Author: ನ್ಯೂಸ್ ಬ್ಯೂರೋ

ಕುಂದಾಪ್ರ ಡಾಟ್ ಕಾಂ ಸುದ್ದಿ. ಕಾರ್ಕಳ: ಕನ್ನಡ ಸಾಹಿತ್ಯ ಪರಿಷತ್ ಅಜೆಕಾರು ಹೋಬಳಿ ಅಧ್ಯಕ್ಷರಾಗಿ ಪತ್ರಕರ್ತ, ಸಾಹಿತಿ, ಸಂಘಟಕ ಶೇಖರ ಅಜೆಕಾರು ಅವರು ಆಯ್ಕೆಯಾಗಿದ್ದಾರೆ. ಪತ್ರಿಕೋದ್ಯಮ, ಸಾಹಿತ್ಯ ಹಾಗೂ ಸಂಘಟನಾ ಕ್ಷೇತ್ರದಲ್ಲಿ ಅವಿರತವಾಗಿ ತೊಡಗಿಸಿಕೊಂಡು, ವಿಶಿಷ್ಟ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಗುರುತಿಸಿಕೊಂಡ ಅಜೆಕಾರು ಅವರು, ವ್ಯಕ್ತಿಗಳು ಹಾಗೂ ಊರಿನ ಪರಿಚಯ ಸೇರಿದಂತೆ ಸುಮಾರು ಹದಿನೈದಕ್ಕೂ ಹೆಚ್ಚು ಪುಸ್ತಕಗಳನ್ನು ಬರೆದಿದ್ದಾರೆ. ಕಳೆದ ಇಪ್ಪತ್ತೈದು ವರ್ಷಗಳಿಂದ ಪತ್ರಿಕೋದ್ಯಮ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವ ಅವರು ಕುಂದಪ್ರಭ ಪತ್ರಿಕೆಯಿಂದ ಆರಂಭಿಸಿ ಕನ್ನಡಮಲ್ಲ, ಜನವಾಹಿನಿ, ಕನ್ನಡಪ್ರಭ ಸೇರಿದಂತೆ ಹಲವು ಪತ್ರಿಕೆಗಳಲ್ಲಿ ಸುದ್ದಿ ಸಂಪಾದಕರಾಗಿ, ಹಿರಿಯ ವರದಿಗಾರರಾಗಿ ಸೇವೆ ಸಲ್ಲಿಸಿದ್ದಾರೆ. ಗ್ರಾಮೋತ್ಸವ, ಬೆಳದಿಂಗಳ ಸಾಹಿತ್ಯ ಸಮ್ಮೇಳನ ಸೇರಿದಂತೆ ವಿಶಿಷ್ಟ ಪರಿಕಲ್ಪನೆಯ ಕಾರ್ಯಕ್ರಮಗಳನ್ನು ಆಯೋಜಿಸಿ ಸಾಹಿತ್ಯ, ಸಂಘಟನಾ ಕ್ಷೇತ್ರದಲ್ಲಿ ತನ್ನದೇ ಆದ ಛಾಪು ಮೂಡಿಸಿದ್ದಾರೆ. ಅಜೆಕಾರು ಹೋಬಳಿ ಕಸಾಪ ಅಧ್ಯಕ್ಷರಾಗಿ ಆಯ್ಕೆಗೊಂಡ ಶೇಖರ ಅಜೆಕಾರು ಅವರಿಗೆ ಕುಂದಾಪ್ರ ಡಾಟ್ ಕಾಂ ಅಭಿನಂದನೆಗಳನ್ನು ಸಲ್ಲಿಸುತ್ತದೆ.