ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಜನ್ಮ ಶತಾಬ್ದಿ, ಸಿಲ್ವರ್ ಜೂಬಲಿ, ಗೋಲ್ಡನ್ ಜೂಬಲಿ ಆಚರಣೆ ನಡೆಯೋದು ಸಹಜ. ಆದರೆ ಒಬ್ಬ ವ್ಯಕ್ತಿ ಭಾಷಣ ಮಾಡಿದ ಹಿನ್ನೆಲೆಯಲ್ಲಿ ೧೨೫ನೇ ವರ್ಷ ಆಚರಣೆ ಮಾಡಲಾಗುತ್ತದೆ! ಇದಕ್ಕೆ ಕಾರಣ ಚಿಕಾಗೋ ಭಾಷಣ. ವಿವೇಕಾನಂದರು ಓದಿದ್ದು ಮಾತ್ರ ಅಲ್ಲ ಅಮೂಲಾಗ್ರ ಅಧ್ಯಯನದ ಮೂಲಕ ಭಾರತವನ್ನು ಅರಿತುಕೊಂಡರು. ಒಮ್ಮೆ ವಿವಾಕಾನಂದ ಹುಟ್ಟಿರದಿದ್ದರೆ ಎಂಬ ಕಲ್ಪನೆಯೇ ಭಯ ಹುಟ್ಟಿಸುತ್ತದೆ. ಭಾರತೀಯ ಸಂಸ್ಕೃತಿ, ಧರ್ಮ ಜೀವಂತವಾಗಿದೆ ಎಂದರೆ ಅದಕ್ಕೆ ಕಾರಣ ಸ್ವಾಮಿ ವಿವೇಕಾನಂದರು ಎಂದು ಮಂಗಳೂರು ಶ್ರೀ ರಾಮಕೃಷ್ಣ ಮಠ ಧರ್ಮವೃತಾನಂದ ಸ್ವಾಮೀಜಿ ಹೇಳಿದರು. ಕುಂದಾಪುರ ಆರ್. ಎನ್. ಶೆಟ್ಟಿ ಸಭಾಂಗಣದಲ್ಲಿ ಯುವ ಬ್ರಿಗೇಡ್ ಕುಂದಾಪುರ ಹಮ್ಮಿಕೊಂಡ ಸ್ವಾಮಿ ವಿವೇಕಾನಂದ ಸಿಡಿಲ ಭಾಷಣಕ್ಕೆ ೧೨೫ ’ಮತ್ತೊಮೆ ದಿಗ್ವಿಜಯ’ ಕಾರ್ಯಕ್ರಮ ಉದ್ಘಾಟಿಸಿ ಮಾಡತಾಡುತ್ತಿದ್ದರು. ನಮ್ಮ ಧರ್ಮವೇ ಶ್ರೇಷ್ಠ ಎಂದು ವಿಶ್ವಕ್ಕೆ ತೋರಿಸುವ ಹಿನ್ನೆಲೆಯಲ್ಲಿ ನಡೆದ ಚಿಕಾಗೋ ಸರ್ಮಧರ್ಮ ಸಮ್ಮೇಳನದಲ್ಲಿ ವಿವೇಕಾನಂದರ ಭಾಗವಹಿಸದಿದ್ದರೆ ಏನಾಗುತ್ತಿತ್ತು ಎನೋದನ್ನ ಉಹಿಸುವುದು ಕಷ್ಟ. ಕೇವಲ ಎರಡೂವರೆ ನಿಮಿಷ…
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ನಾಗೂರು ಕುಸುಮ ಫೌಂಡೇಶನ್ ಇವರ ವಾರ್ಷಿಕ ಸಾಂಸ್ಕೃತಿಕ ಉತ್ಸವ ‘ಕುಸುಮಾಂಜಲಿ-2017’ ಡಿ.24 ಭಾನುವಾರ ನಾಗೂರಿನಲ್ಲಿ ಸಂಜೆ ಗಂಟೆ 4ಕ್ಕೆ ನಡೆಯಲಿದೆ. ವಿಶೇಷ ಅಥಿತಿಯಾಗಿ ಕಟೀಲು ಎಸ್ಡಿಪಿಟಿ ಪ್ರಥಮ ದರ್ಜೆ ಕಾಲೇಜಿನ ಪ್ರಾಶುಂಪಾಲ ಪ್ರೊ. ಎಮ್. ಬಾಲಕೃಷ್ಣ ಶೆಟ್ಟಿ ದಿಕ್ಸೂಚಿ ಭಾಷಣ ಮಾಡಲಿದ್ದಾರೆ. ‘ಕುಸುಮಾಂಜಲಿ 2017’ ರ ಪೂರ್ವಭಾವಿಯಾಗಿ ನಡೆದ ಸಂಗೀತ ಸ್ಪರ್ಧೆ ಗಾನಕುಸುಮ ಕಾರ್ಯಕ್ರಮದಲ್ಲಿ ಆಯ್ಕೆಯಾದ ಪ್ರತಿಭಾವಂತ ವಿದ್ಯಾರ್ಥಿಗಳ ಸಂಗೀತ ಕಾರ್ಯಕ್ರಮ ಸಂಜೆ ಗಂಟೆ ೫ರಿಂದ ಆರಂಭವಾಲಿದ್ದು, ನಂತರ ಗಾನಕುಸುಮ ಪ್ರಶಸ್ತಿಯನ್ನು ನೀಡಲಾಗುವುದು. ಈ ಸಂದರ್ಭ ಕುಸುಮಾಂಜಲಿ 2017ರ ಚಾನಲ್ ಪಾರ್ಟನರ್ ಮುಂಬೈನ ಶುಭಸಾಗರ್ ಗ್ರೂಫ್ ಆಪ್ ಹೋಟೆಲ್ಸ್ನ ಆಡಳಿತ ನಿರ್ದೇಶಕ ಲಕ್ಷ್ಮಣ ಪೂಜಾರಿ ಕುಸುಮ ಫೌಂಡೇಶನ್ ಸಂಸ್ಥೆಯ ಒಂದು ಘಟಕವಾದ ‘ಬ್ಲೋಸಮ್ ಸ್ಕೂಲ್ ಆಪ್ ಮ್ಯೂಸಿಕ್ & ಡಾನ್ಸ್’ ಸ್ಕೂಲ್ ಉದ್ಘಾಟಿಸಲಿದ್ದಾರೆ. ಕುಸುಮಾಶ್ರೀ ಪ್ರಶಸ್ತಿಯನ್ನು ಪ್ರದಾನ ಮಾಡಲಾಗುವುದು ಎಂದು ಸಂಸ್ಥೆಯ ಆಡಳಿತ ನಿರ್ದೇಶಕ ನಳಿನ್ ಕುಮಾರ್ ಶೆಟ್ಟಿ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಗುಜರಾತ್ ಹಾಗೂ ಹಿಮಾಚಲ ಪ್ರದೇಶದ ವಿಧಾನಸಭಾ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷ ಬಹುಮತದೊಂದಿಗೆ ಜಯ ಸಾಧಿಸಿದ ಹಿನ್ನೆಲೆಯಲ್ಲಿ ಕುಂದಾಪುರ ಹಾಗೂ ಬೈಂದೂರಿನಲ್ಲಿ ಬಿಜೆಪಿ ಪಕ್ಷದ ಪ್ರಮುಖರು ಹಾಗೂ ಕಾರ್ಯಕರ್ತರು ಪಟಾಕಿ ಸಿಡಿಸಿ ವಿಜಯೋತ್ಸವ ಆಚರಿಸಿದರು. ಕುಂದಾಪುರದಲ್ಲಿ ನಡೆದ ವಿಜಯೋತ್ಸವದಲ್ಲಿ ಕುಂದಾಪುರ ಬಿಜೆಪಿ ಅಧ್ಯಕ್ಷ ಕಾಡೂರು ಸುರೇಶ್ ಶೆಟ್ಟಿ, ಭಾಸ್ಕರ ಬಿಲ್ಲವ, ಮಹಿಳಾ ಮೋರ್ಚಾ ಅಧ್ಯಕ್ಷೆ ಜಾನಕಿ ಬಿಲ್ಲವ, ತಾಪಂ ಸದಸ್ಯ ಸುರೇಂದ್ರ ಖಾರ್ವಿ, ಪುರಸಭಾ ಉಪಾಧ್ಯಕ್ಷ ರಾಜೇಶ್ ಕಾವೇರಿ, ಸದಸ್ಯ ವಿಜಯ ಪೂಜಾರಿ, ರವಿರಾಜ ಖಾರ್ವಿ, ಮೀನುಗಾರರ ಪ್ರಕೋಷ್ಠದ ಸದಾನಂದ ಬಳ್ಕೂರು, ಯುವ ಮೊರ್ಚಾ ಅಧ್ಯಕ್ಷ ಸತೀಶ್ ಪೂಜಾರಿ ಮೊದಲಾದವರು ಭಾಗವಹಿಸಿದ್ದರು. ಬೈಂದೂರಿನಲ್ಲಿ ನಡೆದ ವಿಜಯೋತ್ಸವದಲ್ಲಿ ಜಿ.ಪಂ. ಸದಸ್ಯರಾದ ಸುರೇಶ್ ಬಟವಾಡಿ, ಕೆ. ಬಾಬು ಶೆಟ್ಟಿ, ಪಕ್ಷದ ಪ್ರಮುಖರಾದ ಸದಾಶಿವ ಡಿ.ಪಡುವರಿ, ಜಯಾನಂದ ಹೋಬಳಿದಾರ್, ಶಂಕರ ದೇವಾಡಿಗ ಬಂಕೇಶ್ವರ, ಗೋಪಾಲ ಗಾಣಿಗ ಬಂಕೇಶ್ವರ, ಸಸಿಹಿತ್ಲು ವೆಂಕಟ ಪೂಜಾರಿ, ದೀಪಕ್ ಕುಮಾರ್ ಶೆಟ್ಟಿ, ಕೃಷ್ಣಯ್ಯ ಮಯ್ಯಾಡಿ,…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಹೊನ್ನಾವರದ ಪರೇಶ್ ಮೇಸ್ತ ಅನುಮಾನಾಸ್ಪದ ಸಾವಿಗೆ ನ್ಯಾಯ ಒದಗಿಸಿಕೊಡುವಂತೆ ಆಗ್ರಹಿಸಿ ಕುಂದಾಪುರದ ಕೊಂಕಣಿ ಖಾರ್ವಿ ಸಮಾಜ ಭಾಂದವರು ಇಲ್ಲಿನ ಶ್ರೀ ಮಹಾಕಾಳಿ ದೇವಸ್ಥಾನ ಹಾಗೂ ವಿದ್ಯಾರಂಗ ಮಿತ್ರಮಂಡಳಿ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದರು. ಕೊಂಕಣ ಖಾರ್ವಿ ಸಮಾಜದ ಯುವಕನಾದ ಪರೇಶ್ ಮೇಸ್ತನ ಸಾವು ಅನುಮಾನ ಮುಡಿಸುತ್ತಿರುವುದಲ್ಲದೇ ಆತನ ಮರಣೋತ್ತರ ಪರೀಕ್ಷೆ ಸರಿಯಾಗಿ ನಡೆದಿರುವ ಬಗ್ಗೆ ಸಂಶಯವಿದೆ. ಈ ಬಗ್ಗೆ ಮರುಪರಿಶೀಲಿಸಿ ಆತನ ಒದಗಿಸಿಕೊಡಬೇಕೆಂದ ಅವರು ಆಗ್ರಹಿಸಿದರು. ಕುಂದಾಪುರ ಶ್ರೀ ಮಹಾಕಾಳಿ ದೇವಸ್ಥಾನದಿಂದ ಮೌನ ಮೆರವಣಿಗೆ ಹೊರಟು ಶಾಸ್ತ್ರಿ ವೃತ್ತದಿಂದ ಕುಂದಾಪುರ ಮಿನಿವಿಧಾನಸೌಧಕ್ಕೆ ತೆರಳಿ ತಹಶಿಲ್ದಾರರ ಮೂಲಕ ಗೃಹ ಸಚಿವರಿಗೆ ಮನವಿ ಸಲ್ಲಿಸಿದರು. ಕೊಂಕಣ ಖಾರ್ವಿ ಸಮಾಜದ ಪ್ರಮುಖರು ಮೌನ ಪ್ರತಿಭಟನಾ ಮೆರವಣಿಗೆಯ ನೇತೃತ್ವ ವಹಿಸಿದ್ದರು.
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಸುರಭಿ ರಿ. ಬೈಂದೂರು ಹಾಗೂ ಯಸ್ಕೋರ್ಡ್ ಟ್ರಸ್ಟ್ ರಿ ಬೈಂದೂರು ಆಶ್ರಯದಲ್ಲಿ ಬೆಂಗಳೂರು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಕಾರದೊಂದಿಗೆ ನಾಡೋಜ ಏಣಗಿ ಬಾಳಪ್ಪ ಸಂಸ್ಮರಣೆಯ ರಂಗ ಸುರಭಿ 2017 ರಾಜ್ಯ ಮಟ್ಟದ ನಾಟಕೋತ್ಸವವು ಡಿಸೆಂಬರ್ 23ರಿಂದ ಡಿಸೆಂಬರ್ 31ರ ವರೆಗೆ ಪ್ರತಿದಿನ ಸಂಜೆ 6 ಗಂಟೆಗೆ ಬೈಂದೂರಿನ ಶ್ರೀ ಶಾರದಾ ವೇದಿಕೆ ಜರುಗಿದೆ ಎಂದು ಸುರಭಿ ರಿ. ಬೈಂದೂರು ಇದರ ನಿರ್ದೇಶಕ ಸುಧಾಕರ ಪಿ. ಬೈಂದೂರು ತಿಳಿಸಿದರು. ಬೈಂದೂರಿನಲ್ಲಿ ಜರುಗಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ನಾಟಕೋತ್ಸವದ ವಿವರ ನೀಡಿದರು. ಡಿಸೆಂಬರ್23 ಶನಿವಾರ ಭೂಮಿಕಾ ಹಾರಾಡಿ ಪ್ರಸ್ತುತಿಯ ನಾಟಕ ’ಮದುವೆ ಹೆಣ್ಣು’ ರಚನೆ ಡಾ. ಎಚ್. ಎಸ್ ಶಿವಪ್ರಕಾಶ್, ನಿರ್ದೇಶನ: ರೋಹಿತ್ ಎಸ್. ಬೈಕಾಡಿ, ಡಿಸೆಂಬರ್24 ಭಾನುವಾರ ಚಿತ್ತಾರ ಬೆಂಗಳೂರು ಪ್ರಸ್ತುತಿಯ ನಾಟಕ ’ಸಂಜೆ ಹಾಡು’ ರಚನೆ ಹಾಗೂ ನಿರ್ದೇಶನ ರಾಜೇಂದ್ರ ಕಾತಂತ್ ಬೆಂಗಳೂರು, ಡಿಸೆಂಬರ್25 ಸೋಮವಾರ ರಂಗಸೌರಭ ಬೆಂಗಳೂರು ಪ್ರಸ್ತುತಿಯ ನಾಟಕ ’ಮಾವಿನಗುಡಿ ಕಾಲೋನಿ’…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಕನ್ನಡ ಶಾಲೆಗಳ ಉಳಿಸುವ ಜವಾಬ್ದಾರಿ ಸರ್ಕಾರಕ್ಕೆ ಸೀಮಿತವಲ್ಲ. ಸಾಹಿತ್ಯ ಪರಿಷತ್ ಕನ್ನಡ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಹೆಚ್ಚಿಸುವ ಉಳಿಸುವ ಸಾಹಸಕ್ಕೆ ಮುಂದಾಗದಿದ್ದರೆ, ಶಾಲೆ ಕಾಲಕ್ರಮೇಣ ಮುಚ್ಚಿಹೋಗಲಿದೆ. ಸರ್ಕಾರ ಎರಡು ಮಕ್ಕಳಿದ್ದರೂ ಶಾಲೆ ಮುಚ್ಚುವುದಿಲ್ಲ ಎನ್ನುತ್ತಿದ್ದರೂ ಮಕ್ಕಳೇ ಬಾರದಿದ್ದರೆ ಶಾಲೆ ನಡೆಯುವದಾದರೂ ಹೇಗೆ? ಇತರ ಭಾಷೆ ಜತೆ ಕನ್ನಡ ಉಳಿಸುವ ಪ್ರಯತ್ನ ಆಗಬೇಕಿದೆ ಎಂದು ಅಮಾಸೆಬೈಲು ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಎ.ಜಿ.ಕೊಡ್ಗಿ ಹೇಳಿದರು. ಕುಂದಾಪುರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಆಶ್ರಯದಲ್ಲಿ ಹಕ್ಲಾಡಿ ಎಸ್ಸೆಸ್ ಕೊಳ್ಕೆಬೈಲು ಸೂರಪ್ಪ ಶೆಟ್ಟಿ ಸ್ಮಾರಕ ಪ್ರೌಢ ಶಾಲೆಯಲ್ಲಿ ನಡೆದ ೧೬ನೇ ತಾಲೂಕ್ ಕನ್ನಡ ಸಾಹಿತ್ಯ ಸಮ್ಮೇಳನ ಭೂಮಿಗೀತಾ ಸಮಾರೋಪದಲ್ಲಿ ಮಾತನಾಡಿ, ಕನ್ನಡ ಉಳಿವಿಗಾಗಿ ಏಕೀಕರಣಕ್ಕೆ ಹೋರಾಟ ಮಾಡಬೇಕಿದ್ದರೂ ಬಂದ್, ಆಸ್ತಿಪಾಸ್ತಿಗೆ ಹಾನಿ ಮಾಡದ ಹೋರಾಟದಿಂದ ಆಗಬೇಕಿದೆ ಎಂದು ಅಭಿಪ್ರಾಯಪಟ್ಟರು. ಇಂದು ಭಾರತೀಯ ಸಂಸ್ಕೃತಿ ಮರೆಯಾಗಿ ಪಾಶ್ಚಿಮಾತ್ಯ ಸಂಸ್ಕೃತಿಗೆ ನಾವು ಒಲಸೆ ಹೋಗುತ್ತಿದ್ದೇವೆ. ಅಂಗ್ಲಾ ವ್ಯಾಮೋಹ ಕನ್ನಡ ಕಡೆಗಣಿಸಲಾಗುತ್ತಿದೆ. ಕನ್ನಡಕ್ಕೆ ಮೊದಲ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಕೋಟೇಶ್ವರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಹಳೆ ವಿದ್ಯಾರ್ಥಿ ಸಂಘದ ಪುನರ್ ರಚನೆ ಮಾಡಲಾಗಿದ್ದು, ಅಧ್ಯಕ್ಷರಾಗಿ ಸುಬ್ರಹ್ಮಣ್ಯ ಶೆಟ್ಟಿಗಾರ್ ಆಯ್ಕೆಯಾದರು. ಉಪಾಧ್ಯಕ್ಷರಾಗಿ-ಬಸವರಾಜ ಶೆಟ್ಟಿಗಾರ್, ಶ್ರೀಧರ ನಾಯ್ಕ್, ಕೋಶಾಧಿಕಾರಿ- ರಾಜೇಶ ಪ್ರಭು ಹಾಗೂ ರಂಜನ್ ಉಡುಪ, ಕಾರ್ಯದರ್ಶಿ- ಗಣೇಶ ಶೆಟ್ಟಿ, ಜೊತೆ ಕಾರ್ಯದರ್ಶಿ- ನಿತೇಶ್ ಮೊಗವೀರ, ಸಾಂಸ್ಕೃತಿಕ ಸಮಿತಿ ಅಧ್ಯಕ್ಷ- ನರೇಶ್, ಉಪಾಧ್ಯಕ್ಷ- ಪುರುಷೋತ್ತಮ ಕಾಮತ್, ಕ್ರೀಡಾ ಸಮಿತಿ ಅಧ್ಯಕ್ಷ- ಧೀಕ್ಷಾ ಆಚಾರ್ಯ, ಉಪಾಧ್ಯಕ್ಷ- ಸುಬ್ರಹ್ಮಣ್ಯ ದೇವಾಡಿಗ, ಸಾಮಾಜಿಕ ಜಾಲತಾಣದ ಪ್ರಚಾರ ಸಮಿತಿ- ಶರತ್ ಮೆಂಡನ್, ಪ್ರಮೋದ ಶೆಟ್ಟಿಗಾರ್ ಆಯ್ಕೆಯಾದರು.
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ವಿದ್ಯಾರ್ಥಿಗಳ ಕಲಿಕಾ ಮಟ್ಟದಲ್ಲಿ ಇತ್ತೀಚಿನ ದಿನಗಳಲ್ಲಿ ಕೌಶಲ್ಯದ ಕೊರತೆ ಕಂಡುಬಂದಿದ್ದು, ಆಧುನಿಕತೆಗೆ ತಕ್ಕಂತೆ ಬದಲಾವಣೆಗೆ ಹೊಂದುವ ಅವಶ್ಯಕತೆಯಿದೆ. ವಿದ್ಯಾರ್ಥಿಗಳಿಗೆ ಮೌಲ್ಯಯುತ್ತ ಶಿಕ್ಷಣ ನೀಡುವ ಉದ್ದೇಶದಿಂದ ಎಜ್ಯುಕೇನಲ್ ಟ್ರಸ್ಟ್ ಆರಂಭಿಸಲಾದ ಈ ಟ್ರಸ್ಟ್ ಉತ್ತಮ ಪ್ರಗತಿ ಸಾಧಿಸುವಂತಾಗಲಿ ಎಂದು ಉಪ್ಪುಂದ ಕುಂದ ಅಧ್ಯಯನ ಕೇಂದ್ರ ಅಧ್ಯಕ್ಷ ಯು. ಚಂದ್ರಶೇಖರ್ ಹೊಳ್ಳ ಹೇಳಿದರು. ಉಪ್ಪುಂದ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಉಪ್ಪುಂದ ಎಜ್ಯುಕೇಶನಲ್ ಸರ್ವೀಸ್ ಟ್ರಸ್ಟ್ ಇದರ ಉದ್ಘಾಟನಾ ಸಮಾರಂಭ ಹಾಗೂ ನೂತನ ವಿದ್ಯಾಂಗ ಉಪನಿರ್ದೇಶಕರಿಗೆ ನಾಗರಿಕ ಸನ್ಮಾನ ಕಾರ್ಯಕ್ರಮದಲ್ಲಿ ಅವರು ಕಾರ್ಯಕ್ರಮ ಉದ್ಘಾಟನೆ ಮಾಡಿದ ಬಳಿಕ ಮಾತನಾಡಿ ಕನ್ನಡ ಶಾಲೆಗಳಿಲ್ಲಿ ಮಕ್ಕಳ ಕೊರತೆ ಕಂಡುಬರುತ್ತಿದೆ. ಆಂಗ್ಲ ಭಾಷೆಯ ವ್ಯಾಮೋಹದಿಂದ ಕನ್ನಡ ಮಾಧ್ಯಮ ಶಾಲೆಗೆ ಬರಲಿ ಮಕ್ಕಳು ಕೇಳುತ್ತಿಲ್ಲ. ಕನ್ನಡ ಮಾಧ್ಯಮ ಶಾಲೆಗಳಲ್ಲಿ ಕನ್ನಡ ಭಾಷೆಗೆ ಎಷ್ಟು ಮಹತ್ವಾ ನೀಡುತ್ತೇವೆ ಅಷ್ಟೇ ಮಹತ್ವವನ್ನು ಇಂಗ್ಲೀಷ್ ಹಾಗೂ ಹಿಂದಿ ಭಾಷೆಗಳಿಗೆ ಒತ್ತು ನೀಡಬೇಕು. ನಾವು ಇದ್ದಾಗೆ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಕರ್ನಾಟಕ ರಾಜ್ಯದಲ್ಲಿ ಕಳೆದ 10 ವರ್ಷಗಳಲ್ಲಿ 3 ಪ್ರಮುಖ ರಾಜಕೀಯ ಪಕ್ಷದ ಐವರು ಮುಖ್ಯಮಂತ್ರಿಗಳು ರಾಜ್ಯಭಾರ ಮಾಡಿದ್ದರೂ ಕೂಡ ಸುಂದರ ಕರ್ನಾಟಕದ ಬಗ್ಗೆ ಕನಸೇ ಕಂಡಿಲ್ಲ. ಬದಲಾಗಿ ಅಧಿಕಾರ ಉಳಿಸಿಕೊಳ್ಳುವ ಬಗ್ಗೆ ಚಿಂತೆ ಮಾಡಿರುವುದರಿಂದ ರಾಜ್ಯ ಅಭಿವೃದ್ಧಿ ವಿಚಾರದಲ್ಲಿ 25 ವರ್ಷ ಹಿಂದುಳಿದಿದೆ ಎಂದು ಯುವ ಬ್ರಿಗೇಡ್ನ ಮಾರ್ಗದರ್ಶಕ, ವಾಗ್ಮಿ ಚಕ್ರವರ್ತಿ ಸೂಲಿಬೆಲೆ ಹೇಳಿದರು. ಅವರು ತಲ್ಲೂರಿನ ಕುಂತಿ ಅಮ್ಮ ದೇವಸ್ಥಾನದ ಆವರಣದಲ್ಲಿ ಯುವ ಬ್ರಿಗೇಡ್ ಕುಂದಾಪುರ ವತಿಯಿಂದ ಆಯೋಜಿಸಿದ ನನ್ನ ಕನಸಿನ ಕರ್ನಾಟಕ ಕುರಿತ ಬಹಿರಂಗ ಸಮಾವೇಶದಲ್ಲಿ ದಿಕ್ಸೂಚಿ ಭಾಷಣ ಮಾಡಿ ಶಿರಾಡಿ ಘಾಟ್ ಪ್ರತಿ ಮಳೆಗಾಲದಲ್ಲೂ ಸಂಚಾರ ಸ್ಥಗಿತವಾಗುತ್ತದೆ. ನಮ್ಮನ್ನಾಳುವ ವರ್ಗಕ್ಕೆ ಕನಿಷ್ಠ 10 ವರ್ಷಕ್ಕೆ ಬಾಳಿಕೆ ಬರುವ ರಸ್ತೆ ನಿರ್ಮಿಸಲು ಇಷ್ಟು ವರ್ಷದಲ್ಲಿ ಇನ್ನೂ ಸಾಧ್ಯವಾಗಿಲ್ಲ. ಕೃಷ್ಣ- ಗೋದಾವರಿ ನದಿ ನೀರಿನ ದೊಡ್ಡ ಯೋಜನೆಯನ್ನು ಆಂಧ್ರಪ್ರದೇಶದಲ್ಲಿ ಕೇವಲ ಒಂದೇ ವರ್ಷದಲ್ಲಿ ಪೂರ್ಣ ಮಾಡಿರುವ ಉದಾಹರಣೆಯಿದ್ದರೂ, ನಾನು ಹುಟ್ಟಿದ 3ನೇ ವರ್ಷಕ್ಕೆ ಆರಂಭವಾದ ಉಡುಪಿಯ ಅತಿ…
