ಕುಂದಾಪುರ: ಸಮಾಜ ಸೇವಾ ಸಂಘಗಳನ್ನು ಕಟ್ಟುವುದರೊಂದಿಗೆ ಸಮಾಜದ ಎಲ್ಲರನ್ನೂ ಮುಖ್ಯವಾಹಿನಿಗೆ ತರುವುದರೊಂದಿಗೆ ಶೈಕ್ಷಣಿಕ, ಸಾಮಾಜಿಕ ಸ್ವಾವಲಂಬನೆ ಸಾಧಿಸಲು ನೆರವಾಗುವ ಉದ್ದೇಶ ಸಂಘಟನೆ ಹಿಂದಿರಬೇಕು ಎಂದು ಬೈಂದೂರು ವಿಧಾನಸಭಾ ಕ್ಷೇತ್ರದ ಶಾಸಕ ಗೋಪಾಲ ಪೂಜಾರಿ ಹೇಳಿದರು. ಕೋಡಿ ಬಿಲ್ಲವ ಸಮಾಜ ಸೇವಾ ಸಂಘವನ್ನು ಉದ್ಘಾಟಿಸಿ ಮಾತನಾಡಿ ಸಮುದಾಯದ ಮುಖಂಡರು ತೆಗೆದುಕೊಳ್ಳುವ ನಿರ್ಣಯಗಳು ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಉಪಯೋಗವಾಗುವಂತಿರಬೇಕು. ಹಿರಿಯರ ಸ್ಥಾನವನ್ನು ತುಂಬಬಲ್ಲ ನಾಯಕತ್ವನ್ನು ಯುವಜನರು ಮೈಗೂಡಿಸಿಕೊಂಡರೇ ಮಾತ್ರ ಸಮಾಜದ ಏಳ್ಗೆ ಸಾಧ್ಯ ಎಂದರು. ವಿಧಾನ ಪರಿಷತ್ ಸದಸ್ಯ ಶ್ರೀನಿವಾಸ ಪೂಜಾರಿ ಮಾತನಾಡಿ ಜಾತಿ ಸಮಾಜಗಳು ಅದರ ರಚನೆಯ ಹಿಂದಿರುವ ಉದ್ದೇಶ, ನಮ್ಮ ಯೋಚನೆ ಯೋಜನೆ ಕಲ್ಪನೆಗಳನ್ನು ಸಕಾರಗೊಳಿಸುವ ಸಹಕಾರಿ ವ್ಯವಸ್ಥೆಯಾಗಬೇಕೆಂಬುದು ನಮ್ಮ ಇಂಗಿತ. ಬಿಲ್ಲವ ಸಮಾಜದವರಿಗೆ ಶಕ್ತಿ, ಸಾಮಾಥ್ಯ, ಯೋಗ್ಯತೆ ಎಲ್ಲವೂ ಇದೆ. ಆದರೆ ಸಂಘಟನೆಗಳಿಗೆ ಬಲ ಬಂದಿಲ್ಲ. ಯುವಕರು ಸಕ್ರಿಯವಾಗಿ ತೊಡಗಿಸಿಕೊಂಡು ಸಮಾಜದ ಏಳಿಗೆಗೆ ದುಡಿಯಬೇಕಾಗಿದೆ ಎಂದರು. ಕುಂದಾಪುರ ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಮಾಜಿ ಗೋಪಾಲ್ ಅಧ್ಯಕ್ಷತೆ ವಹಿಸಿದ್ದರು. ಪುರಸಭಾ…
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ ಕುಂದಾಪುರ: ಶ್ರೀ ಕ್ಷೇತ್ರ ನೀಲಾವರ ಮಹಿಷಮರ್ಧಿನಿ ದಶಾವತಾರ ಯಕ್ಷಗಾನ ಮಂಡಳಿಯು ನೂತನ ಆಡಳಿತದೊಂದಿಗೆ ತಿರುಗಾಟ ಆರಂಭಿಸಿದ್ದು ಜ.04ರಂದು ಪ್ರಥಮ ದೇವರ ಸೇವೆಯಾಟ ನೀಲಾವರ ಕ್ಷೇತ್ರದಲ್ಲಿ ನಡೆಯಲಿದೆ. ಮೇಳದ ವ್ಯವಸ್ಥಾಪಕರಾಗಿ ಆಜ್ರಿ ಚೋನಮನೆ ಶ್ರೀ ಶನೀಶ್ವರ ದೇವಳದ ಧರ್ಮದರ್ಶಿ ಅಶೋಕ ಶೆಟ್ಟಿಯವರ ಮುಂದಿನ ಐದು ವರ್ಷಗಳ ಕಾಲ ಮೇಳವನ್ನು ಮುನ್ನಡೆಸಲಿದ್ದಾರೆ. 