ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಇಲ್ಲಿನ ಕೆರಿಯರ್ಸ್ ಕೋಚಿಂಗ್ ಸಂಸ್ಥೆಯಲ್ಲಿ ತರಬೇತಿ ಪಡೆದ ಮೂವರು ವಿದ್ಯಾರ್ಥಿಗಳು ಚಾರ್ಟಡ್ ಅಕೌಂಟೆಂಟ್ ಅರ್ಹತಾ ಪರೀಕ್ಷೆಯಲ್ಲಿ ಉತ್ತಮ ಅಂಕಗಳೊಂದಿಗೆ ಉತ್ತೀಣರಾಗಿ ವಿಶಿಷ್ಟ ಸಾಧನೆ ಮಾಡಿದ್ದಾರೆ. ವಿದ್ಯಾರ್ಥಿಗಳಾದ ಎಂ. ನಂದೀಶ್ ರಾಮ ಶೆಟ್ಟಿ 123, ಕಾರ್ತಿಕ್ 116, ವಿಶ್ವನ್ 111 ಅಂಕಗಳನ್ನು ಪಡೆದು ಮುಂದಿನ ಹಂತಕ್ಕೆ ಆಯ್ಕೆಯಾಗಿದ್ದಾರೆ. ಉತ್ತಿರ್ಣ ವಿದ್ಯಾರ್ಥಿಗಳಿಗೆ ಕೆರಿಯರ್ಸ್ ಕೋಚಿಂಗ್ ಸಂಸ್ಥಾಪಕರಾದ ಸಿ.ಎ ರಾಜೇಶ್ ಶೆಟ್ಟಿ ಹಾಗೂ ಸಹ ಸಂಸ್ಥಾಪಕರಾದ ಪ್ರತಾಪಚಂದ್ರ ಶೆಟ್ಟಿ ಅಭಿನಂದಿಸಿದ್ದಾರೆ.
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಇರುವ ಶಿಕ್ಷಕರನ್ನು ಹೆಚ್ಚುವರಿ ಶಿಕ್ಷಕರ ವರ್ಗಾವಣೆ ನೆವದಲ್ಲಿ ವರ್ಗಾವಣೆ ಮಾಡಿದ್ದನ್ನು ಖಂಡಿಸಿ ಹೊಸಮಠ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ವಿದ್ಯಾರ್ಥಿಗಳು ಪೋಷಕರು ಶಾಲೆಗೆ ಬೀಗ ಜಡಿದು ಸರ್ಕಾರದ ವಿರುದ್ದ ಪ್ರತಿಭಟನೆ ನಡೆಸಿದರು. ಶಾಲಾ ಮಕ್ಕಳು ತರಗತಿ ಬಹಿಷ್ಕರಿಸಿ ರಾಜ್ಯ ಸರ್ಕಾರದ ವಿದ್ಯಾರ್ಥಿ ವಿರೋಧಿ ನೀತಿ ಖಂಡಿಸಿ ತಮ್ಮ ಪೋಷಕರೊಂದಿಗೆ ಪ್ರತಿಭಟನೆ ನಡೆಸಿದರು. ಶಿಕ್ಷಕಿರನ್ನು ಹೆಚ್ಚುವರಿ ಶಿಕ್ಷಕರ ನೆವದಲ್ಲಿ ವರ್ಗಾವಣೆ ಮಾಡಿ, ಮಕ್ಕಳ ವಿದ್ಯಭ್ಯಾಸಕ್ಕೆ ತೊಂದರೆಯಾಗುತ್ತಿದ್ದು, ಇಲ್ಲಿರುವ ಶಿಕ್ಷಕರನ್ನು ಇಲ್ಲಿಯೇ ಉಳಿಸಿ ಮಕ್ಕಳ ವಿದ್ಯಭ್ಯಾಸಕ್ಕೆ ಅನುವು ಮಾಡಿಕೊಡಬೇಕೆಂದು ಪೋಷಕರು ಆಗ್ರಹಿಸಿದರು. ಸರಕಾರಿ ಶಾಲೆ ಉಳಿಸಿಕೊಳ್ಳಬೇಕು ಎಂದು ಸರ್ಕಾರ ಹಲವಾರು ಯೋಜನೆ ರೂಪಿಸುತ್ತಿದೆ. ಆದರೆ ಹೆಚ್ಚುವರಿ ಶಿಕ್ಷಕರ ನೆವದಲ್ಲಿ ಶಿಕ್ಷಕರನ್ನು ವರ್ಗಾವಣೆ ಮಾಡಿ ಮಕ್ಕಳ ವಿದ್ಯಭ್ಯಾಸದ ಮೇಲೆ ಶಿಕ್ಷಣ ಇಲಾಖೆ ಚೆಲ್ಲಾಟವಾಡುತ್ತಿದೆ ಎಂದು ಪೋಷಕರು ಆರೋಪಿಸಿದ್ದಾರೆ. ವರ್ಗಾವಣೆ ಆದೇಶ ಹಿಂಪಡೆಯಬೇಕು ಇಲ್ಲವಾದಲ್ಲಿ ತಮ್ಮ ಮಕ್ಕಳನ್ನು ಶಾಲೆಗಳಿಗೆ ಕಳುಹಿಸುವುದಿಲ್ಲವೆಂದು ಪ್ರತಿಭಟನಾಕಾರರು ಎಚ್ಚರಿಸಿದರು. ಮಧ್ಯಾಹ್ನದವರೆಗೂ ಶಿಕ್ಷಣಾಧಿಕಾರಿ ಸ್ಥಳಕ್ಕೆ ಬಾರದ ಹಿನ್ನೆಲೆಯಲ್ಲಿ ಮಕ್ಕಳ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಕ್ಷೇತ್ರದ ಪ್ರತಿಯೊಂದು ಗ್ರಾಮ ಪಂಚಾಯತ್ನಲ್ಲಿ ಆ ಭಾಗದ ಗ್ರಾಮಸ್ಥರ ಅನುಕೂಲಕ್ಕಾಗಿ ಸರಕಾರ ಬಾಪೂಜಿ ಸೇವಾ ಕೇಂದ್ರ ಆರಂಭಿಸಿದೆ. ನಾಡ ಗ್ರಾಮದಲ್ಲಿ ಶುಕ್ರವಾರ ಚಾಲನೆ ನೀಡಿದ್ದು, ಈ ಬಗ್ಗೆ ಇನ್ನು ಮುಂದೆ ಪ್ರತೀ ಶುಕ್ರವಾರ ಜನಸಾಮಾನ್ಯರ ಸಮಸ್ಯೆಗಳನ್ನು ಪರಿಹರಿಸಲು ಆಂದೋಲನದ ರೀತಿಯಲ್ಲಿ ೨೬ ಪಂಚಾಯತ್ ವ್ಯಾಪ್ತಿಯಲ್ಲಿ ಕೆಲಸ ಮಾಡಲಾಗುವುದು ಎಂದು ಶಾಸಕ ಕೆ. ಗೋಪಾಲ ಪೂಜಾರಿ ಹೇಳಿದರು. ಬೈಂದೂರು ಶಾಸಕರ ಕಚೇರಿಯಲ್ಲಿ ರಾಷ್ಟ್ರೀಯ ಕುಟುಂಬ ನೆರವು ಯೋಜನೆಯಡಿಯಲ್ಲಿ 21 ಫಲಾನುಭವಿಗಳಿಗೆ ತಲಾ 20 ಸಾವಿರ ಚೆಕ್ ವಿತರಿಸಿ ಮಾತನಾಡಿದರು. ಸರಕಾರದ ಯೋಜನೆಗಳನ್ನು ಜನರಿಗೆ ಮುಟ್ಟಿಸುವ ನಿಟ್ಟಿನಲ್ಲಿ ಒಂದೇ ಸೂರಿನಡಿ ೧೦೦ ಸೌಲಭ್ಯ ಒದಗಿಸುವ ವ್ಯವಸ್ಥೆ ಈ ಯೋಜನೆಯಲ್ಲಿದೆ. ಕ್ಷೇತ್ರವನ್ನು ಪೋಡಿಮುಕ್ತ ಮಾಡುವುದೇ ಮುಂದಿನ ಗುರಿಯಾಗಿದೆ ಎಂದರು. ಫಲಾನುಭವಿಗಳಿಗೆ ಪಹಣಿ ಪತ್ರ, ಸ್ಥಳನಕ್ಷೆ ಪಂಚಾಯತ್ನಲ್ಲಿಯೇ ನೀಡಲಾಗುತ್ತದೆ. ಇದರಿಂದ ದೂರದವರಿಗೆ ತಾಲೂಕು ಕೇಂದ್ರದಲ್ಲಿರುವ ತಹಶೀಲ್ದಾರರ ಕಚೇರಿ ಅಲೆದಾಟ ತಪ್ಪಿದಂತಾಗುತ್ತದೆ. ಇದರಿಂದ ಸಮಯದ ಜತೆಗೆ ಹಣವೂ ಉಳಿತಾಯವಾಗುತ್ತದೆ. ಗ್ರಾಪಂ ಆಸ್ಥಿಗಳ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಇರುವ ಶಿಕ್ಷಕರನ್ನು ಹೆಚ್ಚುವರಿ ಶಿಕ್ಷಕರ ವರ್ಗಾವಣೆ ನೆವದಲ್ಲಿ ವರ್ಗಾವಣೆ ಮಾಡಿದ್ದನ್ನು ಖಂಡಿಸಿ ಆನಗಳ್ಳಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿದ್ಯಾರ್ಥಿಗಳು ಪೋಷಕರು ಶಾಲೆಗೆ ಬೀಗ ಹಾಕಿ ಸರ್ಕಾರದ ವಿರುದ್ದ ಪ್ರತಿಭಟನೆ ನಡೆಸಿದರು. ಶಾಲಾ ಮಕ್ಕಳು ತರಗತಿ ಬಹಿಷ್ಕರಿಸಿ ರಾಜ್ಯ ಸರ್ಕಾರದ ವಿದ್ಯಾರ್ಥಿ ವಿರೋಧಿ ನೀತಿ ಖಂಡಿಸಿ ತಮ್ಮ ಪೋಷಕರೊಂದಿಗೆ ಪ್ರತಿಭಟನೆ ನಡೆಸಿದರು. ಶಿಕ್ಷಕಿರನ್ನು ಹೆಚ್ಚುವರಿ ಶಿಕ್ಷಕರ ನೆವದಲ್ಲಿ ವರ್ಗಾವಣೆ ಮಾಡಿ, ಮಕ್ಕಳ ವಿದ್ಯಭ್ಯಾಸಕ್ಕೆ ತೊಂದರೆಯಾಗುತ್ತಿದ್ದು, ಇಲ್ಲಿರುವ ಶಿಕ್ಷಕರನ್ನು ಇಲ್ಲಿಯೇ ಉಳಿಸಿ ಮಕ್ಕಳ ವಿದ್ಯಭ್ಯಾಸಕ್ಕೆ ಅನುವು ಮಾಡಿಕೊಡಬೇಕೆಂದು ಪೋಷಕರು ಆಗ್ರಹಿಸಿದರು. ಸರಕಾರಿ ಶಾಲೆ ಉಳಿಸಿಕೊಳ್ಳಬೇಕು ಎಂದು ಸರ್ಕಾರ ಹಲವಾರು ಯೋಜನೆ ರೂಪಿಸುತ್ತಿದೆ. ಆದರೆ ಹೆಚ್ಚುವರಿ ಶಿಕ್ಷಕರ ನೆವದಲ್ಲಿ ಶಿಕ್ಷಕರನ್ನು ವರ್ಗಾವಣೆ ಮಾಡಿ ಮಕ್ಕಳ ವಿದ್ಯಭ್ಯಾಸದ ಮೇಲೆ ಶಿಕ್ಷಣ ಇಲಾಖೆ ಚೆಲ್ಲಾಟವಾಡುತ್ತಿದೆ ಎಂದು ಪೋಷಕರು ಆರೋಪಿಸಿದ್ದಾರೆ. ವರ್ಗಾವಣೆ ಆದೇಶ ಹಿಂಪಡೆಯಬೇಕು ಇಲ್ಲವಾದಲ್ಲಿ ತಮ್ಮ ಮಕ್ಕಳನ್ನು ಶಾಲೆಗಳಿಗೆ ಕಳುಹಿಸುವುದಿಲ್ಲವೆಂದು ಪ್ರತಿಭಟನಾಕಾರರು ಎಚ್ಚರಿಸಿದರು. ಪ್ರತಿಭಟನೆಯಲ್ಲಿ ವಿದ್ಯಾರ್ಥಿಗಳು, ಪೋಷಕರು, ಸಾರ್ವಜನಿಕರು ಪಾಲ್ಗೊಂಡಿದ್ದರು.
