ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಇಲ್ಲಿನ ಭಂಡಾರ್‌ಕಾರ‍್ಸ್ ಕಾಲೇಜು ಶಿಕ್ಷಣ, ಸಾಹಿತ್ಯ ಹಾಗೂ ಸಾಂಸ್ಕೃತಿಕ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವ ಡಾ. ಎಚ್. ಎಸ್. ಶಾಂತಾರಾಮ್ ಅವರ ಹೆಸರಿನಲ್ಲಿ ಕಳೆದ 5 ವರ್ಷಗಳಿಂದ ಕನ್ನಡದ ಅತ್ಯುತ್ತಮ ಕೃತಿಗೆ ನೀಡಲಾಗುತ್ತಿರುವ ಡಾ. ಹೆಚ್.ಶಾಂತಾರಾಮ್ ಸಾಹಿತ್ಯ ಪ್ರಶಸ್ತಿ ಈ ಭಾರಿ ಲೇಖಕ ವೈ.ಎಸ್ ಹರಗಿ ಅವರ ’ಉರಿವ ಜಲ’ ಕಾದಂಬರಿಗೆ ದೊರೆತಿದೆ. ಕನ್ನಡದ ವಿಮರ್ಶಕರಾದ ಡಾ.ಆಶಾದೇವಿ, ಬೆಂಗಳೂರು, ಡಾ.ರಾಜೇಂದ್ರ ಚೆನ್ನಿ, ಶಿವಮೊಗ್ಗ, ಡಾ.ಎಚ್.ಎಸ್. ರಾಘವೇಂದ್ರ ರಾವ್ ಬೆಂಗಳೂರು ಇವರು ಪ್ರಶಸ್ತಿ ಆಯ್ಕೆ ಸಮಿತಿಯ ನಿರ್ಣಾಯಕರಾಗಿದ್ದರು. ಪ್ರಶಸ್ತಿಯು ಹದಿನೈದು ಸಾವಿರ ರೂಪಾಯಿ ನಗದು ಮತ್ತು ಬೆಳ್ಳಿಯ ಪ್ರಶಸ್ತಿ ಫಲಕಗಳನ್ನೊಳಗೊಂಡಿದೆ. ಆಗಸ್ಟ್ ೧೩ರಂದು ಕುಂದಾಪುರ ಭಂಡಾರ್ಕಾರ್ಸ್ ಕಾಲೇಜಿನಲ್ಲಿ ನಡೆಯುವ ಸಾಹಿತ್ಯ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದೆಂದು ಸಮಿತಿಯ ಪ್ರಕಟಣೆ ತಿಳಿಸಿದೆ.
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಕರಾವಳಿಯ ಬಹುದೊಡ್ಡ ಹಬ್ಬವಾದ ನಾಗರಪಂಚಮಿಯನ್ನು ಕುಂದಾಪುರ ತಾಲೂಕಿನೆಲ್ಲೆಡೆ ಸಂಭ್ರಮದಿಂದ ಆಚರಿಸಲಾಯಿತು. ಬೆಳಿಗ್ಗೆನಿಂದಲೇ ನಾಗಬನ, ಹಾಗೂ ತಾಲೂಕಿನ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಆಗಮಿಸಿದ ಭಕ್ತಾದಿಗಳು ನಾಗನಿಗೆ ಹಾಲು, ಏಳನೀರು, ಕೇದಿಗೆ ಹೂವನ್ನು ಸಮರ್ಪಿಸಿ ಪುನೀತರಾದರು. ತಾಲೂಕಿನ ಪ್ರಸಿದ್ಧ ದೇವಾಲಯವಾದ ಗುಡ್ಡಮ್ಮಾಡಿ, ಕಾಳಾವರ, ಉಳ್ಳೂರು ಕಾರ್ತಿಕೇಯ ದೇವಸ್ಥಾನ ಸೇರಿದಂತೆ ಪ್ರಮುಖ ದೇವಾಲಯಗಳಲ್ಲಿ ವಿಶೇಷ ಪೂಜಾವಿಧಿಗಳು