Author: ನ್ಯೂಸ್ ಬ್ಯೂರೋ

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಗಂಗೊಳ್ಳಿ: ಕಲಾಶ್ರೀ ಶಿಕ್ಷಣ ಪ್ರೇಮಿ ಬಳಗ ಗಂಗೊಳ್ಳಿ ಇದರ ವತಿಯಿಂದ ದಾನಿಗಳ ನೆರವಿನಿಂದ ಪರಿಶಿಷ್ಟ ಜಾತಿ & ಪರಿಶಿಷ್ಟ ಪಂಗಡದ ಮಕ್ಕಳಿಗೆ ಉಚಿತ ನೋಟ್ಸ್ ಬುಕ್ ಹಾಗೂ ಲೇಖನ ಸಾಮಾಗ್ರಿ ವಿತರಣಾ ಕಾರ್ಯಕ್ರಮ ಮೇಲ್‌ಗಂಗೊಳ್ಳಿಯ ಡಾ. ಅಂಬೇಡ್ಕರ್ ಸಭಾಭವನದಲ್ಲಿ ಭಾನುವಾರ ಜರಗಿತು. ಕೆನರಾ ಬ್ಯಾಂಕಿನ ನಿವೃತ್ತ ಸಿಬ್ಬಂದಿ ಪ್ರಮೋದ ಗಾಣಿಗ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ವಿದ್ಯಾರ್ಥಿಗಳಿಗೆ ನೋಟ್ಸ್ ಬುಕ್ ಹಾಗೂ ಲೇಖನ ಸಾಮಾಗ್ರಿಗಳನ್ನು ವಿತರಿಸಿ ಶುಭ ಹಾರೈಸಿದರು. ಉಡುಪಿ ಜಿಲ್ಲಾ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಸಂಘದ ಅಧ್ಯಕ್ಷೆ ಫಿಲೋಮಿನಾ ಫೆರ್ನಾಂಡಿಸ್ ಅವರು ಶಿಕ್ಷಣ ಮಾಹಿತಿ ನೀಡಿದರು. ಗಂಗೊಳ್ಳಿ ಜೇಸಿಐ ಕಾರ್ಯದರ್ಶಿ ನಾಗರಾಜ ಖಾರ್ವಿ, ಮಹಮ್ಮದ್ ಹುಸೇನ್, ಸರಸ್ವತಿ, ಜಿ.ಈಶ್ವರ, ಕಲಾಶ್ರೀ ಶಿಕ್ಷಣ ಬಳಗದ ಅಧ್ಯಕ್ಷೆ ಸುಮಿತ್ರಾ ಜಿ., ನವೀನ್ ಜಿ., ವಿಜೇತ ಕೆ., ಸುನೀತಾ, ಹೇಮಾ, ಸುಕನ್ಯಾ, ಮಂಜುನಾಥ ಜಿ., ನವೀನ್ ಜಿ. ಉಪಸ್ಥಿತರಿದ್ದರು. ಸುಮಿತ್ರಾ ಸ್ವಾಗತಿಸಿದರು. ವಿಜೇತ ಕಾರ್ಯಕ್ರಮ ನಿರ್ವಹಿಸಿದರು. ಸರಸ್ವತಿ ವಂದಿಸಿದರು.

