ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ತಾಲೂಕಿನ ಆನಗಳ್ಳಿಯ ಪ್ರಕಾಶ್ ಕೆ.ಆನಗಳ್ಳಿ ಅವರು ಎಲೆಕ್ಟ್ರಿಕಲ್ ಎಂಜಿನಿಯರಿಂಗ್, ಮಾರ್ಕೆಟಿಂಗ್ ಮತ್ತು ಕಾಂಟ್ರ್ಯಾಕ್ಟಿಂಗ್ ಕ್ಷೇತ್ರದಲ್ಲಿ ಸಲ್ಲಿಸಿದ ಅಪ್ರತಿಮ ಸಾಧನೆಗೆ ಅಂತಾರಾಷ್ಟ್ರೀಯ ಇನ್‌ಸ್ಟಿಟ್ಯೂಟ್ ಫಾರ್ ಸೋಷಿಯಲ್ ಆಂಡ್ ಎಕನಾಮಿಕ್ ರಿಫಾರ್ಮ್ಸ್ ಸಂಸ್ಥೆ ಕೊಡಮಾಡುವ ಎಂ.ವಿಶ್ವೇಶ್ವರಯ್ಯ ಬೆಸ್ಟ್ ಎಂಜಿನಿಯರಿಂಗ್ ನ್ಯಾಷನಲ್ ಆವಾರ್ಡ್ ಲಭಿಸಿದೆ. ಇತ್ತೀಚೆಗೆ ಬೆಂಗಳೂರಿನಲ್ಲಿ ಜರಗಿದ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ನಡೆಯಿತು. ನಿವೃತ್ತ ಪೊಲೀಸ್ ಅಧಿಕಾರಿ ಎಸ್.ಪಿ.ಸಾಂಗ್ಲಿಯಾನ ಪ್ರಶಸ್ತಿ ಪ್ರದಾನ ಮಾಡಿದರು. ಸಂಸ್ಥೆಯ ಅಧ್ಯಕ್ಷರಾದ ಡಾ|ಎಚ್.ವಿ ಶಿವಪ್ಪ, ಕಾರ್ಯದರ್ಶಿ ಜಿ.ಎಸ್. ದೇಸಾಯಿ, ವಿಧಾನ ಪರಿಷತ್ ಸದಸ್ಯ ಚೌಡಾ ರೆಡ್ಡಿ, ಚಿತ್ರ ನಿರ್ದೇಶಕ ರಾಧಾಕೃಷ್ಣ, ಮೈಸೂರು ಕನ್‌ಸ್ಟ್ರಕ್ಷನ್ ಕಂಪನಿಯ ಮ್ಯಾನೇಜರ್ ಪುಟ್ಟ ನಾಯ್ಕ ಮೊದಲಾದವರು ಉಪಸ್ಥಿತರಿದ್ದರು.
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ವರದಿ ಕುಂದಾಪುರ: ಹಿಂದಿನ ಕಾಲದಲ್ಲಿ ಹಿರಿಯರು, ಕುಟುಂಬದ ಏಳಿಗೆಗಾಗಿ ಕುಲದೇವರ ದರ್ಶನ ಪಡೆಯಲು ಪಾದಯಾತ್ರೆಯ ಮೂಲಕವೇ ಹೋಗಬೇಕಾದ ರಿವಾಜು ಹಾಗೂ ಅನಿವಾರ್ಯತೆ ಇತ್ತು. ಆದರೆ ಇಂದು ಎಲ್ಲಾ ರೀತಿಯ ಸೌಕರ್ಯಗಳಿದ್ದರೂ ಹಿರಿಯರ ಕಟ್ಟಿಕೊಂಡು ಸಂಪ್ರದಾಯವನ್ನು ಮುಂದುವರಿಸಿಕೊಂಡು ಊರಿನ ಸಂಕಷ್ಟಗಳು ದೂರವಾಗಿಲಿ ಎಂಬ ಸದಾಶಯದೊಂದಿಗೆ ಹಿರಿಯರು ಕಿರಿಯರೆನ್ನದೇ ಹರಿಖಂಡಿಗೆಯ ಕಾಪಾಡಿಯ ಮೂಲಸ್ಥಾನದಿಂದ ಗೋವಾ ಶ್ರೀ ಮಹಾಲಸಾ ನಾರಾಯಣಿ ದೇವಿ ಕ್ಷೇತ್ರಕ್ಕೆ ಪಾದಯಾತ್ರೆ ತೆರಳುತ್ತಿದ್ದಾರೆ ಕಾಪಾಡಿಯ ಜಿಎಸ್‌ಬಿ ಸಮುದಾಯದ ಶೆಣೈ ಮುತ್ತು ನಾಯಕ್ ಕುಟುಂಬಿಕರು. ಪಾದಯಾತ್ರೆಯ ನಡುವೆ ಕೋಟೇಶ್ವರ ಶ್ರೀ ಪಟ್ಟಾಭಿರಾಮಚಂದ್ರ ದೇವಾಲಯದಲ್ಲಿ ತಂಗಿದ್ದ ಯಾತ್ರಾರ್ಥಿಗಳು ಮಾತಿಗೆ ಸಿಕ್ಕರು. ಉಡುಪಿ ಜಿಲ್ಲೆಯ ಪೂರ್ವ ದಿಕ್ಕಿನಲ್ಲಿ ಪೆರ್ಡೂರು ಸಮೀಪದಲ್ಲಿರುವ ಊರು ಹರಿಖಂಡಿಗೆ. ಅಲ್ಲಿಯೇ ಹತ್ತಿರದಲ್ಲಿ ಎರಡು ಕಿ.ಮೀ ದೂರದಲ್ಲಿ ಇರುವ ಪುಟ್ಟ ಗ್ರಾಮವೇ ಕಾಪಾಡಿ. ಹರಿಖಂಡಿಗೆಯ ಊರಿನ ಲಕ್ಷ್ಮೀ ವೆಂಕಟರಮಣ ದೇವಸ್ಥಾನಕ್ಕೆ ಹಾಗೂ ಕಾಪಾಡಿಯಲ್ಲಿರುವ ಪುರಾತನ ಬ್ರಹ್ಮ ಸ್ಥಾನಕ್ಕೆ ಸುಮಾರು 500 ವರ್ಷಗಳ ಇತಿಹಾಸವಿದೆ. ಗೋವಾದಲ್ಲಿ ಪೋರ್ಚುಗೀಸರ ಮತಾಂತರ ನೀತಿಯನ್ನು ಸಹಿಸದೇ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಕುಂದಾಪುರ ವಲಯಕ್ಕೆ ಸಂಬಂಧಿಸಿದ ಸಂತ ಅಂತೋನಿಗೆ ಸಮರ್ಪಿಸಲ್ಪಟ್ಟ, ಕಂಡ್ಲೂರಿನ ನೂತನ ಧರ್ಮಕೇಂದ್ರಕ್ಕೆ ಅದಿಕೃತ ನೂತನ ಧರ್ಮಗುರುಗಳಾಗಿ ವ|ವಿಕ್ಟರ್ ಡಿಸೋಜಾ ಇವರ ಆಗಮನವಾಗಿದೆ. ಈ ಮೊದಲು ಬಸ್ರೂರು ಧರ್ಮಕೇಂದ್ರದ ಅಧಿನದಲ್ಲಿದ್ದ ಈ ಧರ್ಮಕೇಂದ್ರದ ಧರ್ಮಗುರುಗಳಾದ ವ|ವಿಶಾಲ್ ಲೋಬೊ ಮತ್ತು ಕುಂದಾಪುರ ವಲಯ ಪ್ರಧಾನ ಧರ್ಮಗುರು ವ|ಅನಿಲ್ ಡಿಸೋಜಾ, ಮತ್ತು ಭಕ್ತರು ನೂತನ ಧರ್ಮಗುರುಗಳನ್ನು ಬರಮಾಡಿಕೊಂಡರು. ಧರ್ಮಗುರುಗಳಾದ ವಿಶಾಲ್ ಲೋಬೊ ಹಾಗೂ ಅನಿಲ್ ಡಿಸೋಜಾ ಅವರು ಧರ್ಮಗುರು ವಿಕ್ಟರ್ ಡಿಸೋಜಾ ಇವರಿಗೆ ವಿದ್ಯುಕ್ತವಾಗಿ ಅಧಿಕಾರವನ್ನು ಹಸ್ತಾಂತರಿಸುವ ಕಾರ್ಯ ಮತ್ತು ಪೂಜಾ ವಿಧಿ ವಿಧಾನಗಳನ್ನು ನೆಡೆಸಿಕೊಟ್ಟರು. ಮಕಮಾರ್ ಧರ್ಮಕೇಂದ್ರದಿಂದ ವರ್ಗಾವಣೆಯಾಗಿ ಬಂದು ಅಧಿಕಾರ ಸ್ವೀಕಾರ ಮಾಡಿದ ಧರ್ಮಗುರು ವಿಕ್ಟರ್ ಡಿಸೋಜಾ ’ನಾನು ಇಲ್ಲಿ ಏಸುವಿನ ಸೇವಕನಾಗಿ, ನಿಸ್ವಾರ್ಥ ಸೇವೆ ಮಾಡಲು ಬಂದಿದ್ದೆನೆ ಅದಕ್ಕಾಗಿ ನಿಮ್ಮೆಲ್ಲರ ಸಹಕಾರ ಅಗತ್ಯವಿದೆ, ಉಡುಪಿಯ ಧರ್ಮ ಪ್ರಾಂತ್ಯದ ಬಿಶಪ್ ಅ|ವ|ಡಾ|ಜೆರಾಲ್ಡ್ ಐಸಾಕ್ ಲೋಬೊ ಇವರಿಗೆ ವಂದನೆಗಳನ್ನು ಅರ್ಪಿಸುತ್ತೆನೆ ಎಂದು ಅವರು ತಿಳಿಸಿದರು. ಸಮಾರಂಭದಲ್ಲಿ ಬಸ್ರೂರು ಧರ್ಮಕೇಂದ್ರದ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಯುವತಿಯೋರ್ವಳು ಯಾಮಾರಿಸಿ ಅವಳ ಗೆಳೆಯನೇ ತೆಗೆದ ನಗ್ನ ವಿಡಿಯೋ ಇಟ್ಟುಕೊಂಡು ತಮ್ಮೊಡನೆ ಲೈಂಗಿಕವಾಗಿ ಸಹಕರಿಸಬೇಕು, ಇಲ್ಲದಿದ್ದರೆ ವಿಡಿಯೋವನ್ನು ಸಾಮಾಜಿಕ ತಾಣಗಳಲ್ಲಿ ಹರಿಯಬಿಡುವುದಾಗಿ ಯುವತಿಯನ್ನು ಬ್ಲಾಕ್ ಮೇಲ್ ಮಾಡಿದ ಆರೋಪಿಗಳ ಪೈಕಿ ಓರ್ವನನ್ನು ಪೋಲಿಸರು ವಶಕ್ಕೆ ಪಡೆದುಕೊಂಡರೆ ಪ್ರಮುಖ ಆರೋಪಿ ನಾಪತ್ತೆಯಾಗಿದ್ದಾನೆ. ಸೆರೆಯಾದ ಆರೋಪಿ ಸಂತೋಷ ಪೂಜಾರಿ, ನಾಪತ್ತೆಯಾದ ಆರೋಪಿ ಸುದರ್ಶನ ಶೆಟ್ಟಿ. ಘಟನೆಯ ವಿವರ: ಮೂರು ವರ್ಷಗಳ ಹಿಂದೆ ಇದೀಗ ಪ್ರಕರಣದ ಕಿಂಗ್ ಪಿನ್ ಆಗಿರುವ ಸುದರ್ಶನ ಶೆಟ್ಟಿ ಎಂಬಾತ ತನ್ನ ಹಾಲಾಡಿ ಪರಿಸರದ ತನ್ನ ಗೆಳತಿಯನ್ನು ಕರೆದುಕೊಂಡು ಕೊಲ್ಲೂರಿಗೆ ಜಾಲಿ ಟೂರ್ ಹೋಗಿದ್ದ. ಆಕಸ್ಮಿಕವೋ, ಕರಾರುವಾಕ್ಕೋ ಎಂಬಂತೆ ಮಾರ್ಗಮಧ್ಯದಲ್ಲಿ ಆಕೆಗೆ ಋತುಸ್ರಾವ ಆದ ಕಾರಣದಡಿ ಇಬ್ಬರೂ ಕೊಲ್ಲೂರಿನ ಲಾಡ್ಜ್ ಒಂದರಲ್ಲಿ ಕೋಣೆಯನ್ನು ಬಾಡಿಗೆಗೆ ಪಡೆಯುತ್ತಾರೆ. ಇದೀಗ ಯುವತಿ ದೂರಿನಲ್ಲಿ ಹೇಳಿದಂತೆ ಅಂದು ಲಾಡ್ಜಿನ ಬಾತ್ ರೂಮಿನಲ್ಲಿ ಆಕೆ ಸ್ನಾನ ಮಾಡಿ ಬಟ್ಟೆ ಬದಲಾಯಿಸುವ ದೃಶ್ಯವನ್ನು ಆಕೆಗೆ ತಿಳಿಯದಂತೆ ಸುದರ್ಶನ ಶೆಟ್ಟಿ ವಿಡಿಯೊ ಮಾಡಿಕೊಂಡಿದ್ದಂತೆ.…
ರೋಹಿತ್ | ಕುಂದಾಪ್ರ ಡಾಟ್ ಕಾಂ ಸುದ್ದಿ. ದುಬೈ: ಕುಂದಾಪುರ ದೇವಾಡಿಗ ಮಿತ್ರ ದುಬೈ (ಕದಂ) ಸಂಘಟನೆಯು ಪವಿತ್ರ ರಂಜಾನ್ ತಿಂಗಳ ಅಂಗವಾಗಿ ದುಬೈ ಲತೀಫ್ ಆಸ್ಪತ್ರೆಯ ರಕ್ತನಿಧಿ ಕೇಂದ್ರದಲ್ಲಿ ರಕ್ತದಾನ ಶಿಬಿರವನ್ನು ಆಯೋಜಿಸಿತ್ತು. ದುಬೈ ಕುಂದಾಪುರ ದೇವಾಡಿಗ ಮಿತ್ರ ಸಂಘಟನೆಯ ಅಧ್ಯಕ್ಷ ದಿನೇಶ್ ಸಿ.ಡಿ ಶಿಬಿರವನ್ನು ಉದ್ಘಾಟಿಸಿ ಶುಭಹಾರೈಸಿದರು. ಈ ಸಂದರ್ಭದಲ್ಲಿ ಸಂಘಟನೆಯ ಪ್ರಮುಖರು ಹಾಗೂ ಅತಿಥಿಗಳು ಉಪಸ್ಥಿತರಿದ್ದರು. ಸುಮಾರು 85ಕ್ಕೂ ಅಧಿಕ ರಕ್ತದಾನಿಗಳು ಶಿಬಿರದಲ್ಲಿ ಯಶಸ್ವಿಯಾಗಿ ಪಾಲ್ಗೊಂಡು ರಕ್ತದಾನ ಮಾಡಿದರು. ದುಬೈ ಯುಎಇಯಲ್ಲಿ ನೆಲೆಸಿರುವ ಕುಂದಾಪುರ ಮೂಲದ ದೇವಾಡಿಗ ಸಮುದಾಯದವರು ಕಟ್ಟಿಕೊಂಡ ಕದಂ ಸಂಘಟನೆ ವರ್ಷಂಪ್ರತಿ ಹಲವಾರು ಸಾಮಾಜಿಕ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಿ ಸಮಾಜದ ಬಂಧುಗಳ ಮೆಚ್ಚುಗೆಗೆ ಪಾತ್ರವಾಗಿದೆ.