35 ವರ್ಷ ಯಕ್ಷಗಾನ ಕ್ಷೇತ್ರದಲ್ಲಿ ಭಾಗವತರಾಗಿ ಸೇವೆ ಸಲ್ಲಿಸಿದ್ದ ಸುಬ್ರಹ್ಮಣ್ಯ ಧಾರೇಶ್ವರ ಅವರು ಧಾರೇಶ್ವರ ಯಕ್ಷ ಬಳಗ ಚಾರಿಟೇಬಲ್ ಟ್ರಸ್ಟ್ ಮೂಲಕ ಕಲಾವಿದರ ಸಂಯೋಜನೆಯೊಂದಿಗೆ ಮತ್ತೆ ರಂಗಪ್ರವೇಶ ಮಾಡಲಿದ್ದಾರೆ.(ಕುಂದಾಪ್ರ ಡಾಟ್ ಕಾಂ ಸುದ್ದಿ) ಪೌರಾಣಿಕ ಪ್ರಸಂಗಗಳನ್ನು ಮಾತ್ರ ಆಯ್ದುಕೊಂಡು ಖಾಯಂ ಆಟ, ಕಟ್ಟುಕಟ್ಟಳೆ ಆಟ ಹಾಗೂ ಹರಕೆ ಆಟ ಪ್ರದರ್ಶಿಸಲಿದ್ದು ಪ್ರಸಿದ್ಧ ಕಲಾವಿದರಾದ ಗೋಡೆ ನಾರಾಯಣ ಹೆಗಡೆ, ಬಳ್ಕೂರು ಕೃಷ್ಣಯಾಜಿ, ಕೊಂಡದಕುಳಿ ರಾಮಚಂದ್ರ ಹೆಗಡೆ, ಯಲಗುಪ್ಪ ಸುಬ್ರಹ್ಮಣ್ಯ ಹೆಗಡೆ, ರಾಜು ಶೆಟ್ಟಿ, ಹಳ್ಳಡಿ ಜಯರಾಮ ಶೆಟ್ಟಿ, ಮುರೂರು ರಮೇಶ ಭಂಡಾರಿ, ಶ್ರೀಧರ ಕಾಸರಗೋಡು, ಕಾರ್ತಿಕ್ ಚಿಟ್ಟಾಣಿ,…
ಕುಂದಾಪುರ: ವಿದ್ಯಾರ್ಥಿಗಳು ಸೇವಾ ಮನೋಭಾವನೆಯಿಂದ ಸತ್ಕಾರ್ಯದಲ್ಲಿ ತೊಡಗಿಸಿಕೊಂಡಾಗ ಸಾಮಾಜಿಕ ಜವಾಜ್ಬಾರಿ ಮತ್ತು ನಾಯಕತ್ವದ ಗುಣಗಳು ಬೆಳೆಯಲು ಸಾದ್ಯ ಎಂದು ಮಂಜುನಾಥ ಚಡಗ ಹೇಳಿದರು. ಅವರು ಸಾಸ್ತಾನ ಪಾಂಡೇಶ್ವರ ಖಾಸಗಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕೋಟೇಶ್ವರ ಕಾಳಾವರ ವರದರಾಜ.ಎಂ. ಶೆಟ್ಟಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ವಾರ್ಷಿಕ ರಾಷ್ಟ್ರೀಯ ಸೇವಾ ಯೋಜನೆ ಶಿಬಿರ ಉದ್ಘಾಟಿಸಿ ಮಾತನಾಡಿದರು. ಕಾಲೇಜಿನ ಪ್ರಾಂಶುಪಾಲ ನಿತ್ಯಾನಂದ ಗಾಂವಕರ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಸೇವೆಯಲ್ಲಿ ಸಕ್ರೀಯರಾದಾಗ ಒತ್ತಡಯುಕ್ತ ಜೀವನದಿಂದ ಮುಕ್ತರಾಗಿ ಪ್ರೀತಿ ಸಹಬಾಳ್ವೆಯಿಂದ ಉತ್ತಮ ಜೀವನ ನಿರ್ವಹಿಸಲು ಸಾದ್ಯ ಎಂದರು. ಮಂಗಳೂರು ವಿ.