Author: ನ್ಯೂಸ್ ಬ್ಯೂರೋ

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಕುಂದಾಪುರ ವಲಯಕ್ಕೆ ಸಂಬಂಧಿಸಿದ ಸಂತ ಅಂತೋನಿಗೆ ಸಮರ್ಪಿಸಲ್ಪಟ್ಟ, ಕಂಡ್ಲೂರಿನ ನೂತನ ಧರ್ಮಕೇಂದ್ರಕ್ಕೆ ಅದಿಕೃತ ನೂತನ ಧರ್ಮಗುರುಗಳಾಗಿ ವ|ವಿಕ್ಟರ್ ಡಿಸೋಜಾ ಇವರ ಆಗಮನವಾಗಿದೆ. ಈ ಮೊದಲು ಬಸ್ರೂರು ಧರ್ಮಕೇಂದ್ರದ ಅಧಿನದಲ್ಲಿದ್ದ ಈ ಧರ್ಮಕೇಂದ್ರದ ಧರ್ಮಗುರುಗಳಾದ ವ|ವಿಶಾಲ್ ಲೋಬೊ ಮತ್ತು ಕುಂದಾಪುರ ವಲಯ ಪ್ರಧಾನ ಧರ್ಮಗುರು ವ|ಅನಿಲ್ ಡಿಸೋಜಾ, ಮತ್ತು ಭಕ್ತರು ನೂತನ ಧರ್ಮಗುರುಗಳನ್ನು ಬರಮಾಡಿಕೊಂಡರು. ಧರ್ಮಗುರುಗಳಾದ ವಿಶಾಲ್ ಲೋಬೊ ಹಾಗೂ ಅನಿಲ್ ಡಿಸೋಜಾ ಅವರು ಧರ್ಮಗುರು ವಿಕ್ಟರ್ ಡಿಸೋಜಾ ಇವರಿಗೆ ವಿದ್ಯುಕ್ತವಾಗಿ ಅಧಿಕಾರವನ್ನು ಹಸ್ತಾಂತರಿಸುವ ಕಾರ್ಯ ಮತ್ತು ಪೂಜಾ ವಿಧಿ ವಿಧಾನಗಳನ್ನು ನೆಡೆಸಿಕೊಟ್ಟರು. ಮಕಮಾರ್ ಧರ್ಮಕೇಂದ್ರದಿಂದ ವರ್ಗಾವಣೆಯಾಗಿ ಬಂದು ಅಧಿಕಾರ ಸ್ವೀಕಾರ ಮಾಡಿದ ಧರ್ಮಗುರು ವಿಕ್ಟರ್ ಡಿಸೋಜಾ ’ನಾನು ಇಲ್ಲಿ ಏಸುವಿನ ಸೇವಕನಾಗಿ, ನಿಸ್ವಾರ್ಥ ಸೇವೆ ಮಾಡಲು ಬಂದಿದ್ದೆನೆ ಅದಕ್ಕಾಗಿ ನಿಮ್ಮೆಲ್ಲರ ಸಹಕಾರ ಅಗತ್ಯವಿದೆ, ಉಡುಪಿಯ ಧರ್ಮ ಪ್ರಾಂತ್ಯದ ಬಿಶಪ್ ಅ|ವ|ಡಾ|ಜೆರಾಲ್ಡ್ ಐಸಾಕ್ ಲೋಬೊ ಇವರಿಗೆ ವಂದನೆಗಳನ್ನು ಅರ್ಪಿಸುತ್ತೆನೆ ಎಂದು ಅವರು ತಿಳಿಸಿದರು. ಸಮಾರಂಭದಲ್ಲಿ ಬಸ್ರೂರು ಧರ್ಮಕೇಂದ್ರದ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಯುವತಿಯೋರ್ವಳು ಯಾಮಾರಿಸಿ ಅವಳ ಗೆಳೆಯನೇ ತೆಗೆದ ನಗ್ನ ವಿಡಿಯೋ ಇಟ್ಟುಕೊಂಡು ತಮ್ಮೊಡನೆ ಲೈಂಗಿಕವಾಗಿ ಸಹಕರಿಸಬೇಕು, ಇಲ್ಲದಿದ್ದರೆ ವಿಡಿಯೋವನ್ನು ಸಾಮಾಜಿಕ ತಾಣಗಳಲ್ಲಿ ಹರಿಯಬಿಡುವುದಾಗಿ ಯುವತಿಯನ್ನು ಬ್ಲಾಕ್ ಮೇಲ್ ಮಾಡಿದ ಆರೋಪಿಗಳ ಪೈಕಿ ಓರ್ವನನ್ನು ಪೋಲಿಸರು ವಶಕ್ಕೆ ಪಡೆದುಕೊಂಡರೆ ಪ್ರಮುಖ ಆರೋಪಿ ನಾಪತ್ತೆಯಾಗಿದ್ದಾನೆ. ಸೆರೆಯಾದ ಆರೋಪಿ ಸಂತೋಷ ಪೂಜಾರಿ, ನಾಪತ್ತೆಯಾದ ಆರೋಪಿ ಸುದರ್ಶನ ಶೆಟ್ಟಿ. ಘಟನೆಯ ವಿವರ: ಮೂರು ವರ್ಷಗಳ ಹಿಂದೆ ಇದೀಗ ಪ್ರಕರಣದ ಕಿಂಗ್ ಪಿನ್ ಆಗಿರುವ ಸುದರ್ಶನ ಶೆಟ್ಟಿ ಎಂಬಾತ ತನ್ನ ಹಾಲಾಡಿ ಪರಿಸರದ ತನ್ನ ಗೆಳತಿಯನ್ನು ಕರೆದುಕೊಂಡು ಕೊಲ್ಲೂರಿಗೆ ಜಾಲಿ ಟೂರ್ ಹೋಗಿದ್ದ. ಆಕಸ್ಮಿಕವೋ, ಕರಾರುವಾಕ್ಕೋ ಎಂಬಂತೆ ಮಾರ್ಗಮಧ್ಯದಲ್ಲಿ ಆಕೆಗೆ ಋತುಸ್ರಾವ ಆದ ಕಾರಣದಡಿ ಇಬ್ಬರೂ ಕೊಲ್ಲೂರಿನ ಲಾಡ್ಜ್ ಒಂದರಲ್ಲಿ ಕೋಣೆಯನ್ನು ಬಾಡಿಗೆಗೆ ಪಡೆಯುತ್ತಾರೆ. ಇದೀಗ ಯುವತಿ ದೂರಿನಲ್ಲಿ ಹೇಳಿದಂತೆ ಅಂದು ಲಾಡ್ಜಿನ ಬಾತ್ ರೂಮಿನಲ್ಲಿ ಆಕೆ ಸ್ನಾನ ಮಾಡಿ ಬಟ್ಟೆ ಬದಲಾಯಿಸುವ ದೃಶ್ಯವನ್ನು ಆಕೆಗೆ ತಿಳಿಯದಂತೆ ಸುದರ್ಶನ ಶೆಟ್ಟಿ ವಿಡಿಯೊ ಮಾಡಿಕೊಂಡಿದ್ದಂತೆ.…

Read More

ರೋಹಿತ್ | ಕುಂದಾಪ್ರ ಡಾಟ್ ಕಾಂ ಸುದ್ದಿ. ದುಬೈ: ಕುಂದಾಪುರ ದೇವಾಡಿಗ ಮಿತ್ರ ದುಬೈ (ಕದಂ) ಸಂಘಟನೆಯು ಪವಿತ್ರ ರಂಜಾನ್ ತಿಂಗಳ ಅಂಗವಾಗಿ ದುಬೈ ಲತೀಫ್ ಆಸ್ಪತ್ರೆಯ ರಕ್ತನಿಧಿ ಕೇಂದ್ರದಲ್ಲಿ ರಕ್ತದಾನ ಶಿಬಿರವನ್ನು ಆಯೋಜಿಸಿತ್ತು. ದುಬೈ ಕುಂದಾಪುರ ದೇವಾಡಿಗ ಮಿತ್ರ ಸಂಘಟನೆಯ ಅಧ್ಯಕ್ಷ ದಿನೇಶ್ ಸಿ.ಡಿ ಶಿಬಿರವನ್ನು ಉದ್ಘಾಟಿಸಿ ಶುಭಹಾರೈಸಿದರು. ಈ ಸಂದರ್ಭದಲ್ಲಿ ಸಂಘಟನೆಯ ಪ್ರಮುಖರು ಹಾಗೂ ಅತಿಥಿಗಳು ಉಪಸ್ಥಿತರಿದ್ದರು. ಸುಮಾರು 85ಕ್ಕೂ ಅಧಿಕ ರಕ್ತದಾನಿಗಳು ಶಿಬಿರದಲ್ಲಿ ಯಶಸ್ವಿಯಾಗಿ ಪಾಲ್ಗೊಂಡು ರಕ್ತದಾನ ಮಾಡಿದರು. ದುಬೈ ಯುಎಇಯಲ್ಲಿ ನೆಲೆಸಿರುವ ಕುಂದಾಪುರ ಮೂಲದ ದೇವಾಡಿಗ ಸಮುದಾಯದವರು ಕಟ್ಟಿಕೊಂಡ ಕದಂ ಸಂಘಟನೆ ವರ್ಷಂಪ್ರತಿ ಹಲವಾರು ಸಾಮಾಜಿಕ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಿ ಸಮಾಜದ ಬಂಧುಗಳ ಮೆಚ್ಚುಗೆಗೆ ಪಾತ್ರವಾಗಿದೆ.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ ಕುಂದಾಪುರ: ಮರವಂತೆ ಗ್ರಾಮ ಪಂಚಾಯಿತಿ ಮತ್ತು ಕಾರ್ಮಿಕ ಇಲಾಖೆಯ ಏಕಗವಾಕ್ಷಿ ಯೋಜನೆಯ ಸಂಯುಕ್ತ ಆಶ್ರಯದಲ್ಲಿ ಗ್ರಾಮ ಪಂಚಾಯತ್ ಸುವರ್ಣ ಸಭಾಭವನದ ಅಟಲ್ ಬಿಹಾರಿ ವಾಜಪೇಯಿ ವೇದಿಕೆಯಲ್ಲಿ ಕಟ್ಟಡ ನಿರ್ಮಾಣ ಕಾರ್ಮಿಕರ ಮತ್ತು ಆಮ್ ಆದ್ಮಿ ವಿಮಾ ಯೋಜನೆಯ ಫಲಾನುಭವಿಗಳ ನೋಂದಣಿ ಶಿಬಿರ ಮಂಗಳವಾರ ನಡೆಯಿತು. ಗ್ರಾಮ ಪಂಚಾಯಿತಿ ಅಧ್ಯಕ್ಷೆ ಅನಿತಾ ಆರ್. ಕೆ. ಅಧ್ಯಕ್ಷತೆ ವಹಿಸಿದ್ದರು. ಎರಡು ಯೋಜನೆಗಳ ಮಾಹಿತಿ ನೀಡಿದ ಏಕಗವಾಕ್ಷಿ ಯೋಜನೆಯ ಸಂಯೋಜಕ ಮಂಜುನಾಥ ಕಟ್ಟಡ ಕಾರ್ಮಿಕರಿಗೆ ಮತ್ತು ಅವರ ಕುಟುಂಬದ ಸದಸ್ಯರಿಗೆ ಕಟ್ಟಡ ಕಾರ್ಮಿಕರ ಕಲ್ಯಾಣ ನಿಧಿಯಿಂದ ಸಿಗುವ ಸೌಲಭ್ಯಗಳನ್ನು ವಿವರಿಸಿದರು. ಆಮ್‌ಆದ್ಮಿ ವಿಮಾ ಯೋಜನೆಯಿಂದ ಬಡತನ ರೇಖೆಯ ಕೆಳಗಿರುವವರಿಗೆ ದೊರೆಯುವ ಸೌಲಭ್ಯ ಮತ್ತು ಪರಿಹಾರಗಳ ಮಾಹಿತಿ ನೀಡಿದರು. ಕಾರ್ಯದರ್ಶಿ ಹರಿಶ್ಚಂದ್ರ ಆಚಾರ್ಯ ಸ್ವಾಗತಿಸಿ, ವಂದಿಸಿದರು. ಉಪಾಧ್ಯಕ್ಷ ಗಣೇಶ ಪೂಜಾರಿ, ಕಾರ್ಮಿಕ ನಿರೀಕ್ಷಕ ಸತ್ಯನಾರಾಯಣ ಉಪಸ್ಥಿತರಿದ್ದರು. ಶಿಬಿರದಲ್ಲಿ ಎರಡು ಯೋಜನೆಯಡಿ ಸುಮಾರು ೨೫೦ ಜನರು ನೋಂದಣಿ ಮಾಡಿಸಿಕೊಂಡರು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಗಂಗೊಳ್ಳಿ : ಫ್ರೌಢಾವಸ್ಥೆ ಎನ್ನುವುದು ಜೀವನದ ಪ್ರಮುಖ ಹಂತ. ಮಕ್ಕಳು ತಮ್ಮ ಭವಿಷ್ಯತ್ತನ್ನು ರೂಪಿಸಿಕೊಳ್ಳುವ ಕಡೆಗೆ ಹೆಚ್ಚಿನ ಗಮನವನ್ನು ಈ ಹಂತದಲ್ಲಿ ನೀಡಬೇಕಾಗುತ್ತದೆ. ತಮ್ಮೆಲ್ಲಾ ಪಠ್ಯೇತರ ಚಟುವಟಿಕೆಗಳೊಂದಿಗೆ ವಿಧ್ಯಾಭ್ಯಾಸವನ್ನು ಗಂಭೀರವಾಗಿ ವಿದ್ಯಾರ್ಥಿಗಳು ಪರಿಗಣಿಸಬೇಕು ಎಂದು ಜಿ.ಎಸ್.ವಿ.ಎಸ್ ಅಸೋಷಿಯೇಶನ್ನಿನ ಕಾರ‍್ಯದರ್ಶಿ ಹೆಚ್ ಗಣೇಶ್ ಕಾಮತ್ ಅಭಿಪ್ರಾಯಪಟ್ಟರು. ಅವರು ಇತ್ತೀಚೆಗೆ ಗಂಗೊಳ್ಳಿಯ ಸರಸ್ವತಿ ವಿದ್ಯಾಲಯ ಫ್ರೌಢ ಶಾಲೆಯಲ್ಲಿ ನಡೆದ ಉಚಿತ ಸಮವಸ್ತ್ರ ಮತ್ತು ಪುಸ್ತಕ ವಿತರಣೆ ಸಮಾರಂಭದ ಅತಿಥಿ ಸ್ಥಾನದಿಂದ ಮಾತನಾಡಿದರು. ಜಿ.ಎಸ್.ವಿ.ಎಸ್ ಅಸೋಷಿಯೇಶನ್ನಿನ ಅಧ್ಯಕ್ಷ ಡಾ ಕಾಶೀನಾಥ ಪೈ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭದಲ್ಲಿ ಮಂಗಳೂರಿನ ಮೇಘನಾ ಗಾರ್ಮೆಂಟ್ಸ್‌ನ ಮನೋಹರ ಮತ್ತು ಮಂಗಳೂರಿನ ಪ್ರೆಸ್ಟೀಜ್ ವೈನ್ಸ್‌ನ ಶ್ರೀನಿವಾಸ ಇವರು ಕೊಡಮಾಡಿದ ಸಮವಸ್ತ್ರ ಮತ್ತು ಪುಸ್ತಕಗಳನ್ನು ಎಂಟನೇ ತರಗತಿಯ ಮಕ್ಕಳಿಗೆ ಉಚಿತವಾಗಿ ವಿತರಿಸಲಾಯಿತು. ಸರಸ್ವತಿ ವಿದ್ಯಾಲಯ ಪದವಿಪೂರ್ವ ಕಾಲೇಜಿನ ಕಾರ‍್ಯದರ್ಶಿ ಎನ್ ಸದಾಶಿವ ನಾಯಕ್, ಪ್ರಾಂಶುಪಾಲೆ ಕವಿತಾ ಎಮ್ ಸಿ , ಸರಸ್ವತಿ ವಿದ್ಯಾಲಯ ಫ್ರೌಢ ಶಾಲೆಯ ಸಮಾಜ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಇಲ್ಲಿನ ಯಡ್ತರೆ ಗ್ರಾ. ಪಂ. ವ್ಯಾಪ್ತಿಯ ಪ. ಪಂಗಡದ ರಂಗ ತಂಡ ಸಂಚಲನ(ರಿ) ಹೊಸೂರು ಸಂಸ್ಥೆಯು, ನಾಟಕ ಅಕಾಡೆಮಿ ಬೆಂಗಳೂರು ಇವರ ಆಶ್ರಯದಲ್ಲಿ ಆಯ್ದ ಬುಡಕಟ್ಟು ಯುವ ಕಲಾವಿದರಿಗೆ ಇಪ್ಪತ್ತು ದಿನಗಳ ರಂಗಶಿಬಿರವನ್ನು ಆಯೋಜಿಸಿದ್ದು ಅಕಾಡೆಮಿಯ ಸದಸ್ಯ ಉಮೇಶ್ ಸಾಲಿಯಾನ್ ಉದ್ಘಾಟಿಸಿದರು. ಬಳಿಕ ಮಾತನಾಡಿ ಮನರಂಜನೆಗಾಗಿ ಮಾತ್ರ ರಂಗಭೂಮಿ ಸೀಮಿತವಲ್ಲ. ಹೊಸ ಹೊಸ ನಾಟಕಗಳ ಮೂಲಕ ಒಳ್ಳೆಯ ಸಂದೇಶವನ್ನು ಸಮಾಜಕ್ಕೆ ನೀಡಿ ಸಮಾಜದ ಉನ್ನತಿಗಾಗಿ ಹಾಗೂ ತನ್ನನ್ನೆ ತಾನು ಬೆಳೆಸಲಿಕ್ಕೊಸ್ಕರ ರಂಗಭೂಮಿಯಲ್ಲಿ ತೊಡಗಿಸಿಕೊಳ್ಳಬೇಕು. ಆ ಉದ್ದೇಶದಿಂದ ಇಂತಹ ಗ್ರಾಮೀಣ ಪ್ರದೇಶದಲ್ಲಿ ನಾಟಕ ಅಕಾಡೆಮಿಯು ಸ್ಥಳೀಯ ರಂಗ ತಂಡಗಳ ನೆರವಿನಿಂದ ಈ ರೀತಿಯ ರಂಗ ಶಿಬಿರಗಳನ್ನೆ ಏರ್ಪಡಿಸಿ ಇಡೀ ಗ್ರಾಮವೇ ಅದರಲ್ಲಿ ತೊಡಗಿಸಿಕೊಳ್ಳುವ ಹಾಗೆ ಮಾಡುತ್ತಿದ್ದೇವೆ ಎಂದು ಹೇಳಿದರು. ಸಂಚಲನದ ಅಧ್ಯಕ್ಷ ತಿಮ್ಮ ಮರಾಠಿ ಅಧ್ಯಕ್ಷತೆ ವಹಿಸಿದ್ದು, ಸ್ಥಳೀಯ ಶಾಲಾ ಪ್ರಭಾರ ಮುಖ್ಯ ಶಿಕ್ಷಕ ರಾಮಾನಾಥ ಮೇಸ್ತ, ಗ್ರಾ. ಪಂ. ಸದಸ್ಯ ಶ್ರೀಮತಿ ಲಲಿತಾ ನಾಗಪ್ಪ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ ಕುಂದಾಪುರ: ಭಾರತೀಯ ಜೀವ ವಿಮಾ ನಿಗಮ ಕುಂದಾಪುರ ಶಾಖೆಯ ವಿಮಾ ಸಲಹೆಗಾರರಾದ ಪ್ರಕಾಶ್ಚಂದ್ರ ಶೆಟ್ಟಿ ಚಿತ್ತೂರು ಅವರು ಉತ್ತಮ ಜೀವ ವಿಮೆ ವ್ಯವಹಾರವನ್ನು ನಡೆಸಿ 3ನೇ ಬಾರಿಗೆ ಕುಂದಾಪುರದ ಏಕೈಕ ಎಂಡಿಅರ್‌ಟಿ ಸದಸ್ಯರಾಗಿ ಆಯ್ಕೆಯಾಗಿದ್ದಾರೆ. ಕೋಣಿಯ ಮಾತಾ ಮಾಂಟೆಸ್ಸೋರಿ ಮಕ್ಕಳ ಶಾಲೆಯ ವ್ಯವಸ್ಥಾಪಕ ನಿರ್ದೇಶಕರಾಗಿರುವ ಪ್ರಕಾಶ್ಚಂದ್ರ ಶೆಟ್ಟಿ ಚಿತ್ತೂರು ಅವರು ಅಮೇರಿಕಾದ ಸಿಯಾಟೆಲ್ ನಗರದಲ್ಲಿ ವ್ಯವಹಾರಿಕ ಸಭೆಗಳಲ್ಲಿ ಭಾಗವಹಿಸಿ, ಕೆನಡಾದಲ್ಲಿ ನಡೆಯಲಿರುವ ಮಿಲಿಯನ್ ಡಾಲರ್ ರೌಂಡ್ ಟೇಬಲ್ ಜಾಗತಿಕ ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ. ಪ್ರೀಮಿಯಂ ಆಧಾರದಲ್ಲಿ ಇವರು ಅರ್ಹತೆಯನ್ನು ಪಡೆದಿದ್ದಾರೆ. ಕುಂದಾಪುರದ ಹಿರಿಯ ಜೀವವಿಮಾ ಅಭಿವೃದ್ಧಿ ಅಧಿಕಾರಿ ಕೆ. ಕರುಣಾಕರ ಶೆಟ್ಟಿ ಅವರ ಮಾರ್ಗದರ್ಶನದಲ್ಲಿ ಈ ಸಾಧನೆ ಮಾಡಿದ್ದಾರೆ.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ ಕುಂದಾಪುರ: ಫಿಲಿಪ್ಸ್ ಲೈಟಿಂಗ್ಸ್‌ನ ಸಂಶೋಧನಾ ಮುಖ್ಯಸ್ಥ ನೆದರ್‌ಲ್ಯಾಂಡ್ಸ್‌ನ ಕ್ಯಾರೆಲ್ ಡ್ರಯೆಲ್ ಲೈಟಿಂಗ್ಸ್‌ನ ಭಾರತದ ಮುಖ್ಯಸ್ಥ ಡಾ. ಐರೋಡಿ ನರೇಂದ್ರನಾಥ ಉಡುಪರ ಜತೆಯಲ್ಲಿ ಗುರುವಾರ ಮರವಂತೆಗೆ ಭೇಟಿ ನೀಡಿದರು. ಮರವಂತೆ ಗ್ರಾಮ ಪಂಚಾಯತ್ ಸುವರ್ಣ ಗ್ರಾಮೋದಯ ಯೋಜನೆಯ ಅನುದಾನದಿಂದ ಫಿಲಿಫ್ಸ್ ಇಂಡಿಯದ ಸಹಯೋಗದಲ್ಲಿ ಅಲ್ಲಿನ ಹರಿಶ್ಚಂದ್ರ ಮಾರ್ಗಕ್ಕೆ 2014-15ರಲ್ಲಿ ಅಳವಡಿಸಿದ ಕೇಂದ್ರೀಕೃತ ಸೋಲಾರ್ ಬೀದಿದೀಪ ಯೋಜನೆಯ ಪ್ರಸಕ್ತ ಸ್ಥಿತಿಯನ್ನು ಉಭಯರು ಪರಿಶೀಲಿಸಿದರು. ಅದರ ಉಪಯುಕ್ತತೆ ಮತ್ತು ಪರಿಣಾಮಕಾರಿತ್ವದ ಬಗ್ಗೆ ಅಭಿಪ್ರಾಯ ಸಂಗ್ರಹಿಸಿದರು. ಈ ಸಂದರ್ಭದಲ್ಲಿ ಅಧ್ಯಕ್ಷೆ ಕೆ. ಎ. ಅನಿತಾ. ಉಪಾಧ್ಯಕ್ಷ ಗಣೇಶ ಪೂಜಾರಿ, ನಿಕಟಪೂರ್ವ ಅಧ್ಯಕ್ಷೆ ಕೆ. ಎ. ಸುಗುಣಾ, ಮಾಜಿ ಅಧ್ಯಕ್ಷರಾದ ಎಂ. ವಿನಾಯಕ ರಾವ್, ಎಂ. ನರಸಿಂಹ ಶೆಟ್ಟಿ ಮತ್ತು ಎಸ್. ಜನಾರ್ದನ ವ್ಯವಸ್ಥೆಯ ಕುರಿತು ತಮ್ಮ ಅನುಭವ, ಅನಿಸಿಕೆಗಳನ್ನು ಅವರೊಂದಿಗೆ ಹಂಚಿಕೊಂಡರು. ಕೇಂದ್ರೀಕೃತ ವ್ಯವಸ್ಥೆಯು ಎಲ್ಲೆಡೆ ಚಾಲ್ತಿಯಲ್ಲಿರುವ ಏಕ ಘಟಕ ವ್ಯವಸ್ಥೆಗಿಂತ ಭಿನ್ನ. ಕೇಂದ್ರೀಕೃತ ವ್ಯವಸ್ಥೆಯಲ್ಲಿ ಸೋಲಾರ್ ಮೊಡ್ಯೂಲ್, ಬ್ಯಾಟರಿ ಮತ್ತು…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ ಕುಂದಾಪುರ: ಭಾರತೀಯ ಜೀವವಿಮಾ ನಿಗಮ ಕುಂದಾಪುರ ಶಾಖೆಯಲ್ಲಿ ಸುಧೀರ್ಘ 30 ವರ್ಷಗಳ ಕಾಲ ಸೇವೆ ಸಲ್ಲಿಸಿ, ನಿವೃತ್ತಿ ಹೊಂದಿದ ಅಭಿವೃದ್ಧಿ ಅಧಿಕಾರಿ ಕರುಣಾಕರ ಶೆಟ್ಟಿಯವರಿಗೆ ನಿವೃತ್ತಿ ಜೀವನಕ್ಕೆ ಶುಭ ಕೋರಿ ಬೀಳ್ಕೊಡುಗೆ ನಡೆಸಲಾಯಿತು. ಭಾರತೀಯ ಜೀವ ವಿಮಾ ನಿಗಮದ ಕುಂದಾಪುರ ಶಾಖೆಯ ಹಿರಿಯ ಶಾಖಾಧಿಕಾರಿ ಕೆ.ವಿ. ಕುಲಕರ್ಣಿ ಅವರು ಕೆ. ಕರುಣಾಕರ ಶೆಟ್ಟಿ ದಂಪತಿಗಳನ್ನು ಸನ್ಮಾನಿಸಿ, ಭಾರತೀಯ ಜೀವ ವಿಮಾ ನಿಗಮಕ್ಕೆ ನೀಡಿದ ಸೇವೆಯನ್ನು ಪ್ರಶಂಸಿದರು. ಎಡಿಎಂ ಸುರೇಶ್ ಬಾಬು, ಉಪ ಶಾಖಾಧಿಕಾರಿ ಗುರುರಾಜ್, ಅಭಿವೃದ್ಧಿ ಅಧಿಕಾರಿಗಳಾದ ಗಣೇಶ್ ಅಡಿಗ, ವಿವೇಕ್ ನಾಯಕ್ ಕೆ.