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ದಿನದಿಂದ ದಿನಕ್ಕೆ ಅಗತ್ಯ ವಸ್ತುಗಳ ಬೆಲೆ ಏರುತ್ತಿದೆ. ಯುವಕರು ನಿರುದ್ಯೋಗಿಗಳಾಗುತ್ತಿದ್ದಾರೆ. ರೈತರ ಬೆಳೆಗಳಿಗೆ ಸರಿಯಾದ ಬೆಂಬಲ ಬೆಲೆ ಸಿಗದೆ ನಷ್ಟ ಅನುಭವಿಸುತ್ತಿರುವುದಲ್ಲದೇ ಜನಸಮಾನ್ಯರು ಕಂಗಾಲಾಗಿದ್ದಾರೆ. ಚುನಾವಣೆಯ ಪೂರ್ವದಲ್ಲಿ ಕೇಂದ್ರ ಸರಕಾರ ನೀಡಿದ ಆಶ್ವಾಸನೆಗಳನ್ನು ಈಡೇರಿಸದೆ ಅನ್ಯಾಯವೆಸಗುತ್ತಿದೆ ಎಂದು ಆರೋಪಿಸಿ ಸಿಪಿಐ(ಎಂ) ಕುಂದಾಪುರ ಹಾಗೂ ಬೈಂದೂರು ವಲಯ ಸಮಿತಿ ನೇತೃತ್ವದಲ್ಲಿ ಇಲ್ಲಿನ ಶಾಸ್ತ್ರೀ ವೃತ್ತದ ಬಳಿ ಪ್ರತಿಭಟನೆ ನಡೆಯಿತು. ಶಾಸ್ತ್ರೀ ವೃತ್ತದಿಂದ ಕುಂದಾಪುರ ಮಿನಿವಿಧಾನಸೌಧದ ವರೆಗೆ ಪ್ರತಿಭಟನೆಯಲ್ಲಿ ಸಾಗಿ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ತಹಶೀಲ್ದಾರರ ಮೂಲಕ ಪ್ರಧಾನಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು. ಸಿಪಿಐ(ಎಂ) ರಾಜ್ಯ ಕಾರ್ಯಕಾರಿ ಮಂಡಳಿ ಸದಸ್ಯ ಕೆ. ಶಂಕರ್, ಸಿಪಿಐ(ಎಂ) ಕುಂದಾಪುರ ವಲಯ ಕಾರ್ಯದರ್ಶಿ ಎಚ್. ನರಸಿಂಹ, ಬೈಂದೂರು ವಲಯ ಕಾರ್ಯದರ್ಶಿ ಸುರೇಶ್ ಕಲ್ಲಾಗರ್, ವೆಂಕಟೇಶ ಕೋಣಿ, ಮಹಾಬಲ ವಡೇರಹೊಬಳಿ, ರಾಜೀವ ಪಡುಕೋಣೆ, ಸುಬ್ರಹ್ಮಣ್ಯ ಆಚಾರ್, ಸಂತೋಷ್ ಹೆಮ್ಮಾಡಿ, ನಾಗರತ್ನ ನಾಡ ಮೊದಲಾದವರು ಭಾಗವಹಿಸಿದ್ದರು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಮರವಂತೆ ಮೀನುಗಾರರ ಸಹಕಾರಿ ಸಂಘದ ಮುಂದಿನ ಅವಧಿಯ ಅಧ್ಯಕ್ಷರಾಗಿ ಪ್ರವೀಣ ಖಾರ್ವಿ ಆಯ್ಕೆಯಾದರು. ರತ್ನಾಕರ ಖಾರ್ವಿ ಉಪಾಧ್ಯಕ್ಷರಾಗಿದ್ದು, ಮಾಧವ ಖಾರ್ವಿ, ನಾಗರಾಜ ಪಟ್ಗಾರ್, ಲೋಕೇಶ ಖಾರ್ವಿ, ನಾಗರಾಜ ಖಾರ್ವಿ, ಜನಾರ್ದನ ಕೆ. ಎಂ, ಸುರೇಶ ಖಾರ್ವಿ, ರಾಜೇಶ್ವರಿ ಖಾರ್ವಿ, ಲೀಲಾವತಿ ಪಿ. ಖಾರ್ವಿ ನಿರ್ದೇಶಕರಾಗಿರುವರು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ತಾಲೂಕಿನ ತ್ರಾಸಿ ಮೋವಾಡಿ ಕ್ರಾಸ್ ಬಳಿ ಶಾಲಾ ಮಕ್ಕಳ ಓಮ್ನಿ ಹಾಗೂ ಬಸ್ ನಡುವೆ ನಡೆದ ಭೀಕರ ಅಫಘಾತದಲ್ಲಿ ಮೃತಪಟ್ಟ ಡಾನ್ ಬಾಸ್ಕೊ ಶಾಲೆಯ ಎಂಟು ಮಕ್ಕಳ ಪೈಕಿ ಆರು ಮಕ್ಕಳ ಪೋಷಕರಿಗೆ ಶಿಕ್ಷಕ ಹಾಗೂ ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ನಿಧಿಯಿಂದ ಮಂಜೂರಾದ ಪರಿಹಾರದ ಚೆಕ್ ವಿತರಿಸಲಾಯಿತು. ಬೈಂದೂರು ಶಾಸಕ ಗೋಪಾಲ ಪೂಜಾರಿ ಘಟನೆಯ ಬಗೆಗೆ ವಿಷಾದ ವ್ಯಕ್ತಪಡಿಸಿ ಮೃತರಾದ ಮಕ್ಕಳ ಪೈಕಿ ಯುಕೆಜಿಯಲ್ಲಿ ಓದುತ್ತಿದ್ದ ಈರ್ವ ಮಕ್ಕಳ ಪೋಷಕರಿಗೂ ಪರಿಹಾರ ದೊರೆಯುವಂತೆ ಸರಕಾರದ ಗಮನಕ್ಕೆ ತರಲಾಗುವುದು ಎಂದರು. ಈ ಸಂದರ್ಭದಲ್ಲಿ ಬೈಂದೂರು ಕ್ಷೇತ್ರ ಶಿಕ್ಷಣಾಧಿಕಾರಿ ನಾಗೇಶ ನಾಯ್ಕ್, ಬೈಂದೂರು ವಲಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ವಿಶ್ವನಾಥ ಪೂಜಾರಿ, ಕಟ್‌ಬೆಲ್ತೂರು ಗ್ರಾಪಂ ಅಧ್ಯಕ್ಷ ಶರತ್‌ಕುಮಾರ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.

Read More

ನೆರವು ನೀಡುವ ಕೈಗಳು ಹೆಚ್ಚಾಗಲಿ. ನೆರವು ಪಡೆದವರು ಸ್ವಾವಲಂಭಿಗಳಾಗಲಿ ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ರಾಮಕ್ಷತ್ರಿಯ ಸಮುದಾಯದ ಏಳಿಗೆಗೋಸ್ಕರ ಸಮಾನ ಮನಸ್ಕರು ಒಟ್ಟಾಗಿ ಸ್ವಾರ್ಥರಹಿತವಾಗಿ ಶ್ರಮಿಸುತ್ತಿದ್ದು, ರಾಮಕ್ಷತ್ರಿಯ ಸಮುದಾಯದವರು ಇದರ ನೆರವು ಪಡೆದುಕೊಳ್ಳುವುದಲ್ಲದೇ ಸ್ವಾವಲಂಭಿಗಳಾಗುವತ್ತ ಆಲೋಚಿಸಬೇಕಾಗಿದೆ ಎಂದು ಮಾಜಿ ಶಾಸಕ, ವಿಶ್ವ ರಾಮಕ್ಷತ್ರಿಯ ಸಂಘದ ಅಧ್ಯಕ್ಷ ಕೆ. ಲಕ್ಷ್ಮೀನಾರಾಯಣ ಹೇಳಿದರು.  