Author: ನ್ಯೂಸ್ ಬ್ಯೂರೋ

ಡಾ. ಮೋಹನ್ ಆಳ್ವರೇ ಹೇಳುವಂತೆ ನುಡಿಸಿರಿಯಲ್ಲಿ ಕಾಣದ ಸಾವಿರಾರು ಕೈಗಳ ಪರಿಶ್ರಮವಿದೆ. ನಾಡಿನ ಮೂಲೆಮೂಲೆಗಳಿಂದ ಈ ಸಾಹಿತ್ಯ ಜಾತ್ರಗೆ ಆಗಮಿಸುವ ಸಾಹಿತ್ಯಾಭಿಮಾನಿಗಳೆಲ್ಲರೂ ಇಲ್ಲಿನ ಯಾವುದೇ ಅಚ್ಚುಕಟ್ಟಾದ ವ್ಯವಸ್ಥೆಯ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿಯೇ ಹೋಗುತ್ತಾರೆ. ಇದಕ್ಕೆ ಮೂಲ ಕಾರಣವೊಂದೇ ತಮಗೆ ವಹಿಸಿದ ಕೆಲಸವನ್ನು ಒಂದಿನಿತೂ ಲೋಪವಾಗದ ರೀತಿಯಲ್ಲಿ ಚಾಚೂ ತಪ್ಪದೆ ಪಾಲಿಸುತ್ತಿರುವವರು ಇಲ್ಲಿರುವ ಸ್ವಯಂಸೇವಕರು. ಒಂದರ್ಥದಲ್ಲಿ ಇವರೇ ನುಡಿಸಿರಿಯ ನಿಜವಾದ ರೂವಾರಿಗಳು ಎಂದರೂ ತಪ್ಪಾಗದು. ದಿನಂಪ್ರತಿ ನಡೆಯುವ ಸಭಾ ಕಾರ್ಯಕ್ರಮಗಳ ಆಸನ ವ್ಯವಸ್ಥೆ, ನೋಂದಣಿ, ವೇದಿಕೆ ಸಿದ್ಧತೆಗೆ ಸಹಕಾರ, ಮಾಧ್ಯಮ ಪ್ರತಿನಿಧಿಗಳಿಗೆ ಸಹಕಾರ ಮತ್ತು ಎಲ್ಲಕ್ಕಿಂತ ಮುಖ್ಯವಾಗಿ ಬೆಳಗ್ಗೆ, ಮಧ್ಯಾಹ್ನ ಮತ್ತು ರಾತ್ರಿ ಊಟ, ಉಪಾಹಾರವನ್ನು ಬಡಿಸುವ, ಒಂದೆಡೆಯಿಂದ ಮತ್ತೊಂದೆಡೆಗೆ ಸಾಗಿಸುವ ವ್ಯವಸ್ಥೆ, ಪಾರ್ಕಿಂಗ್ ಹಾಗೂ ಅಲ್ಲಲ್ಲಿ ಜನಸಂದಣಿ ನಿರ್ವಹಣೆ ಹೀಗೆ ಕೆಲವು ಮಹತ್ತರವಾದ ಜವಾಬ್ಧಾರಿಗಳನ್ನು ಈ ನಮ್ಮ ಸ್ವಯಂಸೇವಕರು ಬಹಳ ನಿಷ್ಠೆಯಿಂದ, ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದೆ ನಿರ್ವಹಿಸುತ್ತಿದ್ದಾರೆ. ಆಳ್ವಾಸ್‌ನ ವಿವಿಧ ಕಾಲೇಜುಗಳ ಎನ್.ಎಸ್.ಎಸ್, ಎನ್‌ಸಿಸಿ, ರೋವರ್‍ಸ್-ರೇಂಜರ್‍ಸ್ ವಿದ್ಯಾರ್ಥಿಗಳೂ ಸೇರಿದಂತೆ ಮಂಗಳೂರು, ಪುತ್ತೂರು, ಸುಳ್ಯ,…

Read More

ಕುಂದಾಪುರ: ಇಲ್ಲಿನ ಯುವ ಸಾಹಿತಿ, ಸಿರಿ ಸೌಂದರ್ಯ ಪತ್ರಿಕೆಯ ಸಂಪಾದಕ ಸಂದೀಪ್ ಶೆಟ್ಟಿ ಹೆಗ್ಗದ್ದೆ ಕುಂದಾಪ್ರ ಕನ್ನಡದಲ್ಲಿ ವಿಶಷ್ಟ ಹಾಡುಗಳ ಆಲ್ಬಮ್ ಹೊರತರು ಅಣಿಯಾಗಿದ್ದು ಇತ್ತೀಚೆಗೆ ಬೆಂಗಳೂರಿನ ‘ಸಿರಿ ಸೌಂದರ್ಯ’ ಕನ್ನಡ ಮಾಸ ಪತ್ರ್ರಿಕೆಯ ಕಛೇರಿಯಲ್ಲಿ ಆಲ್ಬಂ ಟೈಟಲ್ ಬಿಡುಗಡೆಗೊಂಡಿತು ಖ್ಯಾತ ಸಂಗೀತ ನಿರ್ದೇಶಕ ವಿ. ಮನೋಹರ್ ಟೈಟಲ್‌ ಬಿಡುಗಡೆಗೊಳಿಸಿ ಮಾತನಾಡಿ, ‘ಯುವ ಉತ್ಸಾಹಿ ಯುವಕರಾದ ಸಂದೀಪ್ ಶೆಟ್ಟಿ ಹೆಗ್ಗದ್ದೆ ಹಾಗೂ ಅಭಿನಯ್ ಶೆಟ್ಟಿ ತಮ್ಮ ಹುಟ್ಟೂರ ಭಾಷೆಯಲ್ಲಿ ಹಾಡುಗಳನ್ನು ಮಾಡೋಕೆ ಹೊರಟಿರೋದು ನಿಜಕ್ಕೂ ಅಭಿನಂದನಾರ್ಹ. ಅವರ ಕಾರ್ಯ ಯಶಸ್ಸಾಗಲಿ ಎಂದು ಹಾರೈಸಿದರು. ಕಾರ್ಯಕ್ರಮದಲ್ಲಿ ಮಿಮಿಕ್ರಿ ದಯಾನಂದ್, ಸಿರಿ ಪತ್ರಿಕೆಯ ವ್ಯವಸ್ಥಾಪಕ ನಿರ್ದೇಶಕ ಸುರೇಶ್ ಚಿಕ್ಕಣ್ಣ, ಸಂಪಾದಕರಾದ ಲಲಿತಾನಾರಾಯಣ್ ಸೇರದಂತೆ ಅನೇಕ ಗಣ್ಯರು ಭಾಗವಹಿಸಿ ಶುಭ ಹಾರೈಸಿದರು. ಆಲ್ಬಂ ಪರಿಕಲ್ಪನೆ, ಸಾಹಿತ್ಯ, ಹಾಗೂ ಗಾಯನ ಇವು ಮೂರು ಅಂಶಗಳ ಹೊಣೆ ಹೊತ್ತಿರುವ ಸಂದೀಪ್ ಶೆಟ್ಟಿ ಹೆಗ್ಗದ್ದೆ ಮಾತನಾಡಿ, ಮೊದಲು ನಾವು ಹಾಡುಗಳನ್ನು ಬಿಡುಗಡೆಗೊಳಿಸಿ, ನಂತರ ಅದರ ಚಿತ್ರೀಕರಣವನ್ನು ಮಾಡಬೇಕೆಂದುಕೊಂಡಿದ್ದೇವೆ. ಇದರಲ್ಲಿ ಬಹುತೇಕ ಕುಂದಾಪರದ ಪ್ರತಿಭೆಗಳೇ ಕಾಣಿಸಿಕೊಳ್ಳಲಿದ್ದು, ಹಾಡುಗಳ ನಾಯಕನಾಗಿ ಕುಂದಾಪುರದವರಾದ, ಮಾಡೆಲಿಂಗ್ ಕ್ಷೇತ್ರದಲ್ಲಿ…

