Author: ನ್ಯೂಸ್ ಬ್ಯೂರೋ

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಭಂಡಾರ್‌ಕಾರ್ಸ್ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ಉಡುಪಿ ಜಿಲ್ಲಾ ಮಟ್ಟದ ಕುಸ್ತಿ ಪಂದ್ಯಾಟದ ಸಮರೋಪ ಸಮಾರಂಭ ಇತ್ತಿಚಿಗೆ ನಡೆಯಿತು. ಉಡುಪಿ ಜಿಲ್ಲೆ ಕರ್ನಾಟಕದಲ್ಲಿಯೇ ಮಾದರಿ ಜಿಲ್ಲೆ, ವಿದ್ಯಾರ್ಥಿ ಜೀವನದಲ್ಲಿ ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸುವುದು ಎಲ್ಲಾ ವಿದ್ಯಾರ್ಥಿಗಳ ಕರ್ತವ್ಯವಾಗಬೇಕು, ಬಹುಮಾನ ಬರಲಿ, ಬಾರದೇ ಇರಲಿ ಸ್ಪರ್ಧೆಯಲ್ಲಿ ಭಾಗವಹಿಸುವುದು ಬಹಳ ಮುಖ್ಯವಾದುದು. ಬಹುಮಾನ ವಿಜೇತ ಎಲ್ಲಾ ವಿದ್ಯಾರ್ಥಿಗಳು ರಾಜ್ಯ, ರಾಷ್ಟ್ರಮಟ್ಟದಲ್ಲಿ ಜಿಲ್ಲೆಯ ಕೀರ್ತಿಯನ್ನು ಎತ್ತಿ ಹಿಡಿಯಬೇಕು ಎಂದು ಸಮಾರಂಭದ ಅಧ್ಯಕ್ಷತೆ ವಹಿಸಿದ ಭಂಡಾರ್‌ಕಾರ‍್ಸ್ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಪ್ರೋ. ಜಿ. ಎಂ. ಗೊಂಡ ಮಾತನಾಡಿದರು. ಮುಖ್ಯ ಅತಿಥಿಯಾಗಿ ಮಾತನಾಡಿದ ಭಂಡಾರ್‌ಕಾರ್ಸ್ ಪದವಿ ಕಾಲೇಜಿನ ಪ್ರಾಂಶುಪಾಲರಾದ ಡಾ.ಎನ್ ಪಿ ನಾರಾಯಣ ಶೆಟ್ಟಿ ವಿದ್ಯಾರ್ಥಿಗಳಿಗೆ ಕಾಲೇಜಿನಲ್ಲಿ ಎಲ್ಲಾ ವ್ಯವಸ್ಥೆಗಳನ್ನು ಮಾಡಿ ಕೊಡಲಾಗಿದೆ, ಅದರ ಉಪಯೋಗವನ್ನು ವಿದ್ಯಾರ್ಥಿಗಳು ಪಡೆದುಕೊಳ್ಳಬೇಕು, ಇಂದು ನಡೆದ ಜಿಲ್ಲಾಮಟ್ಟದ ಕುಸ್ತಿ ಪಂದ್ಯಾಯಾಟದಲ್ಲಿ ಭಾಗವಹಿಸಿದ ಎಲ್ಲಾ ಕ್ರೀಡಾಪಟುಗಳು ಮತ್ತು ದೈಹಿಕ ಶಿಕ್ಷಣ ನಿರ್ದೇಶಕರುಗಳಿಗೆ ಶುಭ ಹಾರೈಸಿ ಮತ್ತೊಮ್ಮೆ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಸಂಘ ಸಂಸ್ಥೆಗಳು ಗ್ರಾಮ ಪಂಚಾಯತ್ ಜೊತೆಗೆ ಸಹಭಾಗಿತ್ವದ ಯೋಜನೆಯನ್ನು ರೂಪಿಸಿದಲ್ಲಿ ಬಲಿಷ್ಠ ಸಮಾಜ ನಿರ್ಮಾಣ ಸಾಧ್ಯ ಎಂದು ಚಿತ್ತೂರು ಗ್ರಾಮ ಪಂಚಾಯತ್ ಅಧ್ಯಕ್ಷ ಸಂತೋಷ್ ಮಡಿವಾಳ ಸಂದೇಶ್ ಹೇಳಿದರು. ಸ್ವಚ್ಛ ಭಾರತ್ ಫ್ರೆಂಡ್ಸ್ ಚಿತ್ತೂರು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಹಮ್ಮಿಕೊಂಡ “ಗ್ರಾಮ ಅಭ್ಯುದಯ ಅಭಿಯಾನ”ದ ಉದ್ಘಾಟಿಸಿ ಮಾತನಾಡಿದರು. ಜಾಗೃತಿ ಕರಪತ್ರವನ್ನು ಬಿಡುಗಡೆ ಮಾಡಿ ಮಾತನಾಡಿದ ಚಿತ್ತೂರು ಗ್ರಾಮ ಪಂಚಾಯತ್ ಪಿ.ಡಿ.ಓ. ಸಂದೇಶ್ ಶೆಟ್ಟಿ, ಪ್ರತಿಯೊಬ್ಬನೂ ತನ್ನ ಸಾಮಾಜಿಕ ಜವಾಬ್ದಾರಿಯನ್ನರಿತು ಕಾರ್ಯಪ್ರವತ್ತನಾದರೆ, ದೇಶದ ಸರ್ವಾಂಗೀಣ ಅಭಿವ್ರದ್ಧಿ ಸಾಧ್ಯ ಎಂದರು. ಸಂಘ ಸಂಸ್ಥೆಗಳು ಗ್ರಾಮ ಪಂಚಾಯತ್ ಜೊತೆಗೆ ಜನಸ್ನೇಹಿ ಕಾರ್ಯಕ್ರಮಗಳನ್ನು ಮಾಡಿದರೆ, ಸಂಪನ್ಮೂಲಗಳ ಸದ್ಬಳಕೆಯಿಂದ ಸರಕಾರದ ಸೌಲಭ್ಯಗಳು ಸರಿಯಾಗಿ ಜನರಿಗೆ ತಲುಪಿ, ತನ್ಮೂಲಕ ಪಂಚಾಯತ್ ರಾಜ್ ವ್ಯವಸ್ಥೆ ಬಲಗೊಳ್ಳುವುದು, ಸ್ವಚ್ಛ ಭಾರತ್ ಫ್ರೆಂಡ್ಸ್ ನವರು ಚಿತ್ತೂರು ಗ್ರಾಮವನ್ನು ಆಯ್ಕೆ ಮಾಡಿ ಮುಂದಿನ ಮೂರು ತಿಂಗಳುಗಳ ಕಾಲ ವಿವಿಧ ಕಾರ್ಯಕ್ರಮವನ್ನು ಮಾಡಲಿದ್ದು ಅವರಿಗೆ ಗ್ರಾಮಸ್ಥರು ಸಹಕರಿಸಬೇಕು ಎಂದು ಹೇಳಿದರು. ಚಿತ್ತೂರು…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಶ್ರೀಮಂತರು ತಮ್ಮ ಮನೆಯಲ್ಲೇ ನೀರು ಶುದ್ಧೀಕರಣ ವ್ಯವಸ್ಥೆ ಹೊಂದುತ್ತಾರೆ. ಬಡವರಿಗೆ ಆ ಸಾಮರ್ಥ್ಯ ಇಲ್ಲ. ಆ ಹಿನ್ನೆಲೆಯಲ್ಲಿ ರಾಜ್ಯ ಸರಕಾರವು ಪ್ರತಿ ಗ್ರಾಮ ಪಂಚಾಯಿತಿಯಲ್ಲಿ ಸುಮಾರು 10 ಸಾವಿರ ರೂಪಾಯಿ ವೆಚ್ಚದಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪಿಸಲು ಮುಂದಾಗಿದೆ. ಈಗಾಗಲೇ ಕೆಲವು ಕಡೆ ಇದು ಆರಂಭವಾಗಿದ್ದು ಹಂತಹಂತವಾಗಿ ಎಲ್ಲೆಡೆ ಸ್ಥಾಪನೆಯಾಗಲಿದೆ ಎಂದು ಶಾಸಕ ಕೆ. ಗೋಪಾಲ ಪೂಜಾರಿ ಹೇಳಿದರು. ಮರವಂತೆ ಗ್ರಾಮ ಪಂಚಾಯತ್‌ನಲ್ಲಿ ಅವರು ಘಟಕ ಉದ್ಘಾಟಿಸಿದ ಬಳಿಕ ಮಾತನಾಡಿದರು. ಹೆಚ್ಚಿನ ಕಾಯಿಲೆಗಳು ಕಷ್ಮಲಯುಕ್ತ ನೀರು ಕುಡಿಯುವುದರಿಂದ ಬರುತ್ತದೆ. ಆದುದರಿಂದ ಗ್ರಾಮ ಪಂಚಾಯತ್ ಈ ಬಗ್ಗೆ ಜಾಗೃತಿ ಮೂಡಿಸಿ ಜನರು ಕುಡಿಯಲು ಈ ನೀರು ಬಳಸುವಂತೆ ಮಾಡಬೇಕು. ಪ್ರತಿದಿನ ಈ ಘಟಕದಲ್ಲಿ 8000 ಲಿಟರ್ ನೀರು ಶುದ್ಧವಾಗುತ್ತದೆ. ಒಂದು ರೂಪಾಯಿಗೆ ಹತ್ತು ಲಿಟರ್ ನೀರು ಸಿಗುತ್ತದೆ ಎಂದರು. ಮುಂದಿನ ದಿನದಲ್ಲಿ ರೂ 20 ಕೋಟಿ ವೆಚ್ಚದಲ್ಲಿ ಮರವಂತೆ, ನಾವುಂದ, ಕಿರಿಮಂಜೇಶ್ವರ, ಹೇರೂರು ಗ್ರಾಮಗಳನ್ನು ಒಳಗೊಂಡ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ವಿದ್ಯಾರ್ಥಿಗಳು ಸೇವಾ ಮನೋಭಾವನೆಯಿಂದ ಸತ್ಕಾರ್ಯದಲ್ಲಿ ತೊಡಗಿಸಿಕೊಂಡಾಗ ಸಾಮಾಜಿಕ ಜವಾಬ್ದಾರಿ ಮತ್ತು ನಾಯಕತ್ವದ ಗುಣಗಳು ಬೆಳೆಯಲು ಸಾಧ್ಯ. ಪಠ್ಯೇತರ ಚಟುವಟಿಕೆಗಳಿಂದ ದೈಹಿಕ ಮತ್ತು ಮಾನಸಿಕ ಚಟುವಟಿಕೆಗಳು ಹೆಚ್ಚಾದಂತೆ ಮನೋಬಲ ವೃದ್ಧಿಸುತ್ತದೆ. ಸೇವೆಯಲ್ಲಿ ಸಕ್ರೀಯರಾದಾಗ ಒತ್ತಡದ ಜೀವನದಿಂದ ಮುಕ್ತರಾಗಿ ಪ್ರೀತಿ ಸಹಬಾಳ್ವೆಯಿಂದ ಉತ್ತಮ ಜೀವನ ನಿರ್ವಹಿಸಲು ಸಾದ್ಯ ಎಂದು ಶಾಸಕ ಕೆ. ಗೋಪಾಲ ಪೂಜಾರಿ ಹೇಳಿದರು. ಬೈಂದೂರು ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ ೨೦೧೬-೧೭ನೇ ಸಾಲಿನ ರಾಷ್ಟ್ರೀಯ ಸೇವಾ ಯೋಜನಾ ಘಟಕ ಉದ್ಘಾಟಿಸಿ ಮಾತನಾಡಿದರು. ವಿದ್ಯಾರ್ಥಿಗಳು ಬದುಕಿನಲ್ಲಿ ಶಿಸ್ತು ಮತ್ತು ನಾಯಕತ್ವದ ಗುಣಗಳನ್ನು ಬೆಳೆಸಿಕೊಳ್ಳಬೇಕು. ಶಿಕ್ಷಣವು ಸಮಗ್ರ ವ್ಯಕ್ತಿತ್ವವನ್ನು ರೂಪಿಸುವ ಪ್ರಕ್ರೀಯೆ ಎಂಬುದನ್ನು ಸಾಧಿಸಿ ತೋರಿಸಬೇಕು ಎಂದ ಶಾಸಕರು, ಎನ್‌ಎಸ್‌ಎಸ್‌ನಿಂದ ಪಡೆದ ಉತ್ತಮ ಅನುಭವಗಳು ನಿಮ್ಮ ಭವಿಷ್ಯದ ಬಾಳಿಗೆ ದಾರಿದೀಪವಾಗಲಿ ಎಂದು ಹಾರೈಸಿದರು. ಕಾಲೇಜಿನ ಪ್ರಾಂಶುಪಾಲ ಪಾಲಾಕ್ಷ ಟಿ. ಅಧ್ಯಕ್ಷತೆವಹಿಸಿದ್ದರು. ಮಣಿಪಾಲ ಎಂಐಟಿ ಪ್ರೊಫೆಸರ್ ಬಾಲಕೃಷ್ಣ ಮದ್ದೋಡಿ, ಸಿಕ್ಕಿಂ ಮಣಿಪಾಲ ವಿಶ್ವವಿದ್ಯಾಲಯದ ಪ್ರೊಫೆಸರ್ ಕೆನ್ಯೂಟ್ ಎಫ್. ರೊಡ್ರಿಗಸ್ ಎನ್‌ಎಸ್‌ಎಸ್‌ನ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಶುಭದಾ ಆಂಗ್ಲ ಮಾಧ್ಯಮ ಶಾಲೆ ಕಿರಿಮಂಜೇಶ್ವರ ಇಲ್ಲಿಯ ವಿದ್ಯಾರ್ಥಿಗಳು ಸ.ಪ್ರಾ.ಶಾಲೆ ಕಿರಿಮಂಜೇಶ್ವರದಲ್ಲಿ ನಡೆದ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿಯಲ್ಲಿ 39 ಸ್ಪರ್ಧಾಳುಗಳು ಪ್ರಥಮ ಸ್ಥಾನವನ್ನು, 32 ದ್ವಿತೀಯ ಹಾಗೂ 6 ತೃತೀಯ ಸ್ಥಾನವನ್ನು ಪಡೆಯುವುದರೊಂದಿಗೆ ಸಮಗ್ರ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿರುತ್ತಾರೆ. ಅಲ್ಲದೇ ಪ್ರಥಮ ಸ್ಥಾನವನ್ನು ಪಡೆದ 39 ವಿದ್ಯಾರ್ಥಿಗಳು ವಲಯ ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ. ಶಾಲೆಗೆ ಕೀರ್ತಿತಂದ ಈ ಮಕ್ಕಳಿಗೆ ಶಾಲಾ ಸಂಸ್ಥಾಪಕರಾದ ಡಾ|| ಎನ್.ಕೆ.ಬಿಲ್ಲವ, ಶಾಲಾ ಮುಖ್ಯೋಪಾಧ್ಯಾಯರಾದ ಪ್ರವೀಣ್ ಕುಮಾರ್ ಕೆ.ಪಿ, ಶಾಲಾ ಆಡಳಿತ ಮಂಡಳಿ ಮತ್ತು ಶಿಕ್ಷಕವೃಂದದವರು ಅಭಿನಂದನೆ ಸಲ್ಲಿಸಿದ್ದಾರೆ.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ/ಬೈಂದೂರು: ದೇಶಾದ್ಯಂತ ಅಖಿಲ ಭಾರತ ಕಾರ್ಮಿಕ ಸಂಘಟನೆಗಳು ಕರೆ ನೀಡಿದ್ದ ಮುಷ್ಕರಕ್ಕೆ ವ್ಯಾಪಕ ಬೆಂಬಲ ವ್ಯಕ್ತವಾಗಿದ್ದು, ಕುಂದಾಪುರ ತಾಲೂಕಿನಲ್ಲಿಯೂ ಬಂದ್ ಬಹುಪಾಲು ಯಶಸ್ವಿಯಾಗಿದೆ. ಕುಂದಾಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಹಲವೆಡೆ ಮುಷ್ಕರಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದರೆ, ಬೈಂದೂರು ವಿಧಾನಸಭಾ ವ್ಯಾಪ್ತಿಯಲ್ಲಿ ವಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ದೇಶದ 11 ವಿವಿಧ ಕಾರ್ಮಿಕ ಸಂಘಟನೆಗಳು 17 ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಬಂದ್‌ಗೆ ಕರೆನೀಡಿದ್ದು, ಬೆಳಿಗ್ಗಿನಿಂದಲೇ ಮುಷ್ಕರಕ್ಕೆ ಪೂರಕ ವಾತಾವರಣ ಉಂಟಾಗಿದ್ದು, ಪ್ರಯಾಣಿಕರು ಮಾತ್ರ ಪರದಾಡುವಂತಾಯಿತು. ಬಸ್ಸು, ಆಟೋವಿಲ್ಲ: ಮುಷ್ಕರಕ್ಕೆ ಖಾಸಗಿ ಬಸ್, ಟೆಂಪೊ ಮಾಲಿಕ ಚಾಲಕರು ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದ್ದು ಬೆಳಿಗ್ಗಿನಿಂದ ಯಾವುದೇ ಬಸ್ಸುಗಳು ಬಿದಿಗಿಳಿಯಲಿಲ್ಲ. ಕುಂದಾಪುರ ನಗರ ಭಾಗದಲ್ಲಿ ಆಟೋ ಚಾಲಕರೂ ಮುಷ್ಕರಕ್ಕೆ ಬೆಂಬಲ ಸೂಚಿಸಿದ್ದರಿಂದ ಆಟೋ ಸಂಚಾರವೂ ಇರಲಿಲ್ಲ. ಬೈಂದೂರು ಭಾಗಗಳಲ್ಲಿ ಆಟೋ ಸಂಚಾರವಿತ್ತು. ಖಾಸಗಿ ವಾಹನಗಳು, ದ್ವಿಚಕ್ರ ವಾಹನಗಳು, ವಿರಳ ಸಂಖ್ಯೆಯಲ್ಲಿ ಲಾರಿಗಳು ಸಂಚರಿಸುತ್ತಿದ್ದುದು ಕಂಡುಬಂತು. ರಾಷ್ಟ್ರೀಯ ಹೆದ್ದಾರಿಯಲ್ಲಿ ಸರಕಾರಿ ಬಸ್ಸುಗಳ ಸಂಚಾರ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಶುಭದಾ ಆಂಗ್ಲ ಮಾಧ್ಯಮ ಶಾಲೆ ಕಿರಿಮಂಜೇಶ್ವರದಲ್ಲಿ ’ಶಿಕ್ಷಕರು ಮತ್ತು ರಕ್ಷಕರ ನಡುವಿನ ಭಾಂದವ್ಯ ಹೆಚ್ಚಿಸುವ ಉದ್ದೇಶದಿಂದ ಇತ್ತೀಚಿಗೆ ’ಶಿಕ್ಷಕ- ರಕ್ಷಕ’ ಸಭೆಯನ್ನು ಕರೆಯಲಾಯಿತು. ಪೋಷಕರು ಶಾಲೆಗೆ ಭೇಟಿ ನೀಡಿ ತಮ್ಮ ಮಕ್ಕಳ ಸರ್ವತೋಮುಖ ಬೆಳವಣಿಗೆಯ ಬಗ್ಗೆ ಶಿಕ್ಷಕರೊಂದಿಗೆ ಚರ್ಚಿಸಿದರು. ಈ ಸಂದರ್ಭದಲ್ಲಿ ಶಾಲಾ ಸಂಸ್ಥಾಪಕರಾದ ಡಾ. ಎನ್. ಕೆ. ಬಿಲ್ಲವ, ಆಡಳಿತ ಮಂಡಳಿಯ ಬಿ.ಎ.ರಝಾಕ್ ಮತ್ತು ಶಾಲಾ ಮುಖ್ಯೋಪಾಧ್ಯಾಯರಾದ ಪ್ರವೀಣ್ ಕುಮಾರ್ ಕೆ.