Author: ನ್ಯೂಸ್ ಬ್ಯೂರೋ

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಬೀದರ್ ದೇಶಪಾಂಡೆ ಸಾಹಿತ್ಯ ಮತ್ತು ಸಾಂಸ್ಕೃತಿಕ ಪ್ರತಿಷ್ಠಾನದ ವತಿಯಿಂದ ಹಾವೇರಿ ಜಿಲ್ಲೆಯ ರಾಣಿಬೆನ್ನೂರು ಉಷಾ ಸಿ ಯತ್ನಳ್ಳಿ ಸದ್ಬಾವನ ವೇದಿಯಲ್ಲಿ ಜರುಗಿದ ರಾಜ್ಯಮಟ್ಟದ ಕಾರ್ಯಕ್ರಮದಲ್ಲಿ ಕಳೆದ ನಲವತ್ತು ವರ್ಷಗಳಿಂದ ಸಹಕಾರಿ ಕ್ಷೇತ್ರದಲ್ಲಿ ಸೇವೆಸಲ್ಲಿಸುತ್ತಿರುವ ನಾಯ್ಕನಕಟ್ಟೆ ಪುಂಡಲೀಕ ನಾಯಕ್ ಅವರಿಗೆ ’ಸಹಕಾರಿ ರತ್ನ’ ರಾಜ್ಯ ಪ್ರಶಸ್ತಿ ಪ್ರದಾನ ಮಾಡಲಾಯಿತು. ಕುಂದಾಪುರ ತಾಲೂಕು ಕೆರ್ಗಾಲಿನವರಾದ ಪುಂಡಲೀಕ ನಾಯಕ್, ಖಂಬದಕೋಣೆ ರೈತರ ಸೇವಾ ಸಹಕಾರಿ ಸಂಘ ಸೇರಿದಂತೆ ವಿವಿಧ ಸಹಕಾರಿ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸಿ ಪ್ರಸ್ತುತ ಗಂಗೊಳ್ಳಿ ಟೌನ್ ಸೌಹಾರ್ದ ಸಹಕಾರಿಯ ಶಾಖಾ ಸಲಹಾಗಾರರಾಗಿದ್ದಾರೆ. ಬೈಂದೂರು ಹಿರಿಯ ನಾಗರೀಕ ವೇದಿಕೆಯ ಸದಸ್ಯರಾಗಿ, ಈ ಭಾಗದ ಧಾರ್ಮಿಕ ಕಾರ್ಯಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು, ಆಧ್ಯಾತ್ಮದತ್ತ ಒಲವು ಹೊಂದಿರುವ ಇವರು ಕವನ, ಲೇಖನ, ನಾಟಕ, ಹಾಡುಗಾರಿಕೆ, ಅಂಚೆಚೀಟಿ ಸಂಗ್ರಹ ಮುಂತಾದ ಹವ್ಯಾಸಗಳ ಮೂಲಕ ಸಾಹಿತ್ಯ, ಸಾಂಸ್ಕೃತಿಕ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದಾರೆ/ಕುಂದಾಪ್ರ ಡಾಟ್ ಕಾಂ ಸುದ್ದಿ/

Read More

ಕುಂದಾಪ್ರ ಡಾಟ್ ಕಾಂ. ನಾವು ಆಧುನಿಕರಾದಂತೆಯೂ ಜಾತಿ, ಧರ್ಮಗಳ ಕಂದಕದ ನಡುವೆ ಬಾಳುತ್ತಿರುವ ಮನುಷ್ಯ, ಎಲ್ಲರಲ್ಲಿಯೂ ಹರಿಯವುದು ಒಂದೇ ರಕ್ತ ಮತ್ತು ಮಾನವಪ್ರೇಮವೇ ದೊಡ್ಡದೆಂದು ಅರ್ಥಮಾಡಿಕೊಳ್ಳುವುದು ಯಾವಾಗ? ಇಂತಹದ್ದೇ ಒಂದು ಪ್ರಶ್ನೆಯನ್ನಿಟ್ಟುಕೊಂಡು ಕುಂದಾಪುರದ ಯುವ ನಿರ್ದೇಶಕ ನರೇಶ್ ಭಟ್ ಕಿರುಚಿತ್ರವೊಂದನ್ನು ನಿರ್ದೇಶಿಸಿದ್ದಾರೆ. ನೋಡಿ…