ಜಿ. ರಾಜೇಶ್ ನಿವೃತ್ತರನ್ನು ಅಭಿನಂದಿಸಿ ಮಾತನಾಡಿದರು. ಶ್ರೀಮತಿ ರತ್ಯಾ ಕರುಣಾಕರ ಶೆಟ್ಟಿ ಉಪಸ್ಥಿತರಿದ್ದರು. ಗಿರಿಧರ್ ನಾಯಕ್ ಕಾರ್ಯಕ್ರಮ ನಿರೂಪಿಸಿದರು. ಸುಬ್ರಹ್ಮಣ್ಯ ಅರಸ್ ವಂದಿಸಿದರು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಧರ್ಮದ ಕೇಂದ್ರವಾದ ಕುಟುಂಬವು ನಿಜವಾದ ವ್ಯವಸ್ಥೆಯ ಹೆಬ್ಬಾಗಿಲು. ಗ್ರಹಸ್ಥ ಜೀವನದಲ್ಲಿ ಧರ್ಮದ ಮೂಲಕ ಸಾಗಿದಾಗ ಸುಖ, ಶಾಂತಿ ಹಾಗೂ ನೆಮ್ಮದಿ ಶಾಶ್ವತವಾಗಿರುತ್ತದೆ. ಪತಿ-ಪತ್ನಿಯರ ಸಂಬಂಧ ಪಾವಿತ್ರತೆಯ ಭಾವವಿದ್ದು, ಮೌಲ್ಯಾಧಾರಿತವಾಗಿದೆ. ವಿವಾಹ ಇಲ್ಲದಿದ್ದರೆ ಕುಟುಂಬ ಕಳಚುವ ಸಾಧ್ಯತೆಗಳಿದೆ ಎಂದು ಸ್ವರ್ಣವಲ್ಲಿ ಮಠಾಧೀಶ ಶ್ರೀ ಗಂಗಾಧರೇಂದ್ರ ಸ್ವಾಮೀಜಿ ಹೇಳಿದರು. ಬೈಂದೂರು ಶ್ರೀ ಸೀತಾರಾಮಚಂದ್ರ ದೇವಸ್ಥಾನದಲ್ಲಿ ಬೈಂದೂರು ರಾಮಕ್ಷತ್ರಿಯ ಸಮಾಜದ ೧೧ನೇ ವರ್ಷದ ಶ್ರೀ ಸೀತಾರಾಮಚಂದ್ರ ಕಲ್ಯಾಣೋತ್ಸವದ ಪ್ರಯುಕ್ತ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು. ಭಗವಂತನ ಕಲ್ಯಾಣೋತ್ಸದಲ್ಲಿ ಹಲವಾರು ರೀತಿಯ ಪ್ರಯೋಜನಗಳಿದ್ದರೂ, ಸಮಾಜ ಸುಭೀಕ್ಷೆಯಾಗುತ್ತದೆ. ಅದರಿಂದ ನಾವು ನಮ್ಮ ಜೀವನದಲ್ಲಿ ಆದರ್ಶ, ತತ್ವ ಹಾಗೂ ಉತ್ತಮ ಚಿಂತನೆಗಳನ್ನು ಅಳವಡಿಸಿಕೊಳ್ಳಲು ಸಹಕಾರಿಯಾಗುತ್ತದೆ. ಇದೊಂದು ಪುಣ್ಯದ ಕಾರ್ಯವಾಗಿದ್ದರಿಂದ ಮಂಗಳಕಾರ್ಯ, ಶುಭವಿವಾಹವೆಂದು ಸಂಭೋಧಿಸುತ್ತಾರೆ. ವಿವಾಹವೆಂಬುದು ಧರ್ಮ, ಅರ್ಥ, ಕಾಮಗಳನ್ನು ಅತಿಕ್ರಮಿಸಿ ಹೊಗುವುದಿಲ್ಲ ಎಂಬ ನೆಲೆಯಲ್ಲಿ ಸಂದೇಶ ಸಾರುವ ಪವಿತ್ರಬಂಧನವಾಗಿದೆ. ಆದರೆ ಇತ್ತೀಚಿಗೆ ಸಮಸ್ತ ಹಿಂದು ಸಮಾಜ ನಾಲ್ಕು ಅಂಶಗಳಲ್ಲಿ ತಪ್ಪು…

Read More