ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಜಿನೆವಾದಲ್ಲಿ ಕೈಗೊಂಡ ನಿರ್ಣಯಗಳು. ರೆಡ್‌ಕ್ರಾಸ್ ಸಂಸ್ಥೆ ಬೆಳೆದು ಬಂದ ದಾರಿ ಮತ್ತು ಅದು ಅಂತರಾಷ್ಟ್ರೀಯ ಸಂಸ್ಥೆಯಾಗಿ ಗುರುತಿಸಿಕೊಂಡ ಬಗ್ಗೆ ಹಾಗೂ ಇದೇ ಸಂದರ್ಭದಲ್ಲಿ ಮಾನವ ಹಕ್ಕುಗಳ ಉಲ್ಲಂಘನೆಯ ಕುರಿತು ಕುಂದಾಪುರದ ಹಿರಿಯ ನ್ಯಾಯವಾದಿ ಗಿಳಿಯಾರು ಸಂತೋಷ್ ಕುಮಾರ್ ಶೆಟ್ಟಿ ಹೇಳಿದರು. ಡಾ. ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ಯುವ ರೆಡ್‌ಕ್ರಾಸ್ ಘಟಕದ ಆಶ್ರಯದಲ್ಲಿ ಜಿನೆವಾ ಕನ್‌ವೆನ್‌ಶನ್ ಡೇ ದಿನ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದರು. ಕಾಲೇಜಿನ ಪ್ರಭಾರ ಪ್ರಾಂಶುಪಾಲರಾದ ಚೇತನ್ ಶೆಟ್ಟಿ ಕೋವಾಡಿ ಅಧ್ಯಕ್ಷತೆ ವಹಿಸಿದ್ದರು. ಕುಂದಾಪುರ ತಾಲೂಕು ರೆಡ್‌ಕ್ರಾಸ್ ಸೊಸೈಟಿಯ ಸಭಾಪತಿ ಜಯಕರ ಶೆಟ್ಟಿ, ರೆಡ್‌ಕ್ರಾಸ್ ಸೊಸೈಟಿಯ ಸಂಯೋಜಕ ಮುತ್ತಯ್ಯ ಶೆಟ್ಟಿ, ಪ್ರಭಾರ ಪ್ರಾಂಶುಪಾಲ ರಾಜೇಶ್ ಶೆಟ್ಟಿ, ಉಪನ್ಯಾಸಕ ಪ್ರವೀಣ್ ಮೊಗವೀರ ಮತ್ತು ಜ್ಯೋತಿ ಮೊಗವೀರ ಉಪಸ್ಥಿತರಿದ್ದರು. ಕಾಲೇಜಿನ ಯುವ ರೆಡ್‌ಕ್ರಾಸ್ ಘಟಕದ ಸಂಯೋಜಕ ಸತೀಶ್ ಶೆಟ್ಟಿ ಹೆಸ್ಕತ್ತೂರು ಸ್ವಾಗತಿಸಿದರು. ಸಹ ಸಂಯೋಜಕ ಶಿವರಾಜ್ ವಂದಿಸಿದರು. ವಿದ್ಯಾರ್ಥಿ ಪ್ರತಿನಿಧಿ ದೀಕ್ಷಿತ್ ಅತಿಥಿಗಳನ್ನು…
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ. ಕೊಲ್ಲೂರು: ರಾಜ್ಯ ಗೃಹಸಚಿವ ಡಾ| ಜಿ. ಪರಮೇಶ್ವರ್ ಅವರು ಪತ್ನಿ ಕನ್ನಿಕಾ ಸಮೇತರಾಗಿ ಬೆಳಗ್ಗೆ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನಕ್ಕೆ ಆಗಮಿಸಿ ಶ್ರೀದೇವಿಯ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿ ಚಂಡಿಕಾ ಹೋಮದಲ್ಲಿ ಪಾಲ್ಗೊಂಡರು. ಬೈಂದೂರು ಶಾಸಕ ಕೆ. ಗೋಪಾಲ ಪೂಜಾರಿ, ಕೊಲ್ಲೂರು ಗ್ರಾ.ಪಂ. ಅಧ್ಯಕ್ಷ ವಿಶ್ವನಾಥ ಅಡಿಗ, ತಾ.ಪಂ. ಸದಸ್ಯೆ ಗ್ರೀಷ್ಮಾ ಭಿಡೆ, ತಾ.ಪಂ. ಮಾಜಿ ಸದಸ್ಯ ರಮೇಶ ಗಾಣಿಗ ಮೊದಲಾದವರು ಉಪಸ್ಥಿತರಿದ್ದರು.
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಶಿಕ್ಷಣದ ಮೂಲ ಉದ್ದೇಶ ಶಿಕ್ಷಣ ಪಡೆಯುವುದು ಮಾತ್ರವಲ್ಲ. ಶಿಕ್ಷಣ ಕಲಿತ ವಿದ್ಯಾರ್ಥಿಗಳು ಸಮಾಜದಲ್ಲಿ ಸಮಾಜಮುಖಿ ಕೆಲಸ ಮಾಡಿಕೊಂಡು ಬಂದಾಗ ಮಾತ್ರ ಕಲಿತ ವಿಷಯಕ್ಕೆ ಗೌರವಕೊಟ್ಟಾಂತಾಗುತ್ತದೆ ಎಂದು ಪ್ರಥಮ ದರ್ಜೆ ಗುತ್ತಿಗೆದಾರ ಜೆ.ಪಿ.ಶೆಟ್ಟಿ ಕಾಳಾವರ ಹೇಳಿದರು. ಬುಧವಾರ ಕೋಟೇಶ್ವರ ಶ್ರೀ ಕಾಳಾವರ ವರದರಾಜ ಎಂ.ಶೆಟ್ಟಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆದ ವಾಣಿಜ್ಯ ಶಾಸ್ತ್ರ ಸ್ನಾತಕೋತ್ತರ ತರಗತಿ ಉದ್ಘಾಟಿಸಿ ಅವರು ಮಾತನಾಡಿದರು. ಶ್ರೀ ಕಾಳಾವರ ವರದರಾಜ ಎಂ.ಶೆಟ್ಟಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ನಿತ್ಯಾನಂದ ವಿ. ಗಾಂವಕರ ಸಭೆಯ ಅಧ್ಯಕ್ಷತೆ ವಹಿಸಿದರು. ಮುಖ್ಯ ಅತಿಥಿ ಬ್ರಹ್ಮಾವರ ಬಿ.ಡಿ. ಶೆಟ್ಟಿ ಪ್ರಥಮ ದರ್ಜೆ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಬಿ.ಎಂ. ಹೆಗಡೆ ಮಾತನಾಡಿ ವಿದ್ಯಾರ್ಥಿಗಳು ತಮ್ಮೊಳಗೆ ಇರುವ ಸಾಮರ್ಥ್ಯವನ್ನು ಮೊದಲು ತಿಳಿದುಕೊಳ್ಳಬೇಕು. ಆಗ ಜೀವನದಲ್ಲಿ ಧೈರ್ಯವಾಗಿ ಮುಂದೆ ಬರಲು ಸಾಧ್ಯ. ಇತನ್ನಿತರ ಸಮಾಜಮುಖಿ ವಿಷಯಗಳ ಬಗ್ಗೆ ಹವ್ಯಾಸ ಬೆಳಸಿಕೊಂಡಾಗ ವಿದ್ಯಾರ್ಥಿ ಜೀವನದಲ್ಲಿ ಯಶ್ವಸಿಯಾಗಲು ಸಾಧ್ಯ ಎಂದು ನೂತನ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಶ್ರೀ ಕ್ಷೇ.ಧ.ಗ್ರಾ.ಯೋಜನೆ ಚಿತ್ತೂರು ವಲಯ ಹಾಗೂ ಗ್ರಾಮ ಪಂಚಾಯತ್ ಚಿತ್ತೂರು ಇವರ ಸಂಯುಕ್ತ ಆಶ್ರಯದಲ್ಲಿ ವಲಯ ಮಟ್ಟದ ಸ್ವಚ್ಛತಾ ಅಂದೋಲನ ಇತ್ತೀಚೆಗೆ ಜರಗಿತು. ಡಾ|ಅತುಲ್ ಕುಮಾರ್ ಶೆಟ್ಟಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಚಿತ್ತೂರು ಪಂಚಾಯತ್ ಅಧ್ಯಕ್ಷರಾದ ಸಂತೋಷ ಮಡಿವಾಳ, ಚಿತ್ತೂರು ವಲಯಾಧ್ಯಕ್ಷರಾದ ದಿವಾಕರ ಆಚಾರ್ಯ, ವಲಯ ಮೇಲ್ವಿಚಾರಕಿ ಪ್ರೇಮಾ, ಗ್ರಾ.ಪಂ.ಸದಸ್ಯರು, ಸೇವಾ ಪ್ರತಿನಿದಿಗಳಾದ ಮಮತಾ, ರೇವತಿ, ಪ್ರೇಮಾ ಉಪಸ್ಥಿತರಿದ್ದರು.
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಮಾನವನಾಗಿ ಹುಟ್ಟಿ ದೈತ್ವಕ್ಕೇರಿದ ಶ್ರೀ ಕೃಷ್ಣ ಗುರು-ಹಿರಿಯರಲ್ಲಿ ಭಕ್ತಿ, ಬ್ರಾತ್ವತ್ವ, ಸ್ನೇಹ, ನಂಬಿಕೆ, ಸಂಬಂಧಗಳ ಮಹತ್ವ ಪ್ರಪಂಚಕ್ಕೆ ಅರುಹಿದ ಸರ್ವಕಾಲಿಕ ಶ್ರೇಷ್ಠ ವ್ಯಕ್ತಿ ಶ್ರೀ ಕೃಷ್ಣ ಪರಮಾತ್ಮ ಎಂದು ಕುಂದಾಪುರ ತಾಲೂಕ್ ಪಂಚಾಯತ್ ಅಧ್ಯಕ್ಷೆ ಜಯಶ್ರೀ ಸುಧಾಕರ ಮೊಗವೀರ ಹೇಳಿದರು. ಕುಂದಾಪುರ ತಾಲೂಕು ಪಂಚಾಯತ್ ಮತ್ತು ಕುಂದಾಪುರ ತಾಲೂಕು ಆಡಳಿತ ಆಶ್ರಯದಲ್ಲಿ ಕುಂದಾಪುರ ತಾಪಂ ಸಭಾಂಗಣದಲ್ಲಿ ಗುರುವಾರ ನಡೆದ ಶ್ರೀ ಕೃಷ್ಣ ಜನ್ಮಾಷ್ಟಮಿ ಕಾರ್ಯಕ್ರಮವನ್ನು ಉದ್ಘಾಟಿಸಿ, ಮಾತನಾಡುತ್ತಿದ್ದರು. ಶ್ರೀ ಕೃಷ್ಣ ಜನ್ಮಾಷ್ಟಮಿ ರಾಷ್ಟ್ರೀಯ ಹಬ್ಬವಾಗಿ ಆಚರಣೆ ಮಾಡುವ ಮೂಲಕ ಶ್ರೀ ಕೃಷ್ಣ ಸಂದೇಶ ಜನಸಾಮಾನ್ಯರಲ್ಲೂ ತುಂಬಲು ಸಹಕಾರಿಯಾಗಲಿದೆ ಎಂದ ಅವರು, ಶ್ರೀ ಕೃಷ್ಣನ ವ್ಯಕ್ತಿತ್ವ ಮೂಲಕ ಉತ್ತಮ ನಾಯಕತ್ವ ಗುಣ ಬೆಳಸಿಕೊಳ್ಳಲು ಪೂರಕವಾಗಲಿದೆ. ಶ್ರೀ ಕೃಷ್ಣಾವತಾರದ ಮೂಲಕ ದುಷ್ಟರ ನಿಗ್ರಹಿಸಿ, ಶಿಷ್ಟರ ಪಾಲಿಸಿ, ಶಾಂತಿ ಸೌಹಾರ್ದತೆ ಸ್ಥಾಪಿಸಿದ್ದು, ಕೃಷ್ಣನ ಆದರ್ಶಗಳ ಪಾಲನೆ ಮೂಲಕ ಕೃಷ್ಣ ತತ್ವ ನಮ್ಮ ಬದುಕಲ್ಲಿ ಅಳವಿಡಿಸಿಕೊಂಡರೆ ಎಲ್ಲರೂ ಉನ್ನತ ಮಟ್ಟಕ್ಕೆ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ವಕ್ವಾಡಿ ಗುರುಕುಲ ಪಬ್ಲಿಕ್ ಸ್ಕೂಲ್‌ನ ಪೂರ್ವ ಪ್ರಾಥಮಿಕ ತರಗತಿಯ ಮಕ್ಕಳು ಕೃಷ್ಣಜನ್ಮಾಷ್ಟಮಿಯನ್ನು ವಿಜೃಂಭಣೆಯಿಂದ ಆಚರಿಸಿದರು. ಪುಟಾಣಿ ಮಕ್ಕಳು ಮುದ್ದು ರಾಧೆ, ಮುದ್ದು ಕೃಷ್ಣನ ವೇಷ ತೊಟ್ಟು, ಮೊಸರು ಕುಡಿಕೆ, ಕೊಳಲು ಓಟದ ಸ್ಪರ್ಧೆಯಲ್ಲಿ ಪಾಲ್ಗೊಳ್ಳುವ ಮೂಲಕ ಸಂಭ್ರಮಿಸಿದರು. ಈ ಪ್ರಯುಕ್ತವಾಗಿ ಮುದ್ಧು ರಾಧೆ ಮುದ್ಧು ಕೃಷ್ಣರಿಗೆ ಬಹುಮಾನವನ್ನು ನೀಡುವುದರ ಜೊತೆಗೆ ಸಿಹಿತಿನಿಸುಗಳನ್ನು ಹಂಚುವುದರ ಮೂಲಕ ಕೃಷ್ಣಜನ್ಮಾಷ್ಟಮಿಯ ಸಂಭ್ರಮದಿಂದ ಆಚರಿಸಲಾಯಿತು. ಈ ಸಂದರ್ಭದಲ್ಲಿ ಸಂಸ್ಥೆಯ ಜಂಟಿ ಕಾರ್ಯನಿರ್ವಾಹಕಿ ಅನುಪಮ ಎಸ್.ಶೆಟ್ಟಿ, ಮುಖ್ಯ ಶಿಕ್ಷಕಿ ವಿಶಾಲಾ ಶೆಟ್ಟಿ ಹಾಗೂ ಸಹ ಶಿಕ್ಷಕಿಯರು ಉಪಸ್ಥಿತರಿದ್ದರು.
ಕುಂದಾಪ್ರ ಡಾಟ್ ಕಾಂ ಸುದ್ದಿ. ಕೊಪ್ಪಳ: ಕೊಪ್ಪಳ ಜಿಲ್ಲಾ ನಾಗರೀಕರ ಸಾಂಸ್ಕೃತಿಕ ವೇದಿಕೆ, ಕನ್ನಡ ಸಂಸ್ಕೃತಿ ಇಲಾಖೆ ಮತ್ತು ಪ್ರವಾಸೋದ್ಯಮ ಇಲಾಖೆ ಮತ್ತು ಸಂಘ ಸಂಸ್ಥೆಗಳು ಆಯೋಜಿಸುತ್ತಿರುವ ಕೊಪ್ಪಳ ಜಿಲ್ಲಾ ಉತ್ಸವದ ದಶಮಾನೋತ್ಸವದಲ್ಲಿ ಉಡುಪಿಯ ಸಮಾಜ ಸೇವಕ ಉಡುಪಿ ವಿಶ್ವನಾಥ ಪೈ, ಹಿರಿಯ ಕವಿಗಳಾದ ಅಂಶುಮಾಲಿ, ಡಾ.ವಸಂತ ಕುಮಾರ್, ಶೇಖರ ಅಜೆಕಾರು ಸಹಿತ ಹನ್ನೆರಡು ಮಂದಿಗೆ ದಶಮಾನೋತ್ಸವ ಮತ್ತು ಡಾ. ಸಿದ್ದಯ್ಯ ಪುರಾಣಿಕ ಪ್ರಶಸ್ತಿ ನೀಡಲಾಗುತ್ತಿದೆ ಎಂದು ಪ್ರಕಟಣೆ ತಿಳಿಸಿದೆ. ಜಿಲ್ಲೆಗಳ ನಡುವೆ ಸೌಹಾರ್ದ ಬೆಳಸಲು ದಶಮಾನೋತ್ಸವಕ್ಕೆ ಕರಾವಳಿಯ ಉಡುಪಿ, ದ.ಕ, ಕಾಸರಗೋಡು ಮತ್ತು ಮುಂಬಯಿಯ ಸಾಧಕರನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ದಶಮಾನೋತ್ಸವ ಗೌರವ: ವಿಶ್ವನಾಥ ಶೆಣೈ ಸಮಾಜ ಸೇವಕರು-ಉಡುಪಿ, ವಿ.ಕೆ.