ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಹಟ್ಟಿಯಂಗಡಿ ಗ್ರಾಮ ಪಂಚಾಯತ್‌ನ ಪ್ರಥಮ ಸುತ್ತಿನ ಗ್ರಾಮ ಸಭೆಯು ಕೂಡ್ಲು ಕನ್ಯಾನ ಪ್ರಾಥಮಿಕ ಶಾಲೆಯಲ್ಲಿ ಜರುಗಿತು. ಹಟ್ಟಿಯಂಗಡಿ ಗ್ರಾಮ ಪಂಚಾಯತ್‌ನ ಗ್ರಾಮ ಸಭೆಯಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷ ಕೆ. ರಾಜೀವ ಶೆಟ್ಟಿ ಅದ್ಯಕ್ಷತೆ ವಹಿಸಿ ಮಾತನಾಡಿ ಗ್ರಾಮ ಪಂಚಾಯತ್ ಅಭಿವೃದ್ಧಿ ಕಾರ್ಯಗಳಿಗೆ ಅನುದಾನ ಕೊರತೆ ಇರುವೂದರಿಂದ ಶಾಸಕರು ಜಿಲ್ಲಾ ಪಂಚಾಯತ್ ಸದಸ್ಯರು ಹಾಗೂ ತಾಲೂಕು ಪಂಚಾಯತ್ ಸದಸ್ಯರು ಪಂಚಾಯತಿಗೆ ಅನುದಾನ ದೊರಕಿಸಿಕೊಡಿ ಎಂದು ಮನವಿ ಮಾಡಿದರು. ಪಂಚಾಯತ್ ಉಪಾದ್ಯಕ್ಷ ಪ್ರತಾಪ್ ಕುಮಾರ್ ಶೆಟ್ಟಿ, ಜಿಲ್ಲಾ ಪಂಚಾಯತ್ ಸದಸ್ಯೆ ಜ್ಯೋತಿ, ತಾಲೂಕು ಪಂಚಾಯತ್ ಸದಸ್ಯ ಕರುಣ್ ಪೂಜಾರಿ, ಎಲ್ಲಾ ಇಲಾಖೆಯ ಅಧಿಕಾರಿಗಳು, ಹಾಗೂ ಶಾಲಾ ಮುಖ್ಯ ಶಿಕ್ಷಕರುಗಳು, ಪಂಚಾಯತ್ ಸದಸ್ಯರುಗಳು ಉಪಸ್ಥಿತರಿದ್ಧರು. ಶಿಕ್ಷಣ ಇಲಾಖೆಗೆ ಆರ್‌ಟಿಐ ಅಡಿಯಲ್ಲಿ ಸಿಗುವಂತ ಸೌಲಭ್ಯವನ್ನು ಗ್ರಾಮ ಪಂಚಾಯತ್ ಕೊಡುವ ಬಗ್ಗೆ ದೀರ್ಘ ಚರ್ಚೆಗಳು ನಡೆದವು, ಹಾಗೂ ಲಾಟರಿ ಮೂಲಕ ಆಯ್ಕೆ ಮಾಡುವುದನ್ನು ರದ್ಧು ಪಡಿಸಬೇಕೆಂದು ಗ್ರಾಮ ಸಭೆಯಲ್ಲಿ ನಿರ್ಣಯಿಸಲಾಯಿತು ಮತ್ತಿ…
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಲಯನ್ಸ್ ಕ್ಲಬ್ ಹಾಗೂ ಲಯನೆಸ್ ಕ್ಲಬ್ ಕುಂದಾಪುರ ಸಿಟಿ ಸೆಂಟರ್ ಇದರ ನೂತನ ಪದಾಧಿಕಾರಿಗಳ ಪದಪ್ರದಾನ ಸಮಾರಂಭ ಕೋಟೇಶ್ವರದ ಸುಮುಖ ಸಭಾಂಗಣದಲ್ಲಿ ನಡೆಯಿತು. ಮುಖ್ಯ ಅತಿಥಿ ಲಯನ್. ವಿ.ಜಿ.