ವಿ.ರಾಷ್ಟ್ರೀಯ ಸೇವಾ ಯೋಜನೆಯ ಮಾಜಿ ಸಂಯೋಜನಾಧಿಕಾರಿ ಗೋಪಾಲ ಅವರು ದಿಕ್ಸೂಚಿ ಭಾಷಣ ಮಾಡಿ, ಪಠ್ಯೇತರ ಚಟುವಟಿಕೆಗಳಿಂದ ದೈಹಿಕ ಮತ್ತು ಮಾನಸಿಕ ಚಟುವಟಿಕೆಗಳು ವೃದ್ಧಿಗೊಂಡು ಮನೋಬಲ ಸಾಧಿಸುತ್ತದೆ ಎಂದರು. ಸಭೆಯಲ್ಲಿ ಸಾಸ್ತಾನ ಸಿ.ಎ ಬ್ಯಾಂಕಿನ ಅಧ್ಯಕ್ಷ ಪ್ರತಾಪ್ ಶೆಟ್ಟಿ, ಪಾಂಡೇಶ್ವರ ಗ್ರಾಮ ಪಂಚಾಯಿತಿ ಸದಸ್ಯ ಚಂದ್ರಮೋಹನ ಪೂಜಾರಿ, ಯೋಜನಾಧಿಕಾರಿ ಗೀತಾ.ಎಂ ಉಪಸ್ಥಿತರಿದ್ದರು. ಶಿಬಿರಾಧಿಕಾರಿ ರವಿಗೌಡ ಸ್ವಾಗತಿಸಿದರು. ಸಂದೇಶ್…
ಬೈಂದೂರು: ಪ್ರತಿ ಕ್ರೀಯಾ ಯೋಜನೆಯಲ್ಲಿಯೂ ಮೂಲಭೂತ ಸೌಕರ್ಯಗಳನ್ನು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ರಸ್ತೆ, ನೀರು, ಅಣೆಕಟ್ಟು, ಸೇತುವೆಗಳ ನಿರ್ಮಾಣ ಹಾಗೂ ದುರಸ್ತಿಯ ಬಗ್ಗೆ ಗಮನ ಹರಿಸುತ್ತಿರುವ ಬೈಂದೂರು ಕ್ಷೇತ್ರದ ಶಾಸಕ ಗೋಪಾಲ ಪೂಜಾರಿ ಕ್ಷೇತ್ರದ ಸಮಗ್ರ ಅಭಿವೃದ್ಧಿಯ ದೂರಗಾಮಿ ಚಿಂತನೆ ಹೊಂದಿದ್ದಾರೆ ಎಂದು ತಾಲೂಕು ಪಂಚಾಯತ್ ಸದಸ್ಯ ಎಸ್. ರಾಜು ಪೂಜಾರಿ ಹೇಳಿದರು. ಲೋಕೋಪಯೋಗಿ ಇಲಾಖೆಯಿಂದ ಮಂಜೂರಾದ ಸಿಗೆಹಕ್ಲು ರಸ್ತೆಯ ಕಾಂಕ್ರೀಟೀಕರಣಕ್ಕೆ ಗುದ್ದಲಿ ಪೂಜೆ ನೆರವೇರಿಸಿ ಅವರು ಮಾತನಾಡಿದರು. ಬೈಂದೂರು ವಿಧಾನಸಭಾ ಕ್ಷೇತ್ರದ ಶಾಸಕ ಕೆ. ಗೋಪಾಲ ಪೂಜಾರಿ ಕಾಮಗಾರಿಗೆ ಚಾಲನೆ ನೀಡಿದರು. ಗ್ರಾಮ ಪಂಚಾಯತ್ ಉಪಾಧ್ಯಕ್ಷ ಅಣ್ಣಪ್ಪ ಶೆಟ್ಟಿ, ಸದಸ್ಯ ರಾಜು ಪೂಜಾರಿ, ಮಾಜಿ ತಾಲೂಕು ಪಂಚಾಯತ್ ಸದಸ್ಯ ವಿಜಯ ಶೆಟ್ಟಿ, ಮಾಜಿ ಗ್ರಾಮ ಪಂಚಾಯತ್ ಅಧ್ಯಕ್ಷೆ ದಿನಿತಾ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.
