ಕೊಲ್ಲೂರು: ಕೊಲ್ಲೂರಿನಲ್ಲಿ ರಾಜ್ಯ ಸರಕಾರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಮೂಖಾಂತರ ದೇವಳದ ವತಿಯಿಂದ ನಡೆದ ರೂ. 26 ಕೋಟಿ ವೆಚ್ಚದ ದೇವಳ ಹಾಗೂ ನಗರಕ್ಕೆ ಶುದ್ಧಿಕರಿಸಿದ ನೀರು ಸರಬರಾಜು, ಒಳಚರಂಡಿ ಮತ್ತು ಕೊಳಚೆನೀರು ಶುದ್ಧಿಕರಣ ಘಟಕ ನಿರ್ಮಾಣ ಕಾಮಗಾರಿಗೆ ರಾಜ್ಯ ನಗರಾಭಿವೃದ್ಧಿ ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ವಿನಯಕುಮಾರ್ ಸೊರಕೆ ಭೂಮಿಪೂಜೆ ನೆರವೇರಿಸಿದರು. ಈ ಸಂದರ್ಭದಲ್ಲಿ ಶಾಸಕ ಕೆ. ಗೋಪಾಲ ಪೂಜಾರಿ, ದೇವಳದ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೃಷ್ಣಪ್ರಸಾದ ಅಡ್ಯಂತಾಯ, ಕಾರ್ಯನಿರ್ವಹಣಾಧಿಕಾರಿ ಟಿ.ಆರ್.ಉಮಾ, ನಗರಾಭಿವೃದ್ಧಿಕೋಶ ಯೋಜನಾ ನಿರ್ದೇಶಕ ವಿ. ಪ್ರಸನ್ನ, ಗ್ರಾಪಂ ಅಧ್ಯಕ್ಷ ಕೆ. ಎನ್. ವಿಶ್ವನಾಥ ಅಡಿಗ, ಸಹಾಯಕ ಇಓ ಹೆಚ್. ಕೃಷ್ಣಮೂರ್ತಿ, ಜಿಪಂ ಸದಸ್ಯೆ ಸುಪ್ರೀತಾ ದೀಪಕ್ ಶೆಟ್ಟಿ, ತಾಪಂ ಸದಸ್ಯ ಕೆ. ರಮೇಶ ಗಾಣಿಗ, ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಜಯಾನಂದ ಹೋಬಳಿದಾರ್, ಡಾ.ಅತುಲ್ಕುಮಾರ್ ಶೆಟ್ಟಿ, ಶ್ರೀನಿವಾಸ ಕಲ್ಲೂರಾಯ, ಗುತ್ತಿಗೆದಾರ ವಾಸುದೇವ ಶೆಟ್ಟಿ ಇಲಾಖಾ ಅಧಿಕಾರಿಗಳು ಉಪಸ್ಥಿತರಿದ್ದರು.
Author: ನ್ಯೂಸ್ ಬ್ಯೂರೋ
ಬೈಂದೂರು: ಹಿರಿಯರನ್ನು ಗೌರವಿಸುವುದು ನಮ್ಮ ಮಣ್ಣಿನ ಗುಣ ಹಾಗೂ ನಾಡಿನ ಸಂಸ್ಕೃತಿ. ಇದರಿಂದ ನಮ್ಮನ್ನ ನಾವು ಗೌರವಿಸಿಕೊಂಡಂತೆ. ಪ್ರತಿಯೊಬ್ಬರೂ ಇದನ್ನು ಅಳವಡಿಸಿಕೊಂಡರೆ ಜೀವನದಲ್ಲಿ ಸಾರ್ಥಕತೆ ಕಾಣಬಹುದು ಎಂದು ಶಿಕ್ಷಕ ತಿಮ್ಮಪ್ಪ ಗಾಣಿಗ ಹೇಳಿದರು. ಬೈಂದೂರು