ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಕಾವೇರಿ ನದಿ ನೀರು ಹಂಚಿಕೆಯ ಸಂಬಂಧ ತಮಿಳುನಾಡಿನಲ್ಲಿ ನಡೆದ ಗಲಭೆಯ ಸಂದರ್ಭದಲ್ಲಿ ಕುಂದಾಪುರದಿಂದ ದಕ್ಷಿಣ ಭಾರತದ ಪ್ರವಾಕ್ಕೆಂದು ೧೨ ಮಂದಿ ತೆರಳಿದ್ದ ಟೆಂಪೋ ಟ್ರಾವೆಲ್ಲರ್‌ನ್ನು ತಮಿಳುನಾಡಿನ ರಾಮೇಶ್ವರಂನಲ್ಲಿ ದುಷ್ಕರ್ಮಿಗಳು ಜಖಂಗೊಳಿಸಿದ್ದರಿಂದ ಅತಂತ್ರರಾಗಿದ್ದ ಕುಂದಾಪುರದ ಪ್ರವಾಸಿಗರು ತಮಿಳುನಾಡಿನ ಪೊಲೀಸರ ನೆರವಿನೊಂದಿಗೆ ಸುರಕ್ಷಿತವಾಗಿ ರೈಲಿನಲ್ಲಿ ಉಡುಪಿಗೆ ಬಂದಿಳಿದಿದ್ದಾರೆ. ವಾಹನದ ತೆರಳಿದ್ದ ಮಂಜುನಾಥ ಕುಲಾಲರ ತಂದೆ ಶೀನ ಕುಲಾಲ್, ತಾಯಿ ಗಿರಿಜಮ್ಮ, ಅಮಾಸೆಬೈಲಿನ ವಿಠ್ಠಲ ಶೆಟ್ಟಿ ಹಾಗೂ ಅವರ ಪತ್ನಿ ಮಗಳು, ಗಂಗೊಳ್ಳಿಯ ಕಾಮತ್ ಕುಟುಂಬದ ಮೂವರು ಸದಸ್ಯರು ಸೇರಿದಂತೆ ಇತರರು ತಮಿಳುನಾಡಿನಿಂದ ಸುರಕ್ಷಿತವಾಗಿ ಉಡುಪಿಗೆ ಹಿಂತಿರುಗಿದ್ದು ಅಲ್ಲಿಂದ ಕುಂದಾಪುರಕ್ಕೆ ಪ್ರಯಾಣ ಬೆಳೆಸಿದ್ದಾರೆ. ಕುಂದಾಪ್ರ ಡಾಟ್ ಕಾಂ ಸುದ್ದಿ. ತಮಿಳುನಾಡಿನ ರಾಮೇಶ್ವರಂನಲ್ಲಿ ಲಾಡ್ಜ್ ಸಮೀಪ ನಿಲ್ಲಿಸಲಾಗಿದ್ದ ವಾಹನದ ಗಾಜು ಪುಡಿಗೈದಿರುವುದಲ್ಲದೇ ವಾಹನ ಚಾಲಕ ಮಂಜುನಾಥ ಕುಲಾಲ್ ಎಂಬುವವರಿಗೆ ತಮಿಳುನಾಡಿನ ನಾಮ್ ತಮಿಳಾರ್ ಇಯಕ್ಕಂ ಎಂಬ ಸಂಘಟನೆಯ ಕಾರ್ಯಕರ್ತರು ಹಿಗ್ಗಾಮುಗ್ಗಾ ತಳಿಸಿದ್ದರು. ಕುಂದಾಪ್ರ ಡಾಟ್ ಕಾಂ ಸುದ್ದಿ. ಉಳಿದವರು ಗಲಭೆಯ ಸಂದರ್ಭ ತಮಿಳುನಾಡಿನ…