ಅವರು ಇಲ್ಲಿನ ಶ್ರೀ ಸೀತಾರಾಮಚಂದ್ರ ಕಲ್ಯಾಣ ಮಂಟಪದಲ್ಲಿ ಜರುಗಿದ ಶ್ರೀ ರಾಮ ವಿವಿಧೋದ್ದೇಶ ಟ್ರಸ್ಟ್ ರಿ. ಬೈಂದೂರು ಇದರ ನಾಲ್ಕನೇ ವರ್ಷದ ಟ್ರಸ್ಟ್ ದಿನಾಚರಣೆಗೆ ಚಾಲನೆ ನೀಡಿ ಮಾತನಾಡಿದರು. ಮುಂಬೈನ ಉದ್ಯಮಿ ಗಣಪತಿ ಬಿ. ಗಂಗೊಳ್ಳಿ ಮಾತನಾಡಿ ರಾಮಕ್ಷತ್ರಿಯ ಸಮುದಾಯದಲ್ಲಿ ನೆರವು ನೀಡಲು ಶಕ್ತರಾಗಿರುವ ನೂರಾರು ಮಂದಿಯಿದ್ದು ಅವರೇ ಸ್ವಪ್ರೇರಣೆಯಿಂದ ಸಮುದಾಯದ ಅಶಕ್ತರಿಗೆ ನೆರವಾಗಲು ಮುಂದೆ ಬರುವ ಔದಾರ್ಯ ತೋರಬೇಕಿದೆ. ಇದು ನಮ್ಮೊಳಗಿನ ಮನೋಶ್ರಿಮಂತಿಕೆನ್ನೂ ಹೆಚ್ಚುತ್ತದೆ ಎಂದರು. ಬೆಂಗಳೂರಿನ ಉದ್ಯಮಿ ಜಿ. ಶಶಿಕಾಂತ ಮಾತನಾಡಿ ಮಾನವ ದುಡಿದು ಗಳಿಸಿದ್ದನ್ನು ಒಳ್ಳೆಯ ಕಾರ್ಯಕ್ಕೆ ವಿನಿಯೋಗಿಸಿದರೇ ದುಡಿಮೆಗೂ ಒಂದು ಅರ್ಥ ಬರುತ್ತದೆ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ತಾಲೂಕಿನ ವಂಡ್ಸೆ ಸಮೀಪದ ಚಕ್ರಾ ನದಿಯಲ್ಲಿ ಮೀನುಗಾರಿಕೆ ನಡೆಸುತ್ತಿದ್ದ ವೇಳೆ ಮೀನುಗಾರನೊಬ್ಬ ನದಿಯಲ್ಲಿ ಮುಳುಗಿ ಮೃತಪಟ್ಟ ಘಟನೆ ವರದಿಯಾಗಿದೆ. ತಾಲೂಕಿನ ಕರ್ಕುಂಜೆ ನಿವಾಸಿ ಸಂಜೀವ ಮೊಗವೀರ (53) ಮೃತಪಟ್ಟವರು. ಶನಿವಾರ ಮಧ್ಯಾಹ್ನ ಮೀನುಗಾರಿಕೆಗೆ ಮನೆಯಿಂದ ತೆರಳಿದ್ದರು ಸಂಜೆಯಾದರೂ ಮನೆಗೆ ಬಾರದ ಹಿನ್ನೆಲೆಯಲ್ಲಿ ಹುಡುಕಾಟ ನಡೆಸಲಾಗಿತ್ತು. ಹೊಳೆಯಲ್ಲಿ ದೋಣಿ ಸಿಕ್ಕರೂ, ಸಂಜೀವ ಮೊಗವೀರ ಪತ್ತೆಯಾಗಿರಲಿಲ್ಲ. ಭಾನುವಾರ ಸಂಜೆ ಬಗ್ವಾಡಿ ಸೇತುವೆ ಬಳಿ ಸಂಜೀವ ಮೊಗವೀರ ಮೃತ ದೇಹ ಪತ್ತೆಯಾಗಿದೆ.