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ರೋಟರ್ಯಾಕ್ಟ್ ಕ್ಲಬ್ ಕುಂದಾಪುರದ ಮಾಜಿ ಅಧ್ಯಕ್ಷ ರಾಘವೇಂದ್ರ ಕೆ.ಸಿ. ಅವರು ನೂತನ ರೋಟರಿ ಜಿಲ್ಲೆ ೩೧೮೨ ಇದರ ವಲಯ ರೋಟರ್ಯಾಕ್ಟ್ ಪ್ರತಿನಿಧಿಯಾಗಿ ಆಯ್ಕೆಗೊಂಡಿದ್ದಾರೆ. ಇತ್ತಿಚಿಗೆ ಕಾರ್ಕಳದಲ್ಲಿ ನಡೆದ ರೋಟರ್ಯಾಕ್ಟ್ ಜಿಲ್ಲಾ ಅಧಿವೇಶನದಲ್ಲಿ ಅವರು ಅಧಿಕಾರ ಸ್ವೀಕರಿಸಿದರು. ನೂತನ ರೋಟರ್ಯಾಕ್ಟ್ ಪ್ರತಿನಿಧಿಯಾಗಿ ಆಯ್ಕೆಗೊಂಡ ರಾಘವೇಂದ್ರ ಕೆ.ಸಿ ಅವರನ್ನು ಕುಂದಾಪುರ ರೋಟರ್ಯಾಕ್ಟ್ ಕ್ಲಬ್ನ ಸದಸ್ಯರು ಅಭಿನಂದಿಸಿದ್ದಾರೆ.
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಬರೆಯುವ ಪ್ರತಿಭೆ ಎಲ್ಲರಲ್ಲೂ ಇರುವುದಿಲ್ಲ. ಅದರಲ್ಲೂ ಸರಾಗವಾಗಿ ಓದಿಸಿಕೊಂಡು ಹೋಗುವ ಬರವಣಿಗೆ ಕೆಲವರಿಗೆ ಮಾತ್ರ ಸಿದ್ಧಿಸಿರುತ್ತದೆ. ಆದರೆ ಒಳ್ಳೆಯ ಪುಸ್ತಕ ಓದುವ ಹವ್ಯಾಸ ಯಾರು ಬೇಕಾದರೂ ರೂಢಿಸಿಕೊಳ್ಳಬಹುದು ಎಂದು ಭಂಡಾರ್ಕಾರ್ಸ್ ಕಾಲೇಜಿನ ಇಂಗ್ಲೀಷ್ ಪ್ರಾಧ್ಯಾಪಕ ಡಾ. ಹಯವದನ ಮೂಡುಸಗ್ರಿ ಹೇಳಿದರು. ಜನಪ್ರತಿನಿಧಿ ವಾರ ಪತ್ರಿಕೆ ಆಶ್ರಯದಲ್ಲಿ ನಡೆದ ಲೇಖಕಿ ಡಾ. ಪಾರ್ವತಿ ಜಿ. ಐತಾಳ್ ಬರೆದ ಲೇಖನಗಳ ಸಂಕಲನ ‘ಸಮಕ್ಷಮ’ ಕೃತಿಯನ್ನು ಬಿಡುಗಡೆಗೊಳಿಸಿ ಮಾತನಾಡಿದರು. ಪತ್ರಕರ್ತ ಸುಬ್ರಹ್ಮಣ್ಯ ಪಡುಕೋಣೆ, ಗಂಗಾಧರ ಐತಾಳ್, ಪ್ರವೀಣ ವಿ.ಜಿ. ಉಪಸ್ಥಿತರಿದ್ದರು. ವರದರಾಜ್ ಸ್ವಾಗತಿಸಿ, ನಾಗರಾಜ್ ವಂಡ್ಸೆ ವಂದಿಸಿದರು.