Read More

ಬೈಂದೂರು,ನ27: ಇಲ್ಲಿಗೆ ಸಮೀಪದ ಶಿರೂರು ಗ್ರಾಮ ಪಂಚಾಯತ್ ಎದುರಿನ ರಾಷ್ಟ್ರೀಯ ಹೆದಾರಿ 66ರಲ್ಲಿ ಬ್ಯೆಕ್‌ಗಳೆರಡು ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ ಬ್ಯೆಕ್ ಸವಾರರಿಬ್ಬರು ಗಂಭೀರ ಗಾಯಗೊಂಡ ಘಟನೆ ಇಂದು ರಾತ್ರಿ ವರದಿಯಾಗಿದೆ. ಸಿಗಂದೂರು ಮೇಳದಲ್ಲಿ ವೇಷಧಾರಿಯಾಗಿರುವ ಸುದೀಪ್ ಭಟ್ಕಳಕ್ಕೆ ಯಕ್ಷಗಾನಕ್ಕೆ ತೆರಳುತ್ತಿದ್ದ ವೇಳೆ ಈ ಅಪಘಾತ ಸಂಭವಿಸಿದೆ. ಇನ್ನೊರ್ವ ವ್ಯಕ್ತಿ ಭಟ್ಕಳದ ವೆಂಕಟಾಪುರದ ನಿವಾಸಿ ವೆಂಕಟಪ್ಪ ಎಂದು ತಿಳಿದು ಬಂದಿದೆ. ಗಾಯಾಳುಗಳನ್ನು ಕುಂದಾಪುರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಬ್ಯೆಂದೂರು ವೃತ್ತ ನಿರೀಕ್ಷಕ ಸುದರ್ಶನ್, ಬ್ಯೆಂದೂರು ಠಾಣಾಧಿಕಾರಿ ಸಂತೋಷ ಕಾಯ್ಕಿಣಿ ಘಟನಾ ಸ್ಥಳಕ್ಕಾಗಮಿಸಿದ್ದರು. ಬೈಂದೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More

ಮೂಡುಬಿದಿರೆ: ನುಡಿಸಿರಿಯ ಆಶಯಗಳನ್ನು ಬಲಪಂಥೀಯ ಅಥವಾ ಎಡಪಂಥೀಯ ಎಂಬ ಧೊರಣೆಗೆ ಸೀಮಿತಗೊಳಿಸುವುದು ಸರಿಯಲ್ಲ. ಎಲ್ಲರ ವಿಚಾರಗಳಿಗೂ ಇಲ್ಲಿ ವೇದಿಕೆ ಮಾಡಿಕೊಡಲಾಗಿದೆ. ನುಡಿಸಿರಿಯ ಅಧ್ಯಕ್ಷತೆ ವಹಿಸಿದವರು ಒಂದಿಲ್ಲೊಂದು ಪಂಥದಲ್ಲಿ ಗುರುತಿಸಿಕೊಂಡಿದ್ದರು. ಅವರ ಆಯ್ಕೆ ವಿಚಾರದಲ್ಲಿ ನಾವೆಂದೂ ಭೇದ ಮಾಡಿಲ್ಲ. ಯಾರ ವಿಚಾರಧಾರೆಗೂ ತಡೆಯೊಡ್ಡಿಲ್ಲ. ಇದು ನಮ್ಮೇಲ್ಲರ ಸಮ್ಮೇಳನವಾಗಬೇಕೆಂಬುದೇ ನಮ್ಮ ಆಶಯ ಎಂದು ಆಳ್ವಾಸ್ ನುಡಿಸಿರಿಯ ರೂವಾರಿ ಡಾ. ಎಂ. ಮೋಹನ ಆಳ್ವ ಹೇಳಿದರು. ಮಾಧ್ಯಮ ಕೇಂದ್ರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಸಂವಾದದಲ್ಲಿ ಭಾಗವಹಿಸಿ ಮಾತನಾಡಿದ ಅವರು ತಾನು ಹಿಂದೂ ಸಂಘಟನೆಯಲ್ಲಿ ಗುರುತಿಸಿಕೊಂಡಿದ್ದೇನೆಂಬ ಕಾರಣಕ್ಕೆ ನುಡಿಸಿರಿಯನ್ನು ವಿರೋಧಿಸುವುದು ಸರಿಯಲ್ಲ. ತನಗೆ ಧರ್ಮದ ಮೇಲಿರುವ ಅಪಾರ ಗೌರವ ಹಾಗೂ ವಿಶ್ವ ಹಿಂದೂ ಪರಿಷತ್ ನಾಯಕರು ಕೇಳಿಕೊಂಡಿದ್ದರಿಂದ ಆ ಸ್ಥಾನವನ್ನು ಸ್ವೀಕರಿಸಿದ್ದೇನೆ ಆದರೆ ತಾನೆಂದೂ ಕೋಮುವಾದ ಮಾಡಿಲ್ಲ. ಸಮಾಜ ಒಡೆಯುವ ಕೆಲಸ ಮಾಡಿದ ಬಗ್ಗೆ ನಿದರ್ಶನಗಳಿಲ್ಲ. ಮುಸಲ್ಮಾನರು ಹಾಗೂ ಕ್ರೈಸ್ತರೊಂದಿಗೆ ಅನ್ಯೂನ್ಯವಾದ ಬದುಕು ಕಟ್ಟಿಕೊಂಡದ್ದೇನೆ. ಸಾವಿರಾರು ಮುಸಲ್ಮಾನ, ಕ್ರೈಸ್ತ ಮಕ್ಕಳು ತನ್ನ ಶಾಲೆಯಲ್ಲಿ ಕಲಿಯುತ್ತಿದ್ದಾರೆ. ಅವರ ಮೇಲೆಂದೂ ಒತ್ತಡ ಹೇರಿದ…

Read More

ಮೂಡುಬಿದಿರೆ: ಎಲ್ಲಾವನ್ನೂ ಕಬಳಿಸಬೇಕೆಂಬ ದಾಹ ನಮ್ಮ ನಾಳಿನ ಭವಿಷ್ಯವನ್ನು ಅಸ್ಥಿರಗೊಳಿಸುತ್ತಿದೆ. ದಿನದಿಂದ ದಿನಕ್ಕೆ ನಿಸರ್ಗದಿಂದ ದೂರವಾಗಿ, ಸೂಕ್ಷ್ಮ ಸಂವೇದನೆಯನ್ನೇ ಕಳೆದುಕೊಳ್ಳುತ್ತಿದ್ದೇವೆ. ನಿಸರ್ಗ ಹಾಗೂ ಕರುಳಬಳ್ಳಿಯ ಸಂಬಂಧ ತುಂಡಾಗಿದೆ ಎಂದು ಹಿರಿಯ ಲೇಖಕ ನಾಗೇಶ್ ಹೆಗಡೆ ಅಭಿಪ್ರಾಯಪಟ್ಟರು. ಆಳ್ವಾಸ್ ನುಡಿಸಿರಿ ರತ್ನಾಕರವರ್ಣಿ ವೇದಿಕೆಯ ನಾಡೋಜ ಕಯ್ಯಾರ ಕಿಂಞಣ್ಣ ರೈ ಸಭಾಂಗಣದಲ್ಲಿ ‘ಪರಿಸರ ಕಾಳಜಿ: ಹೊಸತನದ ಹುಡುಕಾಟ’ ಎಂಬ ವಿಷಯದಲ್ಲಿ ಅವರು ಮಾತನಾಡಿದರು. ಏಕಕಾಲಕ್ಕೆ ವೈವಿಧ್ಯಮಯ ಪ್ರಳಯ ಭೂಮಿಯನ್ನು ಭಾದಿಸುತ್ತಿದೆ. ಮನುಷ್ಯನೇ ಇಂದು ಪ್ರಳಯವಾಗಿರುವುದು ಇದಕ್ಕೆಲ್ಲ ಕಾರಣ. ಜನಸಂಖ್ಯೆ ಮಾತ್ರವೇ ಹೆಚ್ಚಾಗದೇ ಪ್ರತಿಯೋಬ್ಬರೂ ಭೂಮಿಯನ್ನು ಹೀರುವ ಪ್ರಮಾಣವೂ ಹೆಚ್ಚುತ್ತಿದೆ. ಬಹುರಾಷ್ಟ್ರೀಯ ಕಂಪೆನಿಗಳು ರಾಜಕೀಯ ಮುತ್ಸದ್ಧಿಗಳನ್ನು, ವಿಜ್ಞಾನಿಗಳನ್ನು ಗೊಂಬೆಯಂತೆ ಆಡಿಸುತ್ತಿದ್ದು ಸುಳ್ಳು ಮಾಹಿತಿಯನ್ನು ಸಮಾಜಕ್ಕೆ ರವಾನಿಸಿ ದಾರಿ ತಪ್ಪಿಸುವ ಕೆಲಸ ಮಾಡುತ್ತಿದೆ. ಸ್ಥಳೀಯ ಸಂಪನ್ಮೂಲಗಳ ವ್ಯವಸ್ಥಿತ ಬಳಕೆಯಿಂದ ಮಾತ್ರ ಇಂತಹ ವ್ಯವಸ್ಥೆಯನ್ನು ಬಗ್ಗುಬಡಿಯಲು ಸಾಧ್ಯ ಎಂದರು. ನಮ್ಮ ಪರಿಸರ ಹೋರಾಟದ ಹಾದಿಯನ್ನು ಬದಲಿಸಿಕೊಳ್ಳಬೇಕಾದ ತುರ್ತು ಇಂದಿದೆ. ನದಿ ತಿರುವು ಬೇಡ. ಬದಲಿಗೆ ಮಳೆ ನೀರಿನ ಸಂಗ್ರಹಣೆ, ಮರುಬಳಕೆಯ ತಂತ್ರಜ್ಞಾನ…