ಕುಂದಾಪ್ರ ಡಾಟ್ ಕಾಂ ಸುದ್ದಿ ಕುಂದಾಪುರ: ಮರವಂತೆ ಗ್ರಾಮ ಪಂಚಾಯಿತಿ ಮತ್ತು ಕಾರ್ಮಿಕ ಇಲಾಖೆಯ ಏಕಗವಾಕ್ಷಿ ಯೋಜನೆಯ ಸಂಯುಕ್ತ ಆಶ್ರಯದಲ್ಲಿ ಗ್ರಾಮ ಪಂಚಾಯತ್ ಸುವರ್ಣ ಸಭಾಭವನದ ಅಟಲ್ ಬಿಹಾರಿ ವಾಜಪೇಯಿ ವೇದಿಕೆಯಲ್ಲಿ ಕಟ್ಟಡ ನಿರ್ಮಾಣ ಕಾರ್ಮಿಕರ ಮತ್ತು ಆಮ್ ಆದ್ಮಿ ವಿಮಾ ಯೋಜನೆಯ ಫಲಾನುಭವಿಗಳ ನೋಂದಣಿ ಶಿಬಿರ ಮಂಗಳವಾರ ನಡೆಯಿತು. ಗ್ರಾಮ ಪಂಚಾಯಿತಿ ಅಧ್ಯಕ್ಷೆ ಅನಿತಾ ಆರ್. ಕೆ. ಅಧ್ಯಕ್ಷತೆ ವಹಿಸಿದ್ದರು. ಎರಡು ಯೋಜನೆಗಳ ಮಾಹಿತಿ ನೀಡಿದ ಏಕಗವಾಕ್ಷಿ ಯೋಜನೆಯ ಸಂಯೋಜಕ ಮಂಜುನಾಥ ಕಟ್ಟಡ ಕಾರ್ಮಿಕರಿಗೆ ಮತ್ತು ಅವರ ಕುಟುಂಬದ ಸದಸ್ಯರಿಗೆ ಕಟ್ಟಡ ಕಾರ್ಮಿಕರ ಕಲ್ಯಾಣ ನಿಧಿಯಿಂದ ಸಿಗುವ ಸೌಲಭ್ಯಗಳನ್ನು ವಿವರಿಸಿದರು. ಆಮ್‌ಆದ್ಮಿ ವಿಮಾ ಯೋಜನೆಯಿಂದ ಬಡತನ ರೇಖೆಯ ಕೆಳಗಿರುವವರಿಗೆ ದೊರೆಯುವ ಸೌಲಭ್ಯ ಮತ್ತು ಪರಿಹಾರಗಳ ಮಾಹಿತಿ ನೀಡಿದರು. ಕಾರ್ಯದರ್ಶಿ ಹರಿಶ್ಚಂದ್ರ ಆಚಾರ್ಯ ಸ್ವಾಗತಿಸಿ, ವಂದಿಸಿದರು. ಉಪಾಧ್ಯಕ್ಷ ಗಣೇಶ ಪೂಜಾರಿ, ಕಾರ್ಮಿಕ ನಿರೀಕ್ಷಕ ಸತ್ಯನಾರಾಯಣ ಉಪಸ್ಥಿತರಿದ್ದರು. ಶಿಬಿರದಲ್ಲಿ ಎರಡು ಯೋಜನೆಯಡಿ ಸುಮಾರು ೨೫೦ ಜನರು ನೋಂದಣಿ ಮಾಡಿಸಿಕೊಂಡರು.
ಕುಂದಾಪ್ರ ಡಾಟ್ ಕಾಂ ಸುದ್ದಿ. ಗಂಗೊಳ್ಳಿ : ಫ್ರೌಢಾವಸ್ಥೆ ಎನ್ನುವುದು ಜೀವನದ ಪ್ರಮುಖ ಹಂತ. ಮಕ್ಕಳು ತಮ್ಮ ಭವಿಷ್ಯತ್ತನ್ನು ರೂಪಿಸಿಕೊಳ್ಳುವ ಕಡೆಗೆ ಹೆಚ್ಚಿನ ಗಮನವನ್ನು ಈ ಹಂತದಲ್ಲಿ ನೀಡಬೇಕಾಗುತ್ತದೆ. ತಮ್ಮೆಲ್ಲಾ ಪಠ್ಯೇತರ ಚಟುವಟಿಕೆಗಳೊಂದಿಗೆ ವಿಧ್ಯಾಭ್ಯಾಸವನ್ನು ಗಂಭೀರವಾಗಿ ವಿದ್ಯಾರ್ಥಿಗಳು ಪರಿಗಣಿಸಬೇಕು ಎಂದು ಜಿ.ಎಸ್.ವಿ.ಎಸ್ ಅಸೋಷಿಯೇಶನ್ನಿನ ಕಾರ‍್ಯದರ್ಶಿ ಹೆಚ್ ಗಣೇಶ್ ಕಾಮತ್ ಅಭಿಪ್ರಾಯಪಟ್ಟರು. ಅವರು ಇತ್ತೀಚೆಗೆ ಗಂಗೊಳ್ಳಿಯ ಸರಸ್ವತಿ ವಿದ್ಯಾಲಯ ಫ್ರೌಢ ಶಾಲೆಯಲ್ಲಿ ನಡೆದ ಉಚಿತ ಸಮವಸ್ತ್ರ ಮತ್ತು ಪುಸ್ತಕ ವಿತರಣೆ ಸಮಾರಂಭದ ಅತಿಥಿ ಸ್ಥಾನದಿಂದ ಮಾತನಾಡಿದರು. ಜಿ.ಎಸ್.ವಿ.ಎಸ್ ಅಸೋಷಿಯೇಶನ್ನಿನ ಅಧ್ಯಕ್ಷ ಡಾ ಕಾಶೀನಾಥ ಪೈ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭದಲ್ಲಿ ಮಂಗಳೂರಿನ ಮೇಘನಾ ಗಾರ್ಮೆಂಟ್ಸ್‌ನ ಮನೋಹರ ಮತ್ತು ಮಂಗಳೂರಿನ ಪ್ರೆಸ್ಟೀಜ್ ವೈನ್ಸ್‌ನ ಶ್ರೀನಿವಾಸ ಇವರು ಕೊಡಮಾಡಿದ ಸಮವಸ್ತ್ರ ಮತ್ತು ಪುಸ್ತಕಗಳನ್ನು ಎಂಟನೇ ತರಗತಿಯ ಮಕ್ಕಳಿಗೆ ಉಚಿತವಾಗಿ ವಿತರಿಸಲಾಯಿತು. ಸರಸ್ವತಿ ವಿದ್ಯಾಲಯ ಪದವಿಪೂರ್ವ ಕಾಲೇಜಿನ ಕಾರ‍್ಯದರ್ಶಿ ಎನ್ ಸದಾಶಿವ ನಾಯಕ್, ಪ್ರಾಂಶುಪಾಲೆ ಕವಿತಾ ಎಮ್ ಸಿ , ಸರಸ್ವತಿ ವಿದ್ಯಾಲಯ ಫ್ರೌಢ ಶಾಲೆಯ ಸಮಾಜ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಇಲ್ಲಿನ ಯಡ್ತರೆ ಗ್ರಾ. ಪಂ. ವ್ಯಾಪ್ತಿಯ ಪ. ಪಂಗಡದ ರಂಗ ತಂಡ ಸಂಚಲನ(ರಿ) ಹೊಸೂರು ಸಂಸ್ಥೆಯು, ನಾಟಕ ಅಕಾಡೆಮಿ ಬೆಂಗಳೂರು ಇವರ ಆಶ್ರಯದಲ್ಲಿ ಆಯ್ದ ಬುಡಕಟ್ಟು ಯುವ ಕಲಾವಿದರಿಗೆ ಇಪ್ಪತ್ತು ದಿನಗಳ ರಂಗಶಿಬಿರವನ್ನು ಆಯೋಜಿಸಿದ್ದು ಅಕಾಡೆಮಿಯ ಸದಸ್ಯ ಉಮೇಶ್ ಸಾಲಿಯಾನ್ ಉದ್ಘಾಟಿಸಿದರು. ಬಳಿಕ ಮಾತನಾಡಿ ಮನರಂಜನೆಗಾಗಿ ಮಾತ್ರ ರಂಗಭೂಮಿ ಸೀಮಿತವಲ್ಲ. ಹೊಸ ಹೊಸ ನಾಟಕಗಳ ಮೂಲಕ ಒಳ್ಳೆಯ ಸಂದೇಶವನ್ನು ಸಮಾಜಕ್ಕೆ ನೀಡಿ ಸಮಾಜದ ಉನ್ನತಿಗಾಗಿ ಹಾಗೂ ತನ್ನನ್ನೆ ತಾನು ಬೆಳೆಸಲಿಕ್ಕೊಸ್ಕರ ರಂಗಭೂಮಿಯಲ್ಲಿ ತೊಡಗಿಸಿಕೊಳ್ಳಬೇಕು. ಆ ಉದ್ದೇಶದಿಂದ ಇಂತಹ ಗ್ರಾಮೀಣ ಪ್ರದೇಶದಲ್ಲಿ ನಾಟಕ ಅಕಾಡೆಮಿಯು ಸ್ಥಳೀಯ ರಂಗ ತಂಡಗಳ ನೆರವಿನಿಂದ ಈ ರೀತಿಯ ರಂಗ ಶಿಬಿರಗಳನ್ನೆ ಏರ್ಪಡಿಸಿ ಇಡೀ ಗ್ರಾಮವೇ ಅದರಲ್ಲಿ ತೊಡಗಿಸಿಕೊಳ್ಳುವ ಹಾಗೆ ಮಾಡುತ್ತಿದ್ದೇವೆ ಎಂದು ಹೇಳಿದರು. ಸಂಚಲನದ ಅಧ್ಯಕ್ಷ ತಿಮ್ಮ ಮರಾಠಿ ಅಧ್ಯಕ್ಷತೆ ವಹಿಸಿದ್ದು, ಸ್ಥಳೀಯ ಶಾಲಾ ಪ್ರಭಾರ ಮುಖ್ಯ ಶಿಕ್ಷಕ ರಾಮಾನಾಥ ಮೇಸ್ತ, ಗ್ರಾ. ಪಂ. ಸದಸ್ಯ ಶ್ರೀಮತಿ ಲಲಿತಾ ನಾಗಪ್ಪ…
ಕುಂದಾಪ್ರ ಡಾಟ್ ಕಾಂ ಸುದ್ದಿ ಕುಂದಾಪುರ: ಭಾರತೀಯ ಜೀವ ವಿಮಾ ನಿಗಮ ಕುಂದಾಪುರ ಶಾಖೆಯ ವಿಮಾ ಸಲಹೆಗಾರರಾದ ಪ್ರಕಾಶ್ಚಂದ್ರ ಶೆಟ್ಟಿ ಚಿತ್ತೂರು ಅವರು ಉತ್ತಮ ಜೀವ ವಿಮೆ ವ್ಯವಹಾರವನ್ನು ನಡೆಸಿ 3ನೇ ಬಾರಿಗೆ ಕುಂದಾಪುರದ ಏಕೈಕ ಎಂಡಿಅರ್‌ಟಿ ಸದಸ್ಯರಾಗಿ ಆಯ್ಕೆಯಾಗಿದ್ದಾರೆ. ಕೋಣಿಯ ಮಾತಾ ಮಾಂಟೆಸ್ಸೋರಿ ಮಕ್ಕಳ ಶಾಲೆಯ ವ್ಯವಸ್ಥಾಪಕ ನಿರ್ದೇಶಕರಾಗಿರುವ ಪ್ರಕಾಶ್ಚಂದ್ರ ಶೆಟ್ಟಿ ಚಿತ್ತೂರು ಅವರು ಅಮೇರಿಕಾದ ಸಿಯಾಟೆಲ್ ನಗರದಲ್ಲಿ ವ್ಯವಹಾರಿಕ ಸಭೆಗಳಲ್ಲಿ ಭಾಗವಹಿಸಿ, ಕೆನಡಾದಲ್ಲಿ ನಡೆಯಲಿರುವ ಮಿಲಿಯನ್ ಡಾಲರ್ ರೌಂಡ್ ಟೇಬಲ್ ಜಾಗತಿಕ ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ. ಪ್ರೀಮಿಯಂ ಆಧಾರದಲ್ಲಿ ಇವರು ಅರ್ಹತೆಯನ್ನು ಪಡೆದಿದ್ದಾರೆ. ಕುಂದಾಪುರದ ಹಿರಿಯ ಜೀವವಿಮಾ ಅಭಿವೃದ್ಧಿ ಅಧಿಕಾರಿ ಕೆ. ಕರುಣಾಕರ ಶೆಟ್ಟಿ ಅವರ ಮಾರ್ಗದರ್ಶನದಲ್ಲಿ ಈ ಸಾಧನೆ ಮಾಡಿದ್ದಾರೆ.
