ಕುಂದಾಪ್ರ ಡಾಟ್ ಕಾಂ ಸುದ್ದಿ ಕುಂದಾಪುರ: ದುಬೈನ ಭಾರತೀಯ ವಿದ್ಯಾಸಂಸ್ಥೆ ಏಷಿಯನ್ ಕಾಲೇಜಿನಲ್ಲಿ ಪಿಯುಸಿ ವಿಜ್ಞಾನ ವಿಭಾಗದಲ್ಲಿ ವ್ಯಾಸಂಗ ಮಾಡುತ್ತಿರುವ ತಾಲೂಕಿನ ನಾಯ್ಕನಕಟ್ಟೆ ಮೂಲದ ಸ್ವಾತಿ ಪೈ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಅತುತ್ತಮ ಶ್ರೇಣಿಯಲ್ಲಿ ಉತ್ತೀರ್ಣರಾಗಿ ದುಬೈನಲ್ಲಿ ದ್ವಿತೀಯ ಪಿಯುಸಿ ಕಲಿತವರಲ್ಲಿ ಟಾಪರ್ ಆಗಿದ್ದಾರೆ. ಇದರೊಂದಿಗೆ ಬಯೋಲಜಿಯಲ್ಲಿ ಶೇ.100 ಅಂಕಗಳಿಸಿದ್ದು, ಚಿನ್ನದ ಪದಕನ್ನೂ ಪಡೆದಿದ್ದಾರೆ. ಕೆರ್ಗಾಲು ಗ್ರಾಮದ ಬೈಲ್ಕೆರೆಯ ಗಣೇಶ್ ಪೈ ಹಾಗೂ ಜ್ಯೋತಿ ಜಿ. ಪೈ ಪುತ್ರಿಯಾದ ಸ್ವಾತಿ ಕರ್ನಾಟಕದಲ್ಲಿ ಸಿಇಟಿ ವೈದ್ಯಕೀಯ ಪರೀಕ್ಷೆಯ 1463ನೇ ರ್ಯಾಂಕ್ ಪಡೆದಿದ್ದಾರೆ. ಸ್ವಾತಿ ಅವರ ತಂದೆ ಕಳೆದ 15 ವರ್ಷಗಳಿಂದ ದುಬೈನ ನೆಸ್ಲೆ ಕಂಪೆನಿಯ ಉದ್ಯೋಗಿಯಾಗಿದ್ದು, ಕುಟುಂಬವೂ ಅವರೊಂದಿಗೆ ವಾಸವಾಗಿದೆ. /ಕುಂದಾಪ್ರ ಡಾಟ್ ಕಾಂ ಸುದ್ದಿ/
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಮರವಂತೆಯ ಸೇವಾ, ಸಾಂಸ್ಕೃತಿಕ ವೇದಿಕೆ ’ಸಾಧನಾ’ ಆಶ್ರಯದಲ್ಲಿ ಉಡುಪಿಯ ಪ್ರಸಾದ್ ನೇತ್ರಾಲಯ, ನೇತ್ರಜ್ಯೋತಿ ಚಾರಿಟಬಲ್ ಟ್ರಸ್ಟ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೊಸೈಟಿಯ ಅಂಧತ್ವ ನಿವಾರಣಾ ವಿಭಾಗದ ನೆರವಿನೊಂದಿಗೆ ಅಲ್ಲಿನ ಸಾಧನಾ ಸಮುದಾಯ ಭವನದಲ್ಲಿ ರವಿವಾರ ಉಚಿತ ನೇತ್ರ ತಪಾಸಣಾ ಮತ್ತು ಚಿಕಿತ್ಸಾ ಶಿಬಿರ ನಡೆಯಿತು. ಪ್ರಸಾದ್ ನೇತ್ರಾಲಯದ ನೇತ್ರ ತಜ್ಞ ಡಾ. ಜೋಯಲ್ ಶಿಬಿರವನ್ನು ಉದ್ಘಾಟಿಸಿದರು. ಸಾಧನಾ ಅಧ್ಯಕ್ಷ ಗುರುದಾಸ್ ವಿ. ಶ್ಯಾನುಭಾಗ್ ಅಧ್ಯಕ್ಷತೆ ವಹಿಸಿದ್ದರು. ಶಿಬಿರದಲ್ಲಿ ೮೮ ಜನರು ಕಣ್ಣು ತಪಾಸಣೆ ಮಾಡಿಸಿಕೊಂಡರು. ಅವರಲ್ಲಿ ೧೮ ಜನರನ್ನು ಕಣ್ಣಿನ ಪೊರೆ ಶಸ್ತ್ರ ಚಿಕಿತ್ಸೆಗೆ ಆಯ್ಕೆಮಾಡಲಾಯಿತು. ಸಾಧನಾ ಸದಸ್ಯ ಜತೀಂದ್ರ ಮರವಂತೆ ಸ್ವಾಗತಿಸಿ, ವಂದಿಸಿದರು. ಸಾಧನಾ ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು.
ಚಂದ್ರಲೇಖಾ ರಾಕೇಶ್ | ಕುಂದಾಪ್ರ ಡಾಟ್ ಕಾಂ ಲೇಖನ ಪ್ರತಿ ವರ್ಷದಂತೆ ಪರಿಸರ ಕಾಳಜಿ ಬಗೆಗಿನ ಉದ್ದುದ್ದ ವಾಕ್ಯಗಳು. ಗಿಡ ನೆಡುವ ಸಡಗರ. ಪರಿಸರ ಸಂರಕ್ಷಣೆಯ ಅಣಿಮುತ್ತುಗಳು. ಎಲ್ಲಡೆ ಹಸಿರಿನಿಂದ ಕಂಗೊಳಿಸುವ ಬಣ್ಣ… ಮರು ವರ್ಷದ ಪರಿಸರ ದಿನಾಚರಣೆಯ ಹೊತ್ತಿಗೆ ನಗರವನ್ನು ಹಸಿರು ಕಾನನ ಮಾಡಿಬಿಡುತ್ತೇವೆಂಬ ಧಾವಂತ. ಹಾಗೆ ದಿನಗಳೆದಂತೆ ಆಡಿದ ಮಾತು, ಪರಿಸರದ ಬಗೆಗಿನ ಕಾಳಜಿಯನ್ನೇ ನೆನಪಿಸದ ಜಾಣ ಮರೆವು. ಇದು ನಾವು ಆಚರಿಸುತ್ತಿರುವ ಪರಿಸರ ದಿನಾಚರಣೆ! ಪರಿಸರ, ಪಕೃತಿ ನಮಗೆ ಯಾವುದನ್ನು ನೀಡಲ್ಲ ಹೇಳಿ. ಎಲ್ಲವನ್ನೂ ನೀಡುತ್ತದೆ. ಅಗಣಿತವಾದ ಅಮೂಲ್ಯ ಕೊಡುಗೆಗಳನ್ನು ನೀಡಿದೆ. ಪ್ರತಿಯೊಂದು ಜೀವ ಸಂಕುಲಕ್ಕೂ ಪ್ರಕೃತಿ ಅಗತ್ಯ, ಅನಿವಾರ್ಯ. ಆದರೆ ನಾವಿಂದು ಪರಿಸರಕ್ಕಾಗಿ, ಏನನ್ನು ಕೊಡುತ್ತಿದೇವೆ ಎಂಬುದನ್ನು ಪ್ರತಿಯೊಬ್ಬರೂ ತನಗೆ ತಾನೇ ಹಾಕಿಕೊಳ್ಳಬೇಕಾದ ಪ್ರಶ್ನೆ. ಉತ್ತರ ಮಾತ್ರ ನಗಣ್ಯ. ಕೊನೆ ಪಕ್ಷ ಇರುವ ಪರಿಸರವನ್ನು ರಕ್ಷಿಸಿಕೊಳ್ಳುವ ಬಗ್ಗೆ ಕಿಂಚಿತ್ತೂ ಯೋಚಿಸಲೂ ಆಗದಷ್ಟು ನಿಷ್ಕಾಳಜಿ. ಹಸಿರನ್ನು ಉಳಿಸಲು ಇದೆಯೆ ನಮಗೆ ಇಚ್ಚಾ ಶಕ್ತಿ? ದಿನದಿಂದ ದಿನಕ್ಕೆ ಮಾಲಿನ್ಯ…
