ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ನವೀಕೃತ ಶ್ರೀ ವ್ಯಾಸರಾಜ ಮಠಕ್ಕೆ ವಿಧಾನ ಪರಿಷತ್ ಮಾಜಿ ಸಭಾಪತಿ ಆರ್.ವಿ ಸುದರ್ಶನ್ ಮತ್ತು ಕಾರ್ಕಳ ಶಾಸಕ ಸುನೀಲ್ ಕುಮಾರ್ ಬೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು. ಇದೇ ಸಂದರ್ಭದಲ್ಲಿ ತಾಲೂಕು ಗಾಣಿಗ ಸೇವಾ ಸಂಘದ ಅಧ್ಯಕ್ಷ ಶ್ರೀನಿವಾಸ ಗಾಣಿಗ, ಪ್ರಧಾನ ಕಾರ್ಯದರ್ಶಿ ಶಿವನಾಂದ ಗಾಣಿಗ ಗಂಗೊಳ್ಳಿ, ಕೋಶಧಿಕಾರಿ ಶಂಕರನಾರಾಯಣ ಗಾಣಿಗ ಬೀಜಾಡಿ, ಸಮಾಜದ ಮುಖಂಡರಾದ ಕೊಗ್ಗ ಮಾಸ್ಟರ್, ಸುಬ್ರಮಣ್ಯ ಗಾಣಿಗ, ನಾರಾಯಣ ಗಾಣಿಗ, ಪ್ರಭಾಕರ್ ಬಿ ಕುಂಭಾಸಿ, ಬಸ್ರೂರು ಗ್ರಾಮ ಪಂಚಾಯತ್ ಸದಸ್ಯ ನಾಗರಾಜ ಗಾಣಿಗ, ಕೋಟೇಶ್ವರ ಗಾಣಿಗ ಯುವ ಸಂಘಟನೆ ಅಧ್ಯಕ್ಷ ಬಿ.ಜಿ.ನಾಗರಾಜ ಗಾಣಿಗ, ಬಸ್ರೂರು ಗಾಣಿಗ ಯುವ ಸಂಘಟನೆ ಅಧ್ಯಕ್ಷ ರಾಘವೇಂದ್ರ ಗಾಣಿಗ, ರಾಜೇಶ್ ಬಸ್ರೂರು ಮೊದಲಾದವರೂ ಉಪಸ್ಥಿತರಿದ್ದರು.