ಕುಂದಾಪ್ರ ಡಾಟ್ ಕಾಂ ಸುದ್ದಿ ಕುಂದಾಪುರ: ಹಟ್ಟಿಯ೦ಗಡಿ, ಶ್ರೀ ಸಿದ್ಧಿವಿನಾಯಕ ವಸತಿ ಶಾಲೆಯಲ್ಲಿ, ಎಫ಼್. ಎಸ್. ಎಲ್ ಇ೦ಡಿಯಾ ವತಿಯಿ೦ದ ಸ್ಪೇನ್ ದೇಶದ ವಿದ್ಯಾರ್ಥಿಗಳಿಗೆ ‘ಸ೦ಸ್ಕೃತಿ ವಿನಿಮಯ’ ಎ೦ಬ ಭಾರತೀಯ ಶಿಕ್ಷಣ, ಸ೦ಸ್ಕೃತಿ, ಆಚಾರ-ವಿಚಾರಗಳ ಪರಿಚಯಾತ್ಮಕ ಕಾರ್ಯಾಗಾರವನ್ನು ಐದು ದಿನಗಳ ಕಾಲ ಹಮ್ಮಿಕೊಳ್ಳಲಾಯಿತು. ಭಾರತೀಯ ಸ೦ಪ್ರದಾಯದ೦ತೆ ಪೂರ್ಣಕು೦ಭ ಸ್ವಾಗತದೊ೦ದಿಗೆ, ತಿಲಕವಿಟ್ಟು, ಆರತಿ ಬೆಳಗಿ ಸ್ಪೇನ್ ದೇಶದ ಹದಿನೈದು ವಿದ್ಯಾರ್ಥಿಗಳ ತ೦ಡ ಬರಮಾಡಿಕೊಳ್ಳಲಾಯಿತು. ಮೊದಲ ದಿನವೇ ಭಾರತೀಯ ವಿಶಿಷ್ಠ ಕಲಾ ಪ್ರಕಾರಗಳಾದ ಕೀರ್ತನೆಗಳು, ಭಜನೆಗಳು, ಯಕ್ಷಗಾನ, ಭರತನಾಟ್ಯ, ಕಥಕ್, ಹಾಗೂ ಜಾನಪದ ಹಾಡುಗಳನ್ನು ಪರಿಚಯಿಸಲಾಯಿತು. ದಕ್ಷಿಣ ಭಾರತದ ಶೈಲಿಯ ಊಟ, ಉಪಹಾರ ನೀಡಿ ಸತ್ಕರಿಸಲಾಯಿತು. ವಿವಿಧ ಬಗೆಯ ಭಾರತದ ಗ್ರಾಮೀಣ ಆಟಗಳು ಹಾಗೂ ಪ್ರಕೃತಿ ವೈವಿಧ್ಯತೆಗಳನ್ನು ಅವರಿಗೆ ತಿಳಿಸಿಕೊಡಲಾಯಿತು. ಸ್ಪೇನ್ ವಿದ್ಯಾರ್ಥಿಗಳೂ ಕೂಡ ಆ ದೇಶದ ಸ೦ಸ್ಕೃತಿ, ಭಾಷೆ, ಸಾ೦ಪ್ರದಾಯಿಕ ಆಟಗಳು, ಹಾಗೂ ಪರಿಸರ ಸ್ವಚ್ಛತೆಯ ಬಗ್ಗೆ ತಿಳಿಸಿಕೊಟ್ಟರು. ನಾಲ್ಕನೆಯ ದಿನ ನಡೆದ ಪರಿಸರ ಜಾಗೃತಿ ಜಾಥವ೦ತೂ ಎರಡೂ ದೇಶದ ವಿದ್ಯಾರ್ಥಿಗಳಿಗೆ ವಿಭಿನ್ನ…
ಕುಂದಾಪ್ರ ಡಾಟ್ ಕಾಂ ಸುದ್ದಿ ಕುಂದಾಪುರ: ರೋಟರ್ಯಾಕ್ಟ್ ಕ್ಲಬ್ ಕೋಟೇಶ್ವರ ಇದರ 2016:17ನೇ ಸಾಲಿನ ಅಧ್ಯಕ್ಷರಾಗಿ ಅರುಣ್ ದೇವಾಡಿಗ ವಕ್ವಾಡಿ ಆಯ್ಕೆಯಾಗಿದ್ದಾರೆ. ಕಾರ್ಯದರ್ಶಿ- ಸುಬ್ರಹ್ಮಣ್ಯ ಮೊಗವೀರ ಆಯ್ಕೆಯಾಗಿದ್ದು, ಸಂಸ್ಥೆಯ ಸಭಾಪತಿ ಸುಧೀರ್ ಕೆ. ಶೆಟ್ಟಿ ನೂಜಿ, ನಿಕಟಪೂರ್ವ ಅಧಕ್ಷ ರಾಘವೇಂದ್ರ ಎಸ್. ಬೀಜಾಡಿ ಕಾರ್ಯ ನಿರ್ವಹಿಸುತ್ತಾರೆ. ಉಪಾಧ್ಯಕ್ಷ: ರವಿ ಕಟ್ಕೆರೆ, ಕೋಶಾಧಿಕಾರಿ: ಪ್ರದೀಪ ದೇವಾಡಿಗ, ಜತೆ ಕಾರ್ಯದರ್ಶಿ: ಶಿವಾನಂದ.