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಶಂಕರನಾರಾಯಣ: ಸರಕಾರಿ ಪದವಿ ಪೂರ್ವ ಕಾಲೇಜಿನ 1990ರ ಎಸ್.ಎಸ್.ಎಲ್.ಸಿ ಸಮಾನ ಮನಸ್ಕ ವಿದ್ಯಾರ್ಥಿಗಳ SSLC-1990LM ಫ್ಯಾಮಿಲಿ ವಾಟ್ಸಪ್ಪ್ ಬಳಗದ 6ನೇ ಕುಟುಂಬ ಮಿಲನ ಕಾರ್ಯಕ್ರಮವು ಬಳಗದ ಸದಸ್ಯರಾದ ಸಿದ್ದಾಪುರ ಮೇಲ್ ಕಡ್ರಿ ವಿದ್ವಾನ್ ಗಣೇಶ್ ಅಡಿಗರ ಮನೆಯಲ್ಲಿ ನೆರವೇರಿತು. ಸುಮಾರು 50ಕ್ಕೂ ಅಧಿಕ ಕುಟುಂಬ ಸದಸ್ಯರು ಭಾಗವಹಿಸಿದ ಈ ಕಾರ್ಯಕ್ರಮದಲ್ಲಿ ಮಕ್ಕಳಿಗೆ, ಮಹಿಳೆಯರಿಗೆ ಮತ್ತು ಪುರುಷರಿಗೆ ಬೇರೆ ಬೇರೆ ತಮಾಷೆಯ ಪಂದ್ಯಗಳನ್ನು ನಡೆಸಿ ಬಹುಮಾನಗಳನ್ನು ನೀಡಲಾಯಿತು. 2025-26ನೇ ಸಾಲಿನ ದ್ವಿತೀಯ ಪಿ.ಯು.ಸಿ ವಾಣಿಜ್ಯ ವಿಭಾಗದಲ್ಲಿ 92% ಅಂಕಗಳನ್ನು ಪಡೆದು ಕಾಲೇಜಿಗೆ ಪ್ರಥಮ ಸ್ಥಾನಿಯಾದ ಹೊಸಂಗಡಿ ಕಾಲೇಜಿನ ಸುವಿಧಾ ಗಣಪತಿ ಶೆಟ್ಟಿ ಅವರಿಗೆ ನಗದು ಪುರಸ್ಕಾರದೊಂದಿಗೆ ಹಾಗೂ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ವಿವಿಧ ಶಾಲೆಗಳಲ್ಲಿ ಕಲಿತು   ಉತ್ತಿರ್ಣರಾದ ಬಳಗದ ಸದಸ್ಯರ ಮಕ್ಕಳಾದ ಪ್ರಣಮ್ಯ ಗುರುಪ್ರಸಾದ್ ಉಪ್ಪೂರ್, ಶ್ರೇಯಾಂಕಾ ಶಂಕರ್ ಚಿಟ್ಟೆ, ಅಂಶು ಯೋಗೇಂದ್ರ ನಾಯ್ಕ್, ಸ್ಕಂದ ಸುಭಾಸ್ ರಾವ್ ಅವರನ್ನು ಅಭಿನಂದಿಸಿ ಸನ್ಮಾನಿಸಿ ಮುಂದಿನ ವಿದ್ಯಾಭ್ಯಾಸಕ್ಕೆ ಶುಭ ಹಾರೈಸಲಾಯಿತು.  ತಸ್ಮಯಿ ಎನ್. ತಲ್ಲಂಜೆ ಮತ್ತು ತನ್ಮಯಿ ಎನ್. ತಲ್ಲಂಜೆ ಅವರ…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಮೂಡುಬಿದಿರೆ: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ, ನಮ್ಮ ಮೂಡುಬಿದಿರೆ, ನೇತಾಜಿ ಬ್ರಿಗೇಡ್, ಜೆಸಿಐ, ಮೂಡುಬಿದಿರೆ ಬಂಟರ ಮಹಿಳಾ ಸಂಘದ ಸದಸ್ಯರು ಭಾನುವಾರ ವಿದ್ಯಾಗಿರಿ-ಹನ್ಡೇಲು ಹಾಗೂ ವಿದ್ಯಾಗಿರಿ-ಪುತ್ತಿಗೆ ಪರಿಸರದ 5.5 ಕಿಮೀ ವ್ಯಾಪ್ತಿಯಲ್ಲಿ ಸ್ವಚ್ಛತಾ ಅಭಿಯಾನ ಸ್ವಚ್ಛ ಸಂಕಲ್ಪ ಕಾರ್ಯಕ್ರಮವನ್ನು ಹಮ್ಮಿಕೊಂಡರು. ಉಡುಪಿ ಜಿಲ್ಲಾ ಅಮೆಚೂರ್ ಅಥ್ಲೆಟಿಕ್ ಅಸೋಸಿಯೇಷನ್‌ನ ಅಧ್ಯಕ್ಷ ಅಶೋಕ ಅಡ್ಯಂತಾಯ ಕಾರ್ಯಕ್ರಮಕ್ಕೆ ಶುಭ ಹಾರೈಸಿ ಸ್ವಚ್ಛತೆ ಎನ್ನುವುದು ಆರೋಗ್ಯಕರ ಸಮಾಜದ ಅಡಿಪಾಯ. ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳುವುದು ಪ್ರತಿಯೊಬ್ಬ ನಾಗರಿಕನ ಜವಾಬ್ದಾರಿಯೂ ಹೌದು. ಇದೇ ಉದ್ದೇಶವನ್ನು ಮನಗಂಡು ಮೂಡುಬಿದಿರೆಯಲ್ಲಿ ವಿವಿಧ ಸಂಘ–ಸಂಸ್ಥೆಗಳು ಕೈಜೋಡಿಸಿ “ಸ್ವಚ್ಛ ಸಂಕಲ್ಪ” ಎಂಬ ಮಹತ್ವದ ಸ್ವಚ್ಛತಾ ಅಭಿಯಾನವನ್ನು ಹಮ್ಮಿಕೊಂಡಿವೆ ಎಂದರು. ಕಾರ್ಯಕ್ರಮದಲ್ಲಿ ಮಾತನಾಡಿದ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಟ್ರಸ್ಟಿ ವಿವೇಕ್ ಆಳ್ವ, ಆಳ್ವಾಸ್‌ನಿಂದ ಕಳೆದ 12 ವರ್ಷಗಳಿಂದ ಅಳಿವೆ ಪ್ರದೇಶದಲ್ಲಿ ನಿರಂತರವಾಗಿ ಸ್ವಚ್ಛತಾ ಅಭಿಯಾನ ನಡೆಸುತ್ತ ಬರಲಾಗಿದೆ. ನಂದಿನಿ ಹಾಗೂ ಫಾಲ್ಗುಣಿ ನದಿಗಳು ಈ ಭಾಗದಲ್ಲಿ ಹರಿಯುತ್ತಿದ್ದು, ಅವುಗಳಿಗೆ ಸಂಪರ್ಕ ಹೊಂದಿರುವ ಚರಂಡಿಗಳ ಮೂಲಕ ತ್ಯಾಜ್ಯಗಳು ನದಿಗೆ…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕುಂದಾಪುರ: 2025-26ನೇ ಸಾಲಿನ ಕರ್ನಾಟಕ ಶಾಲಾ ಶಿಕ್ಷಣ ಇಲಾಖೆ ನಡೆದಿದ ದ್ವಿತೀಯ ಪಿಯುಸಿ ಪರೀಕ್ಷೆ -2ರ ಫಲಿತಾಂಶ ಪ್ರಕಟಗೊಂಡಿದ್ದು ಹೆಮ್ಮಾಡಿಯ ಜನತಾ ಪಿಯು ಕಾಲೇಜಿನ ವಿದ್ಯಾರ್ಥಿಗಳು ಸಾಧನೆ ಮೆರೆದಿದ್ದಾರೆ. ವಿದ್ಯಾರ್ಥಿಗಳಾದ ಅಕ್ಷತಾ ವೀರಣ್ಣ 597ಅಂಕ ಗಳಿಸಿ 3ನೇ ರ‍್ಯಾಂಕ್‌, ದೀಕ್ಷಾ 596 ಅಂಕದೊಂದಿಗೆ 4ನೇ ರ‍್ಯಾಂಕ್‌, ತನ್ವಿತಾ 595 5ನೇ ರ‍್ಯಾಂಕ್‌, ಗಗನ್ ಜಿ.594 6ನೇ ರ‍್ಯಾಂಕ್‌, ಸ್ಮೃತಿಕಾ 593ಅಂಕದೊಂದಿಗೆ 7ನೇ ರ‍್ಯಾಂಕ್‌, ಶ್ರೇಯಸ್ ಪಿ. ಗಾಣಿಗ 591 9ನೇ ರ‍್ಯಾಂಕ್‌, ಸಾಕ್ಷಿ ಎಸ್. ಪೂಜಾರಿ 591ಅಂಕದೊಂದಿಗೆ 9ನೇ ರ‍್ಯಾಂಕ್‌, ಸನ್ಮಿತಾ 590 ಅಂಕ ಗಳಿಸಿ 10ನೇ ರ‍್ಯಾಂಕ್‌, ಶ್ರದ್ಧಾ ಎಸ್.ಎಮ್. 590ಅಂಕ ಗಳಿಸಿ 10ನೇ ರ‍್ಯಾಂಕ್‌, ಸ್ಪಂದನಾ ಪಿ.ಎಸ್‌. 590 ಅಂಕದೊಂದಿಗೆ 10ನೇ ರ‍್ಯಾಂಕ್‌, ಅನುಷಾ ಪೂಜಾರಿ 590 ಅಂಕಗಳೊಂದಿಗೆ 10ನೇ ರ‍್ಯಾಂಕ್‌ ಪಡೆದಿರುತ್ತಾರೆ . ವಿದ್ಯಾರ್ಥಿಗಳ ಸಾಧನೆಗೆ ಆಡಳಿತ ಮಂಡಳಿ, ಪ್ರಾಂಶುಪಾಲರು, ಬೋಧಕ, ಬೋಧಕೇತರ ಸಿಬ್ಬಂದಿಗಳು ಅಭಿನಂದನೆ ಸಲ್ಲಿಸಿದ್ದಾರೆ.

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಉಡುಪಿ: ಜಿಲ್ಲೆಯಲ್ಲಿ ಸರ್ಕಾರಿ, ಖಾಸಗಿ ಸೇರಿದಂತೆ ಇತರೆ ಸಂಸ್ಥೆಗಳಲ್ಲಿ ಕೆಲಸ ಮಾಡುತ್ತಿರುವ ಮಹಿಳೆಯರಿಗೆ ಕೆಲಸದ ಸ್ಥಳಗಳಲ್ಲಿ ಸುರಕ್ಷಿತ ವಾತಾವರಣ ಕಲ್ಪಿಸುವುದರೊಂದಿಗೆ, ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳ ಸಂಖ್ಯೆ ಶೂನ್ಯವಾಗಬೇಕು ಎಂದು ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷರಾದ ಡಾ. ನಾಗಲಕ್ಷ್ಮೀ ಚೌಧರಿ ಹೇಳಿದರು. ಅವರು ನಗರದ ಮಣಿಪಾಲ ರಜತಾದ್ರಿಯ ಅಟಲ್ ಬಿಹಾರಿ ವಾಜಪೇಯಿ ಸಭಾಂಗಣದಲ್ಲಿ, ಕರ್ನಾಟಕ ರಾಜ್ಯ ಮಹಿಳಾ ಆಯೋಗ ಬೆಂಗಳೂರು, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಆರಕ್ಷಕ ಇಲಾಖೆ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಡುಪಿ ಜಿಲ್ಲೆ ಇವರ ಸಂಯುಕ್ತ ಆಶ್ರಯದಲ್ಲಿ ಸ್ಥಳೀಯ ಹಾಗೂ ಆಂತರಿಕ ದೂರು ನಿವಾರಣಾ ಸಮಿತಿ ಸದಸ್ಯರಿಗೆ ನಡೆದ ಕೆಲಸದ ಸ್ಥಳದಲ್ಲಿ ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯ ತಡೆ ಕಾಯ್ದೆ – 2013 (POSH ACT) ರ ಕುರಿತ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಕೆಲಸದ ಸ್ಥಳಗಳಲ್ಲಿ ಮಹಿಳೆಯರಿಗೆ ಗೌರವಯುತ ವಾತಾವರಣ ನಿರ್ಮಾಣವಾಗಬೇಕು. ಮಹಿಳೆಯರು ದೈಹಿಕವಾಗಿ ಹಾಗೂ ಮಾನಸಿಕವಾಗಿ ಭಯಮುಕ್ತ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಕೊಲ್ಲೂರು: ಇತ್ತೀಚಿಗೆ ದಳಿ ಎಂಬಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಮೃತಪಟ್ಟ ಮಹಿಳೆಯೋರ್ವರ ಮೇಲಿನ ಚಿನ್ನಾಭರಣ ಕಳವುಗೈದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಹೇಮಂತ್ ಎಂಬಾತನನ್ನು ಕೊಲ್ಲೂರು ಪೊಲೀಸರು ಬಂಧಿಸಿದ್ದಾರೆ. ಮೇ.17ರಂದು ನಡೆದ ಅಪಘಾತದಲ್ಲಿ ಕೇರಳ ಮೂಲದ ಇಬ್ಬರು ಮಹಿಳಾ ಯಾತ್ರಾರ್ಥಿಯವರು ಮೃತಪಟ್ಟಿದ್ದರು. ಘಟನಾ ಸ್ಥಳದಲ್ಲಿ ಮೃತಪಟ್ಟ ಮಹಿಳೆಯೋರ್ವರ ಮೈಮೇಲಿನ ಚಿನ್ನಾಭರಣಗಳನ್ನು ಯಾರೋ ಕಳ್ಳರು ಕಳ್ಳತನ ಮಾಡಿದ ಬಗ್ಗೆ ಕೆಲ ದಿನಗಳ ಬಳಿಕ ಶ್ರೀಕುಮಾರ ಎಂಬುವವರು ದೂರು ನೀಡಿದ್ದರು. ಅದರಂತೆ ಕಾರ್ಯಪ್ರವೃತ್ತರಾದ ಕೊಲ್ಲೂರು ಪೊಲೀಸ್ ಠಾಣಾ ಉಪನಿರೀಕ್ಷಕರಾದ ವಿನಯ ಎಂ. ಕೊರ್ಲಹಳ್ಳಿ, ನಾಗೇಂದ್ರ ಹೆಚ್‌ಸಿ, ಲಕ್ಷ್ಮಣ ಗಾಣಿಗ ಹೆಚ್‌ಸಿ, ರಾಘವೇಂದ್ರ ಹೆಚ್‌ಸಿ, ನಾಗರಾಜ ಪಿ.