Author: ನ್ಯೂಸ್ ಬ್ಯೂರೋ

ಅಮಾಸೆಬೈಲಿನಲ್ಲಿ ಬೃಹತ್ ಸೋಲಾರ್ ದೀಪ ಅಳವಡಿಕೆ ಯೋಜನೆಗೆ ಚಾಲನೆ ಕುಂದಾಪ್ರ ಡಾಟ್ ಕಾಂ ಸುದ್ದಿ. ಅಮಾಸೆಬೈಲು: ಅಮಾಸೆಬೈಲು ಚಾರೀಟೆಬಲ್ ಟ್ರಸ್ಟ್, ಶ್ರೀ ಕ್ಷೇತ್ರ.ಧರ್ಮಸ್ಥಳ ಗಾಮಾಭೀವೃದ್ಧಿ ಯೋಜನೆ, ಕರ್ಣಾಟಕ ಬ್ಯಾಂಕ್, ಸ್ಥಳೀಯ ಗ್ರಾಮ ಪಂಚಾಯಿತಿ ಹಾಗೂ ವಿವಿಧ ಇಲಾಖೆಗಳ ಸಹಕಾರದೊಂದಿಗೆ ಅಮಾಸೆಬೈಲು ಅಭಿವೃದ್ಧಿ ಹೊಂದಿದೆ. ಇಲ್ಲಿನ ಮನೆಗಳಿಗೆ ಸೋಲಾರ್ ದೀಪಗಳ ಅಳವಡಿಕೆಯ ಮೂಲಕ ರಾಜ್ಯದಲ್ಲಿ ಪ್ರಪ್ರಥಮ ಸಂಪೂರ್ಣ ಸೋಲಾರ್ ಗ್ರಾಮದ ಹೆಗ್ಗಳಿಕೆಗೆ ಪಾತ್ರವಾಗುತ್ತಿರುವುದು ಪ್ರಶಂಸನೀಯ ಎಂದು ನಿವೃತ್ತ ನ್ಯಾಯಾಧೀಶ ಹಾಗೂ ನಿವೃತ್ತ ಲೋಕಾಯುಕ್ತ ನ್ಯಾ ಸಂತೋಷ ಹೆಗ್ಡೆ ಹೇಳಿದರು. ಅವರು ಅಮಾಸೆಬೈಲು ಪೇಟೆ ವೃತ್ತದಲ್ಲಿ ಮಚ್ಚಟ್ಟು ಕೃಷ್ಣರಾಯ ಕೊಡ್ಗಿ ಸ್ಮರಣಾರ್ಥ ಅಮಾಸೆಬೈಲು ಚಾರೀಟೆಬಲ್ ಟ್ರಸ್ಟ್ ಅಧ್ಯಕ್ಷ ಎ.ಜಿ.ಕೊಡ್ಗಿ ಅವರು ರೂ. ಒಂದು ಲಕ್ಷ ವೆಚ್ಚದಲ್ಲಿ ನಿರ್ಮಿಸಿದ ಸೋಲಾರ್ ದೀಪವನ್ನು ಬುಧವಾರ ಲೋಕಾರ್ಪಣೆಗೊಳಿಸಿ, ನಂತರ ಸ್ಥಳೀಯ ಪ್ರೌಢ ಶಾಲೆ ಆವರಣದಲ್ಲಿ ಗ್ರಾಮದಲ್ಲಿ ಅನುಷ್ಠಾನಗೊಳ್ಳುತ್ತಿರುವ ವಿವಿಧ ಯೋಜನೆಗಳ ಲೋಕಾರ್ಪಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಸ್ವಾತಂತ್ರ್ಯಾ ನಂತರ ನಮ್ಮ ಹಿಂದಿನವರ ಚಿಂತನೆಗಳನ್ನು ಸಾಕಾಕಾರಗೊಳಿಸುವಲ್ಲಿ ಇಂದಿನ ರಾಜಕಾರಣಿಗಳಲ್ಲಿ ಸಂಪೂರ್ಣ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ ಕುಂದಾಪುರ: ಇಲ್ಲಿನ ಹೊಸ ಬಸ್ಸು ನಿಲ್ದಾಣದಲ್ಲಿ ತಡ ರಾತ್ರಿಯ ವೇಳೆಗೆ ಸುಮಾರು ನಲ್ವತ್ತು ವರ್ಷ ಪ್ರಾಯದ ಗಂಡಸಿನ ಅಪರಿಚಿತ ಶವವೊಂದು ಪತ್ತೆಯಾಗಿದೆ. ಧೋ ಎಂದು ಸುರಿಯುತ್ತರಿದ್ದ ಮಳೆಯ ನಡುವೆ ಹೊಸ ಬಸ್ಸು ನಿಲ್ದಾಣದಲ್ಲಿ ಮರದ ಕೆಳಗೆ ಮಲಗಿರುವ ಸ್ಥಿತಿಯಲ್ಲಿ ಪತ್ತೆಯಾಗಿದೆ. ಮಳೆ ಸುರಿಯುತಲಿದ್ದರೂ ಆತ ಎದ್ದೇಳದಾಗ ಬಸ್ಸು ನಿಲ್ದಾಣದಲ್ಲಿದ್ದ ತಲ್ಲೂರು ಗ್ರಾ.ಪಂ. ಸದಸ್ಯ ಸುನೀಲ್ ತಲ್ಲೂರು ಹಾಗೂ ಡಾ| ರಾಜ್ ಬಳಗದ ಅಧ್ಯಕ್ಷ ರತ್ನಾಕರ ಪೂಜಾರಿ ಕುಂದಾಪುರ ಠಾಣೆಗೆ ಮಾಹಿತಿ ನೀಡಿದ್ದಾರೆ. ಈ ಅಪರಿಚಿತ ವ್ಯಕ್ತಿಯು ಮದ್ಯಾಹ್ನ ಸುಮಾರಿಗೆ ಹೊಸ ಬಸ್ ನಿಲ್ದಾಣಕ್ಕೆ ಬಂದಿದ್ದು, ನನಗೆ ಹುಷಾರಿಲ್ಲ ಆಸ್ಪತ್ರೆಗೆ ಸೇರಿಸಿ ಎಂದು ಕೆಲವರಲ್ಲಿ ಅಲವತ್ತು ಕೊಂಡಿದ್ದು ಯಾರೋಬ್ಬರೂ ಆಸ್ಪತ್ರೆಗೆ ಸೇರಿಸಿರಲಿಲ್ಲ ಎನ್ನಲಾಗಿದೆ. ಬಳಿಕ ಬಸ್ಸು ನಿಲ್ದಾಣ ಮದ್ಯೆ ಮರದ ತಂಪು ನೆರಳಿನ ಆಶ್ರಯ ಪಡೆದ ಆತ ತಡ ರಾತ್ರಿ ವೇಳೆಗೆ ಸುರಿಯುತ್ತಿದ್ದ ಮಳೆಯಲ್ಲಿ ಗಮನಿಸಿದಾಗ ಶವವಾಗಿ ಹೋಗಿದ್ದಾನೆ. /ಕುಂದಾಪ್ರ ಡಾಟ್ ಕಾಂ ಸುದ್ದಿ/

Read More

ಕುಂದಾಪ್ರ ಡಾಟ್ ಕಾಂ ಸುದ್ದಿ ಕುಂದಾಪುರ: ತನ್ನ ತೋಟಕ್ಕೆ ಹಸುವೊಂದು ಮೇಯಲು ಬಂತೆಂಬ ಕಾರಣಕ್ಕೆ ಅದನ್ನು ಸಜೀವವಾಗಿ ಹೊಂಡದಲ್ಲಿ ಹೂತು ಕೊಂದುಹಾಕಿದ ಅಮಾನುಷ ಕೃತ್ಯವೊಂದು ತಾಲೂಕಿನ ಹಕ್ಲಾಡಿ ಗ್ರಾಪಂ ವ್ಯಾಪ್ತಿಯ ಕುಂದಬಾರಂದಾಡಿ ಎಂಬಲ್ಲಿ ನಡೆದಿದೆ. ಪ್ರಕರಣದಲ್ಲಿ ಭಾಗಿಯಾದ ಗಂಗಪ್ಪ ಎಂಬುವವನನ್ನು ಬಂಧಿಸಲಾಗಿದ್ದು, ಇತರರು ತಲೆ ಮರೆಸಿಕೊಂಡಿದ್ದಾರೆ. ಕುಂದಾಬಾರಂದಾಡಿಯ ನೆಂಚಾರು ಮನೆ ಲಕ್ಷ್ಮೀ ಪೂಜಾರ್ತಿ ಎಂಬುವವರಿಗೆ ಸೇರಿದ ದನವನ್ನು ಮೇಯಲು ಹೊರಕ್ಕೆ ಬಿಟ್ಟಾಗ ಸಮೀಪದ ಪರಮೇಶ್ವರ ಗಾಣಿಗ ಎಂಬುವವರ ತೋಟಕ್ಕೆ ನುಗ್ಗುತ್ತಿತ್ತು ಎನ್ನಲಾಗಿದೆ. ಆದರೆ ನಿನ್ನೆ ಸಂಜೆ ದನವು ಮನೆಗೆ ಹಿಂತಿರುಗದ್ದನ್ನು ನೋಡಿ ಲಕ್ಷ್ಮೀ ಪೂಜಾರ್ತಿ ಅವರ ತೋಟದಲ್ಲಿಯೇ ಹುಡುಕಾಟ ನಡೆಸಿದ್ದಾರೆ. ಕೊನೆಗೆ ಪರಮೇಶ್ವರ ಅವರ ಜಾಗದಲ್ಲಿದ್ದ ಕೊಟ್ಟಿಗೆ ಸಮೀಪ ಮಣ್ಣು ಮುಚ್ಚಿದ ಹಾಗಿರುವುದನ್ನು ನೋಡಿ, ಗುದ್ದಲಿಯಿಂದ ಅಗೆದಾಗ ಹಸುವಿನ ಮುಖ ಕಂಡುಬಂದಿತ್ತು. ಆಕೆ ಕೂಗಿಕೊಳ್ಳುತ್ತಿದ್ದಂತೆ ಆಸುಪಾಸಿನ ಜನ ಒಟ್ಟುಸೇರಿ ಮಣ್ಣು ತೆಗೆದು ದನವನ್ನು ಮೇಲಕ್ಕೆತ್ತಿದ್ದಾರೆ. ಅಲ್ಲಿಯವರೆಗೂ ಜೀವಂತವಾಗಿದ್ದ ಹಸು, ಸ್ವಲ್ಪ ಹೊತ್ತಿನ ಬಳಿಕ ಅಸುನೀಗಿದೆ. ತೋಟದ ಮಾಲಿಕನ ಈ ಅಮಾನವೀಯ ಕೃತ್ಯದ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ವಿವೇಕಾನಂದರ ತತ್ವಾದರ್ಶಗಳನ್ನು ಪ್ರಚುರ ಪಡಿಸುವ ಮತ್ತು ಯುವಜನರಲ್ಲಿ ಜಾಗೃತಿ ಮೂಡಿಸಿ ನವ ಚೈತನ್ಯ ತುಂಬುವ ಉದ್ದೇಶದೊಂದಿಗೆ ರಾಜ್ಯ ಮಟ್ಟದಲ್ಲಿ ಕಾರ್ಯಾಚರಿಸುತ್ತಿರುವ ಯುವ ಜಾಗೃತಾ ವೇದಿಕೆಯ ಉಡುಪಿ ಜಿಲ್ಲಾಧ್ಯಕ್ಷರಾಗಿ ಯುವ ಮುಂದಾಳು ಚರಣ್ ಬೈಂದೂರು ಆಯ್ಕೆಗೊಂಡಿದ್ದಾರೆ. ಬೆಂಗಳೂರಿನ ಖಾಸಗಿ ಕಂಪೆನಿಯೊಂದರಲ್ಲಿ ಉದ್ಯೋಗಿಯಾಗಿರುವ ಚರಣ್ ಅವರು ಬಿಡುವಿನ ವೇಳೆಯಲ್ಲಿ ಬೈಂದೂರು ಭಾಗದ ಸಂಘ ಸಂಸ್ಥೆ, ಸಂಘಟನಾ ಕಾರ್ಯಗಳಲ್ಲಿ ಸಕ್ರೀಯವಾಗಿ ತೊಡಗಿಸಿಕೊಂಡಿದ್ದರು. ಯುವ ಜಾಗೃತಾ ವೇದಿಕೆಯ ರಾಜ್ಯಾಧ್ಯಕ್ಷ ಸಂದೀಪ್ ಪಾಟೀಲ್ ಚರಣ್ ಅವರನ್ನು ಆಯ್ಕೆ ಮಾಡಿದ್ದಾರೆ. ಬೈಂದೂರು ಬಿಜೆಪಿ ಕ್ಷೇತ್ರಾಧ್ಯಕ್ಷ ಸುಕುಮಾರ ಶೆಟ್ಟಿ ಚರಣ್ ಬೈಂದೂರು ಅವರನ್ನು ಅಭಿನಂದಿಸಿದ್ದಾರೆ. / ಕುಂದಾಪ್ರ ಡಾಟ್ ಕಾಂ ಸುದ್ದಿ/