ಶಾಸಕರ ಮಾದರಿ ಸರಕಾರಿ ಶಾಲೆಯಲ್ಲಿ ನೆಹರೂ ಜನ್ಮದಿನಾಚರಣೆಯ ಅಂಗವಾಗಿ ನಡೆದ ಶಾಲೆಯ ಎಲ್ಲಾ 251 ಮಕ್ಕಳ ಸಾಮೂಹಿಕ ಹುಟ್ಟುಹಬ್ಬದ ಕಾರ್ಯಕ್ರಮದಲ್ಲಿ ಮಾತನಾಡಿದರು. ದೇಶದ ಮೊದಲ ಪ್ರಧಾನಿ ಮಕ್ಕಳ ಪ್ರೀತಿಯ ಚಾಚಾನೆಹರು ಅವರ ಅಪೇಕ್ಷೆಯಂತೆ ಮಕ್ಕಳು ದೇವರಿಗೆ ಸಮಾನ ಎಂಬ ನೆಲೆಯಲ್ಲಿ ನ.14 ಮಕ್ಕಳ ದಿನಾಚರಣೆಯಾಗಿ ದೇಶದಾದ್ಯಂತ ಆಚರಿಸಲಾಗುತ್ತಿದೆ. ಮಕ್ಕಳಲ್ಲಿ ಬಡವ-ಬಲ್ಲಿದ, ಜಾತಿ-ಧರ್ಮಗಳ ಭೇಧವಿರಬಾರದು. ಪರಿಸರ, ಸಹವಾಸಗಳಿಂದ ಮಕ್ಕಳು ಕೆಟ್ಟವಿಚಾರಗಳನ್ನು ಕಲಿಯದಂತೆ ಪಾಲಕರು ಎಚ್ಚರವಹಿಸಬೇಕು. ಮಕ್ಕಳಿಗೆ ಎಳೆವೆಯಲ್ಲಿ ಸ್ವಾರ್ಥಬುದ್ಧಿ ಕಲಿಸಿದರೆ ಮುಂದೆ ಅದು ಹೆಮ್ಮರವಾಗುವುದು. ಆದ್ದರಿಂದ ಮನೆಯಿಂದಲೆ ವಿದ್ಯಾರ್ಥಿಗಳಿಗೆ ಜೀವನದ ಪಾಠ ಆರಂಭಿಸಬೇಕು ಎಂದು ಪೋಷಕರಿಗೆ ಕಿವಿಮಾತು ಹೇಳಿದರು. ಎಸ್ಡಿಎಂಸಿ ಅಧ್ಯಕ್ಷ ರವೀಂದ್ರ ಶ್ಯಾನುಭಾಗ್ ಅಧ್ಯಕ್ಷತೆ ವಹಿಸಿದ್ದರು. ಶಾಲೆಯ ಅತೀಕಿರಿಯ ವಯಸ್ಸಿನ ಅಭಿರಾಮ್ ಹಾಗೂ ಮಹಿಮ್ ಸಾಂಕೇತಿಕವಾಗಿ 21…
ಕುಂದಾಪುರ: ಸೌತ್ ಕೆನರಾ ಪೊಟೋಗ್ರಾಫರ್ಸ್ ಅಸೋಸಿಯೇಶನ್ ಕುಂದಾಪುರ ವಲಯ ಆಶ್ರಯದಲ್ಲಿ ಮಕ್ಕಳ ದಿನಾಚರಣೆ ಅಂಗವಾಗಿ ನಡೆದ ಮುದ್ದುಕಂದ ಛಾಯಾಚಿತ್ರ ಸ್ಪರ್ಧೆ ಬಹುಮಾನ ವಿತರಣೆ ಕುಂದಾಪುರ ಅಕ್ಷತಾ ಸಭಾಂಗಣದಲ್ಲಿ ಇತ್ತೀಚೆಗೆ ನಡೆಯಿತು. ಆದ್ಯಾ ಜೋಶಿ ಪ್ರಥಮ, ಪರಿಣ್ಯ ದ್ವಿತೀಯ ಮತ್ತು ಪ್ರಾಪ್ತಿ ನೆಲ್ಲಿ ತೃತೀಯ ಹಾಗೂ ವಿಜಯ ಶೆಣೈ, ಆರ್ಯನ್, ಪ್ರಥ್ಯೂಸ್ ಶೆಟ್ಟಿ ಸಮಾಧಾನಕರ ಬಹುಮಾನ ಪಡೆದರು. ಛಾಯಾಚಿತ್ರಗಾಕಾರರಾದ ಅಶೋಕ್ ಕುಮಾರ್ ಶೆಟ್ಟಿ, ಪ್ರಮೋದ್ ಚಂದನ್, ಉದಯ ಪಡಿಯಾರ್, ಗಣೇಶ್ ಕೆ. ತೀರ್ಪುಗಾರರಾಗಿದ್ದರು. ಫಿಕ್ಸಲ್ ಕ್ರಿಯೇಶನ್ ಸುರೇಶ್ ವಿಜೇತರಿಗೆ ಬಹುಮಾನ ವಿತರಿಸಿದರು. ಸಂಸ್ಥೆ ಗೌರವಾಧ್ಯಕ್ಷ ರಾಬರ್ಟ್ ಡಿಸೋಜಾ, ಉಪಾಧ್ಯಕ್ಷ ದೊಟ್ಟಯ್ಯ ಪೂಜಾರಿ, ರಾಜಾ ಮಠದಬೆಟ್ಟು, ಗಿರೀಶ್ ಚಿತ್ತೂರು, ಕೋಶಾಧಿಕಾರಿ ಚಂದ್ರಕಾಂತ್ ಇದ್ದರು. ಸಂಸ್ಥೆ ಅಧ್ಯಕ್ಷ ಗ್ರೇಶನ್ ಡಯಾಸ್ ಸ್ವಾಗತಿಸಿದರು. ಸುರೇಶ್ ಮೊಳಹಳ್ಳಿ ನಿರೂಪಿಸಿದರು. ಪ್ರಮೋದ್ ಚಂದನ್ ವಂದಿಸಿದರು.
ಕುಂದಾಪುರ: ಪುರಸಭೆ ಕುಂದಾಪುರ, ಮಹಿಳಾ ಮತ್ತು ಮಕ್ಕಳ ಶ್ರೇಯೋಭಿವೃದ್ಧಿ ಸಮಿತಿ, ಶಿಶು ಅಭಿವೃದ್ಧಿ ಯೋಜನೆ, ರಾಮಕ್ಷತ್ರಿಯ ಸಂಘ, ಅಂಗನವಾಡಿ ಕಾರ್ಯಕರ್ತೆಯರ ಸಹಾಯಕಿಯರ ಸಂಘ ಆಶ್ರಯದಲ್ಲಿ ಕುಂದಾಪುರ ರಾಮಮಂದಿರದಲ್ಲಿ ಪುರಸಭೆ ವ್ಯಾಪ್ತಿಯ ಅಂಗನಾವಡಿ ಮಕ್ಕಳ ದಿನಾಚರಣೆ ನಡೆಯಿತು. ಕುಂದಾಪುರ ಮಹಿಳಾ ಮತ್ತು ಮಕ್ಕಳ ಶ್ರೇಯೋಭಿವೃದ್ಧಿ ಸಮಿತಿ ಅಧ್ಯಕ್ಷೆ ಗುಣರತ್ನಾ ಉದ್ಘಾಟಿಸಿದರು. ಕುಂದಾಪುರ ಪುರಸಭೆ ಅದ್ಯಕ್ಷೆ ಕಲಾವತಿ ಯು.ಎಸ್.ಅಧ್ಯಕ್ಷತೆ ವಹಿಸಿದ್ದರು. ಕುಂದಾಪುರ ಪುರಸಭೆ ಸದಸ್ಯರಾದ ರಾಜೇಶ್ ಕಾವೇರಿ, ರವಿರಾಜ್ ಖಾರ್ವಿ, ಕುಂದಾಪುರ ಪುರಸಭೆ ಮುಖ್ಯಾಧಿಕಾರಿ ಗೋಪಾಲಕೃಷ್ಣ ಶೆಟ್ಟಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕಿ ಗ್ರೇಸಿ ಎಲ್.ಗುನ್ಸಾಲ್ವಿಸ್, ಸಿಡಿಪಿಓ ಸದಾನಂದ ನಾಯ್ಕ್ ಇದ್ದರು. ಅಂಗನವಾಡಿ ಕಾರ್ಯಕರ್ತೆಯರ ಸಹಾಯಕಿಯರ ಸಂಘ ಅಧ್ಯಕ್ಷೆ ಉಷಾ ಕೆ.ಪ್ರಾಸ್ತಾವಿಕ ಮಾತನಾಡಿದರು. ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಭಾಗೀರಥಿ ಹೆಬ್ಬಾರ್ ಸ್ವಾಗತಿಸಿದರು. ಹರ್ಷವರ್ಧನ್ ಖಾರ್ವಿ ನಿರೂಸಿದರು. ಪ್ರೇಮಾ ವಂದಿಸಿದರು.
ನರೇಂದ್ರ ಎಸ್. ಗಂಗೊಳ್ಳಿ. ಹುಚ್ಚ ವೆಂಕಟ್ ಬಿಗ್ ಬಾಸ್ ಕಾರ್ಯಕ್ರಮದಿಂದ ಹೊರಬಿದ್ದಿರುವುದು ಎಲ್ಲಾ ಚಾನೆಲ್ ಗಳಲ್ಲಿ ಬಿಸಿಬಿಸಿ ಸುದ್ದಿಯಾಗಿ ಓಡಾಡುತ್ತಿದೆ. ಅದ್ಯಾವುದೋ ದೇಶ ಮುಳುಗಿ ಹೋಯಿತು ಅನ್ನೋ ಹಾಗೆ ಅವರ ಅಭಿಮಾನಿಗಳೆನ್ನಿಸಿಕೊಂಡವರು ಪ್ರತಿಕ್ರಿಯಿಸುವ ರೀತಿಯನ್ನು ಮತ್ತು ನಮ್ಮ ಚಾನೆಲ್ಗಳ ವಿಪರೀತ ಅನ್ನುವಂತಹ ಆಸಕ್ತಿಯನ್ನು ನೋಡುತ್ತಿದ್ದರೆ ನಿಜಕ್ಕೂ ಹುಚ್ಚ ವೆಂಕಟ್ ಅವರೋ ಇವರೋ ಅನ್ನೋ ಸಂದೇಹ ಮೂಡತೊಡಗಿದೆ. ವೆಂಕಟ್, ರೆಹಮಾನ್. ರವಿ ಹಾಗೂ ಇನ್ನಿತರರು ಮಾಡಿದ್ದು ಸರಿಯೋ ತಪ್ಪೋ ಅನ್ನೋ ವಿಚಾರಕ್ಕಿಂತ ನಮ್ಮಲ್ಲಿನ ಹುಚ್ಚುತನವೇ ಇಲ್ಲಿ ಎದ್ದು ಕಾಣುತ್ತಿದೆ. ನಿಜ ಬಿಗ್ ಬಾಸ್ ಎಲ್ಲಾ ರಿಯಾಲಿಟಿ ಶೋಗಳ ಹಾಗೆ ಒಂದು ತರ್ಕ ಹೀನ ರಿಯಾಲಿಟ ಶೋ. ಹೀಗೆ ಕರೆಯಲೂ ಒಂದು ಕಾರಣವಿದೆ. ಇಲ್ಲಿನ ಬಹುತೇಕ ಕಾರ್ಯಕ್ರಮಗಳಲ್ಲಿ ಭಾಗಾಳುಗಳ ನಿರ್ವಹಣೆಯನ್ನು ಪರಿಶೀಲಿಸಿ(?) ಅಂಕಗಳನ್ನು ಕೊಡಲು ಒಂದಷ್ಟು ಗಣ್ಯರೆನ್ನಿಸಿಕೊಂಡ ತೀರ್ಪುಗಾರರಿರುತ್ತಾರೆ. ಆದರೆ ಪ್ರತೀ ಕಾರ್ಯಕ್ರಮದಲ್ಲೂ ಇವರಿಗೆ ವೋಟ್ ಮಾಡಲು ವೀಕ್ಷಕರನ್ನು ಕೇಳಿಕೊಳ್ಳಲಾಗುತ್ತದೆ. ಮತ್ತೆ ನಮ್ಮ ಮೂರ್ಖ ಜನತೆ ಅದಕ್ಕೆ ವೋಟು ಮಾಡುತ್ತಾರೆ ಮತ್ತು ಹಾಗೆ ವೋಟು…
ಕುಂದಾಪುರ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕುಂದಾಪುರ ಯೋಜನಾ ವ್ಯಾಪ್ತಿಯ ಸಿಬ್ಬಂದಿಗಳ ೨೦೧೫-೧೬ನೇ ಸಾಲಿನ ಸ್ನೇಹಕೂಟ ಇತ್ತೀಚೆಗೆ ಕುಂದಾಪುರದ ವ್ಯಾಸರಾಜ ಕಲ್ಯಾಣ ಮಂಟಪದಲ್ಲಿ ನಡೆಯಿತು. ಉಡುಪಿ ಜಿಲ್ಲಾ ಪ್ರಾದೇಶಿಕ ಕಛೇರಿಯ ನಿರ್ದೇಶಕರಾದ ಮಹಾವೀರ ಅಜ್ರಿ, ಜಿಲ್ಲಾ ನಿರ್ದೇಶಕರಾದ ದುಗ್ಗೇಗೌಡ, ತಾಲೂಕು ಯೋಜನಾಧಿಕಾರಿ ಅಮರಪ್ರಸಾದ್ ಶೆಟ್ಟಿ ಉಪಸ್ಥಿತರಿದ್ದರು. ಯೋಜನಾ ಕಛೇರಿ ಸಿಬ್ಬಂದಿಗಳು ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಪ್ರಥಮ ಬಹುಮಾನ ಪಡೆದಿದ್ದು, ಬಸ್ರೂರು ವಲಯದವರು ದ್ವಿತೀಯ ಬಹುಮಾನ ಪಡೆದಿದ್ದಾರೆ.