ಮೃತರು ಗೋವಾ ರಾಜ್ಯದಲ್ಲಿ ಮೀನುಗಾರಿಕೆ ವೃತ್ತಿ ಮಾಡಿಕೊಂಡಿದ್ದು, ಬೋಟ್‌ಗೆ ರಜೆ ಇದ್ದ ಕಾರಣ ಊರಿಗೆ ಬಂದು ದೋಣಿ ಖರೀದಿಸಿ ಚಕ್ರಾ ನದಿಯಲ್ಲಿ ಮೀನುಗಾರಿಕೆ ನಡೆಸುತ್ತಿದ್ದರು. ಮೃತರು ಪತ್ನಿ, ಇಬ್ಬರು ಪುತ್ರಿ ಅಗಲಿದ್ದು, ಮೀನುಗಾರ ಕುಟುಂಬದ ಆಧಾರ ಸ್ಥಂಭ ತಪ್ಪಿದೆ. ಕುಂದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಗಂಗೊಳ್ಳಿ: ಇಲ್ಲಿನ ಮುಖ್ಯರಸ್ತೆಯಲ್ಲಿ ಬಿದ್ದಿದ್ದ ಹಣವನ್ನು ವಾರೀಸುದಾರರಿಗೆ ಮರಳಿಸುವ ಮೂಲಕ ಮೀನುಗಾರ ಮಹಿಳೆ ಹಾಗೂ ದಿನಸಿ ಅಂಗಡಿ ಮಾಲೀಕರು ಪ್ರಾಮಾಣಿಕತೆ ಮೆರೆದಿದ್ದಾರೆ. ಮೀನುಗಾರ ಮಹಿಳೆ ಗಂಗೊಳ್ಳಿಯ ಮಹಾಂಕಾಳಿ ಮಠ ಸಮೀಪದ ನಿವಾಸಿ ಸುಮಿತ್ರಾ ಮತ್ತು ಗಂಗೊಳ್ಳಿಯ ಉದ್ಯಮಿ ಜಿ.ವಿಠಲ ಶೆಣೈ ಅವರಿಗೆ ಗಂಗೊಳ್ಳಿಯ ಮುಖ್ಯರಸ್ತೆಯಲ್ಲಿ ದೊರೆತ 7 ಸಾವಿರ ರೂ.ಗಳನ್ನು ವಾರೀಸುದಾರರಾದ ಬಿಜೂರು ನಿವಾಸಿ ತಿಮ್ಮಪ್ಪ ಎಂಬುವರಿಗೆ ಶುಕ್ರವಾರ ಹಸ್ತಾಂತರಿಸಿದ್ದಾರೆ. ಗಂಗೊಳ್ಳಿಯ ಶ್ರೀ ವೆಂಕಟೇಶ ಕೃಪಾ ಟ್ರೇಡರ‍್ಸ್ ಸಮೀಪ ಮುಖ್ಯರಸ್ತೆಯಲ್ಲಿ ಜುಲೈ 16 ರಂದು ಮಧ್ಯಾಹ್ನ ವ್ಯಕ್ತಿಯೋರ್ವರು ದ್ವಿಚಕ್ರ ವಾಹನದಲ್ಲಿ ಹೋಗುತ್ತಿದ್ದ ಸಂದರ್ಭ ಸುಮಾರು 7 ಸಾವಿರ ರೂ. ಹಣ ರಸ್ತೆಯ ಮೇಲೆ ಬಿದ್ದಿದ್ದು, ಇದೇ ವೇಳೆ ಅಂಗಡಿಯಲ್ಲಿ ದಿನಸಿ ಸಾಮಾನು ಖರೀದಿಗೆ ಬಂದಿದ್ದ ಮೀನುಗಾರ ಮಹಿಳೆ ಗಂಗೊಳ್ಳಿಯ ಮಹಾಂಕಾಳಿ ಮಠ ಸಮೀಪದ ನಿವಾಸಿ ಸುಮಿತ್ರಾ ಎಂಬುವರು ರಸ್ತೆಯ ಮೇಲೆ ಬಿದ್ದಿದ್ದ ಹಣವನ್ನು ಒಟ್ಟು ಮಾಡಿ ಸ್ಥಳೀಯ ಅಂಗಡಿ ಮಾಲೀಕರಾದ ಜಿ.