ಸುವರ್ಣ -ರಂಗ ಕಲಾವಿದರು ಮುಂಬಯಿ, ಶೇಖರ ಅಜೆಕಾರು, ಪತ್ರಕರ್ತರು-ಉಡುಪಿ, ಚಿತ್ತೂರು ಪ್ರಭಾಕರ ಆಚಾರ್ಯ- ಅಧ್ಯಕ್ಷರು ಕಾರ್ಯ ನಿರತ ಪತ್ರಕರ್ತರ ಸಂಘ ಬ್ರಹ್ಮಾವರ, ಎಸ್.ಆರ್. ಬಂಡಿಮಾರ್- ಸಂಪಾದಕರು-ಟೈಮ್ಸ್ ಆಫ್ ಕುಡ್ಲ ತುಳುವಾರ ಪತ್ರಿಕೆ, ವಸಂತಕುಮಾರ್ ಬೆಳ್ತಂಗಡಿ- ವ್ಯವಸ್ಥಾಪಕ ಸಂಪಾದಕರು ಜನಬಿಂಬ ವಾರಪತ್ರಿಕೆ…
ಪ್ಲಾಸ್ಟಿಕ್ ಟ್ಯಾಂಕ್ ತಯಾರಿಕೆಯಲ್ಲಿ ‘ಹೊಸ ಕ್ರಾಂತಿ’ ಕೈಗಾರಿಕೋದ್ಯಮದಲ್ಲಿ ಒಂದಲ್ಲ ಒಂದು ಹೊಸ ಸಂಶೋಧನೆ ಮಾಡಿ ಗ್ರಾಹಕರಿಗೆ ಅನುಕೂಲ ಹೆಚ್ಚಿಸುತ್ತಿರುವ ಕರಾವಳಿಯ ಹೆಸರಾಂತ ಕೈಗಾರಿಕ ಘಟಕ ಕೋಟೇಶ್ವರದ ರಾಜಾರಾಮ್ ಪಾಲಿಮರ್ಸ್ ಭಾರತದಲ್ಲೇ ಪ್ರಪ್ರಥಮ ಬಾರಿಗೆ ಬಹು ಉಪಯೋಗಿ ಸನ್‌ರೈಸ್ ಐಕಾನ್ ತೆರೆದ ಟ್ಯಾಂಕ್‌ನ್ನು ಸಂಶೋಧಿಸಿ ಯಶಸ್ವಿಯಾಗಿ ಮಾರುಕಟ್ಟೆಗೆ ಬಿಡುಗಡೆಗೊಳಿಸಿದೆ. ಇಷ್ಟರವರೆಗೆ ನಮಗೆ ಗೊತ್ತಿರುವುದು ನೀರು ತುಂಬಿಸುವ ಟ್ಯಾಂಕುಗಳು ಮಾತ್ರ. 2007ರಲ್ಲಿ ಸ್ಥಾಪಿಸಿದ ಕೋಟೇಶ್ವರದ ರಾಜಾರಾಮ್ ಪಾಲಿಮರ್ಸ್ ಪ್ಲಾಸ್ಟಿಕ್ ವಾಟರ್ ಟ್ಯಾಂಕ್ ಕೈಗಾರಿಕ ಘಟಕವು ಪ್ಲಾಸ್ಟಿಕ್ ಟ್ಯಾಂಕ್ ಉತ್ಪಾದನಾ ಘಟಕಗಳಲ್ಲೇ ಬಹಳಷ್ಟು ಜನಪ್ರಿಯತೆಯನ್ನು ಪಡೆದುಕೊಂಡಿದೆ. ಕೇವಲ ನೀರು ಸಂಗ್ರಹಿಸಿಡುವ ಟ್ಯಾಂಕ್‌ಗಳನ್ನು ಬಹು ಉಪಯೋಗಿ ಟ್ಯಾಂಕ್‌ಗಳನ್ನಾಗಿ ಹೇಗೆ ನಿರ್ಮಿಸುವುದು? ಟ್ಯಾಂಕ್‌ಗಳ ಸಂಗ್ರಹಣೆಗೆ ಸ್ಥಳ ಅಭಾವ ಹಾಗೂ ಸಾಗಾಟದ ಖರ್ಚುಗಳ ಹೆಚ್ಚಳ ಗ್ರಾಹಕರಿಗೆ ಹೊರೆಯಾಗದಂತೆ ನಿಭಾಯಿಸುವುದು ಹೇಗೆ? ಟ್ಯಾಂಕ್‌ಗಳನ್ನು ಒಂದರ ಒಳಗೆ ಒಂದನ್ನು ಇಡುವಂತೆ ರಚಿಸಲು ಸಾಧ್ಯವಿಲ್ಲವೇ? ಇದರ ವಿನ್ಯಾಸದ ಬಗೆ ಹೇಗೆ ? ದೊಡ್ಡ ಅಗಲ ಬಾಯಿಯಿರುವ ಮುಚ್ಚುಳ ಮಾಡಿದರೆ ಎಲ್ಲಾ ವಿಧದ ವಸ್ತುಗಳನ್ನು, ಆಹಾರ ಸಾಮಾಗ್ರಿಗಳನ್ನು…
ಬಸ್ ರೂಟ್ ಸರಿಮಾಡಿ. ಸಿಆರ್‌ಝಡ್ ಸಮಸ್ಯೆ ಬಗೆಹರಿಸಿ. ಕುಂದಾಪ್ರ ಡಾಟ್ ಕಾಂ ಸುದ್ದಿ ಕುಂದಾಪುರ: ತಾಪಂ ಸಭೆಯಲ್ಲಿ ವಿವಿಧ ಇಲಾಖೆಗೆ ಸಂಬಂಧಿಸಿದ ಪ್ರಶ್ನೆಗಳಿದ್ದರೂ, ಉತ್ತರಿಸಬೇಕಾದ ಅಧಿಕಾರಿಗಳು ಮಾತ್ರ ಸತತವಾಗಿ ಗೈರು ಹಾಜರಾಗಿ ಬೇಜವಾಬ್ದಾರಿ ತೋರುತ್ತಿದ್ದಾರೆ. ಜನಪ್ರತಿನಿಧಿಗಳಿಗೆ ಉತ್ತರಿಸಲಾಗದವರು ಜನಸಾಮಾನ್ಯರಿಗೆ ಉತ್ತರಿಸುವರೇ? ಸಭೆಗೆ ಗೈರಾಗುವ ಅಧಿಕಾರಿಗಳು ಹಿಂಬಡ್ತಿ ಪಡೆದು ಸುಮ್ಮನೆ ಕೂರಲಿ ಅಥವಾ ಅಂತಹ ಅಧಿಕಾರಿಗಳ ವಿರುದ್ದ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳವ ಕೆಲಸವಾಗಲಿ. ಇದು ಬುಧವಾರ ಕುಂದಾಪುರ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಜರುಗಿದ ಸಾಮಾನ್ಯ ಸಭೆಯಲ್ಲಿ ಅಧಿಕಾರಿಗಳ ಗೈರಾಗುತ್ತಿರುವ ವಿರುದ್ದ ಸದಸ್ಯರು ತಮ್ಮ ಆಕ್ರೋಶ ಹೊರಗೆಡವಿದ ಪರಿ ಸಾಮಾನ್ಯ ಸಭೆಯಲ್ಲಿ ಪ್ರಮುಖ ಸಮಸ್ಯೆಗಳಿಗೆ ಉತ್ತರಿಸಬೇಕಾಗಿದ್ದ ನಾಲ್ಕು ಇಲಾಖಾ ಅಧಿಕಾರಿಗಳು ಗೈರು ಹಾಜರಾಗಿ ಕರ್ತವ್ಯಲೋಪವೆಸಗುವ ಹಿನ್ನೆಲೆಯಲ್ಲಿ ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ತಾಪಂ ಸದಸ್ಯರಾದ ವಾಸುದೇವ ಪೈ, ಪುಪ್ಪರಾಜ್ ಶೆಟ್ಟಿ, ಜ್ಯೋತಿ ಪುತ್ರನ್ ಉಮೇಶ್ ಶೆಟ್ಟಿ ಕಲ್ಗದ್ದೆ ಹಾಗೂ ಸುರೇಂದ್ರ ಖಾರ್ವಿ ಆಗ್ರಹಿಸಿದರು. ಇದಕ್ಕೆ ಪ್ರತಿಕ್ರಿಯಿಸಿರುವ ತಾಪಂ ಕಾರ್ಯನಿರ್ವಹಣಾಧಿಕಾರಿ, ಗೈರಾಗುವ ಅಧಿಕಾರಿಗಳ ಶಿಸ್ತುಕ್ರಮ ಜರುಗಿಸುವಂತೆ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ದೇಶ ವಿರೋಧಿ ಘೋಷಣೆ ಕೂಗಿದವರ ವಿರುದ್ಧ ನಡೆಸುತ್ತಿರುವ ಪ್ರತಿಭಟನೆ ಒಂದು ಪಕ್ಷಕ್ಕೆ ಸಂಬಂಧಸಿದಲ್ಲ. ಇದು ದೇಶವಾಸಿಗಳಿಗೆ ಸಂಬಂಧಿಸಿದ್ದು. ದೇಶ ಪ್ರೇಮಿಗಳು ದೇಶದ ಹಾಗೂ ಸೈನಿಕ ವಿರುದ್ಧ ಘೋಷಣೆ ಕೂಗಿದವರ ವಿರುದ್ಧ ಪ್ರತಿಭಟನೆ ನಡೆಸಬೇಕು. ದೇಶದ ಭದ್ರತೆ ಸಾರ್ವಭೌಮತೆ ಹಾಗೂ ಸೈನಿಕರ ಮನೋಸ್ಥೈಯ ಹೆಚ್ಚಿಸುವ ನಿಟ್ಟಿನಲ್ಲಿ ಎಲ್ಲರೂ ಪ್ರತಿಭಟನೆಗೆ ಮುಂದಾಗಬೇಕು. ಅಭಿವ್ಯಕ್ತಿ ಸ್ವಾತಂತ್ರ್ಯ ಹಿನ್ನೆಲೆಯಲ್ಲಿ ದೇಶದ ವಿರುದ್ಧ ಕೂಗವವರಿಗೆ ಕ್ಷಮೆಯಿಲ್ಲ ಎಂದು ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಸುಪ್ರಸಾದ್ ಶೆಟ್ಟಿ ಹೇಳಿದರು. ಕುಂದಾಪುರ ಕ್ಷೇತ್ರ ಬಿಜೆಪಿ ಆಶ್ರಯದಲ್ಲಿ ಅಮ್ನೆಸ್ಟಿ ಇಂಟರ್‌ನ್ಯಾಷನಲ್ ಸಂಸ್ಥೆಯ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಕುಂದಾಪುರ ತಾಪಂ ಎದುರು ಬುಧವಾರ ನಡೆದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು. ಕುಂದಾಪುರ ಮಂಡಲ ಬಿಜೆಪಿ ಅಧ್ಯಕ್ಷ ಕಾಡೂರು ಸುರೇಶ್ ಶೆಟ್ಟಿ ಮಾತನಾಡಿ, ಬಲಾತ್ಕಾರದ ಮಂತಾಂತರ ಅಪಾದನೆಗೆ ಒಳಗಾಗಿ, ದೇಶ ವಿರೋಧಿ ಕೆಲಸ ವಾಡುತ್ತಾ ಬಂದಿರುವ ಅಮ್ನೇಸ್ಟಿ ಇಂಟರ್ ನ್ಯಾಷನಲ್ ಸಂಸ್ಥೆಗೆ ನಿಷೇಧ ಹೇರಬೇಕು. ಅಭಿವ್ಯಕ್ತಿ ಸ್ವಾತಂತ್ರ್ಯ ಹಿನ್ನೆಲೆಯಲ್ಲಿ ಸೈನಿಕ ಹಾಗೂ…
