ಸೆ.17 ಬೆಂಗಳೂರು ರವೀಂದ್ರ ಕಲಾಕ್ಷೇತ್ರದಲ್ಲಿ ‘ಯಕ್ಷಮಿಲನ’

Click Here

Call us

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೆಂಗಳೂರು: ಕಲಾಧರ ಯಕ್ಷರಂಗ ಬಳಗ ಜಲವಳ್ಳಿ ಮತ್ತು ಅತಿಥಿ ದಿಗ್ಗಜರ ಸಮಾಗಮದಲ್ಲಿ, ರವಿಚಂದ್ರ ಶೆಟ್ಟಿ ಕನ್ಯಾನ ಮತ್ತು ಸುದೀಪ್ ಶೆಟ್ಟಿ ಹೆಬ್ಬಾಡಿ ಜಂಟಿ ಸಂಯೋಜನೆಯಲ್ಲಿ ಭಕ್ತಪ್ರಹ್ಲಾದ – ಭಕ್ತಸುಧನ್ವ – ಗಧಾಪರ್ವ ಎಂಬ ಮೂರು ಪ್ರಸಂಗಗಳ ‘ಯಕ್ಷಮಿಲನ’ ಸೆ.17ರ ಶನಿವಾರ ರಾತ್ರಿ ರವೀಂದ್ರ ಕಲಾಕ್ಷೇತ್ರದಲ್ಲಿ ಜರುಗಲಿದೆ.

Call us

Click Here

ಏನು ವಿಶೇಷತೆ?
ಹಿಮ್ಮೇಳದಲ್ಲಿ ಸುರೇಶ ಶೆಟ್ಟಿ ಶಂಕರನಾರಾಯಣ, ರವೀಂದ್ರ ಶೆಟ್ಟಿ ಹೊಸಂಗಡಿ, ಗಣೇಶ ಹೆಬ್ರಿ, ಸುಧಾಕರ ಕೊಠಾರಿ, ರಾಕೇಶ್ ಮಲ್ಯ, ಗಣೇಶ್ ಗಾವಔಕರ್, ಎನ್.ಜಿ ಹೆಗ್ಡೆ , ಪ್ರಶಾಂತ್ ಭಂಡಾರಿ ಇರಲಿದ್ದಾರೆ.

ಮುಮ್ಮೇಳದಲ್ಲಿ *ಯಾಜಿ- ಹಿರಣ್ಯಕಶಿಪು *ಯಲಗುಪ್ಪ – ಖಯಾದು *ಕಾರ್ತಿಕ್ ಚಿಟ್ಟಾಣಿ – ಪ್ರಹ್ಲಾದ *ಹಳ್ಳಾಡಿ – ಕಾಸರ್ಗೋಡು – ಗುರು ಶಿಷ್ಯರು