ಗಂಗೊಳ್ಳಿ: ಕ್ರೀಡೆ ಮನುಷ್ಯನ ಜೀವನದ ಅವಿಭಾಜ್ಯ ಅಂಗವಾಗಿದೆ. ಕ್ರೀಡೆಯನ್ನು ಜೀವನದಲ್ಲಿ ಅಳವಡಿಸಿಕೊಳ್ಳುವುದರಿಂದ ನಮ್ಮ ದೈಹಿಕ ಹಾಗೂ ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ಯುವಕರನ್ನು ಸಂಘಟಿಸಲು ಕ್ರೀಡಾಕೂಟಗಳು ಸಹಕಾರಿಯಾಗುತ್ತದೆ. ಗಂಗೊಳ್ಳಿಯಂತಹ ಗ್ರಾಮೀಣ ಪ್ರದೇಶದಲ್ಲಿ ಅನೇಕ ಸಂಘಸಂಸ್ಥೆಗಳು ಕ್ರೀಡಾಕೂಟವನ್ನು ಸಂಘಟಿಸುವ ಮೂಲಕ ಕ್ರೀಡೆಗೆ ಹೆಚ್ಚು ಉತ್ತೇಜನ ನೀಡುತ್ತಿದೆ ಎಂದು ಜಿಪಂ ಮಾಜಿ ಉಪಾಧ್ಯಕ್ಷ ರಾಜು ದೇವಾಡಿಗ ಹೇಳಿದರು. ಅವರು ಗಂಗೊಳ್ಳಿಯ ಜನತಾ ಐಸ್ಪ್ಲಾಂಟ್ ವಠಾರದಲ್ಲಿ ಚಾಲೆಂಜ್ ಕ್ರಿಕೆಟರ್ಸ್ ಬಂದರ್ ಗಂಗೊಳ್ಳಿ ಇವರ ಆಶ್ರಯದಲ್ಲಿ ಆಯೋಜಿಸಲಾಗಿದ್ದ 30 ಗಜಗಳ ತಾಲೂಕು ಮಟ್ಟದ ಎರಡು ದಿನಗಳ ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾಟ ಉದ್ಘಾಟಿಸಿ ಮಾತನಾಡಿದರು. ಪತ್ರಕರ್ತ ಬಿ.ರಾಘವೇಂದ್ರ ಪೈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಗಂಗೊಳ್ಳಿ ಪ್ರಾಥಮಿಕ ಮೀನುಗಾರರ ಸಹಕಾರಿ ಸಂಘದ ನಿರ್ದೇಶಕ ಮೋಹನ ಪಿ.ಖಾರ್ವಿ, ಜನತಾ ಐಸ್ಪ್ಲಾಂಟ್ನ ವ್ಯವಸ್ಥಾಪಕ ವಿಶ್ವನಾಥ ಕುಂದರ್ ಶುಭ ಹಾರೈಸಿದರು. ಇದೇ ಸಂದರ್ಭ ರಾಷ್ಟ್ರಮಟ್ಟದ ಟೆನ್ನಿಕಾಯ್ಟ್ ಪಂದ್ಯಾಟದಲ್ಲಿ ಭಾಗವಹಿಸಿದ್ದ ಸರಸ್ವತಿ ವಿದ್ಯಾಲಯ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿ ಪ್ರಜ್ವಲ್ ಖಾರ್ವಿ ಅವರನ್ನು ಸನ್ಮಾನಿಸಲಾಯಿತು. ಗಂಗೊಳ್ಳಿ ಶ್ರೀ ರಾಘವೇಂದ್ರ…
