಯಕ್ಷೆ ಆಶಾ ಕಿಶೋರ್, ಉಡುಪಿಯ ಆದಾಯ ತೆರಿಗೆ ಅಧಿಕಾರಿಗಳಾದ ಕೃಷ್ಣಮೂರ್ತಿ ಮತ್ತು ಪ್ರೇಮಾ ಉಪಸ್ಥಿತರಿದ್ದರು.

Leave a Reply