ನಮ್ಮಲ್ಲಿಲ್ಲ ಭಿನ್ನಮತ. ಇನ್ನೇನಿದ್ದರೂ ಅಭಿವೃದ್ಧಿಯತ್ತ ಚಿತ್ತ!

Call us

Call us

Call us

ಕೈ-ಕೈ ಜೋಡಿಸಿದ ಶಾಸಕ ಗೋಪಾಲ ಪೂಜಾರಿ ಸಚಿವ ಪ್ರಮೋದ್ ಮಧ್ವರಾಜ್

Call us

Click Here

ಕುಂದಾಪ್ರ ಡಾಟ್ ಕಾಂ ವರದಿ
ಕುಂದಾಪುರ: ರಾಜ್ಯ ಕಾಂಗ್ರೆಸ್ ಸರಕಾರ ಸಚಿವ ಸಂಪುಟ ಪುನರ್ ರಚನೆಯ ವೇಳೆ ಮಂತ್ರಿ ಮಂಡಲದಲ್ಲಿ ಅವಕಾಶ ನೀಡದಿರುವುದಕ್ಕೆ ಅಸಮಾಧಾನಗೊಂಡಿದ್ದ ಬೈಂದೂರು ವಿಧಾನಸಭಾ ಕ್ಷೇತ್ರದ ಶಾಸಕ ಗೋಪಾಲ ಪೂಜಾರಿ ಅವರ ಕೊನೆಗೂ ಭಿನ್ನರ ರೇಸ್‌ನಿಂದ ಹಿಂದೆ ಸರಿದಿದ್ದು, ಅವರ ನಿವಾಸಕ್ಕೆ ತೆರಳಿದ್ದ ಪ್ರಮೋದ್ ಮಧ್ವರಾಜ್ ಅವರೊಂದಿಗೆ ಪ್ರೀತಿಯಿಂದಲೇ ಆಹ್ವಾನಿಸಿಕೊಂಡು ಕ್ಷೇತ್ರದ ಅಭಿವೃದ್ಧಿಯ ಬಗ್ಗೆ ಚರ್ಚೆ ನಡೆಸಿದ್ದಾರೆ. ರಾಜ್ಯದ ಮಂತ್ರಿ ಪದವಿ ವಂಚಿತ ಭಿನ್ನರ ಪಾಳಯದಲ್ಲಿ ಗುರುತಿಸಿಕೊಂಡಿದ್ದ ಗೋಪಾಲ ಪೂಜಾರಿ ಅವರು ತಮ್ಮ ನಿಲುವು ಬದಲಿಸಿದ್ದು ಅಭಿವೃದ್ಧಿಗಾಗಿ ನೂತನ ಸಚಿವರಿಗೆ ಸಂಪೂರ್ಣ ಸಹಕಾರ ನೀಡುವುದಾಗಿ ತಿಳಿಸಿದ್ದಾರೆ.

ಬೈಂದೂರು ಕ್ಷೇತ್ರದಲ್ಲಿ ಅಸಮಾಧಾನ
ಸತತ ನಾಲ್ಕನೇ ಭಾರಿ ಶಾಸಕರಾಗಿ ಆಯ್ಕೆಯಾಗಿದ್ದ ಗೋಪಾಲ ಪೂಜಾರಿ ಅವರಿಗೆ ಸಚಿವ ಸ್ಥಾನ ಸಿಗಬಹುದೆಂಬ ಸಹಜ ನಿರೀಕ್ಷೆ ಇದ್ದಿತ್ತು. ಸ್ವತಃ ಅವರೇ ತಾನು ಸಚಿವ ಸ್ಥಾನದ ಆಕಾಂಕ್ಷಿ ಎಂದು ಮಾಧ್ಯಮಗಳ ಮುಂದೆ ಹೇಳಿಕೊಂಡಿದ್ದರು. ಆದರೆ ಸಂಪುಟ ಪುನರ್ ರಚನೆಯ ವೇಳೆ ಮುಖ್ಯಮಂತ್ರಿಗಳ ಏಕಪಕ್ಷೀಯ ನಿಲುವಿಗೆ ಹೈಕಮಾಂಡ್ ಕೂಡ ಬೆಂಬಲ ಸೂಚಿಸಿದ್ದರಿಂದ ಕರಾವಳಿಯಲ್ಲಿ ಎರಡು ಸಚಿವ ಸ್ಥಾನ ಹೋಗಿ ಒಂದು ಸ್ಥಾನ ಮಾತ್ರ ಉಳಿದುಕೊಂಡರೇ, ಬಹು ನೀರಿಕ್ಷೆ ಇಟ್ಟುಕೊಂಡಿದ್ದ ಬೈಂದೂರು ಕ್ಷೇತ್ರದ ಜನತೆಗೂ ತೀವ್ರ ಬೇಸರ ಉಂಟು ಮಾಡಿತ್ತು. ಗೋಪಾಲ ಪೂಜಾರಿ ಅವರ ಬೆಂಬಲಿಗರು ಮುಖ್ಯಮಂತ್ರಿಗಳ ನಿಲುವನ್ನು ಖಂಡಿಸಿ ಪ್ರತಿಭಟನೆ ನಡೆಸಿದರು. ಕಾರ್ಯಕರ್ತರ ಸಲಹೆಯಂತೆ ಮುಂದಿನ ನಿರ್ಣಕ ಕೈಗೊಳ್ಳುವುದಾಗಿ ಶಾಸಕರೂ ತಿಳಿಸಿದ್ದರು. ಕುಂದಾಪ್ರ ಡಾಟ್ ಕಾಂ ವರದಿ.

ರಾಜ್ಯದಲ್ಲಿ ಭಿನ್ನಮತ ಶಮನಕ್ಕೆ ಹರಸಾಹಸ
ರಾಜ್ಯ ಕಾಂಗ್ರೆಸ್ ಸರಕಾರದ ಮುಖ್ಯಮಂತ್ರಿ ಸಿದ್ಧರಾಮಯ್ಯ ಹಾಗೂ ಹೈಕಮಾಂಡ್‌ನ ನಿಲುವು ಹಲವು ಸಚಿವ, ಶಾಸಕರುಗಳಿಗೆ ಅಸಮಾಧಾನವಾಗಿತ್ತು. ಸಚಿವ ಸಂಪುಟ ಪುನರ್‌ರಚನೆಯಾಗುತ್ತಲೇ ರಾಜ್ಯದಲ್ಲಿ ಭಿನ್ನಮತ ಸ್ಪೋಟಗೊಂಡಿತ್ತು. ಸಚಿವ ಸ್ಥಾನ ಕಳೆದುಕೊಂಡ ಕೆಲವು ಶಾಸಕರಂತೂ ನೇರಾ ನೇರಾ ಸಿದ್ಧರಾಮಯ್ಯನವರ ವಿರುದ್ದ ವಾಗ್ದಾಳಿ ನಡೆಸಿದ್ದರು. ಆದರೆ ಮೊದಮೊದಲು ತಟಸ್ಥವಾಗಿದ್ದ ಮುಖ್ಯಮಂತ್ರಿಗಳು ಬಳಿಕ ಶಾಸಕರನ್ನು ಓಲೈಸುವ ಪ್ರಯತ್ನ ನಡೆಸಿದ್ದರು. ಸಚಿವ, ಶಾಸಕರ ಬೆಂಬಲಿಗರು ನಡೆಸಿದ ಪ್ರತಿಭಟನೆಗಳು ಕೂಡ ಅಲ್ಲಿಯೇ ವಾರದೊಳಕ್ಕೆ ತಣ್ಣಗಾಯಿತು. ಪಕ್ಷದ ಮುಖಂಡರಿಂದ ಆಂತರಿಕವಾಗಿ ನಡೆದ ಸಂಧಾನ ಸೂತ್ರ ಕೊನೆಗೂ ಯಶಸ್ವಿಯಾಗಿದೆ. ಬೈಂದೂರು ಶಾಸಕ ಗೋಪಾಲ ಪೂಜಾರಿ ಅವರೂ ತಮ್ಮ ನಿಲುವಿಂದ ಹಿಂದೆ ಸರಿದಿದ್ದಾರೆ. ಕುಂದಾಪ್ರ ಡಾಟ್ ಕಾಂ ವರದಿ

ಪೂಜಾರರ ಮನೆಗೆ ಸಚಿವ ಮಧ್ವರಾಜ್ ಭೇಟಿ:
ನಿರೀಕ್ಷೆಯಂತೆ ಸಚಿವ ಸ್ಥಾನ ಗಿಟ್ಟಿಸಿಕೊಂಡಿದ್ದ ಪ್ರಮೋದ್ ಮಧ್ವರಾಜ್, ಹಿರಿಯ ಶಾಸಕ, ಸಂಸದರ ಸಲಹೆಯಂತೆ ಕರಾವಳಿಯಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳುವುದಾಗಿ ತಿಳಿಸಿದ್ದಾರೆ. ಗೋಪಾಲ ಪೂಜಾರಿ ಅವರ ಮನೆಗೂ ಭೇಟಿ ನೀಡಿ ಸಹಕಾರ ನೀಡುವಂತೆ ಕೋರಿಕೊಂಡಿದ್ದಾರೆ. ಇಷ್ಟೇ ಅಲ್ಲದೇ ಈ ಭಾಗದ ಅಭಿವೃದ್ಧಿ ಕಾರ್ಯಗಳನ್ನು ಅನಗತ್ಯ ಹಸ್ತಕ್ಷೇಪ ಮಾಡುವುದಿಲ್ಲ ಎಂದಿದ್ದಾರೆ ಎನ್ನಲಾಗಿದೆ.

Click here

Click here

Click here

Click Here

Call us

Call us

ಬೆಂಬಲಿಗರ ಸಭೆ ರದ್ದು, ಸ್ಥಾನಮಾನ ನೀಡಲು ಆಗ್ರಹ:
ಇತ್ತಕಡೆ ಗೋಪಾಲ ಪೂಜಾರರ ಬೆಂಬಲಿಗರು ಹೆಮ್ಮಾಡಿಯಲ್ಲಿ ಕರೆದಿದ್ದ ಸಭೆ ರದ್ದಾಗಿದೆ. ಶಾಸಕರ ಸಲಹೆಯಂತೆ ಹೆಮ್ಮಾಡಿಯಲ್ಲಿ ನಡೆಯಬೇಕಿದ್ದ ಅವರ ಬೆಂಬಲಿಗರು ಈ ನಿರ್ಣಯ ಕೈಗೊಂಡಿದ್ದಾರೆ. ಆದರೆ ಸತತ ನಾಲ್ಕು ಭಾರಿ ಶಾಸಕರಾಗಿ ಗೋಪಾಲ ಪೂಜಾರಿ ಅವರಿಗೆ ಸೂಕ್ತ ಸ್ಥಾನಮಾನವನ್ನು ಒದಗಿಸಬೇಕು ಎಂದು ಹೈಕಮಾಂಡ್‌ಗೆ ಒತ್ತಾಯಿಸಿದ್ದಾರೆ ಎನ್ನಲಾಗಿದೆ.

ತಾಲೂಕಿಗಿಲ್ಲದ ಸಚಿವಸ್ಥಾನದ ಭಾಗ್ಯ:
ಸರಕಾರ ಯಾವುದು ಬಂದರೂ ತಾಲೂಕಿನ ಶಾಸಕರುಗಳು ಮಾತ್ರ ಸಚಿವ ಸ್ಥಾನದಿಂದ ವಂಚಿತರಾಗುತ್ತಿದ್ದಾರೆ. ಕಳೆದ ಅವಧಿಯಲ್ಲಿ ಬಿಜೆಪಿ ಸರಕಾರ ಕುಂದಾಪುರದ ಶಾಸಕ ಶ್ರೀನಿವಾಸ ಶೆಟ್ಟಿರಿಗೆ ಸಚಿವ ಸ್ಥಾನದ ಭರವಸೆ ನೀಡಿ ಕೊನೆ ಕ್ಷಣದಲ್ಲಿ ಕೈಬಿಟ್ಟಂತೆ, ಕಾಂಗ್ರೆಸ್ ಸರಕಾರವೂ ಬೈಂದೂರು ಶಾಸಕ ಗೋಪಾಲ ಪೂಜಾರಿ ಅವರಿಗೆ ಸಚಿವ ಸ್ಥಾನದಿಂದ ದೂರವಿಟ್ಟಿದೆ. ಸಚಿವ ಸ್ಥಾನ ಪಡೆಯಲು ಹಿರಿತನ, ಜನಮತಕ್ಕಿಂತ ಬೇರೆಯೇ ಅಜೆಂಡಾಗಳು ಕಾರ್ಯನಿರ್ವಹಿಸುತ್ತವೆ ಎಂದು ಈ ಭಾಗದ ಜನತೆ ಅಸಮಾಧಾನ ತೋಡಿಕೊಂಡಿದ್ದಾರೆ. /ಕುಂದಾಪ್ರ ಡಾಟ್ ಕಾಂ ವರದಿ/

ಇದನ್ನೂ ಓದಿ:

► ಸಂಪುಟದಲ್ಲಿ ಸಚಿವಸ್ಥಾನ ನೀಡಿಲ್ಲ. ಶಾಸಕ ಗೋಪಾಲ ಪೂಜಾರಿ ಅಸಮಾಧಾನ – http://bit.ly/28YMgAn
► ಬೈಂದೂರು ಶಾಸಕರಿಗೆ ತಪ್ಪಿದ ಸಚಿವ ಸ್ಥಾನ. ಅಭಿಮಾನಿಗಳ ಪ್ರತಿಭಟನೆ – http://bit.ly/29gGzNH

????????????????????????????????????
????????????????????????????????????
????????????????????????????????????
????????????????????????????????????

Leave a Reply