ಸಿ ರವರುಗಳು ಸಿಸಿಟಿವಿ, ಘಟನಾ ಸ್ಥಳದಲ್ಲಿ ಸಾರ್ವಜನಿಕರು ತೆಗೆದ ವಿವಿಧ ಫೊಟೋಗಳು ಮತ್ತು ತಾಂತ್ರಿಕ ಸಹಾಯದಿಂದ ಆರೋಪಿ ಕೊಲ್ಲೂರು ಕಲ್ಯಾಣಿಗುಡ್ಡೆಯ ಹೇಮಂತ s/o ನಾರಾಯಣ ಶೆಟ್ಟಿ ಎಂಬಾತನನ್ನು ಪ್ರಕರಣ ದಾಖಲಾದ 24 ಗಂಟೆ ಒಳಗಡೆ ಪತ್ತೆಹಚ್ಚಿ ಬಂಧಿಸಿದ್ದಾರೆ. ಆರೋಪಿಯು ಕಳವು ಮಾಡಿದ್ಸ 1) 3.910 ಗ್ರಾಂ…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕೋಟ: ಕೃಷಿ ಭೂಮಿ ಬಂಜೆಯಲ್ಲ ಅದನ್ನು ಹಡಿಲು ಬೀಳಲು ಬಿಡಬೇಡಿ ಎಂದು ಕೋಟ ರೈತಧ್ವನಿ ಸಂಘಟನೆಯ ಅಧ್ಯಕ್ಷ ಎಂ. ಜಯರಾಮ ಶೆಟ್ಟಿ ರೈತ ಸಮುದಾಯಕ್ಕೆ ಕರೆ ನೀಡಿದರು. ಅವರು ಶನಿವಾರ ಕೋಟದ ಪಂಚವರ್ಣ ಯುವಕ ಮಂಡಲ ಪ್ರವರ್ತಿತ ಸಂಸ್ಥೆ ಪಂಚವರ್ಣ ಮಹಿಳಾ ಮಂಡಲದ ನೇತೃತ್ವದಲ್ಲಿ ಗೀತಾನಂದ ಫೌಂಡೇಶನ್ ಮಣೂರು, ಗೆಳೆಯರ ಬಳಗ ಕಾರ್ಕಡ, ರೈತಧ್ವನಿ ಸಂಘ ಕೋಟ, ರೋಟರಿ ಕ್ಲಬ್ ಕೋಟ ಸಾಲಿಗ್ರಾಮ, ಸ್ನೇಹಕೂಟ ಮಣೂರು ಇವರುಗಳ ಸಂಯುಕ್ತಗಳು ಸಹಯೋಗದೊಂದಿಗೆ 54ನೇ ರೈತರೆಡೆಗೆ ನಮ್ಮ ನಡಿಗೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಪ್ರಸ್ತುತ ಕೃಷಿಯಿಂದ ಹೆಚ್ಚಿನವರು ವಿಮುಖರಾಗುತ್ತಿರುವ ಮಾಹಿತಿಗಳು ಕೇಳಿ ಬರುತ್ತಿವೆ ಇದು ಸಲ್ಲ ಬದಲಾಗಿ ಇನ್ನು ಮುಂದಿನ ದಿನಗಳಲ್ಲಿ ಕೃಷಿ ಇದ್ದವರಲ್ಲಿ ಶ್ರೀಮಂತಿಕೆ ಉಳಿಯಲಿದೆ.ಪ್ರತಿಯೊಬ್ಬರು ಕೃಷಿ ಭೂಮಿ ಹಡಿಲು ಬೀಳಿಸಿದರೆ ಮುಂದೆ ಬಾರಿ ಸಂಕಷ್ಟವನ್ನು ಎದುರಿಸಬೇಕಾದಿತು. ಕೃಷಿ ಭೂಮಿ ಯಾವತ್ತು ಬಂಜೆಯಾಗಲು ಸಾಧ್ಯವಿಲ. ಕೃಷಿಯಲ್ಲಿ ಸಮಗ್ರ ಕೃಷಿ ನೀತಿ ಅನುಸರಿಸಿ ಯಶಸ್ಸು ಖಂಡಿತಾ ದೊರಕಲಿದೆ, ಪಂಚವರ್ಣ ರೈತರೆಡೆಗೆ ರೈತಸಮುದಾಯಕ್ಕೆ…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕುಂದಾಪುರ: ತಾಲೂಕಿನ ಆಂಪಾರು ಗ್ರಾಮದ ಸಂಜಯ ಗಾಂಧಿ ಚಾರಿಟೇಬಲ್ ಟ್ರಸ್ಟ್ ರಿ. ಅಂಪಾರು  ಹಾಗೂ ರೋಟರಿ ಕ್ಲಬ್ ಕುಂದಾಪುರ ಇವರ ಸಹಯೋಗದಲ್ಲಿ ಚಿಗುರು ಮಿಡ್ ಬ್ರೈನ್ ಆಕ್ಟಿವೇಶನ್ ಅಕಾಡೆಮಿ ವತಿಯಿಂದ ಸಂಜಯ ಗಾಂಧಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಆಯೋಜಿಸಲಾದ ಗಾಂಧಾರಿ ವಿದ್ಯೆ ತರಬೇತಿ ಶಿಬಿರದ ಸಮಾರೋಪ ಸಮಾರಂಭವು ಶನಿವಾರದಂದು ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಜಯ ಗಾಂಧಿ ಚಾರಿಟೇಬಲ್ ಟ್ರಸ್ಟ್‌ನ ನಿರ್ದೇಶಕರಾದ ಕೋಟೆಬೆಟ್ಟು ಸುರೇಂದ್ರ ಶೆಟ್ಟಿ ವಹಿಸಿದ್ದರು. ವೇದಿಕೆಯಲ್ಲಿ ಟ್ರಸ್ಟ್‌ನ ಖಜಾಂಚಿ ಹಾಗೂ ಶಾಲಾ ಶೈಕ್ಷಣಿಕ ಸಂಚಾಲಕರು, ರೋಟರಿ ಕ್ಲಬ್ ಕುಂದಾಪುರದ ಮಾಜಿ ಅಧ್ಯಕ್ಷರಾದ ಸುಭಾಶ್ಚಂದ್ರ ಶೆಟ್ಟಿ ಕೊಡ್ಲಾಡಿ, ಶಾಲಾ ಆಡಳಿತಾಧಿಕಾರಿ ಚೈತ್ರ ಯಡಿಯಾಳ ಹಾಗೂ ಚಿಗುರು ಮಿಡ್ ಬ್ರೈನ್ ಆಕ್ಟಿವೇಶನ್ ಅಕಾಡೆಮಿಯ ಸಂಸ್ಥಾಪಕರಾದ ಮಹೇಶ್ ಮತ್ತು ದಿವ್ಯಶ್ರೀ ಮಹೇಶ್ ಉಪಸ್ಥಿತರಿದ್ದರು. ವಿದ್ಯಾರ್ಥಿನಿಯರಾದ ಧನ್ವಿ ಹಾಗೂ ಪ್ರಣಮ್ಯ ಪ್ರಾರ್ಥನೆಗೈದು ಕಾರ್ಯಕ್ರಮಕ್ಕೆ ಶುಭಾರಂಭ ಮಾಡಿದರು. ಶಾಲಾ ಆಡಳಿತಾಧಿಕಾರಿ ಚೈತ್ರ ಯಡಿಯಾಳ ಸಭಿಕರನ್ನು ಸ್ವಾಗತಿಸಿ, ಗ್ರಾಮೀಣ ಭಾಗದ ಮಕ್ಕಳಿಗಾಗಿ ಇಂತಹ ಅಪೂರ್ವ ಅವಕಾಶವನ್ನು…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕೋಟ: ಸಂಘ-ಸಂಸ್ಥೆಗಳು ಶೈಕ್ಷಣಿಕ ಕಾರ್ಯಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಿರುವುದು ಅತ್ಯಂತ ಪ್ರಶಂಸನೀಯ ಕಾರ್ಯ ಎಂದು ಉದ್ಯಮಿ ಸಂಪತ್ ಕುಮಾರ್ ಶೆಟ್ಟಿ  ಹೇಳಿದರು. ಅವರು ಶುಕ್ರವಾರ ಮೂಡುಗಿಳಿಯಾರಿನಲ್ಲಿ ಗಿಳಿಯಾರು ಯುವಕ ಮಂಡಲ ಇದರ ದಶಮಾನೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು. ಗಿಳಿಯಾರು