ದಿಲೀಪ್ ಕುಮಾರ್ ಶೆಟ್ಟಿ | ಕುಂದಾಪ್ರ ಡಾಟ್ ಕಾಂ ಅಂಕಣ
ಸೋಮಣ್ಣನ ಮದಿಲ್ ಸಮಾ ಮಾಡಿ ಮದ್ಯಾಹ್ನ ಉಂಡ್ಕಂಡ್ ಬಂದು, ಹೊರ್ಗ್ ಹಡಿಮಂಚದ ಮೇಲೆ ಬಿದ್ಕಂಡನಿಗೆ ಒಳ್ಳೆ ನಿದ್ರಿ. ರಾತ್ರಿಗೆ ಹರಿಪ್ರಸಾದದಲ್ಲಿ reception. ಕೋಳಿ ಮೂಳಿ, ಕುರಿ ಕಾಲ್ ಎಳಿತಿಪ್ಪು ಕನಸು. ಮನಸ್ಸಲ್ಲಿ ಮೂಳಿ ನೆನಪಾದ್ದೆ ತಡ, ನಿದ್ರಿ ಓಡಿ ಹೊಯಿ, ಕಣ್ಣ್ ಬಿಟ್ಟ್ ಕಾಂತಿ. ಗಂಟಿ 4. ಇನ್ನೆಂತ ಮಾಡುದ್, ಒಂದ್ ಒಳ್ಳೆ ಚಾ ಕುಡಿದು, ಡೈರಿಗೆನಾಲ್ಕ್ ಸೊಲ್ಗಿ ಹಾಲ್ ಕೊಟ್ಟಿಕೆ ಬಂದು, ಗುಡ್ಡಿಗೆ ಆಡುಕ್ ಹೊರಟಿ. ಇವತ್ತ್ ಆಡುಕೆ ಯಾರಿಗೂ ಮನಸಿಲ್ಲ. ಮದ್ಯಾನ ಸಮಾ ಹೊಟ್ಟಿ ಬಿರುವಷ್ಟು ತಿಂದ್ಕಂಡ್ ಬಂದಿತ್. ಕಡಿಕೆ ಒಂದು ಒಳ್ಳೆ ನಿದ್ರಿಯೂ ಆಯ್ತು. ಇನ್ನ್ ಎಂತ ಬೇಕು?. ಈಗ ಎಲ್ಲರೂ “receptionಗೆ ಎಷ್ಟೋತಿಗ್ ಹ್ವಾಪ ಮರೆ”, “first ಟ್ರಿಪ್ಅಲ್ಲೇ ಹ್ವಾಪ, ಕಡಿಕೆ ಜಾಗ ಸಿಕ್ಕುದಿಲ್ಲ”. “ಹೌದು ಮರೆ, ಬೇಗ ಹೊಯಿ,first ಪಂಕ್ತಿಗೆ ಕೂಕಂಡ್ ಉಂಡ್ಕಾ ಬಪ್ಪ, ಕಡಿಕ್-ಕಡಿಕೆ ಜನ ಜಾಸ್ತಿ ಆದ್ರೆ, ಹೋಳ್ ಹಾಕುದೆ ಇಲ್ಲ,ಬರಿ ಗಶಿ ತಾಗ್ಸಿಕೆ ಹ್ವಾತ್ರ್. “ “ಹೌದು ಮರಾಯ ಮನ್ನೆ ಸುಬ್ಬಣಣ್ಣನ ಮನಿ ಮದೆಗೆ ಹಾಂಗೆ ಆಯ್ತ್, last ಪಂಕ್ತಿಯಲ್ಲಿ ಕೂತವರಿಗೆ ಮೀನು ಫ್ರೈಯೂ ಇಲ್ಲ, ತೆಳ್ಳಿನ್ ದೋಸೆಯೂ ಇಲ್ಲ,..” ಇಂತಹ ಹತ್ತು ಹಲವು ಅಪಾಯಕಾರಿ, ಅನಿವಾರ್ಯ ಘಟನೆಗಳನ್ನು ವಿಶ್ಲೇಷಿಸಿ, ಎಲ್ಲರೂ ಬೇಗ ಮನಿಗೆ ಹೊಯಿ, ಸ್ನಾನ-ಗೀನ ಮಾಡಿ ಬೇಗ ಚಿತ್ತಾರಿ ಹತ್ರ ಸೇರುವ, ಅಲ್ಲಿ van ಬಂದ ಕೂಡ್ಲೆ ಹತ್ತಿ ಕೂಕಂಬ ಅಂದೇಳಿ ಮಾತು ಕತೆ ಅಯ್ತ್. “ಹ್ವಾ, ಮದಿ ಮನೆಗೆ ವಿ.