*ಕೋಟ-ಸುಧನ್ವ *ಐರಬೈಲ್ – ಅರ್ಜುನ *ವಿನಯ್ ಭಟ್ – ಕೃಷ್ಣ *ಪಂಜು ಪೂಜಾರಿ – ಪ್ರಭಾವತಿ

*ಜಲವಳ್ಳಿ – ಕೌರವ *ಸು. ಚಿಟ್ಟಾಣಿ – ಭೀಮ *ತೋಂಬಟ್ಟು – ಕೃಷ್ಣ *ಕಾಸರ್ಗೋಡು – ಭೇವಿನಚರ

Click here

Click here

Click here

Call us

Call us

ಹರಿತತ್ವವನ್ನು ವಿರೋಧಿಸುತ್ತ ನಾನೆಂಬ ಅಹಂ ಸಾಮರ್ಥ್ಯದಿಂದ ಲೋಕವಾಳುದಕ್ಕೆ ಹೊರಟ ದೈತ್ಯ ಸಾರ್ವಭೌಮ ಕನಕ ಕಶ್ಯಪು ಕೃಷ್ಣಯಾಜಿ ಬಳ್ಕೂರು, ಕೈಹಿಡಿದ ಗಂಡ.. ಕೈತುತ್ತು ತಿನ್ನಿಸಿದ ಮಗು.. ಸಂಭಂಧಗಳ ಸಂಕಟದಲ್ಲಿ ಮರುಗುವ ಸಾಧ್ವಿಮಣಿ ಕಯಾದು ಯಲಗುಪ್ಪ, ಬಲದ ಸೋಪಾನದಲ್ಲಿ ಧರ್ಮಧ್ವಜದ ಸ್ಥಾಪನೆ ಅಶ್ವಮೇಧದ ರೂವಾರಿ ರಣವಿಕ್ರಮಿ ಪಾರ್ಥ ಐರಬೈಲ್ ಆನಂದ ಶೆಟ್ಟಿ, ನರನೊಂದಿಗಿನ ಸಮರೊದ್ಯಮದಲ್ಲಿ ನಾರಾಯಣನ ಸಾಕ್ಷಾತ್ಕಾರಕ್ಕೆ ವೀರಪಂಥದಿಂದ ಸೆಣಸುವ ಹರಿಭಕ್ತ ಸುಧನ್ವ ಕೋಟ ಸುರೇಶ ಬಂಗೆರಾ, ಛಲವ ಬಿಡೆ ನೆಲವ ಕೊಡೆ ಕಲಹದ ಕೊನೆಯದಿನದಲ್ಲೂ ಬಲುಹಿನ ಭಾವ ತೋರುವ ಛಲದಂಕ ಸುಯೋಧನ ಜಲವಳ್ಳಿ ವಿಧ್ಯಾಧರ್ ರಾವ್, ಕುರುಭೂಮಿಯನ್ನು ಕೌರವರಿಗೆ ರುದ್ರಭೂಮಿಯಾಗಿಸಿ ರಣಾಂಗಣದಲ್ಲಿ ಭೀಭತ್ಸತೆ ಮೆರೆಯುವ ಭಯಂಕರ ಭೀಮ ಸುಬ್ರಮಣ್ಯ ಚಿಟ್ಟಾಣಿ, ಧರ್ಮದ ವಿಜಯೊತ್ಸವಕ್ಕಾಗಿ ಸಮರ್ಥ ಶುಕ್ರನೀತಿಯನ್ನು ಪ್ರತಿಪಾದಿಸುತ್ತ ಅದರ ಸಮರ್ಥ ದಿಗ್ದರ್ಶನ ಮಾಡಿಸುವ ಚತುರ ಶ್ರೀ ಕೃಷ್ಣ ವಿಶ್ವನಾಥ್ ತೊಂಬಟ್ಟು, ಮಧು ಚಂದನ ವಂಶದ ವಂಶವಲ್ಲರಿಯಾಗಿ..ಹೆಣ್ತನದ ಸಾರ್ಥಕ್ಯಕ್ಕೆ ತಾಯ್ತನದ ಹಿರಿತನವನ್ನು ಬೇಡುವ ಸತಿ ಶೀರೊಮಣಿ ಪ್ರಭಾವತಿ ಪಂಜು ಪೂಜಾರಿ ಬಗ್ವಾಡಿ, ನಾರಾಯಣ ನಾಮೋಚ್ಚರಣಿಯಿಂದ ತಂದೆಯ ನಿರಂಕುಶತ್ವಕ್ಕೆ ಅಂಕುಶಪ್ರಾಯನಾದ ಬಾಲ ಪ್ರಹ್ಲಾದ ಕಾರ್ತಿಕ ಚಿಟ್ಟಾಣಿ ಮತ್ತು ಕಟ್ಟೆ ಈಶ್ವರ ಭಟ್ ನಾಗೇಶ ಕುಳಿಮನೆ – ನಾಗರಾಜ ಗುಣವಂತೆ- ನಾಗರಾಜ ದೇವಿಮಕ್ಕಿ -ಷಣ್ಮುಖ ಗೌಡ ಮಂಜುನಾಥ ಕೆರೆವಳ್ಳಿ ಇನ್ನಿತರರನ್ನು ರಂಗದಲ್ಲಿರಲಿದ್ದಾರೆ. ಕುಂದಾಪ್ರ ಡಾಟ್ ಕಾಂ ಸುದ್ದಿ.

ಮಾಹಿತಿಗಾಗಿ

  • ಹೆಬ್ಬಾಡಿ 9591311056
  • ಕನ್ಯಾನ 9964945542

ಮೇಳದ ವ್ಯವಸ್ಥಾಪಕರು ವಿಧ್ಯಾಧರ್ ಜಲವಳ್ಳಿ

  • ಕುತೂಹಲಗಳಿಗೆ ಕಲಾಕ್ಷೇತ್ರ ದಾರಿ
    ಪ್ರತಿಷ್ಠಿತ ದರ ಪ್ರತ್ಯೇಕ 300 200*

[quote font_size=”15″ bgcolor=”#ffffff” bcolor=”#dd0000″ arrow=”yes”]

ಅಪರೂಪದ ಕೋಟ ಸುಧನ್ವ – ಐರಬೈಲ್ ಅರ್ಜುನ ಜೋಡಿ
ಅದು ಜೋಡಾಟದ ಕಾಲ. ಮಾರಣಕಟ್ಟೆ ಸೌಕೂರು ಮೇಳಗಳ ನಡುವೆ ತೀವ್ರ ಪೈಪೋಟಿಯ ಕಾವೇರುವ ರಂಗಸ್ಥಳ. ಮಾವ ಮೊಳಹಳ್ಳಿ ಹೆರಿಯ ನಾಯ್ಕರ ಸುಧನ್ವನಿಗೆ ಸಮರ್ಥ ಎದುರಾಳಿಯಾಗಿ ಕೋಟ ಸುಧನ್ವ, ಮಾವನಿಂದಲೇ ಬೇಷ್ ಎನಿಸಿಕೊಂಡವರು. ಗುರು ವೀರಭದ್ರ ನಾಯ್ಕರ ಹೆಜ್ಜೆಗಾರಿಕೆ, ಶಿರಿಯಾರ ಮಂಜು ನಾಯ್ಕರ ಲಾಲಿತ್ಯಪೂರ್ಣ ಶೃತಿಬದ್ಧ ಮಾತುಗಾರಿಕೆ, ಮೊಳಹಳ್ಳಿ ಹೆರಿಯ ನಾಯ್ಕರ ರಂಗತಂತ್ರ, ಎರಕ ಎಂಬಂತೆ ಇವೆಲ್ಲವುಗಳನ್ನು ಕೋಟ ಸುರೇಶ ಬಂಗೇರರಲ್ಲಿ ಕಾಣಬಹುದಾಗಿದೆ.

ಸುಧನ್ವನ ಪಾತ್ರಕ್ಕೆ ಜೀವ ತುಂಬಿದ, ಜೀವಂತ ಸುಧನ್ವನನ್ನು ನೆನಪಿಸುವ ಕೋಟ ಸುರೇಶ ಬಂಗೇರರ ಸುಧನ್ವ ಹತ್ತು ಹಲವು ವರ್ಷಗಳ ನಂತರ ರವೀಂದ್ರ ಕಲಾಕ್ಷೇತ್ರದಲ್ಲಿ ಇದೆ ಸೆಪ್ಟೆಂಬರ್ 17 ಶನಿವಾರ. [/quote]

news-yaksha-milana-at-bangalore2

Leave a Reply