ಕುಂದಾಪ್ರ ಡಾಟ್ ಕಾಂ ವರದಿ. ಗುಣಮಟ್ಟದ ಶಿಕ್ಷಣ ಕನಸು ಹೊತ್ತು ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಕಳೆದೆರಡು ದಶಕಗಳಿಂದ ಉತ್ಕೃಷ್ಟ ಹಾಗೂ ಶಿಸ್ತುಬದ್ಧ ಶಿಕ್ಷಣವನ್ನು ಕಲ್ಪಿಸಿ ಸಾರ್ಥಕತೆ ಕಂಡುಕೊಂಡ ಕಿರಿಮಂಜೇಶ್ವರ ಶುಭದಾ ಆಂಗ್ಲಮಾಧ್ಯಮ ಶಾಲೆಯು ಜಿಲ್ಲೆಯ ಹೆಸರಾಂತ ಶಿಕ್ಷಣ ಸಂಸ್ಥೆಗಳಲ್ಲಿ ಪ್ರಮುಖವೆನಿಸಿಕೊಂಡಿದೆ. ಸಮುದ್ರ ತೀರದ ನಯನಮನೋಹರ ಪ್ರಾಕೃತಿಕ ಮಡಿಲಿನಲ್ಲಿರುವ ಸಂಸ್ಥೆಯು ಉತ್ಕೃಷ್ಠ ಶೈಕ್ಷಣಿಕ ಸೇವೆಯಿಂದ ಜನಪ್ರಿಯತೆಯನ್ನು ಗಳಿಸಿ ಸಾವಿರಾರು ವಿದ್ಯಾರ್ಥಿಗಳ ಭವಿಷ್ಯಕ್ಕೆ ಬೆಳಕು ನೀಡುವ ಮಹತ್ಕಾರ್ಯದಲ್ಲಿ ಸಾರ್ಥಕ್ಯ ಕಂಡಿದೆ. ಶುಭದಾ ಎಜ್ಯುಕೇಶನ್ ಟ್ರಸ್ಟ್ ರಿ. ಆಡಳಿತಕ್ಕೊಳಪಟ್ಟ ಶುಭದಾ ಆಂಗ್ಲ ಶಾಲೆಯು ನಾವುಂದ ಮತ್ತು ಕಿರಿಮಂಜೇಶ್ವರ ಗ್ರಾಮಗಳ ಗಡಿಭಾಗವಾದ ಮಸ್ಕಿ ಎಂಬಲ್ಲಿ 1996ರಲ್ಲಿ ಸ್ಥಾಪಿಸಲ್ಪಟ್ಟಿದೆ. ಸಂಸ್ಥೆಯು ಕಳೆದ ಹಲವು ವರ್ಷಗಳಿಂದ ಪರಿಸರದಲ್ಲಿ ತನ್ನ ಉತ್ಕೃಷ್ಠ ಶಿಕ್ಷಣ ಸೇವೆಯಿಂದ ಜನಪ್ರಿಯತೆಯನ್ನು ಗಳಿಸಿ ಸಾವಿರಾರು ವಿದ್ಯಾರ್ಥಿಗಳಿಗೆ ಬೆಳಕಾಗಿದೆ. ಸುಸಜ್ಜಿತ ಹಾಗೂ ಅತ್ಯಾಧುನಿಕ ವ್ಯವಸ್ಥೆ ಹೊಂದಿರುವ ಔಪಚಾರಿಕ ಶಿಕ್ಷಣದೊಂದಿಗೆ ಮಕ್ಕಳ ಕ್ರಿಯಾಶೀಲ ಮತ್ತು ಸೃಜನಶೀಲ ಪ್ರವೃತ್ತಿಯನ್ನು ಪೋಷಿಸುವ ನಿಟ್ಟಿನಲ್ಲಿ ಕಲೆ, ಕ್ರೀಡೆ, ಸಂಸ್ಕೃತಿ ಮುಂತಾದ ಹತ್ತು-ಹಲವು ರಚನಾತ್ಮಕ ಚಟುವಟಿಕೆಗಳಿಗೆ…
ಕುಂದಾಪ್ರ ಡಾಟ್ ಕಾಂ ಸುದ್ದಿ ಕುಂದಾಪುರ: ಇಲ್ಲಿನ ಟಿ.ಟಿ.ರಸ್ತೆ ಶೀ ವಿಘೇಶ್ವರ ಯುವಕ ಸಂಘದ ರಜತ ಸಂಭ್ರಮ ಸಮಾರಂಭ ಕುಂದಾಪುರ ರೋಟರಿ ಲಕ್ಷ್ಮೀನರಸಿಂಹ ಕಲಾಮಂದಿರದಲ್ಲಿ ನಡೆಯಿತು. ಮುಂಬ್ಮಯಿ ಉದ್ಯಮಿ ಸುರೇಶ ಡಿ.ಪಡುಕೋಣೆ ಕಾರ್ಯಕ್ರಮ ಉದ್ಘಾಟಿಸಿ ಶುಭಹಾರೈಸಿದರು. ಸಮಾರಂಭದ ಅದ್ಯಕ್ಷತೆಯನ್ನು ಪುರಸಭೆಯ ಅದ್ಯಕ್ಷರಾದ ವಸಂತಿ ಮೋಹನ ಸಾರಂಗ ವಹಿಸಿದ್ದರು. ಮುಖ್ಯತಿಧಿಗಳಾಗಿ ಕಲಾಕ್ಷೇತ್ರ ಕುಂದಾಪುರ ಬಿ. ಕಿಶೋರ ಕುಮಾರ, ಸಹನಾ ಕನ್ವೆನ್ಷನ್ ಸೆಂಟರ್ ಅಂಕದಕಟ್ಟೆಯ ಸುರೇಂದ್ರಶೆಟ್ಟಿ, ಬಿಲಿಂಡರ್ ಚಲನಚಿತ್ರ ತಂಡದ ಓಂಗುರು, ಕುಂದಾಪುರ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ ಕಾಯದರ್ಶಿ ನಾಗರಾಜ ರಾಯಪ್ಪನಮಠ, ಸಂಸ್ಧೆಯ ಗೌರವಾದ್ಯಕ್ಷ ಶಿವಾನಂದ ವೇದಿಕೆಯಲ್ಲಿ ಉಪಸ್ಧಿತರಿದ್ದರು. ಇದೇ ಸಂದರ್ಭದಲ್ಲಿ ಚಿತ್ರದುರ್ಗದ ಸಾಹಸಿಗ ಜೋತಿರಾಜ್, ಭಾರತೀಯ ಸೇನೆಯ ರಾಜೇಶ ದಾರಿಮನೆ, ಬಿಲಿಂಡರ್ ಚಿತ್ರ ತಂಡವನ್ನು ಹಾಗೂ ರಾಷ್ಟ್ರ ಮಟ್ಟದ ವಾಲ್ ಕ್ಲೈಮಿಂಗ್ ಸ್ಪರ್ದೆಯ ಚಿನ್ನದ ಪದಕ ವಿಜೇತ ಅರ್ಜುನ ಇವರನ್ನು ಸನ್ಮಾನಿಸಲಾಯಿತು. ಸಂಸ್ಧೆಯ ಅದ್ಯಕ್ಷ ಕೃಷ್ಣ ದೇವಾಡಿಗ ಸ್ವಾಗತಿಸಿದರು. ಮಾಜಿ ಅದ್ಯಕ್ಷ ದಿನೇಶ ದೇವಾಡಿಗ ಸನ್ಮಾನಿತರ ಪರಿಚಯ ಮಾಡಿದರು. ಗುರುರಾಜ ಗಾಣಿಗ ಕಾರ್ಯಕ್ರಮ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಭಾರತೀಯ ಜೀವವಿಮಾ ನಿಗಮ ಕುಂದಾಪುರ ಶಾಖೆಯ ಹಿರಿಯ ಅಭಿವೃದ್ಧಿ ಅಧಿಕಾರಿ ಕೆ. ಕರುಣಾಕರ ಶೆಟ್ಟಿಯವರು ನಿವೃತ್ತ ಜೀವನಕ್ಕೆ ಪಾದಾರ್ಪಣೆ ಮಡುತ್ತಿರುವ ಸಂದರ್ಭದಲ್ಲಿ ಬೈಂದೂರಿನ ರೋಟರಿ ಭವನದಲ್ಲಿ ಜೀವವಿಮಾ ಪ್ರತಿನಿಧಿ ಬಳಗದ ವತಿಯಿಂದ ಬೀಳ್ಕೋಡುಗೆ ಸಮಾರಂಭ ನಡೆಯಿತು. ಭಾರತೀಯ ಜೀವವಿಮಾ ನಿಗಮದಲ್ಲಿ ಅಭಿವೃದ್ಧಿ ಅದಿಕಾರಿಯಾಗಿ ಸುಮಾರು 30 ವರ್ಷಗಳ ಕಾಲ ಸಲ್ಲಿಸಿದ ಅನುಪಮ ಸೇವೆಯನ್ನು ಸ್ಮರಿಸಿಕೊಂಡು, ಅವರ ಕಾರ್ಯವೈಖರಿಯನ್ನು ಪ್ರಶಂಸಿಸಿ, ಮುಂದಿನ ನಿವೃತ್ತ ಜೀವನವು ಶುಭದಾಯಕವಾಗಿರಲಿ ಎಂದು ಕೆ. ಕರುಣಾಕರ ಶೆಟ್ಟಿಯವರನ್ನು ಸನ್ಮಾನಿಸಲಾಯಿತು. ಸಮಾರಂಭದ ಅಧ್ಯಕ್ಷತೆಯನ್ನು ಭಾರತೀಯ ಜೀವವಿಮಾ ನಿಗಮ ಕುಂದಾಪುರ ಶಾಖೆಯ ಹಿರಿಯ ಶಾಖಾಧಿಕಾರಿ ಕೆ.ವಿ. ಕುಲಕರ್ಣಿ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಬೈಂದೂರು ಸಂಪರ್ಕ ಶಾಖೆಯ ಶಾಖಾಧಿಕಾರಿ ಜಿ. ಶಶಿಧರ ಹೆಗ್ಡೆ, ಕುಂದಾಪುರ ಶಾಖೆಯ ಉಪ ಶಾಖಾಧಿಕಾರಿ ಗುರುರಾಜ್ ಉಪಸ್ಥಿತರಿದ್ದರು. ಚಿತ್ತೂರು ಪ್ರಕಾಶ್ಚಂದ್ರ ಶೆಟ್ಟಿ ಸನ್ಮಾನಪತ್ರ ವಾಚಿಸಿದರು. ಬಿ.ಸೋಮಶೇಖರ ಶೆಟ್ಟಿ ಪರಿಚಯಿಸಿದರು. ಅಭಿವೃದ್ಧಿ ಅಧಿಕಾರಿಗಳಾದ ಡಿ.ಸತೀಶ್, ಸೋಮನಾಥನ್, ಸುರೇಶ್ ಪೂಜಾರಿ, ಮಾರ್ಟಿನ್ ಡಯಾಸ್, ಚಿತ್ತೂರು…
ಕುಂದಾಪ್ರ ಡಾಟ್ ಕಾಂ ಸುದ್ದಿ ಕುಂದಾಪುರ: ಕೇಂದ್ರ ಸರಕಾರಿ ನೌಕರರಿಗೆ ಸಮನಾದ ವೇತನ ಹಾಗೂ ಇನ್ನಿತರ ಭತ್ಯೆಗಳನ್ನು ರಾಜ್ಯ ಸರಕಾರವೂ ನೀಡಬೇಕು ಎಂದು ಆಗ್ರಹಿಸಿ ರಾಜ್ಯ ಸರಕಾರಿ ನೌಕರರು ಕಛೇರಿಗೆ ಗೈರು ಹಾಜರಾಗಿ ಮುಷ್ಕರ ನಡೆಸಿದರು. ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ಸದಸ್ಯರು ತಮ್ಮ ಕಛೇರಿಗೆ ಗೌರು ಹಾಜರಾಗಿ ರಾಜ್ಯಾದ್ಯಂತ ನಡೆಯುತ್ತಿರುವ ಪ್ರತಿಭಟನೆಗೆ ಬೆಂಬಲ ಸೂಚಿಸಿದರು.
ದಿಲೀಪ್ ಕುಮಾರ್ ಶೆಟ್ಟಿ | ಕುಂದಾಪ್ರ ಡಾಟ್ ಕಾಂ ಅಂಕಣ ಸೋಮಣ್ಣನ ಮದಿಲ್ ಸಮಾ ಮಾಡಿ ಮದ್ಯಾಹ್ನ ಉಂಡ್ಕಂಡ್ ಬಂದು, ಹೊರ್ಗ್ ಹಡಿಮಂಚದ ಮೇಲೆ ಬಿದ್ಕಂಡನಿಗೆ ಒಳ್ಳೆ ನಿದ್ರಿ. ರಾತ್ರಿಗೆ ಹರಿಪ್ರಸಾದದಲ್ಲಿ reception. ಕೋಳಿ ಮೂಳಿ, ಕುರಿ ಕಾಲ್ ಎಳಿತಿಪ್ಪು ಕನಸು. ಮನಸ್ಸಲ್ಲಿ ಮೂಳಿ ನೆನಪಾದ್ದೆ ತಡ, ನಿದ್ರಿ ಓಡಿ ಹೊಯಿ, ಕಣ್ಣ್ ಬಿಟ್ಟ್ ಕಾಂತಿ. ಗಂಟಿ 4. ಇನ್ನೆಂತ ಮಾಡುದ್, ಒಂದ್ ಒಳ್ಳೆ ಚಾ ಕುಡಿದು, ಡೈರಿಗೆನಾಲ್ಕ್ ಸೊಲ್ಗಿ ಹಾಲ್ ಕೊಟ್ಟಿಕೆ ಬಂದು, ಗುಡ್ಡಿಗೆ ಆಡುಕ್ ಹೊರಟಿ. ಇವತ್ತ್ ಆಡುಕೆ ಯಾರಿಗೂ ಮನಸಿಲ್ಲ. ಮದ್ಯಾನ ಸಮಾ ಹೊಟ್ಟಿ ಬಿರುವಷ್ಟು ತಿಂದ್ಕಂಡ್ ಬಂದಿತ್. ಕಡಿಕೆ ಒಂದು ಒಳ್ಳೆ ನಿದ್ರಿಯೂ ಆಯ್ತು. ಇನ್ನ್ ಎಂತ ಬೇಕು?. ಈಗ ಎಲ್ಲರೂ “receptionಗೆ ಎಷ್ಟೋತಿಗ್ ಹ್ವಾಪ ಮರೆ”, “first ಟ್ರಿಪ್ಅಲ್ಲೇ ಹ್ವಾಪ, ಕಡಿಕೆ ಜಾಗ ಸಿಕ್ಕುದಿಲ್ಲ”. “ಹೌದು ಮರೆ, ಬೇಗ ಹೊಯಿ,first ಪಂಕ್ತಿಗೆ ಕೂಕಂಡ್ ಉಂಡ್ಕಾ ಬಪ್ಪ, ಕಡಿಕ್-ಕಡಿಕೆ ಜನ ಜಾಸ್ತಿ ಆದ್ರೆ, ಹೋಳ್ ಹಾಕುದೆ…