ಕುಂದಾಪುರ: ಹೆಮ್ಮಾಡಿ ಜನತಾ ಪ.ಪೂ.ಕಾಲೇಜಿನಲ್ಲಿ ಮಕ್ಕಳ ದಿನಾಚರಣೆಯನ್ನು ಕಾಲೇಜಿನ ಪ್ರಾಂಶುಪಾಲ ಸುಧಾಕರ ವಕ್ವಾಡಿ ಅಧ್ಯಕ್ಷತೆಯಲ್ಲಿ ನಡೆಯಿತು. ಈ ಸಂದರ್ಭದಲ್ಲಿ ವಿವಿಧ ಕ್ರೀಡೆಯಲ್ಲಿ ರಾಜ್ಯಮಟ್ಟದಲ್ಲಿ ಪ್ರಶಸ್ತಿ ವಿಜೇತ ಹೆಮ್ಮಾಡಿ ಜನತಾ ಪ್ರೌಢ ಶಾಲಾ ವಿಶೇಷ ಚೇತನ ವಿದ್ಯಾರ್ಥಿನಿ ಕುಮಾರಿ ರಮ್ಯಾ ಅವರನ್ನು ಅಭಿನಂದಿಸಿ, ಗೌರವಿಸಲಾಯಿತು. ಜ್ಞಾನ, ಕೌಶಲ್ಯ, ಏಕಾಗೃತೆಗೆ ಸಂಬಂಧಿಸಿದ ವಿವಿಧ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಸಭೆಯಲ್ಲಿ ಮಂಜುನಾಥ.ಕೆ.ಸ್, ಗೀತಾ ಜೋಷಿ, ಗಿರಿಜಾ, ಜೆಸ್ಸಿ ಡಿಸಿಲ್ವ, ಶ್ರೀಲತಾ.ಕೆ ಉಪಸ್ಥಿತರಿದ್ದರು. ಮಂಜುನಾಥ ಚಂದನ್ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು. ಹರೀಶ್ ಕಾಂಚನ್ ವಂದಿಸಿದರು. ಸಿವಿಲ್ ಕಂಟ್ರಾಕ್ಟರ್ ಸಟ್ವಾಡಿ ಅನಿಲ್ ಕುಮಾರ್ ಕಾರ್ಯಕ್ರಮದ ಪ್ರಾಯೋಜಕತ್ವ ವಹಿಸಿದ್ದರು.