ನೆರವೇರಿದರು. ಸೇನಾಪುರ ಗ್ರಾಮದ ಗುಡ್ಡಾಮ್ಮಾಡಿಯಲ್ಲಿ ಹಾಲುಹಿಟ್ಟು ಸೇವೆ, ಅಭಿಷೇಕ ಹಾಗೂ ವಿಶೇಷ ಪೂಜೆ ನಡೆಯಿತು. ಭಟ್ಕಳ, ಬೈಂದೂರು, ಕುಂದಾಪುರದಿಂದ ನೂರಾರು ಭಕ್ತಾದಿಗಳು ಆಗಮಿಸಿ ದೇವರ ಕೃಪೆಗೆ ಪಾತ್ರರಾದರು. ಭಕ್ತಾದಿಗಳಿಗೆ ನೈವೇದ್ಯದ ಪ್ರಸಾದ ವಿತರಣೆ ಮಾಡುವ ವ್ಯವಸ್ಥೆ ಮಾಡಲಾಗಿತ್ತು. ಕುಂದಾಪ್ರ ಡಾಟ್ ಕಾಂ. ಬೈಂದೂರಿನ ಸೋಮೇಶ್ವರದಲ್ಲಿನ ದೇವಸ್ಥಾನದಲ್ಲಿನ ನಾಗಬನ, ಕುಂದಾಪುರದ ಭಟ್ರಹಾಡಿಯ ನಾಗಬನ, ರೋಯಲ್ ಸಭಾಭವನದ ಬಳಿಯ ನಾಗಬನ ಸೇರಿದಂತೆ ಎಲ್ಲಾ ನಾಗಬನದಲ್ಲಿಯೂ ನಾಗನಿಗೆ ವಿಶೇಷಪೂಜೆ ಸಲ್ಲಿಸಲಾಯಿತು.
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಅವೈಜ್ಞಾನಿಕವಾದ ಹೆಚ್ಚುವರಿ ಶಿಕ್ಷಕರ ವರ್ಗಾವಣೆಯಿಂದ ಮಕ್ಕಳ ಶಿಕ್ಷಣದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಯಾವುದೇ ಕಾರಣಕ್ಕೂ ತೆಂಕೊಡಿಗೆ ಶಾಲೆಯಲ್ಲಿ ಗುರುತಿಸಿದ ಹೆಚ್ಚುವರಿ ಶಿಕ್ಷಕರನ್ನು ಈ ಮಧ್ಯಂತರ ಅವಧಿಯಲ್ಲಿ ವರ್ಗಾವಣೆ ಮಾಡಬಾರದೆಂದು ಆಗ್ರಹಿಸಿ ಪೋಷಕರು ಶನಿವಾರ ಪ್ರತಿಭಟನೆ ನಡೆಸಿದ್ದಾರೆ. ವಂಡ್ಸೆ ಗ್ರಾಮ ಪಂಚಾಯತ್ ವ್ಯಾಪ್ತಿಯ ತೀರಾ ಕುಗ್ರಾಮವಾದ ತೆಂಕೊಡಿಗೆ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ೪೦ ವಿದ್ಯಾರ್ಥಿಗಳು ವಿದ್ಯಾಬ್ಯಾಸ ಮಾಡುತ್ತಿದ್ದು, ಇಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿರುವ ಶಂಕರ ಶೆಟ್ಟಿ ಅವರು ೧೨ ವರ್ಷದಿಂದ ಶಾಲೆಯನ್ನು ಉಳಿಸಿ ಬೆಳೆಸುವಲ್ಲಿ ಶ್ರಮಿಸುತ್ತಿದ್ದಾರೆ. ವಿದ್ಯಾರ್ಥಿಗಳಿಗೂ ಕೂಡಾ ನೆಚ್ಚಿನಶಿಕ್ಷಕರಾಗಿರುವ ಇವರ ವರ್ಗಾವಣೆಯನ್ನು ತಡೆ ಹಿಡಿಯಬೇಕು ಎಂದು ಪೋಷಕರು, ವಿದ್ಯಾರ್ಥಿಗಳು ಒತ್ತಾಯಿಸಿದ್ದಾರೆ. ಬೆಳಿಗ್ಗೆಯಿಂದಲೇ ಪ್ರತಿಭಟನೆ ಆರಂಭವಾದರೂ ಸಂಬಂಧಿಸಿದ ಶಿಕ್ಷಣ ಇಲಾಖೆಯಿಂದ ಯಾವ ಅಧಿಕಾರಿಯೂ ಬಾರದ ಹಿನ್ನೆಲೆಯನ್ನು ಸೋಮವಾರ ಮತ್ತೆ ಪ್ರತಿಭಟನೆ ನಡೆಸುವುದೆಂದು ತೀರ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಮನವಿಯನ್ನು ತಾ.ಪಂ.ಸದಸ್ಯ ಉದಯ ಜಿ.ಪೂಜಾರಿ ಹಾಗೂ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಉದಯ ಕುಮಾರ್ ಶೆಟ್ಟಿ ಅಡಿಕೆಕೊಡ್ಲು ಅವರಿಗೆ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ನಾಡ ಪಡುಕೋಣೆಗೆ ಪ್ರತ್ಯೇಕ ಸರ್ಕಾರಿ ಬಸ್‌ಗಳನ್ನು ಓಡಿಸಿ ಜನಸಾಮಾನ್ಯರಿಗೆ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಮಾಡಬೇಕು ಹಾಗೂ ಮಾರಸ್ವಾಮಿಯಲ್ಲಿ ಖಾಸಗಿ ಎಕ್ಸ್‌ಪ್ರೆಸ್ ಬಸ್‌ಗಳನ್ನು ಹಾಗೂ ಸರ್ಕಾರಿ ಬಸ್‌ಗಳನ್ನು ನಿಲುಗಡೆ ಮಾಡಲು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಪಡುಕೋಣೆಯಲ್ಲಿ ಸಹಿ ಸಂಗ್ರಹ ಚಳುವಳಿಯನ್ನು ಆರಂಭಿಸಲಾಯಿತು. ಡಿವೈಎಫ್‌ಐನ ಮಾಜಿ ಮುಖಂಡರಾದ ರಾಜೀವ ಪಡುಕೋಣೆ ಸಹಿ ಸಂಗ್ರಹ ಚಳುವಳಿಯನ್ನು ಉದ್ಘಾಟಿಸಿದರು. ಡಿವೈಎಫ್‌ಐನ ತಾಲೂಕು ಉಪಾಧ್ಯಕ್ಷರಾದ ಸುರೇಶ ಕಲ್ಲಾಗರ, ಡಿವೈಎಫ್‌ಐನ ಅಧ್ಯಕ್ಷರಾದ ಸುಬ್ರಹ್ಮಣ್ಯ ಆಚಾರ್ ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ರಕ್ತದಾನದ ಮಾಡುವ ಬಗೆಗೆ ಆತಂಕಗೊಳ್ಳಬೇಕಾಗಿಲ್ಲ. ವ್ಯಕ್ತಿಯೋರ್ವ ನಿಯಮಿತವಾಗಿ ರಕ್ತದಾನ ಮಾಡಿದರೇ ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಸಾಧ್ಯವಿದೆ. ಹಾಗಾಗಿ ಸ್ವಯಂ ಪ್ರೇರಿತರಾಗಿ ರಕ್ತದಾನ ಮಾಡಿ, ಜೀವ ಉಳಿಸುವ ಕಾರ್ಯಕ್ಕೆ ಮುಂದಾಗಬೇಕಿದೆ ಎಂದು ಕುಂದಾಪುರ ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಅಧ್ಯಕ್ಷ ಜಯಕರ್ ಶೆಟ್ಟಿ ಹೇಳಿದರು. ಅವರು ಕುಂದಾಪುರ ಬಾರ್ ಅಸೋಸಿಯೇಷನ್ ನೇತೃತ್ವದಲ್ಲಿ ಕುಂದಾಪುರ ಇವರ ಪ್ರಾಯೋಜಕತ್ವದಲ್ಲಿ ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಕುಂದಾಪುರ ಇವರ ಸಹಕಾರದೊಂದಿಗೆ ಜರುಗಿದ ವಕೀಲರ ರಕ್ತದಾನ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು. ಕುಂದಾಪುರದ ವಕೀಲ ಸಂಘದ ಅಧ್ಯಕ್ಷ ಬನ್ನಾಡಿ ಸೋಮನಾಥ ಹೆಗ್ಡೆ ಮಾತನಾಡಿ ಎಲ್ಲಾ ದಾನಗಳಿಗಿಂತ ರಕ್ತದಾನ ಅತ್ಯಂತ ಶ್ರೇಷ್ಠ ದಾನವಾಗಿದೆ. ಆರೋಗ್ಯವಂತ ಮನುಷ್ಯನ ದೇಹದಲ್ಲಿ 5,000 ಮಿ.ಲಿ ರಕ್ತವಿದ್ದು, ರಕ್ತದಾನ ಮಾಡುವವರಿಂದ ಕೇವಲ 350 ಮಿ.ಲಿ ರಕ್ತವನ್ನು ಮಾತ್ರ ಪಡೆಯಲಾಗುತ್ತದೆ ಎಂದರು. ಕುಂದಾಪುರದ ವಕೀಲ ಸಂಘದ ಪ್ರಧಾನ ಕಾರ್ಯದರ್ಶಿ ಎಚ್. ರವಿಶ್ಚಂದ್ರ ಶೆಟ್ಟಿ, ಕುಂದಾಪುರ ರೆಡ್ ಕ್ರಾಸ್ ಸಂಸ್ಥೆಯ ಉಪಾಧ್ಯಕ್ಷ ಡಾ.…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ತಾಲೂಕಿನ ನಾಡ ಗ್ರಾಮದಿಂದ ವಿವಿಧೆಡೆಗಳಿಗೆ ಸಂಧಿಸುವ ರಸ್ತೆಗಳು ಹದಗೆಟ್ಟಿದ್ದು ಶೀಘ್ರವೇ ದುರಸ್ತಿಗೊಳಿಸುವಂತೆ ಆಗ್ರಹಿಸಿ ನಾಡ ಪೇಟೆಯಲ್ಲಿ ನಾಗರೀಕರು ಪ್ರತಿಭಟನೆ ನಡೆಸಿದರು. ನಾಡ ಗ್ರಾ.ಪಂ ವ್ಯಾಪ್ತಿಯ ಮೂಲಕ ಕೋಣ್ಕಿ, ಬಡಾಕೆರೆ, ಗುಡ್ಡೆ ಹೋಟೆಲ್ ಹಾಗೂ ಗುಜ್ಜಾಡಿಗೆ ಸೇರುವ ರಸ್ತೆಗಳು ತೀರಾ ದುಸ್ತರವಾಗಿದ್ದು ಸಂಚಾರಕ್ಕೆ ತೋಡಕಾಗುತ್ತಿದೆ. ಈ ಭಾಗದಲ್ಲಿ ಸುಮಾರು 600ಕ್ಕೂ ಅಧಿಕ ಮನೆಗಳಿದ್ದು ಜನರು ಹೊಂಡಗುಂಡಿಗಳಿಂದ ಕೂಡಿದ ರಸ್ತೆಯಲ್ಲಿ ತಿರುಗಾಡುವುದು ಕಷ್ಟಸಾಧ್ಯವಾಗುತ್ತಿದೆ. ಪ್ರತಿನಿತ್ಯ ನೂರಾರು ವಿದ್ಯಾರ್ಥಿಗಳ ಇದೇ ಮಾರ್ಗವಾಗಿ ಶಾಲಾ ಕಾಲೇಜಿಗೆ ತೆರಳುತ್ತಿದ್ದು ಕೆಲವು ಮಾರ್ಗಗಳಲ್ಲಿ ಬಸ್ ವ್ಯವಸ್ಥೆಯೂ ಇಲ್ಲದಿರುವುದರಿಂದ ತೊಂದರೆ ಅನುಭವಿಸುತ್ತಿದ್ದಾರೆ. ಕೂಡಲೇ ಜನಪ್ರತಿನಿಧಿಗಳು ಹಾಗೂ ಸಂಬಂಧಿಸಿದ ಇಲಾಖೆ ಸಮಸ್ಯೆಯ ಬಗೆಗೆ ಗಮನ ಹರಿಸಬೇಕೆಂದು ಪ್ರತಿಭಟನಾ ನಿರತರ ಪರವಾಗಿ ಮಾತನಾಡಿದ ಮಾಜಿ ಗ್ರಾಪಂ ಸದಸ್ಯ ಸತೀಶ್ ನಾಯ್ಕ್ ಆಗ್ರಹಿಸಿದರು. ಸ್ಥಳಕ್ಕಾಗಮಿಸಿದ ಬೈಂದೂರು ಶಾಸಕ ಗೋಪಾಲ ಪೂಜಾರಿ ಪ್ರತಿಭಟನಾಕಾರರನ್ನುಉದ್ದೇಶಿಸಿ ಮಾತನಾಡಿ ರಸ್ತೆಗಳ ದುರಸ್ತಿಯ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚಿಸಿ ಕ್ರಮಕೈಗೊಳ್ಳುವ ಭರವಸೆ ನೀಡಿದರು. ಪ್ರತಿಭಟನಾಕಾರರು ಕುಂದಾಪುರ ತಹಶೀಲ್ದಾರ್…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಸಾಹಿತ್ಯಿಕ ಬರವಣಿಗೆ, ಓದು, ಕ್ರಿಯಾಚರಣೆಗೆ ಸಂಬಂಧಿಸಿದ್ದಲ್ಲ. ಬದಲಾಗಿ ಅದು ಹೊಸದೊಂದು ಮನಸ್ಥಿತಿ ರೂಪಿಸುವ ಮಾಧ್ಯಮ. ಬರವಣಿಗೆ ಸಮುದಾಯ ಕಟ್ಟುವ ಹಂತದಲ್ಲಿ ನಿರ್ಣಾಯಕ ಪಾತ್ರವಹಿಸುತ್ತದೆ ಎಂದು ಮಂಗಳೂರು ವಿಶ್ವವಿದ್ಯಾನಿಲಯದ ಎಸ್‌ವಿಪಿ ಕನ್ನಡ ಅಧ್ಯಯನ ಸಂಸ್ಥೆ ಅಧ್ಯಕ್ಷ ಪ್ರೊ. ಬಿ. ಶಿವರಾಮ ಶೆಟ್ಟಿ ಹೇಳಿದ್ದಾರೆ. ಬಸ್ರೂರು ಶ್ರೀ ಶಾರದಾ ಕಾಲೇಜು ಆಶ್ರಯದಲ್ಲಿ ನಡೆದ ಸಾಹಿತ್ಯಿಕ ಬರವಣಿಗೆ, ಹೊಸಬಗೆ ಸಾಧ್ಯತೆ ಮತ್ತು ಅವಕಾಶಗಳು ಎಂಬ ವಿಷಯದ ಕುರಿತು ನಡೆದ ಮಂಗಳೂರು ವಿಶ್ವವಿದ್ಯಾನಿಲಯ ಮಟ್ಟದ ಒಂದು ದಿನದ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು. ಬರವಣಿಗೆ ಕ್ರಿಯೆ ಆಧುನಿಕಪೂರ್ವದಲ್ಲಿಯೇ ಆರಂಭಗೊಂಡು, ಆಧುನಿಕ ಸಂದರ್ಭದಲ್ಲಿ ಹಲವು ಆಯಾಮಗಳಲ್ಲಿ ತೆರೆದುಕೊಂಡಿರುದ ಕಾಣಲು ಸಾಧ್ಯವಿದೆ. ಇದು ಭೂತ, ವರ್ತಮಾನ, ಭವಿಷ್ಯದಲ್ಲಿ ಪ್ರಕಟಗೊಳ್ಳುವ ಮೂಲಕ ಕಾಲದ ನಿರ್ದಿಷ್ಟತೆ ಮೀರಿ ನಿಲ್ಲುವಂಥದ್ದಾಗಿದೆ. ಬಹುಬಗೆಯ ಓದು, ತಿಳಿವಳಿಕೆ ಇದ್ದಾಗ ಮಾತ್ರ ಉತ್ತಮ ಬರವಣಿಗೆಗೆ ಸಾಧ್ಯವಾಗಬಲ್ಲದು ಎಂದರು. ಬರವಣಿಗೆಗೆ ತೊಡಗುವ ಯುವ ತಲೆಮಾರು ಈ ನಿಟ್ಟಿನಲ್ಲಿ ಮಗದಷ್ಟು ಗಂಭೀರವಾಗಿ ಯೋಚಿಸಬೇಕಾಗಿದೆ ಎಂದರು. ಕಾಲೇಜು ಸಂಚಾಲಕ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಮಂಗಳೂರು: ದ.ಕ ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ತುಳು ಭವನ ಸಿರಿ ಛಾವಡಿಯಲ್ಲಿ ಬಾಲ ಪ್ರತಿಭೆಗಳನ್ನು ಪ್ರೋತ್ಸಾಹಿಸುವ ಸಲುವಾಗಿ ಚಿಗುರು ಸಾಂಸ್ಕೃತಿಕ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತು. ದ.ಕ ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ವಿವಿಧ ಸಂಗೀತ, ನೃತ್ಯ ಪ್ರಕಾರಗಳು ಪ್ರದರ್ಶನಗೊಂಡಿತು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಡಿ. ಎಂ. ರವಿಕುಮಾರ್ ಉಪಸ್ಥಿತಿರಿದ್ದರು.
ಬೈಂದೂರಿನಲ್ಲಿ ಸಚಿವ ಪ್ರಮೋದ್ ಮಧ್ಯರಾಜ್‌ಗೆ ಅಭಿನಂದನೆ ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಅಧಿಕಾರ ಹಿಡಿಯಲು ಹವಣಿಸುವವರು ಮೊದಲು ಜನಸೇವೆ ಮಾಡಿ ಜನರ ಹೃದಯವನ್ನು ಗೆಲ್ಲವಂತಾಗಬೇಕು. ಸೇವೆಯ ಮೂಲಕ ಮಾತ್ರ ಜನರ ವಿಶ್ವಾಸವನ್ನು ಪಡೆದುಕೊಳ್ಳಲು ಸಾಧ್ಯವಿದೆ ಎಂದು ರಾಜ್ಯ ಮೀನುಗಾರಿಕಾ, ಕ್ರೀಡಾ ಮತ್ತು ಯುವಜನಸೇವಾ ಸಚಿವ ಪ್ರಮೋದ್ ಮಧ್ವರಾಜ್ ಹೇಳಿದರು. ಬ್ಲಾಕ್ ಕಾಂಗ್ರೆಸ್ ಸಮಿತಿ ಬೈಂದೂರು ಹಾಗೂ ವಂಡ್ಸೆ ಇಲ್ಲಿನ ರೋಟರಿ ಭವನದಲ್ಲಿ ಜಂಟಿಯಾಗಿ ಆಯೋಜಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಅಭಿನಂದನೆ ಸ್ವೀಕರಿಸಿ ಅವರು ಮಾತನಾಡಿದರು. ಸ್ವಾತಂತ್ರೋತ್ತರ ಭಾರತವನ್ನು ಅಭಿವೃದ್ಧಿಯೆಡೆಗೆ ಕೊಂಡೊಯ್ದ ಏಕೈಕ ಪಕ್ಷ ಕಾಂಗ್ರೆಸ್. ಕರ್ನಾಟಕದಲ್ಲಿ ಕಾಂಗ್ರೆಸ್ ಸರಕಾರ ಸಾಕಷ್ಟು