ಕುಂದಾಪ್ರ ಡಾಟ್ ಕಾಂ. ಬೈಂದೂರಿನಲ್ಲಿಯೇ ಪ್ರಥಮ ಭಾರಿಗೆ ಶ್ರೀ ಸೌಪರ್ಣಿಕಾ ಡೆವೆಲಪರ್ಸ್ ಹಾಗೂ ಮಹಾವೀರ ಕನ್ಸ್ಟ್ರಕ್ಷನ್ಸ್ ಸಂಸ್ಥೆಗಳು ಜಂಟಿಯಾಗಿ ನಿರ್ಮಿಸುತ್ತಿರುವ ಸರ್ವ ಸುಸಜ್ಜಿತವಾದ ವಸತಿ ಸಮುಚ್ಚಯದ ಒಂದನೇ ಹಂತದ ಅಪಾರ್ಟ್ಮೆಂಟ್ನ ಎಲ್ಲಾ ಪ್ಲಾಟ್ಗಳು ಮುಂಗಡವಾಗಿ ವಿಕ್ರಯಗೊಂಡಿದ್ದು, ಇದೀಗ ಎರಡನೇ ಹಂತದ ಅಪಾರ್ಟ್ಮೆಂಟ್ ನಿರ್ಮಾಣ ಕಾಮಗಾರಿಗೆ ಚಾಲನೆ ದೊರೆತಿದೆ. ಬೈಂದೂರು ಪಟ್ಟಣದಿಂದ ಅನತಿ ದೂರದಲ್ಲಿ ಬೈಂದೂರು ಗಂಗಾನಾಡು ರಸ್ತೆಯ ಭರತ್ ನಗರದಲ್ಲಿ ನಿರ್ಮಾಣವಾಗುತ್ತಿರುವ ಪೇಸ್-೧ ಹಾಗೂ ಪೇಸ್-೨ ಅಪಾರ್ಟ್ಮೆಂಟ್ ಎಲ್ಲಾ ರೀತಿಯಲ್ಲಿಯೂ ಅನುಕೂಲಕರವಾಗಿದ್ದು ಕೈಗೆಟುಕುವ ದರದಲ್ಲಿ, ಗರಿಷ್ಠ ಸೌಲಭ್ಯದೊಂದಿದೆ ಗ್ರಾಹಕರಿಗೆ ಲಭ್ಯವಾಗಲಿದೆ. ೧ ಬಿಹೆಚ್ಕೆ ಹಾಗೂ ೨ ಬಿಹೆಚ್ಕೆ ಅಪಾರ್ಟ್ಮೆಂಟ್ ಬೈಂದೂರು ರೈಲ್ವೆ ನಿಲ್ದಾಣಕ್ಕೆ ಹತ್ತಿರದಲ್ಲಿದೆ. ೫೦೦ಮೀಟರ್ ದೂರದಲ್ಲಿ ಸರಕಾರಿ ಪ್ರಥಮ ದರ್ಜೆ ಕಾಲೇಜು, ೭೦೦ ಮೀಟರ್ ದೂರದಲ್ಲಿ ಸೈಂಟ್ ಥಾಮಸ್ ರೆಸಿಡೆನ್ಸಿಯಲ್ ಶಾಲೆ, ಹಾಗೂ ೧.೫ಕಿ.ಮೀ ದೂರದಲ್ಲಿ ಮುಖ್ಯ ಬಸ್ ನಿಲ್ದಾಣ, ಮಾರ್ಕೆಟ್ ಹಾಗೂ ಇನ್ನಿತರ ಸೇವೆಗಳು ಲಭ್ಯವಾಗಲಿದೆ. ಬುಕ್ಕಿಂಗ್ ಪೂರ್ಣಗೊಂಡಿರುವ ಅಪಾರ್ಟ್ಮೆಂಟ್ ಪೇಸ್-೧ರಲ್ಲಿ ಮೂರು ಅಂತಸ್ತು ಈಗಾಗಲೇ ನಿರ್ಮಾಣಗೊಂಡಿದ್ದು, ಪೇಸ್-೨ರ…