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ವರದಿ. ನಿಸರ್ಗದತ್ತ ಪ್ರಾಕೃತಿಕ ಸೌಂದರ್ಯದಿಂದ ಕಂಗೊಳಿಸುವ ಬೈಂದೂರು ವಿವಿಧ ಸ್ತರಗಳಲ್ಲಿ ಅಭಿವೃದ್ಧಿಯ ಪಥದತ್ತ ಸಾಗುತ್ತಿದೆ. ಗ್ರಾಮೀಣ ಪ್ರದೇಶಗಳನ್ನು ಒಳಗೊಂಡ ಈ ಪುಟ್ಟ ನಗರ, ಮೂಲಭೂತ ಸೌಕರ್ಯಗಳನ್ನು ಒಂದೊಂದಾಗಿ ಒಳಗೊಳ್ಳುತ್ತಲೇ ತಾಲೂಕು ಕೇಂದ್ರದ ಕನಸಿಗೆ ಪುಷ್ಠಿ ನೀಡುತ್ತಿದೆ. ಜನರ ಜೀವನ ಮಟ್ಟಕ್ಕೆ ಸುಧಾರಿಸುತ್ತಿದ್ದಂತೆ ನಗರ ಪ್ರದೇಶದಲ್ಲಿ ದೊರೆಯಬಹುದಾದ ಸೇವೆಗಳನ್ನು ಗ್ರಾಮೀಣ ಭಾಗದಲ್ಲಿಯೂ ವಿಸ್ತರಿಸಿಕೊಳ್ಳುತ್ತಾ ಸುಂದರ ಬದುಕನ್ನು ಮತ್ತಷ್ಟು ಸರಳಗೊಳಿಸುತ್ತಿವೆ. ಶ್ರೀ ಮೂಕಾಂಬಿಕಾ ಡೆವಲಪರ್ಸ್ ಬೈಂದೂರು ಮತ್ತು ಮೆ. ವೃಂದಾ ಮಾರ್ಕೆಂಟಿಂಗ್ ಎಂಟರ್‌ಪ್ರೈಸಸ್ ಅವರಿಂದ ಬೈಂದೂರಿನ ಕೇಂದ್ರಭಾಗದಲ್ಲಿ ನೂತನವಾಗಿ ವಿಶಾಲವಾದ ಸಿಟಿ ಪಾಯಿಂಟ್ ಎದ್ದು ನಿಲ್ಲುವುದರ ಜೊತೆಯಲ್ಲಿಯೇ ವಿಶೇಷ ಪರಿಕಲ್ಪನೆಯೊಂದಿಗೆ ಆರಂಭಿಸಿರುವ ‘ನಮ್ಮ ಬಜಾರ್’ ಎಂಬ ಅತ್ಯಾಧುನಿಕ ಹವಾನಿಯಂತ್ರಿತ ಹೈಪರ್ ಮಾರ್ಕೆಟ್ ಆಕರ್ಷಣೆಯ ಕೇಂದ್ರಬಿಂದುವಾಗಿದೆ. ಶಾಪಿಂಗ್ ಮಾಡಲು ನಗರ ಪ್ರದೇಶಗಳಿಗೆ ತೆರಳಬೇಕೆಂಬ ಕೊರಗು ದೂರವಾಗಿ ಬೈಂದೂರಿನ ಒಂದೇ ಸೂರಿನಲ್ಲಿಯೇ ಸಾವಿರಾರು ಉತ್ಪನ್ನಗಳು ಗ್ರಾಹಕರಿಗೆ ದೊರೆಯಲಿದೆ. ಕುಂದಾಪ್ರ ಡಾಟ್ ಕಾಂ. ವಿಡಿಯೋ ನೋಡಿ – https://youtu.be/p7OMPEripLM ತಾಲೂಕಿನಲ್ಲಿಯೇ ಮೊದಲು: ದೊಡ್ಡ ದೊಡ್ಡ ನಗರಗಳಲ್ಲಷ್ಟೇ ಕಾಣಬಹುದಾದ…