Read More

ಮೂಡುಬಿದಿರೆ: ಶಿಕ್ಷಣ ಮಾನವೀಯ ಮೌಲ್ಯ ಹಾಗೂ ಬಹುತ್ವನ್ನು ಕಲಿಸುವ ಸಾಧನ. ಮಕ್ಕಳಿಗೆ ಚಿಕ್ಕ ವಯಸ್ಸಿನಲ್ಲಿಯೇ ಉತ್ತಮವಾದ ಶಿಕ್ಷಣ ದೊರೆತರೆ ಅಸಹಿಷ್ಟುತೆಯನ್ನು ತೊಡೆದು ಹಾಕಿ ಮೌಲ್ಯಗಳ ನೆಲೆಯ ಸಮಾಜ ನಿರ್ಮಾಣಕ್ಕೆ ಬುನಾದಿಯಾಗಲಿದೆ ಎಂದು ಡಾ. ನಿರಂಜನಾರಾಧ್ಯ ವಿ. ಪಿ. ಅಭಿಪ್ರಾಯಪಟ್ಟರು. ಆಳ್ವಾಸ್ ನುಡಿಸಿರಿಯ ರತ್ನಾಕರವರ್ಣಿ ವೇದಿಕೆಯ ನಾಡೋಜ ಕಯ್ಯಾರ ಕಿಂಞಣ್ಣ ರೈ ಸಭಾಂಗಣದಲ್ಲಿ ಶಿಕ್ಷಣದಲ್ಲಿ ಸಾಂವಿಧಾನಿಕ ಮೌಲ್ಯಗಳು ಎಂಬ ವಿಷಯದಲ್ಲಿ ಮಾತನಾಡಿದರು. ಸಮಾಜಕ್ಕೆ ಒಳಿತಾಗಬೇಕಿದ್ದ ಶಿಕ್ಷಣ ವ್ಯವಸ್ಥೆ ಇಂದು ಅನಾರೋಗ್ಯಕರ ಸ್ವರ್ಧೆಯನ್ನು ಹುಟ್ಟುಹಾಕಿದೆ. ನಿಜವಾದ ಶಿಕ್ಷಣ ಮನುಷ್ಯನ ಜ್ಞಾನದ ತಳಹದಿಯ ಮೇಲೆ ನಿಂತಿದೆ. ಜ್ಞಾನದ ತಳಹದಿ ಪ್ರೀತಿಯ ಮೇಲೆ ನಿಂತಿದೆ. ಯಾವ ಶಿಕ್ಷಣದಿಂದ ಇವನ್ನೆಲ್ಲಾ ಕಟ್ಟಿಕೊಡಲು ಸಾಧ್ಯವಿಲ್ಲವೋ ಅದು ಬಲಿಷ್ಠ ಭಾರತವನ್ನು ನಿರ್ಮಿಸಲು ಸಾಧ್ಯವಿಲ್ಲ ಎಂದ ಅವರು ಸಂವಿಧಾನ ಮಾನವೀಯತೆ ಮೂಲಗ್ರಂಥ. ಶಿಕ್ಷಣದಲ್ಲಿ ಹೊಸತನದ ಹುಡುಕಾಟ ಸಂವಿಧಾನದ ಆಶಯಗಳಿಗೆ ಪೂರಕವಾಗಿರಬೇಕು. ಸಮ ಸಮಾಜವನ್ನು ಕಟ್ಟಿಕೊಳ್ಳಬೇಕಾದ ಮೌಲ್ಯಗಳು ಶಿಕ್ಷಣದ ಹುಡುಕಾಟಕ್ಕೆ ದಾರಿದೀಪವಾಗಬೇಕು ಎಂದರು.

Read More

ಮೂಡುಬಿದಿರೆ: ಕನ್ನಡ ಮಾಧ್ಯಮ ಶಾಲೆಗಳ ಸೋಲು  ಶ್ರೀಸಾಮಾನ್ಯನ, ಸಂಸ್ಕೃತಿಯ ಸೋಲು ಎಂದೇ ಭಾವಿಸಬೇಕಾಗುತ್ತದೆ. ನಮ್ಮನ್ನಾಳುವವರು, ಇಲಾಖೆ, ಶಿಕ್ಷಕರು ಮತ್ತು ಪಾಲಕರು ಸಹಭಾಗಿತ್ವದೊಂದಿಗೆ ಈ ಕಾಲಕ್ಕೆ ತಕ್ಕಂತೆ ಮಾರ್ಪಾಡುಗಳನ್ನು ತಂದರೆ ಕನ್ನಡ ಮಾಧ್ಯಮ ಶಿಕ್ಷಣದಲ್ಲಿಯೂ ಹೊಸತನ ಕಾಣಲು ಸಾಧ್ಯವಿದೆ ಎಂದು ಶಿಕ್ಷಣ ತಜ್ಞ ಡಾ. ಎಂ ಮೋಹನ ಆಳ್ವ ಅಭಿಪ್ರಾಯಪಟ್ಟರು. ಆಳ್ವಾಸ್ ನುಡಿಸಿರಿಯ ರತ್ನಾಕರವರ್ಣಿ ವೇದಿಕೆಯ ನಾಡೋಜ ಕಯ್ಯಾರ ಕಿಂಞಣ್ಣ ರೈ ಸಭಾಂಗಣದಲ್ಲಿ ಹೊಸತನದ ಹುಡುಕಾಟದಲ್ಲಿ ಕನ್ನಡ ಮಾಧ್ಯಮ ಎಂಬ ವಿಷಯದಲ್ಲಿ ಮಾತನಾಡಿದರು. ಕನ್ನಡ ಶಾಲೆಗಳಲ್ಲಿ ಶಿಕ್ಷಣದ ಗುಣಮಟ್ಟ ಕ್ಷೀಣಿಸುತ್ತಿದೆ ಎಂದು ದೂರದಲ್ಲಿ ನಿಂತು ಹಳಿಯುವ ಬದಲಿಗೆ ನಮ್ಮೂರಿನ ಕನ್ನಡ ಶಾಲೆಗಳಲ್ಲಿ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಿ ಕಟ್ಟಿ ಬೆಳೆಸುವುದು ಹೇಗೆ ಎಂಬ ಕುರಿತು ಯೋಚಿಸಬೇಕಾಗಿದೆ. ಈ ವಿಚಾರದಲ್ಲಿ ಸರಕಾರ ಎಚ್ಚೆತ್ತುಕೊಳ್ಳುವುದು, ಶಿಕ್ಷಕರು, ಪಾಲಕರು ತಮ್ಮ ಜವಾಬ್ದಾರಿಯನ್ನು ಅರಿಯವುದು ಅತಿ ಮುಖ್ಯ ಎಂದರು.

