ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ನಾಲ್ಕು ವೇದಗಳ ಸಾರವನ್ನು ಪಡೆದು ಅನಂದ ಮತ್ತು ಅರಿವನ್ನು ಮೂಡಿಸುವ ಸಲುವಾಗಿ ನಾಟ್ಯ, ನಾಟಕಗಳನ್ನು ಭರತನ ಮೂಲಕ ಸೃಷ್ಠಿಮಾಡಿಕೊಂಡ ಐದನೇ ವೇದವಾಗಿದೆ. ಇದರಲ್ಲಿ ಸಂತೋಷ ಹಾಗೂ ಜ್ಞಾನ ಎರಡೂ ಅಡಕವಾಗಿರುವುದರಿಂದ ರಂಗಕಲೆಗಳನ್ನು ಪಂಚಮವೇದ ಎಂದೂ ಕರೆಯುತ್ತಾರೆ ಎಂದು ರಂಗಕರ್ಮಿ, ರಂಗನಿರ್ದೇಶಕ ಶಿರಸಿ ಡಾ. ಶ್ರೀಪಾದ ಭಟ್ ಹೇಳಿದರು. ಬೈಂದೂರು ಶಾರದಾ ವೇದಿಕೆಯಲ್ಲಿ ಸ್ಥಳೀಯ ಸುರಭಿ ಸಂಸ್ಥೆ ನೇತೃತ್ವದಲ್ಲಿ ನಡೆಯುವ ಮೂರು ದಿನಗಳ ಸಾಂಸ್ಕೃತಿಕ ರಂಗವೈಭವ ’ರಂಗ ಸುರಭಿ’ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು. ವ್ಯಾವಹಾರಿಕೆ ಕಣ್ಣು ಆದಾಯಗಳನ್ನಷ್ಟೇ ನೋಡಿದರೆ, ಕಲಾತ್ಮಕ ಕಣ್ಣು ರಸಸ್ವಾದದ ಜತೆಗೆ ರಮಣೀಯತೆಯನ್ನು ಅನುಭವಿಸುತ್ತದೆ. ಹಾಗೂ ಹೃದಯದಲ್ಲಿ ಭಾವನೆ ಸ್ಪುರಿಸುತ್ತದೆ. ತಾಯಿ ಮಗುವಿಗೆ ಜೋಗುಳ ಹಾಡುತ್ತಾ ಆ ಮೂಲಕ ತಾಯಿ, ಮಗುವಿನ ಆತ್ಮದ ರೂಪವನ್ನು ಅಂದವಾಗಿಸುತ್ತಾಳೆ. ಆದರೆ ಇಂದಿನ ಪರಿಸ್ಥಿತಿಯಲ್ಲಿ ಇಂತಹ ಅನುಭವ ಕಡಿಮೆಯಾಗುತ್ತಿದ್ದು, ಈ ನಿಟ್ಟಿನಲ್ಲಿ ಯುವಜನತೆ ಯೋಚಿಸಬೇಕಾಗಿದೆ ಎಂದರು. ಶ್ರೀಸೇನೇಶ್ವರ ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ಚನ್ನಕೇಶವ ಉಪಾಧ್ಯಾಯ ರಂಗವೈಭವ…
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ. ಗಂಗೊಳ್ಳಿ : 12ನೇ ಶತಮಾನದಲ್ಲಿ ಕ್ರಾಂತಿಕಾರ ಬದಲಾವಣೆಯನ್ನು ತಂದ ಬಸವಣ್ಣನವರು ಜಾತ್ಯಾತೀತ ಸಮಾಜ ನಿರ್ಮಾಣ ಮಾಡಲು ಹೊರಟ ಮಹಾನ್ ದಾರ್ಶನಿಕ. ಸಾಮಾಜಿಕ ನ್ಯಾಯ, ಸಮಾನತೆ ಮತ್ತು ವಿಶ್ವ ಬಂಧುತ್ವದ ವಿಚಾರಗಳನ್ನು ಬಹಳ ಗಂಭೀರವಾಗಿ ಪ್ರತಿಪಾದಿಸಿದ ಬಸವಣ್ಣನವರ ತತ್ವಾದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡಾಗ ಸುಸ್ಥಿರವಾದ ಸಮಾನತೆಯ ಸಮಾಜ ನಿರ್ಮಾಣ ಮಾಡಲು ಸಾಧ್ಯವಿದೆ ಎಂದು ಬಸ್ರೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಧರ್ಮದರ್ಶಿ, ಕುಂದಾಪುರ ತಾಲೂಕು ಜನಜಾಗೃತಿ ವೇದಿಕೆ ಅಧ್ಯಕ್ಷ ಬಿ.ಅಪ್ಪಣ್ಣ ಹೆಗ್ಡೆ ಹೇಳಿದರು. ಅವರು ಮೇಲ್‌ಗಂಗೊಳ್ಳಿಯ ಡಾ.ಬಿ.ಆರ್.ಅಂಬೇಡ್ಕರ್ ಸಭಾಭವನದಲ್ಲಿ ಶ್ರೀ ಬಸವೇಶ್ವರ ದೇವಸ್ಥಾನ ಬಾವಿಕಟ್ಟೆ ಮೇಲ್‌ಗಂಗೊಳ್ಳಿ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ತ್ರಾಸಿ ವಲಯದ ಮೇಲ್‌ಗಂಗೊಳ್ಳಿ ಮತ್ತು ಪಂಚಗಂಗಾವಳಿ ಒಕ್ಕೂಟದ ಆಶ್ರಯದಲ್ಲಿ ಜರಗಿದ ಬಸವ ಜಯಂತಿ ಆಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಸನ್ಮಾನ ಸ್ವೀಕರಿಸಿ ಮಾತನಾಡಿದರು. ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ವಿಧಾನಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಅವರು, ಆದರ್ಶದ ದಾರಿದೀಪವಾಗಿರುವ ಅಪ್ಪಣ್ಣ ಹೆಗ್ಡೆಯವರು ಉಡುಪಿ ಜಿಲ್ಲೆಯ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ತಾಲೂಕಿನ ನೇರಳಕಟ್ಟೆಯ ಖ್ಯಾತ ಉದ್ಯಮಿಯೋರ್ವರು ತನ್ನ ಅಂಗಡಿಯ ಗೋದಾಮಿನಲ್ಲಿ ಆತ್ಮಹತ್ಯೆಗೆ ಶರಣಾದ ಘಟನೆ ವರದಿಯಾಗಿದೆ. ನೇರಳಕಟ್ಟೆ ನಿವಾಸಿ ಬಾಲಕೃಷ್ಣ ಬಾಳಿಗಾ ಅವರ ಪುತ್ರ ಶ್ರೀಪತಿ ಬಾಳಿಗಾ (40) ನೇಣು ಬಿಗಿದು ಮೃತಪಟ್ಟವರು. ಘಟನೆಯ ವಿವರ: ಇಂದು ಬೆಳಿಗ್ಗೆ ನೆರಳಕಟ್ಟೆಯ ತಮ್ಮ ಅಂಗಡಿಗೆ ಬಂದಿದ್ದ ಶ್ರೀಪತಿ ಎಂದಿನಂತೆ ಸಹಜವಾಗಿ ವ್ಯವಹಾರ ನಡೆಸಿದ್ದರು. ಮಧ್ಯಾಹ್ನದ ಸುಮಾರಿಗೆ ಅಂಗಡಿಯ ನೌಕರನೋರ್ವ ಅಡಿಕೆ ಚೀಲವನ್ನು ಹೊತ್ತು ಪಕ್ಕದಲ್ಲಿದ್ದ ಗೋದಾಮಿಗಿಡಲು ತೆರಳಿದಾಗ ಅಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಶ್ರೀಪತಿ ಅವರ ದೇಹ ಪತ್ತೆಯಾಗಿತ್ತು. ಕೂಡಲೇ ಅವರನ್ನು ಆಸ್ಪತ್ರೆಗೆ ಸಾಗಿಸಿದರಾದರೂ ಅಷ್ಟರಲ್ಲಿ ಪ್ರಾಣಪಕ್ಷಿ ಹಾರಿಹೋಗಿತ್ತು. ಕುಂದಾಪ್ರ ಡಾಟ್ ಕಾಂ ಸುದ್ದಿ. ನೇರಳಕಟ್ಟೆಯಲ್ಲಿ ಸ್ವಂತ ಅಂಗಡಿಯನ್ನು ಹೊಂದಿದ್ದ ಶ್ರೀಪತಿ ಬಾಳಿಗ ವಾಣಿಜ್ಯ ಕೃಷಿ ಉತ್ಪನ್ನಗಳ ವ್ಯವಹಾರ ಹೊಂದಿದ್ದರು. ಸ್ವಂತ ಪರಿಶ್ರಮದಿಂದ ಯಶಸ್ವಿ ಉದ್ಯಮಿಯಾಗಿ ಬೆಳೆದಿದ್ದ ಶ್ರೀಪತಿಯವರು ಇತ್ತೀಚೆಗೆ ಭೂ ವ್ಯವಹಾರದಲ್ಲೂ ತಮ್ಮನ್ನು ತೊಡಗಿಸಿಕೊಂಡಿದ್ದರೆನ್ನಲಾಗಿದೆ. ಇವರ ಕುರಿತು ನೆರಳಕಟ್ಟೆ ಪರಿಸರದಲ್ಲಿಯೂ ಒಳ್ಳೆಯ ಅಭಿಪ್ರಾಯವಿದ್ದು, ಬಡವರ ಕಷ್ಟ ಕಾರ್ಪಣ್ಯಗಳಿಗೆ ಸ್ಪಂದಿಸುತ್ತಿದ್ದರೆನ್ನಲಾಗಿದೆ. ಕುಟುಂಬದೊಂದಿಗೂ ಉತ್ತಮವಾಗಿದ್ದ ಇವರು…
ಕುಂದಾಪ್ರ ಡಾಟ್ ಕಾಂ ಸಂದರ್ಶನ ಕುಂದಾಪುರ: ಆತನದ್ದು ಕುಂದಾಪುರ ಸಮೀಪದ ಮಣೂರು ಎಂಬ ಗ್ರಾಮೀಣ ಪ್ರದೇಶದ ಕೃಷಿ ಕುಟುಂಬ. ಓದಿದ್ದು ಕನ್ನಡ ಮಾಧ್ಯಮ ಶಾಲೆಯಲ್ಲಿ. ಆದಾಗ್ಯೂ ಸತತ ಪ್ರಯತ್ನದ ಮೂಲಕ ಛಲ ಬಿಡದೇ ಯುಪಿಎಸ್‌ಸಿ ಪರೀಕ್ಷೆ ಬರೆದು ೪೦೮ನೇ ರ‍್ಯಾಂಕ್‌ನೊಂದಿಗೆ ಐಎಎಸ್ ಪಾಸ್ ಮಾಡಿದ್ದಾರೆ ಮಣೂರಿನ ಯುವಕ ಹರಿಕೃಷ್ಣ ಮಯ್ಯ. ಕೋಟ ಗ್ರಾಮದ ಮಣೂರಿನ ಮಾಧವ ಮಯ್ಯ ಹಾಗೂ ಲಲಿತ ಮಯ್ಯ ದಂಪತಿಗಳ ಪುತ್ರರಾದ ಹರಿಕೃಷ್ಣ ಮಯ್ಯ ಈ ಪರಿಸರದಲ್ಲೇ ಮೊದಲ ಭಾರಿಗೆ ಐಪಿಎಸ್ ಪಾಸ್ ಮಾಡಿ ತನ್ನೂರಿಗೆ ಕೀರ್ತಿ ತಂದಿದ್ದಾರೆ. ತಮ್ಮ ಪ್ರಾಥಮಿಕ ಶಿಕ್ಷಣವನ್ನು ಮಣೂರು ರಾಮಪ್ರಸಾದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ, ಹೈಸ್ಕೂಲ್ ಹಾಗೂ ಪದವಿಪೂರ್ವ ಶಿಕ್ಷಣವನ್ನು ಕೋಟ ವಿವೇಕಾ ಜೂನಿಯರ್ ಕಾಲೇಜಿನಲ್ಲಿ, ಬಿಎ ಪದವಿಯನ್ನು ಬೆಂಗಳೂರಿನ ಶೇಶಾದ್ರಿಪುರಂ ಪದವಿ ಕಾಲೇಜಿನಲ್ಲಿ ಮುಗಿಸಿದ್ದ ಅವರು ಮುಂದೆ ಮನಶಾಸ್ತ್ರದಲ್ಲೇ ಎಮ್‌ಎಸ್ಸಿ ಪಡೆದು ಎರಡು ವರ್ಷ ನಿಮಾನ್ಸ್‌ನಲ್ಲಿ ಜೂನಿಯರ್ ರೀಸರ್ಚರ್ ಆಗಿ ಕೆಲಸ ಮಾಡಿದ್ದರು. ಕುಂದಾಪ್ರ ಡಾಟ್ ಕಾಂ. ನಂತರ ಪರೀಕ್ಷೆಗೆ ತಯಾರಿ ನಡೆಸುವ…
ಕುಂದಾಪ್ರ ಡಾಟ್ ಕಾಂ| ಕುಂದಾಪುರ ತಾಲೂಕಿನ ಬಂಟ್ವಾಡಿಯಲ್ಲಿ ನದಿಗೆ ಕಟ್ಟಲಾಗಿರುವ ವೆಂಟೆಡ್ ಡ್ಯಾಂ ಮೋಡ ಮುಸುಕಿದ ವಾತಾವರಣದಲ್ಲಿ ಕಂಡದ್ದು ಹೀಗೆ. ಚಿತ್ರ: ಚಂದ್ರ ಕೆ. ಹೆಮ್ಮಾಡಿ
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಗೌಡ ಸಾರಸ್ವತ ಬ್ರಾಹ್ಮಣ ಸಮಾಜದ ಉಪ್ಪುಂದ ಶ್ರೀ ಲಕ್ಷ್ಮೀವೆಂಕಟರಮಣ ದೇವರ ದಿವ್ಯ ಸನ್ನಿಧಿಯಲ್ಲಿ ಸರ್ವ ಭಜಕವೃಂದ ಹಾಗೂ ಲೋಕಕಲ್ಯಾಣಾರ್ಥವಾಗಿ ಪ್ರಪ್ರಥಮ ಬಾರಿಗೆ ಮೇ.21ರ ಸಂಜೆ 6:46ರ ಗೊಧೋಳಿ ಲಗ್ನ ಶುಭ ಮುಹೂರ್ತದಲ್ಲಿ ಶ್ರೀ ಶ್ರೀನಿವಾಸ ಕಲ್ಯಾಣೋತ್ಸವ ನಡೆಯಲಿದೆ. ಶ್ರೀನಿವಾಸ ಕಲ್ಯಾಣೋತ್ಸವದ ಧಾರ್ಮಿಕ ಕ್ರಿಯಾಚರಣೆ ಅಂಗವಾಗಿ ಬೆಳಿಗ್ಗೆ ೭ಕ್ಕೆ ಉಭಯ ದೇವರಿಗೆ ಪೂಜೆಯ ನಂತರ ನಗರೋತ್ಸವ ಶ್ರೀನಿವಾಸ ಪದ್ಮಾವತಿ ದೇವರ ಆಗಮನ, ಸೀಮಂತ ಪೂಜೆ, ಸಾಮೂಹಿಕ ಕುಂಕುಮಾರ್ಚನೆ ಹಾಗೂ ಶ್ರೀವೆಂಕಟರಮಣ ಭಜನಾ ಮಂಡಳಿ ಮೂಡಬಿದಿರೆ ಇವರಿಂದ ಭಕ್ತಿಸಂಗೀತ ನಡೆಯಲಿದೆ. ಸಾಯಂಕಾಲ ವೇದಿಕೆಗೆ ಶ್ರೀ ವೆಂಕಟರಮಣನ ಆಗಮನ, ವಧೂ ನಿರೀಕ್ಷಣೆ, ಶ್ರೀ ಪದ್ಮಾವತಿಯ ಆಗಮನ, ಸ್ವಯಂವರ ಕಾರ್ಯ, ಅರಶಿನ-ಕುಂಕುಮ ಸಮರ್ಪಣೆ, ಧಾರೆಮಣಿ ಕಟ್ಟುವಿಕೆ, ಶ್ರೀನಿವಾಸ ದೇವರಿಗೆ ಮಧುಪರ್ಕ ಸಮರ್ಪಣೆ, ಮಹೂರ್ತ ನಿರೀಕ್ಷೆ, ಮಾಲಾಧಾರಣೆ, ಕನ್ಯಾದಾನ, ಕಂಕಣ, ಮಂಗಲಸೂತ್ರ ಧಾರಣೆ, ಚಿನ್ನಾಭರಣಾಧಿ ಕಪ್ಪ-ಕಾಣಿಕೆಗಳ ಸಮರ್ಪಣೆ, ಅಗ್ನಿ ಪ್ರತಿಷ್ಟಾಪೂರ್ವಕ ಪ್ರಧಾನ ಹೋಮ, ಪ್ರಸನ್ನ ಪೂಜೆ, ಅಷ್ಟಾವಧಾನ ಸೇವೆಗಳ ಬಳಿಕ ಕಲ್ಯಾಣೋತ್ಸವದ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ,ಮೇ12: ಕುಂದಾಪುರದ ಏಕೈಕ ಸಿತಾರ್ ವಿದ್ವಾನ್, ಅವಿನಾಶ್ ಮೆಡಿಕಲ್ಸ್ ನ ಪಾಲುದಾರ ಅವಿನಾಶ್ ಹೆಬ್ಬಾರ್(44) ಇಂದು ಸಂಜೆ ಹೃದಯಾಘಾತದಿಂದ ನಿಧನರಾಗಿದ್ದಾರೆ. ಆರೋಗ್ಯದಲ್ಲಿ ಅಸಮತೋಲನ ಕಾಣಿಸಿಕೊಂಡು ಆದರ್ಶ ಆಸ್ಪತ್ರೆಗೆ ದಾಖಲಾಗಿದ್ದ ಅವರು ಅಲ್ಲಿಯೇ ಕೊನೆಯುಸಿರೆಳೆದಿದ್ದಾರೆ. ಸರಳ, ಸಜ್ಜನಿಕೆಯ ವ್ಯಕ್ತಿತ್ವದ ಮೂಲಕ ಜನಾನುರಾಗಿಯಾಗಿದ್ದ ಅವಿನಾಶ್ ಹೆಬ್ಬಾರ್ ಅವರು ಶಾಸ್ತ್ರೀಯ ಸಂಗೀತದಲ್ಲಿ ಅಪಾರ ಒಲವುಳ್ಳವರಾಗಿದ್ದರು. ಅಪರೂಪದ ಸಿತಾರ್ ವಾದಕರಾಗಿ ಹಲವೆಡೆ ಸಂಗೀತ ಕಛೇರಿಗಳನ್ನು ನೀಡಿ ಅಪಾರ ಜನಮನ್ನಣೆ ಗಳಿಸಿದ್ದರು. ಕುಂದಾಪುರ ಸಂಗೀತ ಭಾರತಿ ಟ್ರಸ್ಟ್‌ನ ವಿಶ್ವಸ್ಥರಾಗಿ, ರೋಟರ್ಯಾಕ್ಟ್ ಅಧ್ಯಕ್ಷರಾಗಿ, ರೋಟರಿ ಕುಂದಾಪುರದ ಮಾಜಿ ಕಾರ್ಯದರ್ಶಿಯಾಗಿ, ಕಲಾಕ್ಷೇತ್ರ ಕುಂದಾಪುರ ಸಂಸ್ಥೆಯಲ್ಲಿ ಸಕ್ರೀಯರಾಗಿ ಹತ್ತು ಹಲವು ಸಂಘ ಸಂಸ್ಥೆಗಳಲ್ಲಿ ಸಕ್ರೀಯವಾಗಿ ತೊಡಗಿಸಿಕೊಂಡಿದ್ದರು. ತಂದೆಯೊಂದಿಗೆ ಸಂಗೀತ ಭಾರತಿ ಟ್ರಸ್ಟ್ ಮೂಲಕ ಕಾರ್ಯಕ್ರಮಗಳನ್ನು ಸಂಘಟಿಸಿ ಕುಂದಾಪುರಕ್ಕೆ ಹಲವು ಸಂಗೀತ ವಿದ್ವಾಂಸರನ್ನು ಕರೆಯಿಸುವಲ್ಲಿ ಶ್ರಮಿಸಿದ್ದರು. ಅವಿನಾಶ್ ಮೆಡಿಕಲ್ಸ್, ಹುಣ್ಸಮಕ್ಕಿಯಲ್ಲಿ ರಬ್ಬರ್ ಕೃಷಿ ಹಾಗೂ ಇನ್ನಿತರ ಉದ್ಯಮಗಳನ್ನು ತೊಡಗಿಕೊಂಡಿದ್ದರೂ ಸಮಾಜ ಸೇವೆಯಲ್ಲಿ ಮುಂಚೂಣಿಯಲ್ಲಿದ್ದರು. ಮೇ.15ರಂದು ಉಪ್ಪಿನಕುದ್ರು ಗೊಂಬೆಮನೆಯಲ್ಲಿ ಸ್ವತಃ ಸಂಗೀತ…