ಕೆ, ಜತೆ ಕೋಶಾಧಿಕಾರಿ: ಯೋಗೀಶ್ ಎಸ್.ಕುಂದರ್, ದಂಡಪಾಣಿ: ರಾಮಚಂದ್ರ ಆಚಾರ್ಯ, ಬುಲೆಟಿನ್ ಎಡಿಟರ್: ಗಿರೀಶ್ ವಿ. ಆಚಾರ್ಯ. ಸಂಘ ಸೇವೆ: ಕೆ. ಗಣೇಶ ಮಂಜ, ವೃತ್ತಿ ಸೇವೆ: ಪ್ರಶಾಂತ್ ಆಚಾರ್ಯ, ಸಮುದಾಯ ಸೇವೆ: ಎಸ್. ಶ್ರೇಯಸ್, ಅಂತರ್ರಾಷ್ಟ್ರೀಯ ಸೇವೆ: ಸಂದೀಪ ಶ್ರೀಯಾನ್. ಸಾಂಸ್ಕೃತಿಕ ಕಾರ್ಯದರ್ಶಿ: ಶಿವಾನಂದ ದೊಡ್ಡೋಣಿ, ಶಾಶಾಂಕ ಮಂಜ, ಮನೋಜ್ ಭಾಗವತ. ಕ್ರೀಡಾ ಕಾರ್ಯದರ್ಶಿ: ರಾಜೇಶ್ ಪೈ, ಪ್ರಸಾದ ಆಚಾರ್ಯ, ಎಚ್.ಎನ್. ಧನುಷ್ಕುಮಾರ್. ಸಲಹಾ ಸಮತಿ ಸದಸ್ಯರು: ಗಜೇಂದ್ರ ಬೀಜಾಡಿ, ಪವನ, ರಾಘವೇಂದ್ರ ಅಮೀನ್, ಸಂತೋಷ್ ಬಳ್ಕೂರ್, ಶಿವಪ್ರಸಾದ ಆಚಾರ್ಯ, ಯೋಗೀಶ್.ಬಿ, ರಾಧಕೃಷ್ಣ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಭಂಡಾರ್ಕಾರ್ಸ್ ಕಾಲೇಜು ಯುತ್ ರೆಡ್ ಕ್ರಾಸ್ ಘಟಕ ಕಾರ್ಯಚಟುವಟಿಕೆ ಕಾಲೇಜಿನ ಆರ್.ಎನ್. ಶೆಟ್ಟಿ ಸಭಾಂಗಣದಲ್ಲಿ ಜರುಗಿತು. ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಕುಂದಾಪುರ ತಾಲೂಕ್ ಘಟಕ ಸಭಾಪತಿ ಜಯಕರ ಶೆಟ್ಟಿ ಉದ್ಘಾಟಿಸಿದರು, ಭಂಡಾರ್ಕಾರ್ಸ್ ಕಾಲೇಜ್ ಪ್ರಾಂಶುಪಾಲ ಡಾ.ಎನ್.ಪಿ.ನಾರಾಯಣ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಚಿನ್ಮಯಿ ಆಸ್ಪತ್ರೆ ನಿರ್ದೇಶಕ ಡಾ.ಉಮೇಶ್ ಪುತ್ರನ್, ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಕುಂದಾಪುರ ತಾಲೂಕಾ ಘಟಕ ಕಾರ್ಯದರ್ಶಿ ಸೀತಾರಾಮ ಶೆಟ್ಟಿ, ಖಜಾಂಚಿ ಶಿವರಾಮ ಶೆಟ್ಟಿ, ಭಂಡಾರ್ಕಾರ್ಸ್ ಕಾಲೇಜ್ ಯುತ್ ರೆಡ್ ಕ್ರಾಸ್ ಘಟಕ ಕಾರ್ಯಾಕ್ರಮಾಧಿಕಾರಿ ಪ್ರೊ. ಸತ್ಯನಾರಾಯಣ ಮತ್ತು ವಿದ್ಯಾರಾಣಿ ಉಪಸ್ಥಿತರಿದ್ದರು.