ಕುಂದಾಪ್ರ ಡಾಟ್ ಕಾಂ ಸುದ್ದಿ ಅಮಾಸೆಬೈಲು: ಅಮಾಸೆಬೈಲು ಗ್ರಾ.ಪಂ. ವ್ಯಾಪ್ತಿಯ ರಟ್ಟಾಡಿಯ ವಾಹನ ಚಾಲಕ ಮಂಜುನಾಥ ಕುಲಾಲ ಅವರಿಗೆ ತಮಿಳುನಾಡಿನ ರಾಮೇಶ್ವರದಲ್ಲಿ ನಡೆದ ಹಲ್ಲೆಯನ್ನು ಖಂಡಿಸಿ ಮಂಜುನಾಥ ಕುಲಾಲ್ ಅವರ ಹುಟ್ಟೂರು ಅಮಾಸೆಬೈಲಿನಲ್ಲಿ ಪ್ರತಿಭಟನೆ ನಡೆಯಿತು. ತಮಿಳುನಾಡಿನಲ್ಲಿರುವ ಇಲ್ಲಿಂದ ಹೋದ ಜನರು ದೈಹಿಕ, ಮಾನಸಿಕವಾಗಿ ನೊಂದಿದ್ದಾರೆ. ತಮಿಳುನಾಡಿನ ಪೊಲೀಸರ ವಶದಲ್ಲಿರುವ ನಮ್ಮವರಿಗೆ ಸೂಕ್ತ ರಕ್ಷಣೆ ಬೇಕಾಗಿದೆ. ಜಖಂಗೊಂಡ ವಾಹನಕ್ಕೆ ಸೂಕ್ತ ಪರಿಹಾರ ನೀಡುವಂತೆ ಒತ್ತಡ ಹೇರಬೇಕು ಎಂದು ಆಗ್ರಹಿಸಿದರಲ್ಲದೇ ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ವಿರುದ್ಧ ಧಿಕ್ಕಾರ ಕೂಗಿದರು. ಘಟನೆ ನಡೆದು ಕೆಲವು ಸಮಯ ಕಳೆದರೂ ರಾಜ್ಯ ಸರಕಾರವು ಸೂಕ್ತವಾಗಿ ಸ್ಪಧಿಂದಿಸುತ್ತಿಲ್ಲ, ಸರಕಾರ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ತಮಿಳುನಾಡಿನಲ್ಲಿ ಹಲ್ಲೆಗೊಳಗಾದ ಮಂಜುನಾಥ ಕುಲಾಲ ಅವರ ಸಹೋದರ ದಿನೇಶ ಕುಲಾಲ, ಅಮಾಸೆಬೈಲು ಸಿ.ಎ. ಬ್ಯಾಂಕಿನ ಅಧ್ಯಕ್ಷ ಆರ್ ನವೀನ್‌ಚಂದ್ರ ಶೆಟ್ಟಿ, ಅಮಾಸೆಬೈಲು, ಗೋಳಿಯಂಗಡಿ, ಸಿದ್ದಾಪುರ, ಹಾಲಾಡಿ, ಬಾಡಿಗೆ ರಿಕ್ಷಾ, ಟ್ಯಾಕ್ಸಿ, ಗೂಡ್ಸ್ ವಾಹನ ಮಾಲಕರು ಪ್ರತಿಭಟನೆ ನಡೆಸಿದ್ದರು. ಘಟನೆಯನ್ನು ಖಂಡಿಸಿ ಪೇಟೆಯಲ್ಲಿ ಜಾಥಾ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಕನ್ನಡ ಮಾಧ್ಯಮ ಶಾಲೆಗಳು ಹಲವಾರು ಸಮಸ್ಯೆ ಸವಾಲುಗಳನ್ನು ಎದುರಿಸುತ್ತಿದ್ದು, ಇಂದಿನ ಆಧುನಿಕ ಜಗತ್ತಿನಲ್ಲಿ ಶಿಕ್ಷಣ ಕ್ಷೇತ್ರ ಧಾವಿಸುತ್ತಿರುವ ವೇಗಕ್ಕೆ ಅನುಗುಣವಾಗಿ ಹಲವು ಮಾರ್ಪಾಡುಗಳ ಅಗತ್ಯವಿದೆ. ಹೀಗಿರುವಾಗ ಹಲವು ಇಲ್ಲಗಳ ನಡುವೆ ಸಾರ್ವಜನಿಕರ ಸಹಕಾರದೊಂದಿಗೆ ಗುಣಮಟ್ಟದ ಶಿಕ್ಷಣವನ್ನು ನೀಡಲು ಪ್ರಯತ್ನಿಸುತ್ತಿರುವ ಶಿಕ್ಷಕರ ಸೇವೆ ಅನನ್ಯವಾದುದು ಎಂದು ಉಡುಪಿ ಜಿಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಶಶಿಧರ ಶೆಟ್ಟಿ ಹೇಳಿದರು. ರೋಟರಿ ಕ್ಲಬ್ ಕುಂದಾಪುರದ ಆಶ್ರಯದಲ್ಲಿ ರೋಟರಿ ನರ್ಸರಿ ಹಾಲ್‌ನಲ್ಲಿ ನಡೆದ ಶಿಕ್ಷಕರ ದಿನಾಚರಣೆ ಹಾಗೂ ವಿಶ್ವ ಸಾಕ್ಷರತಾ ದಿನಾಚರಣೆ ಅಂಗವಾಗಿ ಸಾಧಕ ಶಿಕ್ಷಕರಿಗೆ ನೇಶನ್ ಬಿಲ್ಡರ್ ಅವಾರ್ಡನ್ನು ಹಸ್ತಾಂತರಿಸಿ ಮಾತನಾಡಿದರು. ರೋಟರಿ ಕ್ಲಬ್ ಕುಂದಾಪುರದ ಅಧ್ಯಕ್ಷ ಉದಯಕುಮಾರ್ ಶೆಟ್ಟಿ ಅಧ್ಯಕ್ಷತೆವಹಿಸಿ ಮಾತನಾಡಿ ಇಂಜಿನಿಯರ‍್ಸ್ ಸೇತುವೆಗಳನ್ನು ನಿರ್ಮಿಸುತ್ತಾರೆ, ವೈದ್ಯರು ರೋಗಿಯ ಪ್ರಾಣ ಕಾಪಾಡುತ್ತಾರೆ, ಪೋಲಿಸರು ಕಾನೂನು ವ್ಯವಸ್ಥೆಯನ್ನು ರಕ್ಷಿಸುತ್ತಾರೆ ಆದರೆ ಇವರೆಲ್ಲರನ್ನು ರೂಪಿಸುವ ಶಿಕ್ಷಕ ನಿಜವಾದ ರಾಷ್ಟ್ರ ನಿರ್ಮಾತೃರಾಗಿದ್ದಾರೆ ಆದುದರಿಂದ ಅಂತಹ ಸಾಧಕರನ್ನು ಗುರುತಿಸಿ ನೇಶನ್…
ಕುಂದಾಪ್ರ ಡಾಟ್ ಕಾಂ ಸುದ್ದಿ. ಗಂಗೊಳ್ಳಿ : ಗಂಗೊಳ್ಳಿ ಹಾಗೂ ಆಸುಪಾಸಿನ ಗ್ರಾಹಕರಿಗೆ ಉತ್ತಮ ಸೇವೆ ನೀಡುವ ಮೂಲಕ ಜನರ ಪ್ರೀತಿ ವಿಶ್ವಾಸಕ್ಕೆ ಪಾತ್ರವಾಗಿರುವ ಗಂಗೊಳ್ಳಿ ಟೌನ್ ಸೌಹಾರ್ದ ಸಹಕಾರಿಯು ಸಹಕಾರಿಯ ಬೆಳವಣಿಗೆಯ ಜೊತೆಗೆ ಸಹಕಾರಿಯ ಸದಸ್ಯರ ಸರ್ವತೋಮುಖ ಅಭಿವೃದ್ಧಿಗೆ ಸಹಕಾರ ನೀಡುತ್ತಿದೆ. ಜನರ ಸಮಸ್ಯೆಗಳಿಗೆ ಸ್ಪಂದಿಸುವ ಹಾಗೂ ಸದಸ್ಯರಿಗೆ ವಿನೂತನ ಸೌಲಭ್ಯ ಯೋಜನೆಗಳನ್ನು ನೀಡುವ ಸಹಕಾರಿಯ ಪ್ರಯತ್ನ ಶ್ಲಾಘನೀಯ ಎಂದು ಗಂಗೊಳ್ಳಿ ಶ್ರೀ ಅಂಬಿಕಾ ದೇವಸ್ಥಾನದ ಅರ್ಚಕ ವೇದಮೂರ್ತಿ ಜಿ.