ವಿಠಲ ಶೆಣೈ ಅವರಿಗೆ ನೀಡಿದ್ದರು. ಇದೇ ಸಂದರ್ಭ ರಸ್ತೆಯ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕೊಲ್ಲೂರು: ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನಕ್ಕೆ ಚಿತ್ರ ನಟ, ನಿರ್ದೇಶಕ, ಪ್ರಕಾಶ್ ರೈ ದಂಪತಿಗಳು ಭೇಟಿ ನೀಡಿ ದೇವಿಯ ದರ್ಶನ ಪಡೆದರು. ನಂತರ ಚಂಡಿಕಾಹೋಮ ಸೇವೆ ನೆರವೇರಿಸಿ ದೇವರಿಗೆ ವಿಶೇಷ ಪೂಜೆ ಸಲ್ಲಿಸಿದರು. ಸಹಾಯಕ ಕಾರ್ಯನಿರ್ವಹಣಾಧಿಕಾರಿ ಹೆಚ್. ಕೃಷ್ಣಮೂರ್ತಿ ದೇವಳದ ವತಿಯಿಂದ ರೈ ದಂಪತಿಗಳನ್ನು ಗೌರವಿಸಿದರು. ಈ ಸಂದರ್ಭ ಉದ್ಯಮಿ ವಾಸುದೇವ ಶೆಟ್ಟಿ ದಂಪತಿಗಳು ರೈ ಕುಟುಂಬದ ಜತೆಗಿದ್ದರು .

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಭಾರತ ದೇಶದಲ್ಲಿ ಗುರುಪರಂಪರೆಗೆ ವಿಶಿಷ್ಟ ಸ್ಥಾನವಿದೆ. ಪ್ರತಿಯೊಬ್ಬರ ಬದುಕಿನಲ್ಲೂ ಸನ್ಮಾರ್ಗವನ್ನು ತೋರಿಸುವ, ಕತ್ತಲೆಯಿಂದ ಬೆಳಕಿನೆಡೆಗೆ ನಡೆಸುವ ಮಹಾನ್ ಚೇತನ ಗುರು ಮಾತ್ರ ಎಂದು ಮಂಗಳೂರು ವಿಭಾಗ ಆರ್‌ಎಸ್‌ಎಸ್ ಸಂಪರ್ಕ ಪ್ರಮುಖ್ ರವೀಂದ್ರ ಪುತ್ತೂರು ಹೇಳಿದರು. ಯಡ್ತರೆ ಜೆಎನ್‌ಆರ್ ಕಲಾಮಂದಿರದಲ್ಲಿ ನಡೆದ ’ಗುರುಪೂಜೆ’ ಕಾರ್ಯಕ್ರಮದ ಬೌದ್ಧಿಕ್‌ನಲ್ಲಿ ಮಾತನಾಡಿದರು. ರಾಷ್ಟ್ರೀಯ ಸ್ವಯಂ ಸೇವಕ ಸಂಘಕ್ಕೆ ಯಾವುದೇ ವ್ಯಕ್ತಿ ಗುರುವಾಗಲಾರ. ಆ ದಿಸೆಯಲ್ಲಿ ಆ ಸ್ಥಾನದಲ್ಲಿ ಸಂಘದ ಸ್ಥಾಪಕರಾದ ಡಾ. ಹೆಡಗೆವಾರು ಅವರು ಜ್ಞಾನ, ಪರಾಕ್ರಮ, ತ್ಯಾಗ ಹಾಗೂ ಸಮರ್ಪಣಾ ಸಂಕೇತವಾಗಿರುವ ಭಗವಾಧ್ವಜವನ್ನು ಗುರುವಾಗಿ ಪೂಜಿಸಲು ಪ್ರಾರಂಭಿಸಿದರು. ಒಂದು ಸಂಘಟನೆಯ ಪ್ರಮುಖ ವ್ಯಕ್ತಿ ಯಾರಾದರೂ ಆ ವ್ಯಕ್ತಿಗೆ ಸಾವಿದೆ. ಆತನ ಮರಣಾ ನಂತರ ಅದನ್ನು ಮುನ್ನೆಡೆಸಲು ಯೋಗ್ಯ ವ್ಯಕ್ತಿಗಳು ಇಲ್ಲದಿದ್ದರೆ ಅಂತಹ ಸಂಘಗಳು