Read More

ಕುಂದಾಪ್ರ ಡಾಟ್ ಕಾಂ ವರದಿ ಕುಂದಾಪುರ: ಬಿರುಗಾಳಿಗೆ ಕುಸಿದು ಬಿದ್ದಿದ್ದ ಮನೆಯ ಮತ್ತೆ ಎದ್ದು ನಿಂತಿದೆ. ಮನೆಯಿಲ್ಲದೇ ಮುಂದೇನು ಎಂಬ ಕುಳಿತಿದ್ದ ವೃದ್ಧ ದಂಪತಿಗಳಿಗೆ ಮತ್ತೆ ಆಸರೆ ದೊರೆತಿದೆ. ಎರಡು ತಿಂಗಳೊಳಗೆ ಮತ್ತೆ ಅದೇ ಜಾಗದಲ್ಲಿ ಮನೆ ಕಟ್ಟಿಕೊಟ್ಟು ಇತರರಿಗೂ ಮಾದರಿಯಾಗಿದೆ ಕೋಟೇಶ್ವರ ಗಾಣಿಗ ಯುವ ಸಂಘಟನೆ. ಕಳೆದ ಮೇ ತಿಂಗಳಲ್ಲಿ ಬೀಸಿದ ಬೀರುಗಾಳಿ ಮಳೆ ಅಬ್ಬರಕ್ಕೆ ಗೋಪಾಡಿ ಕಾಂತೇಶ್ವರ ದೇವಸ್ಥಾನದ ಸಮೀಪದ ಆನಂದ ಗಾಣಿಗರ ಮನೆ ಮೇಲ್ಚವಣಿ ಸಂಪೂರ್ಣ ಕುಸಿದು ಹಾನಿಗೀಡಾಗಿತ್ತು. ಘಟನೆಯಲ್ಲಿ ವೃದ್ಧ ಆನಂದ ಗಾಣಿಗ ಗಂಭೀರ ಗಾಯಾಗೊಂಡಿದ್ದು ಆಸ್ಪತ್ರೆಗೆ ದಾಖಲಾಗಿದ್ದರು. ಮನೆಯನ್ನು ದುರಸ್ತಿಗೊಳಿಸಲಾಗದೇ ವಯೋವೃದ್ಧ ದಂಪತಿಗಳು ಸಂಕಷ್ಟದಲ್ಲಿದ್ದಾಗ, ಕೋಟೇಶ್ವರ ಗಾಣಿಗ ಯುವ ಸಂಘಟನೆ ನೇತೃತ್ವದಲ್ಲಿ ಸುಮಾರು ಅಂದಾಜು 3.50 ಲಕ್ಷ ಅಂದಾಜಿನಲ್ಲಿ ಮನೆ ಬಿದ್ದ ಜಾಗದಲ್ಲೇ ಪುಟ್ಟದಾದ ಸುಂದರ ಮನೆಯನ್ನು ಕುಂದಾಪುರ ತಾಲೂಕು ಗಾಣಿಗ ಸೇವಾ ಸಂಘ ಮತ್ತು ದಾನಿಗಳ ನೆರವಿನಿಂದ ನಿರ್ಮಿಸುವ ನಿರ್ಣಯ ಕೈಗೊಳ್ಳಲಾಗಿತ್ತು. ಕುಂದಾಪ್ರ ಡಾಟ್ ಕಾಂ ವರದಿ. ಮನೆ ಹಸ್ತಾಂತರ: ಅದರಂತೆ ನಿಮಾರ್ಣಗೊಂಡ ನೂತನ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಬೈಂದೂರು ಕ್ಷೇತ್ರ ಬಿಜೆಪಿ ಯುವಮೋರ್ಚಾದ ಅಧ್ಯಕ್ಷರನ್ನಾಗಿ ಯುವ ಉದ್ಯಮಿ, ಸಂಘಟಕ ಶರತ ಕುಮಾರ ಶೆಟ್ಟಿ ಉಪ್ಪುಂದ ಅವರನ್ನು ಕ್ಷೇತ್ರ ಬಿಜೆಪಿಯ ಅಧ್ಯಕ್ಷ ಸದಾನಂದ ಸೇರುಗಾರ್ ನೇಮಕ ಮಾಡಿದ್ದಾರೆ. ಶರತ್ ಕುಮಾರ ಶೆಟ್ಟಿ ಅವರು ಜಿಲ್ಲಾ ಬಿಜೆಪಿ ಯುವಮೋರ್ಚಾದ ಕಾರ್ಯದರ್ಶಿಯಾಗಿ, ಬೈಂದೂರು ಕ್ಷೇತ್ರ ಬಿಜೆಪಿ ಯುವಮೋರ್ಚಾದ ಉಪಾಧ್ಯಕ್ಷರಾಗಿ ಪಕ್ಷ ಸಂಘಟನೆಯಲ್ಲಿ ದುಡಿದಿದ್ದಲ್ಲದೇ, ಉಪ್ಪುಂದ ಭಾಗದ ಸಂಘ ಸಂಸ್ಥೆಗಳಲ್ಲಿ ಸಕ್ರೀಯವಾಗಿ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ.

Read More

ಬೈಂದೂರು ರೋಟರಿ ಕ್ಲಬ್ ಪದಪ್ರದಾನ ಸಮಾರಂಭ ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಸೇವಾ ಸಂಸ್ಥೆಗಳ ನಿಸ್ವಾರ್ಥ ಸೇವೆ ತಾಯಿಯ ಪ್ರೀತಿಗಿಂತಲೂ ಮಿಗಿಲಾದ ಸ್ಥಾನವನ್ನು ಹೊಂದಿದೆ. ತಾಯಿಯಾದರೂ ತನ್ನ ಮಗು ಮುಂದೊಂದು ದಿನ ತನ್ನನ್ನು ಚನ್ನಾಗಿ ನೋಡಿಕೊಳ್ಳಲಿ ಎಂಬ ಸ್ವಾರ್ಥ ಹೊಂದಿರುತ್ತಾಳೆ. ಆದರೆ ಸೇವಾ ಸಂಸ್ಥೆಗಳಿಗೆ ಅಂತಹ ಸ್ವಾರ್ಥವಿಲ್ಲ. ಅದರಲ್ಲಿ ತೊಡಗಿಸಿಕೊಳ್ಳುವವರೂ ನಿಸ್ವಾರ್ಥ ಮನೋಭಾವವನ್ನು ಹೊಂದಿ ಮುನ್ನಡೆಯಬೇಕಾದುದು ಅವರ ಜವಾಬ್ದಾರಿ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ ಆಳ್ವ ಹೇಳಿದರು. ಇಲ್ಲಿನ ರೋಟರಿ ಭವನದಲ್ಲಿ ಬೈಂದೂರು ರೋಟರಿ ಕ್ಲಬ್ ಆಶ್ರಯದಲ್ಲಿ ಜರುಗಿದ ನೂತನ ಅಧ್ಯಕ್ಷ, ಕಾರ್ಯದರ್ಶಿಗಳ ಪದಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು. ಮನುಷ್ಯ ವಿದ್ಯಾವಂತನಾದಂತೆ ಜಾತಿಯ ಗಂಡಾತರ ಮಾನವ ಸಂಬಂಧಗಳನ್ನು ದೂರ ಮಾಡುತ್ತಿದೆ, ಮಾನವೀಯತೆ ಮರೆಯಾಗಿದೆ. ಜಾತಿರಹಿತ ಸಮಾಜವನ್ನು ಕಟ್ಟುವುದು ಶಿಕ್ಷಣವಂತರ ಗುರಿಯಾಗಬೇಕು. ಇನ್ನೊಬ್ಬರನ್ನೂ ಪ್ರೀತಿ, ವಾತ್ಸಲ್ಯದಿಂದ ನೋಡುವುದೇ ನಿಜವಾದ ಮಾನವೀಯತೆಯನ್ನು ಬೆಳೆಸಿಕೊಳ್ಳಬೇಕು ಎಂದವರು ಹೇಳಿದರು. ಈ ಸಂದರ್ಭದಲ್ಲಿ ನೂತನ ಅಧ್ಯಕ್ಷರಾಗಿ ಮಂಜುನಾಥ ಶೆಟ್ಟಿ, ಕಾರ್ಯದರ್ಶಿಯಾಗಿ ಸುಧಾಕರ ಪಿ ಅಧಿಕಾರ ಸ್ವೀಕರಿಸಿದರು. ರೋಟರಿ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಡಿವೈಎಸ್ಪಿ ಎಂ.ಕೆ. ಗಣಪತಿ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ನೈತಿಕ ಹೊಣೆ ಹೊತ್ತು ಕಿರುಕುಳ ನೀಡಿದರೆನ್ನಲಾದ ಸಚಿವರು ಹಾಗೂ ಪೊಲೀಸ್ ಅಧಿಕಾರಿಗಳು ರಾಜಿನಾಮೆ ನೀಡಬೇಕೆಂದು ಆಗ್ರಹಿಸಿ ಕುಂದಾಪುರದ ಎಬಿವಿಪಿ ನೇತೃತ್ವದಲ್ಲಿ ಡಾ. ಬಿ.ಬಿ. ಹೆಗ್ಡೆ ಕಾಲೇಜಿನ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು. ಕರ್ನಾಟಕ ರಾಜ್ಯದ ಸಚಿವ ಕೆ.ಜೆ. ಜಾರ್ಜ್ ಹಾಗೂ ಪೊಲೀಸ್ ಅಧಿಕಾರಿಗಳಾದ ಪ್ರಣವ್ ಮೊಹಂತಿ ಹಾಗೂ ಎ.ಎಂ. ಪ್ರಸಾದ್ ನಿರಂತರ ಕಿರುಕುಳ ನೀಡಿರುವ ಬಗ್ಗೆ ಖಾಸಗಿ ಮಾಧ್ಯಮವೊಂದಕ್ಕೆ ಹೇಳಿಕೆ ನೀಡಿದ್ದ ದಕ್ಷ ಡಿವೈಎಸ್ಪಿ ಗಣಪತಿ ಆತ್ಮಹತ್ಯೆಗೆ ಶರಣಾಗಿದ್ದರು. ಸಾವಿಗೂ ಮುನ್ನ ತನ್ನ ಸಾವಿಗೆ ಕಾರಣವಾದವರ ಹೆಸರನ್ನು ನೇರವಾಗಿಯೇ ಪ್ರಸ್ತಾಪಿಸಿದ್ದರೂ ಸರಕಾರ ಇಲ್ಲಸಲ್ಲದ ಕಾರಣವನ್ನು ನೀಡಿ ಪ್ರಕರಣದ ಹಾದಿ ತಪ್ಪಿಸುತ್ತಿದೆ ಎಂದು ಪ್ರತಿಭಟನಾ ನಿರತರು ಆರೋಪಿಸಿದರು. ಕೇಸು ದಾಖಲಿಸಿ: ಸಮಾಜದಲ್ಲಿ ಎಲ್ಲರಿಗೂ ಒಂದೇ ತರಹದ ನ್ಯಾಯವಿದ್ದು, ಮೃತರ ಪತ್ನಿ ಹಾಗೂ ಪುತ್ರ ನೀಡಿರುವ ಕೇಸನ್ನು ದಾಖಲಿಸಿ ವಿಚಾರಣೆಗೊಳಪಡಿಸಬೇಕು ಅಲ್ಲದೇ ಪ್ರಕರಣವನ್ನು ಸಿಬಿಐ ಗೆ ಒಪ್ಪಿಸಬೇಕು ಎಂದು ಎಬಿಪಿವಿ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಮಾನವ ಜನ್ಮದಲ್ಲಿ ಶರೀರಕ್ಕೆ ಬಹಳ ಮಹತ್ವವಿದೆ. ಶರೀರ ಆರೋಗ್ಯವಾಗಿ, ಸದೃಡವಾಗಿದ್ದರೆ ಉತ್ಸಾಹದಿಂದ ಸರ್ವ ಕೆಲಸ ಸಾಂಗವಾಗಿ ನಡೆದು ಉನ್ನತಿ ಪಡೆಯಲು ಸಾಧ್ಯ. ಗೌಡ ಸಾರಸ್ವತ ಸಮಾಜ ಭಾಂದವರು ಹಲವು ಕಾರಣದಿಂದ ಗೋವಾದಿಂದ ದಕ್ಷಿಣಾಭಿಮುಖವಾಗಿ ಬಂದು ನೆಲೆಸಿ ವ್ಯಾಪಾರ ವಹಿವಾಟಿನ ಜೊತೆಗೆ ವಿವಿಧ ಕ್ಷೇತ್ರದಲ್ಲಿ ಸಮೃದ್ದಿ ಹೊಂದಿದ್ದೇವೆ. ಇಲ್ಲಿನ ಜನ,ಸಮಾಜದಿಂದ ಕೇವಲ ಪಡೆದರಷ್ಟೇ ಸಾಲದು ಸೇವಾ ರೂಪದಲ್ಲಿ ಒಳಿತು ಮಾಡುವ ದಿಶೆಯಲ್ಲಿ ಮುಂದಿನ ಜನಾಂಗದವರಿಗೂ ಶಾಶ್ವತವಾಗಿ ಸೇವೆ ನೀಡುವ ಕಾರ್ಯ ನಡೆಯಬೇಕು. ದೇವಳದಲ್ಲಿ ವೇದಾಂಗ,ಧರ್ಮ ಪರಿಪಾಲನೆಯ ಜೊತೆಯಲ್ಲಿ ಸಮಾಜ ಮುಖಿ ಕಾರ್ಯಗಳೂ ನಡೆಯಬೇಕು. ಈ ವೈದ್ಯಾಶಾಲಾ ಕೇಂದ್ರದಿಂದ ಸಮಾಜದ ಎಲ್ಲಾ ವರ್ಗದ ಜನರಿಗೆ ಸೇವೆ ಸಲ್ಲಬೇಕು ಎಂದು ಕಾಶೀ ಮಠಾಧೀಶ ಶ್ರೀಮದ್ ಸಮ್ಯಮೀಂದ್ರ ತೀರ್ಥ ಸ್ವಾಮೀಜಿಯವರು ಕೋಟೇಶ್ವರ ಶ್ರೀ ರಾಮ ಸೇವಾ ಸಂಘದ ಸುವರ್ಣ ಮಹೋತ್ಸವ ಸೌಧದ ಶ್ರೀ ಯಾದವೇಂದ್ರ ಆಯುರ್ವೇದ ವೈದ್ಯಶಾಲಾ, ಶ್ರೀ ಭುವನೇಂದ್ರ ಪಂಚಕರ್ಮ ಸೆಂಟರ್‌ನ ಪ್ರಥಮ ಅಂತಸ್ತಿನ ಉಧ್ಘಾಟನೆಯನ್ನು ಅಮೃತ ಹಸ್ತಗಳಿಂದ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಕುಂದಾಪುರ ಉಪ ವಿಭಾಗದ ನೂತನ ಡಿವೈಎಸ್‌ಪಿ ಆಗಿ ಪ್ರವೀಣ ಎಚ್. ನಾಯಕ್ ಮಂಗಳವಾರ ಸಂಜೆ ಅಧಿಕಾರ ಸ್ವೀಕರಿಸಿದರು. ಕುಂದಾಪುರದಲ್ಲಿ ಡಿವೈಎಸ್‌ಪಿಯಾಗಿ ಸೇವೆ ಸಲ್ಲಿಸಿ ಶಿವಮೊಗ್ಗಕ್ಕೆ ವರ್ಗಾವಣೆಗೊಂಡಿರುವ ಮಂಜುನಾಥ ಶೆಟ್ಟಿ ಅಧಿಕಾರ ಹಸ್ತಾಂತರಿಸಿ ಶುಭಕೋರಿದರು. ನೂತನ ಡಿವೈಎಸ್‌ಪಿ ಯಾಗಿ ಅಧಿಕಾರ ಸ್ವೀಕರಿಸಿರುವ ಪ್ರವೀಣ್ ಎಚ್ ನಾಯಕ್ ಅವರ ಮೂಲತಃ ಕೊಪ್ಪದವರಾಗಿದ್ದು ಬಿಕಾಂ, ಎಲ್.