Read More

ಕುಂದಾಪ್ರ ಡಾಟ್ ಕಾಂ. ಬೆಂಗಳೂರು: ಮೇ ತಿಂಗಳು ಮುಗಿಯುತ್ತಿದಂತೆ ಯಕ್ಷಗಾನ ಮೇಳಗಳಿಗೆ ಒಂದು ವಿರಾಮ. ಗೆಜ್ಜೆಗಳನ್ನೆಲ್ಲ ಕಟ್ಟಿ ಪೆಟ್ಟಿಗೆಯಲಿಟ್ಟು ಅಟ್ಟ ಸೇರಿಸಿಬಿಡುತ್ತವೆ. ಸತತ ಆರು ತಿಂಗಳಿಂದ ದುಡಿದು ದಣಿದ ದೇಹಕ್ಕೆ ವಿಶ್ರಾಂತಿ. ಊರಿನಲ್ಲಿ ದಿನನಿತ್ಯ ಸುಮಾರು ೩೦ಕ್ಕೂ ಹೆಚ್ಚು ಮೇಳಗಳು ಕಲಾ ತಿರುಗಾಟ ಮಾಡುತ್ತಿರುತ್ತವೆ. ಮಳೆಗಾಲದ ಶುರು ಆಗುತ್ತಿದಂತೆ ಅವುಗಳಲ್ಲಿ ಆಯ್ದ ಕೆಲವರು ತಮ್ಮಲ್ಲಿಯೇ ಒಂದು ತಂಡ ಕಟ್ಟಿಕೊಂಡು ಮುಂಬಯಿ, ಬೆಂಗಳೂರು, ಹೈದರಬಾದ್ ನಂತಹ ಕರಾವಳಿಯ ಜನರು ಹೆಚ್ಚು ಇರುವ ಕಡೆ ಪ್ರದರ್ಶನ ನೀಡುತ್ತಾರೆ. ಈ ಮೂಲಕ ತಮ್ಮ ಮಳೆಗಾಲದ ಜೀವನವನ್ನು ಸರಿದೂಗಿಸಿಕೊಳ್ಳುತ್ತಾರೆ. ಜೂನ್ ಪ್ರಾರಂಭವಾಗುತ್ತಿದ್ದಂತೆ ಬೆಂಗಳೂರಿನ ಯಕ್ಷಪ್ರೇಮಿಗಳಿಗೆ ಒಂದು ಸಂಭ್ರಮ. ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ಸದಾ ಒಂದಿಲ್ಲೊಂದು ಯಕ್ಷಗಾನ ಆಗುತ್ತಲೆ ಇರುತ್ತದೆ. ‘ಆತ ಎಲ್ಲಿ ಸಿಗದೆ ಇದ್ರೂ ಕಲಾಕ್ಷೇತ್ರದಲ್ಲಿ ಖಂಡಿತ ಸಿಗುತ್ತಾನೆ’ ಕಲಾಪ್ರೇಮಿಯ ಕುರಿತು ನಮ್ಮಲ್ಲಿ ಇಂತಹದೊಂದು ಮಾತಿದೆ. ವೃತ್ತಿಜೀವನದ ಒತ್ತಡದೊಂದಿಗೆ ತಮ್ಮ ಇಷ್ಟದ ಯಕ್ಷಗಾನವನ್ನು ನೋಡುವಲ್ಲಿ ಬಹುತೇಕ ಕರಾವಳಿಗರು ಹಾತೊರೆಯುತ್ತಾರೆ. ಇಲ್ಲಿ ಪೌರಾಣಿಕ, ಸಾಮಾಜಿಕ ಎರಡು ರೀತಿಯ ಪ್ರಸಂಗಗಳನ್ನು…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಅಖಿಲ ಭಾರತ ಕಿಶಾನ್‌ಸಭಾಕ್ಕೆ ಸಂಯೋಜಿಸಲ್ಪಟ್ಟ ಕರ್ನಾಟಕ ಪ್ರಾಂತ ರೈತ ಸಂಘದ ಕುಂದಾಪುರ ತಾಲೂಕು ಸಂಘಟನಾ ಸಮಿತಿ ನೇತೃತ್ವದಲ್ಲಿ ರೈತರ ಪ್ರಮುಖ ಬೇಡಿಕೆಗಳನ್ನು ಈಡೇರಿಸಲು ಒತ್ತಾಯಿಸಿ ಕುಂದಾಪುರ ಸಹಾಯಕ ಕಮಿಷನರ್ ಕಛೇರಿ ಎದುರು ಪ್ರತಿಭಟನೆ ನಡೆಸಲಾಯಿತು. ರಾಜ್ಯವ್ಯಾಪಿ ಜರುಗುವ ಪ್ರತಿಭಟನಾ ಹೋರಾಟ ಕಾರ್ಯಕ್ರಮದ ಅಂಗವಾಗಿ ರೈತರ ಪ್ರಮುಖ ಬೇಡಿಕೆಗಳಾದ – ತೆಂಗು, ರಬ್ಬರ್, ಮತ್ತು ಅಡಿಕೆ ಬೆಳೆಗಾರರನ್ನು ರಕ್ಷಿಸಿ, ಬೆಳೆಗೆ ಬೆಲೆ ಹೆಚ್ಚಳ ಮಾಡಬೇಕು. ನಮೂನೆ 50 ಮತ್ತು 53 ರಲ್ಲಿ ಅಕ್ರಮ ಸಕ್ರಮಿಕರಣ ಕೋರಿ ಅರ್ಜಿ ಸಲ್ಲಿಸಿದ ಬಡ ರೈತರಿಗೆ ಕೂಡಲೇ ಭೂಮಿ ಮಂಜೂರಾತಿ ಹಕ್ಕು ಪತ್ರ ನೀಡಬೇಕು. ಕುಂದಾಪುರ ತಾಲೂಕಿನ ರಬ್ಬರ್ ಮತ್ತು ಅಡಿಕೆ ಕೃಷಿಕರು ಸಾಲ ಬಾಧೆಯಿಂದ ೫ ಮಂದಿ ಆತ್ಮಹತ್ಯೆ ಮಾಡಿಕೊಂಡ ರೈತ ಕುಟುಂಬಕ್ಕೆ ಪರಿಹಾರ ಧನ ಮಂಜೂರು ಮಾಡಬೇಕು. ಮಧ್ಯವರ್ತಿ ಶ್ರೀಮಂತ ವ್ಯಾಪಾರಸ್ತರ ಲಾಭಕೋರ ನೀತಿಯನ್ನು ತಡೆಗಟ್ಟಬೇಕು. ಇತ್ಯಾದಿ ಬೇಡಿಕೆಗಳ ಮನವಿಯನ್ನು ಸಹಾಯಕ ಕಮಿಷನ್‌ರವರಿಗೆ ಹಸ್ತಾಂತರಿಸಲಾಯಿತು. ಕರ್ನಾಟಕ ಪ್ರಾಂತ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ ಕುಂದಾಪುರ: ಈ ಈಗಿನ ಸರಕಾರದ ಬಗೆಗೆ ಮಾತನಾಡಿದರೆ ಅದು ಸರಕಾರದ ವಿರುದ್ದ ಟೀಕೆ ಮಾಡಿದಂತಾಗುವುದು. ಹೇಳಿ ಕೇಳಿ ನಾವು ಬಿಜೆಪಿಗರು. ಆದರೆ ನಮ್ಮ ಬದಲಿಗೆ ಕಾಂಗ್ರೆಸ್ ಪಕ್ಷದವರೇ ಸರಕಾರದ ವಿರುದ್ದ ಹೇಳಿಕೊಂಡು ತಿರುಗುತ್ತಿದ್ದಾರೆ. ಮುಖ್ಯಮಂತ್ರಿಯಿಂದ ಹಿಡಿದು ಸಚಿವ ಸಂಪುಟದ ಬಗ್ಗೆ ಅವರ ಪಕ್ಷದ ಹಿರಿಯ ಸದಸ್ಯರು, ಸಭಾಧ್ಯಕ್ಷರು ಸರ್ಕಾರಕ್ಕೆ ಪದೇ ಪದೇ ಚಾಟೀ ಬೀಸುತ್ತಿದ್ದಾರೆ. ಈ ನೆಲೆಯಲ್ಲಿ ಯಾವ ಹಂತಕ್ಕೆ ಆಡಳಿತ ಯಂತ್ರ ಕುಸಿದಿರಬಹುದೆಂದು ಅಂದಾಜಿಸಬಹುದು. ಇಷ್ಟು ಕೆಟ್ಟ ಸರ್ಕಾರ ಇದೇ ಮೊದಲು ರಾಜ್ಯವಾಳುತ್ತಿದೆ ಎಂದು ಕರ್ನಾಟಕ ರಾಜ್ಯ ಲೋಕೋಪಯೋಗಿ ಮಾಜಿ ಸಚಿವ ಸಿಎಂ ಉದಾಸಿ ಹೇಳಿದರು. ಉದಾಸಿ ತಮ್ಮ ದಾಂಪತ್ಯ ಜೀವನದ ೫೦ ವರ್ಷಾಚರಣೆಯ ಪ್ರಯುಕ್ತ ಪತ್ನಿ ನಿಲಾಂಬಿಕಾ ಹಾಗೂ ಸಹೋದರಿ ಶಿವಗಂಗಾ ಜೊತೆಗೂಡಿ ಕೊಲ್ಲೂರಿಗೆ ಭೇಟಿನೀಡಿ ಶ್ರೀಮೂಕಾಂಬಿಕೆಗೆ ವಿಶೇಷ ಪೂಜೆ ಸಲ್ಲಿಸಿ ನಂತರ ಹೇರೂರು ಗ್ರಾಪಂ ವ್ಯಾಪ್ತಿಯ ಮೇಕೋಡು ಶ್ರೀ ದುರ್ಗಾಪರಮೇಶ್ವರಿ (ಮೇಕೋಡಮ್ಮ) ದೇವಸ್ಥಾನಕ್ಕೆ ಭೇಟಿ ನೀಡಿದ ಸಂದರ್ಭ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದರು. ಕುಂದಾಪ್ರ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ ಕುಂದಾಪುರ: ಸಮೀಪದ ಗೋಪಾಡಿಯಲ್ಲಿ ನೆಲೆಸಿ ಹಿಂದುಸ್ಥಾನಿ ಸಂಗೀತ ಕಲಿಸುತ್ತಿರುವ ಗುರುದಂಪತಿ ಸತೀಶ ಭಟ್ ಮಾಳಕೊಪ್ಪ, ಪ್ರತಿಮಾ ಭಟ್ ತಮ್ಮ ಶಿಷ್ಯರಿಗೆ ಪರಸ್ಪರರ ಪ್ರತಿಭೆಯ ಪರಿಚಯ ಮಾಡಿಸಲು, ಸೀಮಿತ ವೇದಿಕೆ ಒದಗಿಸಿ ಅವರಲ್ಲಿ ಆತ್ಮವಿಶ್ವಾಸ ಬೆಳೆಸಲು ಮತ್ತು ಪೋಷಕರಿಗೆ ತಮ್ಮ ಮಕ್ಕಳ ಕಲಿಕೆಯ ಬಗೆಗೆ ಭರವಸೆ ಮೂಡಿಸಲು ಕಂಡುಕೊಂಡ ದಾರಿ ಆಗಾಗ ನಡೆಸುವ ‘ಶಿಷ್ಯ ಸಂಗೀತ ಸಮಾಗಮ’. ಒಬ್ಬೊಬ್ಬ ಪೋಷಕರ ಪ್ರಾಯೋಜಕತ್ವದಲ್ಲಿ ಸರದಿಯಂತೆ ನಡೆಯುವ ಕಾರ್ಯಕ್ರಮದ ಈ ಬಾರಿಯ ಆವೃತ್ತಿ ಜತೀಂದ್ರ ಮರವಂತೆ, ಡಾ. ರೂಪಶ್ರೀ ದಂಪತಿಯ ನೇತೃತ್ವದಲ್ಲಿ ಮರವಂತೆಯ ಸಾಧನಾ ಸಮುದಾಯ ಭವನದ ವಿ. ಕೆ. ಕಾಮತ್ ಸಭಾಗೃಹದಲ್ಲಿ ಸಂಪನ್ನವಾಯಿತು. ಸಂಗೀತ ವಿದ್ಯಾರ್ಥಿಗಳ ಪಾಲಕರು, ಸಂಗೀತಾಸಕ್ತ ಹಿರಿಯರು ಉಪಸ್ಥಿತರಿದ್ದರು. ಬೆಳಗ್ಗಿನ ಅವಧಿ ಕಿರಿಯ ಶಿಷ್ಯರಿಗೆ ಮೀಸಲಾಗಿತ್ತು. ಸಿದ್ದಾಪುರದ ಶ್ರವಣ ಪೈ ಬೈರವ್ ರಾಗದ ಮೂಲಕ ಸಮಾಗಮದ ನಾಂದಿ ಹಾಡಿದರು. ಕಿರಿಯ ವಿದ್ಯಾರ್ಥಿಗಳಾದ ಕೋಟದ ಪ್ರೀತಮ್ ಹೆಗಡೆ ಮತ್ತು ಕೇದಾರ ಮರವಂತೆ ಯಮನ್ ರಾಗ ಪ್ರಸ್ತುತಪಡಿಸಿದರು. ಕೋಟೇಶ್ವರದ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಕುಂದಾಪುರ ಮಹತ್ವಾಕಾಂಕ್ಷಿ ಯುಡಿಜಿ ಯೋಜನೆಯಲ್ಲಿ ಒಳ ಚರಂಡಿ ಕಾಮಗಾರಿ ಪ್ರಗತಿಯಲ್ಲಿದ್ದು, ಯೋಜನೆ ಸಾಧಕ, ಬಾಧಕಗಳೇನು. ಮಳೆಗಾದಲ್ಲಿ ರಸ್ತೆ ಕಟ್ಟಿಂಗ್ ಮಾಡಿದರೆ ಸಮಸ್ಯೆ ಆಗುತ್ತದೆ. ಯುಡಿಜಿ ಯೋಜನೆ ಸಂಪೂರ್ಣ ಮಾಹಿತಿ ನೀಡಿವಂತೆ ಸದಸ್ಯ ಮೋಹನದಾಸ್ ಶೆಣೈ ಪ್ರಶ್ನಿಸಿದರು. ಡಾ.ವಿ.ಎಸ್.ಆಚಾರ್ಯ ಸಭಾಂಗಣದಲ್ಲಿ ನಡೆದು ಕುಂದಾಪುರ ಪುರಸಭೆ ಸಾಮಾನ್ಯ ಸಭೆಯಲ್ಲಿ ಪುರಸಭೆ ಅವರು ಮಾತನಾಡಿದರು. ಪುರಸಭಾ ಸದಸ್ಯ ಕುಂದಾಪುರ ಪ್ರಮುಖ ಜನದಟ್ಟಣೆ ಪ್ರದೇಶವಾದ ಖಾರ್ವಿಕೇರಿಯಲ್ಲಿ ರಿಂಗ್ ರಸ್ತೆ ಹಾದು ಹೋಗಿದ್ದು ಯುಡಿಜಿ ಯೋಜನೆಯಿಂದ ಹೊರತು ಪಡಿಸಲಾಗಿದೆ. ಯೋಜನೆ ಅಧಿಕಾರಿಗಳ ಕೇಳಿದರೆ ಮತ್ತೆ ಸೇರಿಸುವ ಎನ್ನುವ ಉಡಾಪೆ ಉತ್ತರ ಸಿಗುತ್ತದೆ. ಯುಡಿಬಿ ಯೋಜನೆ ಫಲಾನುಭವಿ ಪಟ್ಟಿಯಿಂದ ಖಾರ್ವಿಕೇರಿ ಹೊರಗಿಟ್ಟಿದ್ದೇಕೆ. ಖಾರ್ವಿಕೇರಿ ಕೂಡಾ ಯುಡಿಬಿ ಯೋಜನೆಗೆ ಸೇರಬೇಕು ಎಂದರು. ಕುಂದಾಪುರ ಪುರಸಭೆ ಎದುರು ರಸ್ತೆ ವಿವಾದ ಬಗ್ಗೆ ಸಭೆಯಲ್ಲಿ ನಿರ್ಣಯ ತೆಗೆದುಕೊಂಡು ವಕ್ಫ ಮಂಡಳಿಗೆ ಜಾಗ ಬಿಟ್ಟು ಕೊಡುವಂತೆ ಮನವಿ ಮಾಡಬೇಕು. ಹಾಗೆ ನಗರಸಭೆ ಜಾಗವಲ್ಲದೆ ವಕ್ಫ ಮಂಡಳಿಗೆ ಸಂಬಂಧಪಟ್ಟ ಜಾಗವಿದ್ದರೆ,…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕೋಟ: ಇಲ್ಲಿನ ಮೂರು ಕೈ ರಾಷ್ಟ್ರೀಯ ಹೆದ್ದಾರಿ ಯಲ್ಲಿ ೪೦೭ ಲಾರಿಯೊಂದು ಚಾಲಕನ ನಿಯಂತ್ರಣ ತಪ್ಪಿ ಪಲ್ಟಿ ಹೊಡೆದು ಢಿಕ್ಕಿ ಹೊಡೆದ ಪರಿಣಾಮ ತೀವ್ರ ಗಾಯಗೊಂಡಿದ್ದ ಪಾದಚಾರಿ ನಾರಾಯಣ ಬಳೆಗಾರ್ ಅವರು ಚಿಕಿತ್ಸೆಗೆ ಸ್ಪಂದಿಸದೇ ಮಣಿಪಾಲ ಖಾಸಗಿ ಆಸ್ಪತ್ರೆಗೆ ಕೊನೆಯುಸಿರೆಳೆದಿದ್ದಾರೆ. ಕಳೆದ ಗುರುವಾರ ಸಂಜೆ ಉಡುಪಿ ಕಡೆಯಿಂದ ವೇಗವಾಗಿ ಬಂದ ೪೦೭ ವಾಹನವು ಕೋಟ ಮೂರು ಕೈ ಬಳಿಯ ಬ್ಯಾರಿಕೇಡ್ ಗಮನಿಸದೆ, ಹಠಾತ್ ಬ್ರೇಕ್ ಹಾಕಿದ್ದರಿಂದ ಚಾಲಕನ ನಿಯಂತ್ರಣ ತಪ್ಪಿ ಬ್ಯಾರಿಕೇಡ್ ಗೆ ಢಿಕ್ಕಿ ಹೊಡೆದು, ಯೂ ಟರ್ನ್ ದಾಟಿ ಪಲ್ಟಿಯಾಗಿತ್ತು. ಇದೇ ಸಂದರ್ಭದಲ್ಲಿ ರಸ್ತೆ ದಾಟುತ್ತಿದ್ದ ಕೋಟದ ಜೋಗಿ ಸಮಾಜದ ಅಧ್ಯಕ್ಷ ನಾರಾಯಣ ಬಳೇಗಾರ್ ಅವರಿಗೆ ಢಿಕ್ಕಿ ಹೊಡೆದು ಅವರು ಗಂಭೀರವಾಗಿ ಗಾಯಗೊಂಡಿದ್ದರು. ವಾಹನದ ಚಾಲಕ ಮತ್ತು ನಿರ್ವಾಹಕರೀರ್ವರು ಗಂಭೀರವಾಗಿ ಗಾಯಗೊಂಡಿದ್ದರು. ಘಟನೆಗೆ ತುರ್ತಾಗಿ ಸ್ಪಂದಿಸಿದ್ದ ನ್ಯಾಯವಾದಿ ಬನ್ನಾಡಿ ಸೋಮನಾಥ ಹೆಗ್ಡೆ ಅವರು ತಮ್ಮ ಕಾರಿನಲ್ಲಿ ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿದ್ದರು. ತಲೆ ಭಾಗದಲ್ಲಿ ಗಂಭೀರವಾಗಿ…

Read More