ಅವನತಿ ಹೊಂದುತ್ತದೆ. ಅದನ್ನು ಯೋಚಿಸಿ ಸಂಘವು ಅಜರಾಮರವಾಗಿರಬೇಕೆಂಬ ಉದ್ದೇಶದಿಂದ ಸ್ಥಾಪಕರು ಈ ನಿರ್ಧಾಕ್ಕೆ ಬಂದರು. ಹಾಗಾಗಿ ಕಳೆದ ೯೦ ವರ್ಷಗಳಿಂದ ಸಂಘದ ಸ್ವಯಂ ಸೇವಕರು…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ತನ್ನ ಪೋಷಕರ ಪ್ರೀತಿ ಸಿಗಲಿಲ್ಲ ಎಂಬ ಕಾರಣಕ್ಕೆ ನೊಂದ ಯುವತಿ ಆತ್ಮಹತ್ಯೆಗೆ ಶರಣಾದ ದಾರುಣ ಘಟನೆ ಕುಂದಾಪುರ ತಾಲೂಕಿನ ಬಿದ್ಕಲ್‌ಕಟ್ಟೆ ಎಂಬಲ್ಲಿ ನಡೆದಿದೆ. ಬೆಳ್ವೆ ಗಣೇಶ್ ಶೆಟ್ಟಿ ಅವರ ಮಗಳು ಪ್ರಗತಿ (16) ಆತ್ಮಹತ್ಯೆಗೆ ಶರಣಾದ ಯುವತಿ. ಬಿದ್ಕಲಕಟ್ಟೆ ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ ಪ್ರಥಮ ಪಿಯು ಕಾಮರ್ಸ್ ವಿಭಾಗದಲ್ಲಿ ಕಲಿಯುತ್ತಿದ್ದ ಪ್ರಗತಿ ಪ್ರತಿಭಾನ್ವಿತ ವಿದ್ಯಾರ್ಥಿನಿಯಾಗಿದ್ದಳು. ಶನಿವಾರ ಸಂಜೆ ಕಾಲೇಜಿನಿಂದ ಬಂದವಳು ಸಿಟ್ಟಿನಿಂದ ಸೀದಾ ತನ್ನ ರೂಮಿಗೆ ಹೋಗಿ ಬಾಗಿಲು ಹಾಕಿಕೊಂಡಿದ್ದರು. ಈ ಹಿಂದೆಯೂ ಹಲವು ಬಾರಿ ಹೀಗೆಯೇ ಮಾಡಿದ್ದರಿಂದ ಅದನ್ನು ಅಷ್ಟಾಗಿ ಗಂಭೀರವಾಗಿ ಪರಿಗಣಿಸದ ಪೋಷಕರು ಮರುದಿನ ಬೆಳೆಗ್ಗೆಯಾದರೂ ತನ್ನ ರೂಮಿನಿಂದ ಹೊರಬರದಿದ್ದಾಗ ಆತಂಕಗೊಂಡು ಬಾಗಿಲು ತೆರೆದು ನೋಡಿದಾಗ ಕಿಟಕಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿವುದು ಗಮನಕ್ಕೆ ಬಂದಿತ್ತು. ಡೆತ್‌ನೋಟ್‌ನಲ್ಲಿ ತನ್ನ ಪೋಷಕರು ತನ್ನನ್ನು ಪ್ರೀತಿಯಿಂದ ನೋಡಿಕೊಳ್ಳುತ್ತಿಲ್ಲ. ಹಾಗಾಗಿ ನೊಂದಿದ್ದೇನೆ ಎಂದು ಬರೆದು ಆತ್ಮಹತ್ಯೆಗೆ ಶರಣಾಗಿದ್ದಾಳೆ. ಘಟನಾ ಸ್ಥಳಕ್ಕೆ ಪೊಲೀಸ್ ವೃತ್ತ ನಿರೀಕ್ಷಕ ಶ್ರೀಕಾಂತ,…

Read More