ಕುಂದಾಪ್ರ ಡಾಟ್ ಕಾಂ ಸುದ್ದಿ ಗಂಗೊಳ್ಳಿ: ಗಂಗೊಳ್ಳಿಯ ಆಪ್ತ ಇಷ್ಟ ಮಿತ್ರ ಮಂಡಳಿ ವತಿಯಿಂದ ಮಲ್ಯರಮಠ ಶ್ರೀ ವೆಂಕಟರಮಣ ದೇವಸ್ಥಾನದ ವ್ಯವಸ್ಥಾಪಕ ಸಮಿತಿ ಸಹಕಾರದೊಂದಿಗೆ ಶ್ರೀ ವೆಂಕಟರಮಣ ದೇವರ ಭಜಕರ ಶ್ರೇಯೋಭಿವೃದ್ಧಿಗಾಗಿ ಗಂಗೊಳ್ಳಿಯ ಮಲ್ಯರಮಠ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ನಡೆಯುತ್ತಿರುವ ನವಗ್ರಹ ವಾಸ್ತು ಪುರಸ್ಪರ ಶ್ರೀ ಮಹಾವಿಷ್ಣು ಯಾಗದ ಮಹಾಪೂರ್ಣಾಹುತಿ ಕಾರ್ಯಕ್ರಮ ಜರಗಿತು. ಶ್ರೀ ಸಂಸ್ಥಾನ ಗೋಕರ್ಣ ಪರ್ತಗಾಳಿ ಜೀವೋತ್ತಮ ಮಠಾಧೀಶ ಶ್ರೀಮದ್ ವಿದ್ಯಾಧಿರಾಜ ತೀರ್ಥ ಶ್ರೀಪಾದ ವಡೇರ ಸ್ವಾಮೀಜಿಯವರ ದಿವ್ಯ ಉಪಸ್ಥಿತಿ ಹಾಗೂ ಮಾರ್ಗದರ್ಶನದಲ್ಲಿ ಯಜ್ಞದ ಧಾರ್ಮಿಕ ವಿಧಿವಿಧಾನಗಳು ಶಾಸ್ತ್ರೋಕ್ತವಾಗಿ ನಡೆಯಿತು. ಬಳಿಕ ಶ್ರೀದೇವರಿಗೆ ಮಹಾಪೂಜೆ, ರಾತ್ರಿ ಶ್ರೀದೇವರ ಪಲ್ಲಕಿ ಉತ್ಸವ ಮೊದಲಾದವುಗಳು ವಿಜೃಂಭಣೆಯಿಂದ ಜರಗಿತ. ಶ್ರೀ ಮಹಾವಿಷ್ಣು ಯಾಗದ ಅಂಗವಾಗಿ ಶ್ರೀ ವೆಂಕಟರಮಣ ದೇವರಿಗೆ ಶ್ರೀಗಂಧ ಲೇಪನ ಸೇವೆ ಮಂಗಳವಾರ ಜರಗಿತು. ಆಪ್ತ ಇಷ್ಟ ಮಿತ್ರ ಮಂಡಳಿ ಅಧ್ಯಕ್ಷ ಎಂ.ರಾಮಕೃಷ್ಣ ಪೈ ದಂಪತಿಗಳ ಯಜಮಾನಿಕೆಯಲ್ಲಿ ವೇದಮೂರ್ತಿ ಜಿ.ನಾರಾಯಣ ವಿಶ್ವನಾಥ ಆಚಾರ್ಯ, ವೇದಮೂರ್ತಿ ಜಿ.ವಸಂತ ಭಟ್, ದೇವಳದ ಪ್ರಧಾನ ಅರ್ಚಕ…