ಕುಂದಾಪ್ರ ಡಾಟ್ ಕಾಂ ಸುದ್ದಿ ಕುಂದಾಪುರ: ಫಿಲಿಪ್ಸ್ ಲೈಟಿಂಗ್ಸ್‌ನ ಸಂಶೋಧನಾ ಮುಖ್ಯಸ್ಥ ನೆದರ್‌ಲ್ಯಾಂಡ್ಸ್‌ನ ಕ್ಯಾರೆಲ್ ಡ್ರಯೆಲ್ ಲೈಟಿಂಗ್ಸ್‌ನ ಭಾರತದ ಮುಖ್ಯಸ್ಥ ಡಾ. ಐರೋಡಿ ನರೇಂದ್ರನಾಥ ಉಡುಪರ ಜತೆಯಲ್ಲಿ ಗುರುವಾರ ಮರವಂತೆಗೆ ಭೇಟಿ ನೀಡಿದರು. ಮರವಂತೆ ಗ್ರಾಮ ಪಂಚಾಯತ್ ಸುವರ್ಣ ಗ್ರಾಮೋದಯ ಯೋಜನೆಯ ಅನುದಾನದಿಂದ ಫಿಲಿಫ್ಸ್ ಇಂಡಿಯದ ಸಹಯೋಗದಲ್ಲಿ ಅಲ್ಲಿನ ಹರಿಶ್ಚಂದ್ರ ಮಾರ್ಗಕ್ಕೆ 2014-15ರಲ್ಲಿ ಅಳವಡಿಸಿದ ಕೇಂದ್ರೀಕೃತ ಸೋಲಾರ್ ಬೀದಿದೀಪ ಯೋಜನೆಯ ಪ್ರಸಕ್ತ ಸ್ಥಿತಿಯನ್ನು ಉಭಯರು ಪರಿಶೀಲಿಸಿದರು. ಅದರ ಉಪಯುಕ್ತತೆ ಮತ್ತು ಪರಿಣಾಮಕಾರಿತ್ವದ ಬಗ್ಗೆ ಅಭಿಪ್ರಾಯ ಸಂಗ್ರಹಿಸಿದರು. ಈ ಸಂದರ್ಭದಲ್ಲಿ ಅಧ್ಯಕ್ಷೆ ಕೆ. ಎ. ಅನಿತಾ. ಉಪಾಧ್ಯಕ್ಷ ಗಣೇಶ ಪೂಜಾರಿ, ನಿಕಟಪೂರ್ವ ಅಧ್ಯಕ್ಷೆ ಕೆ. ಎ. ಸುಗುಣಾ, ಮಾಜಿ ಅಧ್ಯಕ್ಷರಾದ ಎಂ. ವಿನಾಯಕ ರಾವ್, ಎಂ. ನರಸಿಂಹ ಶೆಟ್ಟಿ ಮತ್ತು ಎಸ್. ಜನಾರ್ದನ ವ್ಯವಸ್ಥೆಯ ಕುರಿತು ತಮ್ಮ ಅನುಭವ, ಅನಿಸಿಕೆಗಳನ್ನು ಅವರೊಂದಿಗೆ ಹಂಚಿಕೊಂಡರು. ಕೇಂದ್ರೀಕೃತ ವ್ಯವಸ್ಥೆಯು ಎಲ್ಲೆಡೆ ಚಾಲ್ತಿಯಲ್ಲಿರುವ ಏಕ ಘಟಕ ವ್ಯವಸ್ಥೆಗಿಂತ ಭಿನ್ನ. ಕೇಂದ್ರೀಕೃತ ವ್ಯವಸ್ಥೆಯಲ್ಲಿ ಸೋಲಾರ್ ಮೊಡ್ಯೂಲ್, ಬ್ಯಾಟರಿ ಮತ್ತು…