ಕುಂದಾಪುರ: ಕೋಟೇಶ್ವರ ಶ್ರೀ ಪಟ್ಟಾಭಿ ರಾಮಚಂದ್ರ ದೇವಸ್ಥಾನದಲ್ಲಿ ನಡೆಯುತ್ತಿರುವ ಮನ್ಮಥ ನಾಮ ಸಂವತ್ಸರದ ಚಾತುರ್ಮಾಸದ ಅಂಗ ವಿಶೇಷ ಧಾರ್ಮಿಕ ಕಾರ್ಯಕ್ರಮವಾಗಿ ಧನ್ವಂತರಿ ಹಾಗೂ ಮಹಾಮೃತುಂಜಯ ಹವನ ನಡೆಯಿತು. ಪೂರ್ಣಾಹುತಿಯು ಕಾಶೀ ಮಠ ಕಿರಿಯ ಯತಿಗಳಾದ ಶ್ರೀಶ್ರೀ ಸಂಯಮೀಂದ್ರ ತೀರ್ಥ ಸ್ವಾಮೀಜಿಯವರಿಂದ ಜರಗಿತು. ಈ ಸಂದರ್ಭದಲ್ಲಿ ಸೇವಾದಾರರಾದ ದಿನೇಶ ಗೋವಿಂದ್ರಾಯ ಕಾಮತ ಮತ್ತು ಕುಟುಂಬದವರು ಉಪಸ್ಥಿತರಿದ್ದರು.
ಕುಂದಾಪುರ: ಇಲ್ಲಿನ ಹರ್ಕುಲಸ್ ಜಿಮ್ ಆಯೋಜಿಸಿದ ಕರ್ನಾಟಕ ರಾಜ್ಯ ಮಟ್ಟದ ಪವರ್ ಲಿಫ್ಟಿಂಗ್ ಸ್ಪರ್ಧೆಯಲ್ಲಿ ಮಾಸ್ಟರ್ಸ್-2 ವಿಭಾಗದಲ್ಲಿ ಭಾಗವಹಿಸಿದ ಜಿ.ವಿ.ಅಶೋಕ್ ಅವರು 500 ಕೆಜಿ ಭಾರ ಎತ್ತುವ ಮೂಲಕ ಪ್ರಥಮ ಸ್ಥಾನ ಪಡೆದಿದ್ದಾರೆ. ಇವರು ಪ್ರಸ್ತುತ ಕೆನರಾ ಬ್ಯಾಂಕ್ ಗಂಗೊಳ್ಳಿ ಶಾಖೆಯ ಉದ್ಯೋಗಿಯಾಗಿದ್ದು, ಸಾಲಿಗ್ರಾಮ ವೀರಮಾರುತಿ ವ್ಯಾಯಾಮ ಶಾಲೆಯ ಸದಸ್ಯರಾಗಿದ್ದಾರೆ.
ಬೈಂದೂರು: ಕಾಲ್ತೋಡು ಗ್ರಾಪಂ ವ್ಯಾಪ್ತಿಯ ನೀರ್ಕುಳಿಯ ಬಡಕುಟುಂಬದ ಪದ್ಮಾವತಿ ಶೆಟ್ಟಿ ಎರಡೂ ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದು, ಅವರಿಗೆ ಕುಂದಾಪುರ ತಾಲೂಕು ಯುವ ಬಂಟರ ಸಂಘದ ವತಿಯಿಂದ ರೂ. ೨೦ ಸಾವಿರ ಸಹಾಯಧನ ನೀಡುವ ಮೂಲಕ ಆರ್ಥಿಕ ಸಹಾಯ ಮಾಡಿದರು. ಯುವ ಬಂಟರ ಸಂಘದ ಅಧ್ಯಕ್ಷ ಸುಕೇಶ್ ಶೆಟ್ಟಿ ಹೊಸಮಠ, ಕಾರ್ಯದರ್ಶಿ ಅವಿನಾಶ್ ರೈ, ಪದಾಧಿಕಾರಿಗಳಾದ ಹರ್ಷವರ್ಧನ ಶೆಟ್ಟಿ ಕಟ್ಕೆರೆ, ಗಣೇಶ್ ಶೆಟ್ಟಿ ಅಲ್ಸಾಡಿ, ನಿತಿನ್ ಶೆಟ್ಟಿ ಹುಂಚನಿ, ಸುನಿಲ್ ಶೆಟ್ಟಿ ಹೇರಿಕುದ್ರು, ರವಿಶಂಕರ್ ಹೆಗ್ಡೆ ದಬ್ಬಾಡಿ, ಧನಂಜಯ ಶೆಟ್ಟಿ ಹರ್ಕೂರು, ಅರ್ಜುನ ಶೆಟ್ಟಿ ಕುಂದಾಪುರ, ಸಚಿನ್ ಶೆಟ್ಟಿ ಹುಂಚನಿ ಉಪಸ್ಥಿತರಿದ್ದರು.