ಎಲ್,ಬಿ, ಎಂಎ ಪದವಿಧರರು. ಕೋಲಾರ ಜಿಲ್ಲೆಯ ಮುಳಬಾಗಿಲುವಿನಲ್ಲಿ ಎಸ್.ಐ ಆಗಿ ವೃತ್ತಿ ಜೀವನ ಆರಂಭಿಸಿ, ಬೆಂಗಳೂರು ಜಿಲ್ಲೆಯ ರಾಮನಗರ, ಮಂಗಳೂರು ಟೌನ್, ಮಂಗಳೂರು ಸಂಚಾರ ಪೊಲೀಸ್ ಠಾಣೆ, ಬಜ್ಪೆ, ಪಣಂಬೂರು, ಸುಳ್ಯ, ಉಡುಪಿ ಟೌನ್, ಉಡುಪಿ ವೃತ್ತ, ಕಾಪು, ಮಣಿಪಾಲಗಳಲ್ಲಿ ಸೇವೆ ಸಲ್ಲಿಸಿದ್ದಾರೆ. ಇಂಟೆಲಿಜೆನ್ಸ್, ಸ್ಪೇಷಲ್ ಬ್ರಾಂಚ್‌ಗಳಲ್ಲಿ ಸೇವೆ ಸಲ್ಲಿಸಿದ್ದಾರೆ. ಅಧಿಕಾರ ಸ್ವೀಕರಿಸಿ ಮಾತನಾಡಿದ ಅವರು, ಶಾಂತಿ ಸುವ್ಯವಸ್ಥೆಗೆ ಪ್ರಥಮ ಆದ್ಯತೆ ನೀಡುವುದಲ್ಲದೇ ಕಳ್ಳತನ, ಅಪರಾಧ ಕೃತ್ಯಗಳನ್ನು ತಡೆಯುವುಲ್ಲಿ ಶೃದ್ದಾಪೂರ್ವಕ ಕರ್ತವ್ಯ ನಿರ್ವಹಿಸುತ್ತೇನೆ ಎಂದಿದ್ದಾರೆ. ಕುಂದಾಪ್ರ ಡಾಟ್ ಕಾಂ ಸುದ್ದಿ. ಈ ಸಂದರ್ಭದಲ್ಲಿ ಬೈಂದೂರು…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಸಾಹಿತ್ಯ, ಸಾಮಾಜಿಕ, ಧಾರ್ಮಿಕ ಮುಂತಾದ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ತಮ್ಮದೇ ಆದ ಛಾಪು ಮೂಡಿಸಿರುವ ಉಪ್ಪುಂದ ಚಂದ್ರಶೇಖರ ಹೊಳ್ಳರ ಕುರಿತಾಗಿ ‘ಉಪ್ಪುಂದದ ಹೊಳಪು’ ಅಭಿನಂದನಾ ಗ್ರಂಥ ಬಿಡುಗಡೆಗೊಂಡ ಸುಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಅವರ ಅನುಪಮ ಸೇವೆಯನ್ನು ಸ್ಮರಿಸಿ ಕುಂದಾಪುರ ರೋಟರಿ ಕ್ಲಬ್ ವತಿಯಿಂದ ಹೊಳ್ಳರ ಸ್ವಗೃಹ ‘ಬೆಳ್ಳಿರಥ’ದಲ್ಲಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ರೋಟರಿ ಕ್ಲಬ್ ಕುಂದಾಪುರ ಅಧ್ಯಕ್ಷ ಉದಯ ಕುಮಾರ್ ಶೆಟ್ಟಿ, ನಿಟಕಪೂರ್ವಾಧ್ಯಕ್ಷ ಪ್ರಕಾಶ್ಚಂದ್ರ ಶೆಟ್ಟಿ ಚಿತ್ತೂರು, ಕಾರ್ಯದರ್ಶಿ ಸಾಲ್ಗದ್ದೆ ಶಶಿಧರ ಶೆಟ್ಟಿ, ನಿಕಟಪೂರ್ವ ಕಾರ್ಯದರ್ಶಿ ಸಂತೋಷ ಕೋಣಿ, ಸಾರ್ಜಂಟ್ ಅಟ್ ಆರ್ಮ್ ಸಂತೋಷ ಕುಮಾರ್ ಶೆಟ್ಟಿ ನೂಜಾಡಿ ಹಾಗೂ ಕುಂದಾಪ್ರ ಡಾಟ್ ಕಾಂ ಸಂಪಾಕದ ಸುನಿಲ್ ಹೆಚ್. ಜಿ. ಬೈಂದೂರು ಉಪಸ್ಥಿತರಿದ್ದರು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಯಕ್ಷಗಾನದಲ್ಲಿ ಕರಾವಳಿಯ ಸೊಗಡು ಅಡಗಿದೆ. ನಮ್ಮ ಸಂಸ್ಕೃತಿಯ ಬೇರುಗಳು ಗಟ್ಟಿಯಾಗಿ ಉಳಿಯಬೇಕಿದ್ದರೇ, ಇಂತಹ ಕಲೆಗಳನ್ನು ಪ್ರೋತ್ಸಾಹಿಸುವ ಕೆಲಸವಾಗಬೇಕಿದೆ. ಎಂದು ಜಿ.ಪಂ ಸದಸ್ಯ ಕೆ. ಬಾಬು ಶೆಟ್ಟಿ ಹೇಳಿದರು. ಇಲ್ಲಿನ ರೋಟರಿ ಭವನದಲ್ಲಿ ಇತ್ತಿಚಿಗೆ ಯಸ್ಕೋರ್ಡ್ ಟ್ರಸ್ಟ್ ರಿ. ಬೈಂದೂರು ಆಶ್ರಯದಲ್ಲಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ನೆರವಿನೊಂದಿಗೆ ಜರುಗಿದ ನಾಲ್ಕು ದಿನಗಳ ಜನ-ಸಂಸ್ಕೃತಿ ಸಂಭ್ರಮ ೨೦೧೬ರ ವರ್ಣಚಿತ್ರವೈಭವದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು. ಕಳೆದ ಒಂದೂವರೆ ದಶಕಗಳಿಂದ ವಿವಿಧ ಬಗೆಯ ಕಾರ್ಯಕ್ರಮಗಳನ್ನು ಆಯೋಜಿಸುತ್ತಾ ಬೈಂದೂರು ಭಾಗದಲ್ಲಿ ಒಂದು ಕಲಾ ಪ್ರೇಕ್ಷಕರನ್ನು ಹುಟ್ಟುಹಾಕಿರುವ ಯುಸ್ಕೊರ್ಡ್ ಟ್ರಸ್ಟ್ ಕಾರ್ಯ ಶ್ಲಾಘನೀಯವಾಗಿದ್ದು, ಸರಕಾರದ ಮಟ್ಟದಲ್ಲಿ ಅಗತ್ಯ ನೆರವು ಒದಗಿಸಿ ಪ್ರೋತ್ಸಾಹಿಸಲಾಗುವುದು ಎಂದು ಭರವಸೆಯಿತ್ತರು. ಯಡ್ತರೆ ಗ್ರಾ.ಪಂ ಅಧ್ಯಕ್ಷ ನಾಗರಾಜ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಸಿಂಡಿಕೇಟ್ ಬ್ಯಾಂಕ್ ನಿವೃತ್ತ ಶಾಖಾಧಿಕಾರಿ ಶ್ರೀಧರ ಭಟ್ ಉಪಸ್ಥಿತರಿದ್ದರು. ಯಡ್ಕೋರ್ಡ್ ಟ್ರಸ್ಟ್ ರಿ. ಕಾರ್ಯದರ್ಶಿ ಕೃಷ್ಣಮೂರ್ತಿ ಉಡುಪ ಸ್ವಾಗತಿಸಿದರು. ಅಧ್ಯಕ್ಷ ಸುಧಾಕರ ಪಿ.…

Read More