ಪಿ. ಉಪಸ್ಥಿತರಿದ್ದರು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ ಕುಂದಾಪುರ: ಹಿಂದಿನ ಸಾಮಾನ್ಯ ಸಭೆಯನ್ನು ರದ್ದು ಮಾಡಲಾಗಿತ್ತೇ? ವಿಶೇಷ ಸಾಮಾನ್ಯ ಕರೆಯುವ ಬಗ್ಗೆ ಪತ್ರ ಬರೆದಿದ್ದರೂ ಸ್ಪಂದಿಸಿಲ್ಲ ಏಕೆ? ಹೀಗೆ ವಿರೋಧ ಪಕ್ಷದ ಪ್ರಶ್ನೆಯಿಂದ ಆರಂಭಗೊಂಡ ಗದ್ದಲ ಸಭೆಯ ಅರ್ಧ ಅವಧಿಯನ್ನು ನುಂಗಿಹಾಕಿತ್ತು. ಕೆಲವು ಸದಸ್ಯರು ತಮ್ಮ ಘನತೆಯನ್ನೂ ಮರೆತು ತೀರಾ ವೈಯಕ್ತಿಕವಾಗಿ ನಿಂದಿಸಿಕೊಳ್ಳುವ ಪ್ರಸಂಗವೂ ನಡೆದು ಅಭಿವೃದ್ಧಿಯ ಚರ್ಚೆಯ ಹೊರತಾಗಿ ವೈಯಕ್ತಿಕ ಸಮರ ಏರ್ಪಟ್ಟಿತ್ತು. ಇದು ಕುಂದಾಪುರ ಪುರಸಭೆ ಡಾ.ವಿ.ಎಸ್.ಆಚಾರ್ಯ ಸಭಾಂಗಣದಲ್ಲಿ ನಡೆದ ಸಾಮಾನ್ಯ ಸಭೆಯ ಪ್ರಮುಖ ಚಿತ್ರಣ. ಹಿಂದಿನ ಸಭೆ ನಂತರ ವಿಶೇಷ ಸಭೆ ಕರೆಯುವಂತೆ ಪತ್ರಕೊಟ್ಟಿದ್ದರೂ ಅದಕ್ಕೆ ಉತ್ತರ ನೀಡಿಲ್ಲ. ವಿರೋಧ ಪಕ್ಷದ ಮಾತಿಗೆ ಕಿಮ್ಮತ್ತಿಲ್ಲವಾ. ನಮ್ಮ ಪ್ರಶ್ನೆಗೆ ಉತ್ತರ ಬೇಕು ಎಂದು ಚಂದ್ರಶೇಖರ ಖಾರ್ವಿ, ಶ್ರೀಧರ ಶೇರಿಗಾರ್ ರವಿಕಲಾ ಗಣೇಶ್ ಶೇರಿಗಾರ್, ಪ್ರಭಾಕರ ಕೋಡಿ ಒತ್ತಾಯಿಸಿದರು. ಮೂರು ದಿನದೊಳಗೆ ಸದಸ್ಯರ ಪ್ರಶ್ನೆಗ ಉತ್ತರ ಕೊಡುತ್ತೇನೆ ಎಂದು ಅಧ್ಯಕ್ಷರು ಭರವಸೆ ನೀಡಿದರಾದರೂ ಈಗಲೇ ಹಿಂಬರಹ ನೀಡಬೇಕೆಂದು ಪಟ್ಟು ಹಿಡಿದರು. ಫೆರ್ರಿ ವಾರ್ಡ್…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ನವೀಕೃತ ಶ್ರೀ ವ್ಯಾಸರಾಜ ಮಠಕ್ಕೆ ವಿಧಾನ ಪರಿಷತ್ ಮಾಜಿ ಸಭಾಪತಿ ಆರ್.ವಿ ಸುದರ್ಶನ್ ಮತ್ತು ಕಾರ್ಕಳ ಶಾಸಕ ಸುನೀಲ್ ಕುಮಾರ್ ಬೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು. ಇದೇ ಸಂದರ್ಭದಲ್ಲಿ ತಾಲೂಕು ಗಾಣಿಗ ಸೇವಾ ಸಂಘದ ಅಧ್ಯಕ್ಷ ಶ್ರೀನಿವಾಸ ಗಾಣಿಗ, ಪ್ರಧಾನ ಕಾರ್ಯದರ್ಶಿ ಶಿವನಾಂದ ಗಾಣಿಗ ಗಂಗೊಳ್ಳಿ, ಕೋಶಧಿಕಾರಿ ಶಂಕರನಾರಾಯಣ ಗಾಣಿಗ ಬೀಜಾಡಿ, ಸಮಾಜದ ಮುಖಂಡರಾದ ಕೊಗ್ಗ ಮಾಸ್ಟರ್, ಸುಬ್ರಮಣ್ಯ ಗಾಣಿಗ, ನಾರಾಯಣ ಗಾಣಿಗ, ಪ್ರಭಾಕರ್ ಬಿ ಕುಂಭಾಸಿ, ಬಸ್ರೂರು ಗ್ರಾಮ ಪಂಚಾಯತ್ ಸದಸ್ಯ ನಾಗರಾಜ ಗಾಣಿಗ, ಕೋಟೇಶ್ವರ ಗಾಣಿಗ ಯುವ ಸಂಘಟನೆ ಅಧ್ಯಕ್ಷ ಬಿ.ಜಿ.ನಾಗರಾಜ ಗಾಣಿಗ, ಬಸ್ರೂರು ಗಾಣಿಗ ಯುವ ಸಂಘಟನೆ ಅಧ್ಯಕ್ಷ ರಾಘವೇಂದ್ರ ಗಾಣಿಗ, ರಾಜೇಶ್ ಬಸ್ರೂರು ಮೊದಲಾದವರೂ ಉಪಸ್ಥಿತರಿದ್ದರು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕೋಟ: ಸಾಲಿಗ್ರಾಮ ಪಟ್ಟಣ ಪಂಚಾಯಿತಿ ಸಭಾಂಗಣದಲ್ಲಿ ನಡೆದ ಮಾಸಿಕ ಸಭೆಯು ಅಕ್ಷರಶಃ ಹಾದಿ ರಂಪವಾಗಿ ಮಾರ್ಪಟ್ಟಿತ್ತು. ಹಿಂದಿನಿಂದಲೂ ವೈಯಕ್ತಿಕವಾದ ವಿಚಾರಗಳ ಚರ್ಚೆಗಳಿಗೆ ಸಾಕ್ಷಿಯಾಗುತ್ತಿದ್ದ ಮಾಸಿಕ ಸಭೆಯಲ್ಲಿ, ಮಂಗಳವಾರದಂದು ಸದಸ್ಯರು ತಮ್ಮ ಎಲ್ಲೆ ಮೀರಿ ವರ್ತಿಸಿದ್ದರು. ಸಾರ್ವಜನಿಕರ ಸಮಸ್ಯೆಗಳಿಗೆ ಧ್ವನಿಯಾಗಬೇಕಿದ್ದ ಸಭೆಯಲ್ಲಿ ಮಾಜಿ ಉಪಾಧ್ಯಕ್ಷೆ ನೀಡಿದ ಮಹಿಳಾ ದೌರ್ಜನ್ಯದ ದೂರಿನ ವಿಚಾರ ಪ್ರಸ್ತಾಪವಾಗಿ ಸಾಮಾನ್ಯ ಸಬೇ ರಣರಂಗವಾಯಿತು. ಹಿರಿಯ ಸದಸ್ಯರು ಸಭೆಯನ್ನು ಶಾಂತಗೊಳಿಸುವ ಪ್ರಯತ್ನ ಮಾಡಿದರೂ, ವೈಯಕ್ತಿಕ ಕೆಸರೆರಚಾಟದಲ್ಲಿಯೇ ಸಭೆ ಮುಂದುವರಿತು, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿಯವರನ್ನು ಮೂಖ ಪ್ರೇಕ್ಷಕರನ್ನಾಗಿಸಿತು. ಮಧ್ಯಾಹ್ನ ಸಾಲಿಗ್ರಾಮ ಪಟ್ಟಣ ಪಂಚಾಯಿತಿ ಅಧ್ಯಕ್ಷೆ ವಸುಮತಿ ನಾಯಿರಿ ಅವರ ಅಧ್ಯಕ್ಷತೆಯಲ್ಲಿ ಸಾಮಾನ್ಯ ಸಭೆ ನಡೆಯಿತು. ಸಭೆಯ ಪ್ರಾರಂಭದಲ್ಲಿ ಪಟ್ಟಣ ಪಂಚಾಯಿತಿಯಲ್ಲಿ ಹೊಂಡ, ಕೆಸರು ತುಂಬಿರುವ ರಸ್ತೆಗಳಿಗೆ ಸಭೆಯ ಗಮನಕ್ಕೆ ತರದೆ, ಸದಸ್ಯರ ಗಮನಕ್ಕೂ ತರದೆ ಮಣ್ಣು ತುಂಬಿಸುವ ಕಾಮಗಾರಿ ನಡೆಸಿ ಘಟನೋತ್ತರ ಮಂಜೂರಾತಿ ಪಡೆಯುವ ವಿಚಾರ ಪ್ರಸ್ತಾಪವಾಯಿತು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಹಿರಿಯ ಸದಸ್ಯ ಶ್ರೀನಿವಾಸ…

Read More