ವಸಂತ ಭಟ್ ಹೇಳಿದರು. ಅವರು ಗಂಗೊಳ್ಳಿಯ ಗಂಗೊಳ್ಳಿ ಟೌನ್ ಸೌಹಾರ್ದ ಸಹಕಾರಿಯ ಕಛೇರಿಯಲ್ಲಿ ಸೋಮವಾರ ನಡೆದ ಸಮಾರಂಭದಲ್ಲಿ ಸಹಕಾರಿಯ ವಿನೂತನ ‘ಎಸ್.ಎಂ.ಎಸ್. ಬ್ಯಾಂಕಿಂಗ್ ಸೇವೆ’ಗೆ ಚಾಲನೆ ನೀಡಿ ಆಶೀರ್ವಚನ ನೀಡಿ ಮಾತನಾಡಿದರು. ಮುಖ್ಯ ಅತಿಥಿಯಾಗಿದ್ದ ಮಾಜಿ ಮಂಡಲ ಪ್ರಧಾನ ಬಿ.ಸದಾನಂದ ಶೆಣೈ ಮಾತನಾಡಿ, ಶತಮಾನದ ಹೊಸ್ತಿಲಲ್ಲಿ ಇರುವ ಸಹಕಾರಿಯು ಸೇವೆಗೆ ಪ್ರಸಿದ್ಧಿಗೊಂಡಿದೆ. ತನ್ನ ಸೇವೆಗಳ ಮೂಲಕ ಜನಮನ ಗೆದ್ದಿರುವ ಗಂಗೊಳ್ಳಿ ಟೌನ್ ಸೌಹಾರ್ದ ಸಹಕಾರಿಯು ತನ್ನ ಸದಸ್ಯರಿಗೆ ಇನ್ನಷ್ಟು ಸೌಲಭ್ಯ…
. ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಕಾವೇರಿ ನದಿ ನೀರು ಹಂಚಿಕೆಯ ವಿಷಯ ಸಂಬಂಧ ತಮಿಳುನಾಡಿನಲ್ಲಿ ಕನ್ನಡಿಗರ ವಿರುದ್ಧ ದಾಳಿ ನಡೆದ ದಾಳಿ ಬೆಂಗಳೂರನ್ನು ಹತ್ತಿ ಊರಿಯುವಂತೆ ಮಾಡಿತ್ತು. ಕುಂದಾಪುರ ತಂಡದ ಚಾಲಕ ಮಂಜುನಾಥ ಕುಲಾಲ ಅವರ ಮೇಲೆ ತಮಿಳರು ಅಮಾನವೀಯ ಹಲ್ಲೆ ಮಾಡಿರುವುದನ್ನು ವೀಡಿಯೊ ಚಿತ್ರೀಕರಣ ನಡೆಸಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಟ್ಟ ಬಳಿಕ ಎಲ್ಲೆಡೆ ಗಲಾಟೆ ಆರಂಭಗೊಂಡಿತು. ನಾಮ್ ತಮಿಳಾರ್ ಇಯಕ್ಕಂ ಎಂಬ ಸಂಘಟನೆಯ ಸದಸ್ಯರು ರಾಮೇಶ್ವರದಲ್ಲಿ ನಿಲ್ಲಿಸಿದ್ದ ಕರ್ನಾಟಕ ನೋಂದಣಿಯ ವಾಹನಗಳಿಗೆ ಮತ್ತು ಅದರಲ್ಲಿದ್ದ ಕನ್ನಡಿಗರಿಗೆ ಮನಸೋ ಇಚ್ಛೆ ದಾಳಿ ನಡೆಸಿದರು. ಅದನ್ನು ಸಂಘಟನೆಯವರೇ ವೀಡಿಯೊ ಮಾಡಿ ಜಾಲತಾಣಗಳಲ್ಲಿ ಹರಿಯಬಿಟ್ಟಿದ್ದರು. ಕುಂದಾಪ್ರ ಡಾಟ್ ಕಾಂ ಸುದ್ದಿ. ವಿಡಿಯೋ ವೈರಲ್ ಆಗುತ್ತಿದ್ದಂತೆ ಬೆಂಗಳೂರಿನಲ್ಲಿ ಗಲಭೆಗಳು ಆರಂಭಗೊಂಡಿದ್ದವು. ತಮಿಳುನಾಡಿನ ವಾಹನಗಳಿಗೆ ಬೆಂಕಿ, ಸೊತ್ತು ನಾಶಕ್ಕೆ ಕರ್ನಾಟಕದ ಕೆಲವು ಸಂಘಟನೆಗಳೂ ಮುಂದಾಗಿದ್ದವು. ಕೊನೆಗೆ ಒಬ್ಬ ಯುವಕ ದಾರುಣವಾಗಿ ಗುಂಡೇಟಿಗೆ ಬಲಿಯಾಗಬೇಕಾಯಿತು. ಪರಿಸ್ಥಿತಿ ನಿಯಂತ್ರಿಸಲು ಹಲವಡೆ ಕರ್ಪ್ಯೂ ಜಾರಿಗೊಳಿಸಲಾಗಿದೆ. ಕುಂದಾಪ್ರ ಡಾಟ್ ಕಾಂ. ಕುಂದಾಪುರಿಗರು ಸೇಫ್:…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಕಾವೇರಿ ನದಿ ನೀರು ಹಂಚಿಕೆಯ ವಿಷಯ ಸಂಬಂಧ ತಮಿಳುನಾಡಿನಲ್ಲಿ ಕನ್ನಡಿಗರ ವಿರುದ್ಧ ದಾಳಿ ನಡೆದಿದೆ. ಗಲಭೆಯಲ್ಲಿ ಕುಂದಾಪುರದಿಂದ ದಕ್ಷಿಣ ಭಾರತ ಪ್ರವಾಸಕ್ಕೆಂದು ತೆರಳಿದ್ದ ವಾಹನದ ಗಾಜು ಪುಡಿಗೈದಿರುವುದಲ್ಲದೇ ವಾಹನ ಚಾಲಕ ಮಂಜುನಾಥ ಕುಲಾಲ್ (38) ಎಂಬುವವರಿಗೆ ಹಿಗ್ಗಾಮುಗ್ಗಾ ತಳಿಸಿದ್ದಾರೆ. ಕುಂದಾಪುರ ತಾಲೂಕಿನ ರಟ್ಟಾಡಿಯ ಮಂಜುನಾಥ ಕುಲಾಲ್ ತಮ್ಮ ಟೆಂಪೂ ಟ್ರಾವೆಲರ್‌ನಲ್ಲಿ ಕುಟುಂಬಿಕರು ಹಾಗೂ ಸ್ನೇಹಿತರು ಸೇರು ಒಟ್ಟು ಹನ್ನೆರಡು ಮಂದಿ ದಕ್ಷಿಣ ಭಾರತದ ಪ್ರವಾಸಕ್ಕೆ ತೆರಳಿದ್ದರು. ತಮಿಳುನಾಡಿನಲ್ಲಿ ಕಾವೇರಿ ಗಲಾಟೆ ಹೆಚ್ಚುತ್ತಿದ್ದಂತೆ ರಾಮೇಶ್ವರಂನಲ್ಲಿ ನಾಲ್ಕೈದು ಮಂದಿ ದುಷ್ಕರ್ಮಿಗಳು ನಿಲ್ಲಿಸಿದ್ದ ವಾಹನದ ಮುಂಭಾಗ, ಕಿಟಕಿ ಹಾಗೂ ಹಿಂಬದಿಯ ಗಾಜನ್ನು ಸಂಪೂರ್ಣ ಪುಡಿಗೈದು ಜಖಂಗೊಳಿಸಿದ್ದಾರೆ. ಬಳಿಕ ದೂರದಲ್ಲಿ ನಿಂತಿದ್ದ ಮಂಜುನಾಥ ಕುಲಾಲ್ ಅವರ ಬಳಿ ತೆರಳಿ ’ಕಾವೇರಿ ತಮಿಳುನಾಡಿಗೆ ಸೇರಿದ್ದು’ ಎಂದು ಹೇಳುವಂತೆ ಒತ್ತಾಯಿಸಿ ಹಲ್ಲೆ ನಡೆಸಿದ್ದಾರೆ. ಕುಂದಾಪ್ರ ಡಾಟ್ ಕಾಂ ಸುದ್ದಿ. ವಾಹನದಲ್ಲಿದ್ದ ಮಂಜುನಾಥ ಕುಲಾಲರ ತಂದೆ ಶೀನ ಕುಲಾಲ್, ತಾಯಿ ಗಿರಿಜಮ್ಮ, ಅಮಾಸೆಬೈಲಿನ ವಿಠ್ಠಲ ಶೆಟ್ಟಿ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೆಂಗಳೂರು: ಕಲಾಧರ ಯಕ್ಷರಂಗ ಬಳಗ ಜಲವಳ್ಳಿ ಮತ್ತು ಅತಿಥಿ ದಿಗ್ಗಜರ ಸಮಾಗಮದಲ್ಲಿ, ರವಿಚಂದ್ರ ಶೆಟ್ಟಿ ಕನ್ಯಾನ ಮತ್ತು ಸುದೀಪ್ ಶೆಟ್ಟಿ ಹೆಬ್ಬಾಡಿ ಜಂಟಿ ಸಂಯೋಜನೆಯಲ್ಲಿ ಭಕ್ತಪ್ರಹ್ಲಾದ – ಭಕ್ತಸುಧನ್ವ – ಗಧಾಪರ್ವ ಎಂಬ ಮೂರು ಪ್ರಸಂಗಗಳ ‘ಯಕ್ಷಮಿಲನ’ ಸೆ.17ರ ಶನಿವಾರ ರಾತ್ರಿ ರವೀಂದ್ರ ಕಲಾಕ್ಷೇತ್ರದಲ್ಲಿ ಜರುಗಲಿದೆ. ಏನು ವಿಶೇಷತೆ? ಹಿಮ್ಮೇಳದಲ್ಲಿ ಸುರೇಶ ಶೆಟ್ಟಿ ಶಂಕರನಾರಾಯಣ, ರವೀಂದ್ರ ಶೆಟ್ಟಿ ಹೊಸಂಗಡಿ, ಗಣೇಶ ಹೆಬ್ರಿ, ಸುಧಾಕರ ಕೊಠಾರಿ, ರಾಕೇಶ್ ಮಲ್ಯ, ಗಣೇಶ್ ಗಾವಔಕರ್, ಎನ್.ಜಿ ಹೆಗ್ಡೆ , ಪ್ರಶಾಂತ್ ಭಂಡಾರಿ ಇರಲಿದ್ದಾರೆ. ಮುಮ್ಮೇಳದಲ್ಲಿ *ಯಾಜಿ- ಹಿರಣ್ಯಕಶಿಪು *ಯಲಗುಪ್ಪ – ಖಯಾದು *ಕಾರ್ತಿಕ್ ಚಿಟ್ಟಾಣಿ – ಪ್ರಹ್ಲಾದ *ಹಳ್ಳಾಡಿ – ಕಾಸರ್ಗೋಡು – ಗುರು ಶಿಷ್ಯರು *ಕೋಟ-ಸುಧನ್ವ *ಐರಬೈಲ್ – ಅರ್ಜುನ *ವಿನಯ್ ಭಟ್ – ಕೃಷ್ಣ *ಪಂಜು ಪೂಜಾರಿ – ಪ್ರಭಾವತಿ *ಜಲವಳ್ಳಿ – ಕೌರವ *ಸು. ಚಿಟ್ಟಾಣಿ – ಭೀಮ *ತೋಂಬಟ್ಟು – ಕೃಷ್ಣ *ಕಾಸರ್ಗೋಡು -…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ತ್ಯಾಗ ಬಲಿದಾನಗಳ ಹಬ್ಬವೆಂದೇ ಪ್ರಸಿದ್ಧಿ ಪಡೆದ ಬಕ್ರೀದ್ ಹಬ್ಬವನ್ನು ಕುಂದಾಪುರ ತಾಲೂಕಿನಾದ್ಯಂತ ಮುಸ್ಲಿಂ ಭಾಂದವರಿಂದ ಸಡಗರದಿಂದ ಆಚರಿಸಲಾಯಿತು. ಶಿರೂರು, ಬೈಂದೂರು, ನಾವುಂದ, ಗಂಗೊಳ್ಳಿ, ಕುಂದಾಪುರ, ಕಂಡ್ಲೂರು, ಗುಲ್ವಾಡಿ ಸೇರಿದಂತೆ ತಾಲೂಕಿನ ಎಲ್ಲಾ ಮಸೀದಿಗಳಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿ ಪರಸ್ಪರ ಶುಭಾಶಯ ವಿನಿಯಮ ಮಾಡಿಕೊಂಡರು.
ಕುಂದಾಪ್ರ ಡಾಟ್ ಕಾಂ ಸುದ್ದಿ. ಕೋಟ: ಇಲ್ಲಿನ ಕೋಡಿ ಕನ್ಯಾನದ ಮನೆಯ ಶೆಡ್‌ನಲ್ಲಿ ಮಾರಾಟ ಮಾಡುವ ಸಲುವಾಗಿ ದನ ಕಡಿದು ಮಾಂಸ ಮಾಡುತ್ತಿದ್ದವರನ್ನು ಮೂವರನ್ನು ಕೋಟ ಪೊಲೀಸ್‌ರು ಬಂಧಿಸಿದ್ದಾರೆ. ಶೆಡ್‌ನಲ್ಲಿ ಎರಡು ದನವನ್ನು ಕಡಿದು ಮಾಂಸ ಮಾಡುತ್ತಿದ್ದ ಮುನೀರ್, ಫಿರೋಝ್ ಮತ್ತು ಅಸ್ಲಾಂ ಎಂಬುವವರನ್ನು ಬಂಧಿಸಲಾಗಿದೆ. ಕುಂದಾಪ್ರ ಡಾಟ್ ಕಾಂ ಸುದ್ದಿ. ಕೋಡಿ ಕನ್ಯಾನದ ಶನೀಶ್ವರ ದೇವಸ್ಥಾನದ ಬಳಿಯ ಮನೆಯೊಂದರಲ್ಲಿ ದನವನ್ನು ಕಡಿಯುವ ಕುರಿತು ಬಂದ ಮಾಹಿತಿ ಮೇರೆಗೆ ಕೋಟ ಪೊಲೀಸ್ ಉಪನಿರೀಕ್ಷಕ ಕಬ್ಬಾಳ್‌ರಾಜ್ ಎಚ್.ಡಿ. ಮತ್ತು ಸಿಬ್ಬಂದಿಗಳು ಮುನಿರ್ ಅವರ ಮನೆಯ ಶೆಡ್‌ಗೆ ತೆರಳಿ ತಪಾಸಣೆ ನಡೆಸಿದಾಗ ಆರೋಪಿಗಳು ಸಿಕ್ಕಿಬಿದ್ದಿದ್ದಾರೆ. ಒಟ್ಟು ಎರಡು ದನವನ್ನು ಕಡಿಯಲಾಗಿದ್ದು, ಒಂದು ದನವನ್ನು ಸಂಪೂರ್ಣ ಮಾಂಸ ಮಾಡಿದ್ದು, ಇನ್ನೊಂದನ್ನು ಮಾಂಸ ಮಾಡುವ ಸಿದ್ಧತೆಯಲ್ಲಿದ್ದಾಗ ಪೊಲೀಸ್‌ರಿಗೆ ಸಿಕ್ಕಿಬಿದ್ದಿದ್ದಾರೆ. ಬಕ್ರೀದ್ ಹಬ್ಬದ ಹಿನ್ನಲೆಯಲ್ಲಿ ಮಾಂಸ ಮಾಡಿ ಉದ್ದೇಶದಿಂದ ದನಗಳನ್ನು ಕಡಿಯಲಾಗಿದೆ ಎನ್ನಲಾಗಿದೆ. ಈ ಬಗ್ಗೆ ಕೋಟ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
