ಪದವೀಧರರ ಬೇಡಿಕೆ ಈಡೇರಿಕೆಗೆ ಪ್ರಯತ್ನ: ಸಚಿವ ಕಿಮ್ಮನೆ ಕುಂದಾಪ್ರ ಡಾಟ್ ಕಾಂ ಸುದ್ದಿ ಶಿವಮೊಗ್ಗ: ಕರ್ನಾಟಕ ರಾಜ್ಯದಲ್ಲಿನ ಡಿ.ಇಡಿ., ಬಿ.ಇಡಿ., ಬಿ.ಪಿ.ಇಡಿ., ಎಂ.ಇಡಿ. ಎಂ.ಪಿ.ಇಡಿ. ಮುಂತಾದ ಶಿಕ್ಷಣ ಪದವೀಧರರ ನಿರುದ್ಯೋಗ ಮತ್ತು ಅಭದ್ರತೆ ನಿವಾರಣೆಗೆ ಕ್ರಮ, ರಾಜ್ಯದ ಸರಕಾರಿ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಲ್ಲಿ ಖಾಲಿಯಿರುವ ಶಿಕ್ಷಕ ಹುದ್ದೆ ಭರ್ತಿ, ಅನುದಾನಿತ ಪ್ರಾಥಮಿಕ ಹಾಗೂ ಪ್ರೌಢಶಾಲಾ ಶಿಕ್ಷಕ ಹುದ್ದೆ ಭರ್ತಿ, ಖಾಸಗಿ ಶಿಕ್ಷಣ ಸಂಸ್ಥೆಗಳು ಹಾಗೂ ರಾಜ್ಯ ಸರಕಾರದ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಲ್ಲಿ ನೇಮಿಸಿಕೊಂಡ ೩೦ ಸಾವಿರ ಅತಿಥಿ ಶಿಕ್ಷಕರಿಗೆ ಸರ್ವೋಚ್ಛ ನ್ಯಾಯಾಲಯದ ನಿರ್ದೇಶನದಂತೆ ರೂ. ೧೩೬೫೦ ವೇತನ ಮತ್ತು ಪಿ.ಎಫ್. ಹಾಗೂ ಇ.ಎಸ್.ಐ. ವ್ಯವಸ್ಥೆ ಜಾರಿ, ಖಾಸಗಿ ಅನುದಾನರಹಿತ ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕರಿಗೆ ಸರಕಾರದ ಜ್ಯೋತಿ ಸಂಜೀವಿನಿ ಯೋಜನೆ ವಿಸ್ತರಣೆ, ಡಿ.ಇಡಿ., ಬಿ.ಇಡಿ. ಹಾಗೂ ಎಂ.ಇಡಿ. ಪದವೀಧರ ಶಿಕ್ಷಕರಿಗೆ ಉದ್ಯೋಗ ಭದ್ರತೆ ಅಥವಾ ನಿರುದ್ಯೋಗ ಭತ್ಯೆ ನೀಡಿಕೆ ಸೇರಿದಂತೆ ಹಲವು ಪ್ರಮುಖ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಹಾಗೂ…