ಸಿ.ಪಿ. ಎಗಳಿಕೆ ಹಾಕ್ತ್ರಂಬ್ರ್ ಮರೆ.. “ ಅಂದೇಳಿ ಕೇಂಡಾ ಮಾಣ. ಆವಂಗೆ ಎಗಳಿಕೂ, ಬೇರೆಯವರಿಗೆ ಬರದೇ ಇಪ್ಪು ಡೌಟುಗಳೇ ಬಪ್ಪುದ್. ಇಲ್ಲಿ ನಾವು ಹೊಟ್ಟೆಪಾಡಿನ ಬಗ್ಗೆ ಸುದೀರ್ಘ ಚರ್ಚೆ ಮಾಡ್ತಿತ್ತ್, ಅವಂಗೆ ವಿ.ಸಿ.ಪಿ. ಅಂಬೃ. “ಮಾರಾಯ, ಮದಿ ಆದ್ದ್ ಅಷ್ಟೆ, ಅವರಿಗೆ ಮದಿ ವೀಡಿಯೋ ಸಿಕ್ರ್ ಮೇಲೆ ಅಲ್ದಾನಾ ವಿ.ಸಿ.ಪಿ. ತರ್ಸುದ್. ಅಲ್ಲಿ ವರಿಗೆ ಸ್ವಲ್ಪ ತಡ್ಕೊ ಮರೆ.. “ ಅಂದೇಳಿ ಉಗ್ದಿ. ಮುಖ ವರ್ಸ್ಕಂತ ಮನಿ ಬದಿಗ್ ಹ್ವಾದ. ನಾವು ಬೇಗೆ ಬೇಗೆ ಗೂಡ್ ಸೇರ್ಕಂತ್. ಕುಂದಾಪ್ರ ಡಾಟ್ ಕಾಂ ಅಂಕಣ.
ಈಗಿನ್ ಮಕ್ಕಳು ಪಾಪ ಇದು ವಿ.ಸಿ.ಪಿ. ಅಂದ್ರೆ ಯಂತ ಮರೆ, ನಾನ್ ಸಿ.ಪಿ.ಯು. ಕೆಂಡಿದೆ, ಇದ್ಯಾವ್ದ್ ಹೊಸ technologyಯಾ ಅಂದೇಳಿ ಮಂಡಿ ಕೆಡಸ್ಕಣ್ಬೆಡಿ. V.C.P ಅಂದ್ರೆ VideoCassettePlayer. ಈಗ VCP ಬದ್ಲಿಗೆ CD ಬಂದಿತ್. ಮದುವೆ ಮನೆಯವರು, ಮದಿಯಲ್ಲಾ ಆದ ಮೇಲೆ, ಈ ಫೋಟೋ ದವರು ಮದಿ cassetteತಂದು ಕೊಟ್ಟ ಕೂಡ್ಲೆ, ಒಂದಿನ VCP ಬಾಡಿಗೆ ತರ್ಸಿ, ಮನಿಯವರು, ನೆರೆ ಮನೆಯವರು ಎಲ್ಲ ಕೂಕಂಡ್, ಪಟ್ಟಾಂಗ ಹೊಡಿತ, ಮದುವೆಯ ವೀಡಿಯೋ ಕಾಂತಿದಿರ್. “ಅಲ್ಲಾ, ಅಲ್ಕಾಣ್, ಆ ಹೆಣ್ಣ್ ಸೀರಿ ಉಟ್ಟರೆ ಎಷ್ಟ್ ದೊಡ್ಡಳಾಯಿ ಕಾಂತಾಳ್ ಅಲ್ದಾನಾ?” “ಇಲ್ಕಾಣ್, ಜಲ್ಜಕ್ಕನ ಜುಮ್ಕಿ ಈ ಪಾಟಿ ಹೊಳಿತ್ತಲ ಮರತಿ” “ಆ ಹಪ್ಪಿಡಿದ್ದ್ ಫೊಟೋಗ್ರಾಫರ್ , ಅಲ್ಕಾಣ್ ನನ್ನ ಒಂದ್ ಗಳ್ಗಿನೂ ಇಪ್ಪುಕ್ ಬಿಡ್ಲಿಲ್ಲ, ಓಡ್ಸಿ ಬಿಟ್ಟ..” “ಹ್ವಾಯಿ, ಅವ್ರು ನಿಮ್ಮ ದೊಡ್ಡಪ್ಪನ ತಮ್ಮನ ಎರಡನೇ ಮಗಳ್ ಅಲ್ದೆ?, ಮದಿ ಮನೆಗೆ ಕಂಡಂಗೆ ಆಯ್ಲಾ ಮರ್ರೆ. ಈ ಹೆಣ್ಣಿಗ್ ಇನ್ನೂ ಮದಿ ಅಯ್ಲಾ ಅಲ್ದೆ?”