ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಇಲ್ಲಿನ ಬಸ್ ನಿಲ್ದಾಣದಲ್ಲಿ ಭಿಕ್ಷಾಟನೆ ಮಾಡುತ್ತಿದ್ದ ಇಬ್ಬರು ಚಿಕ್ಕ ಬಾಲಕಿಯರನ್ನು ರಕ್ಷಿಸಿ ಉಡುಪಿ ನಿಟ್ಟೂರಿನ ಮಕ್ಕಳ ಕಲ್ಯಾಣ ಸಮಿತಿ ಬಾಲಕಿಯರ ಬಾಲ ಮಂದಿರದ ಅಧಿಕಾರಿಗಳ ವಶಕ್ಕೆ ನೀಡಿಲಾಗಿದೆ. ಬೈಂದೂರು ಠಾಣಾಧಿಕಾರಿ ಸಂತೋಷ್ ಆನಂದ್ ಕಾಯ್ಕಿಣಿ ಬೆಳಿಗ್ಗೆ ಬಸ್ ನಿಲ್ದಾಣದಲ್ಲಿ ರೌಂಡ್ಸ್ನಲ್ಲಿ ಧಾರವಾಡ ಜಿಲ್ಲೆಯ ಕಲಘಟಗಿಯ ಮಂಜುಳಾ ಎಂಬ ಮಹಿಳೆ 2 ಮಕ್ಕಳ ಜತೆಗೆ ಸಾರ್ವಜನಿಕರಿಂದ ಭಿಕ್ಷಾಟನೆ ಮಾಡುತ್ತಿರುವುದನ್ನು ಗಮನಿಸಿ ಅವರ ಹಿನ್ನೆಲೆಯನ್ನು ವಿಚಾರಿಸಿದ್ದಾರೆ. ಮಾನಸಿಕ ಅಸ್ವಸ್ಥೆಯಂತೆ ವರ್ತಿಸಿದ ಆಕೆ ತನ್ನ ಗಂಡ ಶಂಕರ ಮರಣಹೊಂದಿ ಮೂರು ವರ್ಷವಾಗಿದ್ದು, ಮಕ್ಕಳು ಯಾರೆಂದು ಸರಿಯಾಗಿ ತಿಳಿಸದೇ ವ್ಯತಿರಿಕ್ತ ಹೇಳಿಕೆಯಿಂದ ಅನುಮಾನಗೊಂಡ ಠಾಣಾಧಿಕಾರಿ, ಮಹಿಳೆ ಮತ್ತು ಮಕ್ಕಳನ್ನು ಠಾಣೆಗೆ ಕರೆತಂದು ಭಿಕ್ಷಾಟನೆ ಮಾಡದಂತೆ ಎಚ್ಚರಿಕೆ ನೀಡಿದ್ದಲ್ಲದೇ ಮಹಿಳೆಯೊಂದಿಗೆ ಮಕ್ಕಳನ್ನು ಕಳುಹಿಸಿದರೆ ಪುನಃ ಭಿಕ್ಷಾಟನೆ ಮಾಡುವ ಸಾಧ್ಯತೆಯಿದೆ ಎಂಬ ನೆಲೆಯಲ್ಲಿ ನಿಟ್ಟೂರಿನ ಮಕ್ಕಳ ಕಲ್ಯಾಣ ಸಮಿತಿ ಬಾಲಕಿಯರ ಬಾಲ ಮಂದಿರದ ಅಧಿಕಾರಿಗಳ ವಶಕ್ಕೆ ನೀಡಿದ್ದು, ದಾಖಲೆಗಳೊಂದಿಗೆ ತಂದೆ ತಾಯಿಯರು ಬಂದರೆ…
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಕುಸುಮ ಫೌಂಡೇಶನ್ ನಾಗೂರು ಆಶ್ರಯದಲ್ಲಿ ನಡೆಯಲಿರುವ ‘ಕುಸುಮಾಂಜಲಿ-2016’ ರ ಪೂರ್ವಭಾವಿಯಾಗಿ ನಡೆಯಲಿರುವ ಗಾನಕುಸುಮ-2016 ಗಾಯನ ಸ್ಪರ್ಧೆಯ ಮೊದಲ ಸುತ್ತಿನ ಆಯ್ಕೆ ಸ್ಪರ್ಧೆಯು ದಿನಾಂಕ ನವೆಂಬರ್ 6ರ ಭಾನುವಾರ, ಬೆಳಿಗ್ಗೆ 8:30ಕ್ಕೆ ನಾಗೂರಿನ ಶ್ರೀ ಕೃಷ್ಣ ಲಲಿತ ಕಲಾ ಮಂದಿರದಲ್ಲಿ ನಡೆಯಲಿರುವುದು. ಸ್ಪರ್ಧಿಗಳು ಸಮಯಕ್ಕೆ ಸರಿಯಾಗಿ ಹಾಜರಿದ್ದು ಹೆಸರು ನೋಂದಾಯಿಸಿಕೊಳ್ಳುವಂತೆ ಕೋರಲಾಗಿದೆ. ಸಾಂಸ್ಕೃತಿಕ ಹಾಗೂ ಕಲಾ ಸಿರಿವಂತಿಯ ಸಮ್ಮಿಲನವಾದ ‘ಕುಸುಮಾಂಜಲಿ’ ಗೆ ಪೂರಕವಾಗಿ ಆಯೋಜಿಸಲಾಗುತ್ತಿರುವ ಗಾನಕುಸುಮ ಸ್ವರ್ಧೆಯಲ್ಲಿ ಯಾವುದೇ ಭಾಷೆಯ ಭಾವಗೀತೆ, ಭಕ್ತಿ ಪ್ರಧಾನ ಗೀತೆ, ದೇಶಭಕ್ತಿಗೀತೆ ಹಾಗೂ ಉತ್ತಮ ಅಭಿರುಚಿವುಳ್ಳ ಕಲಾತ್ಮಕ ಚಿತ್ರಗೀತೆಗಳನ್ನು ಆಯ್ದುಕೊಳ್ಳಬಹುದಾಗಿದೆ. ಸ್ಪರ್ಧೆಯು ಜೂನಿಯರ್ ಮತ್ತು ಸೀನಿಯರ್ ವಿಭಾಗವಾಗಿ ನಡೆಯಲಿದೆ. ಪ್ರತೀ ಸ್ಪರ್ಧಿಗೆ ಪಲ್ಲವಿ ಹಾಗೂ ಒಂದು ಚರಣ ಹಾಡಲು ಅವಕಾಶವಿದ್ದು ಗರಿಷ್ಠ 3 ನಿಮಿಷಗಳ ಕಾಲಾವಕಾಶವಿರುತ್ತದೆ. ಮೊದಲ ಸುತ್ತಿನಲ್ಲಿ 30 ಗಾಯಕರನ್ನು ಸೆಮಿಫೈನಲ್ ಸ್ಪರ್ಧೆಗೆ ಆಯ್ಕೆ ಮಾಡಲಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ 9483130844 ನಂಬರ್ಗೆ ಸಂಪರ್ಕಿಸುವಂತೆ ಕುಸುಮಾಂಜಲಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ನಾವುಂದದ ಅರೆಹೊಳೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆರಂಭವಾದ ಬೈಂದೂರು ಸರಕಾರಿ ಪದವಿಪೂರ್ವ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ವಿಶೇಷ ಶಿಬಿರವನ್ನು ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷ ಎಸ್. ರಾಜು ಪೂಜಾರಿ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು ವಿದ್ಯಾರ್ಥಿಗಳು ಕಲಿಕೆಯ ಜತೆಯಲ್ಲಿ ವ್ಯಕ್ತಿತ್ವ ವಿಕಾಸಕ್ಕೆ ಹೆಚ್ಚು ಒತ್ತು ನೀಡಬೇಕು. ಸೇವಾ ಮನೋಭಾವನೆ ರೂಢಿಸಿಕೊಳ್ಳಬೇಕು. ಅವು ಮುಂದೆ ಉದ್ಯೋಗ ನಡೆಸುವಾಗ ಯಶಸ್ಸು ಗಳಿಸಲು ನೆರವಾಗುತ್ತವೆ. ರಾಷ್ಟ್ರೀಯ ಸೇವಾ ಯೋಜನೆಯ ಸದಸ್ಯರಾಗಿ ಇವುಗಳನ್ನು ಪಡೆಯಬಹುದು ಎಂದರು. ಗ್ರಾಮ ಪಂಚಾಯತ್ ಅಧ್ಯಕ್ಷ ಎನ್. ನರಸಿಂಹ ದೇವಾಡಿಗ ಅಧ್ಯಕ್ಷತೆ ವಹಿಸಿದ್ದರು. ಪ್ರಾಂಶುಪಾಲ ಟಿ. ಪಾಲಾಕ್ಷ ಸ್ವಾಗತಿಸಿದರು. ಸಮಾಜ ಶಾಸ್ತ್ರ ಉಪನ್ಯಾಸಕ ಹಾಗೂ ಯೋಜನಾಧಿಕಾರಿ ರಾಘವೇಂದ್ರ ಗುಡಿಗಾರ್ ಯೋಜನೆ ಮತ್ತು ಶಿಬಿರದ ಚಟುವಟಿಕೆಗಳನ್ನು ವಿವರಿಸಿದರು. ಅತಿಥಿಗಳಾಗಿದ್ದ ತಾಲೂಕು ಪಂಚಾಯತ್ ಸದಸ್ಯೆ ಶ್ಯಾಮಲಾ ಕುಂದರ್, ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಜಯಂತಿ ಡಿ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಗಣೇಶ ಎನ್. ದಾಸ್,…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ (ರಿ.), ಮಹಿಳಾ ಜ್ಞಾನ ವಿಕಾಸ ಕಾರ್ಯಕ್ರಮ ಕುಂದಾಪುರ ಇವರ ಆಶ್ರಯದಲ್ಲಿ ಜ್ಞಾನ ಭಾರತಿ ತಾಂತ್ರಿಕ ತರಬೇತಿ ಕೇಂದ್ರ ಕುಂದಾಪುರದ ಸಹಯೋಗದೊಂದಿಗೆ ಒಂದು ವಾರಗಳ ಕಾಲ ನಡೆದ ಕರಕುಶಲ ವಸ್ತು ತಯಾರಿಕ ಕಾರ್ಯಾಗಾರದ ಸಮಾರೋಪ ಸಮಾರಂಭ ಇತ್ತೀಚೆಗೆ ನಡೆಯಿತು. ಸಮಾರಂಭದ ಅಧ್ಯಕ್ಷತೆಯನ್ನು ಜ್ಞಾನ ಭಾರತಿ ಸಂಸ್ಥೆಯ ಪ್ರಾಂಶುಪಾಲರಾದ ರಾಘವೇಂದ್ರ ಗೋಪಾಡಿ ವಹಿಸಿ ಶುಭಹಾರೈಸಿದರು. ಮುಖ್ಯ ಅತಿಥಿಗಳಾಗಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಯೋಜನಾಧಿಕಾರಿ ಅಮರ್ ಪ್ರಸಾದ್ ಶೆಟ್ಟಿ, ಸುದ್ದಿಮನೆ ಸಂಪಾದಕ ಸಂತೋಷ ಕೋಣಿ, ಸ್ವ ಉದ್ಯೋಗ ಮತ್ತು ಕರಕುಶಲ ವಸ್ತುಗಳ ಅಗತ್ಯತೆಯ ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ಶಿಬಿರಾರ್ಥಿಗಳಿಗೆ ಪ್ರಮಾಣ ಪತ್ರ ವಿತರಿಸಲಾಯಿತು. ಸಂಸ್ಥೆಯ ನಿರ್ದೇಶಕಿ ಶ್ರೀಮತಿ ಪದ್ಮಿನಿ ತರಬೇತಿಯ ಬಗ್ಗೆ ಮಾತನಾಡಿದರು. ಜ್ಞಾನ ಭಾರತಿ ಸಂಸ್ಥೆಯ ಉಪನ್ಯಾಸಕಿ ಅಶ್ವಿನಿ ಉಪಸ್ಥಿತರಿದ್ದರು. ಮಹಿಳಾ ಜ್ಞಾನ ವಿಕಾಸ ಕಾರ್ಯಕ್ರಮ ಕುಂದಾಪುರ ಇದರ ಸಮನ್ವಯಾಧಿಕಾರಿ ಶ್ರೀಮತಿ ಸುಶೀಲ ಕಾರ್ಯಕ್ರಮ ನಿರ್ವಹಿಸಿದರು. ಶಿಬಿರಾರ್ಥಿ ಶ್ರೀಮತಿ…
ಕುಂದಾಪ್ರ ಡಾಟ್ ಕಾಂ ಸುದ್ದಿ ಬೈಂದೂರು: ಕೊರಗ ಕಲಾ ಮೇಳದ ಕೊಳಲು ವಾದನದಲ್ಲಿನ ಪರಣತಿಗಾಗಿ ಪ್ರಸಕ್ತ ಸಾಲಿನ ರಾಜ್ಯ ಜಾನಪದ ಅಕಾಡೆಮಿ ಪ್ರಶಸ್ತಿ ಪಡೆದಿರುವ ಮರವಂತೆಯ ಭುಜಂಗ ಕೊರಗರಿಗೆ ಅಲ್ಲಿನ ಸೇವಾ, ಸಾಂಸ್ಕೃತಿಕ ವೇದಿಕೆ ’ಸಾಧನಾ’ ಹುಟ್ಟೂರ ಸನ್ಮಾನ ನೀಡಿ ಅಭಿನಂದಿಸಿತು. ಸಾಧನಾ ಸಮುದಾಯ ಭವನದ ವಿ. ಕೆ. ಕಾಮತ್ ಸಭಾಗೃಹದಲ್ಲಿ ರವಿವಾರ ನಡೆದ ಸಮಾರಂಭದ ಅಧ್ಯಕ್ಷತೆಯನ್ನು ಸಾಧನಾ ಅಧ್ಯಕ್ಷ ಗುರುದಾಸ್ ವಿ. ಶ್ಯಾನುಭಾಗ್ ವಹಿಸಿದ್ದರು. ಮುಖ್ಯ ಅತಿಥಿಯಾಗಿದ್ದ ತಾಲೂಕು ಕೊರಗ ಸಂಘಟನೆಯ ಅಧ್ಯಕ್ಷ ವಿ. ಗಣೇಶ್ ಕೊರಗರ ಬಳಿ ವಿಶಿಷ್ಟ ಸಾಂಸ್ಕೃತಿಕ ಸಂಪತ್ತು ಇದೆ. ಅವರ ಕುಲ ಕಸುಬಾದ ಬುಟ್ಟಿ ನೆಯ್ಗೆಯಲ್ಲಿ ಅವರನ್ನು ಮೀರಿಸುವವರಿಲ್ಲ. ಆದರೆ ಶೈಕ್ಷಣಿಕವಾಗಿ ಇನ್ನಷ್ಟೇ ಸಮಾನತೆ ಸಾಧಿಸಬೇಕಾಗಿದೆ ಎಂದು ಹೇಳಿ ಭುಜಂಗ ಕೊರಗರನ್ನು ಎಲ್ಲರಿಗಿಂತ ಮೊದಲು ಗೌರವಿಸಿದ ಸಾಧನಾ ಉಪಕ್ರಮವನ್ನು ಶ್ಲಾಘಿಸಿದರು. ಇನ್ನೋರ್ವ ಮುಖ್ಯ ಅತಿಥಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಅನಿತಾ ಆರ್. ಕೆ. ಶುಭ ಹಾರೈಸಿದರು. ಶೇಖರ ಮರವಂತೆ ಕೊರಗ ಕಲಾಮೇಳ ನಡೆದುಬಂದ ದಾರಿ…