ಕುಂದಾಪ್ರ ಡಾಟ್ ಕಾಂ ವರದಿ ಕುಂದಾಪುರ: ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಅತ್ಯುನ್ನತ ಸೇವೆ ಸಲ್ಲಿಸುತ್ತಿರುವವರನ್ನು ಗುರುತಿಸಿ ನೀಡಲಾಗುತ್ತಿರುವ ಪ್ರತಿಷ್ಠಿತ ಆರ್ಯಭಟ ಅಂತಾರಾಷ್ಟ್ರೀಯ ಪ್ರಶಸ್ತಿಯು ಕುಂದಾಪುರ ತಾಲೂಕಿನ ಗೊಳಿಹೊಳೆ ಗ್ರಾಮ ಚುಚ್ಚಿಯ ದೀಪಕ್ ಶೆಟ್ಟಿ ಅವರಿಗೆ ಲಭಿಸಿದೆ. ಪ್ರಸ್ತತ ಕತಾರ್‌ನಲ್ಲಿ ವಾಸಿಸುತ್ತಿರುವ ದೀಪಕ್ ಶೆಟ್ಟಿ ಅವರ ಸಾಮಾಜಿಕ ರಂಗದ ಸೇವೆಯನ್ನು ಗುರುತಿಸಿ ಪ್ರಶಸ್ತಿಗೆ ಆಯ್ಕೆಮಾಡಲಾಗಿದೆ. ಕರ್ನಾಟಕ ಸಂಘ ಕತಾರ್‌ನ ಸಲಹಾ ಸಮಿತಿ ಅಧ್ಯಕ್ಷರಾಗಿರುವ ದೀಪಕ್ ಶೆಟ್ಟಿ, 2013-15ರ ಸಾಲಿನಲ್ಲಿ ಕತಾರ್ ಕರ್ನಾಟಕ ಸಂಘದ ಅಧ್ಯಕ್ಷರಾಗಿ, ಅದಕ್ಕೂ ಹಿಂದಿನ ಅವಧಿಯಲ್ಲಿ ಸಂಘದ ಕಾರ್ಯದರ್ಶಿಯಾಗಿ, ಕ್ರೀಡಾ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದರು. ಕಳೆದ ಒಂದು ದಶಕಗಳಿಂದ ಕತಾರಿನಲ್ಲಿ ನೆಲೆಸಿರುವ ಇವರು ಉದ್ಯೋಗದೊಂದಿಗೆ ತುಳುಕೂಟ, ಬಂಟರ ಸಂಘ, ಭಾರತೀಯ ಸಾಂಸ್ಕ್ರತಿಕ ಕೇಂದ್ರ, ಇಂಡಿಯನ್ ಕಮ್ಯುನಿಟಿ ಬೆನವೊಲಂಟ್ ಪೋರಮ್ ಮುಂತಾದ ಸಂಘ-ಸಂಸ್ಥೆಗಳಲ್ಲಿ ಸಕ್ರೀಯವಾಗಿ ಗುರುತಿಸಿಕೊಂಡವರು. ಕುಂದಾಪ್ರ ಡಾಟ್ ಕಾಂ. ಬಡ ಮಕ್ಕಳ ಹೃದಯ ಚಿಕಿತ್ಸೆಗೆ ಸಹಕಾರ, ಶಾಲೆ, ಬಡ ವಿದ್ಯಾರ್ಥಿಗಳ ವಿಧ್ಯಾಭ್ಯಾಸಕ್ಕೆ ಸಹಾಯ ಧನ ಹೀಗೆ ಹಲವು ತೆರನಾಗಿ ಸಾಮಾಜಿಕ,…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ನಿಟ್ಟೆ ಇಂಜಿನಿಯರಿಂಗ್ ಕಾಲೇಜಿನ ಕಂಪ್ಯೂಟರ್ ಸೈನ್ಸ್ ವಿಭಾಗದಲ್ಲಿ ವ್ಯಾಸಂಗ ಮಾಡುತ್ತಿದ್ದ ಕುಂದಾಪುರ ತಾಲೂಕಿನ ಜಪ್ತಿಯ ಅನುರಾಧ (೨೩) ಎಂಬ ವಿದ್ಯಾರ್ಥಿನಿ ಆತ್ಮಹತ್ಯೆಗೆ ಶರಣಾದ ಘಟನೆ ವರದಿಯಾಗಿದೆ. ಕಾಲೇಜಿನ ಹಾಸ್ಟೆಲ್‌ನಲ್ಲಿ ಯಾರೂ ಇಲ್ಲದ ಸಂದರ್ಭ ತಾನಿದ್ದ ಕೊಠಡಿಗೆ ಬಾಗಿಲು ಹಾಗಿಕೊಂಡು ಫ್ಯಾನಿಗೆ ನೇಣು ಬಿಗಿದುಕೊಂಡಿದ್ದಾಳೆ. ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ. ಜಪ್ತಿಯ ಜನತಾ ಕಾಲೋನಿಯ ನಿವಾಸಿ ಎಂದು ತಿಳಿದು ಬಂದಿದೆ. ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ದೇವಾಲಗಳು ಮನುಷ್ಯ ಹಾಗೂ ದೇವರ ಸಂಪರ್ಕ ಮಾರ್ಗವಿದ್ದಂತೆ. ಅದು ಸ್ವರ್ಗದ ದಾರಿಯನ್ನು ತೆರೆದಿಡುತ್ತದೆ. ಆದರೆ ಆ ದಾರಿಯಲ್ಲಿ ನಡೆಯಲು ಶುದ್ಧ ಮನಸ್ಸು ಹಾಗೂ ಶ್ರದ್ಧೆ ಇರಬೇಕು ಎಂದು ಉಡುಪಿ ಧರ್ಮ ಪ್ರಾಂತ್ಯದ ಬಿಶಪ್ ಅತಿ ವ| ಡಾ. ಜೆರಾಲ್ಡ್ ಐಸಾಕ್ ಲೋಬೊ ಹೇಳಿದರು. ತಲ್ಲೂರಿನಲ್ಲಿ ನೂತನವಾಗಿ ನಿರ್ಮಿಸಲಾಗಿರುವ ನಕ್ಷತ್ರಾಕಾರದ ಸಂತ ಫ್ರಾನ್ಸಿಸ್ ಅಸ್ಸಿಸ್ ಚರ್ಚ್ ಲೊಕಾರ್ಪಣೆಗೊಳಿಸಿ ಪವಿತ್ರ ಬಲಿಪೂಜೆಯನ್ನು ನೆರವೇರಿಸಿದ ಬಳಿಕ ಅವರು ಸಂದೇಶವಿತ್ತರು. ೪೦ ಕ್ಕೂ ಅಧಿಕ ಧರ್ಮಗುರುಗಳು ಮತ್ತು ಸಹಸ್ರಾರು ಭಕ್ತಾಧಿಗಳೊಂದಿಗೆ ಪವಿತ್ರ ಬಲಿದಾನದಲ್ಲಿ ಪಾಲ್ಗೊಂಡಿದ್ದರು. ಸಭಾ ಕಾರ್ಯಕ್ರಮದಲ್ಲಿ ಉಡುಪಿ ಜಿಲ್ಲೆಯ ಉಸ್ತುವಾರಿ ಸಚಿವರಾದ ಸಚಿವ ವಿನಯ ಕುಮಾರ್ ಸೊರಕೆಯವರೊಡನೆ ಬಿಷಪರು ಗಿಡನೆಟ್ಟು ಮಾತನಾಡಿ ಸಂತ ಫ್ರಾನ್ಸಿಸ್ ಅಸಿಸಿ ಅವರ ಪರಿಸರ ಕಾಳಜಿ ಇಂದಿಗೂ ಸ್ಮರಣೀಯ. ಕ್ಯಾಥೋಲಿಕ್ ಧರ್ಮಗುರುಗಳು ಚರ್ಚ್‌ನೊಂದಿಗೆ ಶಾಲೆಗಳನ್ನು ನಿರ್ಮಿಸಿ ನಿಸ್ವಾರ್ಥ ಸೇವೆಗೈಯುವುದು ಶ್ಲಾಘನೀಯ ಎಂದರು. ಬೈಂದೂರು ಶಾಸಕ ಗೋಪಾಲ ಪೂಜಾರಿ ಇಗರ್ಜಿಯ ಸ್ಮಾರಕ ಪುರವಣಿಗೆಯನ್ನು ಉದ್ಘಾಟಿಸಿದರು. ವಲಯ…