ಕುಂದಾಪ್ರ ಡಾಟ್ ಕಾಂ ಸುದ್ದಿ ಕುಂದಾಪುರ: ಸರ್ಕಾರಿ ಶಾಲೆಯಲ್ಲಿ ಆಂಗ್ಲ ಭಾಷೆಯಲ್ಲಿ ಶಿಕ್ಷಣ ನೀಡುವ ಅನಿವಾರ್ಯ ಪರಿಸ್ಥಿತಿ ಇಂದು ನಿರ್ಮಾಣವಾಗಿದ್ದು, ಶಾಲೆಯನ್ನು ಉಳಿಸಿಕೊಳ್ಳುವ ಹಾಗೂ ಎಲ್ಲ ವರ್ಗದ ವಿದ್ಯಾರ್ಥಿಗಳಿಗೂ ಖಾಸಗಿ ಶಾಲೆಯಲ್ಲಿರುವಂತೆ ಆಂಗ್ಲ ಭಾಷಾ ಶಿಕ್ಷಣ ನೀಡುವ ಯೋಜನೆಯನ್ನು ಶತಮಾನೋತ್ಸವದ ನೆನಪಿಗಾಗಿ ಆರಂಭಿಸುತ್ತಿದ್ದು, ಉಚಿತವಾಗಿ ಎಲ್.ಕೆಜಿ, ಯುಕೆಜಿ, ೧ನೇ ತರಗತಿಯನ್ನು ಈ ಬಾರಿ ಆರಂಭಿಸಲಾಗುತ್ತಿದೆ ಎಂದು ವಂಡ್ಸೆ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಉದಯಕುಮಾರ್ ಶೆಟ್ಟಿ ಹೇಳಿದರು. ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ವಂಡ್ಸೆ ಇಲ್ಲಿ ಪ್ರಸಕ್ತ ಸಾಲಿನಲ್ಲಿ ನೂತನವಾಗಿ ಆರಂಭಿಸಲಾದ ಆಂಗ್ಲಭಾಷಾ ಪೂರ್ವ ಪ್ರಾಥಮಿಕ ವಿಭಾಗ ಹಾಗೂ ೧ನೇ ತರಗತಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು. ಆಂಗ್ಲ ಭಾಷೆಯಲ್ಲಿ ಶಿಕ್ಷಣ ನೀಡುವುದು, ಈ ಬಗ್ಗೆ ಟ್ರಸ್ಟ್ನ ರಚನೆ, ದಾನಿಗಳ ಸಹಕಾರ, ರೋಟರಿ ಕ್ಲಬ್ ಮೂಲಕ ಪೀಠೋಪಕರಣ, ವಾಹನ ವ್ಯವಸ್ಥೆಯ ಬಗ್ಗೆ ಚಿಂತನೆಗಳು ನಡೆದಿದೆ. ಪೋಷಕರಿಂದ ಉತ್ತಮ ಪ್ರತಿಕ್ರಿಯೆ ಕಂಡು ಬಂದಿದ್ದು, ವ್ಯವಸ್ಥೆಯ ನಿಟ್ಟಿನಲ್ಲಿ ಸೀಮಿತ ಸಂಖ್ಯೆಗೆ ನಿಗದಿಪಡಿಸಲಾಗಿದೆ ಎಂದರು. ರಾಷ್ಟ್ರಪ್ರಶಸ್ತಿ ಪುರಸ್ಕೃತ…