Read More

ಅಪಾರ ಉಜಿರೆ. ಒಂದು ದಿನ ಮನೆಗೆ ನೆಂಟರಿಷ್ಟರು ಬಂದರೆ ಆವರು ಮರಳಿ ಹೋಗುವುದನ್ನೇ ಕಾಯುತ್ತಿರುತ್ತೇವೆ. ಸಾಲದ್ದಕ್ಕೆ ಮಕ್ಕಳ ಮೂಲಕ ‘ಅಂಕಲ್, ಆಂಟಿ ನೀವು ಯಾವಾಗ ಹೋಗ್ತೀರಾ’ ಎಂದು ಕೇಳಿಸುವ ಪರಿಪಾಠದ ನಡುವೆ ಯಾರೊಬ್ಬರಿಗೂ ತೊಂದರೆಯಾಗದಂತೆ ದಿನಂಪ್ರತಿ ಸುಮಾರು ಇಪ್ಪತ್ತರಿಂದ ಇಪ್ಪತ್ತೈದು ಸಾವಿರ ಜನರಿಗೆ ಬಗೆ ಬಗೆಯ ಭಕ್ಷ, ಭೋಜನಗಳ ಉಪಚಾರ ಅಚ್ಚುಕಟ್ಟಾಗಿ ಸದ್ದಿಲ್ಲದೇ ಸಾಗುತ್ತಿದೆ. ಇದು ಸಾಧ್ಯವಾಗುವುದು ಆಳ್ವಾಸ್ ನುಡಿಸಿರಿಯಲ್ಲಿ. ಏಕಕಾಲದಲ್ಲಿ ನುಡಿಸಿರಿಯ ವಿವಿಧ ವೇದಿಕೆಗಳಲ್ಲಿ ನಡೆಯುವ ಕಲೆ, ಸಾಹಿತ್ಯ, ಸಾಂಸ್ಕೃತಿಕ ವಿಚಾರಗಳು ಬುದ್ಧಿಯ ಹಸಿವನ್ನು ತಣಿಸಿದರೇ, ಆಳ್ವಾಸ್‌ನ ಭೋಜನಾಲಯದಲ್ಲಿ ತಯಾರಾಗುವ ಖಾದ್ಯಗಳು ನಾಡಿನ ವಿವಿಧೆಡೆಗಳಿಂದ ಆಗಮಿಸಿದ ಸಾಹಿತ್ಯಪ್ರೀಯರ ಹೊಟ್ಟೆಯನ್ನು ತಂಪಾಗಿರಿಸುತ್ತಿವೆ. ಅಡುಗೆ ಮನೆಯಲ್ಲಿ ಅನ್ನ, ಸಾಂಬಾರ್, ಮೊಸರು, ಪಲ್ಯ ಮೊದಲಾದವುಗಳು ಒಂದೆಡೆ ತಯಾರಾದರೆ ಇನ್ನೊಂದೆಡೆ ಸಿಹಿತಿಂಡಿಗಳು ಪ್ರತ್ಯೇಕವಾಗಿ ತಯಾರಾಗುತ್ತವೆ. ಒಟ್ಟು ೨೪ ಕೌಂಟರ್‌ಗಳಲ್ಲಿ ಬೆಳಗ್ಗೆ 7ಗಂಟೆಯಿಂದ ರಾತ್ರಿ 10:30೦ರ ವರೆಗೆ ನಡೆಯುವ ಈ ಸಂತರ್ಪಣಾ ಕಾರ್ಯಕ್ರಮಕ್ಕೆ ಆಹಾರ ಸರಬರಾಜಾಗುವುದು ಕ್ಯಾಂಪಸ್‌ನ ಆವರಣದಲ್ಲಿರುವ ವಿದ್ಯಾರ್ಥಿನಿ ನಿಲಯದಿಂದ. ನಾಲ್ಕೂ ದಿನಗಳ ಆಹಾರ ತಯಾರಿಕೆಯ…