. ಹೀಂಗೆ ಜಡಿ-ಜಡಿ ಎಲ್ಲ ಒಟ್ಟು ಸೇರಿ, ಮದಿ ವೀಡಿಯೋ ಕಾಂತಾ, ಅವ್ರು ಹೀಂಗೆ,ಅವನ್ ಸೊಡ್ಡ್ ಹೀಂಗೆ ಆಂದೆಳಿ ಎಲ್ಲ ಮಾತಾಡುಕ್ ಶುರು ಮಾಡ್ರ್. ನಾವು ಅಲ್ಲಿಗೆ ಹ್ವಾದ್ದ್, ದಿನ ಕಾಂತಿದ್ದ ಸೊಡ್ಡನ್ನ, ಮತ್ತೆ ಆ ವೀಡಿಯೋ ದಲ್ಲಿ ಕಾಂಬುಕ್ ಅಲ್ಲ. ಇದೆಲ್ಲಾ ಆದ ಮೇಲೆ, ಹೊಸ ಹೊಸ ಪಿಕ್ಚರ್ ಕಾಂಬುಕೆ. “ಗಡಾ, ಕೋಟಕ್ಕೆ ಹೊಯಿ ವಿ.ಸಿ.ಪಿ. ತಕಂಡ್, ಹಾಂಗೆ ಒಳ್ಳೆ ಪಿಕ್ಚರ್ ಸಿಕ್ರೆ ಅದನ್ನೂ ಹಿಡ್ಕಂಡ್ ಬಾ.. “ ಅಂದೆಳಿ ಮಾಣನ ಹತ್ರ ಹೇಳುವತಿಗೆ, ನಾವು ಅಲ್ಲೇ ಇದಿತ್. ಕೂಡ್ಲೆ ಮಾಣಂಗೆ ಗಾಳಿ ಹಾಕಿ, ನಮಗೆ ಬೇಕಾದ ಪಿಕ್ಚರ್ ತಕಂಡ್ ಬಪ್ಪುಕ್ ಹೇಳಿ, ನಿಂದೇ ಸೈ ಮರೆ, ನೀನ್ ಇಲ್ದಿರ್ ಊರೆಗ್ ಯಾರಿಗಾರು ವಿ.ಸಿ.ಪಿ. ಕಾಂಬು ಭಾಗ್ಯ ಇರ್ತಿತ್ತನಾ?. ಅಂದೇಳಿ ಉಬ್ಬಿಸಿ ಕಳಸ್ತ್. ಅವನು ಪಾಪ ಸಾಯ್ಲಿ ಇವ್, ಅಂದೇಳಿ ಒಳ್ಳೊಳ್ಳೆ ಪಿಕ್ಚರ್ ಅನ್ನೆ ಹಿಡ್ಕಂಡ್ ಬಂದ. /ಕುಂದಾಪ್ರ ಡಾಟ್ ಕಾಂ ಅಂಕಣ./
ಈ ಹೆಂಗಸರ commentary ಮುಗುವತಿಗೆ ಗಂಟೆ 10 ಆಯ್ತ್. “ಗಡಾ, ಒಂಚೂರ್ ಹಿಂದಿಂದ ಹಾಕುಲೆ, ಅದು ನಮ್ಮ ಬಚ್ಚಿ ಮಗಳಲ್ದಾ?, ಬೆಂಗಳೂರಿನ ಗಂಡಿನ ಒಟ್ಟಿಗೆ ಓಡಿ ಹೊಯಿದಿತಲ್ದಾ?. ಈಗ ಕಂಡ್ರೆ ಬಸ್ರಿ ಅಂಬೆಗ್ ಇತ್ತ್. ಒಂಚೂರ್ ಅಲ್ಲೇ rewind ಮಾಡುಲೆ ಗಡ..” gossipಗೌರಿಯಕ್ಕ ಮತ್ತೆ ರಾಗ ಶುರು ಮಾಡಿದ್ರ್. “ಹ್ವಾಯಿ, ನಾಳಿಗೆ ಬೆಳಿಗ್ಗೆ ನೀವು ಒಬ್ರೆ ಬಂದು ಕಾಣ್ತೆ ಆಯ್ಕಣಿ, ಈಗ ಮಕ್ಕಳೆಲ್ಲಾ ಹೊಸ ಪಿಕ್ಚರ್ ಕಾಣ್ಕ್ ಅಂದೇಳಿ ಬಂದಿದೊ. ಸ್ವಲ್ಪ ಸುಮ್ಮನೆ ಆಯ್ಕಣಿ ಮರ್ರೆ..” ಅಂದೆಳಿ ಉಗ್ದ ಸೋಮಣ್ಣ. ಅವ್ನಿಗೂ ಟಿವಿ ಅಲ್ಲಿ ಅವನದ್ದೆ ಸೊಡ್ಡು ಕಂಡು-ಕಂಡು ಬೇಜಾರ್ ಆಯ್ತ್ ಇರ್ಕ್. ಅಂತೂ ಪಿಕ್ಚರ್ ಕಾಂಬುಕ್ ಬಂದ್ ಮಕ್ಕಳೆಲ್ಲಾ ಕಾಲ್ ಮೇಲ್ ಎತ್ಕಂಡ್ ಒಬ್ಬರ ಮೇಲೆ ಒಬ್ಬರು ತೆವಡ್ಕಂಡು, ಕಣ್ಣು ಬ್ಯಾಳಿ ದೊಡ್ಡದು ಮಾಡ್ಕಂಡು ಟಿವಿನೇ ಗುರಾಯ್ಶುಕೆ ಶುರು ಮಾಡಿದೊ. ಈಗೆಲ್ಲ ಪಿಕ್ಚರ್ ಕಾಣ್ಕ್ ಅಂದ ಕೂಡಲೆ ಥಿಯೇಟರ್ ಗೆ ಹೊಯ್ಲಕ್, ಇಲ್ಲ ಇಂಟರ್ನೆಟ್ ಅಲ್ಲೇ ಡೌನ್ಲೋಡ್ ಮಾಡಿ ಕಾಣ್ಲಕ್. ನಮ್ಮ ಕಾಲದೆಗೆ ಅದೆಲ್ಲ ಕಷ್ಟುವೆ. ಹೀಂಗೆ ಯಾರಾದ್ರೂ ಮದಿಯಾಯಿ, ಬಿಟ್ಟಿ V.C.P ಹಾಕಿ ಕೊಟ್ರೆ ಹಾಂಗೂ, ಹೀಂಗೂ ಮಾಡಿ, ನಾಳಿಗ್ ಶಾಲಿಗೆ ರಜಿ ಹಾಕುದಾರು ಸೈ, ಪಿಕ್ಚರ್ ಕಾಂಬು ಪ್ಲಾನ್ ಮಾಡ್ತಿತ್ತ್. ಒಂದು cassette ಅರ್ದಂಬರ್ದ ಬಂದ್ ಮದ್ಯ ಕಚ್ಕಂಡ್ ಕೂಡ್ಲೆ, ಪೆನ್ನೊ, ಪೆನ್ಸಿಲ್ ಹಿಡ್ಕಂಡ್ cassette ತಿರ್ಸಿ, ಮತ್ತೆ V.C.P ಗೆ ಹಾಕಿ, ನಿದ್ರಿ ಕಣ್ಣನ್ನ ದೊಡ್ಡದ್ ಮಾಡ್ಕಂಡ್ ಪಿಕ್ಚರ್ ಕಾಂಬು ಮಜವೇ ಬೇರೆ ಬಿಡಿ. ಈಗಾ ವಿ.ಸಿ.ಪಿ ಜಮಾನ ಇಲ್ಲದೆ ಇದ್ರೂ, ನಿಮ್ಮನೇಗೆ ಹುಡ್ಕ್ರೆ V.C.Pcassette ಸಿಕ್ದೆ ಇರುದಿಲ್ಲ. ಗೆಳೆಯರೆಲ್ಲ ಒಟ್ಟಿಗೆ ಕೂಕಂಡ್ ಪಿಕ್ಚರ್ ಕಾಂಬುದ್ ಎಷ್ಟ್ ಚಂದಾ ಅಲ್ದೆ?. ಈಗ V.C.P ಇಲ್ದಿರ್ ಎನಾಯ್ತ್, ಸಿಡಿ ಪ್ಲೇಯರ್ ತಕಂಡ್ ಬಂದ್ ಎಲ್ಲರನ್ನೂ ಒಟ್ಟ್ ಹಾಕಿ, ಒಂದ್ಸಲ ನಿಮ್ಮ ಮದುವೆ ಸಿಡಿ ಕಾಣಿ. ಎನಂತ್ರಿ?. /ಕುಂದಾಪ್ರ ಡಾಟ್ ಕಾಂ ಅಂಕಣ/