ಬೈಂದೂರು: ಅಭಿವೃದ್ಧಿಯ ವಿಚಾರದಲ್ಲಿ ಯಾವುದೇ ರಾಜಿ ಇಲ್ಲದೇ ಕೆಲಸ ಮಾಡುತ್ತಾ ಬಂದಿದ್ದು ಕ್ಷೇತ್ರದ ಅಗತ್ಯತೆಗೆ ತಕ್ಕಂತೆ ಮೂಲಭೂತ ಸೌಕರ್ಯಗಳನ್ನು ಒದಗಿಸುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಲಾಗಿದೆ. ಈ ಭಾಗದ ರಸ್ತೆ, ದಾರಿದೀಪ, ಕುಡಿಯುವ ನೀರು ಮುಂತಾದ ಸೌಯರ್ಕಗಳನ್ನು ಸಮರ್ಪಕವಾಗಿ ಒದಗಿಸಿ ಬೈಂದೂರನ್ನು ಮಾದರಿ ನಗರವನ್ನಾಗಿ ಮಾಡುವ ಇಂಗಿತವಿದೆ ಎಂದು ಬೈಂದೂರು ವಿಧಾನಸಭಾ ಕ್ಷೇತ್ರದ ಶಾಸಕ ಕೆ. ಗೋಪಾಲ ಪೂಜಾರಿ ಹೇಳಿದರು. ಲೋಕೋಪಯೋಗಿ ಇಲಾಖೆಯಿಂದ 2.60ಕೋಟಿ ವೆಚ್ಚದಲ್ಲಿ ಕಾಂಕ್ರೀಟಿಕರಣಗೊಳ್ಳುತ್ತಿರುವ ಬೈಂದೂರು ರಾಹುತನಕಟ್ಟೆಯಿಂದ ಮಾಸ್ತಿಕಟ್ಟೆಯೊರೆಗಿನ ಹಳೆ ಎಂಬಿಸಿ ರಸ್ತೆ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿದ ಬಳಿಕ ಮಾತನಾಡಿ ಬೈಂದೂರು ಕ್ಷೇತ್ರಕ್ಕೆ ಲೋಕೋಪಯೋಗಿ ಇಲಾಖೆಯಿಂದ ರಸ್ತೆ ಅಭಿವೃದ್ಧಿ ಹಾಗೂ ಸೇತುವೆಗಾಗಿ 2015-16ನೇ ಸಾಲಿನಲ್ಲಿ 24 ಕಾಮಗಾರಿಗಳಿಗೆ 23.22ಕೋಟಿ ಅನುದಾನ ಮಂಜೂರಾಗಿದ್ದು ಹಂತ ಹಂತವಾಗಿ ಕ್ಷೇತ್ರದ ಕಾಮಗಾರಿಗಳನ್ನು ಕೈಗೆತ್ತಿಕೊಂಡು ಅಭಿವೃದ್ಧಿ ಮಾಡಲಾಗುತ್ತದೆ. ಚರಂಡಿ, ದಾರಿದೀಪ ಮುಂತಾದ ಕಾಮಗಾರಿಗಳನ್ನು ಮುಂದಿನ ಕ್ರೀಯಾಯೋಜನೆಯಲ್ಲಿ ಸೇರಿಸಲಾಗುತ್ತದೆ ಎಂದು ಹೇಳಿದರು. (ಕುಂದಾಪ್ರ ಡಾಟ್ ಕಾಂ) ಯಡ್ತರೆ ಗ್ರಾಮ ಪಂಚಾಯತ್ ಅಧ್ಯಕ್ಷ ನಾಗರಾಜ ಶೆಟ್ಟಿ ಕಾರ್ಯಕ್ರಮ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಕರಾವಳಿ ಬಂಟರ ಬಳಗ ಮಾಸಪತ್ರಿಕೆ ಆಶ್ರಯದಲ್ಲಿ ತಲ್ಲೂರಿನ ಶಾಲಾ ಮೈದಾನದಲ್ಲಿ ಭಕ್ತಿ-ಭಾವಗಳನ್ನು ಬೆಸೆಯುವ ಸಾರ್ವಜನಿಕ ಶ್ರೀನಿವಾಸ ಕಲ್ಯಾಣೋತ್ಸವ ವೈಭವದಿಂದ ಜರುಗಿತು. ಭೂ ವೈಕುಂಠಪತಿ ಶ್ರೀನಿವಾಸ ದೇವರು ಮತ್ತು ಪದ್ಮಾವತಿ ದೇವಿಯ ಕಲ್ಯಾಣೋತ್ಸವದ ಸಂದರ್ಭದಲ್ಲಿ ಧಾರ್ಮಿಕ ಕ್ರಿಯಾಚರಣೆಯ ಅಂಗವಾಗಿ ವೇದಿಕೆಗೆ ಶ್ರೀ ವೆಂಕಟರಮಣನ ಆಗಮನ, ವಧೂ ನಿರೀಕ್ಷಣೆ, ಪದ್ಮಾವತಿಯ ಆಗಮನ, ಅರಿಶಿನ-ಕುಂಕುಮ ಸಮರ್ಪಣೆ, ಧಾರೆ ಮಣಿ ಕಟ್ಟುವಿಕೆ, ಶ್ರೀನಿವಾಸನಿಗೆ ಮಧುಕರ್ಪ ಸಮರ್ಪಣೆ, ಮಹೂರ್ತ ನಿರೀಕ್ಷೆ, ಮಾಲಾಧಾರಣೆ, ಕನ್ಯಾದಾನ, ಕಂಕಣ, ಮಂಗಲಸೂತ್ರ ಧಾರಣೆ, ಚಿನ್ನಾಭರಣಾದಿ ಕಪ್ಪ ಕಾಣಿಕೆಗಳ ಸಮರ್ಪಣೆ, ಅಗ್ನಿ ಪ್ರತಿಷ್ಠಾಪೂರ್ವಕ ಪ್ರಧಾನ ಹೋಮ, ಪ್ರಸನ್ನ ಪೂಜೆ, ಅಷ್ಟಾವಧಾನ ಸೇವೆಗಳ ಬಳಿಕ ಕಲ್ಯಾಣೋತ್ಸವದ ಕೃಷ್ಣಾರ್ಪಣವಾಗಿ ಮಹಾ ಮಂತ್ರಾಕ್ಷತೆ ಹಾಗೂ ಪ್ರಸಾದ ವಿತರಣೆ ನಡೆಯಿತು. ಬೆಂಗಳೂರಿನ ಶ್ರೀವಾರಿ ಫೌಂಡೇಶನ್ ಶ್ರೀನಿವಾಸ ಕಲ್ಯಾಣವನ್ನು ನಡೆಸಿಕೊಟ್ಟಿತ್ತು. ವಿವಿಧೆಡೆಗಳಿಂದ ಸಹಸ್ರಾರು ಸಂಖ್ಯೆಯಲ್ಲಿ ಭಕ್ತಾದಿಗಳು ಆಗಮಿಸಿದ್ದರು. ಜನದಟ್ಟಣೆಯನ್ನು ನಿರ್ವಹಿಸುವ ಸಲುವಾಗಿ ಸುಮಾರು 500ಕ್ಕೂ ಹೆಚ್ಚು ಸ್ವಯಂ ಸೇವಕರನ್ನು ನಿಯೋಜಿಸಲಾಗಿದ್ದು, ಪ್ರಸಾದ ರೂಪದಲ್ಲಿ ಸಾರ್ವಜನಿಕರಿಗೆ ಅನ್ನಸಂತರ್ಪಣೆ…
ಕೊಲ್ಲೂರು: ಜನವರಿಯಲ್ಲಿ ದೆಹಲಿಯಲ್ಲಿ ನಡೆಯುವ ಪದವಿ ಪೂರ್ವ ಶಿಕ್ಷಣ ಇಲಾಖೆಯ ರಾಪ್ಟ್ರ ಮಟ್ಟದ ನೆಟ್ ಬಾಲ್ ಪಂದ್ಯಾಟದಲ್ಲಿ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಳದ ಪದವಿ ಪೂರ್ವ ಕಾಲೇಜಿನ ಪ್ರಥಮ ವಾಣಿಜ್ಯ ವಿಭಾಗದ ಪ್ರತೀಕ್ಷಾ ಕರ್ನಾಟಕ ರಾಜ್ಯ ತಂಡವನ್ನು ಪ್ರತಿನಿಧಿಸುತ್ತಿದ್ದಾಳೆ. ದೈಹಿಕ ಶಿಕ್ಷಣ ಉಪನ್ಯಾಸಕ ಸುಕೇಶ್ ಶೆಟ್ಟಿ ಹೊಸಮಠ ಹಾಗೂ ಸಚಿನ್ ಕುಮಾರ್ ಶೆಟ್ಟಿ ಇವಳಿಗೆ ತರಬೇತಿ ನೀಡಿರುತ್ತಾರೆ.
ಗಂಗೊಳ್ಳಿ: ದೆಹಲಿಯ ಗಣರಾಜ್ಯೋತ್ಸವದ ಪರೇಡ್ನಲ್ಲಿ ಭಾಗವಹಿಸಿದ್ದ ಗಂಗೊಳ್ಳಿಯ ಸರಸ್ವತಿ ವಿದ್ಯಾಲಯ ಆಂಗ್ಲ ಮಾಧ್ಯಮ ಶಾಲೆಯ ಎನ್ಸಿಸಿ ಕೆಡೆಟ್ ವೈಷ್ಣವಿ ಗೋಪಾಲ್ ಅವರನ್ನು ಇತ್ತೀಚಿಗೆ ಗಂಗೊಳ್ಳಿಯ ಸರಸ್ವತಿ ವಿದ್ಯಾಲಯ ಪದವಿಪೂರ್ವ ಕಾಲೇಜಿನ ವಠಾರದಲ್ಲಿ ಜರಗಿದ ಗಂಗೊಳ್ಳಿ ಎಸ್.ವಿ. ಆಂಗ್ಲ ಮಾಧ್ಯಮ ಶಾಲೆಯ ವಾರ್ಷಿಕೋತ್ಸವ ಸಮಾರಂಭದಲ್ಲಿ ಸನ್ಮಾನಿಸಿ ಗೌರವಿಸಲಾಯಿತು. ಗಂಗೊಳ್ಳಿಯ ಉದ್ಯಮಿ ಎಂ.ಮಾಧವ ವಿ. ಪೈ, ಎಂ.ಮಾಯಾ ಎಂ.ಪೈ, ಜಿಎಸ್ವಿಎಸ್ ಅಸೋಶಿಯೇಶನ್ ಅಧ್ಯಕ್ಷ ಡಾ.ಕಾಶೀನಾಥ ಪೈ, ಶಾಲೆಯ ಸಂಚಾಲಕ ಎನ್.ಸದಾಶಿವ ನಾಯಕ್, ಎಸ್.ವಿ. ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಆರ್.ಎನ್.ರೇವಣ್ಕರ್, ಶಾಲೆಯ ಮುಖ್ಯೋಪಾಧ್ಯಾಯ ರಾಘವೇಂದ್ರ ಶೇರುಗಾರ್, ಶಾಲೆಯ ಪ್ರಾಥಮಿಕ ಶಾಲಾ ವಿಭಾಗದ ಮುಖ್ಯ ಶಿಕ್ಷಕಿ ಶಾಂತಿ ಡಿಕೋಸ್ತಾ, ಶಾಲೆಯ ಶಿಕ್ಷಕ-ರಕ್ಷಕ ಸಮಿತಿ ಉಪಾಧ್ಯಕ್ಷ ಶಿವಾನಂದ ಪೂಜಾರಿ, ಶಾಲೆಯ ಪ್ರಾಕ್ತನ ವಿದ್ಯಾರ್ಥಿ ರಾಮಚಂದ್ರ ನಾಯಕ್, ಶಾಲಾ ವಿದ್ಯಾರ್ಥಿ ನಾಯಕ ಶ್ರೀನಿಧಿ ಮೊದಲಾದವರು ಉಪಸ್ಥಿತರಿದ್ದರು.