Read More

ಅಪರ ಉಜಿರೆ.  ಪ್ರತಿ ವರ್ಷವೂ ನುಡಿಸಿರಿಯು ಒಂದಲ್ಲಾ ಒಂದು ಕಾರಣಕ್ಕೆ ತನ್ನ ವಿಶೇಷತೆಯನ್ನು ಮೆರೆಯುತ್ತಾ ಬಂದಿದೆ. ಎಲ್ಲಾ ನುಡಿಸಿರಿಗಳಲ್ಲೂ ನಾಡಿನ ವಿವಿಧ ಭಾಗಗಳಿಂದ ಚಿತ್ರ ಕಲಾವಿದರನ್ನು ಕರೆಸಿ ಅವರಿಂದ ವಿವಿಧ ಕಲಾಕೃತಿಗಳನ್ನು ಹೊರತರುವ ಕಾರ್ಯ ಎಲ್ಲರಿಗೂ ತಿಳಿದ ವಿಚಾರ. ಆದರೆ ಈ ಬಾರಿ ೧೨ನೇ ಆಳ್ವಾಸ್ ನುಡಿಸಿರಿಯಲ್ಲಿ ಕೊಂಚ ವಿಶೇಷವೆಂಬಂತೆ ರಾಜ್ಯಮಟ್ಟದ ಆಳ್ವಾಸ್ ಕಲಾಮೇಳವನ್ನು ಆಯೋಜಿಸಿರುವ ಡಾ. ಆಳ್ವರು ನಾಡಿನ ಕಲಾವಿದರು ರಚಿಸಿರುವ ಕಲಾಕೃತಿಗಳನ್ನು ಪ್ರದರ್ಶನ ಏರ್ಪಡಿಸಿರುವುದಲ್ಲದೇ ಕಲಾವಿದರಿಗೂ ಅನುಕೂಲವಾಗುವಂತೆ ಮಾರಾಟಕ್ಕೂ ಅವಕಾಶ ನಿಡದ್ದಾರೆ. ಆಳ್ವಾಸ್ ಪದವಿ ಕಾಲೇಜಿನ ಆವರಣದಲ್ಲಿ ರಾರಾಜಿಸುತ್ತಿರುವ ಕಲಾಮೇಳದಲ್ಲಿ ಕನ್ನಡ ವಿಶ್ವವಿದ್ಯಾಲಯ, ಹಂಪಿ, ಸ್ವರೂಪ ಅಧ್ಯಯನ ಕೇಂದ್ರ, ಮಂಗಳೂರು, ಕರಾವಳಿ ಕಲಾವಿದರ ಚಾವಡಿ, ಚಿತ್ರಕಲಾ ಮಂದಿರ ಉಡುಪಿ ಮತ್ತು ವಿಜಯಾ ದೃಶ್ಯಕಲಾ ಮಹಾವಿದ್ಯಾಲಯ ಮೊದಲಾದ ಸಂಸ್ಥೆಗಳನ್ನು ಒಳಗೊಂಡಂತೆ ೬೪ ಕಲಾವಿದರು ಪಾಲ್ಗೊಂಡಿದ್ದಾರೆ. ಯಾವುದೇ ಮಧ್ಯವರ್ತಿಗಳ ತೊಂದರೆಯಿಲ್ಲದೆ ನೇರವಾಗಿ ಗ್ರಾಹಕ ಮತ್ತು ಕಲಾವಿದರ ನಡುವೆ ಸಂಪರ್ಕವನ್ನು ಸಾಧಿಸುವ ಮೂಲಕ ಕಲಾವಿದರ ಕಲಾಕೃತಿಗಳಿಗೆ ನ್ಯಾಯಯುವ ಮೌಲ್ಯ ಸಿಗುವಂತೆ ಮಾಡಲಾಗಿದೆ. ‘ವರ್ಷವರ್ಷವೂ…

Read More