ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಯುವ ಜಾಗೃತಿ ವೇದಿಕೆ ಮತ್ತು ರಕ್ಷಾ ರೂರಲ್ ಡೆವೆಲಪ್‌ಮೆಂಟ್ ಟ್ರೈನಿಂಗ್ ಸೊಸೈಟಿ ಕುಂದಾಪುರದ ವತಿಯಿಂದ ಉಡುಪಿ ಕಾಲೇಜೊಂದರಲ್ಲಿ ಪ್ರಥಮ ಬಿಕಾಂ ಓದುತ್ತಿರುವ ಬೈಂದೂರಿನ ಶ್ಯಾಮಿನಕೊಡ್ಲುವಿನ ವಿದ್ಯಾರ್ಥಿನಿ ಜ್ಯೋತಿ ದೇವಾಡಿಗ ಅವರ ಕಾಲೇಜು ವಿದ್ಯಾಭ್ಯಾಸಕ್ಕೆ ಆರ್ಥಿಕ ನೆರವು ನೀಡಲಾಯಿತು. ಬಡ ಕುಟುಂಬದ ಪ್ರತಿಭಾವಂತ ವಿದ್ಯಾರ್ಥಿನಿಯ ವಸತಿ ನಿಲಯದ ವೆಚ್ಚವನ್ನು ಭರಿಸಲು ನಿರ್ಧರಿಸಿ, ಒಂದು ವರ್ಷಕ್ಕೆ ತಗಲುವ ವೆಚ್ಚವನ್ನು ಅಂದಾಜಿಸಿ ಚೆಕ್ ಹಸ್ತಾಂತರಿಸಲಾಯಿತು. ಈ ಸಂದರ್ಭದಲ್ಲಿ ಯುವ ಜಾಗೃತಿ ವೇದಿಕೆ ಕುಂದಾಪುರ ಅಧ್ಯಕ್ಷ ರಮೇಶ್, ಉದ್ಯಮಿ ಕೆ ಆರ್ ನಾಯಕ್, ಬೈಂದೂರು ದೇವಾಡಿಗರ ಒಕ್ಕೂಟದ ಸಲಹಾ ಸಮಿತಿಯ ಸದಸ್ಯ ಎಸ್.ಡಿ ಹೇನಬೇರು, ಜೊತೆ ಕಾರ್ಯದರ್ಶಿ ಚಂದ್ರ ದೇವಾಡಿಗ, ಸಂಘಟನಾ ಕಾರ್ಯದರ್ಶಿ ರಘುರಾಮ್ ಬೈಂದೂರು ಹಾಗೂ ಮಹಾಲಿಂಗ ದೇವಾಡಿಗ ಉಪಸ್ಥಿತರಿದ್ದರು. /ಕುಂದಾಪ್ರ ಡಾಟ್ ಕಾಂ ಸುದ್ದಿ/
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಜೇಸಿಐ ಕಾಪು ಸಾರಥ್ಯದಲ್ಲಿ ನಡೆದ ಜೇಸೀ ವಲಯ 15ರ ಮಧ್ಯಂತರ ಸಮ್ಮೇಳನ ರಜತ ದೀವಿಗೆ-2016ರಲ್ಲಿ ಕುಂದಾಪುರ ಸಿಟಿ ಜೆಸಿಐ ಅತ್ಯುತ್ತಮ ಘಟಕ ಅಧ್ಯಕ್ಷ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿ, ಗೌರವಗಳನ್ನು ಮುಡಿಗೇರಿಸಿಕೊಂಡಿದೆ. ಕಾಪು ಕಳತ್ತೂರಿನ ಕುಶಲ ಶೇಖರ ಶೆಟ್ಟಿ ಸಭಾಂಗಣದಲ್ಲಿ ನಡೆದ ಸಮಾರಂಭದಲ್ಲಿ ಅತ್ಯುತ್ತಮ ಘಟಕಾಧ್ಯಕ್ಷ ಪ್ರಶಸ್ತಿ, ಅತ್ಯುತ್ತಮ ವಿಶೇಷ ಕಾರ್ಯಕ್ರಮ ಸಂಯೋಜನೆ ಪ್ರಶಸ್ತಿ ಮತ್ತು ವಿವಿಧ ವಿಭಾಗಗಳ ಹಲವು ಗೌರವಗಳಿಗೆ ಪಾತ್ರವಾಗಿದೆ. ಜೆಸಿಐ ವಲಯಾಧ್ಯಕ್ಷ ಸಂದೀಪ್ ಕುಮಾರ್ ಪ್ರಶಸ್ತಿ ಪ್ರದಾನ ಮಾಡಿದರು. ವಲಯ ಉಪಾಧ್ಯಕ್ಷ ನಿತೀನ್ ಅವಭೃತ್, ಮಾಜಿ ವಲಯಾಧ್ಯಕ್ಷ ಕೃಷ್ಣ ಮೋಹನ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ ಸಿಟಿ ಜೆಸಿಐ ಸ್ಥಾಪಕಾಧ್ಯಕ್ಷ ಹುಸೇನ್ ಹೈಕಾಡಿ ಹಾಗೂ ರಾಘು ಕೆ.ಸಿ., ಹರ್ಷ ಶೇಟ್, ಅನಂತ ನಾವಡ, ಕಾರ್ತಿಕ್, ಅನುಷಾ ಗಂಗೊಳ್ಳಿ, ಮೊದಲಾದವರು ಕುಂದಾಪುರ ಸಿಟಿ ಜೆಸಿಐ ಪರವಾಗಿ ಪ್ರಶಸ್ತಿ ಸ್ವೀಕರಿಸಿದರು /ಕುಂದಾಪ್ರ ಡಾಟ್ ಕಾಂ ಸುದ್ದಿ/
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಗೋಳಿಹೊಳೆ ಗ್ರಾಪಂ ವ್ಯಾಪ್ತಿಯ ಚಾರ‍್ಸಾಲಿನಿಂದ ಕೋಣವೊಂದರ ಕಾಲು ಕಟ್ಟಿ ಅಮಾನುಷವಾಗಿ ಇಕೊ ಕಾರಿನಲ್ಲಿ ಕಸಾಯಿಖಾನೆಗೆ ಸಾಗಿಸುತ್ತಿರುವ ಸ್ಥಳೀಯರಿಗೆ ಸಿಕ್ಕಿಬಿದ್ದಿದ್ದಾರೆ. ಸ್ಥಳೀಯರು ಪೋಲಿಸರಿಗೆ ಮಾಹಿತಿ ನೀಡಿದ ಪರಿಣಾಮ ಬೈಂದೂರು ಪೋಲಿಸರು ಕೋಣ ಸಹಿತ ವಾಹನವನ್ನು ವಶಕ್ಕೆ ಪಡೆದಿದ್ದಾರೆ. ವಾಹನದಲ್ಲಿದ್ದ ಶೋಯಬ್ ಹಾಗೂ ಫರಾನ್ ಎಂಬಿರನ್ನು ವಶಕ್ಕೆ ಪಡೆದ ಪೋಲಿಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಕುಂದಾಪ್ರ ಡಾಟ್ ಕಾಂ ಸುದ್ದಿ ಕೋಟ: ಕೋಟದ ಮುಖ್ಯ ಪೇಟೆಯೊಂದರ ಜ್ಯುವೆಲರ್ಗೆ ನುಗ್ಗಿ ಮಾಲೀಕನಿಗೆ ಮಾರಣಾಂತಿಕ ಹಲ್ಲೆ ನಡೆಸಿ ಚಿನ್ನಾಭರಣಗಳನ್ನು ದರೋಡೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿ ಓರ್ವ ಆರೋಪಿಯನ್ನು ಬುಧವಾರ ಕೋಟ ಪೊಲೀಸರು