ಕುಂದಾಪ್ರ ಡಾಟ್ ಕಾಂ ಸುದ್ದಿ ಕುಂದಾಪುರ: ಒಂದು ಕಾಲದಲ್ಲಿ ಬಡವರು, ಕಾರ್ಮಿಕರು ಸಹಬಾಳ್ವೆಯಿಂದ ಬದುಕಿದ್ದ ಆನಗಳ್ಳಿ ಇಂದು ಕುಂದಾಪುರದ ರೌಡಿಗಳಿಗೆ ಹಿತ್ತಲಮನೆಯಾಗಿದೆ. ಅಕ್ರಮಗಳ ವಿರುದ್ಧ ಧ್ವನಿಎತ್ತುವವರನ್ನು ಮಣಿಸುವ ವೃತ್ತಿಪರ ರೌಡಿಗಳು ತಂಡವೇ ವ್ಯವಸ್ಥಿತವಾಗಿ ತಲೆಯೆತ್ತುತ್ತಿರುವುದು ತೀರಾ ಆತಂಕಕಾರಿ ಸಂಗತಿ ಖ್ಯಾತ ರಂಗಕರ್ಮಿ, ರಾಷ್ಟ್ರೀಯ ನಾಟಕ ಶಾಲೆಯ ಪ್ರಾದೇಶಿಕ ನಿರ್ದೇಶಕ ಸುರೇಶ್ ಆನಗಳ್ಳಿ ವಿಷಾದ ವ್ಯಕ್ತಪಡಿಸಿದರು. ಕುಂದಾಪುರದಲ್ಲಿ ನಡೆದ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು ಕೆಲ ದಿನಗಳ ಹಿಂದೆ ತನ್ನ ಸಹೋದರ ಸುಧೀಂದ್ರ ಆಚಾರ್ಯ ತನ್ನ ಕಾರಿನಲ್ಲಿ ತೆರಳುತ್ತಿದ್ದಾಗ ರಸ್ತೆಗೆ ಕಲ್ಲು ಅಡ್ಡವಿಟ್ಟು ಇದೇ ತಂಡ ಹಲ್ಲೆನಡೆಸಿ ದರೋಡೆಗೈದಿದ್ದರೂ ಪೊಲೀಸರು ಅದೊಂದು ದೊಂಬಿ ಎಂದು ಪ್ರಕರಣ ದಾಖಲಿಸಿ ಪ್ರಕರಣದ ದಾರಿ ತಪ್ಪಿಸುತ್ತಿದ್ದಾರೆ ಎಂದವರು ಆರೋಪಿಸಿದರು. ಕಾರ್ಯಕ್ರಮವೊಂದರ ಬ್ಯಾನರ್ ವಿಷಯಕ್ಕೆ ಸಂಬಂಧಿಸಿ ಪೂರ್ವದ್ವೇಷವನ್ನಿಟ್ಟುಕೊಂಡಿದ್ದ ವ್ಯಕ್ತಿಯೋರ್ವರು ಅವರ ಬೆಂಬಲಿಗರ ಮೂಲಕ ತನ್ನ ಸಹೋದರ ಸುಧೀಂದ್ರ ಆಚಾರ್ಯ ಅವರಿಗೆ ಹಲ್ಲೆ ಮಾಡಿದ್ದಾರೆ. ಹಲ್ಲೆ ನಡೆಸಿ ಕೊನೆಗೆ ಅವರೇ ಅವರಿಗೆ ಬೇಕಾದ ಆಸ್ಪತ್ರೆಗೆ ಸೇರಿಸಿ ಗಂಭೀರ ಪ್ರಕರಣ ಅಲ್ಲವೆಂದು ಬಿಂಬಿಸಲು ಹೊರಟ್ಟಿದ್ದರು. ಇಷ್ಟಕ್ಕೆ…
ಮಕ್ಕಳಿಬ್ಬರು ಮೃತ – ತಂದೆ-ತಾಯಿ ಗಂಭೀರ ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಕೌಟುಂಬಿಕ ಸಮಸ್ಯೆಯಿಂದ ನೊಂದ ಕುಟುಂಬವೊಂದು ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾದ ಹೃದಯವಿದ್ರಾವಕ ಘಟನೆ ಬೈಂದೂರಿನ ಗಂಗಾನಾಡು ಗೋಳಿಕಕ್ಕಾರು ಎಂಬಲ್ಲಿ ನಡೆದಿದ್ದು, ಘಟನೆಯಲ್ಲಿ ಶಂಕರನಾರಾಯಣ ಹೆಬ್ಬಾರ್ ಹಾಗೂ ಅವರ ಮಡದಿ ಮಹಾಲಕ್ಷ್ಮೀ ಗಂಭೀರ ಸ್ಥಿತಿಯಲ್ಲಿದ್ದರೇ, ದಂಪತಿಗಳ ಪುತ್ರ ಅಶ್ವಿನ್ಕುಮಾರ್ ಹೆಬ್ಬಾರ್ (15), ಪುತ್ರಿ ಐಶ್ವರ್ಯಲಕ್ಷ್ಮಿ ಹೆಬ್ಬಾರ್ (13) ಸಾವನ್ನಪ್ಪಿದ್ದಾರೆ. ಕುಂದಾಪ್ರ ಡಾಟ್ ಕಾಂ ಸುದ್ದಿ. ಸಾಲಭಾದೆ ಹಾಗೂ ಕೌಟುಂಬಿಕ ಸಮಸ್ಯೆಯಿಂದ ನೊಂದ ಕುಟುಂಬ ಭಾನುವಾರ ರಾತ್ರಿ ವಿಷಸೇವಿಸಿ ಆತ್ಮಹತ್ಯೆಗೆ ಮುಂದಾಗಿರಬಹುದು ಎಂದು ಶಂಕಿಸಲಾಗಿದೆ. ಶಂಕರನಾರಾಯಣ ಅವರೊಂದಿಗೆ ಮಡದಿ ಹಾಗೂ ಮಕ್ಕಳೂ ವಿಷ ಸೇವಿಸಿದ್ದು, ಬೆಳಿಗ್ಗೆ ಘಟನೆಯ ಬಗೆಗೆ ತಿಳಿಯುತ್ತಿದ್ದಂತೆ ಸ್ಥಳೀಯರೋರ್ವರು ಎಲ್ಲರನ್ನೂ ಕೂಡಲೇ ಆಸ್ಪತ್ರೆಗೆ ಸಾಗಿಸುವ ಪ್ರಯತ್ನ ಮಾಡಿದರಾದರೂ ಅಷ್ಟರಲ್ಲಾಗಲೇ ಮಕ್ಕಳು ಮೃತಪಟ್ಟಿದ್ದರು. ಕುಂದಾಪ್ರ ಡಾಟ್ ಕಾಂ. ಗಂಭೀರ ಸ್ಥಿತಿಯಲ್ಲಿರುವ ಶಂಕರನಾರಾಯಣ ಹೆಬ್ಬಾರ್ ಅವರ ಮಡದಿಯನ್ನು ಕುಂದಾಪುರ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಅಲ್ಲಿಂದ ಮಣಿಪಾಲ ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ. ಶಂಕರನಾರಾಯಣ ಹೆಬ್ಬಾರ್ ಅಪಾಯದಿಂದ ಪಾರಾಗಿದ್ದು…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ರೋಟರಿ ಕ್ಲಬ್ ಕುಂದಾಪುರದ ಆಶ್ರಯದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ (ರಿ.) ಕುಂದಾಪುರ, ಮಹಾವಿಷ್ಣು ಯುವಕ ಮಂಡಲ (ರಿ.) ಹರೆಗೋಡು, ಮಾರನಮನೆ ಮಿತ್ರಮಂಡಳಿ(ರಿ.), ತಲ್ಲೂರು ಹಾಗೂ ಮಾನಸ ಯುವತಿ ಮಂಡಲ(ರಿ.) ಹರೆಗೋಡು ಇವರ ಸಹಯೋಗದೊಂದಿಗೆ ಮಣಿಪಾಲ ಕೆ.ಎಂ.ಸಿ. ದಂತ ವೈದ್ಯಕೀಯ ಕಾಲೇಜಿನ ತಜ್ಞ ದಂತ ವೈದ್ಯರಿಂದ ಉಚಿತ ದಂತ ಚಿಕಿತ್ಸಾ ಶಿಬಿರ ಅ.೧೬ರಂದು ಹೆಮ್ಮಾಡಿಯ ಜನತಾ ಪ್ರೌಢ ಶಾಲೆಯಲ್ಲಿ ನಡೆಯಿತು. ಕುಂದಾಪುರದ ಖ್ಯಾತ ದಂತ ವೈದ್ಯ ಡಾ. ರಾಜರಾಮ ಶೆಟ್ಟಿ ಮಾತನಾಡಿ ಹಲ್ಲುಗಳು ಆರೋಗ್ಯವಾಗಿದ್ದರೇ ದೇಹದ ಆರೋಗ್ಯ ಸುಧೃಡವಾಗಿರಲು ಸಾಧ್ಯ. ದಿನ ನಿತ್ಯ ಆಹಾರ ಸೇವನೆಯ ಬಳಿಕ ಶುದ್ಧ ನೀರಿನಿಂದ ಬಾಯಿಯನ್ನು ಸ್ವಚ್ಚಗೊಳಿಸಿಕೊಳ್ಳುವ ಜೊತೆಗೆ ಬೆಳಿಗ್ಗೆ, ರಾತ್ರಿ ಹಲ್ಲುಜ್ಜುವಾಗ ನಿಯಮಿತ ಕ್ರಮವನ್ನು ರೂಢಿಸಿಕೊಂಡಲ್ಲಿ ಜೀವಿತದ ಕೊನೆಯವರೆಗೆ ಹಲ್ಲು ಹಾಗೂ ಒಸಡುಗಳನ್ನು ಸುರಕ್ಷಿತವಾಗಿ ಸುಧೃಡವಾಗಿಟ್ಟುಕೊಳ್ಳಲು ಸಾಧ್ಯವಿದೆ ಎಂದು ಸಲಹೆಗಳನ್ನು ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ರೋಟರಿ ಕ್ಲಬ್ ಕುಂದಾಪುರದ ಅಧ್ಯಕ್ಷ ಉದಯಕುಮಾರ ಶೆಟ್ಟಿ ಮಾತನಾಡಿ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಸಿದ್ದಾಪುರ: ಹಾಲಾಡಿಯ ಸಾರ್ವಜನಿಕ ಶ್ರೀ ಶಾರದೋತ್ಸವ ಸಮಿತಿಯ ಧಾರ್ಮಿಕ ಸಭೆಯಲ್ಲಿ ಸಿದ್ದಾಪುರ ಜಿ. ಪಂ. ಕ್ಷೇತ್ರದ ಸದಸ್ಯ ಹಾಲಾಡಿ ತಾರಾನಾಥ ಶೆಟ್ಟಿ ಅವರಿಗೆ ಹೂಟ್ಟೂರು ಸಮ್ಮಾನ ಕಾರ್ಯಕ್ರಮ ಜರಗಿತು. ದಾಂಡೇಲಿಯ ಉದ್ಯಮಿ ಎಸ್. ಪ್ರಕಾಶ ಶೆಟ್ಟಿ ಗೈನಾಡಿಮನೆ ಶಾರದೋತ್ಸವ ಸಮಿತಿಯ ಧಾರ್ಮಿಕ ಸಭೆ ಉದ್ಘಾಟಿಸಿದರು. ಶಾರದೋತ್ಸವ ಸಮಿತಿಯ ಅಧ್ಯಕ್ಷ ಹಾಗೂ ಹಾಲಾಡಿ ಗ್ರಾ. ಪಂ. ಅಧ್ಯಕ್ಷ ಹಾಲಾಡಿ ಸರ್ವೋತ್ತಮ ಹೆಗ್ಡೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಪ್ರತಿಯೊಬ್ಬರಿಗೂ ಧಾರ್ಮಿಕ ಪ್ರಜ್ಞೆಗಳು ಅಗತ್ಯ. ಇಂತಹ ಧಾರ್ಮಿಕ ಪ್ರಜ್ಞೆಗಳಿಂದಾಗಿ ಶಾರದೋತ್ಸವವು ೩೨ವರ್ಷಗಳ ಕಾಲ ನಡೆದು ಬಂದಿದೆ. ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ದುಂದುವೆಚ್ಚ ಮಾಡಬಾರದು. ಧಾರ್ಮಿಕ ಕಾರ್ಯಕ್ರಮಗಳಲ್ಲಿ ಅಶ್ಲಿಲವಾದ ಪದ್ಯ ಹಾಗೂ ನತ್ಯಗಳನ್ನು ಮಾಡಬಾರದು. ಹೆಚ್ಚಾಗಿ ಧಾರ್ಮಿಕ ಕಾರ್ಯಗಳಿಗೆ ಸಂಬಂಽಸಿದ ಕಾರ್ಯಗಳನ್ನೇ ಮಾಡಬೇಕು. ಹೂಟ್ಟೂರು ಸಮ್ಮಾನ ಸ್ವೀಕರಿದ ಹಾಲಾಡಿ ತಾರಾನಾಥ ಶೆಟ್ಟಿ ಅವರ ಜನ್ಮಭೂಮಿ ಹಾಲಾಡಿಯಾದರೂ, ಕರ್ಮ ಭೂಮಿ ಸಿದ್ದಾಪುರ ಪರಿಸರ. ಸಿದ್ದಾಪುರ ಪರಿಸರದ ಜನತೆ ತಾರಾನಾಥ ಶೆಟ್ಟಿ ಅವರನ್ನು ಜಿ.…
ಕುಂದಾಪ್ರ ಡಾಟ್ ಕಾಂ ಸುದ್ದಿ. ಗ೦ಗೊಳ್ಳಿ: ಕೋಪ ಬಂದಾಗ ಶೀಘ್ರ ಪ್ರತಿಕ್ರಿಯೆಗಳನ್ನು ನೀಡಬಾರದು. ತಾಳ್ಮೆ ಮಾನಸಿಕ ಸಂತುಲತೆಯನ್ನು ತಂದುಕೊಡುತ್ತದೆ. ಸವಾಲು ಸ್ವೀಕರಿಸುವ ಮನೋಭಾವ ನಮ್ಮದಾಗಿರಬೇಕು ಎಂದು ಬೈಂದೂರಿನ ಅಂಜಲಿ ಆಸ್ಪತ್ರೆಯ ಆಡಳಿತ ನಿರ್ದೇಶಕ ಡಾ. ಸುಬ್ರಮಣ್ಯ ಭಟ್ ಅಭಿಪ್ರಾಯಪಟ್ಟರು. ಅವರು ಇತ್ತೀಚೆಗೆ ಗ೦ಗೊಳ್ಳಿಯ ಸರಸ್ವತಿ ವಿದ್ಯಾಲಯ ಪದವಿಪೂರ್ವ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕವು ಕಾಲೇಜಿನ ವಿದ್ಯಾರ್ಥಿಗಳಿಗಾಗಿ ವಿಶೇಷವಾಗಿ ಹಮ್ಮಿಕೊ೦ಡಿದ್ದ ಆರೋಗ್ಯ ಅರಿವು ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಉಪನ್ಯಾಸ ನೀಡಿದರು. ಸ್ವಪ್ನ ಸ್ಖಲನ ಹಸ್ತ ಮೈಥುನ ಇತ್ಯಾದಿಗಳ ಬಗೆಗೆ ಅನವಶ್ಯಕ ಹೆದರಿಕೆ ಅಥವಾ ಗೊಂದಲಗಳು ಸರಿಯಲ್ಲ. ಸಮಸ್ಯೆಗಳಿದ್ದಾಗ ತಜ್ಞ ವೈದ್ಯರ ಸಲಹೆಗಳನ್ನು ತೆಗೆದುಕೊಳ್ಳುವುದು ಪ್ರಯೋಜನಕಾರಿ. ಲೈಂಗಿಕತೆಯ ಬಗೆಗೆ ಕೆಟ್ಟ ಆಸಕ್ತಿಯನ್ನು ಯಾರೂ ಕೂಡ ಬೆಳೆಸಿಕೊಳ್ಳಬಾರದು ಎಂದು ಅವರು ಹೇಳಿದರು. ಪ್ರಾಂಶುಪಾಲೆ ಕವಿತಾ ಎಮ್ ಸಿ ಅಧ್ಯಕ್ಷತೆ ವಹಿಸಿದ್ದರು. ರಾಷ್ಟ್ರೀಯ ಸೇವಾ ಯೋಜನಾ ಘಟಕದ ಯೋಜನಾಧಿಕಾರಿ ನಾರಾಯಣ ನಾಯ್ಕ್ ಉಪಸ್ಥಿತರಿದ್ದರು. ವಾಣಿಜ್ಯಶಾಸ್ತ್ರ ಉಪನ್ಯಾಸಕ ನರೇ೦ದ್ರ ಎಸ್ ಗ೦ಗೊಳ್ಳಿ ಕಾರ್ಯಕ್ರಮ ನಿರ್ವಹಿಸಿದರು. ಸಂಸ್ಕೃತ ಉಪನ್ಯಾಸಕ…