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಕಳೆದ ವರ್ಷ ಹೇನಬೇರಿನ ಕಾಲೇಜು ವಿದ್ಯಾರ್ಥಿನಿ ಅಕ್ಷತಾ ದೇವಾಡಿಗ ಅವರ ಕೊಲೆಯಾದಾಗ ಸ್ಥಳಕ್ಕೆ ಭೇಟಿನೀಡಿದ ಸಂಸದ ವೀರಪ್ಪ ಮೊಯಿಲಿ ಸೇರಿದಂತೆ ಎಲ್ಲ ಜನನಾಯಕರು ಹೇನಬೇರಿಗೆ ಅಗತ್ಯ ಮೂಲ ಸೌಲಭ್ಯಗಳನ್ನು ಒದಗಿಸುವ ಭರವಸೆಯಿತ್ತಿದ್ದರು. ಅದನ್ನು ಅನುಸರಿಸಿ ಸರಕಾರದ ಮಟ್ಟದಲ್ಲಿ ಪ್ರಯತ್ನ ನಡೆಸಿದ್ದರಿಂದ ಡಾಂಬರು ರಸ್ತೆ ನಿರ್ಮಾಣವಾಗಿದೆ. ಸೋಲಾರ್ ದಾರಿದೀಪ ಅಳವಡಿಸಲಾಗಿದೆ. ಕುಡಿಯುವ ನೀರಿನ ಕೊರತೆ ನಿವಾರಿಸಲಾಗಿದೆ. ಅಕ್ಷತಾ ದೇವಾಡಿಗರ ಕುಟುಂಬಕ್ಕೆ ಪರಿಹಾರ ವಿತರಿಸಲಾಗಿದೆ. ಇದೀಗ ರಾಜ್ಯ ಸಾರಿಗೆ ಸಂಸ್ಥೆಯ ಬಸ್ಸನ್ನು ಓಡಿಸಲಾಗುತ್ತಿದೆ. ಆ ಮೂಲಕ ಆಗ ನೀಡಿದ್ದ ಎಲ್ಲ ಭರವಸೆಗಳನ್ನು ಈಡೇರಿಸಲಾಗಿದೆ ಎಂದು ಶಾಸಕ ಕೆ. ಗೋಪಾಲ ಪೂಜಾರಿ ಹೇಳಿದರು. ಬೈಂದೂರು ಪ್ರಥಮ ದರ್ಜೆ ಕಾಲೇಜು ಮಾರ್ಗವಾಗಿ ಹೇನಬೇರು ಮತ್ತು ಕುಂದಾಪುರ ನಡುವೆ ಓಡಾಡಲಿರುವ ರಾಜ್ಯ ಸಾರಿಗೆ ಸಂಸ್ಥೆಯ ಬಸ್ಸನ್ನು ಅವರು ಸೋಮವಾರ ಉದ್ಘಾಟಿಸಿ, ಮಾತನಾಡಿದರು. ಎಲ್ಲರನ್ನು ಸ್ವಾಗತಿಸಿದ ಸಂಸ್ಥೆಯ ಕುಂದಾಪುರ ಡೀಪೊ ಮ್ಯಾನೇಜರ್ ಎಸ್. ತಾರಾನಾಥ್ ಕುಂದಾಪುರ ಶಿರೂರು ನಡುವೆ ಚಲಿಸುವ ಈ ಬಸ್…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಹೆರಿಗೆಯಾಗುವ ಮೊದಲು ಆರೋಗ್ಯವಂತವಾಗಿದ್ದ ಗರ್ಭಿಣಿ ಹಾಗೂ ಸಹಜ ಬೆಳವಣಿಗೆ ಹೊಂದಿದ್ದ ಮಗು ಹೆರಿಗೆ ಸಮಯದಲ್ಲಿ ಮೃತಪಟ್ಟಿರುವ ಬಗ್ಗೆ ಮಹಿಳೆಯ ಸಂಬಂಧಿಗಳು ಆಕ್ರೋಶ ವ್ಯಕ್ತಪಡಿಸಿದ ಘಟನೆ ಕುಂದಾಪುರದ ಸರಕಾರಿ ಆಸ್ಪತ್ರೆಯಲ್ಲಿ ನಡೆದಿದೆ. ಹೆರಿಗೆ ವೇಳೆ ಶಿಶುವಿನ ಸಾವು ಸಂಭವಿಸಲು ವೈದ್ಯರ ನಿರ್ಲಕ್ಷವೇ ಕಾರಣ ಎಂದು ಸಂಬಂಧಿಗಳು ಆರೋಪಿಸಿದ್ದಾರೆ. ತಾಲೂಕಿನ ಇಡೂರು-ಕುಂಜ್ಞಾಡಿಯ ಮಂಜುಳಾ ಆಚಾರ್ ಎಂಬವರು ಕಳೆದ ಒಂದೂವರೆ ವರ್ಷಗಳ ಹಿಂದೆ ತೀರ್ಥಹಳ್ಳಿಯ ಕೋಣಂದೂರಿನಲ್ಲಿ ಕಾರ್ಪೆಂಟರ್ ಆಗಿರುವ ಗಣೇಶ್ ಆಚಾರ್ ಎಂಬವರನ್ನು ವಿವಾಹವಾಗಿದ್ದು ಚೊಚ್ಚಲ ಗರ್ಭಿಣಿಯಾಗಿದ್ದ ಅವರನ್ನು ಭಾನುವಾರ ತಡರಾತ್ರಿ ಅವರಿಗೆ ನೋವು ಕಾಣಿಸಿಕೊಂಡಿದ್ದು ಆ ಕೂಡಲೇ ಅವರನ್ನು ಕುಂದಾಪುರದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಸುಮಾರು ಮೂರು ಗಂಟೆ ವೇಳೆಗೆ ವಿಪರೀತ ನೋವು ಕಾಡಿದರೂ ರಾತ್ರಿ ಡ್ಯೂಟಿಯಲ್ಲಿದ್ದ ದಾದಿ ಮಾತ್ರವೇ ಮಂಜುಳಾರ ನೋಡಿಕೊಂಡಿದ್ದಳೆನ್ನಲಾಗಿದೆ. ಕುಂದಾಪ್ರ ಡಾಟ್ ಕಾಂ ಸುದ್ದಿ. ಬೆಳಿಗ್ಗೆ ಸುಮಾರಿಗೆ ಬಂದ ಹೆರಿಗೆ ವೈದ್ಯ ಚಂದ್ರ ಮರಕಲ ಅವರು ಮಂಜುಳಾರನ್ನು ಪರೀಕ್ಷಿಸಿ ಕೂಡಲೇ ಶಸ್ತ್ರ ಚಿಕಿತ್ಸೆ ಒಳಪಡಿಸಿದರೂ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ರಂಗಭೂಮಿ ಕಲಾವಿದ ಹನಮಂತ ಪೂಜಾರ್ ಅವರ ನಿರ್ದೇಶನದಲ್ಲಿ ತಯಾರಾಗುತ್ತಿರುವ ಹೊಸ ಚಿತ್ರ ‘ಆಯ್ಕೆ’ಗೆ ನಟ, ನಟಿಯರು ಬೇಕಾಗಿದ್ದು, ಬೈಂದೂರಿನ ಲಾವಣ್ಯ ರಂಗಮನೆಯಲ್ಲಿ ಕಲಾವಿದರ ಆಡಿಷನ್ ನಡೆಯಲಿದೆ. ಜೂನ್ ೧೪ ಮತ್ತು ೧೫ರ ಸಂಜೆ ೪ಗಂಟೆಯಿಂದ ಇತ್ತಿಚಿನ ಭಾವಚಿತ್ರದೊಂದಿಗೆ ಆಸಕ್ತ ಕಲಾವಿದರು ಸಂದರ್ಶಿಸುವಂತೆ ಕೋರಲಾಗಿದೆ. ಮಾಹಿತಿಗೆ 9686661618 ಸಂಪರ್ಕಿಸಬಹುದು.
ಕುಂದಾಪ್ರ ಡಾಟ್ ಕಾಂ ಸುದ್ದಿ ಬೈಂದೂರು: ಸ್ಟೇಟ್ ಬ್ಯಾಂಕ್ ಆಫ್ ಮೈಸೂರು ಯಡ್ತರೆ ಶಾಖೆಯಲ್ಲಿ ಗ್ರಾಮೀಣ ಭಾಗದ ಗ್ರಾಹಕರ ಅನುಕೂಲಕ್ಕಾಗಿ ವಿಶೇಷ ತಂತ್ರಜ್ಷಾನ ಅಳವಡಿಸಿದ ಇ-ಟಚ್‌ನ್ನು ಬ್ಯಾಂಕಿನ ವ್ಯವಸ್ಥಾಪಕ ನಿರ್ದೇಶಕ ಎನ್. ಕೆ. ಚಾರಿ ಸೋಮವಾರ ಲೋಕಾರ್ಪಣೆಗೊಳಿಸಿದರು. ನಂತರ ಮಾತನಾಡಿದ ಅವರು, ನಮ್ಮ ಬ್ಯಾಂಕಿನ ಗ್ರಾಹಕರಲ್ಲದೇ ಉಳಿದ ಬ್ಯಾಂಕುಗಳ ಗ್ರಾಹಕರೂ ಇದರ ಪ್ರಯೋಜನ ಪಡೆಯಬಹುದಾಗಿದೆ. ಉಡುಪಿಯಿಂದ ಭಟ್ಕಳದ ವರೆಗಿನ ಸುಮಾರು ೯೦ ಕಿ.ಮಿ ವ್ಯಾಪ್ತಿಯಲ್ಲಿ ಈ ವ್ಯವಸ್ಥೆಯಿಲ್ಲ. ಇದರಿಂದ ಸುಲಭ ವಿಧಾನದಿಂದ ಬ್ಯಾಂಕಿನ ವ್ಯವಹಾರ ಮಾಡಬಹುದಾಗಿದೆ. ಬದಲಾವಣೆಗೆ ತಕ್ಕಂತೆ ಗ್ರಾಹಕರನ್ನು ಸ್ಪಂದಿಸಲು ಇದು ಸಹಕಾರಿಯಾಗಿದ್ದು, ದಿನದ ೨೪ ಗಂಟೆಯೂ ಕಾರ್ಯನಿರ್ವಹಿಸುತ್ತದೆ. ಎಲ್ಲರೂ ಇದರ ಉಪಯೋಗ ಪಡೆಯುವಂತಾಗಬೇಕು ಎಂದರು. ಬ್ಯಾಂಕುಗಳನ್ನು ವೀಲಿನಗೊಳಿಸುವ ಕೇಂದ್ರ ಸರಕಾರದ ಯೋಜನೆ ಕುರಿತು ಸುದ್ಧಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಚಾರಿ, ಇದೊಂದು ಉತ್ತಮ ವ್ಯವಸ್ಥೆಯಾಗಿದ್ದು, ಗ್ರಾಹಕ ಹಾಗೂ ಸರಕಾರದ ವೆಚ್ಚ ಕಡಿತಗೊಳಿಸಬಹುದು. ಒಬ್ಬರ ಖಾತೆ ಹಲವಾರು ಬ್ಯಾಂಕುಗಳಲ್ಲಿರುತ್ತದೆ. ಇದರ ಏಕೀಕರಣದಿಂದ ನಿರ್ವಹಣೆಗಾಗಿ ತಗಲುವ ಖರ್ಚು ಹಾಗೂ ಅನಗತ್ಯವಾಗಿ ವ್ಯಯಿಸುವ…
▪ ಜಿ. ಸುರೇಶ್ ಪೇತ್ರಿ | ಕುಂದಾಪ್ರ ಡಾಟ್ ಕಾಂ ಸಂದರ್ಶನ ಬಡಗುತಿಟ್ಟು ಯಕ್ಷರಂಗ ಕಂಡ ಅಪ್ರತಿಮ ಕಲಾವಿದರಲ್ಲಿ ತೀರ್ಥಹಳ್ಳಿ ಗೋಪಾಲ ಆಚಾರ್ಯರು ಒಬ್ಬರು. ಯಕ್ಷಗಾನ ಕ್ಷೇತ್ರದಲ್ಲಿ ಬಿರುಗಾಳಿ ಎಬ್ಬಿಸಿದ ಮಹಾನ್ ಕಲಾವಿದ. ಇಳಿವಯಸಿನಲ್ಲಿಯೂ ದಣಿವು ಅರಿಯದ ಚಿರಯುವಕ. ರಂಗಕ್ಕೆ ಅಡಿ ಇಡುತ್ತಲೆ ಮಿಂಚಿನ ಸಂಚಾರ. 60 ರ ಅಭಿಮನ್ಯುನಾಗಿ ವೇಷಕಟ್ಟಿದರೂ 20 ರ ಅಭಿಮನ್ಯುನಾಗಿ ಅಭಿಮಾನಿ ವರ್ಗದವರಿಗೆ ಸಿಡಿಲಮರಿಯಾಗಿ ಕಾಣಿಸಿಕೊಳ್ಳುವ ಯಕ್ಷರಂಗದ ಅಗ್ರಣಿ. ಮಲೆನಾಡಿನ ತೀರ್ಥಹಳ್ಳಿಯ ಕುರುವಳ್ಳಿಯಲ್ಲಿ ವಾಸುದೇವ ಆಚಾರ್ಯ ಹಾಗೂ ಸುಲೋಚನಾ ದಂಪತಿಗಳ 5 ಮಕ್ಕಳಲ್ಲಿ ಎರಡನೆಯವರು. ತನ್ನ ಮೂಲ ಕಸುಬಾದ ಬಡಗಿ ವೃತ್ತಿಯನ್ನು ಬಿಟ್ಟು ಬಡಗುತಿಟ್ಟಿನ ಯಕ್ಷಗಾನವನ್ನು ಆರಿಸಿಕೊಂಡರು. ಊರು ತೀರ್ಥಹಳ್ಳಿಯಾದರೂ ಯಕ್ಷರಂಗದ ಹಾದಿಯನ್ನು ಆಯ್ಕೆ ಮಾಡಿಕೊಂಡದು ಯಕ್ಷಕಾಶಿ ಎನಿಸಿಕೊಂಡ ಕುಂದಾಪುರವನು. ಬೈಂದೂರಿನ ಸಮೀಪದ ನಾಯಕನಕಟ್ಟೆಯಲ್ಲಿ ವಾಸವಾಗಿರುವ ತೀರ್ಥಹಳ್ಳಿ ಯವರು ಓದಿದ್ದು 3ನೇ ತರಗತಿ ಆದರೂ ಅವರ ವಾಗ್ಭಂಢಾರ ಅಪಾರ. ಯಕ್ಷರಂಗದ ಒಂದೊಂದೇ ಮೆಟ್ಟಿಲೇರಿ ಅದ್ಭುತ ನೃತ್ಯ,ಲಯಬದ್ಧ ಹೆಜ್ಜೆಗಾರಿಕೆ ಸಭ್ಯ ಹಾಗೂ ಸುಸ್ಪಷ್ಟ ಮಾತುಗಾರಿಕೆ ಹೀಗೆ ಅಳೆಯಹೊರಟರೆ ಅವರೊಬ್ಬ ಯಕ್ಷರಂಗದ ಧ್ರುವತಾರೆ. ಕುಂದಾಪ್ರ…
ಕುಂದಾಪ್ರ ಡಾಟ್ ಕಾಂ ಸುದ್ದಿ ಕುಂದಾಪುರ: ಸಮಾಜದಲ್ಲಿ ಬ್ರಾಹ್ಮಣರನ್ನು ಹೀಗೆಳೆಯುವವರಿಗೆ ಸಂಘಟನೆ ಮೂಲಕ ಉತ್ತರ ನೀಡಬೇಕಿದ್ದು, ಸಂಘಟನೆ ಸಶಕ್ತವಾಗಿದ್ದರೆ ಮಾತ್ರ ಸಾಧ್ಯ. ಬ್ರಾಹ್ಮಣರು ಜಾಗೃತರಾಗಿ ಸಂಘಟನೆ ಮಹತ್ವ ಅರ್ಥಮಾಡಿಕೊಳ್ಳಬೇಕು ಎಂದು ಉಡುಪಿ ಬ್ರಾಹ್ಮಣ ಪರಿಷತ್ ಉಪಾಧ್ಯಕ್ಷ ಮಂಜುನಾಥ ಉಪಾಧ್ಯಾಯ ಹೇಳಿದ್ದಾರೆ. ಕುಂದಾಪುರ ತಾಲೂಕ್ ದ್ರಾವಿಡ ಬ್ರಾಹ್ಮಣ ಪರಿಷತ್, ಮಹಿಳಾ ವೇದಿಕೆ ಮತ್ತು ಕುಂದಾಪುರ ವಲಯ ಆಶ್ರಯದಲ್ಲಿ ಹಂಗಳೂರು ಶ್ರೀ ಅನಂತಪದ್ಮನಾಭ ಸಭಾಂಗಣದಲ್ಲಿ ನಡೆದ ತಾಲೂಕ್ ವಿಪ್ರ ಮಹಿಳಾ ಸಮಾವೇಶ ಸಮಾರೋಪದಲ್ಲಿ ಮಾತನಾಡಿದರು. ಬ್ರಾಹ್ಮಣತ್ವ ಹಿಂದೂ ಸಂಸ್ಕೃತಿ ಪ್ರತೀಕವಾಗಿದ್ದು, ಬ್ರಾಹ್ಮಣ್ಯ ಅಳಿದರೆ ಹಿಂದೂ ಸಂಸ್ಕೃತಿಯೂ ಅಳಿಯುತ್ತದೆ. ಸಂಸ್ಕೃತಿ ಉಳಿಸುವ ನಿಟ್ಟಿನಲ್ಲಿ ಕಾರ್ಕಳ, ಕುಂದಾಪುರ ಮತ್ತು ಉಡುಪಿ ತಾಲೂಕಿನ ಬ್ರಾಹ್ಮಣ ಮಕ್ಕಳ ಸಮಾವೇಶ ನಡೆಸಿ, ಸಾಂಸ್ಕಾರ ಉಳಿಸುವ ಸಂಸ್ಕೃತಿ ಕಲಿಸಲಾಗುತ್ತದೆ. ಹಾಗೆ ಜಿಲ್ಲೆಯಲ್ಲಿ ಮೂರು ತಾಲೂಕ್ ಸೇರಿಸಿಕೊಂಡು ಬ್ರಹತ್ ವಿಪ್ರ ಸಮಾವೇಶ ನಡೆಸಲಾಗುತ್ತದೆ ಎಂದು ಹೇಳಿದರು. ಕುಂದಾಪುರ ತಾಲೂಕ್ ದ್ರಾವಿಡ ಬ್ರಾಹ್ಮಣ ಪರಿಷತ್ ಅಧ್ಯಕ್ಷ ಗಣೇಶ್ ರಾವ್ ಅಧ್ಯಕ್ಷತೆ ವಹಿಸಿದ್ದರು. ಉಡುಪಿ ಬ್ರಾಹ್ಮಣ ಪರಿಷತ್…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಉಡುಪಿ ಧರ್ಮ ಪ್ರಾಂತ್ಯದ ಬಿಶಪ್ ವಂ| ಡಾ|ಜೆರಾಲ್ಡ್ ಐಸಾಕ್ ಲೋಬೊ ಇವರು ಅಧಿಕೃತವಾಗಿ ಕುಂದಾಪುರ ಹೋಲಿ ರೋಜರಿ ಚರ್ಚ್ಗೆ ಭೇಟಿ ನೀಡಿದರು. ಪ್ರಾರ್ಥನ ವಿಧಿ ನೆರವೇರಿಸಿ ಮಾತನಾಡಿದ ಅವರು, ದೇವರು ನಮ್ಮನ್ನು ಸೃಷ್ಟಿಸಿದ್ದು ಇಲ್ಲಿ ನೀತಿವಂತರಾಗಿ ಬಾಳುವಂತೆ. ಪ್ರಾಪಂಚಿಕವಾದ ಹಣ ಆಸ್ತಿ, ಚಿನ್ನಾಭರಣಗಳನ್ನು ಕೂಡಿಟ್ಟರೆ ಸಾಲದು, ಸತ್ಯ ನೀತಿಯಿಂದ ಜೀವಿಸುತ್ತಾ, ದಯಾಪರ ಕೆಲಸಗಳನ್ನು ಮಾಡುತ್ತ ಪುಣ್ಯವನ್ನು ಸಂಪಾದಿಸಿಕೊಳ್ಳಬೇಕಿದೆ. ಅದುವೇ ನಿಮ್ಮನ್ನು ಸ್ವರ್ಗರಾಜ್ಯಕ್ಕೆ ಕೊಂಡಯುವುದು ಎಂದು ಅವರು ಸಂದೇಶ ನೀಡಿದರು ಪ್ರಧಾನ ಧರ್ಮಗುರು ವಂ|ಅನಿಲ್ ಡಿಸೋಜಾ ಬಿಶಪರಿಗೆ ಬೆಳಗಿಸದ ಮುಂಬತ್ತಿ ಹಾಗೂ ಶಿಲುಬೆಯನ್ನು ನೀಡಿ ಗೌರವಿಸಿದರು. ಬಳಿಕ ಹಲವಾರು ಪ್ರಾರ್ಥನ ವಿಧಿಗಳನ್ನು ನೆಡಸಲಾಯಿತು. ಕೊನೆಗೆ ಬಿಶಪರು ಧರ್ಮಕೇಂದ್ರದ ಸಮಾಧಿಗೆ ಭೇಟಿ ಮಾಡಿ ಅಲ್ಲಿ ಸಮಾಧಿ ಮಾಡಿದವರಿಗೆ ಮುಕ್ತಿ ದೊರಕಲು ಪವಿತ್ರ ಜಲವನ್ನು ಪ್ರೋಕ್ಷಿಸಿ, ವಿಶೇಷವಾದ ಪ್ರಾರ್ಥನೆಯನ್ನು ಸಲ್ಲಿಸಿ ಅಶಿರ್ವದಿಸಿದರು. ಈ ಸಂದರ್ಭದಲ್ಲಿ ಸಹಾಯಕ ಧರ್ಮಗುರು ವಂ| ಜೆರಾಲ್ಡ್ ಸಂದೀಪ್ ಡಿಸೋಜಾ, ಪ್ರಾಂಶುಪಾಲ ಧರ್ಮಗುರು ವಂ| ಪ್ರವೀಣ್ ಅಮ್ರತ್…
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಸಮೀಪದ ಬಿಜೂರು ರಾ.ಹೆ-66ರ ಬಸ್ ನಿಲ್ದಾಣದಲ್ಲಿ ಮಧ್ಯಾಹ್ನ ಸಂಭವಿಸಿದ ಸರಣಿ ಅಪಘಾತದಲ್ಲಿ ಖಾಸಗಿ ಬಸ್ಸು, ಮಾರುತಿ ಸುಜುಕಿ, ಟಾಟಾ ಇಂಡಿಕಾ ಕಾರು ಹಾಗೂ ಬೊಲೆರೋ ವಾಹನ ಒಂದಕ್ಕೊಂದು ಢಿಕ್ಕಿ ಹೊಡೆದಿರುವುದಲ್ಲದೇ ಮೂರು ವಾಹನಗಳು ಜಖಂಗೊಂಡ ಘಟನೆ ನಡೆದಿದೆ. ಬಸ್ ಹಾಗೂ ಎಲ್ಲಾ ವಾಹನದಲ್ಲಿದ್ದ ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಬಂದೂರು ಕಡೆಗೆ ಸಂಚರಿಸುತ್ತಿದ್ದ ಖಾಸಗಿ ಬಸ್ಸೊಂದು ಬಿಜೂರಿನ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರನ್ನು ಇಳಿಸಲು ನಿಲ್ಲಿಸಿದಾಗ ಬಸ್ಸಿನ ಹಿಂದೆಯೇ ಇದ್ದ ಬಳ್ಳಾಪುರದಿಂದ ಬರುತ್ತಿದ್ದ ಮಾರುತಿ ಸುಜುಕಿ ಕಾರಿನ ಚಾಲಕ ಒಮ್ಮೆಲೇ ಬ್ರೇಕ್ ಹಾಕಿ ನಿಲ್ಲಿಸಿದ್ದಾನೆ. ಇದರ ಹಿಂದೆಯೇ ಇದ್ದ ಟಾಟಾ ಇಂಡಿಕಾ ಮುಂದಿನ ಕಾರಿಗೆ ಡಿಕ್ಕಿ ಹೊಡೆಯಿತು ಪರಿಣಾಮ ಮಾರುತಿ ಸುಜುಕಿ ಕಾರು ಕೂಡಾ ನಿಂತಿದ್ದ ಬಸ್ಸಿಗೆ ಡಿಕ್ಕಿಹೊಡೆದಿತ್ತು., ಇದೇ ವೇಳೆ ಇಂಡಿಯಾ ಕಾರಿನ ಹಿಂದಿದ್ದ ಬುಲೇರೋ ವಾಹನವೂ ಡಿಕ್ಕಿ ಹೊಡೆದು ಮೂರು ವಾಹನಗಳು ಜಖಂಗೊಂಡಿದೆ. ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಖಾಸಗಿ ಬಸ್ಸು ಹಾಗೂ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೆಂಗಳೂರು: ಕರ್ನಾಟಕದ ನಾಲ್ಕು ರಾಜ್ಯಸಭಾ ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್‌ನ ೩ ಮತ್ತು ಬಿಜೆಪಿಯ ಓರ್ವ ಅಭ್ಯರ್ಥಿ ಗೆಲುವು ಸಾಧಿಸಿದ್ದಾರೆ. ಕಾಂಗ್ರೆಸ್ ಪಕ್ಷದಿಂದ ಆಸ್ಕರ್ ಫೆರ್ನಾಂಡಿಸ್, ಜೈರಾಮ್ ರಮೇಶ್ ಹಾಗೂ ಕೆಸಿ ರಾಮಮೂರ್ತಿ ಗೆಲುವು ಸಾಧಿಸಿದ್ದರೇ ಬಿಜೆಪಿಯ ನಿರ್ಮಲಾ ಸೀತಾರಾಮನ್ ಗೆಲುವು ಸಾಧಿಸಿದ್ದಾರೆ. ಆಸ್ಕರ್ ಗೆಲುವು, ಕರಾವಳಿ ನಾಯಕರುಗಳಿಂದ ಅಭಿನಂದನೆ: ಕಾಂಗ್ರೆಸ್ ಪಕ್ಷದ ಹಿರಿಯ ರಾಜಕೀಯ ಮುತ್ಸದ್ಧಿ ಆಸ್ಕರ್ ಫೆರ್ನಾಂಡಿಸ್ ಸತತ ನಾಲ್ಕನೇ ಭಾರಿಗೆ ರಾಜ್ಯಸಭೆಗೆ ಆಯ್ಕೆಯಾಗಿರುವುದಕ್ಕೆ ಕರಾವಳಿಯ ಕಾಂಗ್ರೆಸ್ ಪಕ್ಷದ ನಾಯಕರು ಅಭಿನಂದಿಸಿದ್ದಾರೆ. ಸಚಿವ ವಿನಯಕುಮಾರ್ ಸೊರಕೆ, ರಮಾನಾಥ ರೈ, ಬೈಂದೂರು ಶಾಸಕ ಗೋಪಾಲ ಪೂಜಾರಿ, ಉಡುಪಿ ಶಾಸಕ ಪ್ರಮೋದ್ ಮಧ್ವರಾಜ್, ವಿಧಾನ ಪರಿಷತ್ ಸದಸ್ಯ ಪ್ರತಾಪಚಂದ್ರ ಶೆಟ್ಟಿ, ಮಾಜಿ ಜಿ.ಪಂ ಅಧ್ಯಕ್ಷ ರಾಜು ಪೂಜಾರಿ ಸೇರಿದಂತೆ ಪಕ್ಷದ ವಿವಿಧ ಮುಖಂಡರು ಅಭಿನಂದಿಸಿದರು.