ಗೋವಾದಲ್ಲಿ ಬಂಧಿಸಿ ನ್ಯಾಯಾಲಯಕ್ಕೆ ಕರೆತಂದಿದ್ದಾರೆ. ಗೋವಾ ಮೂಲದ ಚಂದ್ರಕಾಂತ ಬಂಧಿತ ಆರೋಪಿ. ಪ್ರಕರಣದಲ್ಲಿ ಮೂರು ಮಂದಿ ಭಾಗಿಯಾಗಿದ್ದು ಇನ್ನೋರ್ವ ಆರೋಪಿ ಪ್ರಥಮೇಶ್ ಕುರಿತು ಮಾಹಿತಿ ದೊರೆತಿದೆ ಎನ್ನಲಾಗಿದೆ ಹಾಗೂ ಮತ್ತೋರ್ವ ತಲೆ ಮರೆಸಿಕೊಂಡಿದ್ದಾನೆ. ಪ್ರಕರಣದ ವಿವರ: ಕೋಟದ ದುರ್ಗಾ ಜ್ಯುವೆಲರ್ಗೆ ಮೇ21ರಂದು ಗ್ರಾಹಕರ ಸೋಗಿನಲ್ಲಿ ಬಂದ ಮೂರು ಮಂದಿ ಯುವಕರು ಅಂಗಡಿಯ ಬಾಗಿಲನ್ನು ಮುಚ್ಚಿ ಮಾಲೀಕ ರವಿಯವರಿಗೆ ಮಾರಕಾಸ್ತ್ರಗಳಿಂದ ಮಾರಣಾಂತಿಕವಾಗಿ ಹಲ್ಲೆ ನಡೆಸಿ ಚಿನ್ನಾಭರಣಗಳನ್ನು ದೋಚಲಾಗಿತ್ತು. ಹಲ್ಲೆ ನಡೆಯುತ್ತಿದ್ದಾಗ ರವಿಯವರು ಸಹಾಯಕ್ಕಾಗಿ ಕೂಗಿಕೊಂಡಿದ್ದು ಪಕ್ಕದ ಅಂಗಡಿಯವರು ಬಾಗಿಲು ತೆರದು ರಕ್ಷಣೆಗೆ ಮುಂದಾಗಿದ್ದರು. ಈ ಸಂದರ್ಭ ಇಬ್ಬರು ಆರೋಪಿಗಳು ಬೈಕ್‌ನಲ್ಲಿ ಪರಾರಿಯಾಗಿದ್ದು, ಮತ್ತೋರ್ವ ಬೈಕ್ ಬಿಟ್ಟು ಪಕ್ಕದ ಬೀದಿಯಲ್ಲಿ ಓಡಿ ಹೋಗಿದ್ದ. ಅನಂತರ ಗಂಭೀರವಾಗಿ ಗಾಯಗೊಂಡ ಜ್ಯುವೆಲರ್ನ ಮಾಲೀಕನನ್ನು…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ತ್ರಾಸಿಯ ಮೊವಾಡಿ ಕ್ರಾಸ್ ಬಳಿ ನಡೆದ ಸ್ಕೂಲ್ ವ್ಯಾನ್ ಹಾಗೂ ಬಸ್ ನಡುವಿನ ಅಫಘಾತದಲ್ಲಿ ಮಡಿದ ಡಾನ್ ಬಾಸ್ಕೊ ಶಾಲೆಯ ಎಂಟು ಮಕ್ಕಳ ಪೈಕಿ ಐವರು ಮಕ್ಕಳ ಅಂತ್ಯಕ್ರಿಯೆ ಧಾರ್ಮಿಕ ವಿಧಿಗಳು ಬೆಳಿಗ್ಗೆ ಗಂಗೊಳ್ಳಿಯ ಚರ್ಚಿನಲ್ಲಿ ನಡೆದರೇ, ಮೂವರು ಮಕ್ಕಳ ಅಂತ್ಯಕ್ರಿಯೆ ಸಂಜೆ ತಲ್ಲೂರು ಚರ್ಚಿನಲ್ಲಿ ನಡೆಯಿತು. ಗಂಗೊಳ್ಳಿ ಚರ್ಚಿನ ಆವರಣದಲ್ಲಿ ನೆರೆದಿದ್ದ ಎರಡು ಸಾವಿರಕ್ಕೂ ಅಧಿಕ ಜನರು ಮೃತ ಮಕ್ಕಳ ಅಂತಿಮ ದರ್ಶನ ಪಡೆದರು. ಹೆಮ್ಮಾಡಿ, ತ್ರಾಸಿ, ಗಂಗೊಳ್ಳಿ, ತಲ್ಲೂರು ಮೊದಲಾದೆಡೆ ಜನರು ಶೋಕ ಸಾಗರದಲ್ಲಿ ಮುಳುಗಿರುವುದು ಕಂಡುಬಂತು. ದೇವರು, ಧರ್ಮದ ಪರಿವೆ ಇಲ್ಲದೇ ಮೃತ ಮಕ್ಕಳನ್ನು ಕಂಡ ಪ್ರತಿಯೊಬ್ಬರ ಕಂಗಳೂ ಕಂಬನಿ ಮಿಡಿಯುತ್ತಿದ್ದವು. ಉಡುಪಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ಜೆರಾಲ್ಡ್ ಐಸಾಕ್ ಲೋಬೋ ಧಾರ್ಮಿಕ ಪ್ರಕ್ರಿಯೆ ನೆರವೇರಿಸಿದರು. ಕುಂದಾಪುರ ಚರ್ಚಿನ ಧರ್ಮಗುರು ಅನಿಲ್ ಡಿಸೋಜಾ, ಗಂಗೊಳ್ಳಿ ಚರ್ಚಿನ ಧರ್ಮಗುರು ಅಲ್ಬರ್ಟ್ ಕ್ರಾಸ್ಟಾ ಸಂತಾಪ ಸೂಚಿಸಿದರು. ಉಡುಪಿ ಧರ್ಮಪ್ರಾಂತ್ಯದ ಎಲ್ಲಾ ಚರ್ಚಿನ ಧರ್ಮಗುರುಗಳು ಈ ಸಂದರ್ಭದಲ್ಲಿ ಹಾಜರಿದ್ದರು.…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಖಾಸಗಿ ಬಸ್ ಮತ್ತು ಶಾಲಾ ಮಕ್ಕಳ ಸಾಗಿಸುತ್ತಿದ್ದ ಓಮ್ನಿ ನಡುವೆ ತ್ರಾಸಿಯ ಮೋವಾಡಿ ಕ್ರಾಸ್ ಬಳಿ ನಡೆದ ಭೀಕರ ಅಪಘಾತದಲ್ಲಿ ಗಾಯಗೊಂಡು ಕುಂದಾಪುರ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮೂವರು ಮಕ್ಕಳು ಬುಧವಾರ ಆಸ್ಪತ್ರೆಯಿಂದ ಮನೆಗೆ ಮರಳಿದ್ದಾರೆ. ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ಓರ್ವರು ಇನ್ನೂ ಆಸ್ಪತ್ರೆಯಲ್ಲಿದ್ದು, ಗಾಯಗೊಂಡಿದ್ದ ಇನ್ನೋರ್ವ ಯುವತಿ ಸುಪ್ರಿತಾ ಸಂಜೆ ಆಸ್ಪತ್ರೆಯಿಂದ ಮನೆಗೆ ಮರಳಿದ್ದಾರೆ. ಓಮಿನಿ ಚಾಲಕನ ಪತ್ನಿ ಫಿಲೋಮಿನಾ ಆಸ್ಪತ್ರೆಯಲ್ಲಿ ಚೇತರಿಸಿಕೊಳ್ಳುತ್ತಿದ್ದಾರೆ. ಡಾನ್‌ಬಾಸ್ಕೋ ಶಾಲೆ ಎಲ್‌ಕೆಜಿ ವಿದ್ಯಾರ್ಥಿ ರೆನ್ವಿಲ್, ಇಬ್ಬರು ೧೦ನೇ ತರಗತಿ ವಿದ್ಯಾರ್ಥಿಗಳಾದ ಮರಿಷಾ ಮತ್ತು ವೀರಾ ಮನೆಗೆ ಮರಳಿದವರು.
