ನಡುತಿಟ್ಟಿನ ಪ್ರಾತಿನಿಧಿಕ ಪುರುಷ, ಶ್ರೇಷ್ಠ ಯಕ್ಷ ಕಲಾವಿದ ಕೋಟ ಸುರೇಶ

Call us

Call us

Call us

Call us

ಜಿ. ಸುರೇಶ್ ಪೇತ್ರಿ | ಕುಂದಾಪ್ರ ಡಾಟ್ ಕಾಂ ಲೇಖನ.
ಬಡಗು ತಿಟ್ಟಿನ ಒಂದು ಪ್ರಭೇದವಾದ ನಡುತಿಟ್ಟಿನ ಪ್ರಾತಿನಿಧಿಕ ಪುರುಷ ವೇಷಧಾರಿಯಾಗಿ, ನಡುತಿಟ್ಟಿನ ಸಮರ್ಥ ಸೊಬಗನ್ನು ಸಮರ್ಪಕವಾಗಿ ಮೈಗೂಡಿಸಿಕೊಂಡ ಕೆಲವೇ ಕೆಲವು ಯಕ್ಷಗಾನ ಕಲಾವಿದರಲ್ಲಿ ಕೋಟ ಸುರೇಶ ಬಂಗೇರ ಓರ್ವರು.

Call us

Click Here

Click here

ಕುಂದಾಪುರದಿಂದ ಬ್ರಹ್ಮಾವರದ ಪರಿಸರದಲ್ಲಿ ಕಾಣಸಿಗುವ ಬಡಗುತಿಟ್ಟಿನ ಒಂದು ಭಾಗವಾದ ನಡುತಿಟ್ಟು ಅಥವಾ ಮದ್ಯಮ ನಡುತಿಟ್ಟಿನ ಶ್ರೇಷ್ಠ ಕಲಾವಿದ ಎನಿಸಿಕೊಂಡವರು ಸುರೇಶ ಬಂಗೇರ ಅವರು ಕೋಟದ ಮಣೂರು-ಪಡುಕೆರೆಯವರು. ತನ್ನ ಹೆಜ್ಜೆಗಾರಿಕೆ, ಮಾತುಗಾರಿಕೆಯ, ಅಭಿನಯದ ಮೂಲಕ ಪರಿಪೂರ್ಣ ಪಾರಂಪರಿಕ ವೇಷಧಾರಿಯಾಗಿ ಗುರುತಿಸಿಕೊಂಡು ಕೋಟ ಸುರೇಶ್ ಎಂದೇ ಪ್ರಸಿದ್ಧಿ ಪಡೆದವರು. ಕುಂದಾಪ್ರ ಡಾಟ್ ಕಾಂ.

ಬೇಡು ಮರಕಾಲ ಹಾಗೂ ಅಕ್ಕಮ್ಮ ಮರಕಾಲರ ಮಗನಾಗಿ 1965 ರಲ್ಲಿ ಜನಿಸಿದ ಸುರೇಶ ಅವರು ನಾಲ್ಕನೇ ತರಗತಿ ವರೆಗೆ ವಿದ್ಯಾಭ್ಯಾಸವನ್ನು ಮುಗಿಸಿ ತನ್ನ ಹದಿಮೂರನೇ ವಯಸ್ಸಿನಲ್ಲಿ ಮಂದರ್ತಿ ಮೇಳದಲ್ಲಿ ಕಾಲಿಗೆ ಗಜ್ಜೆ ಕಟ್ಟಿದರು. ಮೊಳಹಳ್ಳಿ ಹೆರಿಯ ನಾಯ್ಕರ ಶಿಷ್ಯ ವೃತ್ತಿ ಪಡೆದ ಕೋಟ ಸುರೇಶ ಅವರು ಸೌಕೂರು ಮೇಳದಲ್ಲಿ ನಿರಂತರ ಇಪ್ಪತ್ತೊಂದು ವರ್ಷ ಕಾಲ ವೇಷ ಕಟ್ಟಿ ಬಳಿಕ ಮಂದಾರ್ತಿ ಮೇಳ, ಕಮಲಶಿಲೆ, ಕಳುವಾಡಿ, ಸಾಲಿಗ್ರಾಮ, ಪೆರ್ಡೂರು ಮೇಳಗಳಲ್ಲಿ ಸೇವೆ ಸಲ್ಲಿಸಿ ಸದ್ಯ ಅಮೃತೇಶ್ವರೀ ಮೇಳದಲ್ಲಿ ಪುರಷ ಪಾತ್ರಧಾರಿಯಾಗಿ ಹಾಗೂ ಮೇಳದ ಪ್ರಬಂಧಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಕುಂದಾಪ್ರ ಡಾಟ್ ಕಾಂ.

ಮೊಳಹಳ್ಳಿ ಹೆರಿಯ ನಾಯ್ಕರ ಶೈಲಿಯನ್ನು ಮೈಗೂಡಿಸಿಕೊಂಡು ಬಂದ ಕೋಟ ಸುರೇಶ ಅವರು ಇಂದಿನ ಕಾಲಘಟ್ಟದ ಬೆಳವಣಿಗೆಯ ಬದಲಾವಣೆಗಳಲ್ಲಿ ಯಾರ ಅನುಕರಣೆಯನ್ನು ತೊಡಗಿಸಿಕೊಳ್ಳದೇ ತನ್ನದೇ ಆದ ಛಾಪನ್ನು ಯಕ್ಷಗಾನ ಕ್ಷೇತ್ರದಲ್ಲಿ ಮೂಡಿಸಿದವರು. ಪಾತ್ರಕ್ಕೆ ಬೇಕಾದ ಚುರುಕು ಹಾಗೂ ಸ್ಪುಟವಾದ ಮಾತು, ನಿರಂತರ ಹಾಗೂ ನಿರರ್ಗಳವಾಗಿ ಮಾತಿನ ಧಾರೆ, ಅಷ್ಟೇ ಲಯಬದ್ಧ ಕುಣಿತ ಇದೆಲ್ಲದರ ಸಮ್ಮಿಳಿತಳಿಂದ ಅವರೊಬ್ಬ ಶ್ರೇಷ್ಠ ಕಲಾವಿದರ ಸಾಲಿನಲ್ಲಿ ಗುರುತಿಸಲ್ಪಟ್ಟವರು.

ಸುಧನ್ವ ಕಾಳಗದ ಸುಧನ್ವನ ಪಾತ್ರ ಖ್ಯಾತಿಯನ್ನೂ ಗಳಿಸಿಕೊಟ್ಟರೆ ಶ್ರೀ ಕೃಷ್ಣನ ಪಾತ್ರವಲ್ಲದೇ ಮಾರ್ತಂಡತೇಜ,ಪುಷ್ಕಳ,ಋತುಪರ್ಣ,ಭೀಷ್ಮ, ಕೌಂಢ್ಲೀಕ, ವೀರಮಣಿ, ತಾಮ್ರಧ್ವಜ, ದೇವವೃತ, ಹೇಮಾಂಗದ, ಚಂದ್ರಾಂಗದ ಅಲ್ಲದೆ ನಾಗಶ್ರೀ ಪ್ರಸಂಗದ ಶುಭ್ರಾಂಗನ ಪಾತ್ರ ಬಯಲಾಟ ಮೇಳಗಳಲ್ಲಿ ಅಂತಹ ಭಾವಾನಾತ್ಮಕವಾಗಿ ಚಿತ್ರಿಸಿದ ಕಲಾವಿದ ಮತ್ತೊಬ್ಬ ಇಲ್ಲ ಎಂಬ ಹೆಗ್ಗಳಿಕೆ ಅವರದ್ದು.

Click here

Call us

Call us

Click Here

Visit Now

ಪತ್ನಿ ಸುಶೀಲಾ ಹಾಗೂ ಮಕ್ಕಳಾದ ಸುರಕ್ಷಾ, ಸಮರ್ಥರೊಂದಿಗೆ ಕೋಟದಲ್ಲಿ ನೆಲೆಸಿರುವ ಕೋಟ ಸುರೇಶ ಅವರ ಯಕ್ಷಲೋಕದ ಸಾಧನೆಗೆ ಹಲವು ಪ್ರಶಸ್ತಿ ಪುರಸ್ಕಾರಗಳು ಸಂದಿವೆ. ಯಕ್ಷಯಾತ್ರೆಯ ನಲವತ್ತು ವಸಂತಗಳನ್ನು ಕಂಡ ಅವರ ಬದುಕು ಯಕ್ಷ ಪೀಳಿಗೆಗೊಂದು ಮಾದರಿಯಾಗಲಿ/ಕುಂದಾಪ್ರ ಡಾಟ್ ಕಾಂ/

ಚಿತ್ರಗಳು:
ಪ್ರಶಾಂತ ಮಲ್ಯಾಡಿ
ಧೀರು

ಲೇಖಕರು ಹವ್ಯಾಸಿ ಬರಹಗಾರರು. ಪ್ರಸ್ತುತ ದೋಹಾ- ಕತಾರಿನಲ್ಲಿ ನೆಲೆಸಿದ್ದಾರೆ.

Leave a Reply

Your email address will not be published. Required fields are marked *

3 × one =