ಯುವಕ ಮಂಡಲ ತನ್ನೂರಿನ ಸರಕಾರಿ ಶಾಲೆಗಳ ಉಳಿವಿನ ಬಗ್ಗೆ ಶ್ರಮಿಸುತ್ತಿವುದು ಇತರ ಸಂಘಟನೆಗಳಿಗೆ ಮಾದರಿಯಾಗಿದೆ. ವಾರ್ಷಿಕೋತ್ಸವ ಅಥವಾ ದಶಮಾನೋತ್ಸವ ಕಾರ್ಯಕ್ರಮಗಳು ಸರಳ ರೀತಿಯಲ್ಲಿ ಆಚರಿಸುವುದರ ಮೂಲಕ ಮನೆಮಾತಾಗಿ ಬೆಳೆದು ನಿಂತಿದೆ ಎಂದು ಅಭಿಪ್ರಾಯಪಟ್ಟರು. ಈ ಸಂದರ್ಭದಲ್ಲಿ ಸತತ ಹತ್ತು ವರ್ಷ ಸೇವೆ ಸಲ್ಲಿಸಿದ ಏಳು ಸೇವಾಧ್ಯಕ್ಷರಿಗೆ ಪುಷ್ಭ ನೀಡಿ ಗೌರವಿಸಲಾಯಿತು. ಗಿಳಿಯಾರು ಯುವಕ ಮಂಡಲದ ದಶಮ ಸಂಭ್ರಮದ ಪುರಸ್ಕಾರವನ್ನು ಸಮಾಜಸೇವಕ ರವಿ ಕಟಪಾಡಿ ಇವರಿಗೆ ನೀಡಲಾಯಿತು . ಸಭಾಧ್ಯಕ್ಷತೆಯನ್ನು ಗಿಳಿಯಾರು ಯುವಕ ಮಂಡಲದ ಅಧ್ಯಕ್ಷ ಸುಭಾಷ್ ಪೂಜಾರಿ ವಹಿಸಿದ್ದರು. ಮುಖ್ಯ ಅಭ್ಯಾಗತರಾಗಿ ನ್ಯೂ ಕರ್ನಾಟಕ ಬಿಲ್ಡಸ್೯ ಮಾಲಿಕ ಚೇತನ್ ಕುಮಾರ್ ಶೆಟ್ಟಿ, ಹೊನ್ನಾರಿ ಬೊಬ್ಬರ್ಯ ದೈವಸ್ಥಾನದ ಮುಕ್ತೇಸರ ಮಹಾಬಲ…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಮೂಡುಬಿದಿರೆ: ಮಂಗಳೂರು ವಿಶ್ವವಿದ್ಯಾನಿಲಯ ಹಾಗೂ ಬ್ರಹ್ಮಾವರದ ಎಸ್‌ಎಂಎಸ್ ಕಾಲೇಜಿನ ಸಂಯುಕ್ತ ಆಶ್ರಯದಲ್ಲಿ ನಡೆದ ಮಂಗಳೂರು ವಿವಿ ಅಂತರ್ ಕಾಲೇಜು ಮಹಿಳಾ ಕ್ರಿಕೆಟ್ ಪಂದ್ಯಾವಳಿಯಲ್ಲಿ ಆಳ್ವಾಸ್ ಕಾಲೇಜಿನ ತಂಡವು ಫೈನಲ್‌ನಲ್ಲಿ  ಬ್ರಹ್ಮಾವರದ ಎಸ್‌ಎಂಎಸ್ ಕಾಲೇಜಿನ ತಂಡವನ್ನು ಪರಾಭವಗೊಳಿಸುವ ಮೂಲಕ ಚಾಂಪಿಯನ್ ಪಟ್ಟವನ್ನು ಅಲಂಕರಿಸಿತು.   ವಿಜೇತ ತಂಡದ ಪಲ್ಲವಿ ಉತ್ತಮ ಬ್ಯಾಟರ್, ನಳಿನಾಕ್ಷಿ ಉತ್ತಮ ವಿಕೆಟ್ ಕೀಪರ್ ಮತ್ತು ಕೃಪಾ ಉತ್ತಮ ಸವ್ಯಸಾಚಿ ಪ್ರಶಸ್ತಿಯನ್ನು ಪಡೆದುಕೊಂಡರು. ವಿಜೇತ ತಂಡವನ್ನು ಸಂಸ್ಥೆಯ ಅಧ್ಯಕ್ಷರಾದ ಡಾ. ಎಂ. ಮೋಹನ ಆಳ್ವ ಅವರು ಅಭಿನಂದಿಸಿದ್ದಾರೆ.  

Read More