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಮಂಳವಾರ ಭೀಕರ ಅಪಘಾತದ ನಂತರ ಎಚ್ಚೆತ್ತ ಪೊಲೀಸರು ಬುಧವಾರ ಶಾಲಾ ವಾಹನಗಳ ತಪಾಸಣೆ ನಡೆಸಿದರು. ಹೆದ್ದಾರಿಯಲ್ಲಿ ವಿದ್ಯಾರ್ಥಿUಳ ಸಾಗಿಸುವ ವಾಹನಗಳ ಚೆಕ್ಕ್ ಮಾಡಿ, ನಿಯಮಕ್ಕೂ ಮೀರಿದ ವಾಹನಗಳ ಚಾಲಕರಿಗೆ ಎಚ್ಚರಿಕೆ ನೀಡಿ, ಕೇಸ್ ಹಾಕಲಾಗಿದೆ. ಎಲ್ಲಾ ಖಾಸಗಿ ಶಾಲಾ ವಾಹನ ಚೆಕ್ಕ್ ಮಾಡಲು ಸೂಚಿಸಿದ್ದು, ನಿಯಮ ಬಾಹೀರವಾಗಿ ಮಕ್ಕಳ ಸಾಗಾಟ ಮಾಡಿದರೆ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ. ಎಲ್ಲಾ ಕಡೆ ಶಾಲಾ ವಾಹನ ಚೆಕ್ ಮಾಡುವಂತೆ ಸೂಚಿಸಲಾಗಿದೆ. ಬೆಳಗ್ಗೆ ಮತ್ತು ಸಂಜೆ ಶಾಲೆ ಬಿಟ್ಟನಂತರ ವಾಹನ ಚೆಕ್ ಮಾಡಲಾಗುತ್ತದೆ ಎಂದು ಕುಂದಾಪುರ ಡಿಎಸ್ಪಿ ಎಂ.ಮಂಜುನಾಥ ಶೆಟ್ಟಿ ತಿಳಿಸಿದ್ದಾರೆ.
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ತ್ರಾಸಿ ಮೋವಾಡಿ ಕ್ರಾಸ್ ಬಳಿ ಸಂಭವಿಸಿದ ಅಪಘಾತದಲ್ಲಿ ಮಡಿದ ಮಕ್ಕಳ ಪೋಷಕರಲ್ಲಿ ಒಬ್ಬರು ವಿದೇಶದಿಂದ ಊರಿಗೆ ಮರಳಿದ್ದು, ಮತ್ತೊಬ್ಬರಾದ ಒಲ್ವಿನ್ ಒಲವೇರಾ ಬುಧವಾರ ಸಂಜೆ ಊರಿಗೆ ಮರಳಲಿದ್ದಾರೆ. ಮೃತ ಮಕ್ಕಳ ಕುಟುಂಬದ ಮನೆಯಲ್ಲಿ ಮೌನ ಮಡುಗಟ್ಟಿದೆ. ಶಾಲೆಯಿಂದ ಮನೆಗೆ ನಗುನಗುತ್ತಾ ಬರುತ್ತಾರೆ ಎಂದು ಕಾದಿದ್ದ ನಾವು ಮಕ್ಕಳ ಶವ ಎದುರುಗೊಳ್ಳುವ ಪರೀಸ್ಥಿತಿ ಬಂತು ಎಂದು ತಾಯಂದಿರು ಅವತ್ತುಕೊಳ್ಳುತ್ತಿದ್ದಾರೆ. ಮಂಗಳವಾರ ರಾತ್ರಿಯವರೆಗೆ ತನ್ನ ಮಗ ಗಾಯಗೊಂಡಿದ್ದು ಚೇತರಿಸಕೊಂಡು ಬರುತ್ತಾನೆ ಎಂದು ನಂಬಿದ್ದ ಹೆಮ್ಮಾಡಿ ನಿವಾಸಿ ಶಾಂತ ಅವರಿಗೆ ತಡ ರಾತ್ರಿ ಮಗ ರಾಯ್‌ಸ್ಟನ್ ನಿಧವಾದ ಸುದ್ದಿ ತಿಳಿದು ಆಘಾತಗೊಂಡಿದ್ದು, ಮೌನವಾಗಿ ರೋಧಿಸುತ್ತಿದ್ದಾರೆ. ಇವರ ಪತಿ ವಿನೋದ್ ಲೋಬೋ ವಿದೇಶದಿಂದ ಆಗಮಿಸಿದ್ದು, ಮನೆಯಲ್ಲಿ ಮೌನ ಮಡುಗಟ್ಟಿದೆ. ಯಾರೂ ಮಾತನಾಡುವ ಸ್ಥಿತಿಯಲ್ಲಿ ಇಲ್ಲ. ಮೃತ ಕುಟುಂಬದ ಎಲ್ಲಾ ಮನೆಯಲ್ಲೂ ಸಂಬಂಧಿರು ಸಾಂತ್ವಾನ ಹೇಳುವ ಸ್ಥಿತಿ ಇತ್ತು. ಮಕ್ಕಳ ಪೋಷಕರು ಅನ್ನ ನೀರುಬಿಟ್ಟು ರೋಧಿಸುತ್ತಿದ್ದಾರೆ. ಗುರುವಾರ ಮೃತ ಮಕ್ಕಳ ಅಂತ್ಯ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಸಚಿವ ಪ್ರಮೋಧ್ ಮಧ್ವರಾಜ್ ಬುಧವಾರ ಮಧ್ಯಾಹ್ನ ಮಕ್ಕಳನ್ನು ಅಡ್ಮಿಟ್ ಮಾಡಿದ್ದ ಕುಂದಾಪುರ ಖಾಸಗಿ ಆಸ್ಪತ್ರೆ ಭೇಡಿ ನೀಡಿ, ಚಿಕಿತ್ಸೆ ಪಡೆಯುತ್ತಿದ್ದ ದಿಕ್ಷಿತ್, ಸುಪ್ರಿತಾ, ಫಿಲೋಮಿನಾ ಅವರ ಯೋಗ ಕ್ಷೇಮ ವಿಚಾರಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು ರಸ್ತೆ ಸುರಕ್ಷತಾ ಬಗ್ಗೆ ಅತೀ ಶೀಘ್ರದಲ್ಲಿ ಸಭೆ ಕರೆದು ಚರ್ಚಿಸಿ ಕ್ರಮ ಕೈಗೊಳ್ಳಲಾಗುತ್ತದೆ. ಮೃತಕುಟುಬಂಕ್ಕೆ ಸರಕಾರ ದಿಂದ ಪರಿಹಾರ ನೀಡುವ ಬಗ್ಗೆ ಚರ್ಚಿಸಿ ಮುಂದಿನ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಹೇಳಿದರು.
ಮುಳ್ಳಿಕಟ್ಟೆ, ತ್ರಾಸಿಯಲ್ಲಿ ಸ್ವಯಂಪ್ರೇರಿತ ಬಂದ್ ಸಾಧ್ಯತೆ ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಮಂಗಳವಾರ ನಡೆದ ಭೀಕರ ಅಫಘಾತದಲ್ಲಿ ಹೆಮ್ಮಾಡಿ ಪರಿಸರದ ೮ ಮಕ್ಕಳು ಮೃತರಾಗಿದ್ದು ಇಡಿ ಊರೇ ಶೋಕಸಾಗರದಲ್ಲಿ ಮುಳುಗಿದೆ. ಮೃತ ಮಕ್ಕಳ ಗೌರವಾರ್ಥ ಹೆಮ್ಮಾಡಿ ಪೇಟೆ ಅಂಗಡಿ ಮುಂಗಟ್ಟು ಮುಚ್ಚಿ ಗೌರವ ಸಲ್ಲಿಸಲಾಯಿತು. ಕಟ್‌ಬೇಲ್ತೂರು ಲಾಯ್ಡ್ ಡಿಸಿಲ್ವಾ ಅವರ ಮಕ್ಕಳಾದ ನಿಖಿತ ಮತ್ತು ಅನನ್ಯ, ಹೆಮ್ಮಾಡಿ ಸಮೀಪ ಮೂವತ್ತಮುಡಿ ಸ್ಟೀವನ್ ಒಲಿವೇರಾ ಅವರ ಮಕ್ಕಳಾದ ಕೆಲಿಸ್ಟಾ ಮತ್ತು ಕ್ಲಾರಿಶಾ, ಮೂವತ್ತಮುಡಿ ಆಲ್ವಿನ್ ಒಲಿವೇರಾ ಅವರ ಮಕ್ಕಳಾದ ಅನ್ಸಿಟಾ ಮತ್ತು ಅಲ್ವಿಟಾ, ಬಗ್ವಾಡಿ ಕ್ರಾಸ್ ವಿನೋದ ಡಯಾಸ್ ಅವರ ಪುತ್ರ ಡೆಲ್ವಿನ್, ಹೆಮ್ಮಾಡಿಯ ವಿನೋದ್ ಲೋಬೊ ಅವರ ಪುತ್ರ ರೊಯ್‌ಸ್ಟನ್ ಮೃತಪಟ್ಟಿದ್ದರು. ಓಮ್ನಿಯಲ್ಲಿದ್ದ ಉಳಿದ ಹತ್ತು ಮಂದಿ ಮಕ್ಕಳು ಹಾಗೂ ಓರ್ವ ಶಿಕ್ಷಕ, ಚಾಲಕ ಗಾಯಗೊಂಡಿದ್ದರು.