ಕುಂದಾಪುರ: ದೆಹಲಿಯಲ್ಲಿ ನಡೆದ ಡೆಂಟಲ್ ಕೌನ್ಸಿಲ್ ಆಫ್ ಇಂಡಿಯಾ ನ್ಯೂಡೆಲ್ಲಿ ಚುನಾವಣೆಯಲ್ಲಿ ಡಾ. ಜಯಕರ್ ಶೆಟ್ಟಿ ಎಮ್. ಡೆಂಟಲ್ ಕೌನ್ಸಿಲ್ ಆಫ್ ಇಂಡಿಯಾದ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ರಾಜೀವ್ ಗಾಂಧಿ ಆರೋಗ್ಯ ವಿಶ್ವವಿದ್ಯಾಲಯದ ಸೆನೆಟ್ ಮತ್ತು ಸಿಂಡಿಕೇಟ್ ಸದಸ್ಯರಾಗಿ ಸೇವೆಸಲ್ಲಿಸಿದ ಇವರು ಪ್ರಸ್ತುತ ಬೋರ್ಡ್ ಆಫ್ ಸ್ಟಡೀಸ್ ಛೇರ್ಮ್ಯಾನ್ ಆಗಿ ಸೇವೆಸಲ್ಲಿಸುತ್ತಿದ್ದಾರೆ.ಇವರು ಉಡುಪಿ ಜಿಲ್ಲೆ ಕುಂದಾಪುರ ತಾಲೂಕ್ ಗ್ರಾಮೀಣ ಪ್ರದೇಶದವರು. ಪ್ರೋಸ್ಟೋಡೊಂಟಿಕ್ಸನಲ್ಲಿ ಪದವಿ ಮತ್ತು ಸ್ನಾತಕೋತ್ತರ ಪದವಿಯನ್ನು ಸರಕಾರಿ ಡೆಂಟಲ್ ಕಾಲೇಜ್ ಮತ್ತು ರಿಸರ್ಚ್ ಇನ್ಸ್ಟಿಟ್ಯೂಟ್ನಲ್ಲಿ ಪಡೆದಿರುವ ಇವರು ಎಇಸಿಎಸ್ ಬೆಂಗಳೂರಿನ ಮಾರುತಿ ಕಾಲೇಜ್ ಆಫ್ ಡೆಂಟಲ್ ಸೈನ್ಸ್ ಮತ್ತು ರಿಸರ್ಚ್ ಸೆಂಟರ್ನಲ್ಲಿ ಪ್ರಾಧ್ಯಾಪಕ ಮತ್ತು ಉಪಪ್ರಾಂಶುಪಾಲರಾಗಿ ಸೇವೆಸಲ್ಲಿಸುತ್ತಿದ್ದಾರೆ. ಇವರು ತೆಕ್ಕಟ್ಟೆ ವಿಶ್ವವಿನಾಯಕ ಸಿಬಿಎಸ್ಇ ಸ್ಕೂಲ್ ಟ್ರಸ್ಟಿಯಾಗಿರುತ್ತಾರೆ.