ಶೆಟ್ಟಿಯವರು ನೂತನ ಅಧ್ಯಕ್ಷ ಲಯನ್ ಸತೀಶ್‌ಕುಮಾರ್, ಕಾರ್ಯದರ್ಶಿ ಲಯನ್ ಅನಿಲ್ ಶೆಣೈ ಹಾಗೂ ಖಜಾಂಚಿಯಾಗಿ ಲಯನ್ ನಿತಿನ್‌ಕುಮಾರ್ ಹಾಗೂ ಲಯನೆಸ್ ವಿಭಾಗದ ಅಧ್ಯಕ್ಷೆಯಾಗಿ ಲಯನೆಸ್ ಮಾಲಿನಿ ಸತೀಶ್, ಕಾರ್ಯದರ್ಶಿಯಾಗಿ ಲಯನೆಸ್ ಅನೂಷಾ ಶೆಣೈ, ಖಜಾಂಚಿಯಾಗಿ ಶೀಜಾ ಸಾಲಿಯಾನ್‌ರವರ ಪದಪ್ರದಾನ ಮಾಡಿ ಪ್ರತಿಜ್ಞಾವಿಧಿಯನ್ನು ಬೋಧಿಸಿದರು. ಬಳಿಕ ಮಾತನಾಡಿದ ಅವರು, ಲಯನ್ಸ್ ಒಂದು ಸೇವಾ ಸಂಸ್ಥೆ ಇದರಲ್ಲಿ ಸೇವೆ ಮಾಡುವುದೇ ನಮ್ಮ ಧರ್ಮ, ನಮ್ಮ ಗಳಿಕೆಯ ಒಂದು ಪಾಲನ್ನು ಸಮಾಜದಅಶಕ್ತರಿಗೆ, ದೀನದಲಿತರಿಗೆ ಮೀಸಲಾಗಿಡೋಣ ಎಂದು ಕರೆ ನೀಡಿದರು. ನೂತನ ಸದಸ್ಯರ ಸೇರ್ಪಡೆಗೊಳಿಸಲಾಯಿತು. ವೇದಿಕೆಯಲ್ಲಿ ನಿಕಟಪೂರ್ವ ಅಧ್ಯಕ್ಷ ಲಯನ್ ಕಿರಣ್, ಪ್ರಾಂತೀಯ ಕಾರ್ಯದರ್ಶಿ ಲಯನ್ ನಿರಂಜನ್, ಪ್ರಾಂತೀಯ ಅಧ್ಯಕ್ಷ ಲಯನ್ ರತ್ನಾಕರ ಶೆಟ್ಟಿ, ಕೋರ್ ಕಮಿಟಿ ಸದಸ್ಯ ಲಯನ್ ಪ್ರಕಾಶ್…
ಕುಂದಾಪ್ರ ಡಾಟ್ ಕಾಂ ವರದಿ ಬೈಂದೂರು: ಕೆಲವೊಂದು ಕಾರ್ಯಕ್ರಮಗಳು ತನ್ನದೇ ಆದ ಕಾರಣಗಳಿಂದಾಗಿ ವಿಶೇಷ ಸುದ್ದಿಯಾಗುತ್ತದೆ. ಕೆಲವು ವ್ಯಕ್ತಿಗಳು ಅವರದ್ದೇ ಆದ ಭಿನ್ನ ನಿಲುವಿನಂದಾಗಿ ಪ್ರಶಂಸೆಗೆ ಪಾತ್ರರಾಗುತ್ತಾರೆ. ಇತ್ತಿಚಿಗೆ ನಡೆದ ಕಾರ್ಯಕ್ರಮವೊಂದು ಅಂತಹದ್ದೇ ಸಂದರ್ಭಕ್ಕೆ ಸಾಕ್ಷಿಯಾಯಿತು. ನಿವೃತ್ತಿಯ ವೇಳೆಗೆ ಅಭಿನಂದನೆ ಸ್ವೀಕರಿಸಿ ತೆರಳುವ ಮುಖ್ಯೋಪಧ್ಯಾಯರು, ತನ್ನ ವೃತ್ತಿ ಬದುಕಿನಲ್ಲಿ ಸಹಕರಿಸಿದವರನ್ನೆಲ್ಲಾ ಸನ್ಮಾನಿಸಿ ಕೃತಜ್ಞತೆ ಸಲ್ಲಿಸಿದರು. ಜುಲೈ ತಿಂಗಳಿನಲ್ಲಿ ಸೇವೆಯಿಂದ ನಿವೃತ್ತರಾಗಲಿರುವ ಬೈಂದೂರು ರತ್ತುಬಾಯಿ ಜನತಾ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಜಿ. ಎಸ್. ಭಟ್ ಅವರನ್ನು ಗೌರವಿಸಲು ಪೋಷಕರು, ಶಿಕ್ಷಕರು ಇತ್ತೀಚೆಗೆ ಹಮ್ಮಿಕೊಂಡ ಸಮಾರಂಭದ ಪ್ರಥಮಾರ್ಧದಲ್ಲಿ ಭಟ್ ಅವರು ತಮ್ಮ ಸೇವಾವಧಿಯಲ್ಲಿ ಸಹಕರಿಸಿದ ಸಹೋದ್ಯೋಗಿಗಳಿಗೆ, ನೆರವಾದ ದಾನಿಗಳಿಗೆ ಕೃತಜ್ಞತೆ ಸಲ್ಲಿಸುವ ಮೂಲಕ ಕಾರ್ಯಕ್ರಮ ವಿಶಿಷ್ಟವೆನಿಸುವಂತೆ ಮಾಡಿದರು. ಮೊದಲು ತನ್ನೊಂದಿಗೆ ದುಡಿಯುತ್ತಿರುವ ಶಿಕ್ಷಕರು ಮತ್ತು ಸಿಬ್ಬಂದಿಗಳಾದ ಡಿ. ಸಿ. ಹಾಸ್ಯಗಾರ್, ಮಂಜು ಕಾಳಾವರ, ಚಂದ್ರ ಕೆ, ಆನಂದ ಮದ್ದೋಡಿ, ಪ್ರಕಾಶ ಮಾಕೋಡಿ, ಶ್ರೀಧರ ಗಾಣಿಗ, ನಿರ್ಮಲಾ, ಪಾರ್ವತಿ, ಗಿರಿಜಾ, ಸುಮನಾ, ಚೈತ್ರಾ, ಸ್ವಾತಿ, ಅಡುಗೆಯವರಾದ ಲಕ್ಷ್ಮಕ್ಕ,…
ಒಂದು ವರ್ಷದ ಬಳಿಕ ಕೋಡಿ ಪಂಚಾಯಿತ್ ಅಧ್ಯಕ್ಷರ ಆಯ್ಕೆ ಕುಂದಾಪ್ರ ಡಾಟ್ ಕಾಂ ವರದಿ. ಕೋಟ: ಎಲ್ಲೆಡೆ ಗ್ರಾಮ ಪಂಚಾಯತ್ ಚುನಾವಣೆಯ ಬಳಿಕ, ಅಧ್ಯಕ್ಷರ ಆಯ್ಕೆ ಪ್ರಕ್ರಿಯೆ ನಡೆದು ವರ್ಷ ಕಳೆದರೂ ಸ್ಥಾನ ಒಂದು ವರ್ಷ ಒಂದು ತಿಂಗಳಿನಿಂದ ಖಾಲಿ ಉಳಿದಿದ್ದ ಕೋಡಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಸ್ಥಾನಕ್ಕೆ ಮಂಗಳವಾರದಂದು ಮತದಾನ ನಡೆದಿದೆ. ಮೀಸಲಾತಿಯ ಗೊಂದಲ ಇದ್ದ ಉಡುಪಿ ತಾಲೂಕಿನ ಕೋಡಿ ಗ್ರಾಪಂನಲ್ಲಿ ಕೊನೆಗೂ ನೂತನ ಅಧ್ಯಕ್ಷರಾಗಿ ಬಿಜೆಪಿ ಬೆಂಬಲಿತ ರಂಜನಿ(21) ಆಯ್ಕೆಯಾಗಿದ್ದು, ಜಿಲ್ಲೆಯ ಅತ್ಯಂತ ಕಿರಿಯ ಅಧ್ಯಕ್ಷೆ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ. ಕೋಡಿ ಪಂಚಾಯಿತಿ ವ್ಯಾಪ್ತಿಯಲ್ಲಿ ಪರಿಶಿಷ್ಟ ಪಂಗಡದವರು ಇಲ್ಲದಿದ್ದರು ಚುನಾವಣಾ ಆಯೋಗದ ಎಡವಟ್ಟು ನಿರ್ಧಾರದಿಂದ ಕೆಲವೊಂದು ವಾರ್ಡ್‌ಗಳಿಗೆ ಪರಿಶಿಷ್ಟ ಪಂಗಡ ಮಿಸಲಾತಿ ಬಂದಿತ್ತು. ಈ ಬಗ್ಗೆ ಮರು ಪರಿಶೀಲನೆ ನಡೆದ ಬಳಿಕ ಪರಿಶಿಷ್ಟ ಪಂಗಡದವರ ಬದಲಿಗೆ ಪರಿಶಿಷ್ಟ ಜಾತಿಗೆ ಮಿಸಲಾತಿ ಬದಲಾಯಿಸಲಾಗಿತ್ತು. ಆದರೆ ಚುನಾವಣೆ ನಡೆದ ಬಳಿಕ ಮತ್ತೆ ಅಧ್ಯಕ್ಷ ಸ್ಥಾನಕ್ಕೆ ಪರಿಶಿಷ್ಟ ಪಂಗಡ ಮಿಸಲಾತಿ ಬಂದ ಹಿನ್ನಲೆಯಲ್ಲಿ,…
ಕುಂದಾಪ್ರ ಡಾಟ್ ಕಾಂ ಬ್ರಹ್ಮಾವರ: ಬ್ರಹ್ಮಾವರ ವಲಯ ಕಾರ್ಯನಿರತ ಪತ್ರಕರ್ತರ ಸಂಘದ ಆಶ್ರಯದಲ್ಲಿ ಜುಲೈ ೨೪ರ ಆದಿತ್ಯವಾರ ಬ್ರಹ್ಮಾವರ ಬಸ್ ನಿಲ್ದಾಣ ಸಮೀಪದಲ್ಲಿರುವ ಬಂಟರ ಭವನದಲ್ಲಿ ವಡ್ಡರ್ಸೆ ರಘುರಾಮ ಶೆಟ್ಟಿ ಪತ್ರಿಕೋದ್ಯಮ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ. ಕಾರ್ಯಕ್ರಮದಲ್ಲಿ ವಿಶೇಷವಾಗಿ ಸಾಮಾಜಿಕ ಹೋರಾಟಗಾರ ಎಸ್.ಆರ್.ಹಿರೇಮಠ ಭಾಗವಹಿಸಲಿದ್ದು, ರಾಜ್ಯದ ಹೆಸರಾಂತ ಪತ್ರಕರ್ತರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಭಾನುವಾರ ಬೆಳಿಗ್ಗೆ ಸಮಾರಂಭ ಆರಂಭಗೊಳ್ಳಲಿದ್ದು ಸಮಾರಂಭದ ಅಧ್ಯಕ್ಷತೆಯನ್ನು ಬ್ರಹ್ಮಾವರ ವಲಯ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಚಿತ್ತೂರು ಪ್ರಭಾಕರ ಆಚಾರ್ಯ ವಹಿಸಲಿದ್ದಾರೆ. ಮೂಡಬಿದಿರೆಯ ಆಳ್ವಾಸ್ ಶಿಕ್ಷಣ ಸಂಸ್ಥೆಯ ಡಾ.ಮೋಹನ್ ಆಳ್ವಾ ಕಾರ್ಯಕಮವನ್ನು ಉದ್ಘಾಟಿಸಲಿದ್ದಾರೆ. ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮದ್ವರಾಜ್ ವಡ್ಡರ್ಸೆ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಲಿದ್ದಾರೆ. ಕುಂದಾಪುರ ವಿಧಾನಸಭಾ ಕ್ಷೇತ್ರದ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ, ವಿಧಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ, ಮಾಜಿ ಸಚಿವ ಜಯಪ್ರಕಾಶ್ ಹೆಗ್ಡೆ, ಗೀತಾನಂದ ಫೌಂಡೇಶನ್ ಪ್ರವರ್ತಕ ಆನಂದ ಸಿ.ಕುಂದರ್, ಬೆಳಗಾವಿಯ ಉದ್ಯಮಿ ರತ್ನಾಕರ ಶೆಟ್ಟಿ ಯರಗಟ್ಟಿ, ಮುಂಬೈನ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು ಮತ್ತು ಸಮುದಾಯ ಸಾಂಸ್ಕೃತಿಕ ಸಂಘಟನೆ ಕುಂದಾಪುರ ಸಹಯೋಗದಲ್ಲಿ ಕೋಣಿಯ ಕೆ ಜಿ ಜಗನ್ನಾಥರಾವ್ ಸರ್ಕಾರಿ ಪ್ರೌಢಶಾಲೆ ಇಲ್ಲಿನ ಇಕೋ ಕ್ಲಬ್‌ನ ಜೊತೆಗೂಡಿ ಈ ಭೂಮಿ ನಮ್ಮದು ಪರಿಸರ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. ಕುಂದಾಪುರ ಸಮುದಾಯ ಸಾಂಸ್ಕೃತಿಕ ಸಂಘಟನೆಯ ಅಧ್ಯಕ್ಷ ಉದಯ ಗಾಂವಕಾರ ಪ್ರಾಸ್ತಾವಿಕವಾಗಿ ಮಾತನಾಡಿ ಈ ಭೂಮಿಯಲ್ಲಿ ನಮ್ಮಿಂದಾಗಿ ಅಳಿದುಹೋದ ಜೀವಸಂಕುಲಗಳನ್ನು ಉದಾಹರಿಸುತ್ತಾ ಉಳಿದಿರುವ ವೈವಿಧ್ಯಮಯ ಜೀವಸಂಕುಲಗಳ ಹಕ್ಕುಗಳ ರಕ್ಷಣೆ, ಪೋಷಣೆ ಇಂದಿನ ಅಗತ್ಯ ಹಾಗೂ ಅದೇ ನಮ್ಮ ಆದ್ಯ ಕರ್ತವ್ಯವಾಗಬೇಕು ಎಂದರು. ಕರಾವಿಪ ಅಧ್ಯಕ್ಷ ಯು ಆರ್ ಮಧ್ಯಸ್ಥರು ವಿದ್ಯಾರ್ಥಿಗಳಿಗೆ ಅವರ ಕರ್ತವ್ಯಗಳನ್ನು ಸರಳವಾಗಿ ವಿವರಿಸಿದರು. ಶುದ್ಧ ನೀರಿನ ಕುರಿತಾದ ಕ್ರಿ.ಶ.೨೦೭೦ರಲ್ಲಿ ಬರೆದ ಒಂದು ಪತ್ರ ಪ್ರಸ್ತುತಪಡಿಸಲಾಯಿತು. ನಂತರ ವಿದ್ಯಾರ್ಥಿಗಳಿಗೆ ಪರಿಸರ ಕಾಳಜಿಯ ರಸಪ್ರಶ್ನೆ ಕಾರ್ಯಕ್ರಮ ನಡೆಸಿ ಪುಸ್ತಕ ರೂಪದಲ್ಲಿ ಬಹುಮಾನ ನೀಡಲಾಯಿತು. ಶಾಲೆಯ ಇಕೋ ಕ್ಲಬ್‌ನ ಸದಸ್ಯರಿಗೆ ಬಟ್ಟೆಯ ಚೀಲಗಳನ್ನು ವಿತರಿಸಲಾಯಿತು. ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು…
ಕುಂದಾಪ್ರ ಡಾಟ್ ಕಾಂ ಸುದ್ದಿ ಕುಂದಾಪುರ: ಮಾತೃಭಾಷೆಯು ಹೃದಯದ ಭಾಷೆ. ನಿರಂತರವಾಗಿ ಬಳಸುವುದರಿಂದ ಭಾಷೆ ಉಳಿಯಬಲ್ಲುದು. ನಾಡು-ನುಡಿ, ಸಾಹಿತ್ಯ, ಸಂಸ್ಕೃತಿಯ ಬಗ್ಗೆ ಒಲವು ಮತ್ತು ಅಭಿಮಾನವನ್ನು ಹೆಚ್ಚಿಸುವ ಕಾರ್ಯ ಇಂದಿನ ಅಗತ್ಯವಾಗಿದೆ ಎಂದು ಉಡುಪಿ ತಾಲೂಕು ಕಸಾಪ ಮಾಜಿ ಅಧ್ಯಕ್ಷ ಪ್ರೊ. ಸಿ. ಉಪೇಂದ್ರ ಸೋಮಯಾಜಿ ಅವರು ಹೇಳಿದರು. ವಂಡ್ಸೆ ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ ಶುಕ್ರವಾರ ಮಧ್ಯಾಹ್ನ ಜರಗಿದ ಸಮಾರಂಭದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ನೂತನ ವಂಡ್ಸೆ ಹೋಬಳಿ ಘಟಕವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಶಿಕ್ಷಣ, ಸಾಹಿತ್ಯದಿಂದ ಮಾನವೀಯ ಮನಸ್ಸುಗಳು ಹೆಚ್ಚಬೇಕು. ಅಂತರಂಗದ ಪ್ರೇರಣೆಯಿಂದ ಪ್ರತಿಭೆ ಹೊರಬರುತ್ತದೆ. ಪ್ರತಿಭೆಯನ್ನು ಉತ್ತೇಜಿಸಲು ಓದು, ಉಪನ್ಯಾಸ, ಸಾಹಿತ್ಯ ಮತ್ತು ಕಲಾ ಚಟುವಟಿಕೆಗಳ ನೆರವು ಪಡೆಯಬೇಕು. ಅಂದಿನ ಜಾನಪದ ಇಂದಿಗೂ ತನ್ನದೇ ಆದ ಸತ್ವಯುತವಾದ ಸಂತೋಷವನ್ನು ಕೊಡುವಂತೆ ಯಾಂತ್ರಿಕತೆಯನ್ನು ಬಿಟ್ಟು ಪ್ರಕೃತಿದತ್ತ ಪ್ರೀತಿಯನ್ನು ಪಡೆಯಲು ಸಾಹಿತ್ಯ, ಸಂಸ್ಕ್ರತಿಯನ್ನು ಆಶ್ರಯಿಸಬೇಕು ಎಂದರು. ಕಸಾಪ ಉಡುಪಿ ಜಿಲ್ಲಾಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಅವರು ನೂತನ ಹೋಬಳಿ ಘಟಕದ ಪದಾಧಿಕಾರಿಗಳಿಗೆ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಅದು ಅಮೇರಿಕಾ ಅಟ್ಲಾಂಟಾದ ಕೊಂಕಣಿ ಸಮ್ಮೇಳನದ ಪ್ರಧಾನ ಸಭಾಂಗಣ. ಅಂದಿನ ಸಾಂಸ್ಕೃತಿಕ ಕಾರ್ಯಕ್ರಮಕ್ಕಾಗಿ ವೇದಿಕೆಗೆ ಬಂದ ಜಾದೂಗಾರ ಮೂವರು ಗಣ್ಯರನ್ನು ವೇದಿಕೆಗೆ ಬರಮಾಡಿಕೊಂಡ. ಬಂದವರ ಕೈಯಲ್ಲಿ ಕೇಸರಿ ಬಿಳಿ ಹಾಗೂ ಹಸಿರು ಬಣ್ಣದ ಕರವಸ್ತ್ರವನ್ನು ಬೇರೆ ಬೇರೆಯಾಗಿ ನೀಡಿದ. ಶಕ್ತಿ ಭಕ್ತಿ ಯುಕ್ತಿಯನ್ನು ಬಿಂಬಿಸುವ ಆ ಕರವಸ್ತ್ರಗಳ ಬಗ್ಗೆ ವಿಶ್ಲೇಷಿಸಿದ. ಬಂದವರು ಅದನ್ನು ಪರಿಶೀಲಿಸಿದ ನಂತರ ಗಟ್ಟಿಯಾಗಿ ಎರಡೂ ಕೈಯಲ್ಲಿ ಅವೆಲ್ಲವನ್ನೂ ಮುಷ್ಠಿ ಹಿಡಿಯುವಂತೆ ಸೂಚಿಸಿದ. ಹ್ಹಾಗೆ ಬಿಗಿಯಾಗಿ ಹಿಡಿದ ಬಿಡಿ ಬಿಡಿ ಕರವಸ್ತ್ರಗಳು ನೋಡುನೋಡುತ್ತಿದ್ದಂತೆ ಇಡಿಯಾಗಿ ಭಾರತದ ರಾಷ್ಟ್ರ ದ್ವಜವಾಗಿ ಆ ಮೂವರ ಕೈಯಲ್ಲಿ ಅರಳಿಕೊಂಡಿತ್ತು. ಹೀಗೆ ದೂರದ ಅಮೇರಿಕಾದಲ್ಲಿ ತನ್ನ ಜಾದೂವಿನ ಮೂಲಕ ತ್ರೀವರ್ಣ ಧ್ವಜ ಅರಳಿಸಿದ ಜಾದೂಗಾರ ಉಪ್ಪುಂದದ ಓಂಗಣೇಶ್. ಮೂರು ದಿನದ ಸಮ್ಮೇಳನಕ್ಕೆ ವಿಶೇಷ ಅತಿಥಿಯಾಗಿ ಭಾಗವಹಿಸಿದ್ದ ಅವರು ತಮ್ಮ ಜಾದೂವನ್ನು ಉದ್ಘಾಟಿಸುತ್ತಾ ಕೊಂಕಣಿ ಭಾಷೆ ಭಾರತದ ಸಂಪತ್ತು. ಜಗತ್ತಿನ ಯಾವ ಭಾಗದಲ್ಲೇ ಇರಲಿ ಕೊಂಕಣಿ ಸ್ಮರಿಸುವುದೆಂದರೆ ಭಾರತವನ್ನು…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ದುಬೈ ಕುಂದಾಪುರ ದೇವಾಡಿಗ ಮಿತ್ರ ಕದಂ ಸಂಘ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡುವುದರೊಂದಿಗೆ ಸಂಕಷ್ಟದಲ್ಲಿರುವವರಿಗೆ ನೆರವಿನ ಹಸ್ತ ಚಾಚುವ ಮೂಲಕ ಸಮಾಜದ ಅಭಿವೃದ್ಧಿಯಲ್ಲಿ ವಿಶೇಷ ಪಾತ್ರ ವಹಿಸುತ್ತಿದೆ ಎಂದು ಅಖಿಲ ಭಾರತ ತುಳು ಒಕ್ಕೂಟ ಅಧ್ಯಕ್ಷ ಯು.ಧರ್ಮಪಾಲ ದೇವಾಡಿಗ ಹೇಳಿದರು. ತ್ರಾಸಿ ಅಣ್ಣಪ್ಪಯ್ಯ ಸಭಾಭವನದಲ್ಲಿ ಇತ್ತೀಚೆಗೆ ಕುಂದಾಪುರ ದೇವಾಡಿಗ ಮಿತ್ರ ಕದಂ ವಿದ್ಯಾರ್ಥಿವೇತನ ಸಮಾರಂಭ ಉದ್ಘಾಟಿಸಿ ಮಾತನಾಡಿಸಿದರು. ದೇವಾಡಿಗ ವೆಲ್ ಫೇರ್ ಅಸೋಸಿಯೇಶನ್ ಮುಂಬೈ ಗೌರವ ಅಧ್ಯಕ್ಷ ಸುರೇಶ ಡಿ. ಪಡುಕೋಣೆ ಅಧ್ಯಕ್ಷತೆ ವಹಿಸಿದ್ದರು. ಉದ್ಯಮಿ ದಿನೇಶ ದೇವಾಡಿಗ ನಾಗೂರು ವಿದ್ಯಾರ್ಥಿ ವೇತನ ವಿತರಿಸಿದ್ದರು. ಮುಂಬೈ ದೇವಾಡಿಗರ ಸಂಘ ನಿಕಟ ಪೂರ್ವ ಅಧ್ಯಕ್ಷ ಎಚ್. ಮೋಹನದಾಸ, ಕರ್ನಾಟಕ ರಾಜ್ಯ ಅರಣ್ಯ ಇಲಾಖಾ ನೌಕರರ ಮಹಾಮಂಡಲದ ಅಧ್ಯಕ್ಷ ರಘುರಾಮ ದೇವಾಡಿಗ, ಮುಂಬೈ ಉದ್ಯಮಿ ನಾಗರಾಜ ಪಡುಕೋಣೆ, ಬಾರ್ಕುರು ಏಕನಾಥೇಶ್ವರಿ ದೇವಸ್ಥಾನದ ಅಧ್ಯಕ್ಷ ಅಣ್ಣಯ್ಯ ಸೇರಿಗಾರ, ಕಾರ್ಯದರ್ಶಿ ನರಸಿಂಹ ದೇವಾಡಿಗ, ಕೋಶಾಧಿಕಾರಿ ಜನಾರ್ಧನ ದೇವಾಡಿಗ, ಧರ್ಮದರ್ಶಿ ಜನಾರ್ಧನ…