ಜಿ. ಸುರೇಶ್ ಪೇತ್ರಿ | ಕುಂದಾಪ್ರ ಡಾಟ್ ಕಾಂ ಲೇಖನ. ಬಡಗು ತಿಟ್ಟಿನ ಒಂದು ಪ್ರಭೇದವಾದ ನಡುತಿಟ್ಟಿನ ಪ್ರಾತಿನಿಧಿಕ ಪುರುಷ ವೇಷಧಾರಿಯಾಗಿ, ನಡುತಿಟ್ಟಿನ ಸಮರ್ಥ ಸೊಬಗನ್ನು ಸಮರ್ಪಕವಾಗಿ ಮೈಗೂಡಿಸಿಕೊಂಡ ಕೆಲವೇ ಕೆಲವು ಯಕ್ಷಗಾನ ಕಲಾವಿದರಲ್ಲಿ ಕೋಟ ಸುರೇಶ ಬಂಗೇರ ಓರ್ವರು. ಕುಂದಾಪುರದಿಂದ ಬ್ರಹ್ಮಾವರದ ಪರಿಸರದಲ್ಲಿ ಕಾಣಸಿಗುವ ಬಡಗುತಿಟ್ಟಿನ ಒಂದು ಭಾಗವಾದ ನಡುತಿಟ್ಟು ಅಥವಾ ಮದ್ಯಮ ನಡುತಿಟ್ಟಿನ ಶ್ರೇಷ್ಠ ಕಲಾವಿದ ಎನಿಸಿಕೊಂಡವರು ಸುರೇಶ ಬಂಗೇರ ಅವರು ಕೋಟದ ಮಣೂರು-ಪಡುಕೆರೆಯವರು. ತನ್ನ ಹೆಜ್ಜೆಗಾರಿಕೆ, ಮಾತುಗಾರಿಕೆಯ, ಅಭಿನಯದ ಮೂಲಕ ಪರಿಪೂರ್ಣ ಪಾರಂಪರಿಕ ವೇಷಧಾರಿಯಾಗಿ ಗುರುತಿಸಿಕೊಂಡು ಕೋಟ ಸುರೇಶ್ ಎಂದೇ ಪ್ರಸಿದ್ಧಿ ಪಡೆದವರು. ಕುಂದಾಪ್ರ ಡಾಟ್ ಕಾಂ. ಬೇಡು ಮರಕಾಲ ಹಾಗೂ ಅಕ್ಕಮ್ಮ ಮರಕಾಲರ ಮಗನಾಗಿ 1965 ರಲ್ಲಿ ಜನಿಸಿದ ಸುರೇಶ ಅವರು ನಾಲ್ಕನೇ ತರಗತಿ ವರೆಗೆ ವಿದ್ಯಾಭ್ಯಾಸವನ್ನು ಮುಗಿಸಿ ತನ್ನ ಹದಿಮೂರನೇ ವಯಸ್ಸಿನಲ್ಲಿ ಮಂದರ್ತಿ ಮೇಳದಲ್ಲಿ ಕಾಲಿಗೆ ಗಜ್ಜೆ ಕಟ್ಟಿದರು. ಮೊಳಹಳ್ಳಿ ಹೆರಿಯ ನಾಯ್ಕರ ಶಿಷ್ಯ ವೃತ್ತಿ ಪಡೆದ ಕೋಟ ಸುರೇಶ ಅವರು ಸೌಕೂರು ಮೇಳದಲ್ಲಿ ನಿರಂತರ…