ಜನಪರ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಿದ್ದರೂ ಅದು ಪ್ರಚಾರಕ್ಕೆ ಬಾರದ ಕಾರಣದಿಂದಾಗಿ ಜನರ ಗಮನಕ್ಕೆ ಬರಲು ವಿಳಂಬವಾಗುತ್ತಿದೆ. ಪಕ್ಷದ ಕಾರ್ಯಕರ್ತರು ಪಕ್ಷವನ್ನು ಸಂಘಟಿಸುವಲ್ಲಿ ನಾಯರೊಂದಿಗೆ ಕೈಜೋಡಿಸುವುದಲ್ಲದೇ, ತಮ್ಮ ತಮ್ಮ ಊರಿನ ಪ್ರತಿ ಮನೆಗೂ ತೆರಳಿ ಜನರ ಕಷ್ಟವನ್ನು ಆಲಿಸುವ ಪ್ರವೃತ್ತಿ ಬೆಳೆಸಿಕೊಂಡು ಜನಸೇವೆಯಲ್ಲಿ ತೊಡಗಿಕೊಳ್ಳಿ ಎಂದು ಕರೆ ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಬೈಂದೂರು…
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಉನ್ನತ ಆದರ್ಶಗಳನ್ನು ಹೊಂದಲು ಅಂಕಗಳು ಮಾನದಂಡವಲ್ಲ. ಬಾಲ್ಯದಿಂದಲೇ ಶಿಸ್ತುಬದ್ದ ಜೀವನ, ಕನಸು ನನಸಾಗಿಸುವ ದೃಢ ನಿರ್ಧಾರ ಮಾಡಿ ಶ್ರದ್ಧೆಯಿಂದ ಓದಿದರೆ ಉತ್ತಮ ಫಲಿತಾಂಶ ನಿಮ್ಮದಾಗಲಿದೆ ಎಂದು ಉಡುಪಿ ಬಾಳಿಗಾ ಆಸ್ಪತ್ರೆ ಮುಖ್ಯಸ್ಥ, ಮನಃಶಾಸ್ತ್ರಜ್ಞ ಡಾ. ಪಿ. ವಿ ಭಂಡಾರಿ ಹೇಳಿದರು. ಖಂಬದಕೋಣೆ ರೈತರ ಸೇವಾ ಸಹಕಾರಿ ಸಂಘ ಉಪ್ಪುಂದ, ರೈತಶಕ್ತಿ, ರೈತ ಸೇವಾ ಒಕ್ಕೂಟ ಹಾಗೂ ಖಂಬದಕೋಣೆ ಪದವಿ ಪೂರ್ವ ಕಾಲೇಜಿನ ಜಂಟಿ ಆಶ್ರಯದಲ್ಲಿ ಕಾಲೇಜು ಸಭಾಂಗಣದಲ್ಲಿ ವಿದ್ಯಾರ್ಥಿಗಳ ಶೈಕ್ಷಣಿಕ ಮನೋವಿಕಾಸ, ಪೋಷಕರ, ವಿದ್ಯಾರ್ಥಿಗಳು ಮತ್ತು ಶಿಕ್ಷಕರ ನಡುವೆ ನಡೆಯುವ ಕಲಿಕಾ ಪ್ರಕ್ರೀಯೆಗಳ ಸವಾಲುಗಳು ಹಾಗೂ ಪರಿಹಾರ ಎಂಬ ವಿಷಯದ ಕುರಿತು ಉಪನ್ಯಾಸ ನೀಡಿದರು. ಪಾಲಕರು ತಮ್ಮ ಮಕ್ಕಳಿಗೆ ಕಷ್ಟಪಟ್ಟು ಓದು ಅಂತಾರೆಯೇ ವಿನಃ ಇಷ್ಟಪಟ್ಟು ಓದು ಎನ್ನುವ ಪರಿಪಾಠ ಬೆಳೆಸಿಕೊಂಡಿಲ್ಲ. ಪ್ರತಿಯೊಬ್ಬ ಮಕ್ಕಳಲ್ಲೂ ಒಳ್ಳೆಯ ಗುಣಗಳಿರುತ್ತವೆ. ಅವುಗಳನ್ನು ಗುರುತಿಸಿ ಪ್ರೋತ್ಸಾಹಿಸುವ ಮೂಲಕ ಅವರ ಆತ್ಮಸ್ಥೈರ್ಯವನ್ನು ಹೆಚ್ಚಿಸಬೇಕು. ಮಕ್ಕಳ ನಡುವೆ ಹೋಲಿಕೆ, ತುಲನೆಯನ್ನು ಮಾಡದೇ…
